Friday 28 December 2018

"ುಸೆಸ್ ಚಾರ್"ುಂಗ್
ಬಬಿತಾ ಪ್ರಕಾಶ್


ಪ್ರತಿಭೆ ಮನುಷ್ಯನಿಗೆ ಹಲವು ಬಾಗಿಲನ್ನು ತೆರೆದುಕೊಡುತ್ತದೆ. ""ಧ ಸ್ಥಳಗಳಿಗೆ ಕರೆದೊಯ್ಯುತ್ತದೆ. ಅನೇಕ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತದೆ. ಹತ್ತಾಾರು ಬಗೆಯ ಜನರೊಂದಿಗೆ ಸಂಪರ್ಕ ಕಲ್ಪಿಿಸುತ್ತದೆ. ಈ ಮೂಲಕ ಆತ ಪ್ರಸಿದ್ಧನಾಗಲು, ಆತನ ಬಹುಮುಖ ಶಕ್ತಿಿ ಪ್ರಕಟವಾಗಲು ಅನುವು ಮಾಡಿಕೊಡುತ್ತದೆ.
ಸೌಂದರ್ಯ ಸ್ಪರ್ಧೆಯಲ್ಲಿ ಜುಸುವ ಮೂಲಕ ಜಿಲ್ಲೆೆಯ ಹೆಸರು "ುನುಗುವಂತೆ ಕೆಲವು ಮ"ಳೆಯರು ಮಾಡಿದ್ದಾಾರೆ. ಅಂತಹವರ ಸಾಲಿಗೆ ಹೊಸ ಸೇರ್ಪಡೆ ಬಬಿತಾ ಪ್ರಕಾಶ್. ಸೌಂದರ್ಯ ಸ್ಪರ್ಧೆ ಎಂದರೆ ದೇಹ ಪ್ರದರ್ಶನ ಎಂಬ ಭಾವನೆ ಇದೆ. ಆಂತರಿಕ ಸೌಂದರ್ಯವು ಇದರಲ್ಲಿ ಒಳಗೊಂಡಿರುತ್ತದೆ. ಇಲ್ಲಿ ಸ್ಪರ್ಧಿಯ  ಕೌಶಲ್ಯ, ಬುದ್ಧಿಿಮತ್ತೆೆ ಮತ್ತು  ಪ್ರತಿಭೆಗೆ ಆದ್ಯತೆ ಕೊಡಲಾಗುತ್ತದೆ. ಈ ಸ್ಪರ್ಧೆ ಮೂಲಕ ಕೌಶಲ್ಯವರ್ಧನೆ, ಸಂವೇದನೆ, ಆತ್ಮ"ಶ್ವಾಾಸ, ಸಾರ್ವಜನಿಕವಾಗಿ ಸಂವಾದ ಮಾಡುವುದಕ್ಕೆೆ ಅನುಕೂಲ ಕಲ್ಪಿಿಸುತ್ತದೆ. 
 ನಗರದ ಅಪೂರ್ವ ಪ್ರತಿಭಾನ್ವಿಿತೆ ಬಬಿತಾ ಪ್ರಕಾಶ್ 2018ರ "ುಸೆಸ್ ಏಶಿಯಾ ಫೆಸಿಫಿಕ್ ಸೌಂದರ್ಯ ಸ್ಪರ್ಧೆಯಲ್ಲಿ ಜಯಶೀಲರಾಗಿದ್ದಾಾರೆ. ಬಬಿತಾ ಸೆಪ್ಟೆೆಂಬರ್  ಕೊನೆಯಲ್ಲಿ ಬೆಂಗಳೂರಿನಲ್ಲಿ ಜರುಗಿದ "ುಸೆಸ್ ಇಂಡಿಯಾ ಎಲಿಜೆಂಟ್-2018 ಯುನಿವರ್ಸ್ ಸ್ಪರ್ಧೆಯಲ್ಲಿ 12 ಜನರೊಟ್ಟಿಿಗೆ ಫೈನಲ್‌ಗೇರಿದ್ದರು. ಆದರೆ ರಾಜ್ಯದಿಂದ ಇವರ ಸ"ತ ಇನ್ನೊೊಬ್ಬರು ಸೇರಿದ್ದರು. ಈ ಸ್ಪರ್ಧೆಯಲ್ಲಿ ರನ್ನರ್ ಅಪ್ ಪ್ರಶಸ್ತಿಿ ದಕ್ಕಿಿತ್ತು. ಆನಂತರ ಡಿಸೆಂಬರ್  14ರಿಂದ 17ರವರೆಗೆ ಮಸ್ಕತ್‌ನಲ್ಲಿ ನಡೆದ "ುಸೆಸ್ ಏಶಿಯಾ ಫೆಸಿಫಿಕ್ ಸ್ಪರ್ಧೆಯಲ್ಲಿ "ುಸೆಸ್ ಚಾರ್"ುಂಗ್ ಹಾಗೂ "ುಸೆಸ್ ಟ್ಯಾಾಲೆಂಟೆಡ್ ಪ್ರಶಸ್ತಿಿಯನ್ನು ಧರಿಸಿ ಬಂದಿದ್ದಾಾರೆ.
ಈ ಸ್ಪರ್ಧೆಯಲ್ಲಿ ""ಧ ರೀತಿಯ "ಭಾಗಗಳಿದ್ದವು. ಭರತನಾಟ್ಯವನ್ನು ಪ್ರದರ್ಶಿಸುವ ಮೂಲಕ ಅವರು ಜನಮನವನ್ನು ಸೂರೆಗೊಂಡರು.
