Saturday 28 July 2018

ಪರಿಪಕ್ವ ಮಹಿಳಾ ಸಾಹಿತಿ
  ಸುನೀತಾ ರಾವ್


ಚಿಕ್ಕಂದಿನಲ್ಲೇ ಸಾಹಿತ್ಯದತ್ತ ಒಲವು ಬೆಳೆಸಿಕೊಂಡಲ್ಲಿ ಅದು ವ್ಯಕ್ತಿಿ ಬೆಳೆದಂತೆ ಆತನನ್ನು ಸಾಹಿತಿಯನ್ನಾಾಗಿ ಮಾಡುತ್ತದೆ. ಬರೆವಣಿಗೆ, ಓದಿನಲ್ಲಿ ಸಕ್ರಿಿಯವಾಗಿರುವಂತೆ ನೋಡಿಕೊಳ್ಳುತ್ತದೆ. ವಯಸ್ಸಾಾದರೂ ಸಾಹಿತ್ಯದಿಂದ ಆ ವ್ಯಕ್ತಿಿ ವಿಮುಖನಾಗದೆ ಇನ್ನಷ್ಟು ಪರಿಪಕ್ವನಾಗುತ್ತಾಾನೆ. ತನ್ನ ಕೃತಿಯ ಮೂಲಕ ಹೆಸರುಗಳಿಸುತ್ತಾಾನೆ.
ಮಹಿಳೆಯ ಸಾಧನೆ ಸಾಹಿತ್ಯದಲ್ಲಿಯೂ ಗಣನೀಯವಾದುದು. ನೂರಾರು ಮಹಿಳಾ ಬರೆಹಗಾರರು ಕನ್ನಡ ಸಾಹಿತ್ಯ ಚರಿತ್ರೆೆಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾಾರೆ. ಜಿಲ್ಲೆೆಯ ಮಟ್ಟಿಿಗೂ ಸಾಕಷ್ಟು ಮಹಿಳಾ ಸಾಹಿತಿಗಳು ಹೆಸರಾಗಿದ್ದಾಾರೆ. ಸುನೀತಾ ರಾವ್ ಅವರದ್ದು ಜಿಲ್ಲೆೆಯ  ಮಹಿಳಾ ಸಾಹಿತಿಗಳಲ್ಲಿ ಅಗ್ರ ಹೆಸರು. ಇವರು ಜಿಲ್ಲಾಾ ಎರಡನೆಯ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾಾರೆ.
ಸುನೀತಾ ರಾವ್ ಮೂಲತಃ ಹೊಳೆಹೊನ್ನೂರಿನವರು. ತಂದೆ ಕೃಷ್ಣಾಾಜಿರಾವ್ ಮತ್ತು ತಾಯಿ ಕುಸುಮಾಬಾಯಿ ಮಗಳ ಸಾಹಿತ್ಯದ ಬಗೆಗಿನ ಒಲವನ್ನು ಗುರುತಿಸಿ, ಓದಲು ಪ್ರೋತ್ಸಾಾಹಿಸಿದರು.  ಉತ್ತಮ ಗೃಹಿಣಿಯಾಗಿ ಸಂಸಾರ ತೂಗಿಸಿಕೊಂಡು ಹೋಗುವ ಇವರಿಗೆ ಸಾಹಿತ್ಯದ ಬಗ್ಗೆೆ ಚಿಕ್ಕಂದಿನಿಂದಲೂ ಅತೀವ ಆಸಕ್ತಿಿ. ಓದುವ ಆಸಕ್ತಿಿಯಿದ್ದರೂ ಸಹ ಇವರ ತಂದೆ ತಾಯಿ ವಿವಾಹ ಮಾಡಿದರು. ವಿವಾಹದ ನಂತರ ಶಿವಮೊಗ್ಗದ ವಿನೋಬನಗರ ನಿವಾಸಿಯಾದರು.
 ಉನ್ನತ ವಿದ್ಯಾಾಭ್ಯಾಾಸ ಮಾಡುವ ಹಂಬಲವಿದ್ದರೂ ಅದು ಸಾಧ್ಯವಾಗದೆ ತಮ್ಮ 60ನೆಯ ವಯಸ್ಸಿಿನಲ್ಲಿ ಕನ್ನಡದಲ್ಲಿ ಎಂ.ಎ.ಪರೀಕ್ಷೆ ಕಟ್ಟಿಿ ಉತ್ತೀರ್ಣರಾದರು. ಓದುವ ಛಲ ಅವರನ್ನು ಸತತವಾಗಿ ಕಾಡುತ್ತಿಿದ್ದುದ್ದರಿಂದ ಎಂ. ಎ. ಪದವಿ ಪಡೆಯಬೇಕೆಂಬ ಇಚ್ಛೆೆ ಅವರಲ್ಲಿತ್ತು. ಕೊನೆಗೂ ಅದನ್ನು ಪತಿಯ ಸಹಕಾರದಿಂದ ಈಡೇರಿಸಿಕೊಂಡಿದ್ದಾಾರೆ. ಇಷ್ಟರಲ್ಲೇ ಹಲವು ಕೃತಿಯನ್ನು ಅವರು ರಚಿಸಿದ್ದರಿಂದ ಹೆಚ್ಚಿಿನ ಪಕ್ವತೆ ಅವರಿಗೆ ಸಿಕ್ಕಿಿದಂತಾಗಿತ್ತು. 
 ಮದುವೆಯಾದರೂ ಸಾಹಿತ್ಯದ ಒಲವು ಇವರನ್ನು ಬಿಡಲಿಲ್ಲ. ಪತಿ ಕಾಲೇಜು ಪ್ರಾಾಧ್ಯಾಾಪಕರಾಗಿದ್ದ ದುರ್ಗೋಜಿರಾವ್ ಎಲ್ಲ ರೀತಿಯ ಪ್ರೋತ್ಸಾಾಹ ನೀಡಿದರು. ಇವರ ಬರವಣಿಗೆಯಲ್ಲಿನ ನೈಜತೆ ಮತ್ತು ಪ್ರೌೌಢತೆ ಎಲ್ಲರ ಗಮನ ಸೆಳೆಯುವಂತಹುದು. ಇವರ ಮೊದಲ ಕಾದಂಬರಿ "ನೀ ಬರುವ ದಾರಿಯಲ್ಲಿ" ಒಂದು ಸಾಮಾಜಿಕ ಕೃತಿಯಾಗಿದ್ದು, ಓದುಗರ ಮನ ಗೆದ್ದಿತು. ನಂತರ ಇವರ ಕೆಲವು ಕವನಗಳಂತೂ ಕೇಳುಗರಿಗೆ ಅಪ್ಯಾಾಯಮಾನವಾಗಿದ್ದವು. ಅವುಗಳಲ್ಲಿ ಕೆಲವನ್ನು ಅನೇಕ ವೇದಿಕೆಗಳಲ್ಲಿ ಅದರಲ್ಲಿಯೂ ಕವಿಗೋಷ್ಠಿಿಗಳಲ್ಲಿ ಪ್ರಸ್ತುತಪಡಿಸಿದಾಗ ಎಲ್ಲರೂ ಚಪ್ಪಾಾಳೆ ತಟ್ಟಿಿ ಸಂತೋಷ ವ್ಯಕ್ತಪಡಿಸಿದರು. ಇದು ಇನ್ನಿಿತರ ಪುಸ್ತಕಗಳನ್ನು ಪ್ರಕಟಿಸಲು ನೆರವಾಯಿತು.
ನೀ ಬರುವ ದಾರಿಯಲಿ, ಸೀತೆಯ ಶಪಥ ಮತ್ತು ದೇವಿಯ ದಾಸಿ ಇವರ ಕಾದಂಬರಿಗಳಾದರೆ, ಹೂಗುಚ್ಛ ಮತ್ತು ಕಾರ್ಮುಗಿಲ ದಾರಿ ಇವರ ಕವನ ಸಂಕಲನಗಳಾಗಿವೆ. ಇವರ ಕಥಾ ಸಂಕಲನ ’ವಾಸ್ತವದ ಪುಟಗಳು’ ಮನೋರಂಜಕವಾದ ಕಥೆಗಳಿಂದ ಕೂಡಿದ್ದು, ಅದರಲ್ಲಿ ಬಹುತೇಕ ಕಥೆಗಳು ನಾಡಿನ ಅನೇಕ ಪತ್ರಿಿಕೆಗಳಲ್ಲಿ ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು ಇವರ ಕಾದಂಬರಿಯ ವಿಮರ್ಶೆ ಮಾಡುವ ಕಾರ್ಯಕ್ರಮವನ್ನೇರ್ಪಡಿಸಿದ್ದಾಾಗ ಸಾಹಿತ್ಯಪ್ರಿಿಯರು ಹೆಚ್ಚಿಿನ ಸಂಖ್ಯೆೆಯಲ್ಲಿ ಸೇರಿ  ಈ ಕಾದಂಬರಿಯನ್ನು ಪ್ರಶಂಸಿಸಿದ್ದರು.
 ಜಿಲ್ಲಾಾ ಕ.ಸಾ.ಪ.ಅವರನ್ನು ಜಿಲ್ಲಾಾ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆರಿಸಿ ವಿಷಯ ತಿಳಿಸಿದಾಗ ತನಗಿಂತ ಉತ್ತಮವಾದ ಸಾಹಿತಿಗಳನ್ನು ಪರಿಗಣಿಸಬಹುದಿತ್ತು ಎಂದು ಹೇಳಿದರಂತೆ. ಇಂತಹ ದೊಡ್ಡತನದ, ಸರಳ, ಸಜ್ಜನಿಕೆಯ, ಸಹೃದಯದ ಸುನೀತಾ ರಾವ್, ಯಾವುದೇ ಪ್ರಚಾರದತ್ತ ಹೋದವರಲ್ಲ. ಜಿಲ್ಲೆೆಯ ಹಲವು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ತಮ್ಮ ವಿಚಾರಧಾರೆಗಳನ್ನು ಮಂಡಿಸಿದ್ದಾಾರೆ. ಇಂದಿಗೂ ಸಾಹಿತ್ಯಪರ ಚಟುವಟಿಕೆಯಲ್ಲಿ ಕ್ರಿಿಯಾಶೀಲರಾಗಿರುವುದರಿಂದಲೇ ಸಮ್ಮೇಳನಾಧ್ಯಕ್ಷತೆಗೆ ಅವರ ಹೆಸರು ಮುಂಚೂಣಿಗೆ ಬಂದಿತು. ಕೂಡು ಕುಟುಂಬದಲ್ಲಿದ್ದರೂ, ತಮ್ಮ ಸಾಹಿತ್ಯ ಕೃಷಿಯನ್ನು ಮಾತ್ರ ಬಿಟ್ಟಿಿಲ್ಲ. ದಿನದ ಕೆಲವು ಗಂಟೆಗಳನ್ನಾಾದರೂ ಅಧ್ಯಯನ ಮತ್ತು ಬರವಣಿಗೆಗೆ ಮೀಸಲಿಟ್ಟು ಸಾಹಿತ್ಯ ಕೃಷಿ ಮಾಡುತ್ತಿಿದ್ದಾಾರೆ. 

