Monday 26 November 2018

ಕುಸುರಿ ಕಲೆಯ
ವರುಣ್ ಆಚಾರಿ


 ಸಾಧನೆ ಮಾಡುವಾಗ ಅಡ್ಡಿಿ ಎದುರಾಗುವುದು ಸಹಜ. ಆದರೆ, ಅದರಿಂದ "ಂದಡಿ ಇಡಬಾರದು. ಓಡುವಾಗ ಗೋಡೆ ಎದುರಾದರೆ ಅಲ್ಲಿಗೆ ನಿಲ್ಲದೆ ಗೋಡೆಯನ್ನು ಏರುವ ಸಾಹಸ ಮಾಡಬೇಕು. ಗೋಡೆಯಾಚೆ ಮತ್ತೆೆ ದಾರಿ ಇರುತ್ತದೆ ಎನ್ನುವ ಆಂಗ್ಲ ಮಾತಿದೆ.
ಭದ್ರಾಾವತಿಯ ವರುಣ್ ಆಚಾರಿ ಗುರು"ನ ಸಹಾಯ"ಲ್ಲದೆ ಸ್ವಪ್ರಯತ್ನದಿಂದ ಸತತ ಸಾಧನೆ ಮಾಡಿ ಯಶಸ್ಸು ಗಳಿಸಬಹುದೆನ್ನುವುದನ್ನು ತೋರಿಸಿಕೊಟ್ಟಿಿದ್ದಾಾರೆ. ಈ ಪ್ರಯತ್ನ ಮಾಡುವಾಗ ಅವರು ಹಲವು ಬಾರಿ ವೈಫಲ್ಯ ಅನುಭ"ಸಿದ್ದಾಾರೆ. ಆದರೆ ಎದೆಗುಂದದೆ ಸತತ ಪ್ರಯತ್ನ ಮಾಡುವ ಮೂಲಕ ಯಶಸ್ಸು ಸಾಧಿಸಿದ್ದಾಾರೆ. ವರುಣ್ ಕುಸುರಿಕಲೆಯಲ್ಲಿ ತನ್ನ ಹೆಸರನ್ನು ಖ್ಯಾಾತಿಗೊಳಿಸಿಕೊಂಡಿದ್ದಾಾನೆ. ಪೆನ್ಸಿಿಲ್, ಸೀಮೆಸುಣ್ಣ, ಅಕ್ಕಿಿಕಾಳು, ಗೋಬಿ ಸ್ಟಿಿಕ್ ಮೇಲೆ ಈ ಕಲೆಯನ್ನು ಮೂಡಿಸುತ್ತಿಿದ್ದಾಾರೆ.
ಭದ್ರಾಾವತಿಯ ಕಾಳಿಕಾಪರಮೇಶ್ವರಿ ಸಹಕಾರ ಸಂಘದಲ್ಲಿ ಕಲಸ ನಿರ್ವ"ಸುತ್ತಿಿರುವ ವರುಣ್ 25ರ ಹರಯದವರು. ಟಿ" ಚಾನೆಲ್‌ನಲ್ಲಿ ಬರುತ್ತಿಿದ್ದ ಕನ್ನಡ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಒಬ್ಬರು ಕುಸುರಿ ಕಲೆಯನ್ನು ಪ್ರದರ್ಶಿಸಿದ್ದರು. ಇದರಿಂದ ಪ್ರಭಾ"ತನಾದ ವರುಣ್, ತಾನೇಕೆ ಇದನ್ನು ಮಾಡಬಾರದೆಂದು ಯೋಚಿಸಿ, ಸತತ ಪ್ರಯತ್ನದ ಮೂಲಕ ಗೆಲುವು ಸಾಧಿಸಿದ್ದಾಾರೆ. ಈಗ ಅವರಲ್ಲಿ ಸುಮಾರು 250ಕ್ಕೂ ಹೆಚ್ಚು ಬಗೆಯ ಕುಸುರಿ ಕಲೆಯ ವೈ"ಧ್ಯತೆ ಇದೆ.
