Saturday 28 April 2018

ಪ್ರೀತಿಯ ಮೇಷ್ಟು
ಕುಮಾರ್ (ಪಾಪಣ್ಣ)

ಇವರು ಓದಿದ್ದು 9ನೆಯ ತರಗತಿಯವರೆಗೆ ಮಾತ್ರ. ಆದರೆ ಪ್ರಾಾಥ"ುಕ ಶಾಲೆಗಳಿಗೆ ಕ್ರೀಡಾ ಶಿಕ್ಷಕರಾಗಿ ಸುಮಾರು 20-22 ವರ್ಷದಿಂದ ತರಬೇತಿ ನೀಡುತ್ತಿಿದ್ದಾಾರೆ. ಹಾಗಂತ ಯಾರಿಂದಲೂ ಸಂಭಾವನೆ ಕೇಳುವುದಿಲ್ಲ. ಕೊಟ್ಟರಷ್ಟೇ ಪ್ರೀತಿುಂದ ಪಡೆಯುತ್ತಾಾರೆ. ಇವರಿಂದ ತರಬೇತಿ ಪಡೆದ ಸಾಕಷ್ಟು "ದ್ಯಾಾರ್ಥಿಗಳು ಇಂದು ಜಿಲ್ಲಾಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಕ್ರೀಡೆಯಲ್ಲಿ "ುಂಚುತ್ತಿಿದ್ದಾಾರೆ. ಅನೇಕರು ಕ್ರೀಡಾ ಶಿಕ್ಷಕರೂ ಆಗಿದ್ದಾಾರೆ.
ಕುಮಾರ್ ಅಲಿಯಾಸ್ ಪಾಪಣ್ಣ ಭದ್ರಾಾವತಿಯಲ್ಲಿ ಹೆಸರುವಾಸಿ.  ಪಾಪಣ್ಣ ಎಂದರೆ ನೆನೆಪಾಗುವುದೇ ಕ್ರೀಡೆ. ಎಷ್ಟೋೋ ಸರ್ಕಾರಿ ಮತ್ತು ಖಾಸಗಿ ಪ್ರಾಾಥ"ುಕ ಶಾಲೆಗಳಿಗೆ ತೆರಳಿ "ದ್ಯಾಾರ್ಥಿಗಳಿಗೆ ತರಬೇತಿ ಕೊಡುತ್ತ ಅದರಲ್ಲೇ ಜೀವನ ಸುಖ ಕಾಣುತ್ತಿಿರುವ ಇವರು,  ಕ್ರೀಡೆಯಲ್ಲಿ ಆಸಕ್ತಿಿ ಬೆಳೆಸಿಕೊಡಂ ರೀತಿ ಸಹ "ಶೇಷವೇ.
"ದ್ಯಾಾಭ್ಯಾಾಸವನ್ನು ಅರ್ಧಕ್ಕೆೆ ಬಿಟ್ಟ ನಂತರ ಅಲ್ಲಲ್ಲಿ ಮಕ್ಕಳು ಆಡುವುದನ್ನು ಗಮನಿಸುತ್ತಿಿದ್ದರು. ಸಂಜೆ ವೇಳೆ ಶಾಲಾ ಮೈದಾನದಲ್ಲಿ ಮಕ್ಕಳು ಆಡುವುದನ್ನು ತಪ್ಪದೇ "ೀಕ್ಷಿಸುತ್ತಿಿದ್ದರು. ಈ ರೀತಿ ಹಲವು ವರ್ಷ ಮಕ್ಕಳ ಆಟವನ್ನೇ ಗಮನಿಸಿ ಕ್ರೀಡಾ ಶಿಕ್ಷಕರಾಗಿದ್ದಾಾರೆ. ಪ್ರತಿ ಕ್ರೀಡೆಯ ಬಗ್ಗೆೆ ಚಾಚೂತಪ್ಪದೆ ಮಾ"ತಿ ಕೊಡುತ್ತಾಾರೆ.
ಸಾಕಷ್ಟು ಸರ್ಕಾರಿ ಶಾಲೆಗಳಲ್ಲಿ ಕ್ರೀಡಾ ಶಿಕ್ಷಕರ ಕೊರತೆ ಇರುವುದರಿಂದ ಅಲ್ಲಿನ ಮುಖ್ಯಶಿಕ್ಷಕರ ಮನ" ಮೇರೆಗೆ ಇವರು ಹೋಗಿ ತರಬೇತಿ ಕೊಡುತ್ತಿಿದ್ದಾಾರೆ. ಕ್ರೀಡೆಯಲ್ಲಿ ಆಸಕ್ತಿಿಯೇ ಇರದಂತಹ ಮಕ್ಕಳಲ್ಲೀ ಆಸಕ್ತಿಿ ಕೆರಳಿಸಿ ಉತ್ತಮ ಕ್ರೀಡಾಪಟುಗಳನ್ನಾಾಗಿ ಬೆಳೆಸಿದ್ದಾಾರೆ. ಇದರಿಂದಾಗಿ ಪಾಪಣ್ಣ ಈಗ ಸ್ಪೋೋರ್ಟ್‌ಸ್‌ ಮೇಷ್ಟು ಎಂದು ಮಕ್ಕಳಿಂದ ಕರೆುಸಿಕೊಳ್ಳುತ್ತಿಿದ್ದಾಾರೆ. 
ಮಕ್ಕಳನ್ನು ಕಂಡರೆ ಇವರಿಗೆ ಅಷ್ಟೇ ಪ್ರೀತಿ, ಮಕ್ಕಳೂ ಸಹ ಅಳುಕಿಲ್ಲದೆ ಇವರಲ್ಲಿ "ಶ್ವಾಾಸ"ಟ್ಟಿಿದ್ದಾಾರೆ. ಅದಕ್ಕೆೆ ಚ್ಯುತಿ ಬಾರದಂತೆ ತಮ್ಮ ಕೆಲಸವನ್ನು ಇಲ್ಲಿಯವರೆಗೆ ಅವರೂ ಕೂಡ ನಿಭಾುಸಿಕೊಂಡು ಬಂದಿದ್ದಾಾರೆ. ಜಿಲ್ಲಾಾ ಮತ್ತು "ಭಾಗೀಯ ಕ್ರೀಡಾಕೂಟಗಳಿಗೂ ಮಕ್ಕಳನ್ನು ಕರೆದೊಯ್ಯುತ್ತಾಾರೆ. ಸಾಕಷ್ಟು ಬಹುಮಾನವನ್ನು ಮಕ್ಕಳು ತರುವಂತೆ ಶ್ರಮವ"ಸಿದ್ದಾಾರೆ. ಜಿಲ್ಲೆೆಯ ಬಹುತೇಕ ಕ್ರೀಡಾ ಶಿಕ್ಷಕರಿಗೆಲ್ಲ ಪಾಪಣ್ಣ ಅವರೇ ಮಾರ್ಗದರ್ಶಕರು. ಏಕೆಂದರೆ ಓದಿ ಶಿಕ್ಷಕರಾದ ಕ್ರೀಡಾ ಶಿಕ್ಷಕರಿಗಿಂತ ಹೆಚ್ಚಿಿನ ಮಾ"ತಿ ಮತ್ತು ಅನುಭವ ಪಾಪಣ್ಣ ಅವರಿಗಿದೆ. ಹಾಗಾಗಿ ಇವರಿಗೆ ಎಲ್ಲಿಲ್ಲದ ಗೌರವ.
ಅಥ್ಲೆೆಟಿಕ್‌ಸ್‌, ಥ್ರೋೋಬಾಲ್, ಟೆನಿಕ್ವಾಾಯ್‌ಟ್‌ ಬಹುತೇಕ ಶಾಲೆಗಳಲ್ಲಿ ಆಡಿಸಲ್ಪಡುವುದರಿಂದ ಇದನ್ನೇ ಅವರು ಕಲಿಸುತ್ತಿಿದ್ದಾಾರೆ. ಪಾಪಣ್ಣ ಅವರು ತರಬೇತಿ ಕೊಟ್ಟ ಮಕ್ಕಳೆಂದರೆ ಖಂಡಿತ ಬಹುಮಾನ ಪಡೆದೇ ಪಡೆಯುತ್ತಾಾರೆ ಎಂಬಂತಹ ಸ್ಥಿಿತಿಯನ್ನು ಅವರು ನಿರ್"ುಸಿದ್ದಾಾರೆ.
ಆಡುವ ಮತ್ತು ಓದುವ ಮಕ್ಕಳೆಂದರೆ ನನಗಿಷ್ಟ. ಅವರಿಗೆ ನನ್ನಿಿಂದಾದ ಸಹಾಯ ಮಾಡುತ್ತೇನೆ. ಪುಕ್ಕಟೆ ಕಲಿಸಿದಾಕ್ಷಣ ನನಗೇನೂ ನಷ್ಟವಾಗುವುದಿಲ್ಲ. ಮಕ್ಕಳು ಸಾಧನೆ ಮಾಡಬೇಕು. ಅದನ್ನು ನೋಡಿದರೆ ನನ್ನ ಸಮಾಧಾನ ಹೆಚ್ಚುತ್ತದೆ. ಅದೇ ನನಗೆ ಸಿಗುವ ದೊಡ್ಡ ಗೌರವ ಎನ್ನುವ ಪಾಪಣ್ಣ, ಕ್ರೀಡೆಯಲ್ಲಿ ಗೆದ್ದು ಬಂದ ಮಕ್ಕಳಿಗೆ ತಾವೇ ಕೇಕ್ ಮತ್ತು ಸಿ"ಯನ್ನು ತಂದು ಹಂಚುತ್ತಾಾರೆ. ಪ್ರತಿದಿನ ಕನಿಷ್ಠ 2-3 ಶಾಲೆಯಲ್ಲಿ ಈ ರೀತಿ ತರಬೇತಿಯನ್ನು ನೀಡುತ್ತಾಾರೆ. ಪೆಟ್ರೋೋಲ್ ಖರ್ಚನ್ನೂ ಸ್ವತಃ ತಾವೇ ಭರಿಸಿ 15-20 ಕಿ. "ುೀ ಸಂಚರಿಸುತ್ತಾಾರೆ.
ಕ್ರೀಡಾಸಕ್ತ ಮಕ್ಕಳಿಗೆ ತರಬೇತಿಗೆ ಬರಲಾಗದಿದ್ದರೆ ಸ್ವತಃ ತಾವೇ ಅವರ ಮನೆಗೆ ಹೋಗಿ ಕರೆದುಕೊಂಡು ಬರುತ್ತಾಾರೆ. ಹಲವು ಶಾಲೆಗಳು ಇವರ ಕೊಡುಗೆಯನ್ನು ಶ್ಲಾಾಘಿಸಿ ಗೌರ"ಸಿವೆ. ಈ ರೀತಿ ಮಕ್ಕಳ ಕ್ರೀಡೆ ಬಗ್ಗೆೆ ಅತೀವ ಕಾಳಜಿ ಹೊಂದಿರುವ ಪಾಪಣ್ಣ ಒಬ್ಬ ಅಸಾಮಾನ್ಯ ಸಾಧಕ. ಇಂತಹವರನ್ನು ಇನ್ನಷ್ಟು ಪುರಸ್ಕರಿಸಿ, ಪ್ರೋತ್ಸಾಾ"ಸುವ ಕೆಲಸ ನಡೆಯಬೇಕಿದೆ. 
published on 28.4.2018
 ..........
 ಬತ್ತದ  ಕ್ರೀಡೋತ್ಸಾಾಹ 
ಕೆ. ಎಸ್. ಶಶಿಕಲಾ


ಗುಂಪಿನಲ್ಲಿ ಸಾಗುವ ಮ"ಳೆ ಎಂದೂ ಗುಂಪಿಗಿಂತ ಮುಂದೆ ಹೋಗಲಾರಳು. ಆದರೆ, ಒಬ್ಬಂಟಿಯಾಗಿ ಸಾಗುವ ಹೆಣ್ಣು ಯಾರೂ ಈವರೆಗೆ ಮಾಡದಷ್ಟು ಸಾಧನೆಯನ್ನು ಮಾಡಬಲ್ಲಳು ಎನ್ನುವುದು ಅಲ್ಬರ್ಟ್ ಐನ್‌ಸ್ಟಿಿನ್‌ನ ಮಾತು. ಈ ಮಾತನ್ನು ಸತ್ಯಗೊಳಿಸಿದವರು ನಗರದವರೇ ಆದ "ರಿಯ ಮ"ಳಾ ಕ್ರೀಡಾಪಟು ಕೆ. ಎಸ್. ಶಶಿಕಲಾ.
ಶಶಿಕಲಾ ಅರಣ್ಯ ಇಲಾಖೆಯಲ್ಲಿ ಉದ್ಯೋೋಗ ಮಾಡಿ, ಈ ವರ್ಷದ ಜನವರಿಯಲ್ಲಿ ನಿವೃತ್ತರಾಗಿದ್ದಾಾರೆ. ಅವರ ಕ್ರೀಡಾ ಜೀವನದ ಹಾದಿಯನ್ನು ಗಮನಿಸಿದವರು ಇವರೊಬ್ಬ ಅಸಾಧಾರಣ ಮ"ಳೆ ಎನ್ನದಿರಲಾರರು. ಏಕೆಂದರೆ ತಮ್ಮ 34 ವರ್ಷದ ಸರ್ಕಾರಿ ನೌಕರಿಯ ಕಾಲದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನೇ ನಿರ್"ುಸಿದ್ದಾಾರೆ. ಇವರು ಗಳಿಸಿದ ಪದಕಗಳ ಸಂಖ್ಯೆೆಯೇ ಲೆಕ್ಕಕ್ಕೆೆ ಸಿಗದ್ಟದೆ. ರ್ಟ್ರೋಯ ಮತ್ತು ಅಂತಾರ್ಟ್ರೋಯ ಕ್ರೀಡೆಗಳಲ್ಲಿ ಪದಕದ ಜೊತೆಗೆ ವೈಯಕ್ತಿಿಕ ಪ್ರಶಸ್ತಿಿಯನ್ನೂ ಸಾಧನೆ ಮೆರೆದ ಸಾಹಸಿ ಮ"ಳೆ ಇವರು.
2002ರಿಂದ 9 ಬಾರಿ ರ್ಟ್ರೋಯ ಕ್ರೀಡಾಕೂಟದಲ್ಲಿ ಜುಸಿ ದಾಖಲೆ ಮೆರೆದಿದ್ದಾಾರೆ. ಕ್ರೀಡೆಯಲ್ಲಿ ಒಂದಲ್ಲ ಒಂದು ಹೊಸ ಸಾಧನೆ ಮಾಡಿರುವ ಇವರು, ಈಗ ಇಂಡಿಯನ್ ಮಾಸ್ಟರ್ಸ್ ಅಥ್ಲೆೆಟಿಕ್‌ಸ್‌‌ನ ಜಿಲ್ಲಾಾಧ್ಯಕ್ಷೆ ಆಗಿ ಕೆಲಸ ಮಾಡುತ್ತಿಿದ್ದಾಾರೆ. ಸರ್ಕಾರಿ ಕೆಲಸ ಎಂದಾಕ್ಷಣ ಇಲಾಖೆಯ ಕೆಲಸದಲೇ ಮುಳುಗಿ ಹೋಗುವವರೇ ಅಧಿಕ. ಅದರಲೂ ಒಬ್ಬ ಮ"ಳೆಯಾಗಿ ಬಾಲ್ಯದಿಂದಲೂ ಅಂಟಿಸಿಕೊಂಡು ಬಂದ ಕ್ರೀಡಾ ಕ್ಷೇತ್ರವನ್ನು ಬಿಡದೆ ಮುಂದುವರೆಸಿ ನಿವೃತ್ತಿಿಯಾದರೂ ಸಾಧನೆ ಮಾಡುತ್ತಲೇ ಯಶಸ್ಸಿಿನ ಮೆಟ್ಟಿಿಲೇರುತ್ತಿಿದ್ದಾಾರೆ ಶಶಿಕಲಾ.
ಮೂಲತಃ ಉಡುಪಿಯವರಾದರೂ ತಮ್ಮ ಶಿಕ್ಷಣವನ್ನು ಶಿವಮೊಗ್ಗದ ಡಿ"ಎಸ್ "ದ್ಯಾಾಸಂಸ್ಥೆೆಯಲ್ಲಿ ಮತ್ತು ಧಾರವಾಡದಲ್ಲಿ ಮುಗಿಸಿ ಮೈಸೂರು ""ುಂದ ಎಂಎ ಪದ" ಪಡೆದಿರುವ ಇವರು, ಕೊಪ್ಪ, ತೀರ್ಥಹಳ್ಳಿಿ ಮತ್ತು ಶಿವಮೊಗ್ಗದ ಅರಣ್ಯ ಇಲಾಖೆಯ ""ಧ ಕಚೇರಿಯಲ್ಲಿ ಕೆಲಸ ಮಾಡಿದ್ದಾಾರೆ. ಇವರ ಇಡೀ ಕುಟುಂಬವೇ ಕ್ರೀಡಾಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ.
  ""ಧ ಸಂಘ-ಸಂಸ್ಥೆೆಗಳಲ್ಲೂ ಸಕ್ರಿಿಯರಾಗಿರುವ ಶಶಿಕಲಾ, ಜೆಸಿಐ ಸದಸ್ಯೆೆಯಾಗಿ ಶರಾವತಿನಗರದ ಶ್ರೀಲಕ್ಷ್ಮೀ ಭಜನಾ ಮಂಡಳಿಯ ಸದಸ್ಯೆೆಯಾಗಿ  ಕೆಲಸ ಮಾಡುತ್ತಿಿದ್ದಾಾರೆ. ಚಿತ್ರಕಲೆ, ರಂಗೋಲಿ, ಹಾಡುಗಾರಿಕೆ, ಡ್ರಾುಂಗ್, ಕಸೂತಿ, ತೋಟಗಾರಿಕೆ ಮತ್ತು  ನಾಣ್ಯ-ಅಂಚೆ ಚೀಟಿ ಸಂಗ್ರಹ,..."ೀಗೆ ಹತ್ತು ಹಲವು ಹವ್ಯಾಾಸಗಳಲ್ಲಿ ನಿರತರಾಗುವ ಮೂಲಕ ನಿವೃತ್ತಿಿ ಜೀವನವನ್ನು ಅತ್ಯಂತ ಸಂತಸದಿಂದ ಕಳೆಯುತ್ತಾಾರೆ. ಇವರ ಸಮಾಜ ಸೇವೆಯ ಪಟ್ಟಿಿಯೂ ಸಾಕ್ಟದೆ. ಶಿವಮೊಗ್ಗ ತಾಲೂಕಿನ ಉಂಬ್ಳೇಬೈಲ್ ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರತಿವರ್ಷ ಪ್ರತಿಭಾ ಪುರಸ್ಕಾಾರ, ಬಡಮಕ್ಕಳಿಗೆ ಉಚಿತ ಪಠ್ಯ,ಪುಸ್ತಕ ನೋಟ್ ಬುಕ್, ಇತರೇ ವಸ್ತುಗಳ "ತರಣೆ, ಕ್ರೀಡಾಪಟುಗಳಿಗೆ ಪ್ರೋತ್ಸಾಾಹ, ಬಹುಮಾನ ನೀಡುವುದು ಮೊದಲಾದವನ್ನು 12 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾಾರೆ. 
    ಮುಂಬರುವ ಡಿಸೆಂಬರ್‌ನಲ್ಲಿ ರ್ಟ್ರೋಯ ಮಾಸ್ಟರ್ಸ್ ಅಥ್ಲೆೆಟಿಕ್‌ಸ್‌ ಕ್ರೀಡಾಕೂಟವನ್ನು ಶಿವಮೊಗ್ಗದಲ್ಲಿ ಆಯೋಜಿಸಲು ತೀರ್ಮಾನಿಸಿದ್ದಾಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ಹೊಸಕೋಟೆ ಮತ್ತು ಮಂಗಳೂರಿನಲ್ಲಿ ಜರುಗಿದ ರ್ಟ್ರೋಯ ಅಥ್ಲೆೆಟಿಕ್‌ಸ್‌‌ನಲ್ಲಿ ಪದಕಗಳನ್ನು ಧರಿಸಿ ಬಂದಿದ್ದಾಾರೆ. ಜೊತೆಗೆ ತಮ್ಮ ತಂಡವನ್ನು ಗೆಲ್ಲಿಸಿಕೊಂಡು ಬಂದಿದ್ದಾಾರೆ. ಸೆಪ್ಟೆೆಂಬರ್‌ನಲ್ಲಿ ಮಲೇಶಿಯಾದಲ್ಲಿ ನಡೆಯಲಿರುವ ಅಂತಾರ್ಟ್ರೋಯ ಮಾಸ್ಟಸ್ ಅಥ್ಲೆೆಟಿಕ್‌ಸ್‌‌ಗೆ ಇವರು ಆಯ್ಕೆೆಯಾಗಿದ್ದು, ಅದರ ಸಕಲ ಸಿದ್ದತೆಯಲ್ಲಿದ್ದಾಾರೆ. ""ಧ ಸಂಘಟನೆಗಳು ಇವರ ಸಾಧನೆ ಗಮನಿಸಿ ಗೌರ"ಸಿವೆ. "ಶೇಷವಾಗಿ ಜೆಸಿಐ ಮತು ಶಿವಮೊಗ್ಗ ನಗರಸಭೆ ದಸರಾ ಸಂದರ್ಭದಲ್ಲಿ ಹಾಗೂ ಸರ್ಕಾರಿ ನೌಕರರ ಸಂಘದ ವತಿುಂದ ಮತ್ತು ""ಧ ಮ"ಳಾ ಸಂಘಟನೆಗಳೂ ಇವರನ್ನು ಇವರನ್ನು ಸನ್ಮಾಾನಿಸಿವೆ.
 60ರ ಹರಯದಲ್ಲೂ ಕ್ರೀಡೋತ್ಸಾಾಹವನ್ನು ಜೀವಂತವಾಗಿಟ್ಟುಕೊಂಡು ಸಕ್ರಿಿಯವಾಗಿ ಕ್ರೀಡೆಯಲ್ಲಿ ಪಾಲ್ಗೊೊಳ್ಳುತ್ತಿಿರುವ ಶಶಿಕಲಾ ಅವರಲ್ಲಿರುವ ಕ್ರೀಡಾಚಿಲುಮೆ ಬತ್ತದೆ ಹಾಗೆಯೇ ಇನ್ನಷ್ಟು ಕಾಲ ಹೊರಹೊಮ್ಮಬೇಕಿದೆ. ಯುವ ಅಥ್ಲೆೆಟಿಕ್‌ಸ್‌‌ಪಟುಗಳು ಇವರ ಮಾರ್ಗದರ್ಶನ ಪಡೆಯಬೇಕಿದೆ.
Published on 21-4.2-18
.................................... 

