Saturday 28 September 2019



ಅಡಿಕೆ "ಷಯದಲ್ಲಿ ಡಿ.ಲಿಟ್ 
ಕಡಿದಾಳ್ ಗೋಪಾಲ್


 ಕೃಯ ಬಗ್ಗೆೆ ಇಂದು ಆಸಕ್ತಿಿ ಕಡಿಮೆಯಾಗುತ್ತಿಿರುವ ವೇಳೆಯೇ ಅದರಲ್ಲಿ "ಶೇಷ ಕಾಳಜಿ ಹೊಂದಿ, ತಮ್ಮ ಅಪಾರ ಅನುಭವದೊಂದಿಗೆ ಸಮಗ್ರ ಅಧ್ಯಯನ ನಡೆಸಿ, ಪ್ರಬಂಧ ಮಂಡಿಸಿದ ನಗರದ ಅಡಿಕೆ ವರ್ತಕ ಕಡಿದಾಳ್ ಗೋಪಾಲ್ ಹಂಪಿ ಕನ್ನಡ "ಶ್ವ"ದ್ಯಾಾಲಯದಿಂದ ಗೌರವ ಡಾಕ್ಟರೆಟ್ (ಡಿ. ಲಿಟ್) ಪಡೆದಿದ್ದಾಾರೆ. ಕರ್ನಾಟಕದಲ್ಲಿ ಅಡಿಕೆ ಕೃ: ಆರ್ಥಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಎಂಬ ಈ ಗ್ರಂಥ ಅಡಿಕೆ ಬೆಳೆಯುವ ಪ್ರದೇಶದ ಯುವ ಜನಾಂಗಕ್ಕೆೆ ದಾರಿದೀಪವಾಗಿದೆ.
ಕಡಿದಾಳ್ ಗೋಪಾಲ್ ಹೆಸರು ಜಿಲ್ಲೆೆಯಲ್ಲಿ ಚಿರಪರಿಚಿತ. ತೀರ್ಥಹಳ್ಳಿಿ ತಾಲೂಕು ಹಾರೊಗೊಳಿಗೆ ಗ್ರಾಾಮದವರಾದ ಇವರು ಕೃಕ ಕುಟುಂಬದವರು. ಎಸ್ ಎಸ್‌ಎಲ್‌ಸಿಯವರೆಗೆ ಓದಿದ ನಂತರ "ದ್ಯಾಾಭ್ಯಾಾಸಕ್ಕೆೆ ಗುಡ್‌ಬೈ ಹೇಳಿ  ಅಡಿಕೆ ಕೃಗೆ ತಮ್ಮನ್ನು ತೊಡಗಿಸಿಕೊಂಡವರು. ಶಿವಮೊಗ್ಗ ಗ್ರಾಾಮಾಂತರ ಪ್ರದೇಶದಲ್ಲಿ ಅಡಿಕೆ ಕೃ ಮುಂದುವರೆಸುತ್ತಲೇ ಸುಮಾರು 50 ವರ್ಷದಿಂದ ಪ್ರಸಿದ್ಧ ಅಡಿಕೆ ವ್ಯಾಾಪಾರಸ್ಥರಾಗಿಯೂ ಹೆಸರುಗಳಿಸಿದ್ದಾಾರೆ. 
ಪ್ರಗತಿಪರ ಅಡಿಕೆ ಕರಕರಾಗಿರುವ ಗೋಪಾಲ್, ಮಾಜಿ ಮುಖ್ಯಮಂತ್ರಿಿ ಕಡಿದಾಳ್ ಮಂಜಪ್ಪ ಅವರ ಕುಟುಂಬದವರು, ಅಷ್ಟೇ ಅಲ್ಲ, ಹೋರಾಟಗಾರ, ಚಿಂತಕ, ಬರಹಗಾರ, ಕೃಕ ಕಡಿದಾಳು ಶಾಮಣ್ಣ ಅವರ ಸಹೋದರರೂ ಹೌದು. ಇವರು ಅಡಿಕೆ ಬೆಳೆಗಾರರ ನೂರಾರು ಸಮಾವೇಶದಲ್ಲಿ ಭಾಗವ"ಸಿದವರು. ಸಾಕಷ್ಟು ಸ್ಥಳಗಳಲ್ಲಿ ಅಡಿಕೆ ಬಗ್ಗೆೆ ಕಾರ್ಯಾಾಗಾರ, ಗ್ಠೋೋ ನಡೆಸಿಕೊಟ್ಟವರು. ತಮ್ಮ ಅನುಭವದ ಆಧಾರದಲ್ಲಿ ಮತ್ತು ಸ್ನೇ"ತರ ಮನ"ಯ ಮೇರೆಗೆ ಅಡಿಕೆ ಕೃಯ, ಮಾರುಕಟ್ಟೆೆಯ ಬಗ್ಗೆೆ ಗ್ರಂಥ ಬರೆದು ಅದಕ್ಕೆೆ ಜನಮನ್ನಣೆ ಸಿಗುವಂತೆ ಮಾಡಿದ್ದಾಾರೆ.
