Saturday 27 July 2019

ದಣಿವಿಲ್ಲದ ಕ್ರೀಡಾಪಟು
ಎಂ. ಆರ್. ಸಣ್ಣನಂಜಮ್ಮ  


ಇವರಿಗೆ 68ರ ಹರಯ. ಕ್ರೀಡಾಕಟೂದಲ್ಲಿ ಇಂದಿಗೂ ಸಾಧನೆ ಮಾಡುತ್ತಲೇ ಇದ್ದಾಾರೆ. ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕಗಳ ರಾಶಿಯನ್ನೇ ಬಾಚಿದ್ದಾಾರೆ. ಇನ್ನೂ ವಿಶೇಷವೆಂದರೆ, ಎರಡು ಬಾರಿ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊೊಂಡು ಈಗ ಮೂರನೆಯ ಬಾರಿಗೆ ತೆರಳಲು ಸನ್ನದ್ಧರಾಗಿದ್ದಾಾರೆ.
ಸಣ್ಣನಂಜಮ್ಮ ಹೆಸರು ಹಿರಿಯರ ಕ್ರೀಡಾಕ್ಷೇತ್ರದಲ್ಲಿ ಪರಿಚಿತವಾದದ್ದು. ಮೂರು ದಶಕಗಳಿಂದ ಅಥ್ಲೆೆಟಿಕ್‌ಸ್‌‌ನಲ್ಲಿ ಸಾಧನೆ ಮಾಡುತ್ತಲೇ ಇದ್ದಾಾರೆ. ಇವರ ಸಾಧನೆಗೆ ಎಂದೂ ವಯಸ್ಸು ಅಡ್ಡಿಿಯಾಗಿಲ್ಲ. ಏಕೆಂದರೆ ಸಾಧನೆಯ ಛಲವನ್ನು ಇನ್ನೂ ಇವರು ಹೊತ್ತಿಿದ್ದಾಾರೆ. ಮನಸ್ಸಿಿದ್ದರೆ ಮಾರ‌್ಗ ಎನ್ನುವ ಇವರು, ತನ್ನ ಸಾಧನೆಗೆ ಇನ್ನೂ ವಯಸ್ಸಾಾಗಿಲ್ಲ ಎಂದು ಚಟಾಕಿ ಹಾರಿಸುತ್ತಾಾರೆ.   
 ಆಗಸ್‌ಟ್‌ 17 ಮತ್ತು 18ರಂದು ರಂದು ಮಲೇಷಿಯಾದಲ್ಲಿ ನಡೆಯುವ ಅಂತರರಾಷ್ಟ್ರೀಯ ನಡಿಗೆ, ಓಟ , ಜಾವೆಲಿನ್ ಸ್ಪರ್ಧೆಗೆ  ಇವರು ಭಾರತದ ಪ್ರತಿನಿಧಿಯಾಗಿ ಆಯ್ಕೆೆಯಾಗಿದ್ದಾಾರೆ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಕರ್ನಾಟಕದಿಂದ ಆಯ್ಕೆೆಯಾದ ಏಕೈಕ ಪ್ರತಿನಿಧಿ ಎನ್ನುವುದು ವಿಶೇಷ. ಎಂ.ಆರ್.ಸಣ್ಣನಂಜಮ್ಮ ಭಾರತ, ಕರ್ನಾಟಕ ಮತ್ತು ಶಿವಮೊಗ್ಗಕ್ಕೆೆ ಕೀರ್ತಿತಂದ ಹಿರಿಯ ಕ್ರೀಡಾಪಟು. ಶ್ರೀಲಂಕಾ ಮತ್ತು ಪೂನಾದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಿಯನ್ನು ಪಡೆದಿದ್ದಾಾರೆ. ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲೂ ಭಾಗವಹಿಸಿ ಹಲವು ರಾಜ್ಯ ಸುತ್ತಿಿದ್ದಾಾರೆ. ಇದರಿಂದ ತನಗೆ ಪ್ರಮುಖ ರಾಜ್ಯಗಳನ್ನು ನೋಡುವ ಅವಕಾಶ ದೊರೆಯಿತು ಎನ್ನುತ್ತಾಾರೆ ಅವರು.
ಸಣ್ಣನಂಜಮ್ಮ ತುಮಕೂರು ಜಿಲ್ಲೆೆ ತುರುವೆಕೆರೆ ತಾಲೂಕಿನ ಮೇಲಿನಬಳಗೆರೆ ಗ್ರಾಾಮದವರು. ಇವರನ್ನು ದಾವಣಗೆರೆಯ ವಾಸಿ ನಾಗಪ್ಪ ಎನ್ನುವವರಿಗೆ ವಿವಾಹ ಮಾಡಿಕೊಡಲಾಗಿತ್ತು. ನಾಲ್ವರು ಹೆಣ್ಣು ಮತ್ತು ಒಬ್ಬ ಮಗನ್ನು ಹೊಂದಿರುವ ಇವರು, ಪತಿಯ ಮರಣಾನಂತರ   ಜೀವನೋಪಾಯಕ್ಕಾಾಗಿ ಹೆಣ್ಣುಮಕ್ಕಳ ಮನೆಯಲ್ಲಿ ವಾಸವಾಗುವ ದೃಷ್ಟಿಿಯಿಂದ ಶಿವಮೊಗ್ಗಕ್ಕೆೆ ಬಂದವರು. ಸದ್ಯ ಹೊಸಮನೆ ಬಡಾವಣೆಯಲ್ಲಿ ಮಗಳ ಮನೆಯಲ್ಲಿದ್ದಾಾರೆ. ಶಿವಮೊಗ್ಗಕ್ಕೆೆ ಬಂದನಂತರ ಹಲವು ಮಹಿಳಾ ಕ್ರೀಡಾಪಟುಗಳ ಪರಿಚಯವಾಗಿ ಅವರ ಒತ್ತಾಾಸೆಯ ಮೇರೆಗೆ ಕ್ರೀಡಾ ತರಬೇತಿ ಪಡೆಯಲು ಮುಂದಾದರು. ಬರಬರುತ್ತ ಆಸಕ್ತಿಿ ಹೆಚ್ಚಾಾಯಿತು. ಹಿರಿಯರಿಗಾಗಿ ವಿಶೆಷ ಕ್ರೀಡಾಕೂಟ ರಾಜ್ಯದಲ್ಲಿ ಪ್ರತಿವರ್ಷ ನಡೆಯುವುದರಿಂದ ಇದರಲ್ಲಿ ಪಾಲ್ಗೊೊಳ್ಳುತ್ತ ತಮ್ಮ ಕ್ರೀಡಾ ಉತ್ಸಾಾಹವನ್ನು ಹೆಚ್ಚಿಿಸಿಕೊಂಡರು.
ಇಂದು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಮಿಂಚುತ್ತಿಿದ್ದಾಾರೆ. ಇವರ ಮನೆಯಲ್ಲಿ ಪದಕಗಳ ರಾಶಿಯೇ ಇದೆ. ನಗರದ ಹತ್ತು- ಹಲವು ಸಂಘಟನೆಗಳು, ಸಾರ್ವಜನಿಕರು ಸನ್ಮಾಾನಿಸಿ, ಗೌರವಿಸಿದ್ದಾಾರೆ. ಸರಳ ಮತ್ತು ಸದಾ ನಗುಮೊಗದ ಜೀವಿಯಾಗಿರುವ ಇವರು, ಈ ವರ್ಷವೂ ಮಲೇಶಿಯಾ ಕ್ರೀಡಾಕೂಟಕ್ಕೆೆ ಆಯ್ಕೆೆಯಾಗುವ ಮೂಲಕ ಜಿಲ್ಲೆೆಗೆ ಹೆಸರು ತಂದಿದ್ದಾಾರೆ. ಆದರೆ ಆರ್ಥಿಕವಾಗಿ ಸಬಲರಲ್ಲದ ಕಾರಣ ಹೋಗಿ ಬರುವ ಖರ್ಚನ್ನು ನಿಭಾಯಿಸಲು ಸಾರ್ವಜನಿಕರ ಮೊರೆ ಹೋಗಿದ್ದಾಾರೆ. ನಗರದ ದಾನಿಗಳು, ಉದ್ಯಮಿಗಳು ನೆರವು ನೀಡುವ ಮೂಲಕ ಇವರ ಕ್ರೀಡಾ ಸಾಧನೆಗೆ ನೆರವಾಗಬೇಕಿದೆ. 
