Monday 11 February 2019

ನಾಟ್ಯಮಯೂರಿ
ಶ್ವೇತಾ ಪ್ರಕಾಶ್


ಯಾವುದೇ ಕ್ಷೇತ್ರದಲ್ಲಿ  ಸಾಧನೆ ಮಾಡುವುದು ಸುಲಭದ ಕೆಲಸವಲ್ಲ. ಇದಕ್ಕಾಾಗಿ ಸಾಕಷ್ಟು  ದೂರದೃಷ್ಟಿಿಯ ಯೋಜನೆ ಮತ್ತು ಸಮರ್ಪಣಾ ಮನೋಭಾವ ಅಗತ್ಯ. ಕಷ್ಟಪಟ್ಟಾಾಗ ಮಾತ್ರ ಅದಕ್ಕೆೆ ತಕ್ಕ ಬೆಲೆ ಸಿಗುತ್ತದೆ. ಭರತನಾಟ್ಯ ಅತ್ಯಂತ ಕಷ್ಟದ ಕಲೆ. ಸುಲಭದಲ್ಲಿ ಅದು ಸಿದ್ಧಿಿಸುವುದಿಲ್ಲ. ಸಾಕಷ್ಟು ಪ್ರಯತ್ನಶೀಲರಾಗಿ ತೊಡಗಿಸಿಕೊಂಡಾಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ. 
ಶಿವಮೊಗ್ಗದ ಶ್ವೇತಾ ಪ್ರಕಾಶ್ ಇಂತಹ ಭರತನಾಟ್ಯ ಸಾಧಕಿಯರಲ್ಲಿ ಒಬ್ಬರು. ವೇದಿಕೆ ಸಿಕ್ಕಾಾಗ ಅದನ್ನು ಸದುಪಯೋಗಪಡಿಸಿಕೊಂಡು ತಮ್ಮ ಪ್ರತಿಭೆಯನ್ನು ಬೆಳಗಿದವರು. ಇವರ ಈ ಸಾಧನೆಯನ್ನು ಮನ್ನಿಿಸಿ ಇತ್ತೀಚೆಗೆ ರಾಷ್ಟ್ರೀಯ ಪುರಸ್ಕಾಾರ ದಕ್ಕಿಿದೆ. 
 ಶ್ವೇತಾ ಅವರ ಸಾಧನೆ ಕೇವಲ ಶಿವಮೊಗ್ಗಕ್ಕೆೆ ಮಾತ್ರ ಸೀಮಿತವಾಗಿಲ,್ಲ ಇಡೀ ರಾಜ್ಯದಲ್ಲೇ ಹೆಸರಾಗಿದೆ. ಅವರ ಅಪ್ರತಿಮ ಪ್ರತಿಭೆಯನ್ನು ಗಮನಿಸಿ ಬೆಂಗಳೂರಿನಲ್ಲಿ ಜನವರಿ 26ರಂದು ಸರ್ಕಾರೇತರ ಸಂಸ್ಥೆೆ ( ಐಐಎಸ್‌ಇಆರ್) ಯೊಂದು ತನ್ನ ವಾರ್ಷಿಕೋತ್ಸವದಲ್ಲಿ ರಾಷ್ಟ್ರೀಯ ಪುರಸ್ಕಾಾರ ನೀಡಿ ಗೌರವಿಸಿದೆ. ಈ ಮೂಲಕ ಶಿವಮೊಗ್ಗದ ಭರತನಾಟ್ಯಪ್ರತಿಭೆಗೆ ಇನ್ನಷ್ಟು ಮನ್ನಣೆ ದೊರೆತಂತಾಗಿದೆ. 
ಶ್ವೇತಾ ಅವರು, ನಗರದ ನೃತ್ಯಗುರು, ನಟನಂ ನೃತ್ಯ ಶಾಲೆಯ ವಿದ್ವಾಾನ್ ಕೇಶವಕುಮಾರ್ ಅವರಲ್ಲಿ ಸತತ 28 ವರ್ಷಗಳ ಕಾಲ ನೃತ್ಯವನ್ನು ಅಭ್ಯಸಿಸಿದವರು. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ನಡೆಸುವ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳನ್ನು ಉನ್ನತ ದರ್ಜೆಯಲ್ಲಿ ಪಾಸುಮಾಡಿ ತಮ್ಮದೇ ಆದ ಮಯೂರಿ ನೃತ್ಯಕಲಾ ಕೇಂದ್ರವನ್ನು ಸ್ಥಾಾಪಿಸಿದ್ದಾಾರೆ. ನಗರದ ವಿಜಯನಗರದ 3ನೆಯ ಕ್ರಾಾಸ್‌ನಲ್ಲಿ ಈ ಕೇಂದ್ರವಿದ್ದು, ಇಲ್ಲಿಯೂ ಹಾಗೂ ಗೋಪಾಲಗೌಡ ಬಡಾವಣೆ ಮತ್ತು ವಿನೋಬನಗರ ಶಿವಾಲಯದಲ್ಲಿಯೂ ಮಕ್ಕಳಿಗೆ ತರಬೇತಿ ನೀಡುತ್ತಿಿದ್ದಾಾರೆ.