ಮಾಡೆಲಿಂಗ್‌ನಲ್ಲಿ ಹೆಚ್ಚಿಿನ ಆಸಕ್ತಿಿ ಮತ್ತು ಶ್ರದ್ಧೆೆ ಇದ್ದುದರಿಂದ ಗಲ್‌ಫ್‌ ಯುನಿಕ್ ಇಂಟರ್‌ನ್ಯಾಾಶನಲ್ ಎಲ್‌ಎಲ್‌ಸಿ ಮಸ್ಕತ್‌ನಲ್ಲಿ ಆಯೋಜಿಸಿದ್ದ ಈ ಇವೆಂಟ್‌ಸ್‌‌ನಲ್ಲಿ "ನ್ನರ್ ವರ್ಲ್‌ಡ್‌ ಮತ್ತು "ುಸೆಸ್ ಫ್ಲಾಾಲೆಸ್‌ಸ್ಕಿಿನ್ ಎಂಬ ನಾಮಾಂಕಿತಕ್ಕೆೆ ಭಾಜನರಾಗಿದ್ದಾಾರೆ. ಈ ಮೂಲಕ ಶಿವಮೊಗ್ಗದ ಕೀರ್ತಿಯನ್ನು ಹೆಚ್ಚಿಿಸಿದ್ದಾಾರೆ. ನಗರದ "ನೋಬನಗರದ ಹುಡ್ಕೋೋಕಾಲನಿಯವರಾದ ಬಬಿತಾ, ಜೆಎನ್‌ಎನ್‌ಸಿಯಲ್ಲಿ ಎಂಸಿಎ ಮುಗಿಸಿ ಬೆಂಗಳೂರಿನಲ್ಲಿ ಉದ್ಯೋೋಗಕ್ಕೆೆ ಸೇರಿದ್ದರು. ಇದಕ್ಕೂ ಮುನ್ನ ಆ್ಯಂಕರಿಂಗ್‌ನಲ್ಲಿ ಹೆಸರುಗಳಿಸಿದ್ದರು. ಇದೆ ವೇಳೆ ಫೋಟೊಶೂಟ್‌ನಲ್ಲಿ ಭಾಗವ"ಸಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಸೌಂದರ್ಯ ಸ್ಪರ್ಧೆಗೆ ಅವರು ಅಡಿುಟ್ಟಿಿದ್ದರು. ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಣಕ್ಕಿಿಳಿದಾಗಲೇ ಸಾಕಷ್ಟು ಉತ್ತೇಜನ ಸಿಕ್ಕಿಿತ್ತು. ರನ್ನರ್ ಅಪ್ ಪ್ರಶಸ್ತಿಿ ಸಹ ದಕ್ಕಿಿದ್ದರಿಂದ ಇನ್ನೂ ಹೆಚ್ಚಿಿನ ಸಾಧನೆಗೆ ಮನಸ್ಸು ಮಾಡಿದ್ದರು. ಅದರ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ.
ಸದ್ಯ ಬೆಂಗಳೂರಿನಲ್ಲಿ ಐಟಿ ಯುರೋಪಿಯನ್ ಬ್ಯಾಾಂಕ್‌ನಲ್ಲಿ ಕೆಲಸ ಮಾಡುತ್ತಿಿರುವ ಇವರು, ಮುಂದಿನ ದಿನಗಳಲ್ಲಿ ಬ್ರಾಾಂಡ್ ಅಂಬಾಸಿಡರ್ ಆಗುವ ಅಥವಾ ಧಾರಾವಾ", ಸಿನಿಮಾಗಳಲ್ಲಿ ನಟಿಸುವ ಆಸೆ ಹೊತ್ತಿಿದ್ದಾಾರೆ. ಈ ಕ್ಷೇತ್ರಗಳಲ್ಲಿ ಮಾಡೆಲ್‌ಗಳಿಗೆ ಹೆಚ್ಚಿಿನ ಬೇಡಿಕೆ ಇರುವುದರಿಂದ ಇನ್ನಷ್ಟು ಸಾಧನೆ ಸಾಧ್ಯವಾಗಬಹುದು ಎನ್ನುವ ನಿರೀಕ್ಷೆ ಅವರಲ್ಲಿದೆ. ತನ್ನ ಪ್ರತಿ ಪ್ರಯತ್ನ ಮತ್ತು ಸಾಧನೆಗೆ ಇಂಜಿಯರ್ ಆಗಿರುವ ಪತಿಯ ಮತ್ತು ಕುಟುಂಬದವರ  ಸಹಕಾರ"ದೆ ಎನ್ನುವ ಇವರಿಗೆ ಓರ್ವ ಪುತ್ರನಿದ್ದಾಾನೆ. ಮಾಡೆಲಿಂಗ್ ಮತ್ತು ಫ್ಯಾಾಶನ್ ಕ್ಷೇತ್ರದಲ್ಲಿ ಅಪಾರ ಆಸಕ್ತಿಿಯನ್ನು ಹೊಂದಿದ್ದಾಾರೆ.
ಯಾವುದೇ "ಷಯದಲ್ಲಿ ಶ್ರದ್ಧೆುಂದ ಮತ್ತು ಆಸಕ್ತಿಿ ಹೊಂದಿದ್ದರೆ ಹೆಚ್ಚಿಿನ ಸಾಧನೆ ಮಾಡಬಹುದು. ನ್ಯೂನತೆಗಳನ್ನು ಸರಿಪಡಿಸಿಕೊಳ್ಳುತ್ತ ಉನ್ನತ ಮಟ್ಟಕ್ಕೇರಬಹುದು. ಬೆಂಗಳೂರಿನಂತಹ ಮಹಾನ್ ನಗರದಲ್ಲಿ ಮಲೆನಾಡಿನವರು ಸ್ಪರ್ಧಿಸಿ ಗೆಲ್ಲುವುದು ಸುಲಭದ ಮಾತಲ್ಲ. ಆದರೂ ಇದನ್ನು ಸಾಧಿಸಿದ್ದೇನೆ. ಇದು ಅತ್ಯಂತ ಸಂತಸ ತಂದಿದೆ ಎನ್ನುತ್ತಾಾರೆ ಬಬಿತಾ.

