Saturday 20 April 2019

ಕಲಾಕ್ಷೇತ್ರದ ಯುವ ಪ್ರತಿಭೆ
ಅಭಿರಾಮ್ ಭಾಗವತ್


ಎಳವೆಯಿಂದಲೇ ಕಲೆಗಳತ್ತ ಆಸಕ್ತಿಿಯಿದ್ದರೆ  ಎಲ್ಲವನ್ನೂ ಕಲಿಯಬಹುದು. ಮಕ್ಕಳಲ್ಲಿರುವ ಪ್ರತಿಭೆ ಹೊರಬರಲು ಅವಕಾಶ ಮತ್ತು ವೇದಿಕೆ ಬೇಕು. ಇದಕ್ಕೆೆ ತಕ್ಕ ವಾತಾವರಣ ನಿರ್ಮಾಣವದಾಗ ಅದು ಪ್ರಕಟಗೊಳ್ಳುತ್ತದೆ. ಪಾಲಕರು ಮಕ್ಕಳಲ್ಲಿರುವ ಪ್ರತಿಭೆ ಗಮನಿಸಿ ಅದು ಹೊರಬರುವಂತೆ ಮಾಡಬೇಕು.
ಶಿವಮೊಗ್ಗ ನಗರದಲ್ಲಿ ಅಭಿರಾಮ್ ಭಾಗವತ್ ಹೆಸರು ಚಿರಪರಿಚಿತ. ಈ ಬಾಲಕ ಕೊಳಲು ಮತ್ತು ಕರ್ನಾಟಕ ಸಂಗೀತದ ಹಾಡುಗಾರಿಕೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿಿದ್ದಾಾನೆ. ಈಗಾಗಲೇ ಜಿಲ್ಲೆೆ ಮತ್ತು ಹೊರಜಿಲ್ಲೆೆಗಳಲ್ಲಿ ಸಾಕಷ್ಟು ಕಾರ‌್ಯಕ್ರಮಗಳನ್ನು ಕೊಡುವ ಮೂಲಕ ಬಾಲಪ್ರತಿಭೆಯಾಗಿ ಪ್ರಕಾಶಿಸುತ್ತಿಿದ್ದಾಾನೆ.
ಅಭಿರಾಮ ನಗರದ ಗೋಪಾಳದ ವಾಸಿ. ಡಿವಿಎಸ್ ಸ್ವತಂತ್ರ ಪಿಯು ಕಾಲೇಜಿನಲ್ಲಿ ದ್ವಿಿತೀಯ ಪಿಯುಗೆ ಕಾಲಿಟ್ಟಿಿದ್ದಾಾನೆ. ಎಸ್ಸೆೆಸೆಲ್ಸಿಿಯಲ್ಲಿ ರಾಜ್ಯಕ್ಕೆೆ 7ನೆಯ ರ್ಯಾಾಂಕ್ ಗಳಿಸಿದ್ದ ಈತ, ಅದೇ ರೀತಿ ಸಂಗೀತದಲ್ಲೂ ಅಪಾರ ಸಾಧನೆಯನ್ನು ಮಾಡಿದ್ದಾಾನೆ. ಶಾರದಾದೇವಿ ಅಂಧರ ಶಾಲೆಯಲ್ಲಿ ಎಸ್ಸೆೆಸೆಲ್ಸಿಿಯವರೆಗೆ ಓದಿದ್ದಾಾನೆ. ಈ ಹಂತದಲ್ಲೇ ಹಾಡುಗಾರಿಕೆ, ಕೊಳಲು, ತಬಲಾ, ವೀಣೆ ಮೊದಲಾದವುಗಳಲ್ಲಿ ಸಾಕಷ್ಟು ಪರಿಣಿತಿ ಪಡೆದಿದ್ದಾಾನೆ. 2006ರಲ್ಲಿ ಸಂಗೀತಕ್ಕೆೆ ಕಾಲಿಟ್ಟ ಈತ ಅಲ್ಲಿಂದ ಸತತವಾಗಿ ಸಾಧನೆಯಲ್ಲೇ ಮುಂದುವರೆದಿದ್ದಾಾನೆ. ತಬಲಾದಲ್ಲಿ ಜೂನಿಯರ್ ಪರೀಕ್ಷೆ ಮುಗಿಸಿದ್ದಾಾನೆ. ಆದರೆ ಈಗ ತಬಲಾ ಬಾರಿಸುತ್ತಿಿಲ್ಲ. ಬದಲಾಗಿ ಕರ್ನಾಟಕ ಹಾಡುಗಾರಿಕೆಯಲ್ಲಿ ಹೆಚ್ಚಿಿನ ಕಲಿಕೆ ಮುಂದುವರೆಸಿದ್ದಾಾನೆ. 
