Saturday 29 June 2019

ವಾಗ್ಮಿಿ, ಸಂಪನ್ಮೂಲ ವ್ಯಕ್ತಿಿ
ಶುಭಾ ಮರವಂತೆ


 ವಾಗ್ಮಿಿಯು ತನ್ನ ಭಾಷಣವನ್ನು ಕೇಳುಗರ ಹೃದಯದ ಮೇಲೆ ಬರೆಯುತ್ತಾಾನೆ, ಕಾಗದದ ಮೇಲಲ್ಲ ಎನ್ನುವ ಪ್ರಸಿದ್ಧ ಉಕ್ತಿಿ ಆಂಗ್ಲ ಭಾಷೆಯಲ್ಲಿದೆ. ಶಬ್ದಕ್ಕೆೆ ಅಷ್ಟೊೊಂದು ಅಸಾಧಾರಣ ಶಕ್ತಿಿ ಇದೆ. ಇಂತಹ ಅಪ್ರತಿಮ ಭಾಷಣಕಾರ ಎಲ್ಲರಿಂದ ಗುರುತಿಸಲ್ಪಡುತ್ತಾಾನೆ, ಗೌರ"ಸಲ್ಪಡುತ್ತಾಾನೆ, ಜನರಲ್ಲಿ "ಚಾರ ಪ್ರಚೋದನೆಗೆ ಕಾರಣನಾಗುತ್ತಾಾನೆ.   
ಈ ಮಾತು ನಗರದ ಸಹ್ಯಾಾದ್ರಿಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕನ್ನಡ, "ಂದಿ, ಉರ್ದು ಮತ್ತು ಸಂಸ್ಕೃತ ಭಾಷೆಯ ಮುಖ್ಯಸ್ಥರಾಗಿರುವ ಶುಭಾ ಮರವಂತೆ ಅವರಿಗೆ ನೂರರಷ್ಟು ಸರಿಹೊಂದುತ್ತದೆ. ಶಿವಮೊಗ್ಗ ಸುತ್ತಮುತ್ತ ಚಿರಪರಿಚಿತ ಹೆಸರು. ಬಹುಮುಖ ಪ್ರತಿಭೆ ಇವರದ್ದು. ಉತ್ತಮ ವಾಗ್ಮಿಿಯಾಗಿ, ಸಂಪನ್ಮೂಲ ವ್ಯಕ್ತಿಿಯಾಗಿ, ಸಾ"ತ್ಯ ಕ್ಷೇತ್ರದಲ್ಲಿ ಮತ್ತು ಪ್ರಾಾಧ್ಯಾಾಪಕರಾಗಿ ವೃತ್ತಿಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವವರು. ನಾಡು- ನುಡಿ, ಸಾ"ತ್ಯ- ಸಂಸ್ಕೃತಿ, ಬದುಕು- ಕಲೆಯ ಬಗ್ಗೆೆ ನಿರರ್ಗಳವಾಗಿ ಮಾತನಾಡಬಲ್ಲ ಕಲೆ ಇವರಲ್ಲಿದೆ. ಪ್ರಬುದ್ಧ ಭಾಷೆಯ ಬಳಕೆ, ಮಾತಿನ ಲಯ, "ಶಿಷ್ಟ ಶೈಲಿಯ ಮೂಲಕ ಜನಮನ ಗೆಲ್ಲುತ್ತಾಾರೆ.
ಯಕ್ಷಗಾನದಲ್ಲಿ ಅಪೂರ್ವ ಸೇವೆ ಸಲ್ಲಿಸಿರುವ ಮರವಂತೆ ದಾಸ್ ಭಾಗವತರ ಕುಟುಂಬದಲ್ಲಿ ಜನಿಸಿದವರು ಶುಭಾ. ತಂದೆ ಶ್ರೀನಿವಾಸ ದಾಸ್ ಭಾಗವತರು. ತಾು ಮಹಾಲಕ್ಷ್ಮೀ ದಾಸ್. ಬಾಲ್ಯದ ಶಿಕ್ಷಣವನ್ನು ಹುಟ್ಟೂರು ಕುಂದಾಪುರ ತಾಲೂಕಿನ ಮರವಂತೆಯಲ್ಲಿ ಮುಗಿಸಿ, ಧಾರವಾಡದ ಕರ್ನಾಟಕ "ಶ್ವ"ದ್ಯಾಾಲಯದಲ್ಲಿ ಕನ್ನಡ ಸ್ನಾಾತಕೋತ್ತರ ಪದ"ಯನ್ನು ರ್ಯಾಾಂಕ್‌ನೊಂದಿಗೆ ಪಡೆದಿದ್ದಾಾರೆ. ಶಿವರಾಮ ಕಾರಂತರ ಕಾದಂಬರಿಯಲ್ಲಿ ಸ್ತ್ರೀ ಸಂವೇದನೆ ಎನ್ನುವ "ಷಯದ ಬಗ್ಗೆೆ ಪಿಎಚ್‌ಡಿ ಮಾಡಿದ್ದಾಾರೆ. ಭಾಷಾ "ಜ್ಞಾಾನ, ಮ"ಳಾ ಅಧ್ಯಯನ. ಬಸವ ಅಧ್ಯಯನ, ಪ್ರಾಾಚ್ಯ ಲೇಖನ, ಪ್ರಾಾಕೃತ ಅಧ್ಯಯನಗಳಲ್ಲಿ ಪಿ. ಜಿ. ಡಿಪ್ಲೋಮಾ ಪಡೆದಿದ್ದಾಾರೆ. ಪತ್ರಿಿಕೋದ್ಯಮದಲ್ಲೂ ಎಂ ಎ ಮುಗಿಸಿದ್ದಾಾರೆ.
