Saturday 23 June 2018

 ಯಕ್ಷಗುರು
ಗಣಪತಿ ಪುರಪ್ಪೆೆಮನೆ





ಸಾಹಿತ್ಯ, ಸಂಗೀತ, ನೃತ್ಯ, ಪ್ರಸಾದನ, ವೀರರಸ ಹೊಮ್ಮಿಿಸುವ ವಾದ್ಯವೃಂದ ಎಲ್ಲವನ್ನೂ ಒಳಗೊಂಡ ಅಪೂರ್ವ ಕಲಾಪ್ರಕಾರ ಯಕ್ಷಗಾನ. ಇದು ನೀಡುವ ಆನಂದ ಆತ್ಮಾಾನಂದ. ಯಕ್ಷಗಾನ ಎಂದಾಕ್ಷಣ ನೆನೆಪಾಗುವುದೇ ಕರಾವಳಿ ಮತ್ತು ಮಲೆನಾಡು. ಮಲೆನಾಡಿನಲ್ಲಿ ಯಕ್ಷಗಾನವನ್ನು ಶಾಸ್ತ್ರೋೋಕ್ತವಾಗಿ ಅಧ್ಯಯನ ಮಾಡಿ ನಡೆಸಿಕೊಂಡು ಹೋಗುತ್ತಿಿರುವವರು ಹಲವರಿದ್ದಾಾರೆ. ಅದನ್ನು ಕಲಿಸಿ, ಮಕ್ಕಳಲ್ಲಿ ಅಥವಾ ನವಪೀಳಿಗೆಯಲ್ಲಿ ಇನ್ನಷ್ಟು ಜಾಗೃತಿ ಮೂಡಿಸುತ್ತಿಿರುವ ಹಲವರು ನಮ್ಮ ಜಿಲ್ಲೆೆಯಲ್ಲಿದ್ದಾಾರೆ. ಅಂತಹವರಲ್ಲಿ ಸಾಗರ ತಾಲೂಕು ಪುರಪ್ಪೆೆಮನೆಯ ಗಣಪತಿ ಹೆಗಡೆ ಒಬ್ಬರು.
ಶಾಲೆಗೆ ಹೋಗುವ ವೇಳೆಯೇ ಯಕ್ಷಗಾನಕ್ಕೆೆ ಮಾರುಹೋದವರು ಗಣಪತಿ ಹೆಗಡೆ. ಜಾನಪದ ಮತ್ತು  ಭಜನೆಯಲ್ಲಿ ಆಸಕ್ತಿಿ ಹೊಂದಿದ್ದ ಇವರು, ಊರಲ್ಲಿದ್ದ ಯಕ್ಷಗಾನದ ಗಾಳಿಗೆ ಮೈಯೊಡ್ಡಿಿದ್ದರಿಂದ ತಾನಾಗಿಯೇ ಅದು ಇವರನ್ನು ಸೆಳೆಯಿತು. ಪರಿಣಾಮವಾಗಿವ, ಹೆಗ್ಗೋೋಡಿನಲ್ಲಿ ಕಲಿಕೆಯನ್ನು ಆರಂಭಿಸಿದರು. ರಾಜ್ಯ ಪ್ರಶಸ್ತಿಿ ಪುರಸ್ಕೃತ ಹೊಸ್ತೋೋಟ ಮಂಜುನಾಥ ಭಾಗ್ವತರ ಮಾರ್ಗದರ್ಶನದಲ್ಲಿ ಕಲಿಕೆ ಆರಂಭಿಸಿ, ಆ ಬಳಿಕ ಉಡುಪಿಯ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ಮಹಾಬಲ ಕಾರಂತರ ಮಾರ್ಗದರ್ಶನಲ್ಲಿ ಇನ್ನಷ್ಟು ತರಬೇತಿ ಪಡೆದರು.
ಯಕ್ಷಗಾನ ನಿರ್ದೇಶನಕೂ ಇಳಿದ ಹೆಗಡೆ ಅವರು, ಕಲಿಕಾ ಶಿಬಿರವನ್ನೂ ಆರಂಭಿಸಿದರು. ತಾಳಮದ್ದಲೆಯಲ್ಲಿ ಅರ್ಥಗಾರಿಕೆ ಮೂಲಕವೂ ಮಿಂಚತೊಡಗಿದರು. ಈ ಎಲ್ಲವುಗಳಿಂದ ಇನ್ನಷ್ಟು ಗಟ್ಟಿಿಯಾದ ಜ್ಞಾಾನವನ್ನು ಪಡೆದು, ಉತ್ತಮ ಕಲಾವಿದರಾಗಿಯೂ ಹೊರಹೊಮ್ಮಿಿದರು.
