Monday 18 November 2019

ಪರಿಸರವೇ ಉಸಿರಾಗಿರುವ
ಜಿ. ಎಲ್. ಜನಾರ್ದನ


ಪರಿಸರ ಹೋರಾಟಗಳಲ್ಲಿ ತೊಡಗಿಸಿಕೊಂಡವರು ಜಿಲ್ಲೆೆಯಲ್ಲಿ ಹಲವರಿದ್ದಾಾರೆ. ಆದರೆ, ಪರಿಸರ ಸಂಬಂಧಿ ವಿಚಾರಗಳ ಬಗ್ಗೆೆ ಅತ್ಯಂತ ನಿಖರವಾಗಿ ಮಾತನಾಡುವವರು ವಿರಳ. ಅದರಲ್ಲೂ ಪರಿಸರ ವಿಷಯದ ಸಂಪನ್ಮೂಲ ವ್ಯಕ್ತಿಿಗಳಾಗಿ ರಾಜ್ಯ, ಹೊರರಾಜ್ಯ, ವಿದೇಶಗಳಲ್ಲಿ ವಿಚಾರ ಮಂಡಿಸುವವರು ಇನ್ನೂ ವಿರಳ. ಇಂತಹವರಲ್ಲಿ ಅತ್ಯಂತ ಸರಳ ವ್ಯಕ್ತಿಿತ್ವದ, ಮೃದು, ನಯ-ವಿನಯಕ್ಕೆೆ ಹೆಸರಾದ ಜಿ. ಎಲ್. ಜನಾರ್ದನ ಪ್ರಮುಖರು.
ಸಂತೆಕಡೂರಿನ ಪರಿಸರ ಅಧ್ಯಯನ ಕೇಂದ್ರದ ಕಾರ‌್ಯನಿರ್ವಾಹಕ ನಿರ್ದೇಶಕರಾಗಿ, ಜಿಲ್ಲೆೆಯಲ್ಲಿ ಅನೇಕ ಪರಿಸರ ಕಾರ‌್ಯಕ್ರಮಗಳನ್ನು ಸದಾ ಏರ್ಪಡಿಸುತ್ತ, ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಈ ಬಗ್ಗೆೆ ಜನಜಾಗೃತಿ ಮೂಡಿಸುವಲ್ಲಿ ನಿರತರಾಗಿರುವ ಜನಾರ್ದನ್ ಒಬ್ಬ ಅಪರೂಪದ ವ್ಯಕ್ತಿಿ. ಸದ್ದಿಲ್ಲದೆ ಕೆಲಸ ಮಾಡುವವರು ಅವರು. ಯಾವುದೇ ಸನ್ಮಾಾನ, ಪ್ರಶಸ್ತಿಿ, ಪುರಸ್ಕಾಾರಗಳಿಗೆ ಜೋತುಬೀಳದವರು. ತಾವಾಯಿತು, ತಮ್ಮ ಕೆಲಸವಾಯಿತು ಎನ್ನುತ್ತ ಜೋಳಿಗೆಯನ್ನು ಬಗಲಿಗೇರಿಸಿಕೊಂಡು ಸದಾ ಪರಿಸರಾಸಕ್ತರನ್ನು ಸಂಘಟಿಸಿ ಒಂದಿಲ್ಲೊೊಂದು ಹೋರಾಟದಲ್ಲಿ  ತೊಡಗಿಕೊಂಡಿರುತ್ತಾಾರೆ.
 ಬಿಎಸ್‌ಸಿ ಡಿಪ್ಲೊಮಾ  ಓದಿರುವ ಇವರು, ಆಸಕ್ತಿಿ ಬೆಳೆಸಿಕೊಂಡಿದ್ದು ಮಾತ್ರ ಸಾಂಸ್ಕೃತಿಕ ಪಾರಂಪರಿಕಗಳ ಸಂರಕ್ಷಣೆ, ಪರಿಸರ ಮತ್ತು ಮೌಲ್ಯಯುತ ಶಿಕ್ಷಣದವನ್ನು ಬೆಳೆಸುವುದರಲ್ಲಿ.
ಸಮಾಜ, ಪ್ರಾಾಣಿ  ಮತ್ತು ಭೂಮಿಯ ಮೇಲೆ ವಾತಾವರಣದ ಪರಿಣಾಮದ ಅರಿವು, ಶಾಲೆಗೆ ಹೋಗುವ ವಿದ್ಯಾಾರ್ಥಿಗಳಲ್ಲಿ ಪರಿಸರ ಜಾಗೃತಿ, ಮೂಡಿಸುತ್ತಿಿದ್ದಾಾರೆ. 2007ರಿಂದ ಇಲ್ಲಿಯವರೆಗೆ ಸುಮಾರು 20 ಸಾವಿರ ಮಕ್ಕಳಲ್ಲಿ ಈ ಜಾಗೃತಿ ಉಂಟುಮಾಡುವ ಕೆಲಸ ಮಾಡಿದ್ದಾಾರೆ. ಪರಿಸರ ಸ್ನೇಹಿ ಶಾಲಾ ಕಾರ‌್ಯಕ್ರಮವನ್ನು ಜಿಲ್ಲೆೆಯಿಂದ ಆರಂಭಿಸಿ ಈಗ ರಾಜ್ಯದಾದ್ಯಂತ ಪಸರಿಸಿದ್ದಾಾರೆ.
ಪರಿಸರ ಸಂದೇಶ ಎನ್ನುವ ಮ್ಯಾಾಗಜಿನ್ ಪ್ರಕಟಿಸುತ್ತಿಿದ್ದಾಾರೆ. ಇದನ್ನು ಜಿಲ್ಲೆೆಯ ಎಲ್ಲಾಾ 3 ಸಾವಿರ ಶಾಲೆಗಳಿಗೆ ಮತ್ತು ರಾಜ್ಯದ ಸುಮಾರು 2 ಸಾವಿರ ಶಾಲೆಗಳಿಗೆ ಕಳುಹಿಸುತ್ತಿಿದ್ದಾಾರೆ.