Wednesday 18 April 2018


ಪವರ್ ಲಿಫ್ಟಿಿಂಗ್‌ ಸಾಧಕ
ವರ್ಷಿತ್ ರಾವ್ 

 ..
ದೇಹದ ಬಗ್ಗೆೆ ಸದಾ ಕಾಳಜಿ ಇಡಿ. ನೀವು ಉತ್ತಮವಾಗಿ ಬದುಕಲು ಇದೊಂದೇ ದಾರಿ ಎಂಬ ಮಾತಿದೆ. ಇದಕ್ಕಾಾಗಿ ದಿನನಿತ್ಯ ವ್ಯಾಾಯಾಮ, ದೈಹಿಕ ಕಸರತ್ತು ಮಾಡುವುದರ ಮೂಲಕ ದೇಹದಾರ್ಢ್ಯವನ್ನು ಬೆಳೆಸಿಕೊಳ್ಳಬೇಕು.
ವಿದ್ಯಾಾರ್ಥಿ ದೆಸೆಯಲ್ಲೇ ಇತ್ತೀಚೆಗೆ ವ್ಯಾಾಯಾಮ ಶಾಲೆಯ ಮೊರೆ ಹೋಗುವವರು ಹೆಚ್ಚುತ್ತಿಿದ್ದಾಾರೆ. ಉತ್ತಮ ದೇಹವನ್ನು ಸೃಷ್ಟಿಿಸಿಕೊಳ್ಳುವುದರ ಜೊತೆಗೆ  ಸಾಧನೆಗೂ ಕೈಹಾಕುತ್ತಾಾರೆ. ಅದರಲ್ಲಿ ಯಶಸ್ಸನ್ನೂ ಕಂಡು ಆಶ್ಚರ್ಯಪಡುವಂತೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಾಾರೆ. ನಗರದಲ್ಲಿ ಇಂತಹ ಯುವಕನೊಬ್ಬನಿದ್ದಾಾನೆ. ಈತ ಇನ್ನೂ ಸರಿಯಾಗಿ ಮೀಸೆ ಮೂಡದ ಹುಡುಗ. ಆದರೆ ಪವರ್ ಲಿಫ್ಟಿಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಪದಕ ಗೆದ್ದು ಬಂದಿದ್ದಾಾನೆ.ಸೆಪ್ಟೆೆಂಬರ್‌ನಲ್ಲಿ ದುಬೈನಲ್ಲಿ ನಡೆಯಲಿರುವ  ಏಶಿನ್ ಪವರ್ ಲಿಫ್ಟಿಿಂಗ್‌ನಲ್ಲಿ ದೇಶವನ್ನು ಪ್ರತಿನಿಧಿಸಲು ಸನ್ನದ್ಧನಾಗಿದ್ದಾಾನೆ. ಸದ್ಯ ನಗರದ ಸರ್ಕಾರಿ  ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷವನ್ನು ಪಾಸಾಗಿರುವ ಈ ಯುವಕ ಬೇರೆ ಯಾರೂ ಅಲ್ಲ, ವರ್ಷಿತ್ ರಾವ್.
ಸಮರ್ಥವಾದ ದೇಹಧಾರ್ಡ್ಯವನ್ನು ಹೊಂದಿರುವ ವರ್ಷಿತ್, ನಗರದ ನೆಹರೂ ಕ್ರೀಡಾಂಗಣದ ವ್ಯಾಾಯಾಮ ಶಾಲೆಯಲ್ಲಿ ಸುಮಾರು 3 ವರ್ಷದಿಂದ ನಿರಂತರ ತರಬೇತಿ ಪಡೆಯುತ್ತಿಿದ್ದಾಾನೆ. ತರಬೇತಿಯಲ್ಲಿ ಏಕತಾನತೆ, ನಿಷ್ಠೆೆ ಮತ್ತು ಕಠಿಣ ಶ್ರಮ ವಹಿಸುವುದು ಅತಿ ಮುಖ್ಯ. ಇದನ್ನೆೆಲ್ಲ ಕರಗತ ಮಾಡಿಕೊಂಡೇ ಕಣಕ್ಕಿಿಳಿದಿರುವುದರಿಂದ ಅತಿ ಸುಲಭದಲ್ಲಿ ಇದನ್ನೆೆಲ್ಲ ನಿಭಾಯಿಸುತ್ತಿಿದ್ದಾಾನೆ. ಇಂದಿಗೂ ತನ್ನ ಕಾಲೇಜು ಪಾಠವನ್ನು ಮಗಿಸಿದ ನಂತರ ಸಂಜೆ ಎರಡು ಗಂಟೆ ವ್ಯಾಾಯಾಮ ಶಾಲೆಗೆ ತೆರಳಿ ಜನಾರ್ದನ್ ಅವರಲ್ಲಿ ಪ್ರಾಾಕ್ಟೀಸ್ ನಡೆಸುತ್ತಾಾರೆ.
ಈಗಾಗಲೇ ರಾಜ್ಯ, ದಕ್ಷಿಣ ಭಾರತ ಮತ್ತು ರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊೊಂಡು ಅನುಭವ ಹೊಂದಿರುವುದರಿಂದ ದುಬೈನಲ್ಲಿ ನಡೆಯಲಿರುವ ಏಶಿಯನ್ ಸ್ಪರ್ಧೆಯಲ್ಲಿ ಉತ್ತಮ ಫಲಿತಾಂಶವನ್ನು ನೀಡುವ ವಿಶ್ವಾಾಸ ಹೊಂದಿರುವ ವರ್ಷಿತ್, ಇದಕ್ಕಾಾಗಿ ಸತತ ತರಬೇತಿಯಲ್ಲಿದ್ದಾಾನೆ. ಕ್ರೀಡೆಯಲ್ಲೂ ಮುಂದಿರುವ ಈತನಿಗೆ ಉಪನ್ಯಾಾಸಕರು ಎಲ್ಲ ರೀತಿಯ ಬೆಂಬಲ ಮತ್ತು ಪ್ರೋತ್ಸಾಾಹ ನೀಡುತ್ತಿಿದ್ದಾಾರೆ. ಇದರಿಂದ ಇನ್ನಷ್ಟು ಸಾಧನೆ ಮಾಡುವ ಕಾತರದಲ್ಲಿದ್ದಾಾನೆ. 
ಶಿವಮೊಗ್ಗದವರೇ ಆದ ಎ. ಶಶಿಧರ್ ಅವರ ಪುತ್ರನಾಗಿರುವ ವರ್ಷಿತ್, 2016ರ ಡಿಸೆಂಬರ್‌ನಲ್ಲಿ  ಜೆಮ್ಶೆೆಡ್‌ಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಪವರ್ ಲಿಫ್ಟಿಿಂಗ್‌ನಲ್ಲಿ415 ಕೆ.ಜಿ ತೂಕ ಎತ್ತಿಿ ಕಂಚಿನ ಪದಕ ಗಳಸಿದ್ದಾಾನೆ. ಅದೆ ವಿಭಗದ ಬೆಂಚ್ ಪ್ರೆೆಸ್ ವಿಭಗದಲ್ಲಿ 90 ಕೆ. ಜಿ. ಭಾರವನ್ನು ಎತ್ತಿಿ ಬೆಳ್ಳಿಿ ಪದಕ ಜಯಿಸಿದ್ದಾಾನೆ. 2016ರ ಮಾರ್ಚಿನಲ್ಲಿ ಹಿಮಾಚಲ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಬೆಂಚ್ ಪ್ರೆೆಸ್ ವಿಭಾಗದ ಸ್ಪರ್ಧೆಯಲ್ಲೂ  ಕಂಚಿನ ಪದಕ ಗಳಿಸಿದ್ದಾಾನೆ.  2017ರ ಮೇನಲ್ಲಿ ಮಹಾರಾಷ್ಟ್ರದಲ್ಲಿ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಿಂಗ್ ಸ್ಪರ್ಧೆ, ಲಖೋದಲ್ಲಿ ಜರುಗಿದ ಪವರ್ ಲಿಫ್ಟಿಿಂಗ್ ಮತ್ತು ಬೆಂಚ್‌ಪ್ರೆೆಸ್ ಸ್ಪರ್ಧೆಯಲ್ಲಿ ಮತ್ತು ಕಾಮನ್ವೆೆಲ್‌ತ್‌ ಕ್ರೀಡಾಕೂಟದ ಆಯ್ಕೆೆಯಲ್ಲೂ ಪಾಲ್ಗೊೊಂಡಿದ್ದನು.
  2017ರ ಆಗಸ್‌ಟ್‌‌ನಲ್ಲಿ ಕೇರಳದ ಅಲಪ್ಪಿಿಯಲ್ಲಿ ನಡೆದ ದಕ್ಷಿಣ ಭಾರತ ಪವರ್ ಲಿಫ್ಟಿಿಂಗ್ ಸ್ಪರ್ಧೆಯಲ್ಲಿ ಚಿನ್ನ, ಮಂಗಳೂರಿನಲ್ಲಿ ಜರುಗಿದ ರಾಜ್ಯಮಟ್ಟದ ಬೆಂಚ್ ಪ್ರೆೆಸ್  ಸ್ಪರ್ಧೆಯಲ್ಲಿ ಕಂಚು ಮತ್ತು ರಾಜ್ಯಮಟ್ಟದ ಪವರ್ ಲಿಫ್ಟಿಿಂಗ್ ಸ್ಪರ್ಧೆಯಲ್ಲಿ ಬೆಳ್ಳಿಿ ಮತ್ತು ಬೆಂಚ್ ಪ್ರೆೆಸ್‌ನಲ್ಲಿ ಚಿನ್ನದ ಪದಕಗಳಿಸಿದ ಕೀರ್ತಿ ಈತನದು. ಕಳೆದ ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ಜರುಗಿದ ರಾಜ್ಯ ಪವರ್ ಲಿಫ್ಟಿಿಂಗ್‌ನಲ್ಲಿ ಭಾಗವಹಿಸಿ ಚಿನ್ನದ ಪದಕ ಜಯಿಸಿದರೆ, ಈ ವರ್ಷದ ಫೆಭ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಬೆಂಚ್‌ಪ್ರೆೆಸ್‌ನಲ್ಲೂ ಚಿನ್ನದ ಬೇಟೆಯಾಡಿ ಬಂದಿದ್ದಾಾನೆ. ಜೊತೆಗೆ ಬೆಸ್‌ಟ್‌ ಲಿಫ್ಟರ್ ಆಫ್ ಕರ್ನಾಟಕ ಪ್ರಶಸ್ತಿಿಗೂ ಭಾಜನನಾಗಿದ್ದಾಾನೆ. ಮಾರ್ಚಿನಲ್ಲಿ ರಾಂಚಿಯಲ್ಲಿ ಜರುಗಿದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಮತ್ತೆೆ ಚಿನ್ನದ ಪದಕ ಧರಿಸಿದ್ದಾಾನೆ. ಇಂತಹ ಚಿನ್ನದ ಹುಡುಗ ಈಗ ಅಂತಾರಾಷ್ಟ್ರೀಯ ಸ್ಪರ್ಧೆಗೆ ಸಜ್ಜಾಾಗುತ್ತಿಿದ್ದಾಾನೆ.     
14.4.18
..........................................
ವಿದ್ಯಾಾರ್ಥಿಗಳ ಪಾಲಿನ ಅಮ್ಮ
ಅನಿತಾ ಮೇರಿ



ನಮ್ಮ ಜೀವನದ ಪ್ರಮುಖ ಉದ್ದೇಶವೇ ಮಾನವ ಸೇವೆ. ಇದು ದಲಾಯಿ ಲಾಮಾ ಅವರ ಉಕ್ತಿಿ. ನಾವು ಇತರರಿಗೆ ಅಥವಾ ಜಗತ್ತಿಿಗೆ ಏನನ್ನು ಕೊಡುತ್ತೇವೆಯೋ ಅದು ಅಮರವಾಗಿ ನಮ್ಮ ಹೆಸರನ್ನು ಬೆಳಗಿಸುತ್ತದೆ. 
  ಜೀವನದಲ್ಲಿ ಆರೋಗ್ಯ ಮತ್ತು ಶಿಕ್ಷಣ ಎರಡೂ ಅವಶ್ಯ. ಅವಿನಾಭಾವ ಸಂಬಂಧವನ್ನು ಇವು ಹೊಂದಿವೆ. ಚಿಕಿತ್ಸೆೆ ಸಿಗದೆ ಅಥವಾ ಆರ್ಥಿಕ ನೆರವಿಲ್ಲದೆ ಎಷ್ಟೋೋ ಮಕ್ಕಳು ಚಿಕಿತ್ಸೆೆ ಪಡೆಯದೆ ಕಮರುವುದೂ ಇದೆ. ಇಂತಹ ಮಕ್ಕಳ ರಕ್ಷಣೆಯಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡವರೆಂದರೆ ಶಿಕ್ಷಕಿ ಅನಿತಾ ಮೇರಿ. ಸೇವೆಯಲ್ಲಿ ಜೀವನದ ಸಾರ್ಥಕತೆಯನ್ನು ಕಾಣು ಎನ್ನುವುದು ಇವರ ಮಂತ್ರ. 
ಪ್ರಸ್ತುತ ಭದ್ರಾಾವತಿ ತಾಲೂಕು ಹುಣಸೆಕಟ್ಟೆೆ ಪ್ರಾಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿಿರುವ ಅನಿತಾ, ಈವರೆಗೆ 315 ಮಕ್ಕಳಿಗೆ ಉನ್ನತ ಮಟ್ಟದ ಚಿಕಿತ್ಸೆೆಯನ್ನು ಉಚಿತವಾಗಿ ಕೊಡಿಸಿದ್ದಾಾರೆ. ಶಿಕ್ಷಣ ಇಲಾಖೆಯಲ್ಲಿ ಮಕ್ಕಳಿಗೆ ಇರುವ ಸುವರ್ಣ ಆರೋಗ್ಯ ಚೈತನ್ಯ ಯೋಜನೆಯಡಿ ಶಸ್ತ್ರಚಿಕಿತ್ಸೆೆ ನೆರವಾಗುತ್ತಿಿದ್ದಾಾರೆ. ಮಕ್ಕಳಲ್ಲಿ ಇರುವ ಕಾಯಿಲೆಗಳನ್ನು ಅವರ ವರ್ತನೆ ಅಥವಾ ಶಿಕ್ಷಕ-ಪಾಲಕರ ಮೂಲಕ ತಿಳಿದುಕೊಂಡು ಸಂಬಂಧಿಸಿದ ದಾಖಲೆ ಸಿದ್ಧಪಡಿಸಿ ಜಿಲ್ಲಾಾ ಶಿಕ್ಷಣಾ ದಾಖಲೆ ಸಹಿತ ಪರವಾನಿಗೆ ಪಡೆದು  ಬೆಂಗಳೂರಿನ ಜಯದೇವ, ನಾರಾಯಣ ಹೃದಯಾಲಯದಲ್ಲಿ ತಮ್ಮ ಮಕ್ಕಳಂತೆಯೇ ಚಿಕಿತ್ಸೆೆ ಕೊಡಿಸುತ್ತಿಿದ್ದಾಾರೆ. ವಿಶೇಷವಾಗಿ ಹೃದ್ರೋಗಕ್ಕೆೆ ಸಂಬಂಧಿಸಿದ ಕೇಸುಗಳನ್ನೇ ಹೆಚ್ಚಾಾಗಿ ನಿರ್ವಹಿಸಿದ್ದಾಾರೆ. ಇದ್ಯಾಾವುದಕ್ಕೂ ಬಿಡಿಗಾಸನ್ನು ಯಾರಿಂದಲೂ ಪಡೆದಿಲ್ಲ ಎನ್ನುವುದನ್ನು ಹೇಳಲೇಬೇಕು.
  ಈಗ ಶಿಕ್ಷಕರೇ ಮಕ್ಕಳಲ್ಲಿರುವ ಕಾಯಿಲೆ ಅರಿತು  ಅನಿತಾ ಅವರಿಗೆ ತಿಳಿಸಿಬಿಡುತ್ತಾಾರೆ. ಪಾಲಕರಿಗೆ ಆರೋಗ್ಯ ಚೈತನ್ಯ ಯೋಜನೆಯ ಅರಿವಿರದಿರುವುದರಿಂದ ತಾವೇ ಮುಂದಾಗಿ ಎಲ್ಲವನ್ನೂ ನಿರ್ವಹಿಸುತ್ತಿಿದ್ದಾಾರೆ. ಮಕ್ಕಳಿಗೆ ಕೇವಲ ಪಾಠ ಮಾಡುವುದಷ್ಟೇ ಶಿಕ್ಷಕನ ಕೆಲಸವಲ್ಲ. ಆತನ ಸರ್ವಾಂಗೀಣ ಬೆಳವಣಿಗೆಯತ್ತ ಗಮನಹರಿಸಬೇಕಾದದ್ದೂ ಜವಾಬ್ದಾಾರಿ. ಇದನ್ನರಿತು ಸದಾ ಹೆಜ್ಜೆೆ ಇಡುವ ಅನಿತಾ, ಮಕ್ಕಳ ಪಾಲಿಗೆ ಶಿಕ್ಷಕಿಯಾಗಿ ಉಳಿಯದೆ ‘ಅಮ್ಮ’ ಆಗಿದ್ದಾಾರೆ.
ಒಂದೇ ವರ್ಷದ ಅಂತರದಲ್ಲಿ ಎರಡು ಬಾರಿ ಅನಿತಾ ಹೃದಯ ಶಸ್ತ್ರಚಿಕಿತ್ಸೆೆಗೆ ಒಳಗಾಗಿದ್ದರೂ, ತಮ್ಮ ಆರೋಗ್ಯವನ್ನು ಲಕ್ಷಿಸದೆ, ವೈದ್ಯರ ಸೂಚನೆಯನ್ನು ಮೀರಿ ಕೆಲಸ ಮಾಡುತ್ತಿಿದ್ದಾಾರೆ. ಶಿವಮೊಗ್ಗ ಸಹಿತ ಚಿಕ್ಕಮಗಳೂರು, ಹಾಸನ ಜಿಲ್ಲೆೆಯಿಂದ ನೂರಾರು ವಿದ್ಯಾಾರ್ಥಿಗಳ ಆರೋಗ್ಯವನ್ನು ಅವರು ಕಾಪಾಡಿದ್ದಾಾರೆ.
ಮೂಲತಃ ತೀರ್ಥಹಳ್ಳಿಿಯವರಾದ ಅನಿತಾ, ಈಗ ಭದ್ರಾಾವತಿ ವಾಸಿಯಾಗಿದ್ದಾಾರೆ. ಅನಾರೋಗ್ಯ ಮಕ್ಕಳು ಎಲ್ಲಾಾದರೂ ಕಂಡುಬಂದಲ್ಲಿ ಕೂಡಲೇ ಮಾಹಿತಿ ಕೊಡುವಂತೆ ವಿನಂತಿ ಮಾಡುತ್ತಿಿದ್ದಾಾರೆ. (ಇವರ ದೂರವಾಣಿ ಸಂಖ್ಯೆೆ-9900700241). ಆಕಾಶವಾಣಿ ಮತ್ತು ದೂರದರ್ಶನ ಹಾಗೂ ವಿವಿಧ ಚಾನೆಲ್‌ಗಳಲ್ಲಿ, ಪತ್ರಿಿಕೆಗಳಲ್ಲಿ ಇವರ ಬಗ್ಗೆೆ ಪ್ರಸಾರ ಮತ್ತು ಪ್ರಕಟವಾವಾದ ಲೇಖನಗಳನ್ನು ಓದಿಯೇ ಹೆಚ್ಚಿಿನ ಜನರು ಸಂಪರ್ಕಿಸುತ್ತಿಿದ್ದಾಾರೆ. 
ತನಗೆ ಮನೆ ಕಟ್ಟಬೇಕೆಂಬ ಆಸೆಯಿಲ್ಲ, ಆಸ್ತಿಿ ಸಂಪಾದಿಸಬೇಕೆಂಬ ಬಯಕೆಯೂ ಇಲ್ಲ. ಇದೇ ಹಣವನ್ನು ಮಕ್ಕಳ ಆರೋಗ್ಯಕ್ಕಾಾಗಿ ಖರ್ಚು ಮಾಡುತ್ತೇನೆ. ಬಡತನದಲ್ಲಿರುವ ವಿದ್ಯಾಾರ್ಥಿಗಳಿಗೆ ಎಲ್ಲಾಾ ರೀತಿಯಲ್ಲೂ ಕೈಲಾದ ಸಹಾಯ ಮಾಡುತ್ತಿಿದ್ದೇನೆ. ದಾನಿಗಳಿಂದ, ಸಹಶಿಕ್ಷಕರಿಂದ ನೆರವು ಕೊಡಿಸುತ್ತಿಿದ್ದೇನೆ. ಶಿಕ್ಷಣ ಮತ್ತು ಆರೋಗ್ಯ ಇಲಾಖಾಧಿಕಾರಿಗಳು, ಆಸ್ಪತ್ರೆೆಯವರು ಸಹಕಾರ ನೀಡುತ್ತಿಿದ್ದಾಾರೆ ಎನ್ನುತ್ತಾಾರೆ ಅವರು. 
ಇವರ ಸೇವಾಮನೋಭಾವ ಗಮನಿಸಿ  ವಿವಿಧ ಚಾನೆಲ್‌ಗಳು ಸಂದರ್ಶನ ಪ್ರಸಾರ ಮಾಡಿವೆ. ಹತ್ತಾಾರು ಸಂಘಟನೆಗಳು ಗೌರವಿಸಿವೆ. ಎಂಎಲ್‌ಸಿ ಬಸವರಾಜ್ ಹೊರಟ್ಟಿಿ ತಮ್ಮ ತಾಯಿ ಹೆಸರಿನಲ್ಲಿ ಕೊಡಮಾಡುವ ಅವ್ವ ಪ್ರಶಸ್ತಿಿಯನ್ನು ಪ್ರದಾನ ಮಾಡಿದ್ದಾಾರೆ.
ಅನಿತಾ ಅವರ ಹೃದಯ ವೈಶಾಲ್ಯ ದೊಡ್ಡದು. ಅವರ ಸೇವಾಮನೋಭಾವಕ್ಕೆೆ ಸರಿಸಾಟಿಯೇ ಇಲ್ಲ. ಸೂಕ್ತ ಚಿಕಿತ್ಸೆೆ ಸಿಗದೆ ತನ್ನ ತಂಗಿಯಂತೆ ಯಾರೂ ಪ್ರಾಾಣ ಕಳೆದುಕೊಳ್ಳಬಾರದೆಂದು ಮಕ್ಕಳ ಚಿಕಿತ್ಸೆೆಗೆ ನಿಸ್ವಾಾರ್ಥದಿಂದ ನೆರವಾಗುತ್ತಿಿರುವುದು ಕನ್ನಡ ನಾಡಿಗೆ ಹೆಮ್ಮೆೆಯ ವಿಚಾರ.
7.4.18
.........................................
ಸರಳ, ಪ್ರಾಾಮಾಣಿಕ ಜೀವಿ
ದಿ. ಕೆ. ಜಿ. ಸುಬ್ರಹ್ಮಣ್ಯ



