Tuesday 17 May 2022





 



ದತ್ತಾತ್ರೇಯ ಹೆಗಡೆ
................................

ಶಿವಮೊಗ್ಗ ಜಿಲ್ಲೆಯಲ್ಲಿ ನೆಲೆಯೂರಲು ಆಮ್ ಅದ್ಮಿ ಪಕ್ಷ ಕಸರತ್ತು ನಡೆಸುತ್ತಿದೆ. ಇದಕ್ಕಾಗಿ ಬೇರೆ ಪಕ್ಷದ ಪ್ರಮುಖರನ್ನು  ಸೆಳೆಯುತ್ತಿದೆ. ಈ ಬಾರಿ ಜಿಲ್ಲೆಯ ಎಲ್ಲಾ ೭ ವಿಧಾನಸಭೆ ಕ್ಷೇತ್ರದಲ್ಲೂ ಚುನಾವಣೆಗೆ ಇಳಿಯುವ ಉದ್ದೇಶÀ ಹೊಂದಿರುವುದರಿAದ ಬರುವವರಿಗೆಲ್ಲ ಮಣೆ ಹಾಕುತ್ತಿದೆ.
ವಿಧಾನಸಭೆಗೆ ಸ್ಪರ್ಧಿಸಲಿಚ್ಛಿಸಿ, ಬೇರೆ ಪಕ್ಷದಲ್ಲಿ  ಟಿಕೆಟ್ ಸಿಗದೆ ಅಥವಾ ಸಿಗದು ಎಂದು ಭಾವಿಸಿರುವವರೆಲ್ಲ ಆಮ್ ಆದ್ಮಿಯತ್ತ  ಹೆಜ್ಜೆ ಹಾಕುತ್ತಿದ್ದಾರೆ. ವಿಧಾನಸಭೆಗೆ ಟಿಕೆಟ್ ಅಲ್ಲಿ ಸುಲಭವಾಗಿ ಸಿಗುತ್ತದೆೆ. ಇದೇ ಉದ್ದೇಶದಿಂದ ಜಿಲ್ಲೆಯ ಇಬ್ಬರು ಕಾಂಗ್ರೆಸಿಗರು ಎಎಪಿ ಸೇರಿದ್ದಾರೆ.
ಸಾಗರದವರಾದ ಹೈಕೋರ್ಟ ನ್ಯಾಯವಾದಿ ಕೆÀ. ದಿವಾಕರ ಕಾಂಗ್ರೆಸ್ ಮತ್ತು ಬಿಜೆಪಿ, ಕೆಜೆಪಿಯಲ್ಲಿದ್ದವರು. ಕಾಂಗ್ರೆಸ್‌ನಲ್ಲ್ಲಿ ವಿವಿಧ ಹುದ್ದೆಯನ್ನು ಹೊಂದಿದ್ದರು. ಆದರೆ ಈ ನಿನ್ನೆ ಎಎಪಿ ಸೇರಿದ್ದ್ದಾರೆ. ಅವರು ಪಕ್ಷ ಸೇರುವ ಮುನ್ನವೇ ಅವರನ್ನು ಸಾಗರಕ್ಕೆ ಅಭ್ಯರ್ಥಿಯನ್ನಾಗಿಸಲಾಗಿದೆ. ಅಂದರೆ ಆಯಾಯ ತಾಲೂಕಿನ ಪ್ರಮುಖರನ್ನು ಸೆಳೆದು ಅವರಿಗೆ ಟಿಕೆಟ್ ಕೊಡಲಾಗುತ್ತಿದೆ. ಭದ್ರಾವತಿಯಲ್ಲೂ ಆನಂದ ಎನ್ನುವವರು ಕಾಂಗ್ರೆಸ್‌ನಲ್ಲಿದ್ದರು. ಈ ಹಿಂದೆ ಬಿಜೆಪಿಯಲ್ಲೂ ಇದ್ದರು. ಅವರನ್ನು ನಿನ್ನೆ ಎಎಪಿಗೆÀ ಸೇರಿಸಿಕೊಳ್ಳಲಾಗಿದೆ.