ಬ್ರಹ್ಮಪುತ್ರ, ಕೋಶಿಯಾ ಮತ್ತು ಶರಾವತಿ ನದಿಗಳ ಅಧ್ಯಯನ ಸಮಿತಿಯ ಸದಸ್ಯರಾಗಿ ಅಸ್ಸಾಾಂ, ಬಿಹಾರ್ ಮತ್ತು ಕರ್ನಾಟಕದಲ್ಲಿ ಕೆಲಸ ಮಾಡುತ್ತಿಿದ್ದಾಾರೆ. ಇದರ ಹೊರತಾಗಿ ವಿಶ್ವಬ್ಯಾಾಂಕ್ ಪ್ರಾಾಯೋಜಿತ, ಕರ್ನಾಟಕದಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ಕುರಿತ ಯೋಜನೆಯ ಅಧ್ಯಯನ ಸಮಿತಿಯ ನಿರ್ದೇಶಕರಾಗಿ, ಮರುಭೂಮಿ ಅಭಿವೃಧಿ ಯೋಜನೆಯ ಯೋಜನಾ ನಿರ್ದೇಶಕರಾಗಿ, ಕರ್ನಾಟಕದ ರಾಷ್ಟ್ರೀಯ ಸಾಕ್ಷರತಾ ಮಿಶನ್‌ನ ರಾಜ್ಯ ಸಂಪನ್ಮೂಲ ವ್ಯಕ್ತಿಿಯಾಗಿ, 2009ರಿಂದ ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರದ ಕಾರ‌್ಯನಿರ್ವಾಾಹಕ ನಿರ್ದೇಶಕರಾಗಿ,  ಭಾರತೀಯ ನದಿಗಳ ಅಧ್ಯಯನ ಸಮಿತಿಯ ರಾಜ್ಯ ಸಂಯೋಜಕರಾಗಿ ಕೆಲಸ ಮಾಡುತ್ತಿಿದ್ದಾಾರೆ. 
ಪ್ಯಾಾಲೆಸ್ತೀನಿನಲ್ಲಿ ಜರುಗಿದ ಜಾಗತಿಕ ಸಮಾವೇಶದಲ್ಲಿ ಕರ್ನಾಟಕದ ರೈತರು ಮತ್ತು ಮಾರುಕಟ್ಟೆೆ ಬಗ್ಗೆೆ, ಉತ್ತರಕಾಂಡ ರಾಜ್ಯದಲ್ಲಿ ಜರುಗಿದ ಸಮಾವೇಶದಲ್ಲಿ ಕರ್ನಾಟಕದ ನದಿಯ ಸ್ಥಿಿತಿಗತಿಗಳು, ತುಮಕೂರಿನಲ್ಲಿ ನಡೆದ ಸಮಾವೇಶದಲ್ಲಿ  ನೆಲ ಮತ್ತು ಜಲ ಸಂಪತ್ತು ನಿರ‌್ವಹಣೆ,  ಪಶ್ಚಿಿಮಘಟ್ಟದ ಹೋರಾಟ ಬೆಳೆಸುವಲ್ಲಿ ಚಳವಳಿಗಳ ಪಾತ್ರ, ಜೈವಿಕ ಇಂಧನಗಳ ಅಭಿವೃದ್ಧಿಿ,  ಪಶ್ಚಿಿಮ ಘಟ್ಟಗಳಲ್ಲಿನ ಚಳವಳಿಗಳು ಇವೇ ಮೊದಲಾದವುಗಳ ಬಗ್ಗೆೆ ದೇಶ, ವಿದೇಶ, ವಿವಿಧ ರಾಜ್ಯಗಳಲ್ಲಿ ಪ್ರಬಂಧ ಮಂಡಿಸಿದ್ದಾಾರೆ.
 ಜನಾರ್ದನ ಅವರು, ಇಂಗ್ಲೀಷ್ ಮತ್ತು ಕನ್ನಡದಲ್ಲಿ 9 ಪುಸ್ತಕವನ್ನು ಪ್ರಕಟಿಸಿದ್ದಾಾರೆ. ಅವುಗಳಲ್ಲಿ ಕೆಲವೆಂದರೆ, ಕರುನಾಡ ಹಕ್ಕಿಿಗಳು,  ರಿವರ್ ವ್ಯಾಾಲಿ ಕಲ್ಚರ್ ಇನ್  ಶರಾವತಿ ರಿವರ್, ಇಕೋ ಫ್ರೆೆಂಡ್ಲಿಿ ಸ್ಕೂಲ್ ಗೈಡ್‌ಸ್‌,  ನ್ಯೂಕ್ಲಿಿಯರ್ ಪವರ್ ಪ್ಲಾಾಂಟ್‌ಸ್‌, ಕ, ಕಾ, ಕಿ, ಕೀ, ಕಾಗುಣಿತ ಹಾಡುತ್ತ ಕಲಿಯೋಣ, ಧನ್ವಂತರಿ ಶಾಲಾ ಗೈಡ್  ಮೊದಲಾದವು.
ಇವರ ಇಷ್ಟೆೆಲ್ಲಾಾ ಸಾಧನೆ ಗಮನಿಸಿ ರೋಟರಿ ಇಂಟರ್‌ನ್ಯಾಾಶನಲ್ ಸಂಸ್ಥೆೆ ವೊಕೇಶನಲ್ ಎಕ್‌ಸ್‌‌ಲೆನ್‌ಸ್‌ ಅವಾರ್ಡನ್ನು ನೀಡಿದೆ. ತಮ್ಮ ಇಳಿವಯಸ್ಸಿಿನಲ್ಲೂ ಪರಿಸರದ ಹೋರಾಟಕ್ಕೆೆ ಹೊಸ ಹೆಜ್ಜೆೆಯನ್ನು ಇಡುತ್ತಲೇ ಇದ್ದಾಾರೆ.

published on Nov 16-2019
............................... 