ಗೋಪಾಲ್ ತಮ್ಮ 65ನೆಯ ವಯಸ್ಸಿಿನಲ್ಲಿ ಮೈಸೂರಿನ ಕರ್ನಾಟಕ ಮುಕ್ತ ""ುಂದ ಎಂಎಯನ್ನು ಪ್ರಥಮ ದರ್ಜೆಯಲ್ಲಿ ಮುಗಿಸಿದ್ದಾಾರೆ.  ಇದರೊಟ್ಟಿಿಗೆ ಅಡಿಕೆ ಬಗ್ಗೆೆ ಚಿಕ್ಕಂದಿನಿಂದಲೂ ಕಾಳಜಿ ಇದ್ದುದರಿಂದಲೋ ಏನೋ, ಅದರ ಅಧ್ಯಯನಕ್ಕಾಾಗಿ, ಮಾರುಕಟ್ಟೆೆ, ಉಪಉತ್ಪನ್ನ, ಆಧುನಿಕ ಕೃ ಪದ್ದತಿ ಅರಿಯಲು ಅಡಿಕೆ ಬೆಳೆಯುವ ಹತ್ತಾಾರು ದೇಶಗಳಿಗೆ ತೆರಳಿ ಮಾ"ತಿ ಪಡೆದುಕೊಂಡು ಬಂದಿದ್ದಾಾರೆ. ತಮ್ಮ ಅನುಭವಗಳನ್ನು ಗ್ರಂಥದಲ್ಲಿ ದಾಖಲಿಸಿದ್ದಾಾರೆ. ಈ ಗ್ರಂಥವನ್ನು ಬರೆಯುವಲ್ಲಿ ಮತ್ತು ಶೈಕ್ಷಣಿಕವಾಗಿ ಇದನ್ನು ತಯಾರು ಮಾಡುವಲ್ಲಿ ಅವರಿಗೆ ನೆರವಾದವರು ಶಿವಮೊಗ್ಗ ಕೃ, ತೋಟಗಾರಿಕಾ  "ಶ್ವ"ದ್ಯಾಾಲಯದ ಮಾಜಿ  ಡೀನ್ ಪ್ರೊ. "ಘ್ನೇಶ್ ಮಂಚಾಲೆ ಅವರು.
ಜಿಲ್ಲಾಾ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ, ಶ್ರೀನಿಧಿ ಎಜುಕೇಶನ್ ಸಂಸ್ಥೆೆಯ ಸಂಸ್ಥಾಾಪಕರಾಗಿ, ರೋಟರಿ ಸೇರಿದಂತೆ ""ಧ ಸಾಮಾಜಿಕ ಸೇವಾಸಂಸ್ಥೆೆಗಳಲ್ಲಿ ಕೆಲಸ ಮಾಡುತ್ತಿಿರುವ ಇವರು, ಯಾವುದೇ ರೀತಿಯ ಹೆಸರಿಗಾಗಲಿ, ಪದ" ಪಡೆಯುವ ಉದ್ದೇಶಕ್ಕಾಾಗಲಿ ತಾನು ಈ ಗ್ರಂಥ ಬರೆದಿಲ್ಲ. ಅಡಿಕೆ ಬೆಳಯುವ ಪ್ರದೇಶದವರಿಗೆ ಮತ್ತು ಯುವಜನರು ಈ ಕೃಯಲ್ಲಿ ತೊಡಗಿಕೊಳ್ಳಲು ಅನುವಾಗಲಿ, ತನ್ನಲ್ಲಿರುವ ಮಾ"ತಿ ಇತರರಿಗೆ ತಲುಪಲಿ ಎಂಬ "ನ್ನೆೆಲೆಯಲ್ಲಿ ಸ್ವತಂತ್ರವಾಗಿ ಅಧ್ಯಯನ ಮಾಡಿ ಬರೆದಿದ್ದಾಾಗಿ ಹೇಳುತ್ತಾಾರೆ.
ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದದ ಅಡಿಕೆ ಇಂದಿಗೂ ಸಮಸ್ಯೆೆಗಳ ಸುಳಿಯಲ್ಲೇ ಇದೆ. ಇದರ ಐತಿಹಾಸಿಕ, ಸಾಂಸ್ಕೃತಿಕ, ಚಾರಿತ್ರಿಿಕ ಮಹತ್ವವನ್ನು ಜನರಲ್ಲಿ ಮೂಡಿಸುವುದು, ಸಂಸ್ಕರಣೆ, ಮಾರಾಟ, ವೈಜ್ಞಾಾನಿಕ ಪದ್ದತಿ, ಸರ್ಕಾರದ ನೀತಿಯ ಬಗ್ಗೆೆ ಅರಿವು ಉಂಟುಮಾಡುವ "ಚಾರಗಳನ್ನು ಈ ಗ್ರಂಥದಲ್ಲಿ ಅವರು ಪ್ರಸ್ತಾಾಪಿಸಿದ್ದಾಾರೆ. ಪ್ರಸ್ತುತ ಕಾಲಕ್ಕೆೆ ಇಂತಹ ಗ್ರಂಥದ ಅವಶ್ಯಕತೆ ಇದೆ. ಕೃ ಸಮಸ್ಯೆೆ ಗಂಭೀರವಾಗಿದೆ. ಇದನ್ನು ನೋಡಿಕೊಳ್ಳುವವರೇ ಇಲ್ಲದ ಸ್ಥಿಿತಿ ನಿರ್ಮಾಾಣವಾಗುತ್ತಿಿದೆ. ಆಧುನಿಕತೆಯನ್ನು ಅಳವಡಿಸಿಕೊಳ್ಳಲು ಸಣ್ಣ ರೈತರಿಗೆ ಸಾಧ್ಯವಾಗದ ಸ್ಥಿಿತಿ ಇದೆ. ಬೆಲೆಯ ಏರುಪೇರು ಈ ಎಲ್ಲ "ಚಾರಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ  ಇದರಲ್ಲಿ ದಾಖಲಿಸಿದ್ದಾಾರೆ. 