ವಿದ್ವಾಾನ್ ಹೊಸಹಳ್ಳಿಿ ಅನಂತರಾಮ್ ಅವರಲ್ಲಿ ಕರ್ನಾಟಕ ಸಂಗೀತದ ವಿದ್ವತ್‌ನ್ನು ಅಭ್ಯಸಿಸಿ ಕೊಳಲುವಾದನವನ್ನು ನಗರದ ಎಚ್.ಎನ್. ಶ್ರೀಧರ್ ಅವರಲ್ಲಿ ತರಬೇತಿ ಪಡೆಯುತ್ತಿಿದ್ದಾಾರೆ, ರಾಜಲಕ್ಷ್ಮೀ ಅವರಲ್ಲಿ ಕೊಳಲನ್ನೂ ಸಹ ಕಲಿತಿದ್ದಾಾನೆ. ವಯೋಲಿನ್ ಅನ್ನು ಮಧುಮುರಳಿ ಅವರಲ್ಲಿ ಕಲಿತಿದ್ದಾಾನೆ. ಆದರೆ ಈಗ ಕೊಳಲು ಮತ್ತು ಹಾಡುಗಾರಿಕೆಯಲ್ಲಿ ಮಾತ್ರ ಸಾಧನೆಗೈಯ್ಯುತ್ತಿಿದ್ದಾಾನೆ.
ಕಳೆದ ವಾರ ಶಿವಮೊಗ್ಗದಲ್ಲಿ ಜರುಗಿದ ರಾಮೋತ್ಸವದಲ್ಲಿ ಹಾಡುಗಾರಿಕೆ ಮೂಲಕ ಎಲ್ಲರ ಗಮನಸೆಳೆದಿರುವ ಈತ, ಭರವಸೆಯ ಗಾಯಕನಾಗಿದ್ದಾಾನೆ. ತಂದೆ ಗೋಪಾಲಕೃಷ್ಣ ಮತ್ತು ತಾಯಿ ಉಮಾ ಸಹ ಮಗನ ಪ್ರತಿಭೆಯನ್ನು ಎಲ್ಲಾಾ ರೀತಿಯಲ್ಲೂ ಪೋಷಿಸುತ್ತಿಿದ್ದಾಾರೆ. ಬಾಲ್ಯದಿಂದಲೂ ಹಾಡುವುದರಲ್ಲಿ ಆಸಕ್ತಿಿ ಹೊಂದಿದ್ದರಿಂದ ಪಾಲಕರು ಸಂಗೀತಕ್ಕೆೆ ಸೇರಿಸಿದರು. ಫಲವಾಗಿ ಸಂಗೀತ ಶಾರದೆಯ ಕೃಪಾಶೀರ್ವಾದ ಈತನಿಗೆ ದಕ್ಕಿಿದೆ. ಹಾಡುಗಾರಿಕೆಯಲ್ಲಿ ವಿದ್ವತ್‌ನ್ನು ಮುಗಿಸಿದ್ದಾಾನೆ. 
ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಕುಂದಾಪುರ ಸಮೀಪದ ಕಾಳಾವರದ ಸುಬ್ರಹ್ಮಣ್ಯ ದೇವಾಲಯ, ಬೆಂಗಳೂರಿನ ಮಾತೃಛಾಯಾ, ಶಿವಮೊಗ್ಗದ ಪಂಚಮುಖಿ ಆಂಜನೇಯ ದೇವಾಲಯ, ಹರಕೆರೆ ಶಿವ ದೇವಾಲಯ, ವಿದ್ಯಾಾಗಣಪತಿ ಸಮಿತಿಯವರ ಕಾರ‌್ಯಕ್ರಮದಲ್ಲಿ, ಬೆಂಗಳೂರಿನ ಕತ್ರಿಿಗುಪ್ಪೆೆಯ ಪ್ರಸನ್ನ ಆಂಜನೇಯ ದೇವಾಲಯದಲ್ಲಿ, ಜೊತೆಗೆ ಮುಂಬೈ, ಮೈಸೂರು, ಉಡುಪಿ ಮೊದಲಾದೆಡೆ ಸಾಕಷ್ಟು ಕಾರ‌್ಯಕ್ರಮಗಳನ್ನು ನೀಡಿದ್ದಾಾನೆ.  ದಾವಣಗೆರೆಯಲ್ಲಿ ಬಾಲಕನ ಅಸಾಧಾರಣ ಸಾಧನೆ ಗಮನಿಸಿ ಸರಸ್ವತಿ ಪುರಸ್ಕಾಾರ ಎಂಬ ಪ್ರಶಸ್ತಿಿಯನ್ನು ಪ್ರದಾನ ಮಾಡಿದ್ದಾಾರೆ. 