Saturday 9 November 2019

ಸರಳ, ಜನಪ್ರಿಿಯ ಅಧಿಕಾರಿ
ಬ್ರಿಿಜೆಟ್ ವರ್ಗೀಸ್ 


ಸಜ್ಜನರಿಗೆ ಅವರ ನಡವಳಿಕೆಯೇ ಭೂಷಣ ಎನ್ನುವ ಸಂಸ್ಕೃತದ ಉಕ್ತಿುದೆ. ಅವರ ಮಾತು, ಕೃತಿ, ನಡೆ-ನುಡಿ ಎಲ್ಲವೂ  ಶೋಭಿಸುತ್ತವೆ. ಮಾತು ಕಡಿಮೆ , ಕೆಲಸ ಹೆಚ್ಚು ಎನ್ನುವ ಮಾತಿಗೆ ಬದ್ಧರಾಗಿರುತ್ತಾಾರೆ. ಇವರು ಯಾರನ್ನೂ ನೋುಸದೆ, ಗೌರವದಿಂದ ಕಾಣುತ್ತಾಾರೆ. ಎಲ್ಲರಿಗೂ ಬೇಕಾದವರಾಗುತ್ತಾಾರೆ. ಈ ಮೂಲಕ "ಶ್ವಾಾಸಾರ್ಹತೆಗೆ ಪಾತ್ರರಾಗುತ್ತಾಾರೆ. 
ಅದರಲ್ಲೂ "ಶೇಷವಾಗಿ, ಸರಕಾರಿ ಅಧಿಕಾರಿಗಳ ಬಗ್ಗೆೆ ಜನರಲ್ಲಿ ಒಳ್ಳೆೆಯ ಭಾವನೆ ಏಕಾಏಕಿ ಮೂಡುವುದಿಲ್ಲ. ಎಷ್ಟೇ ಸದ್ಗುಣ ಸಂಪನ್ನ, ಜನೋಪಕಾರಿ ಅಧಿಕಾರಿಯಾದರೂ ಜನರ "ಶ್ವಾಾಸ ಗಳಿಸುವುದು ಮತ್ತು ಅದನ್ನು ಉಳಿಸಿಕೊಂಡು ಹೋಗುವುದು ಕಷ್ಟದ ಕೆಲಸ. ಇಂತಹುದರಲ್ಲಿ ನಗರದಲ್ಲಿ ಕೆಲಸ ಮಾಡುತ್ತಿಿರುವ ಅಧಿಕಾರಿಣಿಯೊಬ್ಬರು ಎಲ್ಲರ ಪಾಲಿಗೆ ಅಚ್ಚುಮೆಚ್ಚಿಿನವರಾಗಿದ್ದಾಾರೆ. ಯಾವುದೇ ಹಮ್ಮು- ಬಿಮ್ಮು ಇಲ್ಲದೆ, ತೀರಾ ಸರಳ ನಡೆ-ನುಡಿಯೊಂದಿಗೆ ಬೆರೆಯುವ ಇವರ ಹೆಸರು ಬ್ರಿಿಜೆಟ್ ವರ್ಗೀಸ್.
ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಇವರ ಹೆಸರು ಚಿರಪರಿಚಿತ. ಸದಾ ನಗುಮೊಗ, ಸರಳ ಸಜ್ಜನಿಕೆಯ ವ್ಯಕ್ತಿಿತ್ವ ಇವರದ್ದು. ಅಂಕಿ-ಸಂಖ್ಯೆೆ ಇಲಾಖೆಯ ಜಿಲ್ಲಾಾಧಿಕಾರಿಯಾಗಿ ಕೆಲಸ ಮಾಡುತ್ತಿಿರುವ ಇವರು. ಮೂಲತಃ ಕೇರಳದ ತ್ರಿಿಶ್ಯೂರು ಜಿಲ್ಲೆೆಯ ಹಳ್ಳಿಿಯೊಂದರ ಕೃ ಕುಟುಂಬದವರು. ಆದರೆ ಓದಿದ್ದು, ಬೆಳೆದಿದ್ದು ಕೆಲಸಕ್ಕೆೆ ಸೇರಿದ್ದು, ಕೆಲಸ ಮಾಡಿದ್ದೆೆಲ್ಲ ಶಿವಮೊಗ್ಗದಲ್ಲಿ. ಆದ್ದರಿಂದಲೇ ಅವರು ಕೇರಳಿಗರೆನಿಸಿಕೊಳ್ಳದೆ ಅಪ್ಪಟ ಶಿವಮೊಗ್ಗದವರಾಗಿ, ಮಲೆನಾಡಿನಲ್ಲಿ ಗುಣಗಳನ್ನೆೆಲ್ಲಾಾ ಮೈಗೂಡಿಸಿಕೊಂಡಿದ್ದಾಾರೆ. ಮೂಲಭಾಷೆ ಮಲಯಾಳಂ ಆದರೂ ಸ್ಫುಟವಾಗಿ ಕನ್ನಡ ಮಾತನಾಡುತ್ತಾಾರೆ.