28-7-2018
................................


  

Saturday 21 July 2018

ಪರಿಸರ ಪ್ರೇಮಿ ಅಧಿಕಾರಿ 
ರವೀಂದ್ರ


ಯಾವ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡಬಹುದಾದ ಕೆಲಸ ಎಂದರೆ ಗಿಡಗಳನ್ನು ನೆಡುವುದು. ಗಿಡಗಳು ನಮ್ಮ ಆರೋಗ್ಯವನ್ನು ಮತ್ತು ಪರಿಸರವನ್ನು ಕಾಪಾಡುತ್ತವೆ. ಅದಕ್ಕೇ ಹೇಳುವುದು ಹಸಿರೇ ಉಸಿರು ಎಂದು. ಇಂದು ಪರಿಸರ ಸಂರಕ್ಷಕರು ಹೆಚ್ಚುತ್ತಿಿದ್ದಾಾರೆ. ಜೊತೆಗೆ ಅರಿವನ್ನೂ ಸಾಕಷ್ಟು ಮೂಡಿಸುತ್ತಿಿದ್ದಾಾರೆ. ಇಂತಹವರ ಮದ್ಯೆೆ ತಮ್ಮ ದೈನಂದಿನ ಒತ್ತಡದ ಕೆಲಸ ಕಾರ್ಯಗಳ ಮಧ್ಯೆೆಯೂ ಸಮಯ ಸಿಕ್ಕಾಾಗ ಅಂದರೆ ಬೆಳಿಗ್ಗೆೆ ಅಥವಾ ಸಂಜೆ ವೇಳೆ ಪರಿಸರ ಉಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅಧಿಕಾರಿಗಳು, ಸಿಬ್ಬಂದಿಗಳು ಇದ್ದಾಾರೆ.
ನಗರದ ಬಿ. ಎಚ್. ರಸ್ತೆೆಯ ಕಾರ್ಪೊರೇಶನ್ ಬ್ಯಾಾಂಕ್‌ನ ಮುಖ್ಯ ವ್ಯವಸ್ಥಾಾಪಕ ರವೀಂದ್ರ ಒಬ್ಬ ಪರಿಸರ ಪ್ರೇಮಿ. ಆದರೆ ಯಾವತ್ತೂ ತಾನು ಮಾಡಿದ ಕಾರ್ಯದ ಬಗ್ಗೆೆ ಪ್ರಚಾರ ಪಡೆದವರಲ್ಲ. ಗೋಪಾಳ ಬಡಾವಣೆಯ ವಾಸಿಯಾದ ಇವರು ಸಮೀಪದ ಚಂದನ ಪಾರ್ಕ್‌ನಲ್ಲಿ ಗಿಡಗಳು ಬೇಸಿಗೆಯಲ್ಲಿ  ಒಣಗುತ್ತಿಿರುವುದನ್ನು ಗಮನಿಸಿ, ನೀರೆರೆಯುವ ಕೆಲಸ ಆರಂಭಿಸಿದರು. ಬೆಳ್ಳಂಬೆಳಿಗ್ಗೆೆ ಎದ್ದು ಕೊಡಪಾನದಲ್ಲಿ ನೀರು ಹೊತ್ತು ತಂದು ಗಂಟೆಗಳ ಕಾಲ ಗಿಡಗಳಿಗೆ ಹಾಕಿದರು. ಎರಡು ಬೇಸಿಗೆಯಲ್ಲಿ ಈ ಸ್ಮರಣೀಯ ಕಾರ್ಯ ಮಾಡಿದ್ದಾಾರೆ. ಇದಕ್ಕಾಾಗಿ ಅವರು ಇನ್ನೊೊಬ್ಬರ ಮೊರೆ ಹೋಗಲಿಲ್ಲ. ಬೆಳಿಗ್ಗೆೆ ವಾಕಿಂಗ್ ಮಾಡುವ ಬದಲು ಇಂತಹ ಎಂದೂ ಮರೆಯಲಾಗದ ಸೇವೆಯನ್ನು ಮಾಡಿದ್ದಾಾರೆ.
ಸ್ಥಳೀಯ ಹತ್ತಾಾರು ಮಿತ್ರರನ್ನು (ಸಮಾನಮನಸ್ಕರನ್ನು) ಪರಿಚಯ ಮಾಡಿಕೊಂಡು ಪಾಕ್ ಅಭಿವೃದ್ಧಿಿಗೆ ಮುಂದಾಗಿದ್ದಾಾರೆ. ಈ ಮಿತ್ರರೂ ಸಹ ರವೀಂದ್ರ ಅವರ ಜೊತೆ ಗಿಡಕ್ಕೆೆ ನೀರೆರೆಯುವುದು,  ಸ್ವಚ್ಛತೆ ಕಾಪಾಡುವುದು, ಪ್ಲಾಾಸ್ಟಿಿಕ್ ಮುಕ್ತವಾಗಿಸುವುದು, ಹೂವಿನ ಗಿಡಗಳನ್ನು ಬೆಳೆಸುವುದು, ಖಾಲಿ ಜಾಗದಲ್ಲಿ ಸಸಿಗಳನ್ನು ರಸ್ತೆೆಯಂಚಿನಲ್ಲಿ ನೆಡುವ ಕಾರ್ಯ ಮಾಡುತ್ತಿಿದ್ದಾಾರೆ. ಈ ತಂಡವು ಈಗ ಚಂದನ ಪಾರ್ಕ್‌ನ್ನು ಚೆಂದದ ಪಾರ್ಕ್‌ನ್ನಾಾಗಿ ಮಾಡಿದೆ. ಸ್ವಚ್ಛತೆ ಮತ್ತು ಅಂದ ಹೆಚ್ಚಿಿಸುವುದಕ್ಕೆೆ ಆದ್ಯತೆ ಕೊಟ್ಟಿಿದೆ.       
 ಈಗ ಚಂದನ ಆರೋಗ್ಯ ಉದ್ಯಾಾನವನ ಸದಾ ಹಸಿರಿನಿಂದ ಕೂಡಿದೆ. ನೂರಾರು ಜನರು ಇಲ್ಲಿ ವಾಯುವಿಹಾರಕ್ಕೆೆ ಬರುತ್ತಾಾರೆ. ಚಂದನ ಉದ್ಯಾಾನವನ ಸಮಿತಿಯನ್ನು ರಚಿಸಿ ಇದರ ರಕ್ಷಣೆ ಮತ್ತು ನಿರ್ವಹಣೆಯನ್ನು ಈ ಗೆಳೆಯರೆಲ್ಲ ಸೇರಿಕೊಂಡು ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾಾರೆ.
ಒಬ್ಬ ಅಧಿಕಾರಿ ಹೀಗೆ ಸರಳವಾಗಿ ಕೆಲಸ ಮಾಡುತ್ತಿಿರುವುದನ್ನು ಕಂಡು ಗೆಳೆಯರಿಗೆಲ್ಲಾಾ ಸಂತೋಷವಾಯಿತು. ರವೀಂದ್ರ ಅವರು ನಗರದ ಕಾರ್ಪೊರೇಷನ್ ಬ್ಯಾಾಂಕಿನ ಮುಖ್ಯ ಕಚೇರಿಯ ಚೀಫ್ ಮ್ಯಾಾನೇಜರ್ ಆಗಿ ಬಡ್ತಿಿ ಹೊಂದಿದ್ದಾಾರೆ. ಇದನ್ನು ನೆಪವಾಗಿಟ್ಟುಕೊಂಡ ಅವರ ಗೆಳೆಯರು ಚಂದನವನದಲ್ಲಿ ಇತ್ತೀಚೆಗೆ ಸನ್ಮಾಾನಿಸಿದರು.
ಮೂಲತಃ ಹಾಸನದವರಾದ ಇವರು, ಬೆಂಗಳೂರು ಕೃಷಿ ವಿವಿಯಲ್ಲಿ ಬಿಎಸ್‌ಸಿ ಕೃಷಿ ಪದವಿ ಪಡೆದಿದ್ದಾಾರೆ. 2008ರಲ್ಲಿ ಕಾರ್ಪೊರೇಶನ್ ಬ್ಯಾಾಂಕ್ ಅಧಿಕಾರಿಯಾಗಿ ಕೆಲಸ್ಕ ಸೇರಿ ಗೋಕಾಕ್ ಮತ್ತು ಭದ್ರಾಾವತಿಯಲ್ಲಿ ಸುಮಾರು ಆರುವರೆ ವರ್ಷ ಸೇವೆ ಸಲ್ಲಿಸಿದ್ದಾಾರೆ. ಶಿವಮೊಗ್ಗದ ಶಂಕರಮಠ ಬ್ರಾಾಂಚ್‌ನಲ್ಲಿ ಮೂರುವರೆ ವರ್ಷದಿಂದ ಸೀನಿಯರ್ ಮ್ಯಾಾನೇಜರ್ ಆಗಿ ಕೆಲಸ ಮಾಡಿ ಸದ್ಯ ಮುಖ್ಯ ಪ್ರಬಂಧಕರಾಗಿ ಬಡ್ತಿಿ ಪಡೆದಿದ್ದಾಾರೆ. ಜೊತೆಗೆ ಆರ್ಥಿಕವಾಗಿ ದುರ್ಬಲರಾದ ಮಕ್ಕಳಿಗೆ ತಮ್ಮ ಕೈಲಾದ ಧನ ಸಹಾಯ ಮಾಡಿ ಓದಿಸುತ್ತಿಿದ್ದಾಾರೆ.
 ಉದ್ಯಾಾನವನದಲ್ಲಿ ಕೆಲಸ ಮಾಡುವುದು ಎಂದರೆ ಸಂತಸ. ಆರೋಗ್ಯ, ಸಂತೋಷ, ಒಳ್ಳೆೆಯ ಗೆಳೆಯರು ಸಿಗುತ್ತಾಾರೆ. ಬದುಕು ಲವಲವಿಕೆಯಿಂದ ಕೂಡಿರುತ್ತದೆ. ಯುವಜನತೆ ಉದ್ಯಾಾನವನ ಉಳಿಸುವ ಕೆಲಸ ಮಾಡಬೇಕಾಗಿದೆ. ಮೂರುವರೆ ವರ್ಷದಿಂದ ಶಿವಮೊಗ್ಗದಲ್ಲಿದ್ದು ಅನೇಕ ಮಿತ್ರರು ತನಗೆ ಈ ಕೆಲಸದಲ್ಲಿ ಸಹಕಾರಿಯಾಗಿದ್ದಾಾರೆ. ಅವರ ನೆರವು ಸ್ಮರಣೀಯ ಎನ್ನುತ್ತಾಾರೆ ರವೀಂದ್ರ.
published on July 21
,,,,,,,,,,,,,,,,,,,,,,,,,,,,,,,,,,,,