ಇದಕ್ಕೂ ಮುನ್ನ ಉಜಿರೆಯ ಎಸ್‌ಡಿಎಂ ಕಾಲೇಜು ಮತ್ತು ಧಾರವಾಡದ ಕರ್ನಾಟಕ ಕಾಲೇಜಿನಲ್ಲೂ ಸೇವೆ ಸಲ್ಲಿಸಿರುವ ಇವರು, ಬಾಲ್ಯದಿಂದಲೇ ಸಾ"ತ್ಯ ಪ್ರೀತಿ ಬೆಳೆಸಿಕೊಂಡವರು. ಹತ್ತನೆಯ ತರಗತಿಯಲ್ಲಿರುವಾಗಲೇ ತೊದಲು ಎನ್ನುವ ಕಾವ್ಯ ಸಂಕಲನ ಹೊರತಂದಿದ್ದಾಾರೆ. ಶರಧಿ ಶಯನನೆ ನಮ್ಮ ವರಾಹ ಸ್ವಾಾ"ುಯೇ ಎನ್ನುವ ಭಕ್ತಿಿಗೀತೆಗಳ ಸಿಡಿಯೊಂದನ್ನು ರಚಿಸಿ ಹೊರತಂದಿದ್ದಾಾರೆ. 
ತಮ್ಮ ಕಥೆ, ಕವನ, ಹನಿಗವನ ಮತ್ತು ಲೇಖನಗಳಿಗೆ  ರಾಜ್ಯಮಟ್ಟದ ಹಲವರು ಬಹುಮಾನಗಳನ್ನು ಪಡೆದಿದ್ದಾಾರೆ. ಆತ್ಮರಾಜ ಮತ್ತು ಇತರ ಕಥನಗಳು, ಪದಸಂತತಿ, ಕನಕದಾಸರ ಮಧ್ಯಕಾಲೀನ ಚರಿತೆಯ ಪುನರಚನೆ, ಮರಳಿ ಹೆಣ್ಣಿಿಗೆ, ಚಂದ್ರಶೇಖರ ಕಂಬಾರ ಮೊದಲಾದ ಕೃತಿಗಳನ್ನು ರಚಿಸಿದ್ದಾಾರೆ. ಇವರ ಹಲವಾರು ಲೇಖನಗಳು ನಾಡಿನ ಪತ್ರಿಿಕೆಗಳಲ್ಲಿ ಪ್ರಕಟಗೊಂಡಿವೆ. ಮಂಗಳೂರು "ಶ್ವ"ದ್ಯಾಾಲಯದ ಮೊದಲ "ದ್ಯಾಾರ್ಥಿ ಸಾ"ತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆೆಯಾದ ಹೆಮ್ಮೆೆ ಇವರದ್ದು.
. ಇವರು ರಾಜ್ಯ, ರಾಷ್ಟ್ರಮಟ್ಟದ ಅನೇಕ ಕಾರ‌್ಯಕ್ರಮಗಳಲ್ಲಿ ಉಪನ್ಯಾಾಸ ನೀಡಿದ್ದಾಾರೆ. ನೀಡಿದ ಉಪನ್ಯಾಾಸಗಳ ಸಂಖ್ಯೆೆ ಸಾ"ರ ದಾಟುತ್ತವೆ. ಉದಯ ಟಿ"ಯ ಹರಟೆ ಕಾರ‌್ಯಕ್ರಮದಲ್ಲಿ ಭಾಗವ"ಸಿದ್ದಾಾರೆ. ಪೀಸ್ ಆಫ್ ಮೈಂಡ್ ಚಾನೆಲ್‌ನಲ್ಲಿ ಇವರ ಕಾರ‌್ಯಕ್ರಮದ ಸರಣಿ ಪ್ರಸಾರವಾಗುತ್ತಿಿದೆ.
ಮುಂಬೈನ ಸುಶೀಲಾ ಶೆಟ್ಟಿಿ ಕಥಾ ಪ್ರಶಸ್ತಿಿ, "ಶ್ವಕಲಾರತ್ನ ಪ್ರಶಸ್ತಿಿ, ಕರ್ನಾಟಕ ಸರಕಾರದಿಂದ ಕನಕದಾಸ ಫೆಲೋಶಿಪ್, ಗೋಕಾಕ್ ಫೆಲೋಶಿಪ್, ಸಂಶೋಧನೆಗೆ ಯುಜಿಸಿ ಅನುದಾನವನ್ನೂ ಇವರು ಪಡದಿದ್ದಾಾರೆ.
ಬಲ್ಲಿರೇನಯ್ಯ ಎನ್ನುವ ಯಕ್ಷಗಾನ ಮಾಸಿಕ ಪತ್ರಿಿಕೆಯಲ್ಲಿ ತಮ್ಮ ಕುಟುಂಬದ ಯಕ್ಷಪಯಣದ ಸ್ಮತಿಚಿತ್ರವನ್ನು ಅಂಕಣವಾಗಿ ಬರೆಯುತ್ತಿಿದ್ದಾಾರೆ. ಯಕ್ಷಗಾನ ಮತ್ತು ಗಮಕ ಕಲಾ"ದೆಯೂ ಆಗಿರುವ ಇವರು, ಪ್ರಸ್ತುತ 9 "ದ್ಯಾಾರ್ಥಿಗಳಿಗೆ ಪಿಎಚ್‌ಡಿ ಮಾರ್ಗದರ್ಶನ ನೀಡುತ್ತಿಿದ್ದಾಾರೆ. 