ತೀರ್ಥಹಳ್ಳಿಿ ಸರಕಾರಿ ಬಾಲಕಿಯರ ಪ್ರೌೌಢಶಾಲೆಯಲ್ಲಿ ಹೈಸ್ಕೂಲು ಮುಗಿಸಿ, ತುಂಗಾ ಕಾಲೇಜಿನಿಂದ ಬಿಕಾಂ ಪದ" ಪಡೆದು, ಮೈಸೂರು ""ಯಲ್ಲಿ ಎಂಕಾಮ್ ಮುಗಿಸಿ, ಚಿಕ್ಕಮಗಳೂರಿನ ಸಂಜೆ ಕಾಲೇಜಿನಲ್ಲಿ ಓದಿ ಎಲ್‌ಎಲ್‌ಬಿ ಪದ" ಪಡೆದಿದ್ದಾಾರೆ. 1984ರಲ್ಲಿ ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಟೆಲಿಗ್ರಾಾಫಿಸ್‌ಟ್‌ ಆಗಿ ಬೆಂಗಳೂರಲ್ಲಿ ಕೆಲಸಕ್ಕೆೆ ಸೇರಿದರು. ಇದೇ ವೇಳೆ ರಾಜ್ಯದ ""ಧ ಇಲಾಖೆಗಳಲ್ಲಿ ಟೈಪಿಸ್‌ಟ್‌ ಹುದ್ದೆೆಗೆ ಅರ್ಜಿ ಆಹ್ವಾಾನಿಸಿದಾಗ ಅದರಲ್ಲಿ ಆಯ್ಕೆೆಯಾಗಿ ತೀರ್ಥಹಳ್ಳಿಿಯ ಕೃ ಇಲಾಖೆಯಲ್ಲಿ 1985ರಲ್ಲಿ ಕೆಲಸಕ್ಕೆೆ ಸೇರ್ಪಡೆಗೊಂಡರು. ಅಲ್ಲಿಂದ ಅಂಕಿ-ಸಂಖ್ಯೆೆ ಇಲಾಖೆಯಲ್ಲಿ  ಸಹಾಯಕ ಅಂಕಿಸಂಖ್ಯಾಾ ಅಧಿಕಾರಿಯಾಗಿ ನೇಮಕಗೊಂಡು 2 ವರ್ಷ, ವಯಸ್ಕರ ಶಿಕ್ಷಣ ಇಲಾಖೆಯಲ್ಲಿ ಕೆಲವು ಕಾಲ ಹಾಗೂ ಜಿಪಂನಲ್ಲಿ 12 ವರ್ಷ ಕೆಲಸ ನಿರ್ವ"ಸಿದ್ದಾಾರೆ.
2012ರಲ್ಲಿ ಜಿಲ್ಲಾಾ ಅಂಕಿಸಂಖ್ಯೆೆ ಅಧಿಕಾರಿಯಾಗಿ ಬಡ್ತಿಿಗೊಂಡು, 2015ರಲ್ಲಿ ಉಪ ನಿರ್ದೇಶಕರಾಗಿ, ಈಗ ಇಲಾಖೆಯ ಜಿಲ್ಲಾಾ ಅಧಿಕಾರಿಯಾಗಿ ಕೆಲಸ ಮಾಡುತ್ತಿಿದ್ದಾಾರೆ. ಕೇವಲ ಸರಕಾರಿ ಕೆಲಸ ಮಾತ್ರವಲ್ಲ, ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾಾರೆ. ಕೇರಳ ಸಮಾಜಂನ ಸಮನ್ವಯ ಮ"ಳಾ ಸಮಾಜದ ಉಪಾಧ್ಯಕ್ಷರಾಗಿ ಸಮಾಜಮುಖಿ ಕೆಲಸಗಳನ್ನು ಈ ಮೂಲಕ ಮಾಡುತ್ತಿಿದ್ದಾಾರೆ. ಸರಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ, ಹಾಲಿ ಸರ್ಕಾರಿ ನೌಕರರ ಗೃಹ ನಿರ್ಮಾಾಣ ಸಹಕಾರ ಸಂಘದ ನಿರ್ದೇಶಕರಾಗಿದ್ದಾಾರೆ. 
ಇವರ ದಕ್ಷತೆ ಮತ್ತು ಸೇವಾ ಮನೋಭಾವವನ್ನು ಗಮನಿಸಿ ಜಿಲ್ಲಾಾಡಳಿತ 2019ರಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿಿ ನೀಡಿ ಗೌರ"ಸಿದೆ. ಇತ್ತೀಚೆಗೆ ಜರುಗಿದ ಕೇರಳ ಸಮಾಜಂ ಮ"ಳಾ ಸಮಾಜದ ರ್ವಾಕೋತ್ಸವದಲ್ಲೂ ಇವರ ಸೇವೆ ಮತ್ತು ಜನಪ್ರಿಿಯತೆಯನ್ನು ಮನ್ನಿಿಸಿ ಗೌರ"ಸಲಾಗಿದೆ. ಸರಕಾರಿ ನೌಕರರ ಹೊರತಾಗಿ ಸಾರ್ವಜನಿಕ ವಲಯದಲ್ಲಿಯೂ ಅಚ್ಚುಮೆಚ್ಚಿಿನವರಾಗಿರುವುದರಿಂದ ವರ್ಗೀಸ್ ಮೇಡಂ ಎಂದೇ ಜನಪ್ರಿಿಯರಾಗಿದ್ದಾಾರೆ.
ಜನಸೇವೆ ಮೂಲಕ "ಶ್ವಾಾಸ ಗಳಿಸಿದ್ದೇನೆ. ಇದನ್ನು ಜನರು ಮತ್ತು ನೌಕರರು ಗುರುತಿಸಿದ್ದಾಾರೆ. ಅವರಿಟ್ಟ ನಂಬಿಕೆಯನ್ನು ಮುಂದುವರೆಸಿಕೊಂಡು ಹೋಗುವುದೇ ತನ್ನ ಮುಂದಿರುವ ಗುರಿ ಎನ್ನುತ್ತಾಾರೆ ಬ್ರಿಿಜೆಟ್. 

published on 9-11-19
..................................       