28-9-2014
,,,,,,,,,,,,,,,,,,,,,,,,,,,,,,,,,,,

ಸಾಹಿತ್ಯದ ಹೊಸ ಪ್ರತಿಭೆ  
ಗಾರ್ಗಿ ಸೃಷ್ಟೀಂದ್ರ


 ಪ್ರತಿಭೆ ಪ್ರತಿ ಮಕ್ಕಳಲ್ಲಿಯೂ ಇರುತ್ತದೆ. ಆದರೆ ಅದು ಬೆಳಕಿಗೆ ಬರಬೇಕಾದರೆ ಅವಕಾಶ ಸಿಗಬೇಕು. ಮಕ್ಕಳು ಚಿಕ್ಕ ಸಂಗತಿಯನ್ನೂ ಸಂಭ್ರಮದಿಂದ ನೋಡಬೇಕು. ನಿರೀಕ್ಷೆ, ಕುತೂಹಲ ಉಳಿಸಿಕೊಂಡು ಸಿಗುವ ಅವಕಾಶವನ್ನು ಬಳಸಿಕೊಳ್ಳುವ ಆತ್ಮವಿಶ್ವಾಾಸ ಬೆಳೆಸಿಕೊಳ್ಳಬೇಕು.
ಆಧುನಿಕ ತಂತ್ರಜ್ಞಾಾನದ ಕಾಲಘಟ್ಟದಲ್ಲಿ ಮಕ್ಕಳು ಬದುಕನ್ನು, ಸಮಾಜವನ್ನು  ಹೇಗೆ ನೋಡುತ್ತಿಿದ್ದಾಾರೆ ಎನ್ನುವುದು ತೀರಾ ಮುಖ್ಯ.
 ಗಾರ್ಗಿ ಸೃಷ್ಟೀಂದ್ರ ಸಾಗರ ತಾಲೂಕು ಬಂದಗದ್ದೆೆಯ ವಿದ್ಯಾಾರ್ಥಿನಿ. ಕತೆ, ಕವನ, ನಾಟಕಗಳನ್ನು ಬರೆದಿದ್ದಾಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾಾರೆ. ಬರವಣಿಗೆ ಮೂಲಕ ಸಂವೇದನೆ ಹೇಳಲು ಇವರಿಗೆ ಸಾಧ್ಯವಾಗಿದೆ. ಕನ್ನಡದ ಮೂಲಕ ಈಗ  ಬೆಳೆಯುತ್ತಿಿದ್ದಾಾರೆ. ಇದಕ್ಕಾಾಗಿಯೇ ಜಿಲ್ಲಾಾ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯನ್ನಾಾಗಿ ಇವರನ್ನು ಆಯ್ಕೆೆ ಮಾಡಲಾಗಿದೆ.
 ಬಂದಗದ್ದೆೆಯ ಕೃಷಿಕ ಶೈಲೇಂದ್ರ ಬಂದಗದ್ದೆೆ ಮತ್ತು ಸರಸ್ವತಿ ಹೆಗಡೆ ಅವರ ಪುತ್ರಿಿ.  ಸಾಗರದ ನಿರ್ಮಲಾ ಬಾಲಕಿಯರ ಪ್ರೌೌಢಶಾಲೆಯಲ್ಲಿ 10ನೆಯ ತರಗತಿ ಓದುತ್ತಿಿದ್ದಾಾಳೆ. ಶೈಲೇಂದ್ರ ಬಂದಗದ್ದೆೆ ಕೂಡ ತಮ್ಮ ಕವಿತೆ, ಲೇಖನದ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾಾರೆ. ಹೆಗ್ಗೋೋಡಿನ ನೀನಾಸಂ ಜತೆ ಅವರ ನಿಕಟ ಸಂಪರ್ಕವಿದೆ. ಸರಸ್ವತಿ ಹೆಗಡೆ ಕೂಡ ಯಕ್ಷಗಾನ ಕುಟುಂಬದ ಹಿನ್ನೆೆಲೆಯಿಂದ ಬಂದವರು. ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾಾರೆ.