ಹತ್ತಾಾರು ಅಭಿರುಚಿಗಳನ್ನು ಬೆಳೆಸಿಕೊಂಡು ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸುತ್ತ ಸರಳ ಜೀವನ, ಸನ್ನಡತೆಯಿಂದಲೇ ಹೆಸರಾಗಿದ್ದವರು ದಿವಂಗತ ಕೆ. ಜಿ. ಸುಬ್ರಹ್ಮಣ್ಯ. ಬಿಳಿಗಡ್ಡ, ಅದರೊಳಗಿನ ಮೆಲ್ಲನೆಯ ನಗು ಎಂತಹವರನ್ನೂ ಆಕರ್ಷಿಸುತಿತ್ತು. ನಗರದ ಸಾಹಿತ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಲೋಕದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಸುಬ್ರಹ್ಮಣ್ಯ, ಮಾರ್ಚ್ 18ರಂದು  ಇನ್ನಿಿಲ್ಲವಾಗಿದ್ದಾಾರೆ.
ಪ್ರತಿ ಯಶಸ್ವಿಿ ಮನುಷ್ಯ ತಾನು ಯಾವುದೇ ಹೊಸ ಕಾರ್ಯ ಆರಂಭಿಸುವಾಗ ಎರಡು ಮುಖ್ಯ ನಂಬಿಕೆ ಹೊಂದಿರುತ್ತಾಾನೆ. ಮೊದಲನೆಯದು, ಇಂದಿನ ದಿನಕ್ಕಿಿಂತ ನಾಳಿನ ದಿನ ಇನ್ನೂ ಉತ್ತಮವಾಗಿರಬೇಕು, ಎರಡನೆಯದು, ಅದನ್ನು ಸಾಧಿಸುವ ಶಕ್ತಿಿ ತನ್ನಲ್ಲಿದೆ ಎಂದು ಸಾಧಿಸಿ ತೋರಿಸುವುದು. ಕೆಜಿಎಸ್ ಇದನ್ನು ಮಾಡಿ ತೋರಿಸಿದ ಮಹನೀಯ. ಶಿವಮೊಗ್ಗದಲ್ಲಿ ಅವರು ಮಾಡಿದ ಕೆಲಸಗಳು ಎಂದಿಗೂ ಶಾಶ್ವತ.
  ಶಿಕ್ಷಣ, ಸಂಗೀತ, ಸಾಹಿತ್ಯ, ಕೃಷಿ, ಕೈಗಾರಿಕೆ ಮತ್ತು ಸಾಂಸ್ಕೃತಿ ಲೋಕ  ಹೀಗೆ ಹತ್ತು ಹಲವಾರು ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಮೂಲತಃ ತೀರ್ಥಹಳ್ಳಿಿ ತಾಲೂಕಿನ ಹುಲ್ಲತ್ತಿಿಯವರಾದರೂ ಅಜ್ಜನ ಮನೆ ಕಿತ್ತಂದೂರಿಗೆ ದತ್ತುಪುತ್ರನಾಗಿ ಬಂದು ಅಲ್ಲಿಯೇ ಬೆಳೆದವರು. ಅವರ ಪೂರ್ಣ ಹೆಸರು ಕಿತ್ತಂದೂರು ಗೋಪಾಲಕೃಷ್ಣ ಸುಬ್ರಹ್ಮಣ್ಯ. ಅವರು ಓದಿದ್ದು ಶಿವಮೊಗ್ಗದ ಡಿವಿಎಸ್‌ನಲ್ಲಿ ಮತ್ತು ಸಹ್ಯಾಾದ್ರಿಿ ಕಾಲೇಜಿನಲ್ಲಿ. ಮುಂದಿನ ಓದು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ. ಇಲ್ಲಿ ರಾಷ್ಟ್ರಕವಿ ಕುವೆಂಪು ಅವರ ಶಿಷ್ಯರೆನ್ನುವುದು ಹೆಮ್ಮೆೆಯ ಸಂಗತಿ. ವಿಶೇಷವೆಂದರೆ, ತಾವು ಓದಿದ ಡಿವಿಎಸ್ ಸಂಸ್ಥೆೆಯ ನಿರ್ದೇಶಕರಾಗಿ, ಖಜಾಂಚಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸಂಸ್ಥೆೆಯ ಹೆಸರನ್ನು ಮೇಲೇರಿಸಿದ್ದಾಾರೆ.
ಕರ್ನಾಟಕ ಸಂಘಕ್ಕೆೆ ಅವರ ಕೊಡುಗೆ ಅನನ್ಯ. ಅದರ ಅಧ್ಯಕ್ಷರಾಗಿ ಸರ್ವಾಂಗೀಣ ಅಭಿವೃದ್ಧಿಿಗೆ ಕಾರಣರಾದವರು.  ಕರ್ನಾಟಕ ಸಂಘದ ಸದೃಢತೆಗೆ ಅವರು ಭದ್ರವಾದ ಬುನಾದಿಯನ್ನು ಹಾಕಿಕೊಟ್ಟಿಿದ್ದಾಾರೆ. ಇತ್ತೀಚಿನವರೆಗೂ ಸಂಘದ ಬಹುತೇಕ ಎಲ್ಲ ಕಾರ್ಯಕ್ರಮಗಳಿಗೂ ಅವರು ಆಗಮಿಸುತ್ತಿಿದ್ದರು.
ಕೃಷಿ ಕುಟುಂಬದ ಹಿನ್ನಲೆಯಿಂದ ಬಂದಿದ್ದ ಅವರು, ಮಲೆನಾಡು ಅರೆಕಾನಟ್ ಸಿಂಡಿಕೇಟ್ ಎಂಬ ಸಂಸ್ಥೆೆ ಸ್ಥಾಾಪಿಸಿ ಅಡಿಕೆ ಬೆಳೆಗಾರರ ನೆರವಿಗೆ ಮುಂದಾದವರು. ಕೈಗಾರಿಕಾ ಕ್ಷೇತ್ರದಲ್ಲಿ ನಗರದ ಹೆಸರನ್ನು ಉನ್ನತಕ್ಕೇರಿಸಿರುವ ಪಿಯರ್‌ಲೈಟ್ ಲೈನರ್ಸ್ ಅಥವಾ ಭಾರತ್ ಫೌಂಡ್ರಿಿಯಯನ್ನು ಆಧುನೀಕರಣಗೊಳಿಸಿ, ಆ ಸಂಸ್ಥೆೆಯ ಅಧ್ಯಕ್ಷರಾಗಿ, ಜಿಲ್ಲೆೆಯ ನೂರಾರು ಯುವಕರಿಗೆ ಅದರಲ್ಲಿ ಉದ್ಯೋೋಗ ಕೊಡಿಸಿದರು. ಅದರ ಔನ್ನತ್ಯಕ್ಕೆೆ ತಮ್ಮದೇ ಆದ ಕೊಡುಗೆ ನೀಡಿದ್ದಾಾರೆ.
ಅವರ ಇನ್ನಿಿತರ ಸಾಧನೆಗಳೆಂದರೆ, ಭಾರತೀಯ ಕುಟುಂಬ ಯೋಜನಾ ಸಂಘ ಸ್ಥಾಾಪನೆ, ಶಿವಮೊಗ್ಗದಲ್ಲಿ ಗಮಕ ಸಮ್ಮೇಳನ, ಹೆಸರಾಂತ ಸಂಗಿತಗಾರರನ್ನು ಕರೆಯಿಸಿ ಕಾರ್ಯಕ್ರಮ ನಡೆಸಿದ್ದು, ಸಹ್ಯಾಾದ್ರಿಿ ಚಿತ್ರ ಸಮಾಜ ಸ್ಥಾಾಪನೆ, ರೋಟರಿ ಕ್ಲಬ್ ಅಧ್ಯಕ್ಷರಾಗಿ ಹತ್ತಾಾರು ಸಮಾಜಮುಖೀ ಸೇವೆ, ರೋಟರಿ ಜಿಲ್ಲಾಾ ರಾಜ್ಯಪಾಲರಾಗಿ ಸೇವೆ ಮೊದಲಾದವು. ಇಷ್ಟೆೆಲ್ಲ ಸಾಧನೆ ಮಾಡಿದರೂ ಅವರಲ್ಲಿ ಸ್ವಲ್ಪವೂ ಗರ್ವವಿರಲಿಲ್ಲ. ಸಣ್ಣವರಿರಲಿ, ದೊಡ್ಡವರಿರಲಿ ಎಲ್ಲರನ್ನೂ ಸಮಭಾವದಿಂದ ಕಾಣುವ, ಮಿತಭಾಷಿ, ಸರ್ವಗುಣಸಂಪನ್ನರಾಗಿದ್ದರು.
ವ್ಯಕ್ತಿಿಯ ಗುಣ, ನಡತೆ, ಜೀವನಶೈಲಿಗೆ ಹೆಸರು ಬರಲು ಆತನ ಸರಳತೆ ಕಾರಣವಾಗುತ್ತದೆ. ಎಲ್ಲರೂ ಮೆಚ್ಚುವ ಪ್ರಾಾಮಾಣಿಕ ವ್ಯಕ್ತಿಿಯಾಗಿ ಆಗ ಆತ ಹೊರಹೊಮ್ಮುತ್ತಾಾನೆ. ಇಂತ ಕೆಜಿಕೆ, ಅಧ್ಯಯನಶೀಲತೆ, ಚಿಂತನ ಮಂಥನಗಳಿಗೆ ಒತ್ತಾಾಸೆಯಾಗಿದ್ದರಿಂದಲೇ ಎತ್ತರಕ್ಕೇರಿದರು. ಶಿವಮೊಗ್ಗದ ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆೆ ಅವರ ಕೊಡುಗೆ ಬಹುದೊಡ್ಡದು. ಒಬ್ಬ ಒಳ್ಳೆೆಯ ಓದುಗನಲ್ಲಿ ಸೃಜನಶೀಲತೆ ಹಾಗೂ ಸದಭಿರುಚಿ ಇರಲು ಸಾಧ್ಯ ಎಂಬುದಕ್ಕೆೆ ಅವರು ಉದಾಹರಣೆ. ಆದ್ದರಿಂದಲೇ ಅವರಿಗೆ ಬಹುದೊಡ್ಡ ಬಳಗವೇ ಎಲ್ಲಾಾ ವಲಯದಲ್ಲೂ ಇದೆ. ಸಮರ್ಥ ನಾಯಕತ್ವದ ಸಂಕೇತವೂ ಅವರಾಗಿದ್ದರು.
31.3.18

...........................................