 ಶಿವಮೊಗ್ಗದಲ್ಲಿ ಯುವಪೀಳಿಗೆಯಲ್ಲಿ ಈ ಕಲೆಯ ಸಂಸ್ಕೃತಿಯನ್ನು ಬಿತ್ತಬೇಕು ಎಂಬ ಮಹತ್ವಾಾಕಾಂಕ್ಷೆ ಹೊಂದಿದ್ದ ಕೆಲವು ಯಕ್ಷಗಾನಾಸಕ್ತರು ಹೆಗಡೆ ಅವರ ಮಾರ್ಗದರ್ಶನದಲ್ಲಿ ಕಲಿಕಾ ಶಿಬಿರ ನಡೆಸಲಾರಂಭಿಸಿದರು. 13 ವರ್ಷದಿಂದ ನಡೆಯುತ್ತಿಿರುವ ಈ ಶಿಬಿರದಲ್ಲಿ ವರ್ಷದಿಂದ ವರ್ಷಕ್ಕೆೆ ಕಲಿಕಾರ್ಥಿಗಳ ಸಂಖ್ಯೆೆ ಏರುತ್ತಲೇ ಇದೆ. ಇದರೊಟ್ಟಿಿಗೆ ಅನೇಕ ಯಕ್ಷ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿಿದ್ದಾಾರೆ. ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ಮಹಿಳೆಯರಿಗೆ ಯಕ್ಷಗಾನ ತರಬೇತಿ ನೀಡಿದ ಕೀರ್ತಿ ಇವರದ್ದು. ಸದ್ಯ ಗೋಪಾಳದಲ್ಲಿ ಮಹಿಳೆಯರಿಗೆ ಮತ್ತು ಸ್ಕೌೌಟ್ ಭವನದಲ್ಲಿ ಬಾಲಕರಿಗೆ ತರಬೇತಿಯನ್ನು ಪ್ರತಿ ಶನಿವಾರ ಮತ್ತು ಭಾನುವಾರ ನೀಡುತ್ತಿಿದ್ದಾಾರೆ. ಪ್ರತಿ ಬ್ಯಾಾಚಿನಲ್ಲೂ ಕನಿಷ್ಠ 25ರಷ್ಟು ಕಲಿಕಾರ್ಥಿಗಳು ಇದ್ದೇ ಇರುತ್ತಾಾರೆ. ಕುಣಿತ, ಮಾತುಗಾರಿಕೆಯನ್ನು ಹೇಳಿಕೊಡುತ್ತಾಾರೆ. ಗಾಜನೂರಿನನ ನವೋದಯ ಶಾಲೆಯಲ್ಲಿ ಸುಮಾರು 4 ವರ್ಷ ತರಬೇತಿ ನೀಡಿದ್ದಾಾರೆ. ಸಾಗರದ ಹೊಂಗಿರಣ ಶಾಲೆಯಲ್ಲಿ ಇಂದಿಗೂ ತರಬೇತಿ ನೀಡುತ್ತ ನೂರಾರು ಮಕ್ಕಳನ್ನು ಯಕ್ಷಲೋಕದತ್ತ ಕರೆತರುತ್ತಿಿದ್ದಾಾರೆ.  
 ಶಿವಮೊಗ್ಗ, ಮಾರುತಿಪುರ, ಸಾಗರದಲ್ಲಿ ಮುಖವರ್ಣಿಕೆ ಶಿಬಿರವನ್ನು ನಡೆಸಿದ್ದಾಾರೆ. ಹೆಗ್ಗೋೋಡಿನ ಕೆ. ವಿ ಸುಬ್ಬಣ್ಣ ಮತ್ತು ತಮ್ಮ ತಂದೆ ರಾಮಪ್ಪ ಪಟೇಲರ ಪ್ರೇರಣೆಯಿಂದ ನಾಟಕ ರಂಗಕ್ಕೂ ಕಾಲಿಟ್ಟ ಗಣಪತಿ, ಸುಮಾರು 40 ವರ್ಷದಿಂದ ಯಕ್ಷಗಾನ ಮತ್ತು ನಾಟಕ ಈ ಎರಡೂ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಿದ್ದಾಾರೆ. ಇವರು ಕಂಸವಧೆ, ಏಕಲವ್ಯ, ವೀರಮಣಿ, ಲವಕುಶ ಮೊದಲಾದ ಹತ್ತಾಾರು ಪ್ರಸಂಗಗಳಲ್ಲಿ ಕೃಷ್ಣ, ಕಿರಾತ, ಭೀಮ, ಬಲರಾಮ, ಭಸ್ಮಾಾಸುರ, ಆಂಜನೇಯ, ಹಾಸ್ಯ, ಸ್ತ್ರೀ ವೇಶವನ್ನು ನಿರ್ವಹಿಸಿದ್ದಾಾರೆ. 
ಯಕ್ಷಗಾನ ಪ್ರದರ್ಶನವನ್ನು ರಾಜ್ಯದಾದ್ಯಂತ ತಮ್ಮ ಶಿಷ್ಯರೊಂದಿಗೆ ನಡೆಸಿಕೊಟ್ಟ ಇವರು, ನೀನಾಸಂ ಜೊತೆ ನಾಟಕದಲ್ಲಿ ಶೇಕ್‌ಸ್‌‌ಪಿಯರ್ ನಾಟಕದ ಸವಕಳಿಯಪ್ಪ, ಶಹಜಹಾನ್‌ದಲ್ಲಿ ದಿಲ್‌ದಾರ್, ಬಾಚಯ್ಯ, ಸೂತ್ರದಾರನ ಪಾತ್ರವನ್ನು ನಿರ್ವಹಿಸಿದ್ದಾಾರೆ. ಸಾಕೇತ ಕಲಾವಿದರ ಸಂಸ್ಥೆೆಯ ಸಂಸ್ಥಾಾಪಕ ಸದಸ್ಯರೂ ಇವರಾಗಿದ್ದಾಾರೆ. ಇವರ ಕಲೆ ಮತ್ತು ಪ್ರದರ್ಶನಕ್ಕೆೆ ಹತ್ತಾಾರು ಪ್ರಶಸ್ತಿಿಗಳು ಲಭ್ಯವಾಗಿವೆ. ವಿವಿಧ ಸಂಘಟನೆಗಳು ಇವರನ್ನು ಗೌರವಿಸಿ ಹರಸಿವೆ.     
ಜಿಲ್ಲೆೆಯಲ್ಲಿ ಉತ್ತಮ ಕಲಾವಿದರನ್ನು ಹುಟ್ಟು ಹಾಕಿ,  ಮುಂದಿನ ಪೀಳಿಗೆಯವರಲ್ಲಿ ಯಕ್ಷಗಾನದ ಆಸಕ್ತಿಿ ಬೆಳೆಸಿ, ಉಳಿಸುವ ಮಹತ್ತರ ಕೆಲಸದಲ್ಲಿ ಹೆಗಡೆ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾಾರೆ.
23.6.20-18
................................................