ಈ ಕಲೆಯಲ್ಲಿ ಇನ್ನೂ ಹೆಚ್ಚಿಿನ ಸಾಧನೆಗೆ ಯೂಟ್ಯೂಬ್‌ನ್ನೂ  ಸಹ ನೋಡಿ ಕಲಿತಿದ್ದಾಾರೆ. ಮೈಕ್ರೊೊ ಆರ್ಟ್‌ನಲ್ಲಿ ಈಗ ವರುಣ್ ಎತ್ತಿಿದ ಕೈ. ಮ್ಯಾಾಚ್‌ಬಾಕ್‌ಸ್‌ ಸ್ಟಿಿಕ್‌ಸ್‌, ವೆಡ್ಡಿಿಂಗ್ ಕಾಡ್ ರ್, ಸೇಂಗಾಬೀಜದ ಮೇಲೂ ಕುಸುರಿಕಲೆಯನ್ನು ನಿರೂಪಿಸಿದ್ದಾಾರೆ. ಅಕ್ಕಿಿಕಾಳಿನ ಮೇಲೆ ಇಂಗ್ಲಿಿಷ್‌ನಲ್ಲಿ 82 ಅಕ್ಷರ ಬರೆದಿದ್ದಾಾರೆ. ಸೇಂಗಾಬೀಜದ ಮೇಲೆ ಕನ್ನಡ ವರ್ಣಮಾಲೆಯನ್ನು ರಚಿಸಿದ್ದಾಾರೆ. ಸೀಮೆಸುಣ್ಣದಿಂದ ಅಟಲ್ ಬಿಹಾರಿ ವಾಜಪೇು, ಅಬ್ದುಲ್ ಕಲಾಂ, ನಟಿ ಶ್ರೀದೇ" ಚಿತ್ರ ಬರೆದಿದ್ದಾಾರೆ. ಪೆನ್ಸಿಿಲ್ ಮೇಲೆ ಐಫೆಲ್ ಟವರ್, ಎ ಟು ಝಡ್ ಅಕ್ಷರಗಳನ್ನು, ಲಕ್ಷ್ಮೀ, ಗಣಪತಿಯನ್ನು ಬಿಡಿಸಿದ್ದಾಾರೆ. ಇಂತಹ ನೂರಾರು ಚಿತ್ರಗಳನ್ನು ಬಿಡಿಸುವ ಮೂಲಕ ಎಲ್ಲರ ಮನಸೆಳೆಯುತ್ತಿಿದ್ದಾಾರೆ.
ವೆಡ್ಡಿಿಂಗ್ ಕಾರ್ಡಿನಿಂದ ನಾಲ್ಕು ಕಂಬಗಳುಳ್ಳ ಒಂದು "ುಲಿ"ುೀಟರ್‌ನ ಎತ್ತರದ ಮನೆಯನ್ನು ತಯಾರಿಸಿದ್ದಾಾರೆ. ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ತಾಜಮಹಲ್‌ನ್ನು ಪೆನ್ಸಿಿಲ್‌ನಲ್ಲಿ ಕೆತ್ತಲು ತೀರ್ಮಾನಿಸಿದ್ದಾಾರೆ.