ಕಲೆಯಲ್ಲಿ ಪಾವಿತ್ರ್ಯತೆಯನ್ನು ಕಂಡವರು ಮಾತ್ರ  ಸಾಧಕರಾಗುತ್ತಾಾರೆ. ಜೊತೆಗೆ ಕಲಾ ಸೌಂದರ್ಯವೂ ಅವರಲ್ಲಿರಬೇಕು. ಈ ಸೌಂದರ‌್ಯ ಕೇವಲ ಬಾಹ್ಯವಾಗಿರದೆ, ಕಲೆಯ ಆತ್ಮದ ಒಳ ಹಸಿರಾಗಿರಬೇಕು. ಅದನ್ನು ರಸ ಎಂದು ಕರೆಯಲಾಗುತ್ತದೆ. ಇಂತಹ ರಸಪೂರ್ಣವಾದ ಕಲೆ ಹೃದಯಸಂವಾದಿಯಾಗಿದ್ದಾಾಗ ಎಲ್ಲರನ್ನೂ ಆಕರ್ಷಿಸುತ್ತದೆ, ಕಲಾವಿದನೂ ಸಹ ಪರಿಪೂರ್ಣನಾಗಲು ಸಾಧ್ಯವಾಗುತ್ತದೆ. ಬಹುಕಾಲ ಮರೆಯದ ಕಲೆ ಅದಾಗುತ್ತದೆ. 
 ಅಭಿರಾಮ್‌ನಲ್ಲಿ ಈ ಹೃದಯಸಂವಾದಿ ಕಲೆ ಇದೆ. ಆದ್ದರಿಂದಲೇ ಜನರನ್ನು ಆಕರ್ಷಿಸುವ ಶಕ್ತಿಿ ಆತನ ಹಾಡುಗಾರಿಕೆ ಅಥವಾ ಕೊಳಲುವಾದನಲ್ಲಿದೆ. ಆನಂದವನ್ನು ನೀಡುವ ಶಕ್ತಿಿ ಅದರಲ್ಲಿದೆ.  ರಸದೃಷ್ಟಿಿ, ರಸಪುಷ್ಟಿಿ ಈ ಕಲೆಯ ಅಂತರಂಗದಲ್ಲಿದೆ.
ಇಂತಹ ಕಲೆಯ ಚೆಲುವನ್ನು ತುಂಬಿಕೊಂಡ ಬಾಲಕಲಾವಿದನಿಗೆ ಇನ್ನಷ್ಟು ಪ್ರೋತ್ಸಾಾಹ ಎಲ್ಲೆೆಡೆ ಸಿಗಬೇಕಿದೆ.
published on  20-4-2019

...............................

Saturday 13 April 2019

ಚಿನ್ನದ ಪವರ್ ಲಿಫ್ಟರ್
ಮೆಕ್ಯಾಾನಿಕ್ ರಮೇಶ್


 ದೈ"ಕ ಶಕ್ತಿಿಯೊಡನೆ ಮಾನಸಿಕವಾಗಿಯೂ ಬಲಿಷ್ಠರಾಗಲು ಭಾರ ಎತ್ತು"ಕೆ ಅಥವಾ ಪವರ್ ಲಿಫ್ಟಿಿಂಗ್‌ನಂತಹ ಕಸರತ್ತು ಅವಶ್ಯ. ಇತ್ತೀಚಿನ ದಿನಗಳಲ್ಲಿ ಇಂತಹ ದೈ"ಕ ಹಾಗೂ ಮಾನಸಿಕ ಕ್ಷಮತೆ ಪಡೆಯಲು ಹೆಚ್ಚು ಪ್ರಮಾಣದಲ್ಲಿ ಯುವಕರು ಮುಂದಾಗುತ್ತಿಿದ್ದಾಾರೆ. ಈ ಮೂಲಕ ತಮ್ಮದೇ ಆದ ಸಾಧನೆಯನ್ನೂ ಮಾಡಲು ಮುಂದಾಗುತ್ತಿಿದ್ದಾಾರೆ.