Saturday 16 June 2018

ಸ್ವಯಂ ಸಾಧಕ ಪ್ರತಿಭೆ
ಪೃಥ್ವಿಿ ಗೌಡ

 .ಯಾರ ನೆರವೂ ಇಲ್ಲದೆ ಸ್ವಪ್ರಯತ್ನದಿಂದ ಮೇಲೆ ಬರುವುದು ಸುಲಭದ ಮಾತಲ್ಲ. ಆದರೆ ಆತ ಕ್ರಿಿಯಾಶೀಲನಾದಲ್ಲಿ ಸ್ವಂತಿಕೆಯಿಂದಲೇ ಎಲ್ಲವನ್ನೂ ಸಾಧಿಸಬಲ್ಲ. ನಗರದ ಯುವಕನೊಬ್ಬ ಸ್ವಪ್ರಯತ್ನ, ಸತತ ಶ್ರಮದಿಂದ ಕಷ್ಟಕರವಾದುದನ್ನು ಇಷ್ಟಪಟ್ಟು ಸಾಧಿಸಿ ಜನಪ್ರಿಿಯನಾಗಿದ್ದಾಾನೆ. ರಂಗಕಲೆ, ಸಿನಿಮಾ, ಕಿರುಚಿತ್ರ, ಹಾಡುಗಾರಿಕೆ ಮೊದಲಾದ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಪ್ರಸಿದ್ಧಿಿಯಾಗಿದ್ದಾಾನೆ.
ಪೃಥ್ವಿಿ ಗೌಡ. ಶಿವಮೊಗ್ಗದಲ್ಲಿ ಈತನ ಹೆಸರು ಕೇಳದವರು ವಿರಳ. ಇತ್ತೀಚೆಗೆ ಜರುಗಿದ ಕಿರುಚಿತ್ರ ಸ್ಪರ್ಧೆ (ಅಂಬೆಗಾಲು-3)ಯಲ್ಲಿ ಉತ್ತಮ ನಟ ಎಂಬ ಕೀರ್ತಿಗೆ ಭಾಜನನಾಗುವ ಮೂಲಕ ಮತ್ತೊೊಮ್ಮೆೆ ತನ್ನ ಬಹುಮುಖ ಪ್ರತಿಭೆಯನ್ನು ಪ್ರಚುರಪಡಿಸಿದ್ದಾಾನೆ. ಸಾಧನೆಗೆ ಸತತ ಪ್ರಯತ್ನ ಬೇಕು ಎನ್ನುವುದನ್ನು ಅರಿತಿರುವ ಈತ, ಈಗ ಅದರಲ್ಲೇ ಸಂಪೂರ್ಣವಾಗಿ ಕೆಲಸ ಮಾಡುತ್ತ, ಇನ್ನಷ್ಟು ಬೆಳೆಯುವ ಆಶಾವಾದ ಹೊಂದಿದ್ದಾಾನೆ. 
ನಗರದ ಅಶೋಕನಗರವಾಸಿಯದ  ಪೃಥ್ವಿಿ, ಹೈಸ್ಕೂಲು ಓದುತ್ತಿಿರುವಾಗಲೇ ಸಂಗೀತ, ರಂಗಕಲೆಯತ್ತ ಆಸಕ್ತಿಿ ಬೆಳೆಸಿಕೊಂಡವನು. ಆಗ ಪ್ರೋತ್ಸಾಾಹ ಸಿಕ್ಕದೆ ತಾನೇ ಮುಂದೆ ಬಂದು ಕಲೆಯನ್ನು ಪ್ರದರ್ಶಿಸುವ ಮೂಲಕ ಹೊರಜಗತ್ತಿಿಗೆ ತನ್ನನ್ನು ತಾನು ಪರಿಚಯಿಸಿಕೊಂಡಿದ್ದಾಾನೆ. ಆನಂತರವೂ ಇದೇ ಕ್ಷೇತ್ರದಲ್ಲಿ ಮುಂದುವರೆದ ಪರಿಣಾಮವಾಗಿ ಈಗ ರಾಜ್ಯಮಟ್ಟದಲ್ಲಿ ಹೆಸರು, ಕೀರ್ತಿ ಸಂಪಾದಿಸಿದ್ದಾಾನೆ. ಸ್ವಂತ ಆಲ್ಬಂ ಹಾಡು ರಚನೆ, ನಿರ್ದೇಶನಕ್ಕೆೆ ಇಳಿದಿದ್ದಾಾನೆ. ಇವೆಲ್ಲವೂ ಈತನ ಹೆಸರನ್ನು ಇನ್ನಷ್ಟು ಮೇಲಕ್ಕೇರಿಸಿವೆ.