ಭದ್ರಾಾವತಿ ಹಳೆನಗರ ವಾಸಿಯಾಗಿರುವ ಇವರು, ಸರ್ ಎಂ. ". ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪದ" ಓದಿದ ಬಳಿಕ  ಸಹಕಾರಿ ಸಂಘದಲ್ಲಿ ಕೆಲಸಕ್ಕೆೆ ಸೇರಿ, ರಜಾ ದಿನದಂದು ಕುಸುರಿ ಕಲೆಯನ್ನು ರೂಢಿ ಮಾಡಿಕೊಂಡು ಕರಗತ ಮಾಡಿಕೊಂಡಿದ್ದಾಾರೆ. ಇದರೊಟ್ಟಿಿಗೆ ಪೇಂಡಿಂಗ್ ಸಹ ಮಾಡುತ್ತಾಾರೆ. ಪ್ರೌೌಢಶಾಲೆಗೆ ತೆರಳುವ ಸಂದರ್ಭದಲ್ಲಿ ಡ್ರಾುಂಗ್‌ನ್ನೂ ಸಹ ಸ್ವಯಂ ಆಗಿ ಕಲಿತಿರುವ ವರುಣ್, ಆ ಮೂಲಕ ಕುಸುರಿ ಕಲೆಯನ್ನೂ ಯಾರ ನೆರವೂ ಇಲ್ಲದೆ ಕಲಿತು ಎರಡೂವರೆ ವರ್ಷದಿಂದ ಇದರಲ್ಲಿ ತೊಡಗಿಸಿಕೊಂಡಿದ್ದಾಾರೆ. ಡಿಸೆಂಬರ್ ಮೊದಲ ವಾರ ಬೆಂಗಳೂರಿನಲ್ಲಿ ನಡೆಯಲಿರುವ ಸಮ್ಮೇಳನವೊಂದರಲ್ಲಿ ಈ ಮಾದರಿಗಳನ್ನು ಪ್ರದರ್ಶಿಸಲು ಇವರಿಗೆ ಆಹ್ವಾಾನ ಬಂದಿದೆ. ಇದರಂತೆ ಜಿಲ್ಲೆೆಯಲ್ಲೂ ""ಧ ಸಂದರ್ಭಗಳಲ್ಲಿ ಇದನ್ನು ಪ್ರದರ್ಶಿಸಲು ನಿರ್ಧರಿಸಿದ್ದಾಾರೆ.
ಇವರ ತಂದೆ-ತಾು ಮಗನ ಕೌಶಲ್ಯವನ್ನು ಬೆನ್ನು ತಟ್ಟಿಿ ಪ್ರೋತ್ಸಾಾ"ಸುತ್ತಿಿದ್ದಾಾರೆ. ಮನೆಯಲ್ಲಿ ಯಾರೂ ಮಾಡದ ಸಾಧನೆಯನ್ನು ಮಾಡುತ್ತಿಿರುವ ಬಗ್ಗೆೆ ಅವರಿಗೆ ತುಂಬಾ ಸಂತಸವಾಗಿದೆ. ವರುಣ್ ಸಹ ಇದನ್ನು ಇನ್ನಷ್ಟು ಗಟ್ಟಿಿಯಾಗಿ ಬೆಳೆಸಿ, ಈ ಕ್ಷೇತ್ರದಲ್ಲಿ ಹೆಚ್ಚಿಿನ ಸಾಧನೆ ಮಾಡಲು ಮುಂದಡಿ ಇಟ್ಟಿಿದ್ದಾಾರೆ. ವರುಣ್ ವೃತ್ತಿಿಯ ಜೊತೆಗೆ ಇದನ್ನು ಪ್ರವೃತ್ತಿಿಯನ್ನಾಾಗಿ ಮಾಡಿಕೊಂಡು ಇನ್ನಷ್ಟು ಬೆಳೆಸಲು ಮುಂದಾಗಿದ್ದಾಾರೆ. ಈ ಮೂಲಕ ಜಿಲ್ಲೆೆಯ ಅಪೂರ್ವ ಯುವ ಸಾಧಕನಾಗಿದ್ದಾಾನೆ. 
published on nov 24
...............................

Monday 19 November 2018

ಬಾಲಕ್ರಿಿಕೆಟ್ ತಾರೆ

ಶ್ರವಣ್‌ಬಾಬು


ಮೈದಾನದಲ್ಲಿ ಕ್ರಿಿಕೆಟ್ ಆಡುವ ಮೊದಲು ನಿನ್ನ ಹೃದಯದಲ್ಲಿ ಇದಕ್ಕೆೆ ಬೇಕಾದ ಉತ್ತಮ ತಳಹದಿಯನ್ನು ಹಾಕಿಕೊಂಡು ಅದರ ಆಧಾರದಲ್ಲಿ ಹೆಚ್ಚೆೆಚ್ಚು ಪ್ರಮಾಣದಲ್ಲಿ ಆಟವಾಡುತ್ತ ಹೋಗು. ಉತ್ತಮವಾಗಿ ರನ್ ಗಳಿಸುವುದು ಮತ್ತು ವಿಕೆಟ್ ಪಡೆಯುವುದು ಹೇಗೆ ಎನ್ನುವುದನ್ನು ಕಲಿಯಬಲ್ಲೆೆ. ಇದು ಯುವ ಕ್ರಿಿಕೆಟಿಗರಿಗೆ ಮಾಜಿ ಕ್ರಿಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ ಕಿವಿಮಾತು.