published on 29.12.18

.              ..........................................

Saturday 22 December 2018

ಸದ್ದಿಲ್ಲದ ಸಾಧಕ
ಡಿ. ಎಂ. ರಾಜಕುಮಾರ್

 ಕಲಾ"ದನಿಗೆ  ಸಿನಿಮಾ ಪ್ರಸಿದ್ಧಿಿಯನ್ನು, ಟಿ" ಮಾಧ್ಯಮ ಶ್ರೀಮಂತಿಕೆಯನ್ನು ತಂದುಕೊಟ್ಟರೆ, ರಂಗಭೂ"ು ಉತ್ತಮನನ್ನಾಾಗಿ ರೂಪಿಸುತ್ತದೆ ಎನ್ನುವ ಮಾತಿದೆ. ಎಲ್ಲಾಾ ಕಲಾ ಮಾಧ್ಯಮಗಳಿಗಿಂತ "ಶಿಷ್ಟ ಸ್ಥಾಾನ ಪಡೆದಿರುವ ರಂಗಭೂ"ು, ಕಲಾ"ದನನ್ನು ಕ್ರಿಿಯಾಶೀಲನನ್ನಾಾಗಿ, ಪರಿಪೂರ್ಣ ವ್ಯಕ್ತಿಿತ್ವದವನನ್ನಾಾಗಿ ಪರಿವರ್ತಿಸುತ್ತದೆ. ಶಿವಮೊಗ್ಗದ ಪರಿಪೂರ್ಣ ರಂಗಕಲಾ"ದರಲ್ಲಿ ಡಿ. ಎಂ. ರಾಜಕುಮಾರ್ ಒಬ್ಬರು.
 ಶಿವಮೊಗ್ಗದ ರಂಗಭೂ"ುಯ ಪುಟಗಳಲ್ಲಿ ತಮ್ಮದೇ ಆದ ಅಧ್ಯಾಾಯವನ್ನು ಬರೆದ ಈ ರಂಗನಟ, ಈ ಬಾರಿಯ ಕರ್ನಾಟಕ ನಾಟಕ ಅಕಾಡೆ"ುಯ ರ್ವಾಕ ಪ್ರಶಸ್ತಿಿಗೆ ಭಾಜನರಾಗಿದ್ದಾಾರೆ. ಅಭಿನಯ, ಪ್ರಸಾಧನ ಮತ್ತು ಬೆಳಕು "ಭಾಗದಲ್ಲೂ ತಮ್ಮನನ್ನು ಗುರುತಿಸಿಕೊಂಡಿದ್ದಾಾರೆ. ಒಂದೇ ಕ್ಷೇತ್ರದಲ್ಲಿ ಈ ರೀತಿ "ಭಿನ್ನ ಕೆಲಸದಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಜನ್ಮಜಾತವಲ್ಲದಿದ್ದರೂ ಸ್ವತಃ ಎಲ್ಲವನ್ನೂ ಕಲಿತೇ ಈ ಸಾಧನೆ ಮಾಡಿದ್ದಾಾರೆ. 
ಮೂಲತಃ ಹೊನ್ನಾಾಳಿ ತಾಲೂಕು ದಿಡಗೂರಿನವರಾದ ಇವರು, ತಮ್ಮ ಶಾಲಾ ದಿನಗಳಲ್ಲೇ ಅಂದರೆ 1974-75ರ  ವೇಳೆಯೇ ನಾಟಕಗಳಲ್ಲಿ ಅಭಿನಯ ಆರಂಭಿಸಿದರು. ಇದನ್ನೇ ಮುಂದುವರೆಸಿದ್ದರಿಂದ ನಾಟಕದ ಗೀಳು ಹೆಚ್ಚುತ್ತಾಾ ಹೋುತು. ಸಿಕ್ಕ ಸಂದರ್ಭವನ್ನೆೆಲ್ಲಾಾ ಬಳಸಿಕೊಳ್ಳುತ್ತಾಾ ಹೋದರು. ಈ ಯುವಕನಲ್ಲಿ ನಾಟಕದ ಹುಚ್ಚು ಮತ್ತು ಸಾಧಿಸಬೇಕೆಂಬ ಗೀಳಿರುವುದನ್ನು ಕಂಡು ಅಂದಿನ ನಿರ್ದೇಶಕರು ವೇದಿಕೆ ಕಲ್ಪಿಿಸಿಕೊಟ್ಟರು. 1978ರಲ್ಲಿ ಶಿವಮೊಗ್ಗದ ಪರಿಮಳ ಕಲಾಸಂಘದಲ್ಲಿ ಮೊದಲ ಬಾರಿಗೆ ಪೂರ್ಣಪ್ರಮಾಣದ ನಟರಾಗಿ ಬಣ್ಣಹಚ್ಚಿಿದರು. ಆನಂತರ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಭಾಗವ"ಸಿದರು. ಇಲ್ಲಿಂದ ರಂಗಭೂ"ುಗೆ ಪೂರ್ಣ ಪ್ರಮಾಣದಲ್ಲಿ ಪ್ರವೇಶ ಮಾಡಿ, ವೃತ್ತಿಿಜೀವನದಲ್ಲಿ ನೂರಾರು ನಾಟಕಗಳಲ್ಲಿ ಅಭಿನುಸಿದರು.   
ಪಿಯುಸಿವರೆಗೆ ಓದಿರುವ ಇವರು, ನಗರಾಭಿವೃದ್ಧಿಿ ಇಲಾಖೆಯಲ್ಲಿ ನೌಕರರಾಗಿ ಸದ್ಯ ಶಿವಮೊಗ್ಗ ಮಹಾನಗರಪಾಲಿಕೆಯಲ್ಲಿ ಕೆಲಸ ಮಾಡುತ್ತಿಿದ್ದಾಾರೆ. ಸಾಗರ ಪುರಸಭೆಯಲ್ಲಿ ಕೆಲಸ ಮಾಡುವಾಗ ಅಲ್ಲಿನ ರಂಗತಂಡಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರಿಂದ ಅಲ್ಲಿಯೂ ನಾಟಕದಲ್ಲಿ ಅಭಿನುಸುವ ಅವಕಾಶ ಸಿಕ್ಕಿಿತು. ಇದರಿಂದ ಅಲ್ಲಿಯೂ ಜನಪ್ರಿಿಯತೆ ಪಡೆದರು.
ನಾಟಕ ನಿರ್ದೇಶನ ಮಾಡಿ ಬಹುಮಾನ ಗಳಿಸಿದ್ದಾಾರೆ. ಶಿವಮೊಗ್ಗದ ರಾಘವೇಂದ್ರ ಕಲಾ ಸಂಘ,  ಗೆಳೆಯರ ಬಳಗ,  ಅಭಿನಯ, ಕಲಾಜ್ಯೋೋತಿ, ಸಹ್ಯಾಾದ್ರಿಿ ರಂಗ ತರಂಗ, ನಮ್ ಟೀಮ್, ಹೊಂಗಿರಣ, ಸ್ಟೃ, ಸಾಗರದ ಉದಯ ಕಲಾ"ದರು ಮತ್ತು ಸ್ಪಂದನ ತಂಡಗಳಲ್ಲಿ ಪ್ರಮುಖ ರಂಗಕಲಾ"ದರಾಗಿ ಸೇವೆ ಸಲ್ಲಿಸಿದ್ದಾಾರೆ.   
ಪ್ರಮುಖ ರಂಗ ನಿರ್ದೇಶಕರಾದ  ಟಿ. ". ಹೆಗಡೆ, ಪ್ರಸನ್ನ, ಗುರುರಾವ್ ಬಾಪಟ್, ಎಸ್. ಮಾಲತಿ, ಎಸ್. ಆರ್. ಗಿರೀಶ್, ಮಂಜುನಾಥ ಹೆಗಡೆ, ಪ್ರೊ. ಗೌರಿಶಂಕರ್, ಕಾಂತೇಶ್ ಕದರಮಂಡಲಗಿ,  ಎಂ. ". ಪ್ರತಿಭಾ, ಹೊ. ನಾ. ಸತ್ಯ, ಸಾಸ್ವೆೆಹಳ್ಳಿಿ ಸತೀಶ್, ವೈದ್ಯನಾಥ, ಮಧುಸೂದನ್ ಘಾಟೆ, "ಜಯಲಕ್ಷ್ಮೀ, ಎಂ. ಗಣೇಶ್ ಮೊದಲಾದವರ ಪ್ರಮುಖ ನಾಟಕಗಳಲ್ಲಿ ಅಭಿನುಸಿ ಪ್ರೇಕ್ಷಕರ ಮನಗೆದ್ದಿದ್ದಾಾರೆ.
ಇವರು ಅಭಿನುಸಿದ ಕೆಲವು ಪ್ರಮುಖ ನಾಟಕಗಳೆಂದರೆ, ಶಾಲಭಂಜಿಕೆ, ಆದ್ರೇಸಿ- ಪರದೇಸಿಯಾದ,  ಇದೇನು ನಡೆಯುತ್ತಿಿದೆ, ಬಯಲುಸೀಮೆಯ ಕಟ್ಟೆೆ ಪುರಾಣ,  ಕಡಿದಾಳು ಶಾಮಣ್ಣ, ಖರೇ ಖರೇ ಸಂಗ್ಯಾಾಬಾಳ್ಯಾಾ, ಸೂರ್ಯನ ಕುದುರೆ ಮೊದಲಾದವು. 
ಧಾರಾವಾ"ಯಲ್ಲೂ ಅಭಿನುಸಿರುವ ರಾಜಕುಮಾರ್, ಕಿರುಚಿತ್ರವೊಂದರ ಅಭಿನಯಕ್ಕೆೆ ಹೈದ್ರಾಾಬಾದ್‌ನಲ್ಲಿ ಪ್ರಶಸ್ತಿಿ ಪಡೆದಿದ್ದಾಾರೆ. ಮಕ್ಕಳ ನಾಟಕವನ್ನೂ ಸಹ ನಿರ್ದೇಶಿಸಿದ ಕೀರ್ತಿ ಇವರದ್ದು.
ಯಾವುದೇ ಪ್ರಚಾರಕ್ಕೆೆ ಜೋತುಬೀಳದೆ ತಾನಾುತು, ತನ್ನ ನಾಟಕವಾುತು, ಕೆಲಸವಾುತು ಎಂಬ ಮನೋಭಾದ ರಾಜಕುಮಾರ್, ಸದಾ ಹಸನ್ಮುಖಿ, ಎಲ್ಲರಿಗೂ ಆಪ್ತರು. ಇಂತಹ ಸದ್ದಿಲ್ಲದ ಸಾಧಕನನ್ನು ಅಕಾಡೆ"ು ಪ್ರಶಸ್ತಿಿಗೆ ಗುರುತಿಸಿರುವುದಕ್ಕೆೆ ನಗರದ ಇಡೀ ರಂಗಸಮೂಹವೇ ಖುಪಟ್ಟಿಿದೆ.   
published on 22-12.18
.................................