published on 29-june2019
..................................

Saturday 22 June 2019


ಉಚಿತವಾಗಿ ಯೋಗ ಕಲಿಸುವ
ಎನ್. ಪಿ. ವೆಂಕಟೇಶ್


 ಯೋಗ ಎನ್ನುವುದು ಒಂದು ದೀಪ. ಅದು ಎಂದೂ ಮಂಕಾಗುವುದಿಲ್ಲ. ನೀವು ಎಷ್ಟು ಅದನ್ನು ಆಳವಾಗಿ ಕಲಿಯುತ್ತೀರೋ ಅಷ್ಟು ಅದು ಜ್ವಾಾಜ್ವಲ್ಯಮಾನವಾಗಿ ಉರಿಯುತ್ತದೆ ಎಂದು ಅಂತರರಾಷ್ಟ್ರೀಯ ಯೋಗ ಪಟು ಬಿ ಕೆ. ಎಸ್. ಅಯ್ಯಂಗಾರ್ ಹೇಳಿದ ಮಾತಿದೆ. ಇದನ್ನು ನಾವು ರೂಢಿಸಿಕೊಂಡಷ್ಟು ಹೆಚ್ಚು ಅನುಭವ ಸಿಗುತ್ತದೆ. ಆರೋಗ್ಯದಾಯಕ ಬದುಕು ಲಭಿಸುತ್ತದೆ.
ನಮ್ಮ ದೇಹದ ಹೊರಭಾಗದಲ್ಲಿ ಏನು ಘಟಿಸುತ್ತದೆಯೋ ಅದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಆದರೆ ದೇಹದ ಒಳಭಾಗದಲ್ಲಿ ಏನು ಸಂಭವಿಸುತ್ತದೆಯೋ ಅದನ್ನು ನಿಯಂತ್ರಿಿಸಬಹುದು. ಅದು ಯೋಗದಿಂದ ಮಾತ್ರ ಸಾಧ್ಯ.  ನಮ್ಮ ಹಾಲಿ ಜೀವನ ಎಲ್ಲಿ ಕೇಂದೀಕೃತವಾಗಿರುತ್ತದೆಯೋ ಅಲ್ಲಿಗೆ ಯೋಗ ನಮ್ಮನ್ನು ಕರೆದೊಯ್ಯುತ್ತದೆ. ದೇಹ ಮತ್ತು ಮನಸ್ಸನ್ನು ಕೇಂದ್ರೀಕರಿಸುವುದು ಮತ್ತು ನಿಯಂತ್ರಿಿಸುವುದೇ ಯೋಗದ ಕೆಲಸ.
ಯೋಗ ಈಗ ಸಾಮಾನ್ಯವಾಗಿದೆ. ಸಣ್ಣಮಕ್ಕಳೂ ಸಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ಸ್ಪರ್ಧೆಯಲ್ಲಿ ಪದಕ ಗೆಲ್ಲುತ್ತಿಿದ್ದಾಾರೆ. ಈ ರೀತಿ ಮಕ್ಕಳನ್ನು ತಯಾರು ಮಾಡಲು ಯೋಗ ಶಿಕ್ಷಣ ಕೇಂದ್ರಗಳು ಅಲ್ಲಲಿ ತೆರೆದುಕೊಂಡಿವೆ. ಶಿವಮೊಗ್ಗ ನಗರದ ಮಾರ್ನಮಿಬೈಲ್‌ನ ಎರಡನೆಯ ಕ್ರಾಾಸ್‌ನಲ್ಲಿ  ವರ್ಷಿಣಿ ಯೋಗ ಕೇಂದ್ರ 5 ವರ್ಷದಿಂದ ಕಾರ್ಯಾಾಚರಿಸುತ್ತಿಿದೆ. ಇದರ ಸ್ಥಾಾಪಕರು ಮತ್ತು ಗುರು ಎನ್. ಪಿ. ವೆಂಕಟೇಶ್.
ವೆಂಕಟೇಶ್ 20 ವರ್ಷಗಳಿಂದ ಯೋಗದಲ್ಲಿ ಪರಿಣಿತರು. ಅನಾರೋಗ್ಯ ಸಂಭವಿಸಿದಾಗ ತಮ್ಮ ತಂದೆ ಕೊಟ್ಟ ಸಲಹೆ ಮೇರೆಗೆ ಯೋಗಾಸನವನ್ನು ಮಾಡಲಾರಂಭಿಸಿದ್ದರು. ಆನಂತರ ಅದರಿಂದ ಗುಣಮುಖರಾಗಿದ್ದರಿಂದ ಯೋಗದ ಮೇಲೆ ವಿಶೇಷ ಪ್ರೀತಿ, ವಿಶ್ವಾಾಸ ಬೆಳೆಯಿತು. ಅದನ್ನೇ ಏಕೆ ಮುಂದುವರೆಸಬಾರದು ಎಂದು ನಿರ್ಧರಿಸಿ ನಗರದ ರಾಘವೇಂದ್ರ ಯೋಗ ಕೇಂದ್ರದಲ್ಲಿ ಕಲಿಕೆ ಆರಂಭಿಸಿದರು. ಈಗ ಯೋಗದಲ್ಲಿ ಇನ್‌ಸ್‌‌ಟ್ರಕ್ಟರ್ ಕೋರ್ಸನ್ನು ಮುಗಿಸಿ ಶಾಲೆ ತೆರೆದಿದ್ದಾಾರೆ.
ಶಿವಮೊಗ್ಗ ಸಹಿತ ರಾಜ್ಯದ ಹಲವೆಡೆ ಯೋಗ ಕಲಿಕೆಯನ್ನು ನಡೆಸುತ್ತಿಿದ್ದಾಾರೆ. ಇದರೊಟ್ಟಿಿಗೆ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್‌ನ್ನು ನಗರದಲ್ಲಿ ಮತ್ತು ದಾವಣಗೆರೆಯಲ್ಲಿ ನಡೆಸಿ, ಅಲ್ಲಿ ಗೆದ್ದು ರಾಜ್ಯದ ಮಕ್ಕಳನ್ನು ಎರಡು ಬಾರಿ ಬ್ಯಾಾಂಕಾಕ್‌ಗೆ ಕರದೊಯ್ದ ಕೀರ್ತಿ ಇವರದ್ದು. ಎರಡು ಬಾರಿಯೂ ಚಿನ್ನ, ಬೆಳ್ಳಿಿ, ಕಂಚು ಸಹಿತ ಹಲವು ಪದಕಗಳನ್ನು ಗೆದ್ದು ತರುವಂತೆ ಮಾಡಿದ್ದಾಾರೆ. 2018 ಮತ್ತು 2019ರಲ್ಲಿ ಈ ಚಾಂಪಿನ್‌ಶಿಪ್ ನಡೆದಿತ್ತು.
 ವೆಂಕಟೇಶ್ ಹಣದ ಆಸೆಗೆ ಎಂದೂ ಯೋಗ ಕಲಿಸುತ್ತಿಿಲ್ಲ. ಉಚಿತವಾಗಿ ತರಗತಿ ನಡೆಸುತ್ತಿಿದ್ದಾಾರೆ. ಹಲವರು ಯೋಗವನ್ನು ವಾಣಿಜ್ಯಾಾತ್ಮಕವಾಗಿ ನಡೆಸುತ್ತಿಿರುವುದು ಹೆಚ್ಚುತ್ತಿಿದೆ. ಆದರೆ ಇವರು ಈ ವರ್ಷದಿಂದ ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ಮಕ್ಕಳಿಗೆ ಕಲಿಸಲು ತೀರ್ಮಾನಿಸಿದ್ದಾಾರೆ. ಜೊತೆಗೆ  ಗೋಪಾಳದ ವೃದ್ಧಾಾಶ್ರಮದಲ್ಲಿ ಸುಮಾರು 250 ಜನರಿಗೆ ಬೆಳಿಗ್ಗೆೆ ಮತ್ತು ಸಂಜೆ ಒಂದೂವರೆ ಗಂಟೆ ಯೋಗ ಕಲಿಸುತ್ತಿಿದ್ದಾಾರೆ.
ನಗರದ ಡಿವಿಎಸ್ ಕಾಲೇಜಿನಲ್ಲಿ ಪದವಿ ಮುಗಿಸಿ ಟಿಸಿಎಚ್ ಕೋರ್ಸನ್ನು ಮುಗಿಸಿರುವ ವೆಂಕಟೇಶ್,  2001ರಲ್ಲಿ ನಗರದ ಆದಿಚುಂಚನಗಿರಿ ಕಲ್ಯಾಾಣ ಮಂದಿರದಲ್ಲಿ ನಡೆದ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸ್ಥಾಾನ ಗಳಿಸಿದ್ದಾಾರೆ. 20013ರಲ್ಲಿ ದಾವಣಗೆರೆಯಲ್ಲಿ ಜರುಗಿದ ಚಾಂಪಿಯನ್‌ಶಿಪ್‌ನಲ್ಲಿ ದ್ವಿಿತೀಯ ಮತ್ತು 2005ರಲ್ಲಿ ಮೈಸೂರಿನಲ್ಲಿ ತೃತೀಯ ಸ್ಥಾಾನ ಗಳಿಸಿದ್ದಾಾರೆ. ಆನಂತರ ಹಲವಾರು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಿಗೆ ಮಕ್ಕಳನ್ನು ತಯಾರು ಮಾಡಿ ಪ್ರಶಸ್ತಿಿ ಗೆದ್ದು ತರುವಂತೆ ಮಾಡುತ್ತಿಿದ್ದಾಾರೆ.
ಯೋಗ ಸುಂದರ ಬದುಕನ್ನು ರೂಪಿಸತ್ತದೆ. ಇದರ ತರಬೇತಿ ಪಡೆಯುವುದರಿಂದ  ದೇಹ ಅರಳುತ್ತದೆ. ಮನಸ್ಸು ವಿಕಸಿಸುತ್ತದೆ. ನಿರಂತರವಾಗಿ ಯೋಗ ಮಾಡುವುದರಿಂದ ಮಾತ್ರ ನಾವಂದುಕೊಂಡ ಸಾಧನೆ ಸಾಧ್ಯ ಎನ್ನುತ್ತಾಾರೆ ವೆಂಕಟೇಶ್. 