 ಪೃಥ್ವಿಿಯ ಸಾಧನೆಯ ಪಟ್ಟಿಿ ದೊಡ್ಡದಿದೆ. 2014ರಿಂದಲೇ ತನ್ನಲ್ಲಿರುವ ವಿವಿಧ ಕಲೆಯನ್ನು ಹೊರಜಗತ್ತಿಿಗೆ ತೋರಿಸಿಕೊಳ್ಳಲಾರಂಭಿಸಿದನು. ಸ್ಪರ್ಧೆಗಳಲ್ಲಿ  ಭಾಗವಹಿಸಿ ಬಹುಮಾನವನ್ನು ತನ್ನದಾಗಿಸಿಕೊಂಡನು. 2014ರಲ್ಲಿ ತೀರ್ಥಹಳ್ಳಿಿಯಲ್ಲಿ ಜರುಗಿದ  ಮಲೆನಾಡು ಕೋಗಿಲೆ ಹಾಡು ಸ್ಪರ್ಧೆಯಲ್ಲಿ ಜಯಶೀಲನಾದ ನಂತರ ಹಿಂದಿರುಗಿ ನೋಡಲೇ ಇಲ್ಲ. ಆನಂತರ ಶಿವಮೊಗ್ಗದಲ್ಲಿ ಜರುಗಿದ ವಾಯ್‌ಸ್‌ ಆಫ್ ಕರ್ನಾಟಕ, ಸಿಂಗಿಂಗ್ ಸ್ಟಾಾರ್ ಆಫ್ ಕರ್ನಾಟಕದಲ್ಲಿಯೂ  ಸಮಾಧಾನಕರ ಪ್ರಶಸ್ತಿಿ ಗಳಿಸಿದನು. ಚಂದನದಲ್ಲಿ ಪ್ರಸಾರವಾದ  ಮಧುರಮಧುರವೀ ಮಂಜುಳಗಾನ ಮತ್ತು ಈ ಭೂಮಿ ನಮ್ಮದು ಕಾರ್ಯಕ್ರಮದಲ್ಲಿ ಹಾಡಿರುವ ಕೀರ್ತಿ ಈತನದು. ಕನ್ನಡ ಮಾಸ್ಟರ್‌ಪೀಸ್ ಎಂಬ ಆಲ್ಬಂನಲ್ಲಿ ಪ್ರಥಮ ಬಾರಿಗೆ ಹಾಡುವ ಮೂಲಕ ಆ ಕ್ಷೇತ್ರದಲ್ಲಿಯೂ ತನ್ನ ಹೆಸರನ್ನು ಛಾಪಿಸಿದ್ದಾಾನೆ. ತಥಾಸ್ತು, ಕ್ರಾಾಂತಿ ಕಹಳೆ ಎಂಬ ಸಿನಿಮಾದಲ್ಲಿ ಹಾಡಿದ್ದಾಾನೆ. ಸುಮಾರು 30 ಆಲ್ಬಂನಲ್ಲಿ  ಮುಖ್ಯ ಹಾಡುಗರನಾಗಿ ಕಾಣಿಸಿಕೊಂಡಿದ್ದಾಾನೆ.
ಗಿಟಾರ್ ವಾದಕನಾಗಿಯತೂ ಹೆಸರುಮಾಡಿರುವ ಪೃಥ್ವಿಿ, ಸುಮಾರು 10 ಪ್ರದರ್ಶನಗಳನ್ನು ರಾಜ್ಯದ ವಿವಿಧೆಡೆ ನೀಡಿದ್ದಾಾನೆ. 9 ಆಲ್ಬಂಗಳಿಗೆ ಹಾಡು ಕಂಪೋಸ್ ಮಾಡಿದ್ದಾಾರೆ. ಕನ್ನಡದಲ್ಲಿ 16  ಆಲ್ಬಂಗಳಿಗೆ ಹಾಡು ಬರೆದಿದ್ದಾಾರೆ. 14 ಕಿರುಚಿತ್ರ, 3 ಜಾಹೀರಾತುಗಳಿಗೆ ಸಂಭಾಷಣೆ ಬರೆದಿದ್ದಾಾರೆ. 10 ಕಿರುಚಿತ್ರಗಳನ್ನು ನಿರ್ದೇಶಿಸಿ, 40 ಕಿರುಚಿತ್ರದಲ್ಲಿ ನಟನೆಯನ್ನೂ ಮಾಡಿದ್ದಾಾರೆ. ಕೆ.ಕೆ. ಟೀಮ್ ಎಂಬ ಕನ್ನಡ ಸಿನಿಮಾದಲ್ಲಿ ಮತ್ತು ಇ-ಪೀಪಲ್ ಎಂಬ ಜಾಹೀರಾತಿನಲ್ಲೂ  ಅಭಿನಯಿಸಿದ್ದಾಾನೆ.
ಮೈ ಲವ್ ಮೈ ನೇಶನ್ ಎಂಬ ಕಿರುಚಿತ್ರವನ್ನು ಬರೆದು ನಿರ್ದೇಶಿಸಿದ್ದು, ಇದು ಅತ್ಯುತ್ತಮ ದೇಶಭಕ್ತಿಿ ವಿಚಾರ ಹೊಂದಿದ ಕಥೆ ಎಂಬ ಪ್ರಶಸ್ತಿಿಗೆ, ಪರ್ಣ ಎಂಬ ಕಿರುಚಿತ್ರಕ್ಕೆೆ ಈ ವರ್ಷದ ಅಂಬೆಗಾಲು-3 ರ  ಉತ್ತಮ ಕಿರುಚಿತ್ರಪ್ರಶಸ್ತಿಿ, ಇದೇ ಚಿತ್ರಕ್ಕೆೆ  ನಿರ್ಣಾಯಕರ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿಿ,  ವಂದೇ ಮಾತರಂ ಎಂಬ ಆಲ್ಬಂ ಹಾಡಿಗೆ ಅತ್ಯುತ್ತಮ ಆಲ್ಬಂ ಸಾಂಗ್ ಪ್ರಶಸ್ತಿಿ, ಎಬಿಸಿಡಿ ಆಲ್ಬಂ ಹಾಡಿಗೆ  ಉತ್ತಮ ಆಲ್ಬಂ ಹಾಡು ಪ್ರಶಸ್ತಿಿಯನ್ನು ಪಡೆದಿದ್ದಾಾನೆ.