ಇಂಥ ವಾತಾವರಣದಲ್ಲಿ ಬೆಳೆದ ಗಾರ್ಗಿ ಸಹಜವಾಗಿ ಓದು, ಬರವಣಿಗೆಯಲ್ಲಿ ಆಸಕ್ತಿಿ ಬೆಳೆದಿದೆ. ಸತತ ಮೂರು ವರ್ಷ ಪ್ರಾಾಥಮಿಕ ಶಾಲಾ ಮಟ್ಟದ ಪ್ರತಿಭಾ ಕಾರಂಜಿಯ ’ಕಥೆ ಹೇಳುವ ಸ್ಪರ್ಧೆ’ ಯಲ್ಲಿ ಶಿವಮೊಗ್ಗ ಜಿಲ್ಲೆೆಗೆ ಪ್ರಥಮ ಸ್ಥಾಾನ ಪಡೆದುಕೊಂಡಿದ್ದಾಾರೆ. 8 ನೇ ವಯಸ್ಸಿಿನಲ್ಲಿಯೇ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಿಯಲ್ಲಿ ಭಾಗವಹಿಸಿ, ಪ್ರಸ್ತುತಪಡಿಸಿದ ’ಅಮ್ಮ’ ಮತ್ತು ’ಅಕ’್ಕ ಕವಿತೆಗಳು ಜನಮೆಚ್ಚುಗೆ ಗಳಿಸಿತು. ಶಿವಮೊಗ್ಗದಲ್ಲಿ ನಡೆದ ’ಚಿಣ್ಣರ ಸಾಹಿತ್ಯ ಚಿಲುಮೆ’ ಕಾರ್ಯಾಗಾರದಲ್ಲಿ ಭಾಗವಹಿಸಿ, ’ಕನಸು’ ಆಶುಕವನಕ್ಕೆೆ ಪ್ರಥಮ ಸ್ಥಾಾನ ಲಭಿಸಿದೆ.
2013 ಮತ್ತು 2014 ರಲ್ಲಿ ಸತತ ಎರಡು ವರ್ಷ ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಕಥಾ ಗೋಷ್ಠಿಿಯಲ್ಲಿ ಇವರು ಭಾಗವಹಿಸಿದ್ದರು. ಈ ವರ್ಷ ಶಿಕ್ಷಣ ಇಲಾಖೆ ಹಾಗೂ ಪ್ರಾಾಚ್ಯ ವಸ್ತುಗಳ ಸಂಶೋಧನಾ ಇಲಾಖೆ ವತಿಯಿಂದ ನಡೆಸಿದ ಭಾಷಣ ಸ್ಪರ್ಧೆಯಲ್ಲಿ ಹಾಗೂ ಟಿಪ್ಪು ಸಹರಾ ಯುವಜನ ಸಂಘ ಮತ್ತು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆೆ ಮಂಗಳೂರು ಇವರ ಸಹಯೋಗದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾಾನ ಪಡೆದಿದ್ದಾಾರೆ. ಪ್ರತಿಭಾ ಕಾರಂಜಿಯ ಕನ್ನಡ ಚರ್ಚಾಸ್ಪರ್ಧೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾಾನ ಪಡೆದಿದ್ದಾಾರೆ.
ಗಾರ್ಗಿಯವರು ಕರಿಬೇವು ಎಂಬ ನಾಟಕ ಬರೆದಿದ್ದಾಾರೆ. ದೇವರು, ಕೇಕಿನ ಗೃಹದತ್ತ ನನ್ನ ಚಿತ್ತ, ವಿವಿಧತೆಯಲ್ಲಿ ಏಕತೆ ಎಂಬ ತಲೆಬರಹದ ಕಥೆ ಬರೆದಿದ್ದಾಾರೆ.  ಅಕ್ಕ, ಅಮ್ಮ, ಅಪ್ಪ, ನಮ್ಮ ಶಾಲೆ, ಮಳೆ, ಗುಲಾಬಿ, ಕನಸು, ವಿಸ್ಮಯ, ಪರಿಸರ, ಗಣಪ, ನಮ್ಮ ದೇಶ ಎಂಬ ಕವಿತೆಗಳನ್ನು ಹೆಣೆದಿದ್ದಾಾರೆ.
ಮಕ್ಕಳಿಗೆ ಸಾಹಿತ್ಯ ಸ್ಫೂರ್ತಿ ತುಂಬಿದಾಗ ಅವರಲ್ಲಿ ಬೌದ್ಧಿಿಕ ವಿಕಾಸವಾಗುತ್ತದೆ. ಸಾಹಿತ್ಯ, ಸಂಗೀತ, ಕಲೆಗಳಿಂದ ಜೀವನ ಮೌಲ್ಯ ಹೆಚ್ಚುತ್ತದೆ ಎನ್ನುವ ಮಾತಿದೆ. ಇದನ್ನು ಗಾರ್ಗಿ ಪಾಲಕರು ಮಾಡಿದ್ದಾಾರೆ.
 ಪಠ್ಯೇತರ ಚಟುವಟಿಕೆಯಲ್ಲದೇ ಶಾಲಾ ಪಠ್ಯದಲ್ಲೂ ಗಾರ್ಗಿ ಹಿಂದೆ ಬಿದ್ದಿಲ್ಲ. ಇಂಥ ಬಹುಮುಖ ಪ್ರತಿಭೆ ಹೊಸಗುಂದದಲ್ಲಿ ನಡೆಯುವ ಮಕ್ಕಳ ಜಿಲ್ಲಾಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಪೀಠ ಅಲಂಕರಿಸುವ ಅವಕಾಶ ಪಡೆದಿದ್ದಾಾರೆ.
21.9.2019 
.....................