published 0n 22.6.19
..................

Saturday 15 June 2019

ದಾಖಲೆಯ ಪುಟ ಸೇರಿದ
ಸಚಿನ್ ವರ್ಣೇಕರ್




ಕೌಶಲ್ಯ ಮತ್ತು ದೃಢ ವಿಶ್ವಾಾಸವಿದ್ದರೆ ವ್ಯಕ್ತಿಿಯನ್ನು ಯಾರೂ ಸೋಲಿಸಲಾಗದು ಎಂಬ ಮಾತಿದೆ. ಇವೆರಡೂ ಒಂದೆಡೆ ಸೇರಿದರೆ ಯಶಸ್ಸು ದ್ವಿಿಗುಣಗೊಳ್ಳುತ್ತದೆ, ಸಾಧಿಸಲು ಅಸಾಧ್ಯವಾದುದು ಯಾವುದೂ ಇರುವುದಿಲ್ಲ. 
ಪ್ರತಿಭೆಯ ಜೊತೆ ಕೌಶಲ್ಯ ಇದ್ದರೆ ವ್ಯಕ್ತಿಿ ಉನ್ನತ ಸ್ಥಾಾನಕ್ಕೇರಬಹುದು, ಸಾಧನೆಯಲ್ಲಿ ಇನ್ನಷ್ಟು ಮುಂದಡಿಯಿಡಬಹುದು. ಪ್ರಸ್ತುತ ದಿನಗಳಲ್ಲಿ ಕೌಶಲ್ಯಕ್ಕೆೆ ತುಂಬಾ ಮಹತ್ವವಿದೆ. ಯುವಜನತೆ ಕೌಶಲ್ಯವಂತರಾದರೆ ಅವರನ್ನು ಯಾರೂ ಹಿಂದಿಕ್ಕಲು ಸಾಧ್ಯವಿಲ್ಲ. ಜೀವನದ ಸಾಧನೆಗೆ ಇದೇ ಮೆಟ್ಟಿಿಲಾಗುತ್ತದೆ.
ಸಚಿನ್ ವರ್ಣೇಕರ್ ಭದ್ರಾಾವತಿಯ ಯುವಕ. ಅಲ್ಲಿನ ಸಿ. ಎನ್. ರಸ್ತೆೆಯ ಭೂತನಗುಡಿಯಲ್ಲಿ ಚಿನ್ನದ ಅಂಗಡಿ ನಡೆಸುತ್ತಿಿದ್ದಾಾರೆ. ವಿದ್ಯಾಾಭ್ಯಾಾಸದ  ದಿನದಲ್ಲೇ ಚಿತ್ರಕಲೆಯಲ್ಲಿ ಹೆಚ್ಚಿಿನ ಆಸಕ್ತಿಿ ಇದ್ದುದರಿಂದ ಮತ್ತು ಅದರಲ್ಲಿ ಅನೇಕ ಬಹುಮಾನಗಳನ್ನು ಪಡೆದಿದ್ದರಿಂದ ಹೊಸ ರೀತಿಯ ಚಿತ್ರ, ಕೆತ್ತನೆಗಳತ್ತ ಚಿಂತನೆ ನಡೆಸುತ್ತಲೇ ಇದ್ದರು. ಅತ್ಯಂತ ಸೂಕ್ಷ್ಮದ, ತೀರಾ ಸಹನೆಯ ಮತ್ತು ಅಷ್ಟೇ ಕಷ್ಟದ ಕೆಲಸ ಇದಾದರೂ, ಛಲ ಬಿಡದೆ ಸಚಿನ್ ಚಿನ್ನದ ಅತಿ ಚಿಕ್ಕ ಶಿವಲಿಂಗ ಮತ್ತು ರಾಮಮಂದಿರ ನಿರ್ಮಿಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಸ್‌‌ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾಾರೆ.
  ಸಚಿನ್ ತನ್ನ ಸೋದರ ಮಾವನ ಅಂಗಡಿಯಲ್ಲಿ ಕೆಲಸ ಮಾಡುತ್ತ, ವಿವಿಧ ವಿನ್ಯಾಾಸದ ತಯಾರಿಕೆಯನ್ನು ನೋಡಿ ಕಲಿತವರು. ಒಂದು ವರ್ಷದ ಅನಿಮೇಶನ್ ಕೋರ್ಸನ್ನು ಇದೇ ವೇಳೆ ಶಿವಮೊಗ್ಗದಲ್ಲಿ ಪೂರೈಸಿ, ತಮ್ಮದೇ ಆದ ಚಿನ್ನದ ಅಂಗಡಿ ವ್ಯವಹಾರ ಆರಂಭಿಸಿದರು. ಚಿನ್ನದ ಕುಸುರಿ ಕಲೆಯಲ್ಲಿ ಜ್ಞಾಾನವಿದ್ದುದರಿಂದ ಮತ್ತು ಹೊಸತನದ್ದು ಏನನ್ನಾಾದರೂ ಮಾಡಬೇಕೆಂದು ಮನಸ್ಸು ಹಾತೊರೆಯುತ್ತಿಿದ್ದುದರಿಂದ ಹೊಸ ನಮೂನೆಯ ಆಭರಣಗಳನ್ನು ತಯಾರಿಸುವ ಕೆಲಸ ಆರಂಭಿಸಿ, ಕೌಶಲ್ಯವನ್ನು ಅದರಲ್ಲಿ ತೋರಿಸುತ್ತಿಿದ್ದಾಾರೆ. ಇದೇ ವೇಳೆ ಅತಿ ಕಡಿಮೆ ಬಂಗಾರ ಬಳಸಿ ಶಿವಲಿಂಗವನ್ನು ಏಕೆ ರಚಿಸಬಾರದೆಂದು ಯೋಚಿಸಿದರು. ಅದರಂತೆ  112 ಮಿಲಿ ಬಂಗಾರ ಬಳಸಿ ಶಿವಲಿಂಗವನ್ನು ಒಂದೇ ದಿನದಲ್ಲಿ ಕಳೆದ ಶಿವರಾತ್ರಿಿ ವೇಳೆ ರಚಿಸಿದರು. ಇದಾದ ಬಳಿಕ ರಾಮಮಂದಿರವನ್ನೂ ಸಹ ರಾಮನವಮಿ ಸಂದರ್ಭದಲ್ಲಿ ರಚಿಸಿದ್ದಾಾರೆ. ಇದಕ್ಕೆೆ 18 ಗ್ರಾಾಮ್ ಬಂಗಾರ ಬಳಸಿದ್ದಾಾರೆ.
ಇದನ್ನು ಕೆಲವು ಮುಖಂಡರಿಗೆ ಮತ್ತು ಮಿತ್ರರಿಗೆ ತೋರಿಸಿದಾಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಸ್‌‌ಗೆ ಕಳುಹಿಸುವಂತೆ ಸೂಚಿಸಿದ್ದರಿಂದ  ಇದನ್ನೆೆಲ್ಲಾಾ ವೀಡಿಯೋ ಮಾಡಿ, ದಾಖಲೆ ಸಹಿತ ಕಳುಹಿಸಿದರು. ಅಲ್ಲಿಂದ ಇವರ ಸಾಧನೆಗೆ ಮನ್ನಣೆ ಸಿಕ್ಕಿಿದೆ. ಹೆಸರು ಈಗ ದಾಖಲಾಗಿದೆ. ಸದ್ಯದಲ್ಲೇ ಅವರ ಪ್ರಮಾಣಪತ್ರ ಇವರ ಕೈಸೇರಲಿದೆ.
ಈ ಶಿವಲಿಂಗವನ್ನು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೂ ತೋರಿಸಿದ್ದಾಾರಲ್ಲದೆ, ಅಲ್ಲಿನ ಮಂಜೂಷಾ ವಸ್ತುಸಂಗ್ರಹಾಲಯದಲ್ಲಿಡಲು ಅದೇ ರೀತಿಯ ಇನ್ನೊೊಂದು ಶಿವಲಿಂಗವನ್ನು ಮಾಡಿಕೊಟ್ಟಿಿದ್ದಾಾರೆ. ಕರ್ಕಿುಯ ದೈವಜ್ಞಪೀಠದ ಸ್ವಾಾಮೀಜಿಯವರಿಗೂ ಇದನ್ನು ತೋರಿಸಿ ಅವರಿಂದಲೂ  ಪ್ರಶಂಸೆಗೊಳಗಾಗಿದ್ದಾಾರೆ. ಈ ಯುವಕನ ಸಾಧನೆ ಮೆಚ್ಚಿಿ ಹಲವರು ಸನ್ಮಾಾನಿಸಿದ್ದಾಾರೆ.
ಮುಂದಿನ ದಿನಗಳಲ್ಲಿ ಇದೇ ಮಾದರಿಯ ಇನ್ನೂ ಹಲವು ರಚನೆಗಳನ್ನು ಸಾಂದರ್ಭಿಕವಾಗಿ ಮಾಡಲು ಯೋಚಿಸಿರುವ ಸಚಿನ್, ಅವಕಾಶ ಸಿಕ್ಕಲ್ಲಿ ಪ್ರಮುಖ ಸಭೆ, ಸಮಾರಂಭಗಳಲ್ಲಿ ಇದನ್ನು ಪ್ರದರ್ಶಿಸುವ ನಿರ್ಧಾರವನ್ನೂ ಮಾಡಿದ್ದಾಾರೆ. ಇದರಿಂದ ಸಾರ್ವಜನಿಕರಲ್ಲಿ ಇದು ಹೆಚ್ಚು ಪ್ರಚಲಿತವಾಗಲಿದೆಯಲ್ಲದೆ, ಯುವಕರಲ್ಲಿ ಅಥವಾ ಆಸಕ್ತರಲ್ಲಿ ಈ ಬಗ್ಗೆೆ ಜಾಗೃತಿ ಮೂಡಲಿದೆ. ಯುವಕರು ಇಂತಹ ಹೊಸ ವಿಧದ ಕೌಶಲ್ಯವನ್ನು ಕಲಿಯಲು ಪ್ರೇರಣೆಯಾಗುತ್ತದೆ ಎನ್ನುತ್ತಾಾರೆ ಸಚಿನ್.
ಸಚಿನ್ ಅವರ ಈ ಕೌಶಲ್ಯವನ್ನು ಪ್ರೋತ್ಸಾಾಹಿಸುವ ಕೆಲಸವಾಗಬೇಕಿದೆ. ಸಂಘ-ಸಂಸ್ಥೆೆಗಳು, ಗಣ್ಯರು ಇಂತಹ ಯುವಕರನ್ನು ಇನ್ನಷ್ಟು ಗುರುತಿಸುವ ಮೂಲಕ ಹೆಚ್ಚಿಿನ ಸಾಧನೆಗೆ ಪ್ರೇರೇಪಿಸಬೇಕಿದೆ.
published on 15.6.2019
,,,,,,,,,,,,,,,,,,,,,,,,,,,       