ಸಮೃದ್ಧಿಿ ಎಂಬ ನಾಟಕ ತಂಡವನ್ನು ಹುಟ್ಟು ಹಾಕಿ ಅದರ ಮೂಲಕ ಸಂರಕ್ಷಕ, ಆಝಾದ್, ಈಸೂರು ದಂಗೆ, ಅಂಗುಲಿಮಾಲಾ, ಜೀವನ ಸಂಜೆ ಮತ್ತು ಜೆಎನ್‌ಯು ಎಂಬ 6 ನಾಟಕಗಳನ್ನು ನಿರ್ದೇಶಿಸಿ, ಸುಮಾರು 25 ಪ್ರದರ್ಶನವನ್ನು ವಿವಿಧೆಡೆ ನೀಡಿದ್ದಾಾನೆ. ಹೀಗೆ ತಾನು ವಿಭಿನ್ನವಾದುದನ್ನು ಸಾಧಿಸುವ ಮನೋಭಾವದ ಯುವಕ  ಎನ್ನುವುದನ್ನು ತೋರಿಸುತ್ತಿಿದಾನೆ.
published on 16-june-18

Saturday 9 June 2018

ಕೆಲಸದಲ್ಲಿ ಮಾದರಿ
ಪೊಲೀಸ್ ಮಂಜಣ್ಣ

ನಾವು ಮಾಡುವ ಕೆಲಸದಲ್ಲಿ ಅಚಲ ನಂಬಿಕೆ, ದೃಢ ವಿಶ್ವಾಾಸ, ಮುಕ್ತ ಮನಸ್ಸು ಮತ್ತು ಶೃದ್ಧೆೆ ಇದ್ದರೆ ನಾವೇನು ಸಾಧಿಸಬೇಕೆಂದುಕೊಂಡಿರುತ್ತೇವೆಯೋ ಅದು ಈಡೇರುತ್ತದೆ. ಟೀಕೆಗೆ ಹೆದರದೆ ನಾವಾಯಿತು, ನಮ್ಮ ಕೆಲಸವಾಯಿತು ಎಂದುಕೊಡು ಮುಂದೆ ಸಾಗಬೇಕು. ಆಗ ತನ್ನಿಿಂತಾನೇ ಸಾಧನೆ ಸಾಧ್ಯವಾಗುತ್ತದೆ, ಹೆಸರು, ಕೀರ್ತಿ ಬರುತ್ತದೆ. ಇದಕ್ಕೆೆ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿಿರುವ ಮುಖ್ಯಪೇದೆ ಎಸ್. ಮಂಜುನಾಥ ಸಾಕ್ಷಿ.
ಮಂಜುನಾಥ ಅವರು ಪ್ರಾಾಮಾಣಿಕತೆ, ನಿಸ್ಪಹತೆ, ಪ್ರೀತಿ- ವಿಶ್ವಾಾಸಕ್ಕೆೆ ಹೆಸರು. ತಮ್ಮ 26 ವರ್ಷದ ಸೇವೆಯಲ್ಲಿ ಅವರು ಗಳಿಸಿದ್ದು ಇದನ್ನೇ. ಕೆಲಸ ಎಂದರೆ ದೇವರು. ಅದು ಶುದ್ಧ, ಪ್ರಾಾಮಾಣಿಕ, ಇನ್ನೊೊಬ್ಬರನ್ನು ನೋಯಿಸದಂತಿರಬೇಕು ಎನ್ನುವ ಅವರು, ಇದನ್ನೇ ಸಾಧಿಸಿತೋರಿಸಿದ್ದಾಾರೆ. ಯಾವ ಗತ್ತು-ಗೈರತ್ತು ಇಲ್ಲದೆ, ಯಾರ ಮೇಲೂ ದಬ್ಬಾಾಳಿಕೆ ನಡೆಸದೆ, ಎಲ್ಲೂ ಹಣಕ್ಕಾಾಗಿ ಕೈಚಾಚದೆ, ಯಾರನ್ನೂ ನೋಯಿಸದವರು. ಪೊಲೀಸರೆಂದರೆ ಹೇಗಿರಬೇಕು ಎನ್ನುವುದಕ್ಕೆೆ ಉದಾಹರಣೆ.
ಮೂಲತಃ ಶಿಕಾರಿಪುರದವರಾದ ಮಂಜುನಾಥ, ಎಸ್‌ಎಸ್‌ಎಲ್‌ಸಿ ಓದಿದ ನಂತರ ಪೊಲೀಸ್ ಕೆಲಸಕ್ಕೆೆ ಸೇರಿ, ಭದ್ರಾಾವತಿ ಮತ್ತು ಶಿವಮೊಗ್ಗ ನಗರದಲ್ಲಿ ಕೆಲಸ ಮಾಡಿದ್ದಾಾರೆ. ಇವರ ತಂದೆ ಬಸವರಾಜಪ್ಪ ಸಹ ಪೊಲೀಸ್ ಆಗಿ ಕೆಲಸ ಮಾಡಿದವರು. ತಂದೆ ಗಳಿಸಿದ ಹೆಸರನ್ನು ಉಳಿಸಿಕೊಂಡು ಹೋಗುವುದರ ಜೊತೆಗೆ ಇನ್ನಷ್ಟು ಅದಕ್ಕೆೆ ಸಾಧನೆ ಸೇರಿಸಬೇಕೆನ್ನುವುದು  ಅವರ ಇಚ್ಛೆೆ. ಅದಕ್ಕಾಾಗಿ ಕೆಲಸಕ್ಕೆೆ ಎಲ್ಲೂ ಚ್ಯುತಿ ಬಾರದಂತೆ ಜಾಗೃತೆಯಿಂದ ನಡೆದುಕೊಳ್ಳುತ್ತಾಾರೆ.
  26 ವರ್ಷದ ಹಿಂದಿನ ಸೈಕಲ್ ಅವರ ಸಂಗಾತಿ. ಇಂದಿಗೂ ಸೈಕಲ್‌ನಲ್ಲೇ ಸುತ್ತಾಾಡುತ್ತಾಾರೆ. ನಗರದಲ್ಲಿ ಸೈಕಲ್ ಬಳಸುವ ಏಕೈಕ ಪೊಲೀಸ್ ಇವರು.  ಈ ಸೈಕಲ್ ಮೇಲೆ ಎಲ್ಲಿಲ್ಲದ ಪ್ರೀತಿ. ತಮ್ಮ ಬಳಿ ಮೊಪೆಡ್ ಇದ್ದರೂ ಸೈಕಲನ್ನು ಈ ತಂತ್ರಜ್ಞಾಾನದ ಕಾಲದಲ್ಲಿಯೂ ಮೂಲೆಗೊತ್ತದೆ ಬಳಸುತ್ತಿಿದ್ದಾಾರೆ. ಅವರ ವಿಶೇಷ ಸಾಧನೆ ಎಂದರೆ, ಸುಮಾರು ಐವತ್ತಕ್ಕೂ ಹೆಚ್ಚು ದಂಪತಿಗಳನ್ನು ಒಂದುಗೂಡಿಸಿದ್ದು. ಇದನ್ನು ಎಂದಿಗೂ ಮರೆಯಲಾಗದು.