Thursday 7 November 2019

ಅಜಾತಶತ್ರು ನ್ಯಾಾಯವಾದಿ 
ಎ. ಟಿ. ಬೆಳ್ಳಿಿಯಪ್ಪ


ವೇಗವಾಗಿ ಓಡುವವನಿಗೆ ಜೀವನದಲ್ಲಿ ಯಶಸ್ಸು ಸಿಗುವುದಿಲ್ಲ. ಓಡುವುದನ್ನು ಒಂದು  ಕಲೆಯನ್ನಾಾಗಿರಿಸಿಕೊಂಡವನಿಗೆ ಮಾತ್ರ ಯಶಸ್ಸು ಸಿಗುತ್ತದೆ. ಈ ರೀತಿಯ ವ್ಯಕ್ತಿಿ ತಾನು ಬೆಳೆಯುವುದರ ಜೊತೆಗೆ ಇನ್ನೊೊಬ್ಬರನ್ನೂ ಬೆಳೆಸುತ್ತಾಾನೆ. ಅವರು ಸ್ವಯಂಪ್ರಕಾಶರಾಗಿ ಬೆಳಗುವಂತೆ ಮಾಡಿ, ಅವರ ಸಾಧನೆಯನ್ನು ಕಂಡು ಸಂತಸಪಡುತ್ತಾಾನೆ.
ಈ ಮಾತು ನಗರದ ಹಿರಿಯ ನ್ಯಾಾಯವಾದಿ ಎ. ಟಿ. ಬೆಳ್ಳಿಿಯಪ್ಪ ಅವರಿಗೆ ಅನ್ವಯವಾಗುತ್ತದೆ. ತಮ್ಮ ಪ್ರಾಾಮಾಣಿಕ ವೃತ್ತಿಿಪರತೆ ಮತ್ತು ದಕ್ಷತೆಯಿಂದ ಹೆಸರಾದವರು ಇವರು. ರಾಜ್ಯದಲ್ಲಿ ಖ್ಯಾಾತರಾಗಿ, ಅನೇಕ ಕಿರಿಯ ವಕೀಲರಿಗೆ ಮಾರ್ಗದರ್ಶಕರಾಗಿ ಅವರ  ಏಳ್ಗೆೆಯನ್ನು ಬಯಸಿದವರು. ಈಗ 82ರ ಹರಯದಲ್ಲಿರುವ ಬೆಳ್ಳಿಿಯಪ್ಪ ಅನಾರೋಗ್ಯದಿಂದ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿಿಲ್ಲ.
ಬೆಳ್ಳಿಿಯಪ್ಪ ಅವರ ಸೇವೆ ನ್ಯಾಾಯವಾದಿ ಕ್ಷೇತ್ರದಲ್ಲಿ ಗಣನೀಯವಾದುದು. ವಕೀಲ ವೃತ್ತಿಿಯಲ್ಲಿ ಅಪಾರ ಗೌರವ, ಪರಿಣಿತಿ ಮತ್ತು ಜನಮನ್ನಣೆ ಪಡೆದು, ಶ್ರೇಷ್ಠ ಮಟ್ಟದ ವಕೀಲರಾಗಿ  ಸೇವೆ ಸಲ್ಲಿಸಿ ಅಜಾತಶತ್ರು ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಕೇವಲ ನ್ಯಾಾಯವಾದಿಯಾಗಿ ಮಾತ್ರವಲ್ಲ. ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ವಲಯದಲ್ಲೂ ಅವರು ಸೇವೆ ಸಲ್ಲಿಸಿದ್ದಾಾರೆ.
 ಮೂಲತಃ ಕೊಡಗು ಜಿಲ್ಲೆೆ ವಿರಾಜಪೇಟೆ ತಾಲೂಕಿನ ಬಾಳೆಲೆ ಗ್ರಾಾಮದವರಾದ ಬೆಳ್ಳಿಿಯಪ್ಪ, ಪ್ರಾಾಥಮಿಕ ಶಿಕ್ಷಣವನ್ನು ಪೊನ್ನಂಪೇಟೆಯಲ್ಲಿ ಪಡೆದು, ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿಎ ಪದವಿ ಪಡೆದಿದ್ದಾಾರೆ. ಮೈಸೂರಿನ ಶಾರದಾ ವಿಲಾಸ್ ಕಾನೂನು ಕಾಲೇಜಿನಲ್ಲಿ ಬಿ. ಎಲ್ ಪದವಿಯನ್ನು ಪಡೆದು ಮದ್ರಾಾಸ್‌ನಲ್ಲಿ ವಿಮಾ ಕಂಪನಿಯೊಂದರ ಲೀಗಲ್ ಅಸಿಸ್ಟೆೆಂಟ್ ಆಗಿ ನಾಲ್ಕು ವರ್ಷ ಕೆಲಸ ಮಾಡಿದರು. ಆನಂತರ ಮೈಸೂರಿನಲ್ಲಿ ವೃತ್ತಿಿ ಆರಂಭಿಸಿದರು.