ಶಿಕ್ಷಕರಿಗೆ ಮಾದರಿ
ರತ್ನಾಾಕುಮಾರಿ


ವಿಜ್ಞಾಾನ ಮತ್ತು ತಂತ್ರಜ್ಞಾಾನದ ಕಾಲದಲ್ಲಿರುವ ನಾವು ನಮ್ಮ ಮಕ್ಕಳಿಗೆ ಅತ್ಯಾಾಧುನಿಕ ಮಾದರಿಯಲ್ಲಿ ಶಿಕ್ಷಣ ಕೊಡಿಸುವಲ್ಲಿ ವಿಫಲರಾಗಿದ್ದೇವೆ. ಆದರೆ ಕೆಲವು ಗ್ರಾಾಮಾಂತರ ಶಾಲೆಗಳಲ್ಲಿ ನಾವಿನ್ಯವಾಗಿ ಮತ್ತು ಕ್ರಿಿಯಾತ್ಮಕವಾಗಿ ಕಲಿಸುವುದರ ಮೂಲಕ, ಶಾಲೆಯ ಅಭಿವೃಧಿಯನ್ನೂ ಸಹ ಶಿಕ್ಷಕರು ಮಾಡುತ್ತಿಿದ್ದಾಾರೆ. ತಮ್ಮದೇ ಶಾಲೆ ಎಂಬಂತೆ ಮಮತೆಯಿಂದ ನೋಡಿಕೊಳ್ಳುತ್ತಿಿದ್ದಾಾರೆ. ಇಂತಹ ಉತ್ತಮ ವಾತಾವರಣ ಸೃಷ್ಟಿಿದ್ದರಿಂದ ಇಂದು ಸರಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆೆ ನಿಧಾನವಾಗಿ ಏರತೊಡಗಿದೆ.
ಎಸ್. ರತ್ನಾಾಕುಮಾರಿ ಹೊಸನಗರ ತಾಲೂಕಿನ ಸಮಟಗಾರು ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲಾ ಮುಖ್ಯಶಿಕ್ಷಕಿ. ಇವರು ಈ ಶಾಲೆಯ ಅಭಿವೃದ್ಧಿಿಗೆ ತಮ್ಮನ್ನು ಸಮರ್ಪಿಸಿಕೊಂಡವರು. ಸತತ ಯತ್ನದಿಂದ ಇಂದು ಈ ಶಾಲೆ ಹಲವು ಪ್ರಶಸ್ತಿಿಗಳನ್ನು ಬಾಚಿಕೊಂಡಿದೆ. ಇಷ್ಟೇ ಅಲ್ಲ, ಈ ಬಾರಿಯ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿಿ ರತ್ನಾಾಕುಮಾರಿ ಅವರಿಗೆ ನೀಡಲ್ಪಟ್ಟಿಿದೆ.
ಒಬ್ಬ ಶಿಕ್ಷಕಿ ಮನಸ್ಸು ಮಾಡಿದರೆ ಯಾವರೀತಿ ಶಾಲೆಯನ್ನು ಅಭಿವೃದ್ಧಿಿಗೊಳಿಸಬಹುದು ಎನ್ನುವುದಕ್ಕೆೆ ರತ್ನಾಾಕುಮಾರಿ ಉದಾಹರಣೆ. ಇವರ ಆಸಕ್ತಿಿಯ ಪರಿಣಾಮವಾಗಿ  ಶಾಲಾಆವರಣ ಇಂದು ಹಸಿರಿನಿಂದ ಕಂಗೊಳಿಸುತ್ತಿಿದೆ. ಪರಿಸರದ ಬಗ್ಗೆೆ ಕಾಳಜಿ ಮತ್ತು ಜಾಗೃತಿಯನ್ನು ಮಕ್ಕಳಲ್ಲಿ ಹುಟ್ಟುಹಾಕಿದ್ದರಿಂದ ಮಕ್ಕಳೂ ಸಹ ಪರಿಸರಾತ್ಮಕವಾಗಿ ಬೆಳೆಯುತ್ತಿಿದ್ದಾಾರೆ. ಉತ್ತಮ ಔಷಧ ವನವನ್ನು ಸೃಷ್ಟಿಿಸಿದ್ದರಿಂದ  ಧನ್ವಂತರಿ ಪ್ರಶಸ್ತಿಿ ಈ ಶಾಲೆಗೆ ಕೊಡಲ್ಪಟ್ಟಿಿದೆ. ಪರಿಸರಮಿತ್ರ ಪ್ರಶಸ್ತಿಿಯೂ ದಕ್ಕಿಿದೆ. ಶಾಲೆಯಲ್ಲಿ ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ಒಂದನೆಯ ತರಗತಿಯಿಂದಲೇ ಆರಂಭಿಸಲಾಗಿದೆ. ಶಾಲೆಗೆ ಲೇಖನ ಸಾಮಗ್ರಿಿಗಳನ್ನು ಪ್ರತಿವರ್ಷ ಬೆಂಗಳೂರು ಮತ್ತು ತೀರ್ಥಹಳ್ಳಿಿಯ ಹಲವು ಸಂಘ-ಸಂಸ್ಥೆೆಗಳ ನೆರವಿನಿಂದ ಉಚಿತವಾಗಿ ಕೊಡಿಸುತ್ತಿಿದ್ದಾಾರೆ. ಮಕ್ಕಳಲ್ಲಿ ಸಾಂಸ್ಕೃತಿಕ ವಾತಾವರಣವನ್ನೂ ಸಹ ಬಿತ್ತುತ್ತಿಿದ್ದಾಾರೆ. 