ನಗರದ ಮಹಿಳಾ ಠಾಣೆಯಲ್ಲಿ ಅವರು ಕೆಲಸ ಮಾಡುವಾಗ ಈ ಸಾಧನೆ ಮಾಡಿದ್ದಾಾರೆ. ಹೊಡೆದಾಡಿಕೊಂಡು, ಕೌಟುಂಬಿಕ ಕಲಹ ಮಾಡಿಕೊಂಡು ಠಾಣೆಗೆ ಬರುವವರೇ ಜಾಸ್ತಿಿ. ಅವರನ್ನೆೆಲ್ಲ ಒಟ್ಟಿಿಗೆ ಕೂಡ್ರಿಿಸಿ, ಸಮಾಧಾನಗೊಳಿಸಿ, ಸಾಂತ್ವನ ಹೇಳಿ ಮತ್ತೆೆ ಒಂದಾಗಿ ಬಾಳುವಂತೆ ಮಾಡುವ ಅವರ ಕಲೆ ಇಂದಿಗೂ ಜನಪ್ರಿಿಯ. ಈಗ ಒಟ್ಟಾಾಗಿ ಬಾಳುವ ಈ ದಂಪತಿಗಳಲ್ಲಿ ಹಲವರು ಮಂಜುನಾಥ ಅವರ ಬಳಿ ಬಂದು ತಮ್ಮನ್ನು ಒಂದುಗೂಡಿಸಿ ಮನಸ್ಸನ್ನು ಪರಿವರ್ತಿಸಿದ್ದಕ್ಕೆೆ ಕೃತಜ್ಞತೆ ಸಲ್ಲಿಸುತ್ತಿಿದ್ದಾಾರೆ.
ಕಳ್ಳರಿಗೂ ಸಹ ಅವರು ಪೊಲೀಸ್ ಭಾಷೆ ಬಳಸಿದವರಲ್ಲ. ಯಾರ ಮೇಲೂ ದಂಡ ಪ್ರಯೋಗಿಸಿದವರಲ್ಲ. ಗಟ್ಟಿಿಯಾಗಿ ಗದರಿಸಿದವರೂ ಅಲ್ಲ, ಮಾಡಿದ ತಪ್ಪು ಅರಿವಾಗಿ ಮರಳಿ ಎಂದಿನಂತೆ ಜೀವನ ರೂಪಿಸಿಕೊಳ್ಳುವಂತೆ ಪರಿವರ್ತಿಸುವ ಕಲೆ ಅವರಲ್ಲಿದೆ. ಇದಕ್ಕಾಾಗಿಯೇ ಮಂಜುನಾಥ್ (ಎಲ್ಲರ ಬಾಯಲ್ಲೂ ಮಂಜಣ್ಣ) ಯಾರಿಗೂ ಕೇಡು ಬಯಸದ ವ್ಯಕ್ತಿಿ ಎಂದೇ ಜನಜನಿತರು. ಬುದ್ಧಿಿಮಾತು ಮೂಲಕವೇ ಟಾನಿಕ್ ನೀಡಿ ಸರಿದಾರಿಗೆ ತರುತ್ತಾಾರೆ.
ಸದ್ಯದಲ್ಲೇ ಎಎಸ್‌ಐ ಆಗಿ ಭಡ್ತಿಿ ಪಡೆಯಲಿರುವ ಮಂಜಣ್ಣ, ಮೇಲಧಿಕಾರಿಗಳ  ಮತ್ತು ಕೆಳ ಹಂತದ ಸಿಬ್ಬಂದಿಗಳ ಸಹಕಾರ, ನೆರವನ್ನು ಮರೆಯದೆ ಸ್ಮರಿಸುತ್ತ, ಇಲಾಖೆಯಲ್ಲಿ ಕೆಲಸ ಮಾಡಿ ಹೆಸರುಗಳಿಸುವುದು ಕಷ್ಟದ ಕೆಲಸ. ಸಾಧನೆಗೆ ಹಿರಿ-ಕಿರಿಯ ಅಧಿಕಾರಿಗಳ, ಸಿಬ್ಬಂದಿಗಳ ಸಹಕಾರವೂ ಮುಖ್ಯ ಎನ್ನುತ್ತಾಾರೆ. ಇವರ ಪ್ರಾಾಮಾಣಿಕ ಕೆಲಸವನ್ನು ಮೆಚ್ಚಿಿ ಗಾಡಿಕೊಪ್ಪ ಲಯನ್‌ಸ್‌ ಕ್ಲಬ್‌ನವರು ಉತ್ತಮ ಸಾಧಕ ಪೊಲೀಸ್ ಎಂಬ ಬಿರುದು ನೀಡಿ ಗೌರವಿಸಿದ್ದಾಾರೆ.
ಇಂದಿಗೂ ಸದಾ ನಗುಮೊಗದ ಪೊಲೀಸ್ ಮಂಜಣ್ಣ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. 