ಕ್ರಿಿಯಾಶೀಲ ಉಪನ್ಯಾಾಸಕ
ಟಿ.ಆರ್. ಗುರುಪ್ರಸಾದ್


ಕ್ರಿಿಯಾಶೀಲ ವ್ಯಕ್ತಿಿಗೆ ಸಾಧನೆಯೇ ಗುರಿಯಾದಾಗ ಇಚ್ಛಾಾಶಕ್ತಿಿಯಿಂದ ಅದನ್ನು ಸಾಧಿಸುತ್ತಾಾನೆ. ಆತನಿಗೆ ಜ್ಞಾಾನಕ್ಕಿಿಂತ ಆತನ ಕಲ್ಪನಾಶಕ್ತಿಿಯೇ ಹೆಚ್ಚಿಿನ ಬಲವನ್ನು ನೀಡುತ್ತದೆ. ಪರಿಶುದ್ಧ ಮನಸ್ಸಿಿದ್ದರೆ ಕ್ರಿಿಯಾಶೀಲತೆ ಎಂತಹವರನ್ನೂ ಆವರಿಸಿಬಿಡುತ್ತದೆ.
ಟಿ. ಆರ್. ಗುರುಪ್ರಸಾದ್ ಇಂತಹ ಒಬ್ಬ ಕ್ರಿಿಯಾಶೀಲ ಮನಸ್ಸಿಿನ, ಸದಭಿರುಚಿಯ ಸಾಧಕ, ಕಲಾವಿದ. ಇವರ ಹವ್ಯಾಾಸಗಳು ಒಂದೆರಡಲ್ಲ. ಮಿಮಿಕ್ರಿಿ, ಗಾಯನ, ಅಭಿನಯ, ನಿರ್ದೇಶನ, ರಂಗಪರಿಕರಗಳ ತಯಾರಿ, ನೃತ್ಯ, ಬರವಣಿಗೆ ಇತ್ಯಾಾದಿ. ಇಂತಹ ಅಸಾಧಾರಣ ಪ್ರತಿಭೆಯ ಗುರುಪ್ರಸಾದ್ ಶಿರಾಳಕೊಪ್ಪದವರು. ಕುವೆಂಪು ವಿಶ್ವವಿದ್ಯಾಾಲಯದಲ್ಲಿ ಕನ್ನಡ ಎಂಎ ಮುಗಿಸಿ ಶಿರಾಳಕೊಪ್ಪದ ಕದಂಬ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಾಸಕರಾಗಿ ಕೆಲಸ ಮಾಡುತ್ತಿಿದ್ದಾಾರೆ. 
ಸಾಣೆಹಳ್ಳಿಿಯ ಶಿವಸಂಚಾರ ನಾಟಕ ತಂಡದಲ್ಲಿ, ನೀನಾಸಂನಲ್ಲಿ ಮತ್ತು ಸಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿರುವ ನಿರ್ದೇಶಕರ ತರಬೇತಿ ಶಿಬಿರದಲ್ಲಿ ರಂಗ ತರಬೇತಿ ಪಡೆದಿದ್ದಾಾರೆ. ಬೆಂಗಳೂರಿನ ಜನಸಂಸ್ಕೃತಿ ತಂಡದಲ್ಲಿ 1 ತಿಂಗಳ ಅಭಿನಯ ಮತ್ತು ದೇಹವಿನ್ಯಾಾಸ ತರಬೇತಿಯನ್ನು ಪಡೆದಿದ್ದಾಾರೆ. ಮೂಕಾಭಿನಯ ಶಿಬಿರದಲ್ಲೂ ತರಬೇತಿ ಹೊಂದಿದ್ದಾಾರೆ.
ಶಿರಾಳಕೊಪ್ಪದಲ್ಲಿ ಸಿರಿಯಾಳ ಕಲಾಕೇಂದ್ರವನ್ನು 16 ವರ್ಷಗಳಿಂದ ನಡೆಸಿಕೊಂಡು ಬರುತ್ತಿಿದ್ದಾಾರೆ. ಇದರ ಮೂಲಕ ಅನೇಕ ಶಿಬಿರಗಳನ್ನು ಆಯೋಜಿಸುತ್ತ ಯುವಕರಿಗೆ ನಾಯಕತ್ವ, ವ್ಯಕ್ತಿಿತ್ವ ವಿಕಸನ, ಸಂಘಟನೆ, ಒತ್ತಡ ನಿರ್ವಹಣೆ, ಯೋಗಾಸನ, ಸಂಗೀತ, ಭಾಷಣ ಕಲೆ, ವರದಿಗಾರಿಕೆ, ಪರಿಸರ ಜಾಗೃತಿ ಮೊದಲಾದ  ವಿಷಯಗಳ ಬಗ್ಗೆೆ ಮಾರ್ಗದರ್ಶನ ನೀಡುತ್ತಿಿದ್ದಾಾರೆ.
ಗುರುಪ್ರಸಾದ್ ಸುಮಾರು 10 ರೂಪಕ, 11 ನಾಟಕ 11 ಬೀದಿ ನಾಟಕ, 13 ರೂಪಕಗಳನ್ನು ನಿರ್ದೇಶಿಸಿದ್ದಾಾರೆ. 16 ನಾಟಕಗಳಲ್ಲಿ ಅಭಿನಯಿಸಿದ್ದಾಾರೆ. ಇವರ ಅಭಿನಯದ ಕೆಲವು ನಾಟಕಗಳೆಂದರೆ, ಆಮ್ರಪಾಲಿ, ಮತಾಂತರ, ಮೂರು ಮೆಟ್ಟಿಿಲ ಕಥೆ, ಬೆರಳ್ಗೆೆ ಕೊರಳ್, ಶರೀಫ, ಜೊತೆಗಿರುವನು ಚಂದಿರ, ಎದೆಗಾರಿಕೆ, ಮರುಭೂಮಿಯಲ್ಲೊೊಂದು ಯಾನ ಮೊದಲಾದವು. ನಿರ್ದೇಶಿಸಿದ ಕೆಲವು ನಾಟಕಗಳಲ್ಲಿ ಸೂಳೆ ಸನ್ಯಾಾಸಿ, ಪ್ರಳಯ, ಗೋವಿನ ಹಾಡು, ಕ್ರೌೌರ್ಯ, ಟೋಪಿ ಬೇಕಾ ಟೋಪಿ ಮೊದಲಾದವು ಪ್ರಮುಖವಾದುವು. ತಮ್ಮ ಸಿರಿಯಾಳ ಕಲಾಕೇಂದ್ರದ ವತಿಯಿಂದ ರಾಜ್ಯದಾದ್ಯಂತ ಹಲವು ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾಾರೆ. 
 ಸುಮಾರು 1600ಕ್ಕೂ ಹೆಚ್ಚು ಬೀದಿ ನಾಟಕಗಳನ್ನು ಪ್ರದರ್ಶಿಸಿರುವ ಇವರು, ಭಗವದ್ಗೀತೆ ಕಿರು ಸಿನಿಮಾದಲ್ಲಿ ಅರ್ಜುನನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಾರೆ. ನಾಲ್ಕಾಾರು (ಆಕಾಂಕ್ಷೆ, ಮಿಡ್‌ಲ್‌‌ಕ್ಲಾಾಸ್) ಧಾರವಾಹಿಗಳಲ್ಲಿ ಮತ್ತು ವಾರ್ತಾ ಇಲಾಖೆಯ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸಿದ್ದಾಾರೆ. ಶಿರಾಳಕೊಪದಲ್ಲಿ ಕಬಡ್ಡಿಿ ಕೋಚಿಂಗ್ ಕೇಂದ್ರ ತೆರೆಯುವ ಮೂಲಕ ಆ ಕ್ರೀಡೆ ಗ್ರಾಾಮಾಂತರದಲ್ಲಿ ಜೀವಂತಿಕೆ ಪಡೆಯುವಂತೆ ಮಾಡುತ್ತಿಿದ್ದಾಾರೆ. ಸುಮಾರು 60ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ 6 ತಿಂಗಳು ಸುಗಮ ಸಂಗೀತ, ಜಾನಪದ ಮತ್ತು ರಂಗಗೀತೆಗಳ ಉಚಿತ ಶಿಬಿರವನ್ನು ನಡೆಸಿದ್ದಾಾರೆ. ತಮ್ಮ ಈ ಎಲ್ಲ ಬೆಳವಣಿಎಗಗೆ ಶಿಕಾರಿಪುರ  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಾಸಕರಾಗಿದ್ದ ತನ್ನ ಗುರು, ಹಾಲಿ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಬಿ. ವಿ. ವಸಂತಕುಮಾರ್ ಅವರೇ ಕಾರಣ ಎನ್ನುವುದನ್ನು ಮನದುಂಬಿ ನುಡಿಯುತ್ತಾಾರೆ.   
ಎನ್‌ಎಸ್‌ಎಸ್‌ನಲ್ಲಿ ಇವರು ವಹಿಸಿರುವ ಪಾತ್ರ ಅತಿ ಮಹತ್ವದ್ದು. 9 ಅಂತರ್ ಕಾಲೇಜು, ಒಂದು ರಾಜ್ಯ ಮಟ್ಟದ ಮತ್ತು ಎರಡು ಆಂತರ್ ರಾಜ್ಯ ಶಿಬಿರಗಳಲ್ಲಿ ತಂಡವನ್ನು ಮುನ್ನಡೆಸಿದ್ದಾಾರೆ. ಜಿಲ್ಲಾಾ ಶಿಬಿರಾಧಿಕಾರಿಯಾಗಿ, ಸಹಶಿಬಿರಾಧಿಕಾರಿ ಮತ್ತು ಕಾರ್ಯಕ್ರಮಾಧಿಕಾರಿಯಾಗಿಯೂ ಕೆಲಸ ಮಾಡಿದ್ದಾಾರೆ. ಇವರ ಈ ಎಲ್ಲ ಸಾಧನೆ ಗಮನಿಸಿ 2001-02ರಲ್ಲಿ ಕುವೆಂಪು ವಿವಿ ಅತ್ಯುತ್ತಮ ಎನ್‌ಎಸ್‌ಎಸ್ ಸ್ವಯಂಸೇವಕ ಪ್ರಶಸ್ತಿಿ, 2002-03ರಲ್ಲಿ ಎನ್‌ಎಸ್‌ಎಸ್ ರಾಜ್ಯ ಪುರಸ್ಕಾಾರ ದೊರೆತಿದೆ.  ಇತ್ತೀಚೆಗಷ್ಟೇ ಪಿಎಚ್‌ಡಿ ಪದವಿಯನ್ನು ಹಂಪಿ ವಿವಿಯಿಂದ ಪಡೆದುಕೊಂಡಿದ್ದಾಾರೆ.
24.3.18
........................................   
ವಿದ್ಯಾಾರ್ಥಿಗಳಿಗೆ ಮಾದರಿ
ಪ್ರಗತಿ ನಿಲುವಾಸೆ

ಏಕಾಂತದಲ್ಲಿ ಕಠಿಣ ಅಭ್ಯಾಾಸ ಮಾಡಿದರೆ  ಯಶಸ್ಸು ಎನ್ನುವುದು ಸದ್ದು ಮಾಡುತ್ತದೆ ಎನ್ನುವ ಆಂಗ್ಲ ಮಾತಿದೆ. ನಮ್ಮ ಗುರಿಯನ್ನು ತಲುಪಲು ಸಂಯಮ, ಯೋಜನಾಬದ್ಧತೆ, ದೀರ್ಘಪ್ರಯತ್ನ ಮತ್ತು ನಿಶ್ಚಿಿತ ಉದ್ದೇಶ ಇಟ್ಟುಕೊಂಡು ಶ್ರಮಪಡಬೇಕು. ಆಗ ಯಶಸ್ಸು ಸಾಧ್ಯ.
ಪ್ರಗತಿ  ನಿಲುವಾಸೆ ಬಹುಮುಖ ಪ್ರತಿಭೆಯ ಖನಿ. ನಗರದ ಪಿಇಎಸ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾಾನಿಕ್‌ಸ್‌ ಮತ್ತು ಕಮ್ಯುನಿಕೇಶನ್ ಇಂಜಿನೀಯರಿಂಗ್‌ನ ಕೊನೆಯ ವರ್ಷದಲ್ಲಿ ಓದುತ್ತಿಿರುವ ಇವರು, ಅಸಾಧಾರಣ ಪ್ರತಿಭಾನ್ವಿಿತೆ. ಇಂಜಿನೀಯರಿಂಗ್ ವಿದ್ಯಾಾರ್ಥಿನಿಯಾಗಿದ್ದರೂ  ಹಾಡುಗಾರಿಕೆ, ಸಂಗೀತ, ಸಾಹಿತ್ಯ, ಶಿಕ್ಷಣದಲ್ಲಿ ವಿಶೇಷ ಸಾಧನೆಯನ್ನು ಮಾಡುತ್ತ ಒಂದಲ್ಲ ಒಂದು ಪ್ರಶಸ್ತಿಿಗೆ ಭಾಜನರಾಗುತ್ತಿಿದ್ದಾಾರೆ.
ಪ್ರಸ್ತುತ ಕೃಷಿ ಮತ್ತು ವೈಜ್ಞಾಾನಿಕ ನಂಬಿಕೆಗಳು ಎನ್ನುವ ಕುರಿತು ಮತ್ತು ಇತರೆ ಮೂರು ಪುಸ್ತಕ ಬರೆಯುತ್ತಿಿರುವ ಇವರು, ಸುಮಾರು 400ಕ್ಕೂ ಹೆಚ್ಚು ಕಾಯ
ರ್ಕ್ರಮಗಳನ್ನು ಸಂಗೀತ, ಸಾಹಿತ್ಯ, ಶಿಕ್ಷಣ ಕ್ಷೇತ್ರಕ್ಕೆೆ ಸಂಬಂಧಿಸಿದಂತೆ ವಿವಿಧ ಜಿಲ್ಲೆೆಗಳಲ್ಲಿ ನೀಡಿದ್ದಾಾರೆ. ಜೊತೆಗೆ ಆರಕ್ಕೂ ಅಧಿಕ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಪ್ರಶಸ್ತಿಿಗಳನ್ನು ತಮ್ಮದಾಗಿಸಿಕೊಂಡಿದ್ದಾಾರೆ. ನಿಖರ ಗುರಿಯೊಂದಿಗೆ ಹೆಚ್ಚು ಶ್ರಮದ ಮೂಲಕ ಸಾಧನೆ ಮಾಡುವುದನ್ನು ಇಷ್ಟಪಡುವ ಮನೋಭಾವ ಇವರದ್ದು. ಅತ್ಯಂತ ಸರಳ ಸ್ವಭಾವದ ಮೂಲಕ ಆಕರ್ಷಕ ವ್ಯಕ್ತಿಿತ್ವ ಬೆಳೆಸಿಕೊಂಡಿರುವುದಲ್ಲದೆ, ಇತರೆ ವಿದ್ಯಾಾರ್ಥಿಗಳಿಗೆ ಮಾದರಿಯಾಗಿ ನಿಲ್ಲುತ್ತಾಾರೆ.
 ತೀರ್ಥಹಳ್ಳಿಿ ತಾಲೂಕಿನ ಕುಗ್ರಾಾಮವಾದ ನಿಲುವಾಸೆ ಇವರ ಊರು. ಮೂಲಸೌಕರ್ಯಗಳಿಂದ ವಂಚಿತವಾದ ಈ ಗ್ರಾಾಮದಲ್ಲಿದ್ದುಕೊಂಡೇ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ ಮುಂದೆ ಬಂದವರು. ಎಸ್ಸೆೆಸ್ಸೆೆಲ್ಸಿಿಯಲ್ಲಿ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾಾನ ಗಳಿಸಿದ್ದಾಾರೆ. 2007ರಲ್ಲಿ ಭಗವದ್ಗೀತೆಯ ಎಲ್ಲ 700 ಶ್ಲೋೋಕಗಳನ್ನು ಸತತ ಮೂರುವರೆ ಗಂಟೆಗಳ ಕಾಲ ಶೃಂಗೇರಿ ಜಗದ್ಗುರುಗಳ ಎದುರು ಮಂಡಿಸಿ ನಗದು ಬಹುಮಾನ ಪಡೆದಿದ್ದಾಾರೆ. ಬಾಲಪ್ರತಿಭೆಯಾಗಿ ಹಾಡುಗಾರಿಕೆ, ಸಾಹಿತ್ಯದಲ್ಲಿ ಆಗಲೇ ಗುರುತಿಸಿಕೊಂಡು ಜನಮನಸೆಳೆದಿದ್ದರಿಂದ 2007ರಲ್ಲಿ ಅಸಾಧಾರಣ ಪ್ರತಿಭೆ ಎಂಬ ರಾಜ್ಯ ಪ್ರಶಸ್ತಿಿ ಪಡೆದಿದ್ದಾಾರೆ. ಮಕ್ಕಳ ಕಲ್ಯಾಾಣ ಇಲಾಖೆ ಸಹ ಇವರ ಬಾಲಸಾಹಿತ್ಯ  ಪ್ರತಿಭೆಗೆ ಮಾರು ಹೋಗಿ ನಗದು ಬಹುಮಾನ ಸಹಿತ ಪುರಸ್ಕರಿಸಿದೆ.
ಉಡುಪಿಯಲ್ಲಿ 2007ರಲ್ಲಿ ಜರುಗಿದ 74ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ವರಚಿತ ಕವನ ವಚನ ಮತ್ತು ಗಾಯನದಿಂದ ಎಲ್ಲರ ಮನಸೆಳೆದಿದ್ದಾಾರೆ. ಪುಟ್ಟ ಕವಯಿತ್ರಿಿ ಎಂಬ ಬಿರುದು ಅಂದೇ ಇವರಿಗೆ ದೊರೆಯಿತು. ಇದರ ನಂತರ ಕಥೆ, ಕವನ ಬರೆಯುವ ಹವ್ಯಾಾಸ ಇನ್ನಷ್ಡು ಅಧಿಕವಾಯಿತು. ಮಕ್ಕಳೇ ನೀವೂ ಕವಿಗಳಾಗಬಹುದು, ನನ್ನ ದಿನಚರಿ, ನಿಲ್ಲುವಾಸೆ ಎಂಬ ಸಣ್ಣಕಥಾ ಸಂಕಲನ ಪ್ರಕಟವಾಗಿವೆ. 2010 ಮತ್ತು 2011ರ ರಲ್ಲಿ ಜರುಗಿದ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಕೀರ್ತಿಯೂ ಇವರದ್ದು.
ಈಟಿವಿ ಕನ್ನಡ ವಾಹಿನಿಯ ಎದೆ ತುಂಬಿ ಹಾಡುವೆನು, ಝೀ ಟಿವಿಯ ಸರಿಗಮಪ, ಉದಯ ವಾಹಿನಿಯ ಹಾಡು ಬಾ ಕೋಗಿಲೆ, ಸುವರ್ಣ ವಾಹಿನಿಯ ಲಿಟ್‌ಲ್‌ ಸ್ಟಾಾರ್ ಸಿಂಗರ್, ಚಂದನದ ಮಧುರ ಮಧುರವೀ ಮಂಜುಳಗಾನದಲ್ಲಿ ಭಾಗವಹಿಸಿ ತಮ್ನ ಪ್ರತಿಭೆಗಾಗಿ ಎಸ್ ಪಿ ಬಾಲಸುಬ್ರಹ್ಮಣ್ಯಂ, ಹಂಸಲೇಖ, ರಾಜೇಶ್ ಕೃಷ್ಣನ್, ಮಂಜುಳಾ ಗುರುರಾಜ್ ಅವರ ಪ್ರಶಂಸೆಗೆ  ಪಾತ್ರರಾಗಿದ್ದಾಾರೆ. ಚೆಸ್‌ನಲ್ಲೂ ರಾಜ್ಯಮಟ್ಟದವರೆಗೆ ಪ್ರಾಾತಿನಿಧ್ಯ ನೀಡಿದ್ದಾಾರೆ.
 ತಂದೆ ಕೃಷಿಕ ಪ್ರಸನ್ನಕುಮಾರ್ ಮತ್ತು ತಾಯಿ ಜ್ಯೋೋತಿ ಇವರೇ ತನಗೆ ಗುರುಗಳು. ತನ್ನೆೆಲ್ಲ ಚಟುವಟಿಕೆಗಳಿಗೆ ಸದಾ ನೀರೆರೆದು ಪ್ರೋತ್ಸಾಾಹಿಸಿದ್ದರಿಂದಲೇ ಇಂದು ಈ ಮಟ್ಟಕ್ಕೇರಲು ಕಾರಣವಾಗಿದೆ. ಇಂದಿಗೂ ಸಹ ಅವರೇ ಮಾರ್ಗದರ್ಶಕರು ಎಂದು ಹೃದಯತುಂಬಿ ಹೇಳುತ್ತಾಾರೆ ಹೆಸರಿಗೆ ತಕ್ಕಂತೆ ಇರುವ ಪ್ರಗತಿ. ಇಂಜಿನಿಯರಿಂಗ್ ಓದುತ್ತಿಿದ್ದರೂ ಸಾಹಿತ್ಯ, ಸಂಗೀತದ ಗೀಳು ಮುಂದುವರೆಸಿಕೊಂಡು ಹೋಗುತ್ತಿಿರುವುದು ನಿಜಕ್ಕೂ ಶ್ಲಾಾಘನೀಯ.
17.3.18
.....................................