Monday 16 July 2018

ಮಿಸೆಸ್ ಇಂಡಿಯಾ ಕಿರೀಟದತ್ತ
 ಲಕ್ಷ್ಮೀ ಶ್ರವಣ್


ಸೌಂದರ್ಯ ಎನ್ನುವುದು ಕೇವಲ ಮುಖಕ್ಕಷ್ಟೇ ಸೀಮಿತವಾದುದ್ದಲ್ಲ. ಇದು ಮನಸ್ಸು, ಹೃದಯ ಮತ್ತು ಆತ್ಮಕ್ಕೆೆ ಸಂಬಂಧಿಸಿದ್ದು ಎನ್ನುವ ಮಾತಿದೆ. ಸೌಂದರ್ಯ ಸ್ಪರ್ಧೆಗಳಲ್ಲಿ ಕೇವಲ ದೈಹಿಕ ಸೌಂದರ್ಯವಷ್ಟೇ ಬೆಲೆ ಕೊಡದೆ ಆಂತರಿಕ ವ್ಯಕ್ತಿಿತ್ವವನ್ನು ಗಮನಿಸುತ್ತಾಾರೆ. ಆದ್ದರಿಂದಲೇ ಅತ್ಯಂತ ಚಾಣಾಕ್ಷಮತಿ ಮತ್ತು ಸಮಯಪ್ರಜ್ಞೆ ಉಳ್ಳವರು ಇದರಲ್ಲಿ ಕಿರೀಟ ಧರಿಸುತ್ತಾಾರೆ.
ಶಿವಮೊಗ್ಗದ ಲಕ್ಷ್ಮೀ ಶ್ರವಣ್ ಮಿಸೆಸ್ ಇಂಡಿಯಾ ಸ್ಪರ್ಧೆಯ 6ನೆಯ ಅವತರಣಿಕೆಯ ಅಂತಿಮ ಸುತ್ತಿಿಗೆ ಆಯ್ಕೆೆಯಾಗಿದ್ದಾಾರೆ. ಈ ಮಾಸಾಂತ್ಯದಲ್ಲಿ ಇದರ ಅಂತಿಮ ಸ್ಪರ್ಧೆ ನಡೆಯಲಿದೆ. ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ಜರುಗಿದ ಈ ಸ್ಪರ್ಧೆಯ ಕರ್ನಾಟಕ  ರಾಜ್ಯದ ಆಡಿಶನ್‌ನಲ್ಲಿ ಲಕ್ಷ್ಮೀ ಭಾಗವಹಿಸಿದ್ದರು. ಇದನ್ನು ಮಿಸೆಸ್ ಇಂಡಿಯಾದ ನಿರ್ದೇಶಕಿ ಪ್ರತಿಭಾ ಸಂಶಿಮಠ ಸಂಯೋಜಿಸಿದ್ದರು. ಸುಮಾರು 150ರಷ್ಟು ಸ್ಪರ್ಧಿಗಳು ಇದರಲ್ಲಿ ಪಾಲ್ಗೊೊಂಡಿದ್ದರಾದರೂ ಆಯ್ಕೆೆಯಾದವರು ಕೇವಲ 30 ಜನ ಮಾತ್ರ. ಇದರಲ್ಲಿ ಲಕ್ಷ್ಮೀ ಸಹ ಒಬ್ಬರು. ಆನಂತರ ಏಪ್ರಿಿಲ್‌ನಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯಲ್ಲಿ 40ರ ವಯೋಮಾನದವರ (ಕ್ಲಾಾಸಿಕ್) ವಿಭಾಗದಲ್ಲಿ ಲಕ್ಷ್ಮೀ ಕಿರೀಟ ಧರಿಸಿದ್ದರು. 30, 40 ಮತ್ತು 60ರ ವಯೋಮಾನದವರಿಗೆ 3 ಪ್ರತ್ಯೇಕ ವಿಭಾಗದಲ್ಲಿ ಈ ಸ್ಪರ್ಧೆ ನಡೆದಿತ್ತು. ಸ್ಪರ್ಧೆಯ ಟ್ಯಾಾಲೆಂಟ್ ರೌಂಡ್‌ನಲ್ಲಿ ಬೆಸ್‌ಟ್‌ ಟ್ರೆೆಡಿಶನಲ್ ಪರ್ಫಾಮರ್ ಎಂಬ ಪ್ರಶಸ್ತಿಿಗೆ ಅವರು ಪಾತ್ರರಾಗಿದ್ದಾಾರೆ.
ಈಗ ಮಿಸೆಸ್ ಇಂಡಿಯಾದಲ್ಲಿ ಕರ್ನಾಟಕವನ್ನು ಲಕ್ಷ್ಮೀ ಪ್ರತಿನಿಧಿಸುವ ಸ್ಪರ್ಧಿಯಾಗಿದ್ದಾಾರೆ. ಈ ಸ್ಪರ್ಧೆಯ ನಿರ್ದೇಶಕಿ ದೀಪಾಲಿ ಫಡ್ನಿಿಸ್ ಇದನ್ನು ಸಂಯೋಜಿಸಿದ್ದಾಾರೆ. ಈ ಸ್ಪರ್ಧೆ ಕೇವಲ ದೈಹಿಕ ಸೌಂದರ್ಯಕ್ಕೆೆ ಮಾತ್ರ ಸೀಮೀತವಾದುದಲ್ಲ. ಬದಲಾಗಿ ಸಮಾಜಕ್ಕೆೆ ಸೇವೆ ಸಲ್ಲಿಸುವ ವಿಷಯವನ್ನೂ ಒಳಗೊಂಡಿದೆ. ನಾವು ಬರಿಗೈಲಿ ಬಂದಿದ್ದೇವೆ, ಬರಿಗೈಲೇ ಹೋಗಬೇಕೆನ್ನುವುದು ಇದರ ಸಂದೇಶವಾಗಿದೆ. 