ಶಿವಮೊಗ್ಗದಲ್ಲಿ ಪವರ್ ಲಿಫ್ಟಿಿಂಗ್ ಅಥವಾ ದೇಹದಾರ್ಡಯಕ್ಕೆೆ ಮೊದಲಿನಿಂದಲೂ ತನ್ನದೇ ಆದ ಖ್ಯಾಾತಿ ಇದೆ. ಹಲವು ಖ್ಯಾಾತನಾಮರು ಜಿಲ್ಲೆೆಯ ಹೆಸರು ಇಂದಿಗೂ ಈ ಕ್ಷೇತ್ರದಲ್ಲಿ "ುನುಗುವಂತೆ ಮಾಡಿದ್ದಾಾರೆ. ಇವರ ಶಿಷ್ಯರಾಗಿ ಕೆಲಸ ಮಾಡುತ್ತಿಿರುವವರು ಇಂದು ರಾಷ್ಟ್ರ, ಅಂತರರ್ಟ್ರೋಯ ಮಟ್ಟದಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಇದನ್ನು ಮುಂದುವರೆಸಿಕೊಂಡು ಹೋಗುತ್ತಿಿದ್ದಾಾರೆ.
 ಆರ್. ರಮೇಶ್ ಪವರ್ ಲಿಫ್ಟಿಿಂಗ್‌ನಲ್ಲಿ ಪ್ರಮುಖ ಹೆಸರು. ನಗರದ ಬೊಮ್ಮನಕಟ್ಟೆೆ ಆಶ್ರಯ ಬಡಾವಣೆಯವರಾದ ಇವರು, ಸುಮಾರು 30 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಿದ್ದು, ಕಳೆದ ವಾರ ರ್ಟ್ರೋಯ ಚಾಂಪಿಯನ್‌ಶಿಪ್‌ನಲ್ಲಿ ಸ್ವರ್ಣ ಪದಕ ಗೆದ್ದು ತರುವ ಮೂಲಕ ಜಿಲ್ಲೆೆಯ ಹೆಸರನ್ನು ಉನ್ನತಕ್ಕೇರಿಸಿದ್ದಾಾರೆ. 60ರ ಹರಯದಲ್ಲೂ ಯುವಕರಂತೆ ಕಟ್ಟುಮಸ್ತಾಾದ ದೇಹವನ್ನು ಹೊಂದಿ, ಯುವಕರೂ ಸಹ ನಾಚುವಂತೆ ಕೆಲಸ ಮಾಡುತ್ತಾಾರೆ.
ನಗರದ ಪುಲಿಕೇಶಿ ವ್ಯಾಾಯಾಮ ಶಾಲೆ ಸಾಧಕರಿಗೆಲ್ಲ ತವರುಮನೆುದ್ದಂತೆ. ಇಲ್ಲಿ ಕಲಿತ ಬಹುತೇಕರು ಸಾಧನೆ ಮಾಡಿ ತಮ್ಮ ಹೆಸರನ್ನು ಚಿರಸ್ಥಾುಗೊಳಿಸಿಕೊಂಡಿದ್ದಾಾರೆ. ಅವರ ಸಾಲಿಗೆ ಈಗ ರಮೇಶ್ ಸೇರುತ್ತಾಾರೆ. ರಮೇಶ್ ಪವರ್ ಲಿಫ್ಟಿಿಂಗ್‌ನಲ್ಲಿ ಮಾಡಿದ ಸಾಧನೆ ಅನನ್ಯ.  ಈವರೆಗೆ ಅವರು 5 ರಾಜ್ಯ ಪ್ರಶಸ್ತಿಿ, 4 ರ್ಟ್ರೋಯ ಪ್ರಶಸ್ತಿಿ ಮತ್ತು ಒಂದು ಅಂತರ್ಟ್ರಾಾಯ ಪ್ರಶಸ್ತಿಿಯನ್ನು ತಮ್ಮದಾಗಿಸಿಕೊಂಡಿದ್ದಾಾರೆ.