 11ನೆಯ ವರ್ಷದಲ್ಲಿ ಈ ಶಾಲೆ ನಡೆಯುತ್ತಿಿದೆ. ಕಳೆದ ವರ್ಷ ದಶಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸುವ (ಮಯೂರ ನೃತ್ಯೋೋತ್ಸವ) ಮೂಲಕ ಮಕ್ಕಳಿಗೆ ವೇದಿಕೆ ಕಲ್ಪಿಿಸಿಕೊಟ್ಟು ಅವರ ಪ್ರತಿಭೆ ಒರೆಗೆ ಹಚ್ಚಿಿದ್ದಾಾರೆ. ಪಾಲಕರು ತಮ್ಮ ಮಕ್ಕಳ ಸಾಧನೆಯನ್ನು ವೇದಿಕೆಯಲ್ಲಿ ನೋಡಿ ಸಂಭ್ರಮಿಸುವಂತೆ ಮಾಡಿದ್ದಾಾರೆ. 
ಶ್ವೇತಾ ಪ್ರಕಾಶ್ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರದರ್ಶನ ನೀಡಿ ಹೆಸರುಗಳಿಸಿದವರು. ಶಿವಮೊಗ್ಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾಾರೆ. ಕನ್ನಡ ಎಂ.ಎ. ಪದವೀಧರೆಯಾಗಿರುವ ಇವರು, ಶಿವಮೊಗ್ಗದಲ್ಲಿ ಜರುಗಿದ 73ನೆಯ  ಕನ್ನಡ ಸಾಹಿತ್ಯ ಸಮ್ಮೇಳನ, ಸುವರ್ಣ ಕರ್ನಾಟಕ ಸಾಂಸ್ಕೃತಿಕ ದಿಬ್ಬಣ, ಸಹ್ಯಾಾದ್ರಿಿ ಉತ್ಸವ, ಕೊಡಚಾದ್ರಿಿ ಉತ್ಸವ,  ಇಕ್ಕೇರಿ ಉತ್ಸವ, ಹಾನಗಲ್ ಉತ್ಸವ ಮತ್ತು ಬಾಗಲಕೋಟೆ ಉತ್ಸವಗಳಲ್ಲಿ ತಮ್ಮ ತಂಡದೊಂದಿಗೆ ನೃತ್ಯ ಪ್ರದರ್ಶಿಸಿದ್ದಾಾರೆ. ಕಲಾ ವಿಕಾಸ ಪರಿಷತ್‌ನ ಕಲಾಸಿರಿ ಎಂಬ ಯುವಪ್ರಶಸ್ತಿಿಗೆ ಭಾಜನರಾಗಿದ್ದಾಾರೆ. ದೆಹಲಿಯ ಬಾಲಭವನ, ದಿಯು-ದಮನ್, ವಿಶಾಖಾಪಟ್ಟಣಂ, ಉತ್ತರ ಪ್ರದೇಶ, ಮಹಾರಾಷ್ಟ್ರ ಮೊದಲಾದೆಡೆಯೂ ತಮ್ಮ ಶಿಷ್ಯರೊಂದಿಗೆ ಅನೇಕ ಪ್ರದರ್ಶನಗಳನ್ನು ನೀಡಿದ ಕೀರ್ತಿ ಇವರದ್ದು.
ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ ಎನ್ನುವ ಕನ್ನಡ ಚಲನಚಿತ್ರದಲ್ಲಿ ಒಂದು ಹಾಡಿಗೆ ನರ್ತಿಸಿದ್ದಾಾರೆ. ಕರ್ನಾಟಕ ಪರೀಕ್ಷಾ ಮಂಡಳಿಯವರು ನಡೆಸುವ ಭರತನಾಟ್ಯ ಪರೀಕ್ಷೆಗಳಿಗೆ, ವಿವಿಧ ಉತ್ಸವಗಳಿಗೆ ಪ್ರತಿಭಾ ಕಾರಂಜಿಗಳಿಗೆ ನಿರ್ಣಾಯಕರಾಗಿ ಇವರು ಕೆಲಸ ಮಾಡಿದ್ದಾಾರೆ. ಫ್ಯೂಜನ್ ಜಾನಪದ ನೃತ್ಯ ಹೇಳಿಕೊಡುವುದರಲ್ಲೂ ಇವರು ಪರಿಣಿತರು.
 ಭರತನಾಟ್ಯ ಅತ್ಯಂತ ಪ್ರಾಾಚೀನವಾದ ಕಲೆ ಇದು. ಇದರ ಹರವು ಎಲ್ಲೆೆಡೆ ಪಸರಿಸಿದೆ. ವಿಶೇಷವಾಗಿ ಶಿವಮೊಗ್ಗದಲ್ಲಿ ಇದಕ್ಕೆೆ ಹೆಚ್ಚಿಿನ ನೆಲೆಯಿದೆ. ಈ ಕ್ಷೇತ್ರದಲ್ಲಿ  ನೂರಾರು ವಿದ್ಯಾಾರ್ಥಿಗಳಿಗೆ ನಾಟ್ಯ ಶಿಕ್ಷಣವನ್ನು ತಾನು ಕೊಡುತ್ತಿಿದ್ದು, ಮಹತ್ಸಾಾಧನೆಗೆ ಅವರು ಮುನ್ನುಡಿ ಬರೆಯಬೇಕು. ತಮ್ಮ ಪ್ರತಿಭೆಯನ್ನು ಈ ನಿಟ್ಟಿಿನಲ್ಲಿ ಅವರು ಪ್ರದರ್ಶಿಬೇಕೆನ್ನುತ್ತಾಾರೆ ಶ್ವೇತಾ.
published on 9.2.19

Thursday 7 February 2019

ಸೇವೆಯಲ್ಲೇ ಧನ್ಯತೆ ಕಂಡ 
 ಸಿ.ಎನ್. ಅನುಸೂಯಾ


ಪ್ರಾಾಮಾಣಿಕ ಸೇವೆ, ಉತ್ತಮ ನಡತೆ, ಸಹೃದಯತೆ ಮತ್ತು ಮಾನ"ೀಯ ಗುಣಗಳನ್ನು ಹೊಂದಿದ್ದರೆ ಅಂತಹ ವ್ಯಕ್ತಿಿ ಎಲ್ಲರಿಂದಲೂ, ಎಲ್ಲೆೆಡೆ ಗೌರ"ಸಲ್ಪಡುತ್ತಾಾನೆ. ""ಧ ಸಂಘ- ಸಂಸ್ಥೆೆಗಳು ಸೇವೆಯನ್ನು ಕೊಂಡಾಡುತ್ತವೆ. ಸರ್ಕಾರದ ಮಟ್ಟದಲ್ಲೂ ಅವರಿಗೆ ಪ್ರಶಂಸೆ, ಪ್ರಶಸ್ತಿಿ- ಪುರಸ್ಕಾಾರಗಳು ದೊರೆಯುತ್ತವೆ.
ನಗರದ ಮೆಗ್ಗಾಾನ್ ಆಸ್ಪತೆಯಲ್ಲಿ 33 ವರ್ಷಗಳಿಂದ ಕೆಲಸ ಮಾಡುತ್ತಿಿರುವ, ರೋಗಿಗಳ ಮತ್ತು ಅಲ್ಲಿನ ಸಿಬ್ಬಂದಿಗಳ ಮನ ಗೆದ್ದಿರುವ, ನರ್ಸ್ ಆಗಿ ರೋಗಿಗಳ ಸೇವೆಯಲ್ಲಿ ಸಂತೃಪ್ತಿಿ ಕಂಡಿರುವ ಸಿ. ಎನ್. ಅನುಸೂಯಾ ಈ ರೀತಿಯ ಸೇವೆ ಸಲ್ಲಿಸಿ ಈ ವರ್ಷದ ಗಣರಾಜ್ಯೋೋತ್ಸವದಂದು ರಾಜ್ಯ ಸರ್ಕಾರದ ಸರ್ವೋತ್ತಮ ಸೇವಾ ಪ್ರಶಸ್ತಿಿಗೆ ಭಾಜನರಾಗಿದ್ದಾಾರೆ.