ಇವರ ಪತ್ನಿಿ ಎಂ. ಡಿ. ಬೋಜಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು, ಶಿವಮೊಗ್ಗಕ್ಕೆೆ ವರ್ಗಾವಣೆಗೊಂಡಿದ್ದರಿಂದ 1972ರಿಂದ ಇಲ್ಲಿಯೇ ನೆಲೆಸಿ ವೃತ್ತಿಿಯನ್ನು ಮುಂದುವರೆಸಿದರು. ಅಂದು ಹೆಸರಾಂತ ವಕೀಲರಾಗಿದ್ದ ಎಚ್. ಎನ್. ಶ್ರೀನಿವಾಸರಾವ್ ಜೊತೆಯಲ್ಲಿ ಎಲ್ಲಾಾ ರೀತಿಯ ಕ್ರಿಿಮಿನಲ್ ಪ್ರಕರಣಗಳನ್ನು ನಡೆಸುತ್ತಿಿದ್ದರು. ಇಲ್ಲಿಂದ ಆರಂಭವಾದ ಅವರ ಯಶಸ್ಸಿಿನ ಪಯಣ ಇಂದಿಗೂ ಅಜರಾಮರವಾಗಿದೆ. ಇಲ್ಲಿಯವರೆಗೆ ಸುಮಾರು 50ಕ್ಕೂ ಹೆಚ್ಚು ಶಿಷ್ಯರನ್ನು ಅವರು ಉತ್ತಮ ನ್ಯಾಾಯವಾದಿಗಳನ್ನಾಾಗಿ ಮಾಡಿದ್ದಾಾರೆ.
ಅವರಲ್ಲಿ ಕೆಲವರೆಂದರೆ, ಎಸ್. ಟಿ. ರಂಗನಾಥ, ಕೆ. ಪಿ. ಗಾದಿಲಿಂಗಪ್ಪ, ಬಿ. ತೇಜಪ್ಪ, ಗೀತಾ ಶಿವಮೂರ್ತಿ, ಸರೋಜಾ ಚಂಗೊಳ್ಳಿಿ, ಪ್ರಭಾ ಗಿರಿಮಾಜಿ, ಹರಿಪ್ರಸಾದ್, ವಸಂತಮಾಧವ ಮೊದಲಾದವರು. ಶಿಷ್ಯರನ್ನೂ ಸಹ ತಮ್ಮಂತೆಯೇ ಶಿಸ್ತಿಿನ, ಪ್ರಾಾಮಾಣಿಕ ಹಾಗೂ ಕೌಶಲ್ಯಯುತ ವಕೀಲರನ್ನಾಾಗಿ ರೂಪಿಸಿದ್ದಾಾರೆ. ಇವರ ಪುತ್ರ ಭರತ್ ಬೆಳ್ಳಿಿಯಪ್ಪ ಸಹ ತಂದೆಯ ಗರಡಿಯಲ್ಲೇ ಬೆಳೆದು ಇಲ್ಲಿಯೇ ವೃತ್ತಿಿ ನಡೆಸುತ್ತಿಿದ್ದಾಾರೆ.   
ಜಿಲ್ಲಾಾ ವಕೀಲರ ಸಂಘದ ಅಧ್ಯಕ್ಷರಾಗಿ 1996-97, 99-2000ರಲ್ಲಿ ಕೆಲಸ ಮಾಡಿದ್ದಾಾರೆ. ಈ ಅವಧಿಯಲ್ಲಿ ಶಿವಮೊಗ್ಗ ವಕೀಲರ ಭವನ ನಿರ್ಮಾಾಣಕ್ಕೆೆ ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸುಲ್ಲಿ ಅವರು ಮಾಡಿದ ಯತ್ನ ಸ್ಮರಣೀಯ. 2001ರಲ್ಲಿ ರಾಜ್ಯ ವಕೀಲರ ಪರಿಷತ್ ಸದಸ್ಯರಾಗಿ, ಅದರ ಶಿಸ್ತು ಮೇಲ್ವಿಿಚಾರಣೆ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾಾರೆ. ಇವರ ಪತ್ನಿಿ ಬೋಜಮ್ಮ 2009ರಲ್ಲಿ ನಿಧನಹೊಂದಿದ ನಂತರ ವೃತಿಯ ಕಡೆ ಹೆಚ್ಚಿಿನ ಗಮನವನ್ನು ಹರಿಸಲು ಸಾಧ್ಯವಾಗದೆ ನಿವೃತ್ತರಾಗಿದ್ದಾಾರೆ.
ಶಿವಮೊಗ್ಗ ಲಯನ್‌ಸ್‌ ಕ್ಲಬ್ ಅಧ್ಯಕ್ಷರಾಗಿ, ಜಿಲ್ಲಾಾ ಕೊಡವ ಸಮಾಜದ ಅಧ್ಯಕ್ಷರಾಗಿ, ಕಾಂಗ್ರೆೆಸ್ ಸಕ್ರಿಿಯ ಕಾರ‌್ಯಕರ್ತರಾಗಿ ಸೇವೆ ಸಲ್ಲಿಸಿದ್ದಾಾರೆ. ಇಂತಹ ಅಜಾತಶತ್ರುವಿನ ಸಾರ್ಥಕ ಸೇವೆಯನ್ನು ಮನ್ನಿಿಸಿ, ಅವರ ಮಾರ್ಗದರ್ಶನದಲ್ಲಿ ಸಾಗಲು ಜಿಲ್ಲಾಾ ವಕೀಲರ ಸಂಘ ಸನ್ಮಾಾನಿಸಿದೆ. ಅವರ ಶಿಷ್ಯ ವೃಂದದವರು ಗುರುವಂದನೆಯನ್ನು ಸಲ್ಲಿಸಿದ್ದಾಾರೆ.

published on 26th oct-2019
...........................