ಕ್ರಿಿಕೆಟಿನತ್ತ ಬಾಲಕರಿಗೆ ಮತ್ತು ಯುವಕರಿಗೆ ಆಸಕ್ತಿಿ ಹೆಚ್ಚುತ್ತಿಿದೆ. ಇದನ್ನು ಕೆಲವರು ರಜಾದಿನದಲ್ಲಿ ಆಡುವ ಕ್ರೀಡೆಯನ್ನಾಾಗಿ ಪರಿಗಣಿಸಿದರೆ, ಇನ್ನೂ ಕೆಲವರು ಪ್ರತಿನಿತ್ಯ ಬೆಳಿಗ್ಗೆೆ ಮತ್ತು ಸಂಜೆ ಆಟವಾಡುತ್ತಾಾ, ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ದಾರಿ ಮಾಡಿಕೊಳ್ಳುತ್ತಿಿದ್ದಾಾರೆ. ಸಾಗರದ ಎಸ್‌ಎಸ್‌ಎಲ್‌ಸಿ ವಿದ್ಯಾಾರ್ಥಿ, ಬಾಲಪ್ರತಿಭೆ ಶ್ರವಣ್‌ಬಾಬು ಕ್ರಿಿಕೆಟನ್ನು ಪ್ರೀತಿಸಿ, ಸತತ ತರಬೇತಿ ಪಡೆದು ಈಗ ರಾಜ್ಯ ಕ್ರಿಿಕೆಟ್ ಸಂಸ್ಥೆೆಯ 16 ವರ್ಷದೊಳಗಿನವರ ತಂಡಕ್ಕೆೆ ಸಂಭಾವ್ಯ ಆಟಗಾರನಾಗಿ ಆಯ್ಕೆೆಯಾಗಿದ್ದಾಾನೆ.
ಶ್ರವಣ್‌ಬಾಬು ಎಂಜಿಪೈ ಹೈಸ್ಕೂಲಿನ ವಿದ್ಯಾಾರ್ಥಿ. ಬಾಲ್ಯದಿಂದಲೂ ಕ್ರಿಿಕೆಟ್ ಎಂದರೆ ವಿಶೇಷ ಆಸಕ್ತಿಿ. ಇವರ ತಂದೆ ಐ. ಎನ್. ಸುರೇಶ್‌ಬಾಬು ಸಹ ಕ್ರಿಿಕೆಟ್ ಆಟಗಾರರು. ತಂದೆಯಿಂದ ಬಂದ ಬಳುವಳಿ ಎಂಬಂತೆ ತನ್ನ 10ನೆಯ ವಯಸ್ಸಿಿನಲ್ಲೇ ಕ್ರಿಿಕೆಟ್ ಆರಂಭಿಸಿದ ಶ್ರವಣ್,  ವಿಶೇಷ ತರಬೇತಿಯನ್ನು ಸಾಗರದಲ್ಲಿ ಕೋಚ್ ರವಿ ನಾಯ್ಡು ಅವರಲ್ಲಿ ಪಡೆದಿದ್ದಾಾನೆ. ಪ್ರತಿದಿನ  ಬೆಳಿಗ್ಗೆೆ ಮತ್ತು ಸಂಜೆ ತರಬೇತಿ ಜೊತೆಗೆ ದೈಹಿಕ ಸಾಮರ್ಥ್ಯವನ್ನೂ ಕಾಪಾಡಿಕೊಳ್ಳುವ ನಿಟ್ಟಿಿನಲ್ಲಿ  ವ್ಯಾಾಯಾಮದಲ್ಲಿ ತೊಡಗಿಕೊಂಡು ಸಾಧನ ಮಾಡಿದ್ದಾಾನೆ. ಬಳಿಕ ರಾಜ್ಯ ಕ್ರಿಿಕೆಟ್ ಸಂಸ್ಥೆೆ ನಡೆಸುವ ವಲಯ ಪಂದ್ಯಾಾವಳಿಯಲ್ಲಿ ಶಿವಮೊಗ್ಗ ವಲಯದ 16ರ ಒಳಗಿನವರ ತಂಡಕ್ಕೆೆ ಆಯ್ಕೆೆಯಾಗಿ ತಾನು ಭವಿಷ್ಯದ ಕ್ರಿಿಕೆಟರ್ ಆಗಬಲ್ಲೆೆ ಎನ್ನುವುದನ್ನು ನಿರೂಪಿಸಿದ್ದಾಾನೆ.