ಮೆಗ್ಗಾಾನ್ ಆಸ್ಪತ್ರೆೆಯ ""ಧ "ಭಾಗಗಳಲ್ಲಿ ಕೆಲಸ ಮಾಡಿ, ಅಪಾರ ಅನುಭವ ಗಳಿಸಿರುವ ಅನುಸೂಯಾ, ಸದ್ಯ ಆಡಳಿತ "ಭಾಗದಲ್ಲಿ ನರ್ಸಿಂಗ್ ಸೂಪರಿಂಡೆಂಡೆಂಟ್ ಆಗಿ ಕೆಲಸ ಮಾಡುತ್ತಿಿದ್ದಾಾರೆ. ಅವರ ನಿಸ್ಪಹ ಸೇವೆಯೇ ಇಷ್ಟೊೊಂದು ಉನ್ನತ ಮಟ್ಟಕ್ಕೇರಿಸಿದೆ.
ಶಿವಮೊಗ್ಗದಲ್ಲೇ ಹುಟ್ಟಿಿ ಬೆಳೆದ ಇವರು ಕಾಲೇಜಿನವರೆಗೆ ಓದಿದ್ದು ಹೊನ್ನಾಾಳಿಯಲ್ಲಿ. ಆನಂತರ ಬೆಳಗಾ"ಯಲ್ಲಿ ನರ್ಸಿಂಗ್ ಕೋರ್ಸ್ ಮುಗಿಸಿ ಮೆಗ್ಗಾಾನ್ ಆಸ್ಪತ್ರೆೆಯಲ್ಲಿ ಕೆಲಸಕ್ಕೆೆ ಸೇರಿದರು. ಬಳಿಕ ಮತ್ತೂರು ಮತ್ತು ಶಿಕಾರಿಪುರದ ಸರ್ಕಾರಿ ಆಸ್ಪತ್ರೆೆಯಲ್ಲಿ ಕೆಲಸ ಮಾಡಿದ್ದಾಾರೆ. ಅಲ್ಲಿಂದ ಮತ್ತೆೆ ಮೆಗ್ಗಾಾನ್‌ಗೆ ಮರಳಿ, ಜನಮೆಚ್ಚುವಂತಹ ಕೆಲಸದ ಮೂಲಕ ರಾಜ್ಯ ಪ್ರಶಸ್ತಿಿಗೆ ಪಾತ್ರರಾಗಿದ್ದಾಾರೆ. ಮೊನ್ನೆೆ ಗಣರಾಜ್ಯೋೋತ್ಸವದಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು ಸರ್ವೋತ್ತಮ ಸೇವಾ ಪ್ರಶಸಿ ಪ್ರದಾನ ಮಾಡಿದ್ದಾಾರೆ.
ಜಿಲ್ಲಾಾ ಮಟ್ಟದ ಉತ್ತಮ ಸೇವಾ ಪುರಸ್ಕಾಾರವೂ ಇವರಿಗೆ ಈ "ಂದೆ ದಕ್ಕಿಿದೆ. ಜೊತೆಗೆ ಇನ್ನಿಿತರ ಹಲವು ಸನ್ಮಾಾನಗಳು ಇವರ ಸೇವೆಯನ್ನು ಗಮನಿಸಿ ಬಂದಿವೆ. ಆಸ್ಪತ್ರೆೆಯ ಕೆಲಸದಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡು, ತಾನಾುತು, ತನ್ನ ಕೆಲಸವಾುತು ಎನ್ನುತ್ತಾಾ ಬಂದವರು ಅನುಸೂಯಾ ಅವರು. ರೋಗಿಗಳ ಸೇವೆ ಮಾಡುವುದು ದೊಡ್ಡ ಖು ನೀಡುತ್ತದೆ. ಇಂತಹ ಸೇವೆ ಅಪೂರ್ವವಾದುದು. ಇದರಿಂದ ಸಿಗುವ ಸಂತೃಪ್ತಿಿ ಬೇರೆಲ್ಲೂ ಸಿಗುವುದಿಲ್ಲ. ಅವರ ಕಷ್ಟ- ನೋವುಗಳಿಗೆ ಸ್ಪಂದಿಸಿದಾಗ, ಅವರೊಡನೆ ಆತ್ಮೀಯವಾಗಿ ಮಾತನಾಡಿದಾಗ ರೋಗಿಗೂ ಸಂತಸವಾಗುತ್ತದೆ. ನಾವು ಮಾಡುವ ಕೆಲಸಕ್ಕೂ ಗೌರವ ಬರುತ್ತದೆ. ಅದೇ ರೀತಿ ನಮ್ಮ  ಸಿಬ್ಬಂದಿಗಳ ಜೊತೆಗಿನ ಒಡನಾಟವೂ ಆತ್ಮೀಯವಾಗಿದ್ದಾಾಗ ಅವರೂ ಸಹ ಗೌರವ ಕೊಡುತ್ತಾಾರೆ ಎನ್ನುತ್ತಾಾರೆ ಮೃದು ಹೃದು ಅನುಸೂಯಾ.