ಚಿತಾಗಾರ ಕಾಯಕದ 
ಅನಸೂಯಮ್ಮ




ಕೆಲಸ ಯಾವುದಾದರೂ ಆಗಲಿ, ಅದರಲ್ಲಿ ನಿಷ್ಠೆೆ, ಪ್ರಾಾಮಾಣಿಕತೆಯನ್ನು ತೋರಿದಲ್ಲಿ ನಾವು ಗುರುತಿಸಲ್ಪಡುತ್ತೇವೆ. ಅದು ಸಣ್ಣದಿರಲಿ, ದೊಡ್ಡದಿರಲಿ, ನಮ್ಮನ್ನು ಚೆನ್ನಾಾಗಿ ತೊಡಗಿಸಿಕೊಂಡಲ್ಲಿ ಎಲ್ಲರನ್ನೂ ಆಕರ್ಷಿಸುತ್ತೇವೆ. ಇಲ್ಲಿ ನಮ್ಮ ಗುಣ  ಮುಖ್ಯವಾಗುತ್ತದೆಯೇ ವಿನಾ ಕೆಲಸವಲ್ಲ. ಪ್ರಾಾಮಾಣಿಕತೆ ಇದ್ದರೆ ಎಲ್ಲಾಾದರೂ ಕೆಲಸ ಸಿಗುತ್ತದೆ.   
ಅನಸೂಯಮ್ಮ ಸುಮಾರು 405ರ ಹರಯದವರು. ಇವರಿಗೆ ಚಿತಾಗಾರವೇ ಆಶ್ರಯತಾಣ. ಇಲ್ಲಿಗೆ ಬರುವವರಲ್ಲೇ ಗೆಳೆತನ, ಸಂಬಂಧ ಕಾಣುುತ್ತಾಾರೆ. ಏಕೆಂದರೆ ಇವರಿಗೆ ಬೇರೆ ಯಾರೂ ಇಲ್ಲ, ಸ್ವಂತ ಸೂರೂ ಇಲ್ಲ. ಹೆಣ ಸುಟ್ಟು ಜೀವನ ಸಾಗಿಸುವುದೇ ಇವರ ಕಾಯಕ. ಎಂದಿಗೂ ಈ ಕೆಲಸ ಬಗ್ಗೆೆ ಅವರು ನೊಂದಿಲ್ಲ. ಅಥವಾ ಬೇಸರ ಮೂಡಿಸಿಲ್ಲ. ದುಡಿಮೆಗೆ ಯಾವ ಕೆಲಸವಾದರೇನು? ಇಲ್ಲಿಯೇ ತನ್ನ ಬದುಕನ್ನು ಕಟ್ಟಿಿಕೊಂಡಿದ್ದಾಾರೆ.
ಶಿವಮೊಗ್ಗದ ತುಂಗಾನದಿ ದಡದಲ್ಲಿರುವ ರೋಟರಿ ಚಿತಾಗಾರದಲ್ಲಿ ಬಂದ ಹೆಣಗಳಿಗೆ ಮುಕ್ತಿಿ ಕೊಡುವ ಕೆಲಸವನ್ನು 18 ವರ್ಷದಿಂದ ಇವರು ಮಾಡುತ್ತಿಿದ್ದಾಾರೆ. ಅವರಿಗೆ ಅದರಲ್ಲೇ ತೃಪ್ತಿಿ. ಏಕೆಂದರೆ ಯಾವುದೇ ತಾರತಮ್ಯವಿಲ್ಲದ ಸ್ಥಳ ಇದ್ದರೆ ಅದುವೇ ಸ್ಮಶಾನ. ಎಲ್ಲರೂ ಇಲ್ಲಿ ಸರಿಸಮಾನರು. ಎಷ್ಟೋೋ ಅನಾಥ ಶವಗಳು, ಎಷ್ಟೋೋ ಶ್ರೀಮಂತರ ಶವಗಳು ಬರುತ್ತವೆ. ಎಲ್ಲರನ್ನೂ ಸಮಾನವಾಗಿಯೇ ಅಂತ್ಯಕ್ರಿಿಯೆ ಮಡುತ್ತಾಾರೆ.
ಅನಸೂಯಮ್ಮ ಅವರ ಕುಟುಂಬದವರು ಮೂಲತಃ ಗೋಕರ್ಣದವರು. ಇವರು ಚಿಕ್ಕವರಿದ್ದಾಾಗಲೇ ಬಡತನದ ನಿಮಿತ್ತ ತಂದೆ- ತಾಯಿ ಶಿವಮೊಗ್ಗಕ್ಕೆೆ ಬಂದು ನೆಲೆಸಿದ್ದರು. ಶಿವಮೊಗ್ಗದವರೇ ಆದ ನಂತರ ಇಲ್ಲಿಯೇ ಮದುವೆಯನ್ನು ಮಾಡಿಕೊಂಡರು. ಆದರೆ ವೈವಾಹಿಕ ಜೀವನ ಸುಖಮಯವಾಗಿರಲಿಲ್ಲ. ಪತಿ ದುಶ್ಚಟದ ದಾಸ. ಇದರಿಂದಾಗಿ ಜೀವನ ನರಕಸದೃಶವಾಯಿತು. ಪತಿ ಮಾಡಿದ ಸಾಲ ತೀರಿಸುವುದೇ ಇವರ ಕೆಲಸವಾಯಿತು. ಈ ಮಧ್ಯೆೆ ತಂದೆ- ತಾಯಿ ಗತಿಸಿದ್ದರು. ಪತಿಯೊಂದಿಗೆ  ಸೇರಿ ಸ್ಮಶಾನದಲ್ಲಿ ಕೆಲಸ ಗಿಟ್ಟಿಿಸಿಕೊಂಡರು. ಕೆಲವೇ ವರ್ಷಗಳಲ್ಲಿ ಪತಿ ಇನ್ನಿಿಲ್ಲವಾದರು. ಮಕ್ಕಳ ಭಾಗ್ಯವೂ ಇವರಿಗಿಲ್ಲದ ಕಾರಣ ಅಲ್ಲಿಂದ ಶುರುವಾಯಿತು ಅವರ ಒಬ್ಬಂಟಿ ಜೀವನ. 
  ಹೋರಾಟದ ಮೂಲಕ ಬದುಕನ್ನು ಕಟ್ಟಿಿಕೊಳ್ಳುವಂತಹ ಸ್ಥಿಿತಿ ಎದುರಾಯಿತು. ಆದರೂ ಹಿಂದಡಿ ಇಡದೆ, ಎದೆಗುಂದದೆ ಕೆಲಸ ಮುಂದುವರೆಸಿದರು. ಏಕೆಂದರೆ, ಸಮಾಜದಲ್ಲಿ ಅವಮಾನ, ಆತ್ಮಸ್ಥೈರ್ಯ ಕುಗ್ಗಿಿಸುವವರ ಮಧ್ಯೆೆ ಇರುವುದಕ್ಕಿಿಂತ ಇಂತಹ ವೃತ್ತಿಿಯನ್ನು ಸವಾಲಾಗಿ ಸ್ವೀಕರಿಸಿ ಬದುಕುವುದೇ ಲೇಸೆಂದು ನಿರ್ಧರಿಸಿದರು. ಈಗ ಬರೋಬ್ಬರಿ 18 ವರ್ಷದ ಸೇವೆ ಅವರದ್ದಾಾಗಿದೆ.
  ಇಂತಹ ಪರಿಸ್ಥಿಿತಿಯಲ್ಲಿ ಬೆಂದು ಬೆಳೆದ ಅನಸೂಯಮ್ಮ, ಚಿತಾಗಾರದ ಜಾಗದಲ್ಲೇ ಇರುವ ಮನೆಯೊಂದರಲ್ಲಿ ವಾಸವಾಗಿದ್ದಾಾರೆ. ಹಗಲು-ರಾತ್ರಿಿ ಎನ್ನದೆ ಶವ ಬರುವುದರಿಂದ ಬೇಸರವಿಲ್ಲದೆ ಅಂತ್ಯಕ್ರಿಿಯೆ ನಡೆಸಿಕೊಡುತ್ತಾಾರೆ. ಇವರಿಗೆ ತಮ್ಮ ಕೆಲಸದ ಬಗ್ಗೆೆ ಬೇಸರವಿಲ್ಲ. ಆತ್ಮತೃಪ್ತಿಿ ಇಲ್ಲಿ ದೊರೆತಿದೆ. ಹೊಟ್ಟೆೆಪಾಡಿಗೆ ಉದ್ಯೋೋಗ ಬೇಕು. ಅದು ಯಾವುದಾದರೇನು ಎನ್ನುವ ಅವರು, ಈಗ ಚಿತಾಗಾರವನ್ನೇ ಪ್ರೀತಿಸುತ್ತಾಾರೆ. ಶವ ಸುಟ್ಟ ನಂತರ ಬರುವ ವಾಸನೆ, ಬೆಂಕಿಯ ಸೆಕೆಯನ್ನು ಸಹಿಸಿಕೊಂಡು ಅಭ್ಯಾಾಸವಾಗಿಬಿಟ್ಟಿಿದೆ. ಕೈಲಾದಷ್ಟು ದಿನ ಇಲ್ಲಿಯೇ ಕಾಲಕಳೆಯುತ್ತೇನೆ ಎನ್ನುತ್ತಾಾರೆ. 
ಇವರ ಮೂಲ ಊರಿನಲ್ಲಿ ಸಂಬಂಧಿಕರು ಇದ್ದಾಾರೆ. ಅನಸೂಯಮ್ಮ ವರ್ಚಕ್ಕೊೊಂದು- ಎರಡು ಬಾರಿ ಹೋಗಿ ಬರುತ್ತಾಾರೆ. ಆದರೆ ಅವರ್ಯಾಾರೂ ಇವರನ್ನು ಅಷ್ಟೊೊಂದು ಚೆನ್ನಾಾಗಿ ಕಾಣುತ್ತಿಿಲ್ಲ. ಏಕೆಂದರೆ ಇವರು ಮಾಡುವ ವೃತ್ತಿಿ ಅವಮಾನದ್ದು ಎಂದು ಅವರು ಭಾವಿಸಿದ್ದಾಾರಂತೆ.
ರೋಟರಿಯಿಂದ ತಿಂಗಳ ಸಂಬಳವಿದೆ. ಜೊತೆಗೆ ಹೆಣದ ಅಂತ್ಯಕ್ರಿಿಯೆಗೆ ಬರುವವರೂ ಸಹ ಮಾನವೀಯತೆಯಿಂದ ಅಲ್ಪಸ್ವಲ್ಪ  ಹಣ ಕೊಡುತ್ತಾಾರೆ. ಇದರಿಂದಲೇ ನೆಮ್ಮದಿಯ ಬದುಕು ಸಾಗಿಸುತ್ತಿಿದ್ದಾಾರೆ. ಇವರ ಕೆಲಸ-ಕಾರ್ಯ ಗಮನಿಸಿ ಅನೇಕ ಸಂಘ-ಸಂಸ್ಥೆೆಗಳು ಗೌರವಿಸಿವೆ. 
10.3. 18
       ....................................


ಅಪರೂಪದ ಸಾಧಕ
ತುಕಾರಾಮ ರಂಗಧೋಳ್


ಜೀವನದಲ್ಲಿ ಸಾಧಿಸಬೇಕೆಂಬ ಛಲ ಇದ್ದರೆ ಮನುಷ್ಯ ಏನನ್ನಾಾದರೂ ಸಾಧಿಸುತ್ತಾಾನೆ. ಇರುವ ಅವಕಾಶವನ್ನೇ ಬಳಸಿಕೊಂಡು ಅದರಲ್ಲಿ ಹೆಸರು ಗಳಿಸುತ್ತ್ತಾಾನೆ. ಈ ಮೂಲಕ ಪ್ರಸಿದ್ಧಿಿ ಹೊಂದುತ್ತಾಾನೆ. ನಗರದ  ತಬಲಾ ವಾದಕ ತುಕಾರಾಮ್ ರಂಗಧೋಳ್ ಇಂತಹ ಒಬ್ಬ ಅಪರೂಪದ ಸಾಧಕ.
ತುಕಾರಾಮ್  49 ವರ್ಷಗಳಿಂದ ತಬಲಾ ವಾದನದ ಮೂಲಕ ಸಂಗೀತ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದವರು. ನಗರದಲ್ಲಿ ಬಹುತೇಕ ಯಾವ ಕಲಾವಿದನೂ ಈ ರೀತಿ ಸಾಧನೆ ಮಾಡಿದ ಉದಾಹರಣೆ ಸಿಗಲಿಕ್ಕಿಿಲ್ಲ. ಇವರು ಸಾಥ್ ನೀಡದ ಹಿಂದೂಸ್ಥಾಾನಿ ಗಾಯಕರು ಮತ್ತು ಹಾಡುಗಾರರೇ ಇಲ್ಲ. ಜೊತೆಗೆ  ಇವರ ತಬಲಾ ವಾದನ ನಡೆಯದ  ರಾಜ್ಯದ ಉತ್ಸವ, ಸಂಗೀತ ಕಾರ್ಯಕ್ರಮವಿಲ್ಲ  ಎಂದರೆ ಅತಿಶಯೋಕ್ತಿಿ ಏನಲ್ಲ.  5  ದಶಕದಿಂದ ಸಂಗೀತ ಕ್ಷೇತ್ರಕ್ಕೆೆ ತಮ್ಮನ್ನು ಸಮರ್ಪಿಸಿಕೊಂಡ ಅಪರೂಪದ ಕಲಾವಿದ ಇವರು.
ದರ್ಜಿ ವೃತ್ತಿಿ ಕುಟುಂಬ ಇವರದ್ದಾಾದರೂ ಆ ವೃತ್ತಿಿಯಲ್ಲಿ ಅಷ್ಟೇನೂ ಯಶಸ್ಸು ಕಾಣದ್ದರಿಂದ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಲು ನಿರ್ಧರಿಸಿದರು. ಮನೆಯಲ್ಲಿ ನೆಲೆಸಿದ್ದ  ಸಂಗೀತ ಇವರನ್ನು ಆಕರ್ಷಿಸಿತು. ಇವರ ತಂದೆ ರಾಮಪ್ಪ ಭಜನಾ ಮಂಡಳಿಯನ್ನು ಸ್ಥಾಾಪಿಸಿ, ಅತ್ಯುತ್ತಮವಾಗಿ ಹಾಡುತ್ತಿಿದ್ದರು. ಜೊತೆಗೆ ಇವರ ಅಣ್ಣ  ಹನುಮಂತರಾವ್ ಉತ್ತಮ ತಬಲಾ ವಾದಕ. ಇವರಿಬ್ಬರ ನೆರಳಿನಲ್ಲಿ ಬೆಳೆದ ತುಕಾರಾಮ್ ಎರಡನ್ನೂ ಕಲಿತು ಈಗ ಬೇಡಿಕೆಯ ತಬಲಾ ವಾದಕರಾಗಿದ್ದಾಾರೆ. ಕಾರ್ಯಕ್ರಮ ಸಣ್ಣದಿರಲಿ, ದೊಡ್ಡದಿರಲಿ ತಮಗೆ ಆಹ್ವಾಾನ ಬಂದರೆ ನಿಶ್ಚಿಿತವಾಗಿಯೂ ತೆರಳಿ ತಬಲಾ ವಾದನ ಮಾಡುತ್ತಾಾರೆ.
ಪ್ರಚಾರ ಬಯಸದೆ, ತಾನಾಯಿತು, ತನ್ನ ಕೆಲಸವಾಯಿತು ಎಂದುಕೊಂಡ ಮೃದು ಸ್ವಭಾವದ, ಅಷ್ಟೇ ನಿಗರ್ವಿ  ತುಕಾರಾಮ್, ಪಿಯುಸಿ ವಿದ್ಯಾಾಭ್ಯಾಾಸದ ನಂತರ ಶಿಕ್ಷಣ ಕ್ಷೇತ್ರ ಬಿಟ್ಟು ತಬಲಾ ವಿದ್ವಾಾನ್ ಅಧ್ಯಯನ ಮಾಡಿ, ವಿಶಾರದ ಪರೀಕ್ಷೆ ಪಾಸು ಮಾಡಿದರು. ಆಕಾಶವಾಣಿಯ ಶಾಸ್ತ್ರೀಯ ಹಾಗೂ ಲಘುಸಂಗೀತ  ಪರೀಕ್ಷೆಯಲ್ಲಿ ಬಿ ಹೈಗ್ರೇಡ್‌ನಲ್ಲಿ ಉತ್ತೀರ್ಣರಾಗಿದ್ದಾಾರೆ. ಅಲ್ಲಿಂದ ತಬಲಾ ಕ್ಷೇತ್ರದಲ್ಲಿ ಪಾರಮ್ಯ ಆರಂಭಿಸಿ ಇಂದಿನವರೆಗೆ  ಹಿಂದಿರುಗಿ ನೋಡಿಲ್ಲ. ಇವರ ವಿದ್ಯಾಾಗುರುಗಳು ಪಂಡಿತ್ ಸಂಗಮೇಶ್ವ್ವರ ಗವಾಯಿಗಳು, ಶೇಷಾದ್ರಿಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳು. ಇಂತಹವರ ಗರಡಿಯಲ್ಲಿ ಬೆಳೆದ ಇವರು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಬಲಾ ಸಾಥ್ ನೀಡುವ ಮೂಲಕ ನಗರದ ಕೀರ್ತಿಯನ್ನು ಎತ್ತರಕ್ಕೇರಿಸಿದ್ದಾಾರೆ.
ಇವರು ಕಲಾವಿದರಾದ ಪುಟ್ಟರಾಜ ಗವಾಯಿಗಳು, ರಾಮರಾವ್ ನಾಯಕ್, ವಿನಾಯಕ ತೊರವಿ, ಇಂದೂಧರ ನಿರೋಡಿ, ಗಣಪತಿ ಭಟ್ಟ ಹಾಸಣಗಿ, ಶ್ಯಾಾಮಲಾ ಭಾವೆ, ಮಾಧವ ಗುಡಿ ಮೊದಲಾದವರ ಅಂತಾರಾಷ್ಟ್ರೀಯ ಕಲಾವಿದರಿಗೆ, ಸುಗಮ ಸಂಗೀತ ಕ್ಷೇತ್ರ್ರದಲ್ಲಿ ಸಿ. ಅಶ್ವಥ್, ಶಿವಮೊಗ್ಗ ಸುಬ್ಬಣ್ಣ, ಬಿ.ಕೆ. ಸುಮಿತ್ರಾಾ, ಪುತ್ತೂರು ನರಸಿಂಹ ನಾಯಕ್, ಬಿ. ಆರ್. ಛಾಯಾ, ಜಿ. ವಿ. ಅತ್ರಿಿ ಮೊದಲಾದವರಿಗೆ ಸಾಥ್ ನೀಡಿದ್ದಾಾರೆ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯವರು ಇವರ ಸಾಧನೆ ಗಮನಿಸಿ ಅಭಿನಂದಿಸಿದ್ದಾಾರೆ ವಿವಿಧ ಸಂಘ-ಸಂಸ್ಥೆೆಗಳಿಂದಲೂ ಸನ್ಮಾಾನಕ್ಕೆೆ ಭಾಜನರಾಗಿದ್ದಾಾರೆ. ಕರ್ನಾಟಕದ ಎಲ್ಲಾಾ ಆಕಾಶವಾಣಿ ಕೇಂದ್ರಗಳಲ್ಲೂ, ಖಾಗಿ ಟಿವಿ ಚಾನೆಲ್‌ಗಳಲ್ಲೂ, ದೂರದರ್ಶನದಲ್ಲೂ  ಇವರು ತಬಲಾ ಸಾಥ್ ನೀಡಿದ್ದಾಾರೆ.
ತಮ್ಮ  ಮನೆಯಲ್ಲೇ ಸೌಮ್ಯಾಾ ರೆಕಾರ್ಡಿಂಗ್ ಕೇಂದ್ರವನ್ನು ತೆರೆದು, ಹಲವಾರು ಧ್ವನಿಮುದ್ರಿಿಕೆಗಳನ್ನು ಬಿಡುಗಡೆ ಮಾಡಿದ್ದಾಾರೆ. ಈ ಪೈಕಿ ಮರಾಠಿ ಅಭಂಗ್ ಧ್ವನಿಮುದ್ರಿಿಕೆಗಳು ಇಂದಿಗೂ ಜನಪ್ರಿಿಯವಾಗಿವೆ. ಎಂಬಿಎ ಮುಗಿಸಿ ಸಂಗೀತ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿಿರುವ ಮಗ ವಿಠಲ್‌ರಾವ್ ಇದರ ಉಸ್ತುವಾರಿ ನೋಡಿಕೊಳ್ಳುತ್ತಿಿದ್ದಾಾನೆ.
.............................................................