ಇದರಲ್ಲಿ ಭಾಗವಹಿಸಲು ಸುಮಾರು 80 ಸಾವಿರ ರೂಪಾಯಿ ಅವಶ್ಯಕತೆ ಇದೆ. ಸಾರ್ವಜನಿಕರು ಸಂಘ -ಸಂಸ್ಥೆೆಯ ಪ್ರತಿನಿಧಿಗಳು, ಉದಾರ ಮನಸ್ಸಿಿನವರು ಆರ್ಥಿಕ ನೆರವನ್ನು ನೀಡುವುದರ ಮೂಲಕ ಪ್ರೋತ್ಸಾಾಹ ಕೊಡಬೇಕೆಂದು ಅವರು ಮನವಿ ಮಾಡಿದ್ದಾಾರೆ. ದಾನಿಗಳು ಮೊ: 9945516113 ಮೂಲಕ ಇವರನ್ನು ಸಂಪರ್ಕಿಸಬಹುದು.
ಇಷ್ಟೇ ಅಲ್ಲದೆ, ಅವರು ಸಾಮಾಜಿಕ ಚಟುವಟಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾಾರೆ. ಹೊಸಮನೆಯ ಪತಂಜಲಿ ಸಂಸ್ಥೆೆಯ ಸದಸ್ಯರಾಗಿ ಅದರ ಎಲ್ಲಾಾ ಕಾರ‌್ಯಚಟುವಟಿಕೆಯಲ್ಲಿ ಲವಲವಿಕೆಯಿಂದ ಭಾಗವಹಿಸುತ್ತಿಿದ್ದಾಾರೆ. ಇಳಿವಯಸ್ಸಿಿನಲ್ಲಿಯೂ ಯುವಕರು ನಾಚುವಂತೆ ಕೆಲಸ ಮಾಡುತ್ತಾಾರೆ, ಕ್ರೀಡಾಕೂಟದಲ್ಲಿ ಪಾಲ್ಗೊೊಳ್ಳುತ್ತಿಿದ್ದಾಾರೆ. 
published on 27.7. 19
..............................

Monday 22 July 2019

 ಅಂತರಾಷ್ಟ್ರೀಯ ಕಬಡ್ಡಿಿಗೆ
14ರ ಪೋರ ಸನತ್



  ಬೆಳೆಯ ಸಿರಿ ಮೊಳಕೆಯಲ್ಲಿ ನೋಡು ಎಂಬ ಮಾತಿದೆ. ಕಿರಿಯ ವಯಸ್ಸಿಿನಲ್ಲಿ ಮಕ್ಕಳಲ್ಲಿರುವ ಆಸಕ್ತಿಿಗೆ ಸರಿಯಾಗಿ ನೀರೆರೆದರೆ ಅದು ಉತ್ತಮ ಫಲ ಕೊಡುತ್ತದೆ. ಬೇಕಾದ ಎಲ್ಲಾಾ ವ್ಯವಸ್ಥೆೆ ಕಲ್ಪಿಿಸಿ, ಸರಿಯಾದ ಮಾರ‌್ಗದರ್ಶನ ಕೊಡಿಸಿದರೆ ಯಶಸ್ಸು ಕಟ್ಟಿಿಟ್ಟ ಬುತ್ತಿಿ.  ಇದರ ಜೊತೆಗೆ ಸತತ ಯತ್ನ ಮತ್ತು ತರಬೇತಿ ಹಾಗೂ ಕಠಿಣ ಪರಿಶ್ರಮವಿದ್ದರೆ ಯಾವುದೂ ಅಸಾಧ್ಯ ಎನಿಸುವುದಿಲ್ಲ.
ಇದಕ್ಕೆೆ ಪೂರಕ ಎಂಬಂತೆ ತನ್ನ ಕಿರಿಯ ವಯಸ್ಸಿಿನಲ್ಲೇ ಅಭೂತಪೂರ್ವ ಸಾಧನೆ ಮಾಡಿದ ಸನತ್ ಎಂಬ ಪೋರ ಎಲ್ಲರ ಗಮನ ಸೆಳೆದಿದ್ದಾಾನೆ. ಹೊಸನಗರ ತಾಲೂಕಿನ ಬಿದನೂರು ನಗರದ 14 ವರ್ಷದ ಬಾಲಕ ಸನತ್ 17 ವರ್ಷದ ವಯೋಮಾನದ ಒಳಗಿನ ಅಂತರಾಷ್ಟ್ರೀಯ ಕಬಡ್ಡಿಿ ಪಂದ್ಯಾಾವಳಿಗೆ ಆಯ್ಕೆೆಯಾಗುವ ಮೂಲಕ ಮಲೆನಾಡಿಗೆ ಕೀರ್ತಿ ತಂದಿದ್ದಾಾನೆ.