ವಲಯ ತಂಡದಲ್ಲಿ ಆಡಿದ 5 ಪಂದ್ಯದಲ್ಲಿ ಸತತವಾಗಿ 4 ಶತಕ ಬಾರಿಸಿದ್ದಾಾನೆ. (100, 150, 103 ಮತ್ತು 127 ರನ್‌ನ್ನು ವಿವಿಧ ತಂಡಗಳ ವಿರುದ್ಧ ಗಳಿಸಿದ್ದಾಾನೆ.) ಇದೇ ಪಂದ್ಯಾಾವಳಿಯ 5ನೆಯ ಪಂದ್ಯದಲ್ಲಿ 83 ರನ್ ಬಾರಿಸಿ ಔಟಾಗದೆ ಉಳಿದಿದ್ದಾಾನೆ. ಇದರಿಂದಾಗಿ, 5ನೆಯ ಶತಕದ ದಾಖಲೆಯಿಂದ ಸ್ವಲ್ಪ ಹಿಂದುಳಿಯುವಂತಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ 16ರ ಒಳಗಿನವರ ಅಂತರ ವಲಯ ಕ್ರಿಿಕೆಟ್ ಟೂರ್ನಿಯಲ್ಲೂ 46 ಎಸೆತಗಳಲ್ಲಿ 105 ರನ್ ಬಾರಿಸಿ ಕ್ರಿಿಕೆಟ್ ಪ್ರತಿಭೆ ತೋರಿಸಿರುವ ಈ ಪೋರ, ವಲಯ ಕ್ರಿಿಕೆಟ್‌ನಲ್ಲಿ ತನ್ನ ಸಾಮರ್ಥ್ಯವನ್ನು ಪ್ರಚುರಪಡಿಸಿದ್ದರಿಂದ ರಾಜ್ಯ ಕಿರಿಯರ ತಂಡಕ್ಕೆೆ ಆಯ್ಕೆೆಯಾಗಿದ್ದಾಾನೆ. ಎಡಗೈ ಆರಂಭಿಕ ಬ್ಯಾಾಟ್‌ಸ್‌‌ಮನ್ ಮತ್ತು ಬಲಗೈ ಆಫ್ ಸ್ಪಿಿನರ್ ಆಗಿರುವ ಈತ, ವಿಕೆಟ್ ಕೀಪಿಂಗ್ ಸಹ ಮಾಡಬಲ್ಲ. ಒಟ್ಟಿಿನಲ್ಲಿ, ಆಲ್‌ರೌಂಡರ್ ಪ್ರತಿಭೆ ಎನ್ನಬಹುದು.
ಇದೇ ಸಾಧನೆಯನ್ನು ಮುಂದುವರೆಸಿಕೊಂಡು ಹೋದರೆ ಮುಂದೆ ರಾಜ್ಯದ ಹಿರಿಯರ ತಂಡದಲ್ಲಿ ಮಿಂಚಬಲ್ಲ ಶಕ್ತಿಿ ಈತನಿಗಿದೆ. ಇದಕ್ಕೆೆ ಇನ್ನಷ್ಟು ಸತತ ಪರಿಶ್ರಮವನ್ನು ಮಾಡಬೇಕಿದೆ. ತಂದೆ-ತಾಯಿ ಮಗನ ಕ್ರಿಿಕೆಟ್ ಬೆಳವಣಿಗೆಗೆ ಸದಾ ಬೆಂಬಲವಾಗಿ ನಿಂತಿದ್ದಾಾರೆ. ಸ್ವಸಾಮರ್ಥ್ಯವನ್ನು ಇನ್ನಷ್ಟು ಬೆಳೆಸಿಕೊಂಡು ಈ ದಾರಿಯಲ್ಲಿ ಆತ ಸಾಗಿದರೆ ಉಜ್ವಲ ಪ್ರತಿಭೆಯಾಗುವುದು ನಿಶ್ಚಿಿತ. ರಾಜ್ಯ ತಂಡದಲ್ಲಿ ಜಿಲ್ಲೆೆಯ ಕ್ರಿಿಕೆಟಿಗನಾಗಿ ಮಿಂಚಬಲ್ಲ.