  ಲಕ್ಷ್ಮೀ ಎಂಬಿಎ ಪದವೀಧರೆ. ಭರತನಾಟ್ಯದಲ್ಲಿ ಎಂಎ ಮಾಡುತ್ತಿಿದ್ದಾಾರೆ. ನಗರದ ಇಂಜಿನೀಯರ್ ಜೆ. ಶ್ರ್ರವಣ್ ಅವರ ಪತ್ನಿಿಯಾಗಿದ್ದು, ಮೂಲತಃ ಬೆಂಗಳೂರಿನವರಾಗಿದ್ದಾಾರೆ. 19 ವರ್ಷದಿಂದ ಶಿವಮೊಗ್ಗದ ಸೊಸೆಯಾಗಿ ಇಲ್ಲಿದ್ದಾಾರೆ. ಕರ್ನಾಟಕದ ಕರಾಟೆ ಚಾಂಪಿಯನ್ (ಕಂಚಿನ ಪದಕ ಸಹಿತ), ಥಾಯ್, ಛೀ ಪ್ರಾಾಕ್ಟೀಶನರ್,  ರೇಖಿ ಪ್ರಾಾಕ್ಟೀಶನರ್, ಪ್ರಾಾನಿಕ್ ಹೀಲರ್, ಯೋಗ ಶಿಕ್ಷಕಿ, ಭರತನಾಟ್ಯ ಕಲಾವಿದೆ, ರೋಟರಿಯಲ್ಲಿ ಮಹಿಳಾ ಸಬಲೀಕರಣ ವಿಭಾಗದ ಮುಖ್ಯಸ್ಥೆೆಯಾಗಿ, ಶಿವಮೊಗ್ಗ ಉತ್ತರ ಇನ್ನರ್ ವ್ಹೀಲ್‌ನ ಮಾಜಿ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದವರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಿ, ಗ್ರಾಾಮಾಂತರ ಮತ್ತು ನಗರ ಪ್ರದೇಶದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು, ಸೆರೆಮನೆಯಲ್ಲಿರುವ ಮಹಿಳೆಯರಿಗೆ ಮಹಿಳಾ ಸಬಲೀಕರಣ ಮತ್ತು ಕೌಶಲ್ಯಾಾಭಿವೃದ್ಧಿಿ ತರಬೇತಿ, ಕಿವುಡ ಮತ್ತು ಮೂಗ ಮಕ್ಕಳಿಗೆ ಹಾಗೂ ರಿಮ್ಯಾಾಂಡ್ ಹೋಮ್‌ನಲ್ಲಿರುವವರಿಗೆ ಕೌನ್ಸಿಿಲಿಂಗ್  ನಡೆಸಿ ಅವರ ಅಭಿವೃದ್ಧಿಿಗೆ ಸಾಕಷ್ಟು ಕ್ರಮ ಕೈಗೊಂಡ ಹಿನ್ನೆೆಲೆಯಲ್ಲಿ ಹಲವು ಪ್ರಶಸ್ತಿಿಗಳಿಗೆ ಭಾಜನರಾಗಿದ್ದಾಾರೆ. ಅಂಗವಿಕಲ ಮಕ್ಕಳನ್ನು ಹೇಗೆ ಪ್ರೋತ್ಸಾಾಹಿಬೇಕೆಂಬ ಬಗ್ಗೆೆ ಅವರ ಪಾಲಕರಿಗೆ ಹಲವು ಮಾರ್ಗದರ್ಶನ ಶಿಬಿರ ನಡೆಸಿದ್ದಾಾರೆ. ಪರಿಸರವಾದಿಯಾಗಿ, ಉದ್ಯಾಾನವನಗಳ ಅಭಿವೃದ್ಧಿಿಗೆ ಕೆಲಸ ಮಾಡಿದ್ದಾಾರೆ. ಶಾಸಕರ ಸುಮಾರು 81 ಲಕ್ಷದಷ್ಟು ಅನುದಾನ ಇದಕ್ಕೆೆ ದಕ್ಕುವಂತೆ ಮಾಡಿದ್ದಾಾರೆ.   
ಈ ಸ್ಪರ್ಧೆ ವಿವಾಹಿತೆಯಾದ ನನಗೆ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ಕಲ್ಪಿಿಸಿಕೊಟ್ಟಿಿದೆ. ಇದು ಫ್ಯಾಾಶನ್ ಮತ್ತು ಮನರಂಜನಾ ಕ್ಷೇತ್ರಕ್ಕೆೆ ಕಾಲಿಡಲು ಮೊದಲ ಮೆಟ್ಟಿಿಲಾಗಿದೆ. ಸಾಕಷ್ಟು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಲು ಕರೆಬಂದಿದೆ. ಫ್ಯಾಾಶನ್ ಶೋಗಳಿಗೆ ಅತಿಥಿಯಾಗಿ ಕರೆಯುತ್ತಿಿದ್ದಾಾರೆ. ಆಭರಣೋದ್ಯಮದ ಜಾಹೀರಾತಿಗೆ ಆಹ್ವಾಾನ ನೀಡಿದ್ದಾಾರೆ. ಕುಟುಂಬದವರು ಸಾಕಷ್ಟು ಪ್ರೋತ್ಸಾಾಹ ನೀಡಿದ್ದರಿಂದ ಇಂದು ರಾಷ್ಟ್ರೀಯ ಸ್ಪರ್ಧೆಯ ಅಂತಿಮ ಘಟ್ಟ ತಲುಪಲು ಸಾಧ್ಯವಾಗಿದೆ ಎಂದು ನುಡಿಯುತ್ತಾಾರೆ ಲಕ್ಷ್ಮೀ ಶ್ರವಣ್.