ಹೊಸನಗರದ ರಾಮಕೃಷ್ಣ ಶಾಲೆಯಲ್ಲಿ 9ನೆಯ ತರಗತಿ ವ್ಯಾಾಸಾಂಗ ಮಾಡುತ್ತಿಿರುವ ಸನತ್, ಕಿರಿವಯಸ್ಸಿಿನಲ್ಲೇ ಕಬಡ್ಡಿಿ ಬಗ್ಗೆೆ ಆಸಕ್ತಿಿ ತೋರಿ ಸತತ ಪರಿಶ್ರಮದ ಮೂಲಕ ಈ ಸಾಧನೆ ಮಾಡಿದ್ದಾಾನೆ. ಇತ್ತೀಚೆಗೆ ಗೋವಾದಲ್ಲಿ ಖೇಲೋ ಇಂಡಿಯಾ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕಬಡ್ಡಿಿ ಪಂದ್ಯಾಾವಳಿಯಲ್ಲಿ ಕಬಡ್ಡಿಿ ತಂಡದ ನಾಯಕನಾಗಿ ಕರ್ನಾಟಕವನ್ನು ಪ್ರತಿನಿಧಿಸಿದ್ದನು. ಅಲ್ಲಿ ತಂಡ ಜಯಗಳಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದ. ಉತ್ತಮ ನಾಯಕತ್ವ ಮತ್ತು ಆಟದಿಂದ ಎಲ್ಲರ ಮನಗೆದ್ದಿದ್ದಾಾನೆ.
ದುಬೈನಲ್ಲಿ ಈ ವರ್ಷದ ನವೆಂಬರ್ 15ರಿಂದ 20ರವರೆಗೆ 17 ವರ್ಷದ ವಯೋಮಾನದ ಒಳಗಿನವರ ಅಂತರಾಷ್ಟ್ರೀಯ ಕಬಡ್ಡಿಿ ಪಂದ್ಯಾಾವಳಿ ನಡೆಯಲಿದ್ದು, ಸನತ್ ಭಾರತವನ್ನು ಪ್ರತಿನಿಧಿಸಲಿದ್ದಾಾನೆ. ಸಂಯುಕ್ತ ಭಾರತೀಯ ಖೇಲ್ ಫೌಂಡೇಶನ್ ಆಯೋಜಿಸಿರುವ ಪಂದ್ಯವಾವಳಿಯಲ್ಲಿ ಸನತ್ ಭಾಗವಹಿಸುತ್ತಿಿರುವ ಬಗ್ಗೆೆ ಆತನ ಪೋಷಕರು ಮತ್ತು ಹೊಸನಗರದ ರಾಮಕೃಷ್ಣ ವಿದ್ಯಾಾಲಯದಲ್ಲಿ ಸಂಭ್ರಮ ಮನೆಮಾಡಿದೆ.
ಸನತ್ ಸಾಧನೆಗೆ ನೆರವಾಗಿದ್ದು ಆತನ ಪೋಷಕರು. ಮೂಡುಗೊಪ್ಪ ಗ್ರಾಾಮಪಂಚಾಯ್ತಿಿಯ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಹೆಚ್.ವೈ.ಸತೀಶ್ ಗೌಡ ಮತ್ತು ಸರೋಜಾ ದಂಪತಿಗಳ ದ್ವಿಿತೀಯ ಪುತ್ರನಾದ ಈತ, ಪೂರ್ವ ಪ್ರಾಾಥಮಿಕ ಮತ್ತು ಪ್ರಾಾಥಮಿಕ ಶಾಲೆಯ ಅವಧಿಯಲ್ಲೂ ಉತ್ತಮ ಕಬಡ್ಡಿಿಯಾಟದಿಂದ ಅಂದೇ ಭರವಸೆ ಮೂಡಿಸಿದ್ದ. ಈಗ ರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಭವಿಷ್ಯದ ಕಬಡ್ಡಿಿ ಆಟಗಾರನಾಗುವ ಎಲ್ಲ ಭರವಸೆಯನ್ನು ಮೂಡಿಸಿದ್ದಾಾನೆ.
  ಪ್ರೊಕಬಡ್ಡಿಿ ಆಟಗಾರನಾಗುವ ಮೂಲಕ ಈ ನಾಡಿಗೆ ಕೀರ್ತಿ ತರುವ ಮಹದಾಸೆಯನ್ನು ಸನತ್ ಹೊತ್ತಿಿದ್ದಾಾನೆ.  ತನ್ನ ಕ್ರೀಡಾ ಬೆಳವಣಿಗೆಗೆ ಆಸರೆಯಾದ ತಂದೆತಾಯಿ, ರಾಮಕೃಷ್ಣ ವಿದ್ಯಾಾಲಯದ ದೈಹಿಕ ಶಿಕ್ಷಕ ನಾಗರಾಜ್ ಮತ್ತು ತರಬೇತುದಾರ ಅಫ್ರೋಜ್ ಅವರ ಕೊಡುಗೆಯನ್ನು ಸ್ಮರಿಸುತ್ತಾಾನೆ.