Monday 17 December 2018

ಹೆಸರಿಗೆ ತಕ್ಕ ಕಲಾ"ದೆ 
ನಾಟ್ಯಶ್ರೀ 


ಜೀವನದಲ್ಲಿ ಅವಕಾಶಗಳು ಸಂಭ"ಸುವುದಿಲ್ಲ, ನಾವು ಅದನ್ನು ಸ್ಟೃಸಿಕೊಳ್ಳಬೇಕು. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಾಗ ಪ್ರತಿಭೆ ಹೊರಹೊ"್ಮುಸಲು ಸಾಧ್ಯವಾಗುತ್ತದೆ. ಶಿವಮೊಗ್ಗದ "ದಾರ್ಥಿನಿ ನಾಟ್ಯಶ್ರೀ ಇಂತಹ ಲಭ್ಯ ವೇದಿಕೆಯನ್ನೇ ಬಳಸಿಕೊಂಡು ಹೆಸರಿಗೆ ತಕ್ಕಂತೆ ನಾಟ್ಯಕಲಾ"ದೆಯಾಗಿದ್ದಾಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ "ುನುಗುತ್ತಿಿದ್ದಾಾರೆ.
 ಕಳೆದ ವಾರ ಜರುಗಿದ ರಾಜ್ಯ ಯುವಜನ ಮೇಳದಲ್ಲಿ ಮೂರನೆಯ ಸ್ಥಾಾನಿಯಾಗಿ ಹೊರಹೊ"್ಮುದ್ದಾಾರೆ. ಡಿ. 18ರಂದು ಬೆಂಗಳೂರಿನಲ್ಲಿ ನಡೆಯಲಿರುವ ಡಾನ್‌ಸ್‌ ಆಫ್ ಕರ್ನಾಟಕದಲ್ಲಿ ನೃತ್ಯದಲ್ಲಿ ಜಿಲ್ಲೆೆಯನ್ನು ಪ್ರತಿನಿಧಿಸಲಿದ್ದಾಾರೆ. ನಗರದ ನಟನಂ ನಾಟ್ಯ ಕೇಂದ್ರ "ದ್ವಾಾನ್ ಕೇಶವ್‌ಕುಮಾರ್ ಪಿಳ್ಳೈ- ವಂದನಾ ಅವರ ಪುತ್ರಿಿಯಾಗಿರುವ ನಾಟ್ಯಶ್ರೀ, 20 ವರ್ಷಗಳಿಂದ ತಂದೆ-ತಾು ಅವರ ಸಮರ್ಥ ಮಾರ್ಗದರ್ಶನ್ ಮತ್ತು ನಿರ್ದೇಶನದಲ್ಲೇ  ಭರತನಾಟ್ಯ ಅಭ್ಯಾಾಸ ಮಾಡುತ್ತಿಿದ್ದಾಾರೆ. 2013ರಲ್ಲಿ ರಂಗಪ್ರವೇಶ ಮಾಡಿದ್ದಾಾರೆ.
  ನಗರದ ಜೆಎನ್‌ಎನ್‌ಸಿಯಲ್ಲಿ ಎಂಸಿಎ ಓದುತ್ತಿಿರುವ ಇವರು, ಭರತನಾಟ್ಯ "ದ್ವತ್, ಭರತನಾಟ್ಯ ಅಲಂಕಾರ್ ಪರೀಕ್ಷೆ, ಸಂಗೀತ ಜ್ಯೂನಿಯರ್ ಮತ್ತು ಎಂ. ಡಾನ್‌ಸ್‌‌ನಲ್ಲಿ ತೇರ್ಗಡೆ ಹೊಂದಿದವರಾಗಿದ್ದಾಾರೆ. ಸಂಗೀತ ಅಭ್ಯಾಾಸವನ್ನು ಶೃಂಗೇರಿ ಎಸ್. ನಾಗರಾಜ್ ಅವರಲ್ಲಿ ಮಾಡುತ್ತಿಿದ್ದಾಾರೆ. ಜೊತೆಗೆ ಚಿತ್ರಕಲೆ, ಕರಕುಶಲ ಕಲೆಯನ್ನೂ ಕರಗತಮಾಡಿಕೊಂಡಿದ್ದಾಾರೆ. ಭರತನಾಟ್ಯ ಕಲಿಕೆ ಆರಂಭಿಸಿದ ಎರಡನೆಯ ವರ್ಷದಲ್ಲೇ ನೃತ್ಯರೂಪಕದ ಮೂಲಕ ವೇದಿಕೆ ಏರಿ, ಇಲ್ಲಿಯವರೆಗೆ ಸುಮಾರು 550ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದಾಾರೆ.
2016ರಲ್ಲಿ ಆರ್ಟ್ ಆಫ್ ಲಿ"ಂಗ್‌ನ ರ"ಶಂಕರ್ ಗುರೂಜಿ ಅವರು ದೆಹಲಿಯಲ್ಲಿ ಏರ್ಪಡಿಸಿದ್ದ "ಶ್ವ ಸಾಂಸ್ಕೃತಿಕ ಉತ್ಸವದಲ್ಲಿ ನೃತ್ಯ ಪ್ರದರ್ಶನ, ದೆಹಲಿ, ಗೋವಾ, ರಾಜಸ್ಥಾಾನ, ಭೋಪಾಲ್, ಮಧ್ಯಪ್ರದೇಶ, "ಶಾಖಪಟ್ಟಣ,  ಆಂಧ್ರ, ಇಂದೋರ್ ಮೊದಲಾದೆಡೆ ನಡೆದ ಅಂತಾರ್ಟ್ರೋಯ ಮಕ್ಕಳ ಮೇಳದಲ್ಲಿ ವೈ"ಧ್ಯಮಯ ನೃತ್ಯ ಪ್ರದರ್ಶನ ನೀಡಿದ ಹೆಗ್ಗಳಿಕೆ ಇವರದ್ದು. ರಾಜ್ಯಮಟ್ಟದ ಪ್ರತಿಭಾಕಾರಂಜಿ ಮತ್ತು ಭರತನಾಟ್ಯ ಸ್ಪರ್ಧೆಯಲ್ಲಿ ಹತ್ತು ಹಲವು ಬಾರಿ ಭಾಗವ"ಸಿ ಬಹುಮಾನ ಗಿಟ್ಟಿಿಸಿದ್ದಲ್ಲದೆ, ಅತಿ ಪುಟ್ಟ ಬಾಲಪ್ರತಿಭೆ ಎಂಬ ಪ್ರತಿಭಾ ಪುರಸ್ಕಾಾರವನ್ನೂ ಪಡೆದಿದ್ದಾಾರೆ.  