14.7.2018
.............................................  

Monday 9 July 2018

ವನ್ಯಜೀವಿ ಛಾಯಾಗ್ರಾಾಹಕ 
ನಟರಾಜ ಮಂಡಗದ್ದೆೆ

...ಒಂದು ಅತ್ಯುತ್ತಮ ಫೋಟೊ ಎಲ್ಲರನ್ನೂ ಆಕರ್ಷಿಸುವ ಗುಣ ಹೊಂದಿರುತ್ತದೆ. ಛಾಯಾಗ್ರಾಾಹಕ ಆ ಚಿತ್ರವನ್ನು ಕ್ಲಿಿಕ್ಕಿಿಸುವಾಗ ಎಷ್ಟು ಶ್ರಮ ಹಾಕಿರುತ್ತಾಾನೆ ಎನ್ನುವುದು ಆತನಿಗೆ ಮಾತ್ರ ಗೊತ್ತಿಿರುತ್ತದೆ. ಅದಕ್ಕಾಾಗಿ ದಿನವಿಡೀ ಹೊಂಚುಹಾಕುತ್ತಾಾನೆ. ಅದರಲ್ಲೂ ವಿಶೇಷವಾಗಿ ವನ್ಯಜೀವಿ ಛಾಯಾಗ್ರಾಾಹಕರು ಪಡುವ ಶ್ರಮ ಅಪಾರವಾದುದು.
ನಟರಾಜ ಮಂಡಗದ್ದೆೆ ಹೆಸರು ಜಿಲ್ಲೆೆಯಲ್ಲಿ ಪರಿಚಿತ. ವನ್ಯಜೀವಿಗಳ ಚಿತ್ರ ತೆಗೆಯುವುದಕ್ಕಾಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಛಾಯಾಗ್ರಾಾಹಕ. ಕ್ರಿಿಮಿ-ಕೀಟ-ಸರಿಸೃಪ- ಪ್ರಾಾಣಿಗಳನ್ನು ಸೆರೆಹಿಡಿಯಲು ದಿನವಿಡೀ ಕಾಡಿಲ್ಲಿರುತ್ತಾಾರೆ. ಛಾಯಾಗ್ರಹಣವನ್ನು ಅವರು ತಮ್ಮ ಜೀವನದ ಒಂದು ಭಾಗವನ್ನಾಾಗಿ ಮಾಡಿ ಕೊಂಡಿದ್ದಾಾರೆ.
ಮಂಡಗದ್ದೆೆಯವರಾದ ನಟರಾಜ ಅವರಿಗೆ ಛಾಯಾಗ್ರಹಣದ ಹುಚ್ಚು ಹಿಡಿಸಿದವರು ಮೊಯ್ದಿಿನ್ ಕುಟ್ಟಿಿ ಎನ್ನುವ ಹಿರಿಯ ಛಾಯಾಗ್ರಾಾಹಕರು. ಅವರ ಕೈಲಿದ್ದ ಕ್ಯಾಾಮರಾವನ್ನೇ ಪಡೆದು ಈ ಕಲೆಯನ್ನು ಕಲಿತು ಮೊದಲ ಕ್ಯಾಾಮರಾವನ್ನು 1983ರಲ್ಲಿ ಖರೀದಿಸಿ ಈ ಕಲೆಯಲ್ಲಿ ಏನಾದರೊಂದು ಹೊಸತನವನ್ನು ಸಾಧಿಸಲು ನಿರ್ಧರಿಸಿದರು. ಅದೇ ಪ್ರಕಾರ ಸಾಗಿ ಈಗ ಅದರಲ್ಲಿ ಅಪಾರ ಸಾಧನೆ ಮಾಡಿದ್ದಾಾರೆ. 
   ಮಂಡಗದ್ದೆೆ ಮತ್ತು ಮಾಳೂರಿನಲ್ಲಿ ಪ್ರಾಾಥಮಿಕ ಶಿಕ್ಷಣ ಮುಗಿಸಿ ಶಿವಮೊಗ್ಗದ ಡಿವಿಎಸ್‌ನಲ್ಲಿ ಪದವಿ ಪಡೆದು ಹೆಗಲಿಗೆ ಕ್ಯಾಾಮರಾ ಏರಿಸಿಕೊಂಡು ಕಾಡು ಸುತ್ತಲು ಆರಂಭಿಸಿದರು. ಮಂಡಗದ್ದೆೆ ಪರಿಸರ ವನ್ಯ ಜೀವಿ ಛಾಯಾಗ್ರಾಾಹಕರಿಗೆ ಪ್ರಶಸ್ತ ಸ್ಥಳವಾಗಿರುವುದರಿಂದ ಬೆಳಿಗ್ಗೆೆ ಎದ್ದು ಇದೇ ಕೆಲಸ ಆರಂಭಿಸಿದರು. ಪರಿಣಾಮವಾಗಿ, ಈವರೆಗೆ ಸಾವಿರಾರು ಅಪೂರ್ವ ಚಿತ್ರ ಸಂಗ್ರಹ ಮಾಡಿದ್ದಾಾರೆ. ಕ್ರಿಿಮಿ-ಕೀಟಗಳ ಸಂತಾನೋತ್ಪತ್ತಿಿ, ಕೂಡುಜೀವನ, ಚಲನವಲನ, ಕ್ರಮಿಸುವಿಕೆ ಆಹಾರ ಎಲ್ಲವನ್ನೂ ಅವುಗಳೊಂದಿಗೇ ದಿನವಿಡಿ ಇದ್ದು ಚಿತ್ರ ಸೆರೆಹಿಡಿದಿದ್ದಾಾರೆ.