ತುಂಬಾ ಚಿಕ್ಕಂದಿನಲ್ಲೇ ಕಬಡ್ಡಿಿ ಬಗ್ಗೆೆ ಸನತ್ ತುಂಬಾ ಆಸಕ್ತಿಿ ಹೊಂದಿದ್ದ. ಓದಿನಲ್ಲೂ ಚುರುಕು ಹೊಂದಿರುವ ಆತನಿಗೆ ಕಬಡ್ಡಿಿ ಆಡಲು ಎಲ್ಲಾಾ ಸಹಕಾರ ನೀಡಿದ್ದೇನೆ. ಚಿಕ್ಕವಯಸ್ಸಿಿನಲ್ಲೇ ಈ ಸಾಧನೆ ಮಾಡಿರುವುದು ಹೆಮ್ಮೆೆ ತಂದಿದೆ. ಮುಂದಿನ ಆತನ ಸಾಧನೆಗೆ ಇದೇ ರೀತಿಯ ಸಹಕಾರ ನೀಡುವುದಾಗಿ ಪಾಲಕರು ಹೇಳುತ್ತಾಾರೆ.
  ಮಹತ್ವಾಾಕಾಂಕ್ಷೆ ಇಲ್ಲದೆ ಯಾರೂ ಏನನ್ನೂ ಸಾಧಿಸಲಾರರು ಎಂಬ ಮಾತಿದೆ. ಮಹತ್ತಾಾದುದನ್ನು ಸಾಧಿಸಲು ಯಾರೂ ಪ್ರತ್ಯೇಕವಾಗಿ ಕಾಣಿಸಿಕೊಳ್ಳಬೇಕಿಲ್ಲ. ಪ್ರಬಲ ಇಚ್ಛಾಾಶಕ್ತಿಿ, ಮನೋಬಲ ಮತ್ತು ಆತ್ಮವಿಶ್ವಾಾಸ ಇದ್ದರೆ ಏನನ್ನಾಾದರೂ ಸಾಧಿಸಬಹುದು. ಈ ಎಲ್ಲಾಾ ಗುಣ ಹೊಂದಿರುವ ಸನತ್, ಕಬಡ್ಡಿಿಯ ಉತ್ತಮ ಪ್ರತಿಭೆಯಾಗಿ ಹೊರಹೊಮ್ಮಬೇಕಿದೆ. ಮುಂದೆ ಕರುನಾಡನ್ನು ಮಾತ್ರವಲ್ಲ, ದೇಶವನ್ನು ಪ್ರತಿನಿಧಿಸುವಂತಾಗಬೇಕು. ಪ್ರೊಕಬಡ್ಡಿಿ ಆಟಗಾರನಾಗುವ ಆತನ ಆಶಯ ಈಡೇರಬೇಕಿದೆ.

published on 20-7-2019
..........................................

Saturday 13 July 2019

ತಾಳಮದ್ದಲೆಯ ಕಳ
ಶಾಂತಾರಾಮ ಪ್ರಭು  
 


ಕೆಲವರು  ವೃತ್ತಿುಂದ ನಿವೃತ್ತರಾದ ನಂತರ ತಟಸ್ಥರಾಗುತ್ತಾಾರೆ. ಆರಾಮವಾಗಿ ಮನೆಯಲ್ಲೇ ಕುಳಿತುಬಿಡುತ್ತಾಾರೆ. ಇನ್ನೂ ಕೆಲವರು  ಇನ್ನಷ್ಟು ಕ್ರಿಿಯಾಶೀಲರಾಗುತ್ತಾಾರೆ, ಹೊಸ ಕೆಲಸ ಕೈಗೆತ್ತಿಿಕೊಳ್ಳುತ್ತಾಾರೆ. ಅಥವಾ ತಮ್ಮ ಪ್ರವೃತ್ತಿಿಯನ್ನು ಚುರುಕಾಗಿಸುತ್ತಾಾರೆ.