Saturday 8 June 2019

ಡಾನ್‌ಸ್‌ ಸ್ಪೋೋರ್ಟ್‌ಸ್‌ ಚಾಂಪಿಯನ್ 
ನಿಧಿ ಸುರೇಶ್




ಜಿಲ್ಲೆೆಯ ಮಟ್ಟಿಿಗೆ ಈ ಬಾಲೆಯದ್ದು ವಿಶೇಷ ಸಾಧನೆ. ಇನ್ನೂ ಹಲವರು ಕೇಳರಿಯದ ಡ್ಯಾಾನ್‌ಸ್‌ ಸ್ಪೋೋರ್ಟ್‌ಸ್‌ ಕಲೆ ಇದು. ಇದನ್ನು ಕಲಿತು ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಸುಲಭದ ಮಾತೇನಲ್ಲ. ಓದಿನ ಜೊತೆಗೆ ಅಷ್ಟೇ ಸಮಯವಿಟ್ಟು, ಸತತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾಾಳೆ. ಈಕೆಯ ಹೆಸರು ನಿಧಿ ಸುರೇಶ್.
ನೃತ್ಯದಲ್ಲಿ ಜಿಲ್ಲೆೆಯ ಹಲವು ಪ್ರತಿಭೆಗಳು  ರಾಜ್ಯ-ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಹಿರಿಮೆಯನ್ನು ಹೆಚ್ಚಿಿಸಿದ್ದಾಾರೆ. ನೃತ್ಯದ
ಲ್ಲೇ ವಿವಿಧ ಪ್ರಾಾಕಾರಗಳಿದ್ದು, ಅವುಗಳ ಮೂಲಕ ವಿಶಿಷ್ಟ ಸಾಧನೆಯನ್ನು ಈಗಿನ ಯುವಕ-ಯುವತಿಯರು ಮಿಂಚುತ್ತಿಿದ್ದಾಾರೆ. ಅಂತಹ ನೃತ್ಯದ ವಿಶೇಷ ವಿಭಾಗವಾದ ಡ್ಯಾಾನ್‌ಸ್‌ ಸ್ಪೋೋರ್ಟ್‌ಸ್‌ ಈಗ ಹೆಚ್ಚು ಪ್ರಚಲಿತವಾಗತೊಡಗಿದೆ. ಈ ವಿಭಾಗದಲ್ಲಿ ತೀರ್ಥಹಳ್ಳಿಿಯ ಈ ಬಾಲಕಿ ದಕ್ಷಿಣ ಭಾರತದ ಮಟ್ಟದ ಚಿನ್ನದ ಪದಕ ಗೆದ್ದಿದ್ದಾಾಳೆ.
ನಿಧಿ ಬಾಲ್ಯದಿಂದಲೂ ಡಾನ್‌ಸ್‌‌ನಲ್ಲಿ ಪರಿಣಿತೆ. ಆದ್ದರಿಂದ ಈ ಕಲೆಯನ್ನು ಕಲಿಯಲು ವಿಶೇಷ ತೊಂದರೆ ಎದುರಾಗಲೇ ಇಲ್ಲ. ಆದರೆ ಕೆಲವೊಂದು ಟ್ರಿಿಕ್‌ಸ್‌‌ಗಳನ್ನು ಮಾತ್ರ ಹೆಚ್ಚುವರಿಯಾಗಿ ಕಲಿಯಬೇಕಾಯಿತು. ಇದನ್ನು ಅತಿ ಸುಲಭದಲ್ಲಿ ಕಲಿತು ಕರಗತ ಮಾಡಿಕೊಂಡಿದ್ದು ನಿಜಕ್ಕೂ ಶ್ಲಾಾಘನೀಯವೇ ಸರಿ. ವಿಶೇಷವಾಗಿ ಮಹಾನ್ ನಗರಗಳಲ್ಲಿ ಮಾತ್ರ ಇದು ಕಾಣಸಿಗುವ ಕಲೆ ಇದು. ಇನ್‌ಸ್ಟಾಾಗ್ರಾಾಮ್‌ನಲ್ಲಿ ಇದನ್ನು ನೋಡಿದ ನಿಧಿ, ಆಡಿಶನ್‌ಗಾಗಿ ಆಹ್ವಾಾನಿಸಿದ್ದನ್ನು ಗಮನಿಸಿ ಹೋಗಿದ್ದಳು. ಅಲ್ಲಿ ಆಯ್ಕೆೆಯೂ ಆದಳು. ಆದರೆ ತರಬೇತಿ ಅವಶ್ಯಕತೆ ಇತ್ತು. ಮಾಸ್ಟರ್ ತರುಣ್ ಎನ್ನುವವರು ಮೂರು ದಿನ ತರಬೇತಿ ನೀಡಿದ್ದರು. ಆನಂತರ ಒಂದು ತಿಂಗಳ ಕಾಲ ಮನೆಯಲ್ಲೇ ಇದನ್ನು ಸತತವಾಗಿ ಅಭ್ಯಸಿಸಿ ಚಾಂಪಿಯನ್‌ಶಿಪ್‌ಗೆ ಆಯ್ಕೆೆಯಾದಳು.
 ಗೋವಾದಲ್ಲಿ ಕಳೆದ ತಿಂಗಳು ದಕ್ಷಿಣ ಭಾರತ ಮಟ್ಟದ ಚಾಂಪಿಯನ್‌ಶಿಪ್ ನಡೆದಾಗ ನಿಧಿ ಅದರಲ್ಲಿ ಚಿನ್ನದ ಪದಕ ಧರಿಸಿದ್ದಳು. 15 ವರ್ಷ ಮೇಲ್ಪಟ್ಟವರ ಸ್ಪರ್ಧೆ ಇದಾಗಿತ್ತು. ಸುಮಾರು 250ಕ್ಕೂ ಹೆಚ್ಚು ಸ್ಪರ್ಧಿಗಳಿದ್ದರೂ ನಿಧಿ ಗೋಲ್‌ಡ್‌ ವಿನ್ನರ್ ಆಗಿ ಹೊರಹೊಮ್ಮಿಿದ್ದಾಾಳೆ. ಡಾನ್‌ಸ್‌ ಸ್ಪೋೋರ್ಟ್‌ಸ್‌ ಕೌನ್ಸಿಿಲ್ ಆಫ್ ಇಂಡಿಯಾ ಇದನ್ನು ಏರ್ಪಡಿಸಿತ್ತು. ಈಗ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಆಯ್ಕೆೆಯಾಗಿರುವುದರಿಂದ ಇನ್ನೂ ಹೆಚ್ಚಿಿನ ತರಬೇತಿ ಪಡೆಯುತ್ತಿಿದ್ದಾಾಳೆ. ಕೋಲ್ಕತ್ತಾಾದಲ್ಲಿ ಇದು ನಡೆಯಲಿದೆ. ಇದರಲ್ಲಿ ಇನ್ನೂ ಹೆಚ್ಚಿಿನ ಸಾಧನೆ ಮಾಡಬೇಕಿರುವುದರಿಂದ ವಿಶೇಷ ಶ್ರಮವನ್ನು ಹಾಕಿ  ಅಭ್ಯಾಾಸ ಮಾಡುತ್ತಿಿದ್ದಾಾಳೆ.
ನಿಧಿ ತೀರ್ಥಹಳ್ಳಿಿಯ ಕಾಂಗ್ರೆೆಸ್ ಮುಖಂಡ ಆಮ್ರಪಾಲಿ ಸುರೇಶ್ ಮತ್ತು ನಾಗಮಣಿ ದಂಪತಿಯ ಪುತ್ರಿಿ. ಬಾಲ್ಯದಿಂದಲೂ ಬೆಂಗಳೂರಿನಲ್ಲಿಯೇ ವಿದ್ಯಾಾಭ್ಯಾಾಸ ಮಾಡುತ್ತಿಿದ್ದು, ಸದ್ಯ ಪ್ರಥಮ ಪಿಯುನಲ್ಲಿ ಅಲ್ಲಿಯೇ ಓದು ಮುಂದುವರೆಸಿದ್ದಾಾಳೆ. ಈ ನೃತ್ಯದಲ್ಲಿ ಇನ್ನಷ್ಟು ಕಲಿಕೆಯನ್ನು ಹೆಚ್ಚಿಿಸುವ ಇಚ್ಛೆೆ ಹೊಂದಿರುವ ನಿಧಿ, ವಿದ್ಯಾಾಭ್ಯಾಾಸಕ್ಕೆೆ ತೊಂದರೆಯಾಗದಂತೆ ಎಚ್ಚರಿಕೆಯಿಂದ ಹೆಜ್ಜೆೆ ಇಡುವುದಾಗಿ ಹೇಳುತ್ತಾಾಳೆ. ಏರೊನಾಟಿಕ್‌ಸ್‌ ಇಂಜಿನೀಯರ್ ಆಗುವ ಗುರಿ ಈಕೆಯದಾಗಿದೆ.
   ಈ ಕಲೆಯ ಜೊತೆ ಕರಾಟೆ ಪಟುವೂ ಆಗಿರುವ ನಿಧಿ, ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆಯಲ್ಲಿ ದ್ವಿಿತೀಯ ಸ್ಥಾಾನಿಯಾಗಿ ಹೊರಹೊಮ್ಮಿಿದ್ದಾಾಳೆ. ಕಬಡ್ಡಿಿ ಆಟಗಾರ್ತಿಯಾಗಿಯೂ ತಾನು ಓದುತ್ತಿಿರುವ ಶಾಲೆಯನ್ನು ಪ್ರತಿನಿಧಿಸುತ್ತಿಿದ್ದಾಾಳೆ. ಉತ್ತಮ ದೇಹದಾರ್ಢ್ಯಕ್ಕೆೆ ಕ್ರೀಡೆ ಅತ್ಯವಶ್ಯ. ಈ ಮೂಲಕ ಸಾಧನೆ ಮಾಡಿ ಏರ್‌ಫೋರ್ಸ್ ಸೇರಬೇಕೆನ್ನುವ ಮಹದಾಸೆ ಹೊಂದಿದ್ದೇನೆ. ಪಾಲಕರು ತನ್ನ ಸಾಧನೆಯ ಕನಸನ್ನು ನನಸು ಮಾಡಲು ಎಲ್ಲಾಾ ರೀತಿಯ ನೆರವು ನೀಡುತ್ತಿಿದ್ದಾಾರೆ ಎನ್ನುತ್ತಾಾಳೆ ನಿಧಿ.