 ರೋಗಿಗಳನ್ನು ತಮ್ಮ ಮಕ್ಕಳಂತೆ, ಕುಟುಂಬದವರಂತೆ ಕಾಣುವ ವಾತ್ಸಲ್ಯಮು ಇವರು. ಬಹುಶಃ ಇದಕ್ಕಾಾಗಿಯೇ ರೋಗಿಗಳಿಗೆ ಅತ್ಯಂತ ಅಪ್ಯಾಾಯಮಾನರಾಗಿಬಿಡುತ್ತಾಾರೆ. ಇನ್ನೊೊಬ್ಬರ ಕಷ್ಟ, ಸಂಕಷ್ಟಗಳಿಗೆ ಮರುಗುವ ಜೊತೆಗೆ ಅಷ್ಟೇ ಹೃದಯವಂತಿಕೆುಂದ ಸೇವೆ ಮಾಡುವುದು ಎಲ್ಲರಿಗೂ ಕರಗತವಾಗುವುದಿಲ್ಲ
. ಪ್ರೀತಿಯ ಮಾತಿನಿಂದಲೇ ರೋಗಿ ಅರ್ಧದಷ್ಟು ಗುಣಮುಖನಾಗುತ್ತಾಾನೆ ಎನ್ನುವ ಮಾತಿದೆ. ಈ ಮಾತು ಚಾಲ್ತಿಿಗೆ ಬರಲು ಅನುಸೂಯಾ ಅವರಂತಹ ನಿಸ್ವಾಾರ್ಥ, ಮಾನ"ೀಯ ಗುಣವುಳ್ಳ ಶುಶ್ರೂಷಕರೇ ಕಾರಣರಿರಬಹುದು.
ಇತರರ ಸೇವೆ ಮಾಡುವ ಮೂಲಕ ನಮ್ಮತನವನ್ನು ನಾವು ಕಂಡುಕೊಳ್ಳಬೇಕು. ಇದರಲ್ಲಿಯೇ ಸಂತಸವನ್ನು ಕಾಣಬೇಕು ಎಂದು ಮಹಾತ್ಮಾಾ ಗಾಂಧೀಜಿ ಹೇಳಿದ್ದಾಾರೆ. ಸೇವೆ ಅತ್ಯಂತ ಅವಶ್ಯಕತೆ ಉಳ್ಳವರಿಗೆ ದಕ್ಕಿಿದಾಗ ಅದು ಶಾಶ್ವತವಾಗುತ್ತದೆ. ಸೇವೆ ನೀಡಿದವರೂ ಸಹ ಅಷ್ಟೇ ಪೂಜ್ಯನೀಯರಾಗಿ ರೋಗಿಗಳ ಪಾಲಿಗೆ ದೇವರಾಗಿ ಕಾಣುತ್ತಾಾರೆ.
ಇವರ ತಾು ರುಕ್ಮಿಿಣಿಯಮ್ಮ  ಮತ್ತು "ರಿಯ ಸಹೋದರಿ ಸಹ ನರ್ಸ್ ಆಗಿ ಕೆಲಸ ನಿರ್ವ"ಸಿ ನಿವೃತ್ತರಾದವರು. ಪತಿ ಎ. ". ಶೆಟ್ಟಿಿ ಅವರು ಶಿವಮೊಗ್ಗದಲ್ಲಿ ಮೆಡಿಕಲ್ ಏಜೆನ್ಸಿಿಯನ್ನು ಹೊಂದಿದ್ದಾಾರೆ. ತಮ್ಮ ಮುಂದಿನ ಸೇವಾವಧಿಯಲ್ಲಿ ಇನ್ನೂ ಹೆಚ್ಚಿಿನ ಗೌರವ, ಪ್ರಶಸ್ತಿಿಗಳಿಗೆ ಭಾಜನರಾಗಲಿ ಎನ್ನುವುದು ಎಲ್ಲರ ಹಾರೈಕೆ.
published on 2nd feb