ಯೋಗ ಸಾಧಕಿ
ಅನ್ನಪೂರ್ಣಾ
,,,,,,,,,,,,,,,,,,,,,,,
ನಾವು ಏನನ್ನು ಹೇಳುತ್ತೇವೆಯೋ ಅದನ್ನು ಜನರು ನಂಬುವುದಿಲ್ಲ. ಆದರೆ ಏನನ್ನು ಮಾಡಿತೋರಿಸುತ್ತೇವೆಯೋ ಅದನ್ನು ನಂಬುತ್ತಾಾರೆ.  ನಮ್ಮನ್ನು ನಂಬಿದಾಗ ನಾವು ಹೇಳಿದ್ದನ್ನೆೆಲ್ಲಾಾ ಕೇಳಿಸಿಕೊಳ್ಳುತ್ತಾಾರೆ, ಆನಂತರ ಅದನ್ನು ಸಾಧಿಸಲು ಮುಂದಾಗುತ್ತಾಾರೆ. ಈ ರೀತಿ ನಂಬಿಕೆ ಮೂಲಕವೇ ಸಾವಿರಾರು ಜನರಲ್ಲಿ ಪತಂಜಲಿ ಯೋಗದ ಅರಿವನ್ನು ಮೂಡಿಸಿ, ಹಬ್ಬಿಿಸಿದವರು ಭದ್ರಾಾವತಿಯ ಅನ್ನಪೂರ್ಣಾ.
ಅನ್ನಪೂರ್ಣಾ ಯೋಗ ಸಾಧಕಿ. ಜೊತೆಗ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪನ್ನು ಮೂಢಿಸಿದವರು. 16 ವರ್ಷದಿಂದ ಯೋಗವನ್ನು ಕಲಿಸುತ್ತಿಿದ್ದಾಾರೆ. ತಮ್ಮ ಅನಾರೋಗ್ಯದ ನಿವಾರಣೆಗಾಗಿ ಯೋಗ ಮಾಡಿದರು. ಆಗ ಯಾರಿಂದಲೂ ಕಲಿಯಲಿಲ್ಲ. ಬದಲಾಗಿ ಟಿವಿಯಲ್ಲಿ ಬರುತ್ತಿಿದ್ದುದನ್ನೇ ನೋಡಿ ಕಲಿತರು. ಅದರಿಂದ ಗುಣಮುಖರಾದ ಆನಂತರ ಯೋಗದ ಬಗ್ಗೆೆ ಇತರರಿಗೆ ತಿಳಿಗೇಳಿ ಅದರ ಲಾಭ ಸಿಗಲು ಸ್ವತಃ ತಾವೇ ಯತ್ನಿಿಸಿದರು. ಇದಕ್ಕಾಾಗಿ ಹರಿದ್ವಾಾರಕ್ಕೆೆ ತೆರಳಿ ಅಲ್ಲಿ ಪಂತಜಲಿ ಯೋಗ ಕಲಿಕೆಯ ತರಬೇತಿ ಪಡೆದು ಬಂದು, ಇಂದು ಸಾವಿರಾರು ಜನರಿಗೆ ಶಿಬಿರ ನಡೆಸಿ ಮಾರ್ಗದರ್ಶಿಯಾಗಿದ್ದಾಾರೆ.
ಸದ್ಯ ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆೆಗೆ ಪತಂಜಲಿ ಯೋಗ ರಾಜ್ಯ ಸಮಿತಿಯ ಉಸ್ತುವಾರಿಯಾಗಿ ಕೆಲಸ ಮಾಡುತ್ತಿಿದ್ದಾಾರೆ. ಮೂಲತಃ ರಿಪ್ಪನ್‌ಪೇಟೆ ಸಮೀಪದ ಕಲ್ಲೂರಿನವರಾದ ಇವರು ಓದಿದ್ದು ತೀರ್ಥಹಳ್ಳಿಿಯಲ್ಲಿ. ಕಲ್ಲೂರಿನಲ್ಲಿ ಕೀರ್ತಿ ಮಹಿಳಾ ಮಂಡಳಿಯನ್ನು ಹುಟ್ಟು ಹಾಕಿ ಆ ಮೂಲಕ ವಯಸ್ಕರ ಶಿಕ್ಷಣ ಜಾಗೃತಿ ಮೂಡಿಸಿದರು. ಯುವಜನ ಮೇಳದ ವಿವಿಧ ನೃತ್ಯ-ಗೀತೆ ಸ್ಪರ್ಧೆಯಲ್ಲಿ ತಮ್ಮ ಮಹಿಳಾ ಮಂಡಳಿ ಬಹುಮಾನ ಗಿಟ್ಟಿಿಸುವಂತೆ ಮಾಡಿದರು. ವಿವಾಹವಾಗಿ ಭದ್ರಾಾವತಿಗೆ ತೆರಳಿದ ನಂತರವೂ ಅಲ್ಲಿಯ ಹಳೆನಗರದಲ್ಲಿ ಮಹಿಳಾ ಸೇವಾ ಸಮಾಜ ಬೆಳೆಸಿದರು. ಅದರ ಮೂಲಕ ಮಹಿಳೆಯರನ್ನು ಸಂಘಟಿಸಿ ವಿವಿಧ ಕಾರ್ಯಕ್ರಮ ಆರಂಭಿಸಿದರು. ಬ್ಯುಟಿಶಿಯನ್, ಟೇಲರಿಂಗ್ ಮೊದಲಾದ ತರಬೇತಿಯನ್ನು ಉಚಿತವಾಗಿ ಕೊಡಿಸಿದರು. ಈ ರೀತಿ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯಕ್ತಿಿಯಾಗಿ ಯೋಗವನ್ನೂ ಬೆಳೆಸಿದರು.
ಸ್ವಂತ ಸಿದ್ದ ಉಡುಪು ತಯಾರಿಕಾ ಸಂಸ್ಥೆೆಯನ್ಬು ನಡೆಸುತ್ತ ಮಹಿಳಾ ಉದ್ಯಮಿಯಾಗಿಯೂ ಹೊರಹೊಮ್ಮಿಿದರು. ಇಷ್ಟೆೆಲ್ಲಾಾ ಒತ್ತಡದ ಕೆಲಸದ ಮಧ್ಯೆೆ ಮನೆಯ ಕೆಲಸ ನೋಡಿಕೊಳ್ಳುವುದು, ವಿವಿಧ ಗ್ರಾಾಮಗಳಿಗೆ ತೆರಳಿ ಯೋಗ ಕಲಿಸುವುದನ್ನ್ನೂ ಬಿಡಲಿಲ್ಲ. ಪ್ರತಿದಿನ ಬೆಳಿಗ್ಗೆೆ 4 ರಿಂದ 6 ಗಂಟೆಯವರೆಗೆ ತಾಲೂಕಿನ ನೂರಾರು ಗ್ರಾಾಮಗಳಿಗೆ ಹೋಗಿ ಯೋಗ ಕಲಿಸಿ ಬಂದಿದ್ದಾಾರೆ. ಈಗ ಆ ಹಳ್ಳಿಿಗಳಲ್ಲಿ ಉಪ ಶಿಕ್ಷಕರನ್ನು ನೇಮಿಸಿದ್ದಾಾರೆ. ಅವಕಾಶ ದೊರೆತಾಗೆಲ್ಲ ತೆರಳಿ ಪರಿಶೀಲನೆ ನಡೆಸುತ್ತಾಾರೆ.  ನಮ್ಮ ಆಹಾರ ಪದ್ದತಿ ಮತ್ತು ಜೀವನಶೈಲಿಯಿಂದ ಇಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿಿದ್ದೇವೆ ಎನ್ನುವ ಅವರು, ಸುದರ್ಶನ ಕ್ರಿಿಯೆಯನ್ನೂ ಕಲಿತಿದ್ದಾಾರೆ. ತಾಲೂಕಿನಲ್ಲಿ ಸುಮಾರು 400 ಯೋಗ ಶಿಬಿರ ಇಂದಿಗೂ ನಡೆಯುವಂತೆ ಮಾಡಿದ ಕೀರ್ತಿ ಅವರದ್ದು. ಇದಕ್ಕೆೆ ಯಾವುದೇ ರೀತಿಯಲ್ಲೂ ಹಣ ಪಡೆಯದೆ ಉಚಿತವಾಗಿ ಕಲಿಸಿದ್ದು ಇನ್ನೂ ಮಹತ್ವದ ವಿಷಯ.
ಸುಮಾರು 6 ಮದ್ಯವರ್ಜನ ಶಿಬಿರವನ್ನೂ ಭದ್ರಾಾವತಿಯಲ್ಲಿ ನಡೆಸಿದ್ದಾಾರೆ. ಇದರಿಂದ ಹಲವು ಕುಟುಂಬಗಳು ಇಂದು ನೆಮ್ಮದಿಯಾಗಿ ಬದುಕುವಂತೆ ಮಾಡಿದ್ದಾಾರೆ. ಮಹಿಳಾ ಸಮಾಜ, ಭೂಮಿಕಾ ಸಂಸ್ಥೆೆ, ಒಕ್ಕಲಿಗರ ಸಂಘ, ಜಾನಪದ ಪರಿಷತ್  ಮೊದಲಾದ ಸಂಘಟನೆಗಳಲ್ಲಿ ಸಕ್ರಿಿಯರಾಗಿದ್ದಾಾರೆ. 2015ರಲ್ಲಿ ಭದ್ರಾಾವತಿಯಲ್ಲಿ ರಾಜ್ಯ ಮಹಿಳಾ ಉದ್ಯಮಿಗಳ ಸಮಾವೇಶವನ್ನು ಯಶಸ್ವಿಿಯಾಗಿ ನಡೆಸಿದ್ದಾಾರೆ. ಇವರ ಸಾಧನೆ ಗಮನಿಸಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಗೌರವಿಸಿದೆ. ಮಹಿಳಾ ದಿನಾಚರಣೆಯಂದು ಮತ್ತು ಮಹಿಳಾ ಉದ್ಯಮಿಗಳ ಸಮಾವೇಶದಲ್ಲೂ ಸನ್ಮಾಾನಕ್ಕೆೆ ಭಾಜನರಾಗಿದ್ದಾಾರೆ.
ಗೃಹಿಣಿಯಾಗಿ, ಮಹಿಳಾ ಉದ್ಯಮಿಯಾಗಿ, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾಾ, ಸಾವಿರಾರು ಜನರಿಗೆ ಯೋಗವನ್ನು ಉಚಿತವಾಗಿ ಕಲಿಸಿದ ಅನ್ನಪೂರ್ಣಾ ಅಪೂರ್ವ ಯೋಗ ಸಾಧಕಿ ಎನ್ನಬಹುದು. 
17.2.18
   ..........................
ಹಿಂದೂಸ್ಥಾಾನಿ ಪ್ರತಿಭೆ.
ನಿಶಾದ್ ಹರ್ಲಾಪುರ್ 

ಹಿಂದೂಸ್ಥಾಾನಿ  ಸಂಗೀತದಲ್ಲಿ ಶಿವಮೊಗ್ಗದ  ಯುವ ಗಾಯಕ ನಿಶಾದ್ ಹರ್ಲಾಪುರ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿಿರುವ ಪ್ರತಿಭೆ. ಇತ್ತೀಚಿನ ಯುವ ಸಂಗೀತಗಾರರಲ್ಲಿ ಅದರಲ್ಲೂ ಪದ್ಮಭೂಷಣ ಪುಟ್ಟರಾಜ ಗವಾಯಿಗಳ ಶಿಷ್ಯ ಪರಂಪರೆಯಲ್ಲೇ ಬೆಳೆದು ಬಂದ  ಇವರು, ಗ್ವಾಾಲಿಯರ್ ಘರಾಣಾದಲ್ಲಿ ಶ್ರೇಷ್ಠ ಗಾಯಕರಾಗಿದ್ದಾಾರೆ.
ನಿಶಾದ್‌ಗೆ ತಂದೆ ಹುಮಾಯುನ್ ಹರ್ಲಾಪುರ್ ಅವರೇ ಗುರು. ಚಿಕ್ಕಂದಿನಿಂದಲೂ ಸಂಗೀತದ ಗೀಳು ಹತ್ತಿಿಸಿಕೊಂಡಿದ್ದರಿಂದ 6 ವರ್ಷದ ನಂತರ ತಂದೆಯೇ ಗುರುವಾದರು. 8ನೆಯ ವರ್ಷದಲ್ಲಿ ಧಾರವಾಡದಲ್ಲಿ ಪ್ರಪ್ರಥಮ ಸಂಗೀತ ಕಛೇರಿ ನಡೆಸಿದರು. ಸಂಗೀತವನ್ನು ಕಲಿಯುತ್ತಲೇ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಪ್ರಶಸ್ತಿಿ-ಪುರಸ್ಕಾಾರಗಳಿಗೆ ಭಾಜನರಾಗುತ್ತಾಾ ಸಾಗುತ್ತಿಿದ್ದಾಾರೆ. ಇವರ ಪ್ರತಿಭೆಯನ್ನು ಅಂತಾರಾಷ್ಟ್ರೀಯ ಹಿಂದೂಸ್ಥಾಾನಿ ದಿಗ್ಗಜರೇ ನೋಡಿ ಬೆರಗಾಗಿದ್ದಾಾರೆ.
 ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಟಾಟಾ ಕ್ಯಾಾಪಿಟಲ್ ಹಾಗೂ ಆರ್ಟ್ ಬಂಧು ಸಂಸ್ಥೆೆಗಳ ಸಹಯೋಗದಲ್ಲಿ ದೇಶದ ಶ್ರೇಷ್ಠ ಬಾನ್ಸುರಿ ಹಾಗೂ ಕೊಳಲು ವಾದಕ ಪ್ರವೀಣ್ ಗೋಡ್ಖಿಿಂಡಿ ಅವರ ’ಸಂಜೋಗ್ ಚಾರಿಟೇಬಲ್ ಟ್ರಸ್‌ಟ್‌’ ಆಯೋಜಿಸಿದ್ದ ’ಸ್ವರಶ್ರೀ’ ಹಿಂದೂಸ್ಥಾಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಆಯ್ಕೆೆಯಾಗಿ ’ಸ್ವರಶ್ರೀ’ ಪುರಸ್ಕಾಾರಕ್ಕೆೆ ಭಾಜನರಾಗಿದ್ದಾಾರೆ. ಫೆಬ್ರವರಿ 10 ಮತ್ತು 11 ರಂದು ಬೆಂಗಳೂರಿನ ಜ್ಞಾಾನಜ್ಯೋೋತಿ ಸಭಾಂಗಣದಲ್ಲಿ ನಡೆಯುವ ದಕ್ಷಿಣ ಬೃಂದಾವನ್ ಸಂಗೀತ ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ಸಿತಾರ್ ವಾದಕ ಉಸ್ತಾಾದ್ ಶಾಹಿದ್ ಪರ್ವೇಜ್ ಖಾನ್ ಮತ್ತು ದೇಶದ ಶ್ರೇಷ್ಠ ತಬಲಾ ವಾದಕ ಯೋಗೀಶ್ ಸಂಶಿ ಇವರಿಂದ ಸ್ವರಶ್ರೀ ಪುರಸ್ಕಾಾರವನ್ನು ಸ್ವೀಕರಿಸಲಿದ್ದಾಾರೆ.
 ನಿಶಾದ್  ಹಿಂದೂಸ್ಥಾಾನಿ ಸಂಗೀತ ಮತ್ತು ಲಘುಸಂಗಿತದಲ್ಲಿ ಆಕಾಶವಾಣಿಯ ಬಿ ಗ್ರೇಡ್ ಕಲಾವಿದರಾಗಿದ್ದಾಾರೆ. ಸಾಕಷ್ಟು ಹಿರಿಯ ಗಾಯಕರೊಡನೆ ಸಹಗಾಯನ ನಡೆಸಿದ್ದಾಾರೆ. ಈವರೆಗೆ 500ಕ್ಕೂ ಹೆಚ್ಚು ಸಂಗೀತ ಕಛೇರಿ ನಡೆಸಿಕೊಟ್ಟಿಿದ್ದಾಾರೆ. 2016ರ ಜನವರಿಯಲ್ಲಿ ಗುಜರಾತ್‌ನ ಭರೂಚ್‌ನಲ್ಲಿ ನಡೆದ ಅಂತಃಸ್ವರ ಸಂಗೀತ ಸಮಾರೋಹದಲ್ಲಿ ಅಂತಾರಾಷ್ಟ್ರೀಯ ಗಾಯಕರಾದ ರಾಜನ್ ಮಿಸ್ರಾಾ, ಸಾಜನ್ ಮಿಶ್ರಾಾ ಅವರೆದುರು ಸಂಗೀತ ಕಾರ್ಯಕ್ರಮ ನೀಡಿ ಅವರಿಂದ ಅಂತಃಸ್ವರ ಸಂಗೀತ ಪ್ರಬುದ್ಧ ಪ್ರಶಸ್ತಿಿಯನ್ನು ಪಡೆದುಕೊಂಡಿದ್ದಾಾರೆ.
ಪ್ರಸ್ತುತ ಜ್ಯೂನಿಯರ್ ಮತ್ತು ಸೀನಿಯರ್ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವ ನಿಶಾದ್, ಈಗ ವಿದ್ವತ್ ಪರೀಕ್ಷೆಗೆ ಸಜ್ಜಾಾಗುತ್ತಿಿದ್ದಾಾರೆ. ಶಿಕ್ಷಣ ಇಲಾಖೆ ನಡೆಸುವ ಪ್ರತಿಭಾ ಕಾರಂಜಿಯಲ್ಲಿ ಹಿಂದೂಸ್ಥಾಾನಿ ಶಾಸ್ತ್ರೀಯ ಸಂಗೀತ,  ಭಾವಗೀತೆ, ಭಕ್ತಿಿಗೀತೆಗಳಲ್ಲಿ ಪ್ರಥಮ ಸ್ಥಾಾನ ಗಳಿಸಿದ್ದಾಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾಪ್ರತಿಭೋತ್ಸವದಲ್ಲಿ ಹಿಂದೂಸ್ಥಾಾನಿ ಸಂಗೀತದಲ್ಲಿ ರಾಜ್ಯಕ್ಕೆೆ ಮೊದಲಿಗರಾಗಿದ್ದಾಾರೆ. ಕರ್ನಾಟಕ ಸಂಗೀತ ಅಕಾಡೆಮಿಯಿಂದ 2014-15ರ ಸಾಲಿನ ಶಿಷ್ಯವೇತನಕ್ಕೆೆ ಇವರು ಭಾಜನರಾಗಿದ್ದಾಾರೆ.
ಕ್ಲಾಾಸಿಕಲ್ ವಾಯ್‌ಸ್‌ ಆಫ್ ಬೆಂಗಳೂರು ಪ್ರಶಸ್ತಿಿ ಮತ್ತು ಲಖ್ನೋೋದಲ್ಲಿ ನಡೆದ ಅಂತಾರಾಷ್ಟ್ರೀಯ ಸಂಗೀತ ಸ್ಪರ್ಧೆಯಲ್ಲಿ ಸಂಗೀತ ಮಿಲನ್ ಪ್ರಶಸ್ತಿಿ ಪಡೆದಿದ್ದಾಾರೆ. ಮೊನ್ನೆೆಯಷ್ಟೇ ಸ್ವರಶ್ರೀ ಪುರಸ್ಕಾಾರಕ್ಕೆೆ ಆಯ್ಕೆೆಯಾಗಿದ್ದಾಾರೆ.
ಇವರು ದೇಶದ ಖ್ಯಾಾತ ಗಾಯಕರಾದ ವೆಂಕಟೇಶ್‌ಕುಮಾರ್, ಸೋಮನಾಥ ಮರಡೂರು, ಇಂದೂಧರ ನಿರೋಡಿ, ಜಯತೀರ್ಥ ಮೇವುಂಡಿ, ಕುಮಾರದಾಸ್, ಉಸ್ತಾಾದ್ ಹುಮಾಯುನ್ ಹರ್ಲಾಪುರ್ ಇವರೊಡನೆ ಗಾನದ ಜೊತೆಗೆ ಸಹಗಾಯನ ನೀಡಿ ಪ್ರಶಂಸೆ ಪಡೆದಿದ್ದಾಾರೆ. 
10.2.18
,,,,,,,,,,,,,,,,,,,,,,,