published on 8-6-2019
........................................ 

Wednesday 5 June 2019

ಹುಟ್ಟಿಿದೂರಿಗೆ ತಂತ್ರಜ್ಞಾಾನ ತಂದ 
ರಾಘವೇಂದ್ರ 



ತಂತ್ರಜ್ಞಾಾನ ಮತ್ತು ಸಂಶೋಧನೆ ಮೂಲಕ ಮಾರುಕಟ್ಟೆೆಯಲ್ಲಿ ಹೊಸ  ಸೇವೆ ಮತ್ತು ಉತ್ಪನ್ನಗಳನ್ನು ಇಂದು ಕಾಣಬಹುದಾಗಿದೆ. ಜನರ ಅನೇಕ ಅವಶ್ಯಕತೆಗಳಿಗೆ ಪರಿಹಾರವೂ ಇದರಿಂದಾಗಿ ದೊರೆತಿದೆ. ದಿನೇ ದಿನೇ ಹೊಸ ಸಂಶೋಧನೆಗಳು ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಿಿದೆ. ನಗರದ ಯುವಕನೊಬ್ಬ ಆಕೃತಿ 3ಡಿ ಕಂಪನಿಯ ಹುಟ್ಟುಹಾಕಿ  ಡಿಸೈನ್ ಥಿಂಕಿಂಗ್ ಪ್ರಯೋಗಾಲಯವನ್ನು ನಗರದಲ್ಲಿ ಸ್ಥಾಾಪಿಸಿದ್ದಾಾರೆ. 
 ನಗರದ ಈ ಯುವಕನ ಹೆಸರು ರಾಘವೇಂದ್ರ. ವಿನೋಬನಗರದ ಕೆಎಚ್‌ಬಿ ಕಾಲನಿ ವಾಸಿಯಾಗಿರುವ ಆಡಿಟರ್ ಮತ್ತು ತೆರಿಗೆ ಸಲಹಾಗಾರರಾಗಿರುವ ಬಿ. ಸುರೇಂದ್ರ ಅವರ ಪುತ್ರ. ಇವರು ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾಾನ ಸಂಸ್ಥೆೆಯಲ್ಲಿ ಏರೋಸ್ಪೇಸ್ ಇಂಜಿನೀಯರಿಂಗ್ ಪದವಿ ಪಡೆದು ಅಲ್ಲಿಯೇ ಸಿಎಫ್‌ಡಿ ಮತ್ತು ಏರೋ ಡೈನಾಮಿಕ್‌ಸ್‌ ವಿಷಯದಲ್ಲಿ ಸಂಶೋಧನೆ ನಡೆಸಿ ಎಂ. ಟೆಕ್ ಮುಗಿಸಿದ್ದಾಾರೆ.
ಇವರ ತ್ರಿಿ ಡಿ ಪ್ರಿಿಂಟಿಂಗ್ ಸಂಶೋಧನೆ  ಇವರಿಗೆ ಅನೇಕ ಗೌರವಗಳನ್ನು ತಂದುಕೊಟ್ಟಿಿದೆ. ಇದರಿಂದಾಗಿ ಅವರಿಗೆ ಅನೇಕ ಶೈಕ್ಷಣಿಕ ಪ್ರಶಸ್ತಿಿ ಮತ್ತು ಗೌರವಗಳು ದಕ್ಕಿಿವೆ. ಬೆಂಗಳೂರಿನ  ಜೈನ್ ವಿಶ್ವವಿದ್ಯಾಾಲಯದ ಚಿನ್ನದ ಪದಕ ಮತ್ತು ಸಿಎಸ್‌ಐಆರ್- ಎನ್‌ಎಎಲ್‌ನ ಬಂಗಾರದ ಪದಕ  ಲಭಿಸಿದೆ. ಅಮೆರಿಕದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಐಎಎಂ-3ಡಿ ಸ್ಪರ್ಧೆಯಲ್ಲಿ  ಮತ್ತು ಜಪಾನಿನಲ್ಲಿ ನಡೆದ ಸಾಂಸ್ಕೃತಿಕ ವಿನಿಮಿಯ ಕಾರ‌್ಯಕ್ರಮದಲ್ಲಿ ಭಾರತವನ್ನು ಅವರು ಪ್ರತಿನಿಧಿಸಿದ್ದರು. 
2016ರಲ್ಲಿ ಬಿಇ ಎರೋಸ್ಪೇಸ್‌ನಲ್ಲೂ ಚಿನ್ನದ ಪದಕದೊಂದಿಗೆ ಪಾಸಾಗಿದ್ದಾಾರೆ. ಇವೆಲ್ಲಾಾ ಸಾಧನೆಯ ನಂತರ ಆಕೃತಿ 3ಡಿ ಕಂಪನಿಯನ್ನು ಹುಟ್ಟುಹಾಕಿ ಸದ್ಯ ಅದರ ಸಂಸ್ಥಾಾಪಕ ಮುಖ್ಯ ಕಾರ‌್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿಿದ್ದಾಾರೆ. ಈ ಕಂಪನಿಯು ಸುರತ್ಕಲ್‌ನಲ್ಲಿದ್ದು, ಇಂದಿನಿಂದ ಶಿವಮೊಗ್ಗದ ಮಾಚೇನಹಳ್ಳಿಿಯ  ಕಿಯೋನಿಕ್‌ಸ್‌ ಐಟಿ ಪಾರ್ಕಿನಲ್ಲಿ ತನ್ನ ಶಾಖೆಯನ್ನು ತೆರೆದಿದೆ.