ಮಕ್ಕಳಿಗೆ ಉತ್ತಮ ಪ್ರಾಾಥಮಿಕ ಶಿಕ್ಷಣ ದೊರೆಯಬೇಕೆಂಬ ಕನಸನ್ನು ಹೊತ್ತಿಿರುವ ಇವರು, ಅದಕ್ಕಾಾಗಿ ಹೆಜ್ಜೆೆ ಇಟ್ಟಿಿದ್ದಾಾರೆ. ಸಹೋದ್ಯೋೋಗಿ ಶಿಕ್ಷಕರು ಮತ್ತು ಗ್ರಾಾಮಸ್ಥರು  ಮತ್ತು ಎಸ್‌ಡಿಎಂಸಿಯವರ ನೆರವನ್ನು ಇದಕ್ಕಾಾಗಿ ಪಡೆಯುತ್ತಿಿದ್ದಾಾರೆ. ಶಾಲೆಯ ಅಭಿವೃದ್ಧಿಿಗೆ ಸುಮಾರು 11 ಲಕ್ಷ ರೂ. ಗಳನ್ನು  ದೇಣಿಗೆಯಾಗಿ ಸಂಗ್ರಹಿಸಿದ್ದಾಾರೆ. ಹಳೆಯ ವಿದ್ಯಾಾರ್ಥಿಗಳು, ಕೆಲವು ಕಂಪನಿಗಳು ಇಲ್ಲಿಯ ಶಾಲಾ ಪರಿಸರವನ್ನು ಗಮನಿಸಿ ಈ ನೆರವು ನೀಡಿದ್ದಾಾರೆ.
17 ವರ್ಷಗಳಿಂದ ಇಲ್ಲಿ ಶಿಕ್ಷಕಿಯಾಗಿರುವ ರತ್ನಾಾಕುಮಾರಿ, ಶಾಲೆಯನ್ನು ಜಿಲ್ಲೆೆಯಲ್ಲೇ ಮಾದರಿಯನ್ನಾಾಗಿ ಮಾಡಿದ್ದಾಾರೆ. ಕಲಿಕೆ ಎನ್ನುವುದು ಕೇವಲ ನಾಲ್ಕು ಗೋಡೆಯ ಮಧ್ಯಕ್ಕಷ್ಟೇ ಸೀಮಿತವಾಗಬಾರದು. ವಿವಿಧ ವಿಧಾನದ ಕಲಿಕೆಗೆ ಒತ್ತು ಕೊಡಬೇಕು. ಸುಮಾರು 32 ರೀತಿಯ ಕಲಿಕಾ ಸಾಮರ್ಥ್ಯಗಳನ್ನು ಕೊಠಡಿಯ ಹೊರಗೆ ಶಾಲೆಯಲ್ಲಿ ತಮ್ಮ ಶಾಲೆಯಲ್ಲಿ ಕಲಿಸಲಾಗುತ್ತಿಿದೆ ಎನ್ನುತ್ತಾಾರೆ.
ಈ  ಶಾಲೆ ಒಂದು ಹಂತದಲ್ಲಿ ಮಕ್ಕಳಿಲ್ಲದೆ ಮುಚ್ಚುವ ಸ್ಥಿಿತಿ ತಲುಪಿತ್ತು. ಆಗ ಇದಕ್ಕೆೆ ಉತ್ತರವಾಗಿ ರತ್ನಾಾಕುಮಾರಿ ಅವರು ಮಾಡಿದ ನಾನಾ ಕಸರತ್ತುಗಳು ಫಲಕೊಟ್ಟಿಿವೆ. 1ರಿಂದ 7ನೆಯ ತರಗತಿಯವರೆಗೆ ಇಲ್ಲಿ  47 ಮಕ್ಕಳಿರುವರಾದರೂ, ಇವರಲ್ಲಿ 8-10 ಕಿ. ಮೀ ದೂರದಿಂದ ಬರುವ ಮಕ್ಕಳೇ ಹೆಚ್ಚು. ಕಳೆದ ವರ್ಷ ಇವರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಲಾಗಿತ್ತು. ಆದರೆ ಮಕ್ಕಳು ಮತ್ತು ಗ್ರಾಾಮಸ್ಥರು ಪ್ರತಿಭಟನೆ ನಡೆಸಿ ಶಿಕ್ಷಕಿಯನ್ನು ಮತ್ತೆೆ ತಮ್ಮ ಶಾಲೆಯಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಿಯಾಗಿದ್ದಾಾರೆ. ಶಿಕ್ಷಕಿಯ ಸಮರ್ಪಣಾ ಭಾವ, ಶಾಲೆಯ ಪ್ರಗತಿಗೆ ತಮ್ಮನ್ನು ಅರ್ಪಿಸಿಕೊಂಡಿರುವುದು  ಇದಕ್ಕೆೆ ಕಾರಣ.
ಇವರ ಸಾಧನೆ ಗಮನಿಸಿ ಬೆಂಗಳೂರಿನ ಟೈಮ್‌ಸ್‌ ಬಳಗದ ಇನೋವೇಟಿವ್ ಟೀಚರ್ ಪ್ರಶಸ್ತಿಿ, ತಾಲೂಕು ಶಿಕ್ಷಕ ಪ್ರಶಸ್ತಿಿ, ಜಿಲ್ಲಾಾ ಶಿಕ್ಷಕ ಪ್ರಶಸ್ತಿಿ ಇವರಿಗೆ ಸಂದಿದೆ.
14 sept,2019
.................................