Monday 4 November 2019

ವಯೊಲಿನ್ ಮಾಂತ್ರಿಿಕ  

ಹೊಸಳ್ಳಿಿ ವೆಂಕಟರಾಮ್


ಶಿವಮೊಗ್ಗ ನಗರದ ಪಕ್ಕದಲ್ಲಿರುವ ಹೊಸಹಳ್ಳಿಿ ಸಾಂಸ್ಕೃತಿಕವಾಗಿ ಶ್ರೀಮಂತ ಗ್ರಾಾಮ. ಸಂಸ್ಕೃತ, ಗಮಕ ಗ್ರಾಾಮವೂ ಹೌದು. ಇಲ್ಲಿನ ವಾಸಿಗಳಲ್ಲಿ, ಕಲೆ, ಸಂಸ್ಕೃತಿ ಹೇರಳವಾಗಿ ಹಾಸುಹೊಕ್ಕಾಾಗಿದೆ. ಈ ಗ್ರಾಾಮದಲ್ಲಿ ಮನೆಗೊಬ್ಬರಾದರೂ ಕಲಾ"ದರಿದ್ದಾಾರೆ. ಅದರಲ್ಲಿಯೂ ಪಿಟೀಲಿನಲ್ಲಿ (ವಯೊಲಿನ್) ಹೆಸರಾದ ಸಹೋದರರಿದ್ದಾಾರೆ ಅವರೇ ವೆಂಕಟರಾಂ ಮತ್ತು ಸುಬ್ಬರಾವ್.
 ಹೊಸಹಳ್ಳಿಿ ವೆಂಕಟರಾಮ್ ಈ ಬಾರಿಯ ಕರ್ನಾಟಕ ಸಂಗೀತ ಅಕಾಡೆ"ುಯ ಸದಸ್ಯರಾಗಿ ಆಯ್ಕೆೆಯಾಗಿದ್ದಾಾರೆ. ಇವರ ಅನೇಕ ವರ್ಷಗಳ ಸಂಗೀತ ವಾದನದ ತಪಸ್ಸಿಿಗೆ ಇದು ಸಂದ ಗೌರವ. ಸುಮಾರು 5 ದಶಕಗಳಿಂದ ಈ ಕ್ಷೇತ್ರದಲ್ಲಿ "ಶ್ವದಾದ್ಯಂತ ಹೆಸರು ಮಾಡಿದ ಅತ್ಯಂತ ಸರಳ ಮತ್ತು ಅಷ್ಟೇ ಸಹೃದಯ ಕಲಾ"ದ ಇವರು.
  ಮೈಸೂರಿನಲ್ಲಿ ಸಂಸ್ಕೃತ ಎಂ. ಎ. ಮುಗಿಸಿದ ನಂತರ ಮದ್ರಾಾಸ್‌ಗೆ ತೆರಳಿ ಅಲ್ಲಿ ಜಗದ್ವಿಿಖ್ಯಾಾತ ಪಿಟೀಲುವಾದಕ, ಪದ್ಮಭೂಷಣ ಲಾಲ್‌ಗುಡಿ ಜಯರಾಮ್ ಅವರಲ್ಲಿ ಸುಮಾರು 6 ವರ್ಷ ವಯೊಲಿನ್ ಕಲಿತು ಉತ್ತಮ ವಾದಕರೆನಿಸಿಕೊಂಡು ತವರಿಗೆ ಮರಳಿದರು. ಇಲ್ಲಿ ಉಚಿತವಾಗಿ ವಯೊಲಿನ್ ಶಿಕ್ಷಣವನ್ನು ನೀಡಿದರು. ಸ್ವತಃ ಅವರ ಸಹೋದರ ಸುಬ್ಬರಾವ್ ಅವರಿಗೆ ಗುರುವಾದರು. ಈಗ ಸುಬ್ಬರಾವ್ ಸಹ ಅನಂತರಾಮ್ ಅವರಂತೆಯೇ ಅದ್ಭುತ ಸಾಧಕರಾಗಿದ್ದಾಾರೆ.
1975ರಲ್ಲಿ ಮೊಟ್ಟಮೊದಲ ಕಾರ‌್ಯಕ್ರಮವನ್ನು  ಮೈಸೂರಿನಲ್ಲಿ ತ್ಯಾಾಗರಾಜ ಜಯಂತಿಯಲ್ಲಿ ನೀಡುವ ಮೂಲಕ ಅಪರ ಜನಮೆಚ್ಚುಗೆ ಗಳಿಸಿದರು. ಅಲ್ಲಿಂದ ಶುರುವಾದ ಇವರ ಯಶಸ್ವಿಿಗಾಥೆ ಇಲ್ಲಿಯವೆರೆಗೂ ಅದೇ ಹಾದಿಯಲ್ಲಿ ಸಾಗಿಬಂದಿದೆ.  ಮಂಗಳೂರು ಆಕಾಶವಾಣಿಯ ಬಿ ಗ್ರೇಡ್ ಕಲಾ"ದರಾಗಿ , ದೂರದರ್ಶನ ಮತ್ತು ಉದಯ ಟಿ"ಗಳಲ್ಲಿ ಸಾಕಷ್ಟು ಕಾರ‌್ಯಕ್ರಮಗಳನ್ನು ನೀಡಿದ್ದಾಾರೆ.  ಸಹೋದರ ಸುಬ್ಬರಾವ್ ಜೊತೆ ಸೇರಿ ದೇಶದ ಹಲವು ನಗರಗಳಲ್ಲಿ ಕಾರ‌್ಯಕ್ರಮ ಕೊಟ್ಟಿಿದ್ದಾಾರೆ. ಇವರು "ರಿಯ ಗಾಯಕರಾದ ಆರ್. ಕೆ. ಶ್ರೀಕಂಠನ್, ಆರ್. ಕೆ. ಪದ್ಮನಾಭ, "ದ್ಯಾಾಭೂಷಣ, ಲಂಡನ್‌ನ ಜಾನ್ ಮಾರ್, ಕದ್ರಿಿ ಗೋಪಾಲನಾಥ, ಮಾಸ್ಟರ್ ಶಶಾಂಕ್ ಮೊದಲಾದವರಿಗೆ ವಯೊಲಿನ್ ಸಾಥ್ ನೀಡಿದ ಕೀರ್ತಿ ಹೊಂದಿದ್ದಾಾರೆ.   