ಈ ಚಿತ್ರಗಳು ಜಿಲ್ಲೆೆಯಾದ್ಯಂತ ವಿವಿಧ ಸಂದರ್ಭಗಳಲ್ಲಿ ಪ್ರದರ್ಶಿತವಾಗಿವೆ. ನಗರದ ಬಹುತೇಕ ಎಲ್ಲಾಾ ಶಾಲಾ- ಕಾಲೇಜುಗಳಲ್ಲಿ ಪ್ರದರ್ಶನ ಮಾಡಿ ಮಕ್ಕಳಿಗೆ ಪರಿಸರ, ಪ್ರಾಾಣಿಗಳ ಬಗ್ಗೆೆ ಮಾಹಿತಿ ನೀಡಿದ್ದಾಾರೆ.  ಹೊರ ಜಿಲ್ಲೆೆಯಲ್ಲೂ ಅನೇಕ ಚಿತ್ರಪ್ರದರ್ಶನ ಮಾಡಿ ಜನಮನ ಗೆದ್ದಿದ್ದಾಾರೆ. ತಾವಾಯಿತು, ತಮ್ಮ ಕೆಲಸವಾಯಿತು ಎಂದುಕೊಂಡು ಇಂದಿಗೂ ಇದೇ ಕೆಲಸ ನಿರ್ವಹಿಸುತ್ತಿಿರುವ ನಟರಾಜ, ಸುಮಾರು 500 ಅತ್ಯಪೂರ್ವ ವರ್ಣಚಿತ್ರಗಳ ಸಂಗ್ರಹದ ಬೃಹತ್ ಸಂಪುಟವನ್ನು ಹೊರತರುವ ಮಹತ್ತರ ಕಾರ್ಯ ಆರಂಭಿಸಿದ್ದಾಾರೆ.
ಇದರೊಟ್ಟಿಿಗೆ ಪೂರ್ಣಚಂದ್ರ ತೇಜಸ್ವಿಿ ವನ್ಯಜೀವಿ ಛಾಯಾಗ್ರಾಾಹಕರ ಬಳಗವನ್ನು ಸಮಾನ ಮನಸ್ಕರೊದಿಗೆ ಸೇರಿ ಹುಟ್ಟುಹಾಕಿದ್ದಾಾರೆ. ಇದರ ಮೂಲಕ ಮಕ್ಕಳಲ್ಲಿ ವನ್ಯಜೀವಿ, ಕಾಡು, ಪರಿಸರಗಳ ಬಗ್ಗೆೆ ಜಾಗೃತಿ ಮೂಡಿಸುತ್ತಿಿದ್ದಾಾರೆ. ಶಾಲಾ-ಕಾಲೇಜುಗಳ ವಿದ್ಯಾಾರ್ಥಿಗಳನ್ನು ಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿನ ಮರ-ಗಿಡ, ಜೀವಿಗಳನ್ನು ಪರಿಚಯಿಸುವ ಕೆಲಸವನ್ನೂ ಮಾಡುತ್ತಿಿದ್ದಾಾರೆ. ಪರಿಸರ, ವನ್ಯಜೀವಿಗಳಿಗಾಗಿಯೇ ಕೆಲಸ ಮಾಡುತ್ತಿಿರುವ ಇವರು ಬೆಜ್ಜವಳ್ಳಿಿಯಲ್ಲಿ ಶ್ರೀಮಾತಾ ಎಂಬ ಸ್ಟುಡಿಯೋ ನಡೆಸುತ್ತಿಿದ್ದಾಾರೆ. ಮಂಡಗದ್ದೆೆ, ತೀಥಹಳ್ಳಿಿ ಭಾಗದಲ್ಲಿ ಕಾಡು ಉಳಿಸುವ ಕೆಲಸಕ್ಕೂ ಕೈಹಾಕಿದ್ದಾಾರೆ.
ವೃತ್ತಿಿ-ಪ್ರವೃತಿ ಎರಡನ್ನೂ ಒಂದೇ ಆಗಿ ಮಾಡಿಕೊಂಡು ಅಳಿವಿನಂಚಿನಲ್ಲಿರುವ ಕಾಡುಪ್ರಾಾಣಿಗಳನ್ನು ಉಳಿಸಲು ಹೋರಾಟ ಮಾಡುತ್ತಿಿದ್ದಾಾರೆ. ಜನರಿಗೆ ಈ ಬಗ್ಗೆೆ ಮಾಹಿತಿ ಕೊಟ್ಟು ಜಾಗೃತಿ ಮೂಡಿಸಿ, ಅವರನ್ನೂ ಈ ಹೋರಾಟದಲ್ಲಿ ಬಳಸಿಕೊಳ್ಳುವ ಇರಾದೆ ಅವರದ್ದು. ಗುರುವಿನ ನೆರವಿಲ್ಲದೆ ಛಾಯಾಗ್ರಹಣ ಕಲಿತು, ಮುಂಗಾರು ಪತ್ರಿಿಕೆಯ ಛಾಯಾಗ್ರಾಾಹಕನಾಗಿ ಕೆಲಸ ಮಾಡಿ ಬಳಿಕ ಇದನ್ನೇ ವೃತ್ತಿಿಯಾಗಿ ಮುನ್ನಡೆಸಿಕೊಂಡು ಇಂದು ಜಿಲ್ಲೆೆ- ಹೊರಜಿಲ್ಲೆೆಯಲ್ಲಿ ಪ್ರಖ್ಯಾಾತಿ ಗಳಿಸಿದ್ದಾಾರೆ. ಪ್ರಚಾರದಿಂದ ದೂರವುಳಿದು ಕೆಲಸ ಮಾಡುತ್ತಿಿರುವ ಇವರು ಸನ್ಮಾಾನ- ಗೌರವಗಳನ್ನು ಬೆನ್ನತ್ತಿಿ ಹೋದವರೂ ಅಲ್ಲ ಎನ್ನುವುದು ವಿಶೇಷ.
ಇತ್ತೀಚೆಗೆ ಕರ್ನಾಟಕ ಸಂಘದ ವಾರ್ಷಿಕ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ವನ್ಯಜೀವಿ ಚಿತ್ರ ಪ್ರದರ್ಶನ ಮಾಡಿದ್ದಾಾರೆ. ಇವರನ್ನು ಕರ್ನಾಟಕ ಸಂಘ ಆಭಿನಂದಿಸಿ ಗೌರವಿಸಿದೆ.
7.7.2018
............................... 