   

Saturday 7 September 2019

ಪ್ರಬುದ್ಧ ನಾಟ್ಯ ಕಲಾವಿದೆ
ಕವನಾ ಪ್ರಭು


ಭಾರತೀಯರಿಗೆ ಕಲೆ ಎನ್ನುವುದು ಉಪಾಸನಾ ದಿವ್ಯವಾಗಿದೆ. ಈ ಕಲೆಯು ಚಿತ್ರವಾಗಿ, ಶಿಲ್ಪವಾಗಿ, ನೃತ್ಯವಾಗಿ, ಸಂಗೀತವಾಗಿ, ಜನಪದರ ಬದುಕಿಗೆ ಸುಖವಾಗಿ, ಹಿತವಾಗಿ ಜನಪದ ಕಲೆಯೆನಿಸಿ ಬುದ್ಧಿಿಭಾವಗಳ ಸಂಸ್ಕಾಾರದೊದಿಗೆ ತಾನೂ ಸಂಸ್ಕಾಾರಗೊಳ್ಳುತ್ತಿಿದೆ. ಜೀವನದರ್ಶನ ಮತ್ತು ಆತ್ಮದರ್ಶನ ಮಾಡಿಸುವ ಈ ಕಲೆಗಳಲ್ಲಿ ಭರತನಾಟ್ಯ ಕಲಿಕೆಗೆ ಇಂದು ಹೆಚ್ಚಿಿನ ಮಹತ್ವ ಬಂದಿದೆ. ಕಲಿಕಾರ್ಥ ಎಷ್ಟು ತನ್ಮಯತೆ ಮತ್ತು ಒತ್ತು ಕೊಟ್ಟು ಇದನ್ನು ಕಲಿಯುತ್ತಾಾನೋ ಅಷ್ಟು ಶಾಸ್ತ್ರಬದ್ಧವಾಗಿ, ಪ್ರಬುದ್ಧವಾಗಿ ಅದನ್ನು ಅಭಿನಯಿಸಲು ಅವನು ಶಕ್ತನಾಗುತ್ತಾಾನೆ. ಶಿವಮೊಗ್ಗ ನಗರದಲ್ಲಿ ಇಂದಿನ ಯುವಪೀಳಿಗೆ ವಿಶೇಷವಾಗಿ ಭರತನಾಟ್ಯದೆಡೆ ಸೆಳೆಯಲ್ಪಡುತ್ತಿಿದೆ. ಇದೊಂದು ವಿಶೇಷ ಬೆಳವಣಿಗೆ ಎನ್ನಬಹುದು.
ನಗರದಲ್ಲಿ ನಟನಂ ಬಾಲನಾಟ್ಯ ಕೇಂದ್ರ ಭರತನಾಟ್ಯ ಕಲಿಕೆಗೆ ಹೆಸರುವಾಸಿ. ಇದರ ಗುರು ವಿದ್ವಾಾನ್ ಕೇಶವಕುಮಾರ್ ಪಿಳ್ಳೈ ಮಾರ್ಗದರ್ಶನದಲ್ಲಿ ನೂರಾರು ಮಕ್ಕಳು ಪ್ರತಿವರ್ಷ ಭರತನಾಟ್ಯ ಕಲಿಕೆಗೆ ಸೇರ್ಪಡೆಗೊಳ್ಳುತ್ತಿಿದ್ದಾಾರೆ. ಅದರಂತೆ ಪ್ರತಿವರ್ಷ ವಿವಿಧ ನಾಟ್ಯ ಪರೀಕ್ಷೆಗಳನ್ನು ಸಮರ್ಥವಾಗಿ ಮುಗಿಸಿ
ರಂಗಪ್ರವೇಶಕ್ಕೂ ಆಯ್ದ ಕೆಲವರು ಅಣಿಯಾಗುತ್ತಿಿದ್ದಾಾರೆ. ಸುಮಾರು 15 ವರ್ಷಗಳ ಕಾಲ ನಾಟ್ಯ ತರಬೇತಿ ಪಡೆದ ಕವನಾ ಪ್ರಭು ಇಂದು ರಂಗಪ್ರವೇಶ ಮಾಡಲಿದ್ದಾಾರೆ. 
ನಗರದ ಪಂಚವಟಿ ಕಾಲನಿಯ ವಾಸಿ, ಉದ್ಯಮಿ ಕೆ. ಕೃಷ್ಣಾಾನಂದ ಪ್ರಭು ಮತ್ತು ಕೃತಿಕಾ ಪ್ರಭು ಅವರ ಮಗಳಾದ ಕವನಾ, ಪಿಇಎಸ್ ಇನ್ಸ್ಟಿಿಟ್ಯೂಟ್‌ನಲ್ಲಿ ಮೂರನೆಯ ವರ್ಷದ ಬಿಸಿಎ ಓದುತ್ತಿಿದ್ದಾಾಳೆ. 3ನೆಯ ವಯಸ್ಸಿಿನಲ್ಲೇ ಗೌಡ ಸಾರಸ್ವತ ಸಮಾಜದಲ್ಲಿ ನಡೆದ ಭಕ್ತ ಮಾರ್ಕಾಂಡೇಯ ನಾಟಕದಲ್ಲಿ ಬಾಲಭಕ್ತ ಮಾರ್ಕಾಂಡೇಯನಾಗಿ, 4ನೆಯ ವಯಸ್ಸಿಿನಲ್ಲಿ ಕೃಷ್ಣವೇಶ ಸ್ಪರ್ಧೆಯಲ್ಲಿ ಮೊದಲ ಸ್ಥಾಾನವನ್ನು ಪಡೆಯುವ ಮೂಲಕ ಕಲೆಯ ಪ್ರದರ್ಶನಕ್ಕೆೆ ಅಡಿಯಿಟ್ಟಿಿದ್ದರು.