ಸಂಗೀತವೇ ಜೀವನ
ಶೃಂಗೇರಿ ನಾಗರಾಜ್

   ಸಂಗೀತಕ್ಕಾಾಗಿ ಜೀವನವನ್ನು "ುೀಸಲಿಟ್ಟವರು "ರಳ. ಕೇವಲ ಸಂಗೀತವನ್ನು ಮಾತ್ರ ಹೇಳಿಕೊಡದೆ ""ಧ ಪಕ್ಕವಾದ್ಯ ಮತ್ತು ದೇವರನಾಮಗಳನ್ನು ಕಲಿಸುವವರು ಇನ್ನೂ "ರಳ. ಇದಕ್ಕಾಾಗಿ ಸ್ವಂತ "ದ್ಯಾಾಲಯವನ್ನು ಗುರುಗುಹ ಹೆಸರಿನಲ್ಲಿ ಶಿವಮೊಗ್ಗದಲ್ಲಿ ಆರಂಭಿಸಿ ವೈ"ಧ್ಯ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿಿರುವವರು "ದ್ವಾಾನ್ ಶೃಂಗೇರಿ ನಾಗರಾಜ್ ಅವರು.
ನಾಗರಾಜ್ ಕರ್ನಾಟಕ ಸಂಗೀತದ ಕಂಪನ್ನು ನಗರದಲ್ಲಿ ಹರಡುತ್ತಿಿದ್ದಾಾರೆ. ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡ ಶಿವಮೊಗ್ಗದಲ್ಲಿ ಯುವ ಸಂಗೀತ ಪ್ರತಿಭೆಗಳನ್ನು ಅತಿ ಹೆಚ್ಚು ಸಂಖ್ಯೆೆಯಲ್ಲಿ ಬೆಳೆಸಿದ ಕೀರ್ತಿ ಇವರದ್ದು. ಅನೇಕ ಉತ್ತಮ ಕಲಾ"ದರನ್ನು ರೂಪಿಸಿರುವುದಲ್ಲದೆ, ತಮ್ಮ "ದ್ಯಾಾಲಯವನ್ನು 41 ವರ್ಷಗಳಿಂದ ನಡೆಸಿಕೊಂಡು ಬರುತ್ತಿಿದ್ದಾಾರೆ. ನಗರದ ಪ್ರತಿ ಮನೆಯಲ್ಲಿ ಒಬ್ಬರಾದರೂ ಸಂಗೀತಬಲ್ಲವರು ಅಥವಾ ಸಂಗೀತದ ಅಭಿರುಚಿಯವರು ಇರಬೇಕು ಎನ್ನುವುದು ಅವರ ಧ್ಯೇಯ. ಇದಕ್ಕಾಾಗಿ  ಪ್ರಚಾರ ಬಯಸದೆ ತಮ್ಮ ಪಾಡಿಗೆ ತಾವು ಕೆಲಸ ಆರಂಭಿಸಿದ ಇವರಲ್ಲಿ ಇಂದಿಗೂ ನೂರಾರು "ದ್ಯಾಾರ್ಥಿಗಳು ಅಭ್ಯಸಿಸುತ್ತಿಿದ್ದಾಾರೆ.
ನಾಗರಾಜ್ ಅವರ ತಂದೆ "ದ್ವಾಾನ್ ಶಂಕರ ಭಟ್ಟ. ತಾು ಸರಸ್ವತಮ್ಮ. ಮಾತಾಪಿತರೇ ಸಂಗೀತ ಶಿಕ್ಷಕರಾಗಿದ್ದರಿಂದ ಉತ್ತಮ ವಾತಾವರಣದಲ್ಲಿ ಕಲಿಯಲು ಅವಕಾಶವಾುತು. ಆನಂತರ "ದ್ವಾಾನ್ ಎಚ್. ರಾಮನಾಥನ್, "ದ್ವಾಾನ್ ಎಚ್.ಆರ್. ವೆಂಕಟೇಶ್ ಪ್ರಸನ್ನ ಅವರಲ್ಲಿ ಅಭ್ಯಾಾಸ ಮಾಡಿದರು. ಕರ್ನಾಟಕ ಸಂಗೀತ ಪರೀಕ್ಷೆಯ "ದ್ವತ್ ಪರೀಕ್ಷೆಯಲ್ಲಿ ಎರಡನೆಯ ರ್ಯಾಾಂಕ್‌ನೊಂದಿಗೆ ತೇರ್ಗಡೆಯಾಗಿ, ಸಂಗೀತ ವೃತ್ತಿಿ ಆರಂಭಿಸಿದರು.
ಶಿವಮೊಗ್ಗದ ಬಸವೇಶ್ವರನಗರದಲ್ಲಿ ಸಂಗೀತ ಶಾಲೆ ನಡೆಸುತ್ತಿಿರುವ ನಾಗರಾಜ್, ರಾಜ್ಯ ಮಟ್ಟದ ಹಲವು ಸಂಗೀತ, ದಾಸರ ಪದ, ಭಜನೆ ಮೊದಲಾದ ಸಮ್ಮೇಳನಗಳನ್ನು, ಸ್ಪರ್ಧೆಗಳನ್ನು  ನಡೆಸಿದ್ದಾಾರೆ. ಬರುವ ಫೆಬ್ರುವರಿಯಲ್ಲಿ  ರಾಜ್ಯ ಮಟ್ಟದ ದಾಸರ ಭಜನೆ ಪದಗಳ ಸ್ಪರ್ಧೆ ನಗರದಲ್ಲಿ ಸೌರಭ ಸಂಸ್ಥೆುಂದ ನಡೆಯಲಿದ್ದು, ಅದರ ಯಶಸ್ಸಿಿನ ಮುಂದಾಳತ್ವ ವ"ಸಿದ್ದಾಾರೆ.
ತಮ್ಮ ಸಂಗೀತ ಶಾಲೆಯಲ್ಲಿ ಮಕ್ಕಳಿಗೆ ದೇವರ ನಾಮಗಳನ್ನು ಉಚಿತವಾಗಿ ಹೇಳಿಕೊಡುವ ಮೂಲಕ ಯುವ ಕಲಾ"ದರಲ್ಲಿ ಸಂಸ್ಕಾಾರದ ಪ್ರಜ್ಞೆ ಬೆಳೆಸುತ್ತಿಿದ್ದಾಾರೆ. ಜೊತೆಗೆ  ನವರತ್ನ ಮಾಲಿಕೆಗಳು, ನಾರದ ಪಂಚರತ್ನ, ದೀಕ್ಷಿತರ ನೋಟುಸ್ವರಗಳು, ನವಾವರಣ ಕೃತಿ ಬಗ್ಗೆೆ ಕಾರ್ಯಾಗಾರ ನಡೆಸುತ್ತಿಿದ್ದಾಾರೆ. ಸುಮಾರು 10 ಸಾ"ರಕ್ಕೂ ಹೆಚ್ಚು ಮ"ಳೆಯರಿಗೆ ದೇವರನಾಮ ಶಿಬಿರಗಳನ್ನು ನಗರದಾದ್ಯಂತ ಏರ್ಪಡಿಸಿ ಕಲಿಸಿದ ಗುರು ನಾಗರಾಜ್.   
19998ರಲ್ಲಿ ಶಿವಮೊಗ್ಗದಲ್ಲಿ 5 ದಿನಗಳ ಸಂಗೀತ ಸಮ್ಮೇಳನ ನಡೆಸಿದ ಕೀರ್ತಿ ಇವರದ್ದು. ಈಗ ಗುರುಗುಹ ಶಾಲೆಯಲ್ಲಿ ಕರ್ನಾಟಕ ಸಂಗೀತದ ಜೊತೆಗೆ ಶಾಸ್ತ್ರೀಯ, ಲಘುಶಾಸ್ತ್ರೀಯ ಕಲಿಕೆಯನ್ನೂ ಮಾಡಲಾಗುತ್ತಿಿದೆ. ಅನೇಕ ದಾಸರ, ಸಂಗೀತ ಪಿತಾಮಹರ ಸ್ಮರಣಾ ಕಾರ್ಯಕ್ರಮವನ್ನು ನಡೆಸುತ್ತಾಾ ಆ ನೆನೆಪಿನಲ್ಲಿ ಸಂಗೀತೋತ್ಸವ, ಭಜನಾ ಸ್ಪರ್ಧೆಯನ್ನು ಮುಂದುವರೆಸಿಕೊಂಡು ಬಂದಿದ್ದಾಾರೆ. ಪುರಂದರ, ತ್ಯಾಾಗರಾಜ ಮತ್ತು ಮುತ್ತುಸ್ವಾಾ"ು ದೀಕ್ಷಿತರ ಆರಾಧನಾ ಮಹೋತ್ಸವವನ್ನು ಪ್ರತಿವರ್ಷ ಆಚರಿಸುತ್ತಾಾ, ಇದರಲ್ಲಿ ಹೆಸರಾಂತ ಕಲಾ"ದರನ್ನು ಕರೆುಸಿ ಸಂಗೀತ ಕಛೇರಿ ಕೊಡಿಸುತ್ತಿಿದ್ದಾಾರೆ.
ತಮ್ಮದೇ ಆದ ಪಠ್ಯಕ್ರಮದಲ್ಲಿ ಬೋಧಿನಿ, ಸುಬೋಧಿನಿ, ಪ್ರಬೋಧಿನಿ ಮತ್ತು ಪರಿಬೋಧಿನಿ ಸಂಗೀತ ಪರೀಕ್ಷೆಗಳನ್ನು ಆರು ತಿಂಗಳಿಗೊಮ್ಮೆೆ ನಡೆಸುತ್ತಿಿದ್ದಾಾರೆ. ಇವರು ಹೊರತಂದ ಸತ್ಯಸಾುಬಾಬಾ ಮತ್ತು ದಾಸರ ಕುರಿತಾದ ಧ್ವನಿಸುರಳಿ ಪ್ರಸಿದ್ಧವಾಗಿವೆ. ನಿಗರ್" ಮತ್ತು ಸಂಕೋಚ ಸ್ವಭಾವದವರಾದ ನಾಗರಾಜ್, ಆಕಾಶವಾಣಿ ಮತ್ತು ದೂರದರ್ಶನ ಕಲಾ"ದರೂ ಹೌದು. ಇವರಲ್ಲಿ ಕಲಿತ ಅನೇಕ "ದ್ಯಾಾರ್ಥಿಗಳು   ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಉತ್ತಮ ದರ್ಜೆ ಕಲಾ"ದರಾಗಿ ಗುರುತಿಸಿಕೊಂಡಿದ್ದಾಾರೆ.
ನಗರದಲ್ಲಿ ಸಂಗೀತ ಜ್ಯೋೋತಿಯನ್ನು ಹಚ್ಚಿಿ, ಬೆಳಗುವಂತೆ ಮಾಡುತ್ತಿಿರುವ ನಾಗರಾಜ್, ಓರ್ವ ಸಾಧಕ "ದ್ವಾಾಂಸ, ಸಜ್ಜನ. ಸರಳತೆುಂದಲೇ ಹೆಸರುವಾಸಿ.
27.1.18
...................................
.............
ಸಂಗೀತ ಮಾಂತ್ರಿಿಕೆ
ವಸುಧಾ ಶರ್ಮಾ


  ಸಂಗೀತವನ್ನು ಆರಾಧಿಸುವ ನಾವು ಅದಕ್ಕೆೆ ಉನ್ನತ ಸ್ಥಾಾನವನ್ನು ಕೊಟ್ಟಿಿದ್ದೇವೆ. ಇದರಿಂದಾಗಿಯೇ ಇಂದು ಪ್ರತಿ ಪಟ್ಟಣದಲ್ಲೂ ಸಂಗೀತ ಶಾಲೆಗಳು ಕಂಡುಬರುತ್ತಿಿದ್ದು, ಅಲ್ಲಿಗೆ ಬರುವ ಮಕ್ಕಳ ಸಂಖ್ಯೆೆಯೂ ಹೆಚ್ಚುತ್ತಿಿದೆ.
ಶಿವಮೊಗ್ಗ ಜಿಲ್ಲೆೆಯಲ್ಲಿ ವಿದುಷಿ ವಸುಧಾ ಶರ್ಮಾ ಹೆಸರು ಕೇಳದವರಿಲ್ಲ. ಸಾಗರದಲ್ಲಿ ನಾದಸುಧಾ ಪ್ರತಿಷ್ಠಾಾನ ಆರಂಭಿಸಿ, ಅದರಡಿಯಲ್ಲಿ ಸದ್ಗುರು ಹಿಂದೂಸ್ಥಾಾನಿ ಶಾಸ್ತ್ರೀಯ ಸಂಗೀತ ವಿದ್ಯಾಾಲಯವನ್ನು ಚಾಮರಾಜಪೇಟೆಯಲ್ಲಿ ಸ್ಥಾಾಪಿಸಿದ್ದಾಾರೆ. ಹಿಂದೂಸ್ಥಾಾನಿ ಶಾಸ್ತ್ರೀಯ ಸಂಗೀತ ಮತ್ತು ಲಘು ಸಂಗೀತ ತರಗತಿಯನ್ನು ಇಲ್ಲಿ ಅವರು ನೀಡುತ್ತಿಿದ್ದಾಾರೆ. ಗ್ರಾಾಮಾಂತರ ಭಾಗದಲ್ಲಿರುವ ಸಂಗೀತ ಪ್ರತಿಭೆಗಳನ್ನು ವಯೋ ಭೇದವಿಲ್ಲದೆ ಬೆಳಕಿಗೆ ತರುವುದು ಅವರ ಪ್ರಮುಖ ಉದ್ದೇಶ. ಇದನ್ನು ಈಡೇರಿಸುವಲ್ಲಿ ಸತತ ಪ್ರಯತ್ನ ನಡೆಸುತ್ತಿಿರುವ ವಸುಧಾ, ಪ್ರತಿ ವರ್ಷ ನಡೆಸುವ ವಾರ್ಷಿಕ ಸಂಗೀತ ಮಹೋತ್ಸವ ಪ್ರಸಿದ್ಧವಾದುದು.
ವಸುಧಾ ಶಿರಸಿ ತಾಲೂಕಿನ ಗೋಳಗೋಡು ಗ್ರಾಾಮದವರು. ಇವರ ಕುಟುಂಬವೇ ಸಂಗೀತದ್ದು. ತಂದೆ ಗಜಾನನ ಹೆಗಡೆ ಹಾಡುಗಾರ ಮತ್ತು ಹಾರ್ಮೋನಿಯಂ ವಾದಕರಾದರೆ, ತಾಯಿ ಮೀನಾಕ್ಷಿ  ದೇವರ ನಾಮಗಳನ್ನು ನಾದಮಯವಾಗಿ ಹಾಡುವವರು. ಸಹೋದರಿ ಸಹ ಭರತನಾಟ್ಯ ಕಲಾವಿದೆ. ಇಂತಹ ವಾತಾವರಣದಲ್ಲಿ ಬೆಳೆದ ವಸುಧಾ,  ಪ್ರಾಾಥಮಿಕ ಸಂಗೀತ ಅಭ್ಯಾಾಸವನ್ನು ಶಿರಸಿಯಲ್ಲಿ ಪಂಡಿತ್ ಪ್ರಭಾಕರ್ ಭಟ್ಟ ಕೆರೆಕೈ ಇವರಲ್ಲಿ ಪಡೆದರು. ಅತ್ಯುತ್ತಮ ಹಾಡುಗಾರ್ತಿಯಾಗಿ ಬೆಳೆದರು. ಇನ್ನೊೊಂದೆಡೆ ತಬಲಾ ವಾದನವನ್ನು ಪಂಡಿತ್ ಮೋಹನ್ ಹೆಗಡೆ ಹುಣಸೆಕೊಪ್ಪ ಅವರ ಗರಡಿಯಲ್ಲಿ ಕಲಿತರು. ಹಾರ್ಮೋನಿಯಂನ್ನೂ ಸಹ ತಂದೆಯ ಮಾರ್ಗದರ್ಶನದಲ್ಲಿ ಕಲಿತು ಅನೇಕ ಹಾಡುಗಳನ್ನು ರಚಿಸಿದ್ದಾಾರೆ. ಇವರ ಕಂಠಸಿರಿ ಅದ್ಭುತವಾದದ್ದು. ಪ್ರತಿಧ್ವನಿಸುವ ಆಲಾಪ್‌ಗಳು ಕೇಳಲು ಇನ್ನಷ್ಟು ಸುಂದರವಾಗಿವೆ.
ಸದ್ಯ ಆಗ್ರಾಾ ಘರಾಣಾ ವಿದ್ವಾಾಂಸರಾಗಿರುವ ಪಂಡಿತ್ ಇಂದುಧರ್ ನಿರೋಡಿ ಅವರ ಶಿಷ್ಯೆೆಯಾಗಿರುವ ವಸುಧಾ, ದೇಶದ ಹಲವಡೆ ತಮ್ಮ ಸಂಗೀತ ಕಾಂ ರ್ಕ್ರಮಗಳನ್ನು ನಡೆಸಿಕೊಡುತ್ತಿಿದ್ದಾಾರೆ. ವಸುಧಾ ಅವರ ಪತಿ ಹಳೆಇಕ್ಕೇರಿಯ ನರಸಿಂಹಮೂರ್ತಿ ಅವರೂ ಸಹ ಮೃದಂಗವಾದಕರಾಗಿದ್ದಾಾರೆ. ಅತ್ಯುತ್ತಮ ಸಂಗೀತಜ್ಞೆಯಾಗಿದ್ದಲ್ಲದೆ, ಮಕ್ಕಳಿಗೂ ಅದೇ ರೀತಿಯ ಸಂಗೀತ ಶಿಕ್ಷಣವನ್ನು ಕಲಿಸುತ್ತಿಿದ್ದಾಾರೆ. ಇದರಿಂದ ಮಕ್ಕಳ ನೆಚ್ಚಿಿನ ಸಂಗೀತ ಶಿಕ್ಷಕಿಯಾಗಿದ್ದಾಾರೆ. ಸುಮಾರು 2 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ 21 ವರ್ಷಗಳಿಂದ ಶಿಕ್ಷಣ ನೀಡಿದ್ದಾಾರೆ.
ಕರ್ನಾಟಕ ಪ್ರಾಾಥಮಿಕ ಶಿಕ್ಷಣ ಮಂಡಳಿಯವರು ನಡೆಸುವ ಜೂನಿಯರ್, ಸೀನಿಯರ್ ಮತ್ತು ವಿದ್ವತ್, ವಿಶಾರದ ಮೊದಲಾದ ಪರೀಕ್ಷೆಗಳನ್ನು ತಮ್ಮ ಕೇಂದ್ರದ ಮೂಲಕ ನಡೆಸುತ್ತಿಿದ್ದಾಾರೆ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯಿಂದ ಪ್ರತಿಭಾನ್ವಿಿತರಿಗೆ ವಿದ್ಯಾಾರ್ಥಿ ವೇತನವನ್ನು ಕೊಡಿಸುತ್ತಿಿದ್ದಾಾರೆ. ಸಂಗೀತ ಶಿಬಿರ, ಪ್ರಾಾತ್ಯಕ್ಷಿಕೆಗಳ ನಡೆಸುತ್ತಿಿದ್ದಾಾರೆ. 
ಸಹ್ಯಾಾದ್ರಿಿ, ಶರಾವತಿ, ಇಕ್ಕೇರಿ, ಕರಾವಳಿ ಮೊದಲಾದ ಉತ್ಸವ, ಅನನ್ಯ ಸಂಗೀತೋತ್ಸವ, ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡೆಮಿ ಪ್ರಾಾಯೋಜಿತ   ಸಮಾರಂಭಗಳಲ್ಲಿ, ವಾದಿರಾಜ ಸಂಗೀತೋತ್ಸವದಲ್ಲಿ ಕಾರ್ಯಕ್ರಮ ನೀಡಿದ್ದಾಾರೆ. ಮಲೆನಾಡು ಸಿರಿ, ಗಾಯನ ಗಂಗಾ, ಹವ್ಯಕಶ್ರೀ ಸಂಗೀತ ಅಮೃತ ವರ್ಷಿಣಿ, ಕಲಾ ಕೀರ್ತನಾ ಮೊದಲಾದ ಪ್ರಶಸ್ತಿಿಗಳು ಅವರ ಮುಡಿಗೇರಿವೆ.
ವಸುಧಾ ಸಂಗೀತದ ಮತ್ತು ಭಜನೆಯ ಹಲವು ಸಿಡಿಗಳನ್ನು ರಚಿಸಿದ್ದಾಾರೆ. ಇದರಲ್ಲಿ ಶ್ರೀ ದಕ್ಷಿಣಾಮೂರ್ತಿ ಸ್ತೋೋತ್ರಂ, ಮಾಧುರಿ ಪ್ರಸಿದ್ಧವಾದವು. ಇತ್ತೀಚೆಗೆ ಶಂಕರ ಸ್ತೋೋತ್ರ ಸ್ವರಮಂಜರಿ ಕುರಿತಾದ ‘ಬಂದುಶ್’ ಎಂಬ ಹಿಂದೂಸ್ಥಾಾನಿ ಶಾಸ್ತ್ರೀಯ ಸಂಗೀತ ಕೃತಿಯನ್ನು ಹೊರತಂದಿದ್ದಾಾರೆ. ಇದರಲ್ಲಿ ಸ್ತೋೋತ್ರಗಳನ್ನು ಹಿಂದೂಸ್ಥಾಾನಿಯ 30 ರಾಗಗಳಲ್ಲಿ ಅಳವಡಿಸಿರುವುದು ವಿಶೇಷವಾಗಿದೆ. ಇದನ್ನೇ ಆಡಿಯೊ ರೂಪದಲ್ಲಿ ಅವರು ಹಾಡಿದ್ದು ಅದರ ಸಿಡಿ ಬಿಡುಗಡೆ ಮಾಡಿದ್ದಾಾರೆ. ಈ ಸಿಡಿ ಮತ್ತು ಪುಸ್ತಕ ಆನ್‌ಲೈನ್‌ನಲ್ಲಿ ಲಭ್ಯವಿದೆ. ಹಿಂದೂಸ್ಥಾಾನಿಯಲ್ಲಿ ಸ್ವಂತ ಛಾಪನ್ನು ಮೂಡಿಸಿದ ಕಲಾವಿದೆ ಇವರು.
±published on 20- Jan 18
 ................................... 
ಗೋ ಗ್ರೀನ್, ಸೇವ್ ವಾಟರ್‌ನ
 ಸಮೀನಾ ಕೌಸರ್