ಮಲೆನಾಡಿನ ಈ ಪ್ರತಿಭೆಗೆ ಮುಂದೆ ರಾಷ್ಟ್ರೀಯ ತಂಡದಲ್ಲೂ ಆಟವಾಡುವಂತಹ ಅವಕಾಶ ಸಿಗಬೇಕಿದೆ. ಆಟದ ಮೇಲಿನ ಪ್ರೀತಿ ಮತ್ತು ಬದ್ಧತೆಯನ್ನು ಇದೇ ರೀತಿಯಲ್ಲಿ ಇರಿಸಿ, ಬೆಳೆಸಿಕೊಂಡು ಸಾಗಿದರೆ ಇದು ಕಷ್ಟವೇನೂ ಆಗಲಾರದು. ಶ್ರವಣ್‌ಬಾಬುವಿನ ಈ ಕನಸು ನನಸಾಗಲಿ.   
...............................................        

Friday 9 November 2018

ಅಂಧರಿಗೆ ದಾರಿದೀಪ 
ಶೇಖರ್ ನಾಯ್‌ಕ್‌



ಕಣ್ಣಿಿನಿಂದ ನೋಡಬೇಡ, ಮನಸ್ಸಿಿನಿಂದ ನೋಡು ಎಂದು ಆಂಗ್ಲ ಕವಿ ಶೇಕ್‌ಸ್‌‌ಪಿಯರ್ ಹೇಳಿದ್ದಾಾರೆ. ಏಕೆಂದರೆ, ಸಾಧನೆಗೆ ಬೇಕಿರುವುದು ಬಲಿಷ್ಠವಾದ, ಸಕಾರಾತ್ಮಕ ಮನಸ್ಸೇ ವಿನಾ ಕಣ್ಣಲ್ಲ. ಇಂತಹ ಮನಸ್ಸು ಅದ್ಭುತ ಪವಾಡವನ್ನೇ ಸೃಷ್ಟಿಿಸುವ ಶಕ್ತಿಿಯನ್ನು ಹೊಂದಿದೆ.
ಕ್ರಿಿಕೆಟ್ ಎಂದರೆ ಹಣಗಳಿಸುವ  ಆಟ ಎಂದು ಬಿಂಬಿತವಾಗಿದೆ. ಆದರೆ ಇದರಲ್ಲೂ ಸೇವಾಮನೋಭಾವವನ್ನು ತೋರಬಹುದು ಎನ್ನುವುದಕ್ಕೆೆ ರಾಷ್ಟ್ರಮಟ್ಟದಲ್ಲಿ ಹಲವರು ಉದಾಹರಣೆಯಾಗಿದ್ದಾಾರೆ. ಅಂಧರ ಕ್ರಿಿಕೆಟ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಶಿವಮೊಗ್ಗದ ಶೇಖರ್ ನಾಯ್‌ಕ್‌ ಸಹ  ಈ ಕ್ಷೇತ್ರದಲ್ಲಿ ಜನಪ್ರಿಿಯರು. ಈಗ ಅವರು ಕ್ರಿಿಕೆಟ್ ಅಕಾಡೆಮಿಯನ್ನು ನಗರದಲ್ಲಿ ಸ್ಥಾಾಪಿಸುವ ವಿಶೇಷವಾದ ಹೆಜ್ಜೆೆ ಇಟ್ಟಿಿದ್ದಾಾರೆ. 