PUBLISHED ON 8TH JUNE 2018
,,,,,,,,,,,,,,,,,,,,,,,,,,,,,,,,,,,

Monday 4 June 2018

ಕಬಡ್ಡಿಿಯ ಸಾಧಕ
ನವೀನ್ ನಾಯ್‌ಕ್‌



ಕಬಡ್ಡಿಿ ಶಕ್ತಿಿ ಮತ್ತು ಯುಕ್ತಿಿಯಿಂದ ಕೂಡಿದ ಆಟ. ಮೂಲತಃ  ಗ್ರಾಾಮೀಣ ಪ್ರದೇಶದ ಕಲೆಯಾದರೂ ಆನಂತರದ ವರ್ಷಗಳಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಬಡ್ಡಿಿ ಟೂರ್ನಿ ನಡೆಯುತ್ತಿಿದೆ. ವಿಶೇಷವೆಂದರೆ, ಗ್ರಾಾಮಾಂತರ ಪ್ರತಿಭೆಗಳೇ ಇದರಲ್ಲಿ ಅತಿ ಹೆಚ್ಚು ಸಂಖ್ಯೆೆಯ ಆಟಗಾರರಾಗಿರುವುದು.
ಈ ಕ್ರೀಡೆ ಶಿವಮೊಗ್ಗ ಜಿಲ್ಲೆೆಯಲ್ಲಿ ಸಾಕಷ್ಟು ಪ್ರಚಲಿತದಲ್ಲಿದೆ. ಅನೇಕ ಯುವಕರು ಇದರಲ್ಲಿ ಹೆಸರುಗಳಿಸುತ್ತಿಿದ್ದಾಾರೆ. ಇತ್ತೀಚಿನ ದಿನಗಳಲ್ಲಿ ಈ ಕ್ರೀಡೆಗೆ ಸೇರಲ್ಪಟ್ಟ ಹೆಸರು ನವೀನ್ ನಾಯ್‌ಕ್‌. ನಗರದ ಬಾಪೂಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿಿತಿಯ ಬಿ.ಎ. ವಿದ್ಯಾಾರ್ಥಿಯಾಗಿರುವ ನವೀನ್, ಗುಜರಾತ್‌ನ ಆನಂದ್‌ನಲ್ಲಿ ಇತ್ತೀಚೆಗೆ ಜರುಗಿದ ಈ ಬಾರಿಯ ವಿದ್ಯಾಾರ್ಥಿ ಒಲಿಂಪಿಕ್‌ಸ್‌‌ನಲ್ಲಿ ರಾಜ್ಯ ತಂಡದಲ್ಲಿ ಆಡಿ ಪ್ರಶಸ್ತಿಿಯೊಂದಿಗೆ ಮರಳಿದ್ದಾಾನೆ.
ನವೀನ್ ಸದ್ಯದಲ್ಲಿ ಮಲೇಶಿಯಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕಬಡ್ಡಿಿ ಟೂರ್ನಿಯಲ್ಲಿ ಪಾಲ್ಗೊೊಳ್ಳಲು ಆಯ್ಕೆೆಯಾಗಿದ್ದಾಾನೆ. ಪ್ರಾಾಥಮಿಕ ಶಾಲೆಯಲ್ಲಿ ಓದುವಾಗಲೇ ಕಬಡ್ಡಿಿ ಮತ್ತು ಕುಸ್ತಿಿ ಬಗ್ಗೆೆ ವಿಶೇಷ ಆಸಕ್ತಿಿ ನವೀನ್‌ನನಲ್ಲಿತ್ತು. ಪ್ರೌೌಢಶಾಲಾ ಮಟ್ಟದಲ್ಲೂ ಇದನ್ನು ಮುಂದುವರೆಸಿ ಇಂದಿನವರೆಗೂ ಯಾರಿಂದಲೂ ತರಬೇತಿ ಪಡೆಯದೆ ಸ್ವಂತವಾಗಿ ಆಡುವ ಮೂಲಕ ಅದರಲ್ಲಿ ಮುಂದೆ ಬಂದಿದ್ದಾಾನೆ. ಇವರ ಮಾವ ಆನಂದ್ ಸಹ ಕಬಡ್ಡಿಿ ಆಟಗಾರರಾಗಿದ್ದು. ಅವರಿಂದ ಹೆಚ್ಚಿಿನ ಸಲಹೆ-ಸೂಚನೆ ಪಡೆದುಕೊಂಡು ಈ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿಿದ್ದಾಾನೆ.
 ನವೀನ್  ಸಹೋದರ  ಅಶೋಕ್ ಸಹ ಕಬಡ್ಡಿಿಯಲ್ಲಿ ಹೆಸರು ಮಾಡುತ್ತಿಿದ್ದಾಾನೆ. ಈತ ವಿದ್ಯಾಾರ್ಥಿ ಒಲಿಂಪಿಕ್‌ಸ್‌‌ಗೆ ಕರ್ನಾಟಕ ತಂಡದ ನಾಯಕನಾಗಿದ್ದನು. ಸದ್ಯ ಆಳ್ವಾಾಸ್‌ನಲ್ಲಿ ಪದವಿಗೆ ಸೇರಿರುವ ಅಶೋಕ್ ಸಹ ಮಲೇಶಿಯಾಕ್ಕೆೆ ಆಯ್ಕೆೆಯಾಗಿದ್ದಾಾನೆ. ಕಬಡ್ಡಿಿ ಸಹೋದರರಾಗಿರುವ ಇವರಿಗೆ ಆನಂದ್ ಎಲ್ಲ ರೀತಿಯ ಪ್ರೋತ್ಸಾಾಹ ನೀಡಿ ಬೆಳೆಸುತ್ತಿಿದ್ದಾಾರೆ.