ಗೋ ಗ್ರೀನ್, ಸೇವ್ ಎನ್ವಿಿರಾನ್‌ಮೆಂಟ್, ಸೇವ್ ವಾಟರ್
ಇದು ಎಲ್ಲೆೆಡೆ ಕೇಳಿಬರುತ್ತಿಿರುವ ಘೋಷವಾಕ್ಯ. ರಾಷ್ಟ್ರೀಯ ಭದ್ರತೆಯಷ್ಟೇ ಪ್ರಾಾಮುಖ್ಯ ಇಂದು ಪರಿಸರ ರಕ್ಷಣೆಗೆ ಬಂದಿದೆ. ಬಹುತೇಕ ಶಾಲಾ- ಕಾಲೇಜುಗಳು ಪರಿಸರ ಕಾರ್ಯಕ್ರಮಗಳನ್ನು ಕೇವಲ ಹೆಸರಿಗಷ್ಟೇ ನಡೆಸುತ್ತಿಿವೆ. ಇದನ್ನು ಒಂದು ಜವಾಬ್ದಾಾರಿಯುತ ಅಥವಾ ಯುವಪೀಳಿಗೆಯ ಹೊಣೆ ಎಂಬ ದೃಷ್ಟಿಿಯಲ್ಲಿ ನಡೆಸುವವರು ಬೆರಳೆಣಿಕೆಯಷ್ಟು ಮಾತ್ರ. ಆದರೆ, ನಗರದ ಬೈಪಾಸ್ ರಸ್ತೆೆಯಲ್ಲಿರುವ ಅಂಬರ್ ವ್ಯಾಾಲಿ ಶಾಲೆಯ ಮಕ್ಕಳು ಮಾತ್ರ ಇದನ್ನು ವರ್ಷವಿಡಿ ಆಚರಿಸುತ್ತ, ಒಂದು ಆಂದೋಲನದ ರೂಪ ನೀಡಿದ್ದಾಾರೆ. ಇದರ ರೂವಾರಿ ಶಾಲೆಯ ಸಂಸ್ಥಾಾಪಕಿ ಸಮೀನಾ ಕೌಸರ್.
ಪರಿಸರದದ ಬಗ್ಗೆೆ ಅಪಾರ ಕಾಳಜಿ ಹೊಂದಿರುವ ಸಮೀನಾ, ಮಕ್ಕಳಲ್ಲಿ ಈ ಬಗ್ಗೆೆ ಜಾಗೃತಿ ಮೂಡಿಸಿ, ಆ ಮೂಲಕ ಬದಲಾವಣೆ ತರಲು ಮುಂದಡಿ ಇಟ್ಟಿಿದ್ದಾಾರೆ. ಇದಕ್ಕಾಾಗಿ ಹತ್ತಾಾರು ವೈವಿಧ್ಯ ಕಾರ್ಯಕ್ರಮ ರೂಪಿಸಿದ್ದಾಾರೆ. ಶಾಲೆಯ ತುಂಬಾ ಹಸಿರಿಗೆ ಆದ್ಯತೆ ಕೊಟ್ಟಿಿದ್ದಾಾರೆ. ಬದಲಾವಣೆ ಯಾವುದಾದರೂ ಕ್ಷೇತ್ರದಲ್ಲಿ ಮೊದಲು ನಡೆಯಬೇಕೆಂದರೆ  ಅದಕ್ಕೆೆ ಜಾಗೃತಿ ಅವಶ್ಯ ಎನ್ನುವುದನ್ನು ಅರಿತಿರುವ ಅವರು, ಜಲ ಸಂರಕ್ಷಣೆ, ಪರಿಸರ ರಕ್ಷಣೆ ಮತ್ತು ಹಸಿರು ಕಾಪಾಡುವುದರ ಸಂಬಂಧ ಸದಾ ಒಂದಿಲ್ಲೊೊಂದು ಚಟುವಟಿಕೆ ನಡೆಸುತ್ತಲೇ ಇದ್ದಾಾರೆ. ವಿಶ್ವ ಪರಿಸರ ದಿನದಂದು ಸುಮಾರು 300ರಷು ಸಸಿಗಳನ್ನು ನಗರದ ವಿವಿಧ ಭಾಗಗಳಲ್ಲಿ ನೆಟ್ಟಿಿದ್ದಾಾರೆ. ಸೆಪ್ಟೆೆಂಬರ್‌ನಲ್ಲಿ ರ್ಯಾಾಲಿ ಫಾರ್ ರಿವರ್ ನಡೆಸಿದ್ದಾಾರೆ. ಇದೇ ಫೆ. 24ರಂದು ತುಂಗಾ ದಡದಲ್ಲಿ ಜಲಮೂಲ ರಕ್ಷಿಸುವ ವಿಶೇಷ ಕಾರ್ಯಕ್ರಮ ಕ್ಕೆೆ ಸಿದ್ದತೆ ನಡೆಸಿದ್ದಾಾರೆ.
ವಿವಿಧ ಶಾಲೆ, ತಾಲೂಕು, ಜಿಲ್ಲಾಾ ಮಟ್ಟದ ಶಿಕ್ಷಕರು, ಮುಖ್ಯಶಿಕ್ಷಕಕರಿಗಾಗಿ ಪರಿಸರ ಸಂಬಂಧಿತ ಸ್ಪರ್ಧೆ ನಡೆಸಿ ಅವರಲ್ಲಿಯೂ ತಮ್ಮ ಶಾಲೆಯ ಮಾದರಿಯನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡಿದ್ದಾಾರೆ. ಇದಕ್ಕೆೆ ಮನಸೋತು ಹಲವು ಶಿಕ್ಷಕರು ಪರಿಸರ ರಕ್ಷಣೆ ನಮ್ಮ ಹೊಣೆ ಎನ್ನುವಂತೆ ಹೆಜ್ಜೆೆ ಇಟ್ಟಿಿರುವುದು ಇವರ ಕಾಳಜಿಗೆ ಸಿಕ್ಕ ಒಂದು ಪ್ರತಿಫಲವಾಗಿದೆ.
ಸಮೀನಾ ಅವರು ಶಿಕ್ಷಕರು ಮತ್ತು ಮಕ್ಕಳನ್ನು ಸೇರಿಸಿಕೊಂಡು ಉತ್ಸಾಾಹದಿಂದ ಸಂಘಟಿತವಾಗಿ, ಯೋಜನಾಬದ್ಧವಾಗಿ ದೂರದೃಷ್ಟಿಿಯಿಂದ ಈ ಕೆಲಸ ಮಾಡುತ್ತಿಿದ್ದಾಾರೆ. ಸ್ವತಃ ತಾವೇ ನೇತೃತ್ವ ವಹಿಸುತ್ತಿಿರುವುದು ಇತರರಿಗೂ ಮಾರ್ಗದರ್ಶಿಯಾಗಿದೆ. ಪರಿಸರ ಕ್ಷೇತ್ರಕ್ಕೆೆ ಸಂಬಂಧಿಸಿದಂತೆ ಅವರ ಶಾಲೆಯ ಮಕ್ಕಳು ನಗರದ ಹಲವು ಬಡಾವಣೆಗಳಲ್ಲಿ ಜಾಥಾ, ಜಾಗೃತಿ, ಬೀದಿ ನಾಟಕ ಮೊದಲಾದವುಗಳನ್ನು ಪ್ರದರ್ಶಿಸಿ ಸಾರ್ವಜನಿಕ ಪ್ರಶಂಸೆಗೆ ಒಳಗಾಗಿದ್ದಾಾರೆ.
ಮಕ್ಕಳಲ್ಲಿ ಪ್ರಜ್ಞೆ ಮೂಡಿದರೆ ಮಾತ್ರ ಅದು ಹೊಸ ಬದಲಾವಣೆಗೆ ನಾಂದಿಯಾಗಲಿದೆ. ಪರಿಸರವನ್ನು ನಾವು ಮುಂದಿನ ಪೀಳಿಗೆಗೆ ಉಳಿಸುವುದು ಅನಿವಾರ್ಯವಾಗಿದೆ. ಇದು ತಮ್ಮಲ್ಲಿ ಹೊಸ ಚಿಂತನೆ ಹುಟ್ಟುಹಾಕಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವಂತೆ ಮಾಡಿದೆ. ಎಳೆವಯಸ್ಸಿಿನಲ್ಲೇ ಅದರಿಂದಾಗುವ ಲಾಭ-ನಷ್ಟಗಳ ಅರಿವಿರಬೇಕು. ಮಕ್ಕಳ ಮನಸ್ಸಿಿನಲ್ಲಿ ಅದು ನಾಟುವಂತೆ ಪ್ರಯೋಗಾತ್ಮಕವಾಗಿದ್ದರೆ ಇನ್ನಷ್ಟು ವಿಶಾಲವಾಗಿ ಅದು ಬೆಳೆಯಲು ಸಾಧ್ಯ. ಈ ನಿಟ್ಟಿಿನಲ್ಲಿ ಪರಿಸರ ಕಾಳಜಿಯನ್ನು ಬೆಳೆಸುತ್ತಿಿದ್ದೇನೆ ಎನ್ನುತ್ತಾಾರೆ ಸಮೀನಾ. 
  ಶಾಂತಿನಗರದಲ್ಲಿ ಸಹರಾ ಎಜುಕೇಶನ್ ಟ್ರಸ್‌ಟ್‌ ಸಹ ನಡೆಸುತ್ತಿಿರುವ ಇವರು, ಕೇವಲ ಪರಿಸರಾತ್ಮಕವಾಗಿ ಮಾತ್ರವಲ್ಲ, ಸಾಮಾಜಿಕ ಕಾಳಜಿಯನ್ನು ಅಷ್ಟೇ ಹೊಂದಿದ್ದಾಾರೆ. 1300 ಬಡಹೆಣ್ಣುಮಕ್ಕಳಿಗೆ ಹೊಲಿಗೆ, 720 ಜನರಿಗೆ ಕಂಪ್ಯೂಟರ್ ಮತ್ತು 62 ಜನರಿಗೆ ಬ್ಯುಟಿಶಿಯನ್ ತರಬೇತಿಯನ್ನು ಉಚಿತವಾಗಿ ನೀಡಿ ಅವರು ಸ್ವಾಾವಲಂಬಿ ಜೀವನ ನಡೆಸಲು ಕಾರಣರಾಗಿದ್ದಾಾರೆ. ಇನ್ನೊೊಂದು ವಿಶೇಷವೆಂದರೆ, ಆಂಗ್ಲ ಮಾಧ್ಯಮ ಶಾಲೆ ಇವರದ್ದಾಾದರೂ ಇಲ್ಲಿ ಯಾವುದೇ ಡೊನೇಶನ್ ಇಲ್ಲ. ಬಡ ಮಕ್ಕಳಿಗೆ, ದಿಕ್ಕಿಿಲ್ಲದವರೇ ಇಲ್ಲಿ ಹೆಚ್ಚಿಿನ ವಿದ್ಯಾಾರ್ಥಿಗಳು. ಇಂತಹ ಸಾಮಾಜಿಕ ಸೇವೆ ಮಾಡುತ್ತಿಿರುವವರಿಗೆ ಸಾರ್ವಜನಿಕರು, ಸಂಘ-ಸಂಸ್ಥೆೆಗಳು ಬೆಂಬಲ ನೀಡಬೇಕಿದೆ.
published on 13.1.18
......................................
 ಎವರೆಸ್‌ಟ್‌ ಧೀರೆ
ಮಾನಸಾ


ಈ ಜಗತ್ತಿಿನಲ್ಲಿ ಮಹಾನ್ ವ್ಯಕ್ತಿಿಗಳಾಗಿ ಯಾರೂ ಹುಟ್ಟಿಿಲ್ಲ. ಮಹಾನ್ ಸವಾಲುಗಳನ್ನು  ಎದುರಿಸಿ ಅವರೆಲ್ಲ ಮಹಾನ್ ವ್ಯಕ್ತಿಿಗಳಾಗಿದ್ದಾಾರೆ ಎಂಬ ಮಾತಿದೆ. ಸಕಾರಾತ್ಮಕವಾಗಿ ನಾವು ಯೋಚಿಸಿದಲ್ಲಿ ಬಲಿಷ್ಠ ವಿಚಾರಗಳು ನಮ್ಮೆೆದುರು ಬರುತ್ತವೆ. ಇದರಿಂದ ಅಸಾಧ್ಯ ಎಂದುಕೊಂಡಿದ್ದನ್ನೆೆಲ್ಲ ಸಾಧಿಸಲು ಶಕ್ಯವಾಗುತ್ತದೆ.
ಸಾಗರದ ಯುವತಿ ಮಾನಸಾ ಅಸಾಧ್ಯ ಎನ್ನುವ ಸಾಧನೆ ಮಾಡಿದ್ದಾಾಳೆ. ಅದೆಂದರೆ, ಚಳಿಗಾಲದಲ್ಲಿ ಅಂದರೆ ಮೈನಸ್ 26 ಡಿಗ್ರಿಿಯಲ್ಲಿ ಯಶಸ್ವಿಿಯಾಗಿ ಮೌಂಟ್ ಎವರೆಸ್‌ಟ್‌ ಬೇಸ್ ಕ್ಯಾಾಂಪ್ 18500 ಅಡಿ ತಲುಪಿ ಬಂದಿದ್ದಾಾಳೆ. ಈ ಸಾಹಸ ಮಾಡಿದ  ಭಾರತದ ಏಕೈಕ ಕುಮಾರಿಯಾಗಿ ಎಲ್ಲರ ಪ್ರಶಂಸೆಗೊಳಗಾಗಿದ್ದಾಾಳೆ.
ನೇಪಾಳದ ಅಡ್ವೆೆಂಚರ್ ನೇಚರ್ ಕ್ಯಾಾಂಪ್ ಏರ್ಪಡಿಸಿದ್ದ ಮೌಂಟ್ ಎವರೆಸ್‌ಟ್‌ ಬೇಸ್ ಕ್ಯಾಾಂಪ್ ಚಾರಣಕ್ಕೆೆ ಆಯ್ಕೆೆಯಾಗಿದ್ದ ಮಾನಸಾ ಡಿ. 17ರಂದು ತೆರಳಿ 30ಕ್ಕೆೆ ವಾಪಸಾಗಿದ್ದಾಾಳೆ. ಡಿ. 25 ರ ಕ್ರಿಿಸ್‌ಮಸ್  ದಿನ  28 ಕಿ.ಮೀ. ಚಲಿಸಿ ಬೇಸ್ ಕ್ಯಾಾಂಪ್ ಸಮಿಟ್ ಮಾಡಿ ಸುಮಾರು 18500 ಅಡಿ ಕ್ರಮಿಸಿ ದೇಶದ ತ್ರಿಿವರ್ಣ ಧ್ವಜವನ್ನು ಹಾರಿಸಿರುತ್ತಾಾರೆ. ಈ ಬಾರಿ ಭಾರತದಿಂದ ಚಳಿಗಾಲದ ಈ ಚಾರಣದಲ್ಲಿ ಭಾಗವಹಿಸಿ ಯಶಸ್ವಿಿಯಾದ ಯುವತಿ  ಮಾನಸಾ ಮಾತ್ರ ಎನ್ನುವುದು ವಿಶೇಷ.
ಅವಳ ಚಾರಣಕ್ಕೆೆ ಸಹಕಾರ ನೀಡಿದವರು ಬೆಂಗಳೂರಿನ ಕೇಂದ್ರ ಕಚೇರಿಯ ಟಿ.ವಿ.9 ಆಡಳಿತ ಮಂಡಳಿ, ಜೋಷಿ ಫೌಂಡೇಷನಿನ ದಿನೇಶ್‌ಕುಮಾರ್ ಎನ್. ಜೋಷಿ ಮತ್ತು ಕುಟುಂಬ ವರ್ಗ ಹಾಗೂ ಶಿವಮೊಗ್ಗ ನಗರ ಶಾಸಕ ಶಾಸಕ ಕೆ.ಬಿ. ಪ್ರಸನ್ನಕುಮಾರ್. ಇವಳು ಯೂತ್ ಹಾಸ್ಟೆೆಲ್‌ಸ್‌ ಅಸೋಸಿಯೇಷನ್ ಆಫ್ ಇಂಡಿಯಾ, ಶಿವಮೊಗ್ಗ ತರುಣೋದಯ ಘಟಕದ ಆಜೀವ ಸದಸ್ಯಳಾಗಿದ್ದಾಾಳೆ. ಶಿವಮೊಗ್ಗದ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿಯು ಇವಳ ಸಾಧನೆಯನ್ನು ಮೆಚ್ಚಿಿ ಆಜೀವ ಸದಸ್ಯತ್ವವನ್ನು ನೀಡಿ ಅಭಿನಂದಿಸಿದೆ.
ಸಾಗರದ ಮ.ಸ. ನಂಜುಂಡಸ್ವಾಾಮಿ ಮತ್ತು ಜ್ಯೋೋತಿ ಅವರ ಪುತ್ರಿಿಯಾದ ಮಾನಸಾ, ಎಲೆಕ್ಟ್ರಾಾನಿಕ್ ಮೀಡಿಯ ಜರ್ನಲಿಸಂನಲ್ಲಿ ಪದವಿ ಪಡೆದು ಪ್ರಸ್ತುತ ಬೆಂಗಳೂರಿನ ಟಿ.ವಿ.9ನಲ್ಲಿ ಕಾರ್ಯನಿರ್ವಹಿಸುತ್ತಿಿದ್ದಾಾಳೆ. ಸಮಾಜಸೆವೆಯಲ್ಲಿ ಅಪಾರ ಆಸಕ್ತಿಿ ಇರುವ ಮನಸಾ, ಸಾಗರದ ವಿಕಲಚೇತನ ಮಕ್ಕಳ ಶಾಲೆಯ ಚಿತ್ರಣವನ್ನು ಚಿತ್ರೀಕರಿಸಿ ವಾಟ್‌ಸ್‌‌ಅಪ್ ಮೂಲಕ ಹಾಗೂ ಯೂಟ್ಯೂಬ್ ಮೂಲಕ ಸಹಾಯಹಸ್ತ ನೀಡುವಂತೆ ಕೋರಲು ಬಳಸಿಕೊಂಡಳು. ತನ್ನ ಸ್ವಂತ ಹಣವನ್ನು ಈ ಚಿತ್ರೀಕರಣಕ್ಕೆೆ ಬಳಸಿದಳು. ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗುತ್ತಿಿದ್ದಂತೆ ದೇಶಾದ್ಯಂತ ಅನೇಕ ದಾನಿಗಳು ಈ ಶಾಲೆಯ ಮಕ್ಕಳ ನೆರವಿಗೆ ಧಾವಿಸಿದರು. ಕೆಲವೇ ದಿನದಲ್ಲಿ ರೂ. 70 ಸಾವಿರ ರೂ. ನೆರವು ಶಾಲೆಗೆ ದೊರಕಿಸಿಕೊಟ್ಟಿಿದ್ದಾಾಳೆ.
 2014ರಲ್ಲಿ ಕರ್ನಾಟಕದಿಂದ ಅತಿ ಚಿಕ್ಕವಯಸ್ಸಿಿನಲ್ಲೇ ಅತ್ಯಂತ ಕಠಿಣವಾದ ಕೈಲಾಸ ಮಾನಸ ಸರೋವರ ಯಾತ್ರೆೆಯನ್ನು ಮಾನಸಾ ತನ್ನ ತಾಯಿ ಜ್ಯೋೋತಿಯೊಂದಿಗೆ ಯಶ್ವಸಿಯಾಗಿ ಪೂರೈಸಿ ಅದರ ಅನುಭವವನ್ನು "ಮಾನಸ ಯಾತ್ರೆೆ" ಎಂಬ ಪುಸ್ತಕವನ್ನು ಸಹ ಹೊರತಂದಿದ್ದಾಾಳೆ. 2015ರಲ್ಲಿ ಅಮರನಾಥ ಮತ್ತು ವೈಷ್ಣೋೋದೇವಿ ಯಾತ್ರೆೆಯನ್ನು ಸಹ ಪೂರೈಸಿ ಅದರ ಅನುಭವವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾಾಳೆ.
ಮಾನಸಾ ಓರ್ವ ಸಂಗೀತಾರಾಧಾಕಿ, ಬಾಲ್ಯದಲ್ಲಿ ಸಾಗರದ ಸುಕನ್ಯಾಾ ಜಿ. ಭಟ್ ಅವರಲ್ಲಿ ಸುಗಮ ಸಂಗೀತ ಅಭ್ಯಾಾಸ ಮಾಡಿ, ಆನಂತರ ಗುರುಗುಹದ ಶೃಂಗೇರಿ ಹೆಚ್.ಎಸ್. ನಾಗರಾಜ್ ಅವರಲ್ಲಿಯೂ ಹಾಗೂ ಅವರ ಶಿಷ್ಯೆೆಯಾದ ಅಮೃತಾ ಅವರಲ್ಲಿ ಕರ್ನಾಟಕ ಸಂಗೀತವನ್ನು ಕಲಿತು, ಸೀನಿಯರ್ ಅಭ್ಯಾಾಸವನ್ನು ಮುಗಿಸಿ, ವಿದ್ವತ್ ಅಧ್ಯಯನವನ್ನು ನಡೆಸುತ್ತಿಿದ್ದಾಾಳೆ.
ಇವಳ ಸಾಧನೆಯನ್ನು ಗುರುತಿಸಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ "ಯಂಗ್ ಅಚೀವರ್ಸ್ 2016" ಅವಾರ್ಡನ್ನು ವಿಪ್ರ ವನಿತಾ ವೇದಿಕೆಯು ನೀಡಿ ಗೌರವಿಸಿದೆ. ಸಾಧಿಸುವ ಛಲವಿದ್ದರೆ ಸಮಾಜದ ಸಾವಿರ ದಾರಿಗಳು ಇವೆ. ಯುವ ಮನಸ್ಸು ಸಾಧನೆಗೆ ತೊಡಗಲು ಮಾನಸ ಮಾದರಿಯಲ್ಲವೆ?
published on  6. 1. 18
...........................