ಶಿವಮೊಗ್ಗದ ಹೊರವಲಯದ ಹರಕರೆಯವರಾದ ಇವರು, ಈಗ ಕುಗ್ರಾಾಮಗಳಲ್ಲಿ ತನ್ನಂತೆಯೇ ಇರುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಬೆಳಕಿಗೆ ತರುವ ಸಾಹಸಕ್ಕೆೆ ಕೈ ಹಾಕಿದ್ದಾಾರೆ. ಬಾಲ್ಯದಲ್ಲೇ ಅಂಧ್ವತಕ್ಕೆೆ ಒಳಗಾಗಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ, ಶಿವಮೊಗ್ಗದ ಶಾರದಾದೇವಿ ಅಂಧರ ವಿಕಾಸ ಕೇಂದ್ರದಲ್ಲಿ ಓದುತ್ತಲೇ ಕ್ರಿಿಕೆಟ್ ಕಲಿತವರು. ಇಲ್ಲಿನ ದೈಹಿಕ ಶಿಕ್ಷಕ ಸುರೇಶ್, ಶೇಖರ್ ಅವರ ಕ್ರಿಿಕೆಟ್ ಗುರು.
 ಶೇಖರ್ ನಾಯ್‌ಕ್‌ 1997ರಲ್ಲಿ ಕ್ರಿಿಕೆಟ್‌ಗೆ ಕಾಲಿಟ್ಟು, 2002ರಿಂದ 2010ರವರೆಗೆ ಆಟಗಾರನಾಗಿ ತಂಡದಲ್ಲಿದ್ದರು. 2010ರಿಂದ 2016ರವರೆಗೆ ನಾಯಕನಾಗಿದ್ದರು.  ಭಾರತದ ಅಂಧರ ಕ್ರಿಿಕೆಟ್ ತಂಡದ ನಾಯಕರಾಗಿ ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ಪ್ರಶಸ್ತಿಿ ಗೆದ್ದುತಂದವರು. 2017ರಲ್ಲಿ ಪದ್ಮಶ್ರೀ ಪ್ರಶಸ್ತಿಿ, ವಿಕಲಚೇತನರಿಗಾಗಿ ಕೊಡಮಾಡುವ ರಾಷ್ಟ್ರೀಯ ಪುರಸ್ಕಾಾರಕ್ಕೂ ಭಾಜನರಾದರು. ಅದೇ ವರ್ಷ ಕರ್ನಾಟಕ ರಾಜ್ಯೋೋತ್ಸವ ಪ್ರಶಸ್ತಿಿಯೂ ಅವರಿಗೆ ದೊರೆಯಿತು. ಜೊತೆಗೆ ಅಬ್ದುಲ್ ಕಲಾಂ ಆವಂತಿಕಾ ಅವಾರ್ಡನ್ನೂ ಧರಿಸಿದ್ದಾಾರೆ.
ಇಷ್ಟೆೆಲ್ಲಾಾ ಸಾಧನೆ ಮಾಡಿದ ನಂತರ ತನ್ನಂತೆಯೇ ಅಂಧರಾಗಿರುವವರಿಗೆ ಏನನ್ನಾಾದರೂ ನೀಡಬೇಕೆಂಬ ತುಡಿತದಿಂದಾಗಿ ಶಿವಮೊಗ್ಗದಲ್ಲಿ ಅಂತರರಾಷ್ಟ್ರೀಯ ಮಟ್ಟದ ಅಂಧರ ಕ್ರಿಿಕೆಟ್ ಫೌಂಡೇಶನ್ ಸ್ಥಾಾಪಿಸಲು ನಿರ್ಧರಿಸಿದ್ದಾಾರೆ. ಇದಕ್ಕೆೆ ಶೇಖರ್ ನಾಯ್‌ಕ್‌ ಫೌಂಡೇಶನ್ ಎಂಬ ಹೆಸರನ್ನಿಿಟ್ಟಿಿದ್ದಾಾರೆ. ನವೆಂಬರ್ 11ರಂದು ಇದು ಉದ್ಘಾಾಟನೆಯಾಗಲಿದೆ.