ತಾನು ಕಲಿತಿದ್ದನ್ನು ಕೇವಲ ರಾಜ್ಯಕ್ಕೆೆ ಮಾತ್ರವಲ್ಲದೆ ಸ್ವಂತ ಊರಿಗೂ ತಲುಪಿಸಬೇಕು, ಆ ಮೂಲಕ ಇಲ್ಲಿನ ಯುವಜನತೆಯಲ್ಲೂ ವಿಶೇಷ ಜ್ಞಾಾನ ಹುಟ್ಟುಹಾಕುವುದರ ಮೂಲಕ ಹಲವರಿಗೆ ಮಾರ‌್ಗದರ್ಶನ ಮತ್ತು ಉದ್ಯೋೋಗ  ನೀಡಬೇಕೆಂಬ ಹೆಬ್ಬಯಕೆ ಹೊತ್ತಿಿರುವ ರಾಘವೇಂದ್ರ, ಈ ಸಂಸ್ಥೆೆಯ ಮೂಲಕ  ಕೈಗಾರಿಕೆಗಳಿಗೆ ಅಥವಾ ಇತರ ಸಂಸ್ಥೆೆಗಳಿಗೆ ಹೊಸ ಉತ್ನನ್ನಗಳ ವಿನ್ಯಾಾಸ ರೂಪಿಸಿಕೊಡುವುದು, ಪ್ರೊಟೊಟೈಪಿಂಗ್,  ತ್ರಿಿಡಿ ಪ್ರಿಿಂಟಿಂಗ್ ಮಾಡಿಕೊಡಲಿದ್ದಾಾರೆ.
ಇತ್ತೀಚಿನ ದಿನಗಳಲ್ಲಿ ತ್ರಿಿಡಿ ಪ್ರಿಿಇಟಿಂಗ್ ಹೆಚ್ಚು ಜನಪ್ರಿಿಯವಾಗುತ್ತಿಿರುವ ಹಿನ್ನೆೆಲೆಯಲ್ಲಿ ಇನ್ನಷ್ಟು ಆಧುನಿಕವಾಗಿ ಇದನ್ನು ರೂಪಿಸಿ ಅದರಲ್ಲೂ ವಿಶೇಷವಾಗಿ ಕೈಗಾರಿಕೆಗಳಿಗೆ ಅತಿಅವಶ್ಯವಾಗಿರುವುದರಿಂದ ಅವರ ಎಲ್ಲ ಅವಶ್ಯಕತೆಗಳನ್ನು ನೀಗಿಸಿ, ವಹಿವಾಟು ನಿರ‌್ವಹಣೆಯಲ್ಲಿ ಹೊಸ ಕ್ರಾಾಂತಿಯನ್ನು ಮಾಡಲು  ಸನ್ನದ್ಧರಾಗಿದ್ದಾಾರೆ.
ಕಡಿಮೆ ವೇಗದ ಏರೋ ಡೈನಾಮಿಕ್, ವಿಂಡ್ ಎನರ್ಜಿ ಮತ್ತು ಏರಿಯಲ್ ವೆಹಿಕಲ್ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ಯೋಜನೆ ರೂಪಿಸಿದ್ದಾಾರೆ. ಹೈದರಾಬಾದ್, ತ್ರಿಿವೇಂದ್ರಮ್, ಚೆನ್ನೈ ಮತ್ತು ಕೊಲ್ಕತ್ತಾಾದಲ್ಲಿ ನಡೆದ ಹಲವಾರು ರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಪಾಲ್ಗೊೊಂಡು ಪ್ರಬಂಧ ಮಂಡಿಸಿದ್ದಾಾರೆ.
ಬ್ಯಾಾಡ್ಮಿಿಂಟನ್ ಆಗಿರುವ ಇವರು, ಪೇಂಟಿಂಗ್, ಪೆನ್ಸಿಿಲ್ ಸ್ಕೆೆಚ್, ಕವನ ಬರೆಯುವುದನ್ನೂ ರೂಢಿಸಿಕೊಂಡಿದ್ದಾಾರೆ.         
ಶಿವಮೊಗ್ಗದಲ್ಲೂ ಸಾಕಷ್ಟು ಪ್ರತಿಭಾವಂತರಿರುವುದರಿಂದ ಅವರ ತಂಡ ಕಟ್ಟಿಿ  ಹೊಸ ಹೊಸ ಸಂಶೋಧನೆ ಮಾಡುವುದು ಮತ್ತು ಶಾಲಾ- ಕಾಲೇಜುಗಳಲ್ಲಿ ತ್ರಿಿಡಿ ಪ್ರಿಿಂಟಿಂಗ್ ಕಲಿಕೆಗೆ ಸಹಕರಿಸುವುದು ಇವರ ಉದ್ದೇಶವಾಗಿದೆ.  ನಗರದ ಪ್ರತಿಭೆಗಳು ವಿಜ್ಞಾಾನ ಮತ್ತು ತಂತ್ರಜ್ಞಾಾನ, ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಲು ಅಂತರರಾಜ್ಯ ಮತ್ತು ವಿದೇಶಗಳಿಗೆ ತೆರಳುತ್ತಿಿರುವ ಸಂದರ್ಭದಲ್ಲಿ ನಗರದಲ್ಲೇ ಇರುವ ಅವಕಾಶಗಳನ್ನು ಬಳಸಿಕೊಂಡು ಇಲ್ಲಿಯೇ ಆಕೃತಿ 3ಡಿ ಸಂಸ್ಥೆೆಯನ್ನು ಕಟ್ಟಲು ರಾಘವೇಂದ್ರ ಮುಂದಡಿ ಇಟ್ಟಿಿದ್ದಾಾರೆ.

published on 1st June 2019
..............................