ಅಂಂತಾರಾಜ್ಯ ಸಾಂಸ್ಕೃತಿಕ "ುಲನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕೀರ್ತಿ ಇವರದ್ದು. ದೆಹಲಿಯ ನಾ ್ಯಶನಲ್ ಬಾಲಭವನ್‌ದಲ್ಲಿ ತಮ್ಮ 4ನೆಯ ವಯಸ್ಸಿಿನಲ್ಲಿ ನೃತ್ಯ ಪ್ರದರ್ಶಿಸಿದ್ದಾಾರೆ. ಉತ್ತರ ಪ್ರದೇಶದ ಮರ್ಹ ಆಶ್ರಮದಲ್ಲಿ, ಭೋಪಾಲ್ ಕನ್ನಡ ಸಂಘದಲ್ಲಿ, ದೆಹಲಿಯ ಕನ್ನಡ ಎಜುಕೇಶನ್ ಸೊಸೈಟಿಯಲ್ಲಿ, ಕನ್ನಡ ಭವನದಲ್ಲಿ ಕಾರ್ಯಕ್ರಮ ನೀಡಿದ್ದಾಾರೆ.
ತಂದೆಯ ಜೊತೆಗೆ ಮಂಗೋಲಿಯಾ, ಉಜ್ಬೆೆಕಿಸ್ಥಾಾನ್, ರಶ್ಯಾಾ, ಮಾರಿಶಸ್, ನೇಪಾಳ, ಚೀನಾ, ಶ್ರೀಲಂಕಾದಲ್ಲಿ ಭರತನಾಟ್ಯ ಪ್ರದರ್ಶಿಸಿದ್ದಾಾರೆ. ""ಧೆಡೆ ನೃತ್ಯ ತರಬೇತಿ, ಸಾಂಸ್ಕೃತಿಕ "ನಿಮಯದಲ್ಲೂ ಭಾಗವ"ಸಿದ್ದಾಾರೆ. ಚಂದನ ವಾ"ನಿಯ ಮಧುರ ಮಧುರ"ೀ ಮಂಜುಳ ಗಾನದಲ್ಲಿ, ಶಂಕರ್ ಟಿ"ಯ ಹೆಜ್ಜೆೆ ಗೆಜ್ಜೆೆಯಲ್ಲಿ ಪ್ರಥಮ ಸ್ಥಾಾನ, ಡಿಯು ದ್ವೀಪದ "ದ್ಯಾಾರ್ಥಿಗಳೊಂದಿಗೆ, ನೃತ್ಯ ನಾಟಕ, ಜಾನಪದ ನೃತ್ಯದಲ್ಲಿ, ""ಧ ಶಿಬಿರಗಳಲ್ಲಿ ಪಾಲ್ಗೊೊಂಡ "ರಿಮೆ ಇವರದ್ದು.
ಗಣೇಶೋತ್ಸವ, ದಸರಾ, ರಾಮೋತ್ಸವ, ರಾಜ್ಯದ ""ಧ ಜಿಲ್ಲೆೆಗಳಲ್ಲಿ ನಡೆಯುವ ಉತ್ಸವಗಳಲ್ಲಿ ಕನ್ನಡ, ಸಂಸ್ಕೃತಿ ಇಲಾಖೆಯ ಕಾರ್ಯಕ್ರಮದಲ್ಲಿ, ಕನ್ನಡ ಸಾ"ತ್ಯ ಸಮ್ಮೇಳನ, ಕರ್ನಾಟಕ ಸಾಂಸ್ಕೃತಿಕ ದಿಬ್ಬಣ, ಜಾನಪದ ಜಾತ್ರೆೆ, ರಾಜ್ಯೋೋತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾಾರೆ. ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ ಎಂಬ ಚಲನಚಿತ್ರದಲ್ಲಿ ಒಂದು ಹಾಡಿಗೆ ನರ್ತಿಸಿದ್ದಾಾರೆ. ಮಾಜಿ ಸಿಎಂ ಬಂಗಾರಪ್ಪ, ಬಿ ಎಸ್ ಯಡಿಯೂರಪ್ಪ ಅವರಿಂದ ಸನ್ಮಾಾನ ಸ್ವೀಕರಿಸಿದ್ದಾಾರೆ. 
ಭರತನಾಟ್ಯ ಶ್ರೀಮಂತವಾದ ಕಲೆ. ಪ್ರೇಕ್ಷಕರನ್ನು ತನ್ಮಯತೆುಂದ "ಡಿದಿಟ್ಟುಕೊಳ್ಳಬಲ್ಲ ಶಕ್ತಿಿ ಅದಕ್ಕಿಿದೆ. ಎಷ್ಟು ತನ್ಮಯತೆ, ಮತ್ತು ಒತ್ತು ಕೊಟ್ಟು ಇದನ್ನು ಕಲಿಯುತ್ತಾಾರೋ ಅಷ್ಟು ಶಾಸ್ತ್ರಬದ್ಧವಾಗಿ, ಪ್ರಬುದ್ಧವಾಗಿ ಅದನ್ನು ಅಭಿನುಸಲು ಅವರು ಶಕ್ತರಾಗುತ್ತಾಾರೆ ಎನ್ನುವುದು ನಾಟ್ಯಶ್ರೀ ಅವರ ಅಭಿಪ್ರಾಾಯ.

15.12.18

...................................
  