ಕವನಾ ಸುಶಿಕ್ಷಿತ ಕುಟುಂಬದಿಂದ ಬಂದವರು. ನೈತಿಕ, ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಅಳವಡಿಸಿಕೊಂಡ ಈ ಕುಟುಂಬ ಇವರ ಪ್ರತಿಭೆಗೆ ನೀರೆರೆಯಿತು. ಅವರ ತಂದೆ-ತಾಯಿ ಮಗಳ ಆಸಕ್ತಿಿ ಗಮನಿಸಿ 6ನೆಯ ವಯಸ್ಸಿಿನಿಂದ ನಟನಂ ಭರತನಾಟ್ಯ ಕೇಂದ್ರದಲ್ಲಿ ಭರತನಾಟ್ಯ ಅಭ್ಯಾಾಸಕ್ಕೆೆ ಕಳುಹಿಸಿದರು. ಇಂತಹ ವಾತಾವರಣದಲ್ಲಿ ಬೆಳೆದಿದ್ದರಿಂದ ಮತ್ತು ಅದ್ಭುತ ಪ್ರತಿಭೆಯ ಗುರುವೂ ಸಹ ಲಭಿಸಿದ್ದರಿಂದ ಕಲಿಕೆ ಅತ್ಯಂತ ಯಶಸ್ವಿಿಯಾಗಿ ಸಾಗಿಬಂದಿತು. ಅಲ್ಲಿ ಪ್ರತಿಯೊಂದನ್ನೂ ತದೇಕಚಿತ್ತದಿಂದ ಗಮನಿಸಿ, ಅಷ್ಟೇ ಶಾಸ್ತ್ರಬದ್ಧವಾಗಿ ಅಧ್ಯಯನ ನಡೆಸಿದ ಕವನಾ, ಈಗ ರಂಗಪ್ರವೇಶಕ್ಕೆೆ ಸಿದ್ಧರಾಗಿದ್ದಾಾರೆ.
ಕರ್ನಾಟಕ ಸರಕಾರ ನಡೆಸುವ ಭರತನಾಟ್ಯ ಪರೀಕ್ಷೆಯ ಜೂನಿಯರ್ ಮತ್ತು ಸೀನಿಯರ್‌ನಲ್ಲಿ ಪ್ರಥಮ, ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾಾರೆ. ಮುಂಬಯಿಯ ಅಖಿಲ ಭಾರತೀಯ ಗಂಧರ್ವ ವಿದ್ಯಾಾಲಯ ಮಂಡಳಿಯವರು ನಡೆಸಿರುವ ವಿಶಾರದ ಪ್ರಥಮ್ ಮತ್ತು ವಿಶಾರದ ಪ್ರಶಸ್ತಿಿ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ್ದಾಾರೆ. ಸಹ್ಯಾಾದ್ರಿಿ ಕಲೋತ್ಸವದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾಾನ, ಶಂಕರ ಚಾನೆಲ್‌ನವರ ಜೈ ಹಿಂದ್ ಜೈ ಇಂಡಿಯಾ ಕಾರ‌್ಯಕ್ರಮದಲ್ಲಿ ಭಾಗವಹಿಸಿದ್ದಾಾರೆ. ಅಖಿಲ ಭಾರತೀಯ ಸಾಂಸ್ಕೃತಿಕ ಉತ್ಸವದಲ್ಲಿ ನೃತ್ಯ, ನಗರದ ಸಹ್ಯಾಾದ್ರಿಿ ಉತ್ಸವ, ಕೊಡಚಾದ್ರಿಿ ಉತ್ಸವ, 73ನೆಯ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನ ನೀಡಿ  ಸೈ ಎನಿಸಿಕೊಂಡಿದ್ದಾಾರೆ.
 ಬೆಂಗಳೂರು, ಬಳ್ಳಾಾರಿ, ಕೊಟ್ಟೂರು, ಬೆಳಗಾವಿ, ಉಡುಪಿ, ಸಾಗರ, ಇಟಗಿ ಸೇರಿದಂತೆ ಹಲವೆಡೆ ನೃತ್ಯ ಪ್ರದರ್ಶನ ನೀಡಿದ್ದಾಾರೆ. ಇಂದೋರ್, ವಿಶಾಖಪಟ್ಟಣಂ, ಮಹಾರಾಷ್ಟ್ರ, ಮೌಂಟ್‌ಅಬುನಲ್ಲೂ ಸಹ ವಿವಿಧ ಸಂದರ್ಭದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾಾರೆ. ತಮಿಳುನಾಡಿನ ಚಿದಂಬರಂನ ದೇವಸ್ಥಾಾನದಲ್ಲಿ ಜರುಗಿದ ಗಿನ್ನೀಸ್ ವಿಶ್ವದಾಖಲೆಯ ನೃತ್ಯಪ್ರದರ್ಶನದಲ್ಲೂ ಭಾಗವಹಿಸಿ ಯಶಸ್ವಿಿಯಾಗಿದ್ದಾಾರೆ.
published on 7-9-2019
................................