ಕ್ರಿಿಕೆಟ್ ಮೂಲಕ ತಾನು ಗಳಿಸಿದ್ದನ್ನು ಮತ್ತೆೆ ಕ್ರಿಿಕೆಟ್‌ಗೆ ಧಾರೆ ಎರೆಯಲು ಹೊರಟಿರುವ ಶೇಖರ್, ರಾಜ್ಯದೆಲ್ಲೆೆಡೆ ಇರುವ ಇಂತಹ ಕ್ರಿಿಕೆಟಿಗರನ್ನು ಗುರುತಿಸಿ ಅವರಿಗೆ ತರಬೇತಿ ನೀಡಲಿದ್ದಾಾರೆ. ಜೊತೆಗೆ ರಾಜ್ಯ ಮತ್ತು ದೇಶೀಯ ತಂಡದಲ್ಲಿ ಆಡುವ ಅವಕಾಶ ಸೃಷ್ಟಿಿಸಿಕೊಡುವ ಗುರಿಯೂ ಅವರದ್ದು. ತರಬೇತಿ ಕೇಂದ್ರ ಶಿವಮೊಗ್ಗದಲ್ಲಿದ್ದರೂ ಎಲ್ಲ ಜಿಲ್ಲೆೆಗಳಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಲಿದ್ದಾಾರೆ. ಆಸಕ್ತ ಅಂಧ ಕ್ರೀಡಾಪಟುಗಳನ್ನು ಪತ್ತೆೆ ಮಾಡಿ ಅವರಿಗೆ ತರಬೇತಿ ಕೊಡುವುದು, ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯ ಕಲ್ಪಿಿಸಿಕೊಡುವುದು, ಸಮರ್ಥ ಕ್ರಿಿಕೆಟರ್ ಆಗಿ ಯುವಕರನ್ನು ರೂಪಿಸುವುದು ಅವರ ಗುರಿ.
ಈ ಅಕಾಡೆಮಿಗೆ ನ್ಯಾಾಶನಲ್ ಕ್ರಿಿಕೆಟ್ ಅಸೋಸಿಯೇಶನ್ ಫಾರ್ ದ ಬ್ಲೈಂಡ್ ಮಾನ್ಯತೆ ನೀಡಿದೆ. ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಅಂಧರ ಕ್ರಿಿಕೆಟ್ ಅಕಾಡೆಮಿ ಶಿವಮೊಗ್ಗದಲ್ಲಿ ತಲೆಎತ್ತಲಿದೆ. ಇಲ್ಲಿ ತರಬೇತಿ ಪಡೆಯುವವರಿಂದ ಯಾವುದೇ ಶುಲ್ಕವನ್ನು ಪಡೆಯಲಾಗುವುದಿಲ್ಲ. ಪ್ರಾಾಯೋಜಕರ ಆರ್ಥಿಕ ನೆರವಿನಿಂದ ಉಚಿತ ತರಬೇತಿ ನೀಡಲಾಗುವುದು ಎನ್ನುತ್ತಾಾರೆ ರೇಮಂಡ್ ಕಂಪನಿಯಲ್ಲಿ ವೆಲ್‌ನೆಸ್ ಆಫಿಸರ್ ಆಗಿರುವ ಶೇಖರ್.
 ಅಂಧರಲ್ಲಿರುವ ಕ್ರೀಡಾಪ್ರತಿಭೆ ಹೊರತರುವುದು, ಅವರಿಗೆ ಹೆಚ್ಚು ಅವಕಾಶ ಸಿಗುವಂತೆ ಮಾಡುವುದು ಇಂದಿನ ಅವಶ್ಯಕತೆಯಾಗಿದೆ. ಎಷ್ಟೋೋ ಅಂಧರಿಗೆ ಇದರ ಬಗ್ಗೆೆ ಅರಿವೇ ಇಲ್ಲ. ಅವರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ರಾಜ್ಯದಲ್ಲೇ ತರಬೇತಿ ಕೊಡಿಸುವುದು, ನೈತಿಕವಾಗಿ ಅವರಲ್ಲಿ ಧೈರ್ಯ ತುಂಬುವುದು, ಕ್ರೀಡೆಯ ಮೌಲ್ಯವನ್ನು ಉತ್ತೇಜಿಸುವ ಕೆಲಸ ಆಗಬೇಕಿದೆ ಎನ್ನುತಾರೆ ಅವರು. 
published on nov 10, 2018
................................