Saturday 8 December 2018

ನೋಟ, ಆಟ, ಪಾಠ
ಎಚ್. ಯು ವೈದ್ಯನಾಥ

ಯಾರು ವೇಗವಾಗಿ ಓಡುತ್ತಾಾರೋ ಅಂತಹವರ ಜೀವನದಲ್ಲಿ ಯಶಸ್ಸು ಇರುವುದಿಲ್ಲ. ಯಾರು ಸದಾ ಓಟದಲ್ಲಿರುತ್ತಾಾರೋ ಅವರಲ್ಲಿ ಯಶಸ್ಸಿಿರುತ್ತದೆ ಎಂಬ ಮಾತಿದೆ. ಸದಾ ಚುರುಕಾಗಿ, ರಚನಾತ್ಮಕ ಮತ್ತು ಕ್ರಿಿಯಾಶೀಲವಾಗಿ ಕೆಲಸ ಮಾಡುತ್ತ, ಸಂಘಟನೆಯಲ್ಲೂ ಮುಂದಿರುವ, ಶಿವಮೊಗ್ಗದ ಪತ್ರಿಿಕಾ ಛಾಯಾಗ್ರಾಾಹಕ, ರಂಗಭೂಮಿ ಮತ್ತು ಕಲೆ- ಸಾಹಿತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ, ಎಚ್. ಯು ವೈದ್ಯನಾಥ ಅರ್ಥಾತ್ ವೈದ್ಯ ಸದಾ ಓಟದಲ್ಲಿರುವ ವ್ಯಕ್ತಿಿ. ವೈದ್ಯ ಅವರ ಪತ್ರಿಿಕಾ ಕ್ಷೇತ್ರದ ಸಾಧನೆ ಪರಿಗಣಿಸಿ ಈ ಬಾರಿ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಿ ಘೋಷಿಸಿದೆ.     
 ವೈದ್ಯ ಅವರ ಹೆಸರು ಕೇಳದವರು ವಿರಳ. ಪತ್ರಿಿಕೆ ಮತ್ತು ಛಾಯಾಚಿತ್ರ ರಂಗದಲ್ಲಿ ಅವರು ಹೆಸರು ಮಾಡಿದಷ್ಟೇ ರಂಗಭೂಮಿ ಮತ್ತು ನಟನೆಯಲ್ಲಿ ಹಾಗೂ ಅದರ ಸಂಘಟನೆಯಲ್ಲಿಯೂ ಮಾಡಿದ್ದಾಾರೆ. ಜೊತೆಗೆ ಕಲೆ ಮತ್ತು ಸಂಸ್ಕೃತಿ, ಸಾಹಿತ್ಯ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾಾರೆ. ಇದರಿಂದಾಗಿ ಅವರ ಜನಪ್ರಿಿಯತೆ ಜಿಲ್ಲೆೆ ಮಾತ್ರವಲ್ಲ, ರಾಜ್ಯದಲ್ಲಿ ಪಸರಿಸಿದೆ.
ಶಿವಮೊಗ್ಗದ ನಾವಿಕ ಪತ್ರಿಿಕೆ ಮೂಲಕ ಪತ್ರಿಿಕಾ ಮತ್ತು ಛಾಯಾಗ್ರಾಾಹಕ ವೃತ್ತಿಿಯನ್ನು ಆರಂಭಿಸಿ, ಸಂಯುಕ್ತ ಕರ್ನಾಟಕ ಪತ್ರಿಿಕೆಯ ಛಾಯಾಗ್ರಾಾಹಕರಾಗಿ ಕೆಲಸ ಮಾಡಿ, ಸದ್ಯ ದಿ ಹಿಂದೂ ಪತ್ರಿಿಕೆಯ ಛಾಯಾಗ್ರಾಾಹಕರಾಗಿದ್ದಾಾರೆ. ಜಿಲ್ಲಾಾ ಕಾರ್ಯನಿರತ ಪತ್ರಕರ್ತರ ಸಂಘದ  ಪ್ರಧಾನ ಕಾರ್ಯದರ್ಶಿಯಾಗಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿಿದ್ದಾಾರೆ.
ತಮ್ಮ ಅವಧಿಯಲ್ಲಿ ಅರ್ಥಪೂರ್ಣ, ವಿಶಿಷ್ಟವಾದ ಕಾರ್ಯಕ್ರಮಗಳನ್ನು ಮಾಡಿ, ಪತ್ರಕರ್ತರ ಪರ ಹೋರಾಟದಲ್ಲಿ, ಕಾರ್ಯಾಗಾರಗಳಲ್ಲಿ, ಉಪನ್ಯಾಾಸ ಏರ್ಪಡಿಸುವುದರಲ್ಲಿ, ಸಂಘದ ಸ್ವಾಾವಲಂಬನೆಗೆ, ಆರ್ಥಿಕ ಸಂಪನ್ಮೂಲ ಕ್ರೋೋಢೀಕರಿಸುವಲ್ಲಿ ಅವರ ಮಹತ್ವದ ಪಾತ್ರ ವಹಿಸಿದ್ದಾಾರೆ. ಯಾರೊಂದಿಗೂ ದ್ವೇಷ, ಸಿಟ್ಟು ಇಟ್ಟುಕೊಳ್ಳದ, ಸದಾ ನಗುಮೊಗದಿಂದಲೇ ಎಲ್ಲರನ್ನೂ ಮಾತನಾಡಿಸುವ ಕಲೆ ಅವರಲ್ಲಿದೆ. ಅದಕ್ಕಾಾಗಿಯೇ ಎಲ್ಲರಿಗೂ ಅವರು ಅಚ್ಚುಮೆಚ್ಚು, ಚಿರಪರಿಚಿತರು. ತಾಲೂಕು ಸಂಘಗಳನ್ನು ಕ್ರಿಿಯಾಶೀಲವಾಗಿಡುವಲ್ಲಿ ಸದಾ ಸಲಹೆ-ಸೂಚನೆ ಕೊಡುತ್ತಿಿರುತ್ತಾಾರೆ.