Tuesday 3 July 2018

ಉತ್ತಮ ಪಶು ವೈದ್ಯ ಪುರಸ್ಕೃತ
ಡಾ. ಸುನಿಲ್‌ಕುಮಾರ್


ಪ್ರತಿಯೊಬ್ಬನಿಗೂ ಒಂದಲ್ಲ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಅವಕಾಶವಿದೆ. ಆದರೆ ಈ ಸಾಧನೆಗೆ ಅಸಾಧಾರಣ ಬುದ್ಧಿಿಮತ್ತೆೆಯ ಜೊತೆಗೆ ಸಮರ್ಪಣಾ ಭಾವ ಮತ್ತು  ದೂರದೃಷ್ಟಿಿಯೂ ಅಗತ್ಯ. ಇಂತಹ ಕೌಶಲ್ಯ ಹೊಂದಿದವರು ಸಾಧನೆ ಮಾಡುವುದರಲ್ಲಿ ಅನುಮಾನವಿಲ್ಲ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಮ್ಮ ಹೆಸರನ್ನು ಛಾಪಿಸುತ್ತಾಾರೆ.
ನಗರದ ಯುವ, ಉತ್ಸಾಾಹಿ ಪಶುವೈದ್ಯ ಡಾ. ಕೆ. ಎಂ. ಸುನಿಲ್‌ಕುಮಾರ್ ಭಾರತ ಸರ್ಕಾರದ "ಉತ್ತಮ ಕ್ಷೇತ್ರ ಪಶು ವೈದ್ಯ" ಪ್ರಶಸ್ತಿಿಗೆ ಭಾಜನರಾಗಿದ್ದಾಾರೆ. ಪ್ರತಿಬಾನ್ವಿಿತ ಸುನಿಲ್‌ಕುಮಾರ್ ತನ್ನ ಸೇವೆಯ 10 ವರ್ಷದಲ್ಲಿ ಜನಮಾನಸ ಗೆದ್ದಿದ್ದಾಾರೆ. ಅಷ್ಟೇ ಏಕೆ, ಒಬ್ಬ ಪಶುವೈದ್ಯ ಗ್ರಾಾಮಾಂತರದಲ್ಲಿ ಯಾವ ರೀತಿ ಕೆಲಸ ಮಾಡಬಹುದು ಎನ್ನುವುದಕ್ಕೆೆ ಸಾಕ್ಷಿಯಾಗಿದ್ದಾಾರೆ.
ಸದ್ಯ   ಶಿಕಾರಿಪುರ ತಾಲೂಕಿನ ಹೊಸೂರು ಗ್ರಾಾಮದ ಪಶು ಆಸ್ಪತ್ರೆೆಯಲ್ಲಿ ಹಿರಿಯ ಪಶು ವೈದ್ಯರಾಗಿ ಕಾರ್ಯನಿರ್ವಹಿಸುತ್ತಿಿದ್ದು, ಜೂನ್ 1 ರಂದು  ನವದೆಹಲಿಯಲ್ಲಿ ವಿಶ್ವ ಹಾಲು ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ  ಕೃಷಿ ಹಾಗೂ ರೈತರ ಕಲ್ಯಾಾಣ ಸಚಿವ ರಾಧಾ ಮೋಹನ್ ಸಿಂಗ್  ಉಪಸ್ಥಿಿತಿಯಲ್ಲಿ ಈ ಪ್ರಶಸ್ತಿಿ ಪ್ರದಾನ ಮಾಡಲಾಯಿತು.
ಗಾಜನೂರಿನ ನವೋದಯ ವಿದ್ಯಾಾಲಯದಲ್ಲಿ ಪ್ರಾಾಥಮಿಕ ಶಿಕ್ಷಣವನ್ನು ಪೂರೈಸಿದ ಡಾ. ಸುನಿಲ್‌ಕುಮಾರ್,  ಬೀದರ್ ಪಶುವೈದ್ಯ ವಿವಿಯಲ್ಲಿ ವೆಟರ್ನರಿ ಸೈನ್‌ಸ್‌ ಬ್ಯಾಾಚುಲರ್ ಪದವಿಯನ್ನು , ಆನಂತರ ಬೆಂಗಳೂರಿನ ಹೆಬ್ಬಾಾಳದ ವೆಟರ್ನರಿ ಕಾಲೇಜಿನಲ್ಲಿ ಪಿಎಚ್‌ಡಿಯನ್ನು ಪಡೆದಿದ್ದಾಾರೆ. ಮಾಸ್ಟರ್ ಅಫ್ ವೆಟರ್ನರಿ ಸೈನ್‌ಸ್‌ ಮತ್ತು ಕಂಪ್ಯೂಟರ್ ಅಪ್ಲಿಿಕೇಶನ್‌ನಲ್ಲಿ ಡಿಪ್ಲೋಮಾ ಮುಗಿಸಿದ್ದಾಾರೆ. 2007ರಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ ಕೆಲಸಕ್ಕೆೆ ಸೇರಿದ್ದಾಾರೆ.