 ಕಳೆದ ವಾರ ಪಶ್ಚಿಿಮ ಬಂಗಾಳದ ಹೌರಾದಲ್ಲಿ ನಡೆದ ರ್ಟ್ರೋಯ ಪವರ್ ಲಿಫ್ಟಿಿಂಗ್ ಚಾಂಪಿಯನ್ ಶಿಪ್‌ನಲ್ಲಿ ಪ್ರಥಮ ಬಹುಮಾನ ಸ"ತ ಚಿನ್ನದ ಪದಕ ಧರಿಸಿ ಬಂದಿದ್ದಾಾರೆ. ಇದಕ್ಕೂ ಮುನ್ನ ಅವರು ಗಳಿಸಿದ ಪ್ರಶಸ್ತಿಿಗಳೆಂದರೆ- 2017ರಲ್ಲಿ ದಾವಣಗೆರೆಯಲ್ಲಿ ಜರುಗಿದ ರಾಜ್ಯ ಮಟ್ಟದ ಚಾಂಪಿಯನ್ಶಿಿಪ್‌ನಲ್ಲಿ  ಪ್ರಥಮ ಬಹುಮಾನ, 2018ರಲ್ಲಿ  ಹೊಸಪೇಟೆಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2015ರಲ್ಲಿ ಹರಿಯಾಣದ ಸೋನೆಪತ್‌ನಲ್ಲಿ ಜರುಗಿದ  ರ್ಟ್ರೋಯ ಚಾಂಪಿಯನ್‌ಶಿಪ್‌ನಲ್ಲಿ ತೃತೀಯ ಬಹುಮಾನ, 2014ರಲ್ಲಿ  ಆಗ್ರ್ರಾಾದಲ್ಲಿ ನಡೆದ ರ್ಟ್ರೋಯ ಚಾಂಪಿಯನ್ಶಿಿಪ್‌ನಲ್ಲಿ ತೃತೀಯ, 2015ರಲ್ಲಿ ಇಂದೋರ್‌ನಲ್ಲಿ ನಡೆದ ರ್ಟ್ರೋಯ ಸ್ಪರ್ಧೆಯಲ್ಲಿ ದ್ವಿಿತೀಯ  ಮತ್ತು 2015ರಲ್ಲಿ ದಾವಣಗೆರೆಯಲ್ಲಿ ಜರುಗಿದ ರ್ಟ್ರೋಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಪದಕ ಗೆದ್ದಿದ್ದಾಾರೆ.
2017ರಲ್ಲಿ ಬ್ಯಾಾಂಕಾಕ್‌ನಲ್ಲಿ ನಡೆದ ಅಂತರ್ಟ್ರೋಯ ಚಾಂಪಿಯನ್‌ಶಿಪ್‌ನಲ್ಲಿ  ಚಿನ್ನದ ಪದಕ ಸ"ತ ಪ್ರಥಮ ಸ್ಥಾಾನವನ್ನು ತಮ್ಮದಾಗಿಸಿಕೊಂಡಿದ್ದಾಾರೆ. ಇಂತಹ ಸಾಧಕ ನಗರದಲಿರುವುದು ನಿಜಕ್ಕೂ ಹೆಮ್ಮೆೆಯ ಸಂಗತಿ.  ಆಟೋ ಕಾಂಪ್ಲೆೆಕ್‌ಸ್‌‌ನಲ್ಲಿ ಮೆಕ್ಯಾಾನಿಕ್ ಆಗಿ ಕೆಲಸ ಮಾಡುತ್ತಿಿರುವ ರಮೇಶ್, ಇಂದಿಗೂ ತಮ್ಮ ಗುರು ಸ್ವಾಾ"ುನಾಥನ್ ಅವರನ್ನು ಸ್ಮರಿಸುತ್ತಾಾರೆ. ಅವರ ಮಾರ್ಗದರ್ಶನದಲ್ಲೇ ತಾನು ಬೆಳೆದು ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾಾರೆ.
ರಮೇಶ್ ಪ್ರತಿದಿನ ಬೆಳಿಗ್ಗೆೆ ಎರಡು ಗಂಟೆ ತಪ್ಪದೆ ಪವರ್‌ಲಿಫ್ಟಿಿಂಗ್ ತರಬೇತಿಯನ್ನು ಪಡೆಯುತ್ತಿಿದ್ದಾಾರೆ. ಜೊತೆಗೆ ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಾಾರೆ. ಜಿಲ್ಲೆೆಯ ಹಲವೆಡೆ ಮತ್ತು "ಶ್ವ"ದ್ಯಾಾಲಯ ಮಟ್ಟದಲ್ಲಿ ನಡೆಯುವ ಆಯ್ಕೆೆಗೆ, ಸ್ಪರ್ಧೆಗಳಿಗೆ ತೀರ್ಪುಗಾರರಾಗಿಯೂ ತೆರಳುತ್ತಾಾರೆ.
 ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊೊಳ್ಳುವಾಗ ಮಾನಸಿಕ ಬಲವನ್ನು ಕಾಪಾಡಿಕೊಳ್ಳಬೇಕು. ಅತಿಕಠಿಣವಾಗಿ ತರಬೇತಿ ನಡೆಸಬೇಕು. ಸತತವಾಗಿ ಈ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊೊಳ್ಳುತ್ತಿಿರುವವರ "ರುದ್ಧ ಪ್ರಶಸ್ತಿಿಗಾಗಿ ಸೆಣೆಸಬೇಕು. ಇದು ಸುಲಭದ ಮಾತಲ್ಲ ಎನ್ನುತ್ತಾಾರೆ.
published on 13-4-2017