ರಂಗಭೂಮಿಯಲ್ಲೂ ಅವರ ಹೆಸರು ದೊಡ್ಡದು. ನೀನಾಸಂನಿಂದ ರಂಗತರಬೇತಿ ಪಡೆದು ನಟರಾಗಿ, ನಿರ್ದೇಶಕರಾಗಿ, ಸಾಕ್ಷ್ಯಚಿತ್ರಗಳ ನಿರ್ಮಾಪಕರಾಗಿ, ಸಿನಿಮಾ, ಧಾರಾವಾಹಿಗಳಲ್ಲಿ ನಟರಾಗಿ ಹೆಸರು ಮಾಡಿದ್ದಾಾರೆ. ನಿರ್ದೇಶಕರಾದ ಅಶೋಕ್ ಕಶ್ಯಪ್, ನಾಗಾಭರಣ, ಗಿರೀಶ್ ಕಾರ್ನಾಡ್, ಟಿ.ಎನ್. ಸೀತಾರಾಮ್, ಕೆ.ಎಸ್. ಎಲ್. ಸ್ವಾಾಮಿ ಮೊದಲಾವರ ಜೊತೆ ಸೇರಿ ಕಾರ್ಯನಿರ್ವಹಿಸಿದ್ದಾಾರೆ.
ನಟರಾಗಿ ಸೀತೆ, ಕಾನೂರು ಹೆಗ್ಗಡತಿ, ಮಾಯಾಮೃಗ, ಸೃಷ್ಟಿಿ ಮೊದಲಾದ ಧಾರಾವಾಹಿಗಳಲ್ಲಿ, ಸಂತ ಶಿಶುನಾಳ ಶರೀಫ, ಮೈಸೂರು ಮಲ್ಲಿಗೆ, ನೀಲಾ, ಮತದಾನ, ಕಾನೂರು ಹೆಗ್ಗಡತಿ, ಮಸಣದ ಮಕ್ಕಳು, ಜೋಕ್‌ಫಾಲ್‌ಸ್‌, ಓಳ್ ಮುನ್ಸಾಾಮಿ, ಲಿಫ್‌ಟ್‌ ಕೊಡ್ಲಾಾ ಮೊದಲಾದ ಸಿನಿಮಾಗಳಲ್ಲೂ ನಟಿಸಿದ್ದಾಾರೆ.  ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಂಗಸಂಸ್ಥೆೆಯಾದ ಬೆಳ್ಳಿಿಮಂಡಲವನ್ನು ಜಿಲ್ಲೆೆಯಲ್ಲಿ ಸ್ಥಾಾಪಿಸಿ, ಅದರ ಸಂಘಟಕರಾಗಿ, ಅದರ ಕೀರ್ತಿ ಎಲ್ಲೆೆಡೆ ಪಸರಿಸಿದ್ದಾಾರೆ. ವಿಶ್ವದರ್ಜೆಯ ಕಲಾವಿದರು ಮತ್ತು ತಂತ್ರಜ್ಞರನ್ನು ನಗರಕ್ಕೆೆ ಕರೆಯಿಸಿ ಅವರಿಂದ ವಿಶೇಷ ಉಪನ್ಯಾಾಸ, ಸಂವಾದ ನಡೆಸಿದ್ದಾಾರೆ. ಅಂತಾರಾಷ್ಟ್ರೀಯ ಚಲನಚಿತ್ರೋೋತ್ಸವವನ್ನು ಆಯೋಜಿಸಿದ ಹೆಗ್ಗಳಿಯೂ ಅವರದ್ದು. 
  ಸದಾರಮೆ, ಯಯಾತಿ, ಬಯಲು ಸೀಮೆ ಕಟ್ಟೆೆ ಪುರಾಣ, ದಕ್ಷಯಜ್ಞ, ಅಂಧಯುಗ ಮೊದಲಾದ ನಾಟಕಗಳಲ್ಲಿ ನಿರ್ದೇಶನ ಮತ್ತು ನಟನೆ ಮಾಡಿರುವ ಇವರು, ನಮ್ ಟೀಮ್ ಎಂಬ ರಂಗಸಂಸ್ಥೆೆಯ ಉಪಾಧ್ಯಕ್ಷರಾಗಿ ದುಡಿದಿದ್ದಾಾರೆ. ನಗರದ ಕರ್ನಾಟಕ ಸಂಘದ ನಿರ್ದೇಶಕರಾಗಿ, ಅದರ ತ್ರೈಮಾಸಿಕದ ಸಂಪಾದಕರಾಗಿ, ಚಾರಣ, ಸಂಗೀತ, ನೃತ್ಯ ಮೊದಲಾದ ಸಂಸ್ಥೆೆಗಳಲ್ಲಿ ತೊಡಗಿಸಿಕೊಂಡಿರುವ ವೈದ್ಯ, ಸದಾ ಪಾದರಸದ ವ್ಯಕ್ತಿಿತವನ್ನು ತಮ್ಮ 60ರ ಹರಯದಲ್ಲೂ ಉಳಿಸಿಕೊಂಡಿದ್ದಾಾರೆ.
ಇವರ ಸಾಧನೆ, ಸಂಘಟನೆ, ವ್ಯಕ್ತಿಿತ್ವದಿಂದಾಗಿ ಹಲವು ಪ್ರಶಸ್ತಿಿ, ಸನ್ಮಾಾನಗಳು ದಕ್ಕಿಿವೆ. 
..............................