ಇವರು ಅನೇಕ ವೃತ್ತಿಿಪರ ಸಂಘ ಸಂಸ್ಥೆೆಗಳಲ್ಲಿ ತೊಡಗಿಕೊಂಡಿದ್ದು, ಹತ್ತಾಾರು ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಜ್ಞಾಾನ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದಾಾರೆ. ಕಾರ್ಯಾಗಾರದಲ್ಲಿ ಭಾಗವಹಿಸಿ ಅತಿಥಿ ಉಪನ್ಯಾಾಸ ನೀಡಿದ್ದಾಾರೆ. ಹಲವು ಕಾರ್ಯಾಗಾರಕ್ಕೆೆ ಬೇಕಾದ  ವೈಜ್ಞಾಾನಿಕ ಸಲಹಾ ಸಮಿತಿ ಸದಸ್ಯರಾಗಿ  ಸಹ ಸೇವೆ ಸಲ್ಲಿಸಿದ್ದಾಾರೆ.  ಭಾರತ್ ಸ್ಕೌೌಟ್‌ಸ್‌ ಮತ್ತು ಗೈಡ್‌ಸ್‌‌ನ ಸಾಧನೆಗಾಗಿ ಕರ್ನಾಟಕ ಸರ್ಕಾರದ ವತಿಯಿಂದ 1997ರಲ್ಲಿ ರಾಜ್ಯ ಪುರಸ್ಕಾಾರ, ರಾಷ್ಟ್ರಪತಿ ಕೆ.ಆರ್. ನಾರಾಯಣ್ ಇವರಿಂದ 1998ರಲ್ಲಿ ರಾಷ್ಟ್ರಪತಿ ಪುರಸ್ಕಾಾರ, 2014ರಲ್ಲಿ ಶ್ವಾಾನಗಳ ಗಳಗಂಡ ಕೋರರೋಗದ ಅಧ್ಯಯನಕ್ಕೆೆ’ಯುವ ವಿಜ್ಞಾಾನಿ’ ಪ್ರಶಸ್ತಿಿ ಪಡೆದಿದ್ದಾಾರೆ.
  ಅನೇಕ ಕಾಲೇಜುಗಳ ಎನ್.ಎಸ್.ಎಸ್. ಕಾರ್ಯಕ್ರಮದಲ್ಲಿ  ಭಾಗವಹಿಸಿ ಸಾರ್ವಜನಿಕರಿಗೆ ಪಶುಪಾಲನೆ ಬಗ್ಗೆೆ ಅರಿವು ಮತ್ತು ಸಮಗ್ರ ಮಾಹಿತಿ ನೀಡಿದ್ದಾಾರೆ. ವಿವಿಧ ಸೇವಾ ಸಂಘ ಸಂಸ್ಥೆೆಗಳ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಿಯಾಗಿ ಭಾಗವಹಿಸಿ ಗ್ರಾಾಮೀಣಾಭಿವೃದ್ದಿಯಲ್ಲಿ ಹೈನುಗಾರಿಕೆಯ ಪಾತ್ರವನ್ನು ರೈತರಿಗೆ ವಿವರಿಸಿದ್ದಾಾರೆ.  ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಪ್ರಾಾಣಿಜನ್ಯರೋಗದ ಬಗ್ಗೆೆ ಹಾಗೂ ಶುದ್ದ ಪ್ರಾಾಣಿಜನ್ಯ ಆಹಾರದ ಬಗ್ಗೆೆ, ಅವುಗಳ ಉಪಯೋಗದ ಬಗ್ಗೆೆ ಸೂಕ್ತ ಸಲಹೆ, ಮಾಹಿತಿ ನೀಡಿದ್ದಾಾರೆ.
ಗುಣಮಟ್ಟದ ಹಾಲು ಉತ್ಪಾಾದನೆ ಬಗ್ಗೆೆ ರೈತರಿಗೆ ಮನವರಿಕೆ ಮಾಡಿಕೊಡುತ್ತಾಾ, ಹಾಲು ಉತ್ಪಾಾದನೆಗೆ ಬೇಕಾದ ಪೂರಕ ಪೋಷಕಾಂಶಗಳ ಬಗ್ಗೆೆ ಮಾಹಿತಿ  ನೀಡಿದ್ದಾಾರೆ.   ಕೇಂದ್ರ ಹಾಗೂ ರಾಜ್ಯ  ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾಾನವನ್ನು ಯಶಸ್ವಿಿಯಾಗಿ ಗ್ರಾಾಮಾಂತರದಲ್ಲಿ ನಿರ್ವಹಿಸಿದ್ದಾಾರೆ. ಜಾನುವಾರು ಆರೋಗ್ಯ ತಪಾಸಣೆ ಶಿಬಿರಗಳಲ್ಲಿ ಭಾಗವಹಿಸಿ ಜಾನುವಾರುಗಳಿಗೆ ಚಿಕಿತ್ಸೆೆ  ಹಾಗೂ  ಆರೋಗ್ಯದ ಬಗ್ಗೆೆ ಸವಿವರ ಮಾಹಿತಿಯನ್ನು ಸದಾ ನೀಡುತ್ತಿಿದ್ದಾಾರೆ. ಪ್ರಕೃತಿ ವಿಕೋಪ, ಸಾಂಕ್ರಾಾಮಿಕರೋಗ, ಮುಂತಾದತುರ್ತು ಸಂದರ್ಭದಲ್ಲಿರೈತರ ಮನೆಬಾಗಿಲಿಗೆ ಭೇಟಿ ನೀಡಿ ರೈತರ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆೆ ನೀಡಿದ್ದಾಾರೆ. ಗ್ರಾಾಮಾಂತರ ರೈತರ ಜೀವನ ಹಸನಾಗಬೇಕು, ಪಶುಸಂಗೋಪನೆ ಇನ್ನಷ್ಟು ಬೆಳೆಯಬೇಕೆಂಬ ದೃಷ್ಟಿಿಯಲ್ಲಿ ಕೆಲಸ ಮಾಡುತ್ತಿಿರುವುದನ್ನು ಗಮನಿಸಿ  "ಉತ್ತಮ ಕ್ಷೇತ್ರ ಪಶು ವೈದ್ಯ" ಪ್ರಶಸ್ತಿಿಗೆ ಇವರನ್ನು ಆಯ್ಕೆೆ ಮಾಡಲಾಗಿತ್ತು.
published on june30
.........................................