ಇನ್ನು ಶಿವಮೊಗ್ಗದಲ್ಲಿ ಮನೋಹರ ಗೌಡ ಎಲ್ಲಾ ಪಕ್ಷ ಹೊಕ್ಕು ಬರಬಂದವರು. ಅವರಿಗೂ ಒಮ್ಮೆ ವಿಧಾನಸಭೆ ಚುನಾವಣೆಗೆ ಇಳಿಯುವ ಹುಮ್ಮಸ್ಸು ಬಂದಿದೆ. ತಾನೇ ಉಮೇದುವಾರ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಬೇರೆ ಪಕ್ಷದವರಿಗೆ ಗಾಳ ಹಾಕಿ ಅವರನ್ನು ಉಮೇದುವಾರರನ್ನಾಗಿಸುವ ಕೆಲಸ ಎಎಪಿಯಿಂದ ನಡೆÉಯುತ್ತಿದೆ.
ಆದರೆ ಎಎಪಿಯ ಸಂಘಟನೆÀಯನ್ನೊಮ್ಮೆ ತಿರುಗಿ ನೋಡಿದಾಗ, ಯಾವುದೇ ಕರ‍್ಯಕ್ರಮ ಇಲ್ಲದೆ, ಕೆಲವೇ ಬೆರಳೆಣಿಕೆಯಷ್ಟು ನಾಯಕರಿಂದ ಕೂಡಿರುವುದು ಕಂಡುಬರುತ್ತಿದೆ. ಭ್ರಷ್ಟಾಚಾರದ ವಿರುದ್ದ ಹೋರಾಡುವುದೊಂದೇ ಅವರ ಗುರಿ. ಇದರ ಹೊರತು ಯಾವುದೇ ಸಿದ್ಧಾಂತ ಇಲ್ಲ. ಪ್ರಣಾಳಿಕೆ ಇಲ್ಲ. ಯಾರೇ ಬಂದರೂ ಸೇರಿಸಿಕೊಳ್ಳಲಾಗುತ್ತದೆ. ಎಲ್ಲೂ ಸಲ್ಲದವರು ಇಲ್ಲಿ ಸಲ್ಲುತ್ತ್ತಾರೆನ್ನುವುದು ಜನರ ಅಭಿಪ್ರಾಯ. ಇದಕ್ಕಾಗಿ ಆ ಪಕ್ಷದ ಬಗ್ಗೆ ಜನರಲ್ಲಿ ಒಲವು ಜಿಲ್ಲೆಯಲ್ಲಿ ಇಲ್ಲದಿರುವುದು ಕಂಡುಬರುತ್ತಿದೆ.
ಕೆಲವೇ ನಾಯಕರು ಇಲ್ಲಿ ಕಾಣುತ್ತಿದ್ದಾರೆ. ಆದರೆ ಅವರಲ್ಲಿ ಏಕತೆ ಇಲ್ಲ. ಅವರನ್ನು ಕಂಡರೆ ಇವರಿಗಾಗದು. ಇವರನ್ನು ಕಂಡರೆÉ ಅವರಿಗಾಗದು. ಕೆಲವರು ತಾವೇ ಪಕ್ಷದ ಅಧ್ಯಕ್ಷ, ಸಂಚಾಲಕ ಎಂದೆಲ್ಲ್ಲ ಬಿಂಬಿಸಿಕೊAಡಿದ್ದಾರೆ. ರಾಜ್ಯ ಮಟ್ಟದಲ್ಲೇ ಸಂಘಟಿತ ಪಕ್ಷ ಇದಾಗಿಲ್ಲ. ಜಿಲ್ಲಾ ಮಟ್ಟದಲ್ಲಿ ನಿಯಂತ್ರಿಸುವವರು ಯಾರೂ ಇಲ್ಲ. ಹಾಗಾಗಿ ಇಲ್ಲಿ ಎಲ್ಲರು ಅಧ್ಯಕ್ಷರು, ಸಂಚಾಲಕರು. ಯಾರು ಬೇಕಾದರೂ ಪಕ್ಷ ಸೇರಬಹುದು. ಅವರ ಹಿನ್ನೆಲೆ ಕೇಳುವುದಿಲ್ಲ.