ಕಳೆದ ಬಾರಿ ಕುವೆಂಪು ವಿಶ್ವವಿದ್ಯಾಾಲಯದ ಕಬಡ್ಡಿಿ ತಂಡದ ಆಯ್ಕಗೆ ನವೀನ್ ಹೋಗಿದ್ದರೂ  ಎತ್ತರ ಕಡಿಮೆ ಎಂಬ ಕಾರಣದಿಂದ ಅವರನ್ನು ಕೈಬಿಡಲಾಗಿತ್ತು. ಆದರೆ ಇದರಿಂದ ಎದೆಗುಂದದೆ ಕಾಲೇಜಿನಲ್ಲಿ ಸಮಾನಮನಸ್ಕರ ತಂಡ ಕಟ್ಟಿಿ ಆಡುತ್ತಿಿದ್ದರು. ಈ ಮೂಲಕ ಸಾಧ್ಯವಾದಾಗಲೆಲ್ಲ ತಾವೇ ತರಬೇತಿ ಪಡೆಯುತ್ತಿಿದ್ದರು. ಜೊತೆಗೆ ಹಲವಾರು ಗ್ರಾಾಮಾಂತರ ಟೂರ್ನಿಗಳಲ್ಲೂ ಈ ತಂಡ ಪಾಲ್ಗೊೊಳ್ಳುತ್ತಿಿತ್ತು. ಸದಾ ಕಬಡ್ಡಿಿಯ ಬಗ್ಗೆೆ ಆಸಕ್ತಿಿ ಹೊಂದಿ, ಅದರಲ್ಲೇ ಏನಾದರೂ ಸಾಧನೆ ಮಾಡಬೇಕೆನ್ನುವ ಕನಸು ಕಾಣುತ್ತಿಿರುವ ನವೀನ್, ಸ್ವಂತ ಪರಿಶ್ರಮದಿಂದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಂತಾಗಿದ್ದಾಾನೆ. 
ಮೂಲತಃ ಬಡ ರೈತ ಕುಟುಂಬದವರಾದ ಈ ಸಹೋದರರರು, ಕ್ರೀಡಾ ಕ್ಷೇತ್ರದಲ್ಲಿ ಹೆಸರು ಗಳಿಸುವ ಉತ್ಕಟೇಚ್ಛೆೆ ಹೊಂದಿದ್ದಾಾರೆ.  ಕ್ರೀಡಾ ಕೋಟಾದಲ್ಲೇ ನೌಕರಿ ಪಡೆಯುವ ಆಸೆ ನವೀನ್‌ದ್ದು, ಜೊತೆಗೆ ಕಬಡ್ಡಿಿಯಲ್ಲಿ ಜಿಲ್ಲೆೆಯಲ್ಲಿ ಈವರೆಗೆ ಯಾರೂ ಮಾಡದ ವಿಶೇಷವಾದ ಸಾಧನೆ ಮಾಡಬೇಕು. ದೇಶೀಯ ತಂಡಕ್ಕೆೆ ಆಯ್ಕೆೆಯಾಗಬೇಕು. ಪ್ರೊ ಕಬಡ್ಡಿಿಯಲ್ಲೂ ಸ್ಥಾಾನ ಗಿಟ್ಟಿಿಸಬೇಕು ಎನ್ನುವ ಮಹತ್ವಾಾಕಾಂಕ್ಷೆಯಲ್ಲಿದ್ದಾಾನೆ. ಈ ಬಾರಿಯಾದರೂ ಕುವೆಂಪು ವಿವಿ ತಂಡದಲ್ಲಿ ಸ್ಥಾಾನ ಗಿಟ್ಟಿಿಸಲು ಎಲ್ಲ ರೀತಿಯ ತರಬೇತಿಯನ್ನು ನಡೆಸುತ್ತಿಿದ್ದಾಾನೆ.
 ಸದೃಢ ಮೈಕಟ್ಟು ಹೊಂದಿರುವ ನವೀನ್‌ಗೆ ಕಾಲೇಜಿನಲ್ಲಿ ಉತ್ತಮ ಪ್ರೋತ್ಸಾಾಹ ದೊರೆಯುತ್ತಿಿದೆ. ಆದರೆ ಕಬಡ್ಡಿಿ ತಂಡವೇ ಇಲ್ಲದ ಕಾರಣ ಸ್ವಂತವಾಗಿಯೇ ಎಲ್ಲವನ್ನೂ ಖರ್ಚು ಮಾಡಿ ಬೆಳೆಯಬೇಕಾದ ಸನ್ನಿಿವೇಶ ಎದುರಾಗಿದೆ. ಕಾಲೇಜಿನವರು ಇಂತಹ ಪ್ರತಿಭೆಯನ್ನು ಗುರುತಿಸಿ, ಬೆಳೆಯಲು ಎಲ್ಲ ರೀತಿಯ ಅವಕಾಶ ಕಲ್ಪಿಿಸಬೇಕಿದೆ. ವಿಶ್ವವಿದ್ಯಾಾಲಯ ಮಟ್ಟದಲ್ಲಿ ಅಷ್ಟೇ ಅಲ್ಲದೆ, ರಾಷ್ಟ್ರೀಯ ಆಟಗಾರನಾಗಲೂ ಸಹಕರಿಸಬೇಕಿದೆ.
ಜಿಲ್ಲೆೆಯ ಅಪರೂಪದ ಈ ಕಬಡ್ಡಿಿ ಪ್ರತಿಭೆ ದೇಶಮಟ್ಟದಲ್ಲಿ ಮಿಂಚಬೇಕಿದೆ. ಇದಕ್ಕೆೆ ಕುವೆಂಪು ವಿವಿಯ ಕ್ರೀಡಾಧಿಕಾರಿಗಳು ಅವಕಾಶ ಕೊಟ್ಟು ಇನ್ನಷ್ಟು ಪ್ರೋತ್ಸಾಾಹ ನೀಡುವ ಅವಶ್ಯಕತೆ ಇದೆ. ನವೀನ್ ಸಹ ಇದೇ ನಿರೀಕ್ಷೆಯಲ್ಲಿದ್ದಾಾನೆ.
published on 2.6.18   
...............................