Saturday 1 December 2018

ರಾಜ್ಯೋೋತ್ಸವ ಪ್ರಶಸ್ತಿಿ 
ಚೂಡಾಮಣಿ ರಾಮಚಂದ್ರ 



  ಡೊಳ್ಳು ಬಾರಿಸುವ ಕಲೆಯಲ್ಲಿ ಸಾಧನೆ ಮಾಡಿದ ಮಹಿಳೆಯರು ಬೆರಳೆಣಿಕೆಯಷ್ಟಿಿದ್ದಾಾರೆ. ಏಕೆಂದರೆ ಇದು ಸುಲಭದ ಕಲೆಯಲ್ಲ. ಕಠಿಣ ಶ್ರಮವನ್ನು ಹಾಕಿ ಕಲಿತು, ಅದರಲ್ಲಿ ಪಳಗಿದ್ದಲ್ಲದೆ, ಸ್ವತಃ ಮಹಿಳಾ ಡೊಳ್ಳು ತಂಡವನ್ನು ಕಟ್ಟಿಿ, ದೇಶವಿದೇಶದಲ್ಲಿ ಪ್ರದರ್ಶಿಸಿ ಹೆಸರುಗಳಿಸಿದವರು ಸಾಗರದ ಚೂಡಾಮಣಿ ರಾಮಚಂದ್ರ ಅವರು. ಅವರಿಗೆ ಈ ಬಾರಿಯ ರಾಜ್ಯೋೋತ್ಸವ ಪ್ರಶಸ್ತಿಿ ದಕ್ಕಿಿದೆ.
  ಕುಟುಂಬದ ನಿರ್ವಹಣೆಯ ಜೊತೆಗೆ ಪರಂಪರಾಗತವಾಗಿ ಬಂದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನೂ ಉಳಿಸಿ, ಮೂಢನಂಬಿಕೆಯನ್ನು ಧಿಕ್ಕರಿಸಿ ನಿಂತು ಸಮಾನತೆಯನ್ನು ಪ್ರತಿಪಾದಿಸುವ ಈ ಕಾಲದಲ್ಲಿ ಮಹಿಳೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವುದನ್ನು ಅವರು ತೋರಿಸಿದ್ದಾಾರೆ. 
ಮೂಲತಃ ಶಿರಾಳಕೊಪ್ಪದವರಾದ ಚೂಡಾಮಣಿ ಅವರನ್ನು ಮದುವೆ ಮಾಡಿಕೊಟ್ಟಿಿದ್ದು ಸಾಗರಕ್ಕೆೆ. ಡೊಳ್ಳನ್ನು ಹೆಣ್ಣು ಮಕ್ಕಳು ಕಲಿತು ಏಕೆ ಬಾರಿಸಬಾರದೆಂಬ ಪ್ರಶ್ನೆೆ ಅವರಲ್ಲಿ ಸುಮಾರು 30 ವರ್ಷದ ಹಿಂದೆಯೇ ಉದ್ಭವಿಸಿತ್ತು. ಆದರೆ ಡೊಳ್ಳು ಕಲಿಯುವ ಮಹಿಳೆಯರ ಸಂಖ್ಯೆೆ ಅಷ್ಟೇ ಕಡಿಮೆ ಇತ್ತು. 20 ವರ್ಷಗಳ ಹಿಂದೆ ಸಾಗರ ಸಮೀಪದ ಕುಗ್ವೆೆ ಗ್ರಾಾಮದ ರಾಮಪ್ಪ ಎನ್ನುವವರಲ್ಲಿ ಡೊಳ್ಳು ಕಲಿಯಲು ಚೂಡಾಮಣಿ ಮುಂದಾದರು.  ತನ್ನೊೊಂದಿಗೆ 12 ಸದಸ್ಯರನ್ನೂ ಸಿದ್ಧಮಾಡಿಕೊಂಡು ತರಬೇತಿ ಪಡೆದರು. ಸ್ನೇಹಸಾಗರ ಮಹಿಳಾ ಡೊಳ್ಳು ತಂಡ ಎಂದು ಇದಕ್ಕೆೆ ಹೆಸರನ್ನಿಿಟ್ಟರು. 20013ರಲ್ಲಿ ಸಾಗರದ ಕಾರ್ಯಕ್ರಮವೊಂದರಲ್ಲಿ ಪ್ರಪ್ರಥಮ ಬಾರಿಗೆ ಈ ತಂಡ ಪ್ರದರ್ಶನ ನೀಡಿದಾಗ ಇದನ್ನು ನೋಡಿದ ಜನ ನಿಬ್ಬೆೆರಗಾಗಿದ್ದರು. ಇದು ರಾಜ್ಯವ್ಯಾಾಪಿ ಸುದ್ದಿ ಮತ್ತು ಸದ್ದು ಎರಡನ್ನೂ ಮಾಡಿತು. ಪರಿಣಾಮವಾಗಿ ಈ ತಂಡಕ್ಕೆೆ ಅಪಾರ ಪ್ರೋತ್ಸಾಾಹ ದೊರೆಯಿತು.
ಅಲ್ಲಿಂದ ಶುರುವಾದ ಇವರ ಡೊಳ್ಳಿಿನ ತಂಡದ ಪಯಣ ದೇಶ, ವಿದೇಶವನ್ನೆೆಲ್ಲ ಸುತ್ತಿಿತು. ಹಲವಾರು ಪ್ರಶಸ್ತಿಿ ಪಡೆಯಿತು, ಪ್ರತಿಷ್ಠಿಿತ ಉತ್ಸವಗಳಲ್ಲಿ  ಮೆರೆದಾಡಿತು. ಹೆಸರು ಮಾಡಿತು. ಇವರು ಡೊಳ್ಳು ಪ್ರದರ್ಶನವನ್ನು ಜಮ್ಮುವಿನ ರಾಷ್ಟ್ರೀಯ ಐಕ್ಯತಾ ಶಿಬಿರದಲ್ಲಿ, ಹಂಪಿ ಉತ್ಸವ, ಕರಾವಳಿ ಉತ್ಸವ, ವಿಶ್ವಕನ್ನಡ ಸಮ್ಮೇಳನ, ಕಾಮನ್ವೆೆಲ್‌ತ್‌ ಕ್ರೀಡಾಕೂಟ, ಸಾರ್ಕ್ ಸಮ್ಮೇಳನದಲ್ಲಿ ನೀಡಿದ್ದಾಾರೆ. ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಎಲ್ಲಾಾ ರಾಜ್ಯಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾಾರೆ. ಗುಜರಾತಿನಲ್ಲಿ ನಡೆದ ಉಪ್ಪಿಿನ ಸತ್ಯಾಾಗ್ರಹದ 150ನೆಯ ವರ್ಷಾಚರಣೆಯಲ್ಲಿ ಪ್ರದರ್ಶನ ನೀಡಿ ಪ್ರಸಿದ್ಧಿಿ ಪಡೆದಿದ್ದಾಾರೆ.  ಇದರ ಫಲವಾಗಿ ಚೂಡಾಮಣಿ ಅವರಿಗೆ ಸಂದ ಪ್ರಶಸ್ತಿಿಗಳೂ ಹಲವು. 2ನೆಯ ವಿಶ್ವ ಕನ್ನಡ ಸಮ್ಮೇಳನದಲ್ಲಿ ಹೆಮ್ಮೆೆಯ ಕನ್ನಡತಿ ಪುರಸ್ಕಾಾರ,  ಸಮಾಜರತ್ನ, 2011ರಲ್ಲಿ ರಾಜ್ಯ ಜಾನಪದ ಅಕಾಡೆಮಿ ಪುರಸ್ಕಾಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಅಭಿವೃದ್ಧಿಿ ಇಲಾಖೆ ಕೊಡಮಾಡುವ ಕಿತ್ತೂರು ಚೆನ್ನಮ್ಮ ಪ್ರಶಸ್ತಿಿ ಮೊದಲಾದವು. ನೇಪಾಳ, ಅಬುಧಾಬಿ, ಕುವೈತ್, ಸಿಂಗಪೂರ್, ಥೈಲ್ಯಾಾಂಡ್, ಲಂಡನ್‌ನಲ್ಲಿ ಡೊಳ್ಳು ಕಟ್ಟಿಿ ಕುಣಿದಿದ್ದಾಾರೆ. ಮಲೆನಾಡಿನ ಮಣ್ಣಿಿನ ಕಲೆಯನ್ನು ಶ್ರೀಮಂತಗೊಳಿಸಿದ್ದಲ್ಲದೆ, ಅಲ್ಲಿಯೂ ಇದರ ಕಂಪನ್ನು ಪಸರಿಸಿ ಬಂದಿದ್ದಾಾರೆ.
ಇವರು ಅನೇಕ ಸಾಹಿತ್ಯಿಿಕ ಕಾರ್ಯಕ್ರಮಗಳಲ್ಲಿ ಕತೆ, ಕವನ ರಚಿಸಿ ಓದಿದ್ದಾಾರೆ. ಕಾದಂಬರಿ, ಸಣ್ಣಕಥೆ, ಅಮರನಾಥ ಯಾತ್ರೆೆ ಬಗ್ಗೆೆ ಪ್ರವಾಸಿ ಕಥನವನ್ನು ಬರೆದಿದ್ದಾಾರೆ. ರಂಗಕಲಾವಿದೆಯಾಗಿಯೂ ಅಭಿನಯಿಸಿದ್ದಾಾರೆ. ನಾಟಕ ತರಬೇತಿಯನ್ನೂ ನೀಡಿದ್ದಾಾರೆ. ಇವರ ತಂಡ ಕೋಲಾಟ, ಲಂಬಾಣಿ ನೃತ್ಯ, ವೀರಗಾಸೆಯನ್ನೂ ಪ್ರದರ್ಶಿಸುತ್ತಿಿದೆ. 1994ರಲ್ಲಿ ಸ್ನೇಹಸಾಗರ ಮಹಿಳಾ ಸ್ವಸಹಾಯ  ಸಂಘ ಸ್ಥಾಾಪಿಸಿದ್ದು, ಇಂದಿಗೂ ಅನೇಕ ಸದಸ್ಯೆೆಯರಿಗೆ ವಿವಿಧ ತರಬೇತಿ ಕೊಡಿಸುತ್ತಿಿದ್ದಾಾರೆ. ಹಲವು ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಡೊಳ್ಳು ತರಬೇತಿ ನೀಡುತ್ತಿಿದ್ದಾಾರೆ. ಚೂಡಾಮಣಿ ಅವರ ಸಾಹಸಗಾಥೆಯನ್ನು ವಾರ್ತಾ ಇಲಾಖೆ ದಾಖಲಿಸಿದೆ. ಮಹಿಳೆ ಏನೆಲ್ಲ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆೆ ಇವರು ಉತ್ತಮ ಉದಾಹರಣೆ.
Published on 1st Dec. 2018
...............................