ಜಿಲ್ಲೆಯ ಮಟ್ಟಿಗೆ ಎಎಪಿಯ ಹೆಸರು  ಸ್ವಲ್ಪ ಮಟ್ಟಿಗೆ ಕೇಳಿಬರುತ್ತಿದೆಯಾದರೂ ಅದು ಪರಿಣಾಮ ಬೀರದು ಎನ್ನುವುದು ಜನರ ಮಾತು. ಆದರೆÀ ಈ ನಾಯಕರಲ್ಲಿ ಮಾತ್ರ ತಾವೇ ಮುಂದಿನ ಬಾರಿ ಅಧಿಕಾರಕ್ಕೇರುತ್ತೇವೆ ಎನ್ನುವ ಮನೋಭಾವವಿದೆ. ಹುಮ್ಮಸ್ಸ್ಸು ಸಾಕಷ್ಟಿದೆ. ಆದರೆ ಕೆಲಸ ಮಾಡುವವರಿಲ್ಲ. ನಾಯಕರಲ್ಲಿ ಒಗ್ಗಟ್ಟಿನÀ ಮಂತ್ರ ಕಾಣೆಯಾಗಿದೆ. ಯಾವುದೇ ಕರ‍್ಯಕ್ರಮವಿಲ್ಲ. ಕರಪತ್ರದ ಮೂಲಕ ಜಾಗೃತಿ ಮಾತ್ರ  ಮಾಡುತ್ತಿದ್ದ್ದಾರೆ. ಸಂಘಟಿತ ಹೋರಾಟ, ಕರ‍್ಯಕ್ರಮ ರೂಪಿಸಿಲ್ಲ. ದೇಶ ಮತ್ತು ರಾಜ್ಯದಲ್ಲಿ ಇಷ್ಟೊಂದು ಹೋರಾಟ, ಪ್ರತಿಭಟನೆಯನ್ನು ವಿವಿಧ ಪಕ್ಷ ಮತ್ತು ಸಮಾಜ, ಸಂಘಟನೆಯವರು ಮಾಡುತ್ತಿದ್ದರೂ ಎಎಪಿಗೆ ಮಾತ್ರ ಇದು ಬೇಕಾಗಿಲ್ಲ. ಪಕ್ಷದಲ್ಲಿ ಬೆಳೆಯುತ್ತಾರೆಂದೆನಿಸಿದರೆ ಅವರನ್ನು ಹಾಗೆಯೇ ನಗಣ್ಯ ಮಾಡಲಾಗುತ್ತಿದೆ. ಅದಕ್ಕಾಗಿಯೇ ಈ ಪಕ್ಷ ಸೇರಿದ ಕೆಲವರೆಲ್ಲ ವಾರದಲ್ಲೇ ಅಲ್ಲಿಂದ ಹೊರಬಂದರು. ಕೆಲವರ ಕೈಯಲ್ಲಿ ಮಾತ್ರ ಆ ಪಕ್ಷ ಇದೆ.  
ಮತದಾರರ ಮನಸ್ಸಿನ ಬಾಗಿಲನ್ನು ತಟ್ಟುವಲ್ಲಿ ಆ ಪಕ್ಷ ವಿಫಲವಾಗಿದೆ.  ದೆಹಲಿಯಲ್ಲಿನ ಸಾಧÀನೆಯನ್ನು ಇಲ್ಲಿ ಹೇಳಿದರೆ ಮತ ಬಾರದು. ಕರ್ನಾಟಕ ರಾಜಕೀಯ ಚಿತ್ರಣವೇ ಬೇರೆ. ಇಲ್ಲೇನಿದ್ದರೂ ಜಾತಿ, ಮತ, ಪಕ್ಷ ಮತ್ತು ರ‍್ಮವೇ ಪ್ರಮುಖವಾಗುತ್ತದೆ. ಇದೆಲ್ಲ ಗೊತ್ತಿಲ್ಲದೆಯೇ ಕೆಲವೇ ನಾಯಕರು ಈ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಜಿಲ್ಲೆಯ ಮಟ್ಟಿಗೆ ಈ ಪಕ್ಷಕ್ಕೆ ಯಾವ ಮಹತ್ವ ಇದ್ದಂತೆ ಸದ್ಯಕ್ಕ್ಕೆ ಕಾಣುತ್ತಿಲ್ಲ. ಆದರೆ ಟಿಕೆಟ್ ಪಡೆದು ಸ್ಪರ್ಧಿಸಬೇಕೆಂಬ ಆಸೆ ಉಳ್ಳವರು ಈ ಪಕ್ಷದತ್ತ್ತ ದೃಷ್ಟಿ ಇಟ್ಟಿದ್ದಾರೆ. 

published on 14 may 2022
.........................