1986-8ರಲ್ಲಿ ರಶ್ಯಾಾ ಉತ್ಸವದಲ್ಲಿ ಪಾಲ್ಗೊೊಂಡು ಜನಮನಸೆಳೆದ ಅಸೀಮ ಕಲಾ"ದ ಇವರು. ಲಂಡನ್‌ನ ಭಾರತೀಯ "ದ್ಯಾಾಭವನ್ ಮತ್ತು ಯುಎಇಯಲ್ಲಿ, ಶ್ರೀಲಂಕಾದಲ್ಲಿ ತಮ್ಮ ವಯೊಲಿನ್ ಕಛೇರಿ ನಡೆಸಿದ್ದಾಾರೆ. ಇವರ ಸಾಧನೆಗೆ ನಾದಶ್ರೀ, ಕರ್ನಾಟಕ ಗಾನಕಲಾ ತಪಸ್ವಿಿ, ತಂತಿವಾದ್ಯ ಪ್ರ"ೀಣ, ನಾಟ್ಯಶ್ರೀ, ಕಲಾದೀಪ್ತಿಿ, ಸಂಗೀತ ಕಲಾ ತಪಸ್ವಿಿ ಮೊದಲಾದ ಬಿರುದುಗಳು ನೀಡಲ್ಪಟ್ಟಿಿವೆ. ಕರ್ನಾಟಕ ಗಾನಕಲಾ ಪರಿಷತ್‌ನ ಎಕ್‌ಸ್‌‌ಪರ್ಟ್ ಸ"ುತಿಯ ಸದಸ್ಯರಾಗಿ,  ನವದೆಹಲಿಯ ಸಿಸಿಆರ್‌ಟಿಯ ಪ್ರಾಾದೇಶಿಕ ಸ"ುತಿಯ ಸದಸ್ಯರಾಗಿ, ಹೊಸಹಳ್ಳಿಿಯ ಸಂಕೇತಿ ಸಂಗೀತ ಸಭಾದ ಸದಸ್ಯರಾಗಿ ಕೆಲಸ ಮಾಡುತ್ತಿಿದ್ದಾಾರೆ.
 ಮಣಿಪಾಲದ ಮಾಹೆ "ಶ್ವ"ದ್ಯಾಾಲಯದ ಅಕಾಡೆ"ು ಆಫ್ ಮ್ಯೂಸಿಕ್ ಮತ್ತು ಡಾನ್‌ಸ್‌‌ನಲ್ಲಿ 12 ವರ್ಷದಿಂದ ಕಲಿಸುತ್ತಿಿರುವ ವೆಂಕಟರಾಮ್, ಸುಮಾರು 200 ಮಕ್ಕಳಿಗೆ ವಯೊಲಿನ್ ತರಬೇತಿಯನ್ನು ಸ್ವಗ್ರಾಾಮದಲ್ಲಿ ಕೊಟ್ಟಿಿರುವ ಹೆಗ್ಗಳಿಕೆ ಹೊಂದಿದ್ದಾಾರೆ. ಸುತ್ತೂರು ಮಠ, ಬೆಂಗಳೂರಿನ ಗಾಯನ ಸಮಾಜದಲ್ಲಿ ಕಾರ‌್ಯಕ್ರಮ ನೀಡಿ ""ಧ ಬಿರುದು, ಸನ್ಮಾಾನಗಳಿಗೆ ಭಾಜನರಾಗಿದ್ದಾಾರೆ. ಇವರ ಅನುಪಮ ಸೇವೆ, ಶಾಸ್ತ್ರೀಯ ಮತ್ತು ಪಾರಂಪರಿಕೆಯ ಕಲೆಯನ್ನು ಮೆಚ್ಚಿಿ ಅನೇಕ ಸಂಘ- ಸಂಸ್ಥೆೆಗಳು ಗೌರ"ಸಿವೆ. 2008ರ ಮೈಸೂರು ದಸರಾದಲ್ಲೂ ಕಾರ‌್ಯಕ್ರಮ ನೀಡಿದ್ದಾಾರೆ.
   ತಮ್ಮ ಸಹೋದರನೊಂದಿಗೆ ನಡೆಸಿದ ದ್ವಂದ್ವ ಪಿಟೀಲು ವಾದನದ ಸಿಡಿ ಮಧುರಮೋಹನಂ ಸಹ ಬಿಡುಗಡೆ ಮಾಡಿದ್ದಾಾರೆ. ಪಿಟೀಲು ಕಲಿಕೆ ಕಷ್ಟ, ಆದರೆ, ನುಡಿಸುವುದು ಸುಲಭ ಎನ್ನುತ್ತಾಾರೆ ವೆಂಕಟರಾಮ್.
published on Nov 2.2019
 .................................