ಶಾಂತಾರಾಮ ಪ್ರಭು  ಎಂಬ ಹೆಸರು ಕೇಳಿದೊಡನೆಯೇ ನೆನಪಾಗುವುದು ತಾಳಮದ್ದಲೆ ಮತ್ತು ಸಾ"ತ್ಯ ಕ್ಷೇತ್ರ. ಶಿಕ್ಷಣ ಕ್ರೇತ್ರದಲ್ಲಿ ಅಪಾರ ಅನುಭವ ಹೊಂದಿದ, ಸಾ"ತ್ಯ ಪರಿಷತ್‌ನಲ್ಲಿ ಸಕ್ರಿಿಯವಾಗಿ ತೊಡಗಿಸಿಕೊಂಡ, ಬಹುಭಾಷಾ ಪ್ರ"ೀಣ, ಉತ್ತಮ ಭಾಷಣಕಾರ, ಲೇಖಕ. ಇಂತಹ ನಿರಂತರ ಕಲಿಕೆಯ, ಬಹು ಕ್ಷೇತದ್ರ ಸಾಧಕ  ಪ್ರಭು ಅವರಿಗೆ ಯಕ್ಷಗಾನ ಕಲಾ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಕಾರಣ ಯಕ್ಷಗಾನ ಮತ್ತು ಬಯಲಾಟ ಅಕಾಡೆ"ು ಕೊಡಮಾಡುವ ಅಕಾಡೆ"ು ಪ್ರಶಸ್ತಿಿ ಘೋತವಾಗಿದೆ. ಇವರು ನಿವೃತ್ತಿಿಯ ನಂತರ ಇನ್ನಷ್ಟು ಸಾಧಕರಾದವರು. 
  33 ವರ್ಷಗಳ ಕಾಲ ಕನ್ನಡ, ಇಂಗ್ಲೀಷ್ ಉಪನ್ಯಾಾಸಕರಾಗಿ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿಿ. ಜತೆಗೆ ತಾಳಮದ್ದಲೆಯ ಉತ್ತಮ ವಾಗ್ಮಿಿಯಾಗಿ ಹೆಸರು ಮಾಡಿದವರು. ಪಿ. ಶಾಂತಾರಾಮ ಪ್ರಭು ಹೊಸನಗರ ತಾಲೂಕು ನಿಟ್ಟೂರಿನವರು. ನಿವೃತ್ತ ಉಪನ್ಯಾಾಸಕರಾಗಿಯೂ ಅಧ್ಯಾಾಪನ ವೃತ್ತಿಿ ಮುಂದುವರೆಸುತ್ತಿಿದ್ದಾಾರೆ. 46 ವರ್ಷಗಳ ಸುದೀರ್ಘ ಕಾಲದ ಶಿಕ್ಷಕರು. (1971 ರಿಂದ) ಪ್ರಾಾಥ"ುಕ ಹಂತದಿಂದ ಪದ"ಯವರೆಗೆ ತೀರ್ಥಹಳ್ಳಿಿಯಲ್ಲಿ ಓದು. ಕರ್ನಾಟಕ ""ುಂದ ಕನ್ನಡ ಮತ್ತು ಮೈಸೂರು ""ುಂದ ಇಂಗ್ಲಿಿಷ್ ಎಂ.ಎ. ಪದ" ಪಡೆದರು. ಆನಂತರ ಸಾ"ತಿ ಎ.ಎನ್. ಮೂರ್ತಿರಾವ್ ಅವರ ಸಮಗ್ರ ಸಾ"ತ್ಯದ ಮೇಲೆ ಪಿಎಚ್‌ಡಿ ಪಡೆದರು. ""ಧ ಭಾಷೆಗಳ ಮೇಲಿನ ಡಿಪ್ಲೋಮೊ ಕೋರ್ಸ್‌ಗಳು, ಹಲವು ಭಾಷೆಗಳ ಮೇಲಿನ ಅಧ್ಯಯನ, "ೀಗೆ ನಿತ್ಯ ನಿರಂತರ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
  ಶಾಂತಾರಾಂ ಪ್ರಭು ಅಪ್ಪಟ್ಟ ಗ್ರಾಾ"ುೀಣ ಬದುಕಿನೊಂದಿಗೆ ಹಾಸುಹೊಕ್ಕಾಾದವರು. "ಶ್ವ ರಾಮಾಯಣ ಕಥಾವಾ"ನಿ ಎಂಬ ಗ್ರಂಥದ ರಚನೆಯ ಮೂಲಕ ದೇಶ "ದೇಶಗಳಲ್ಲಿ ನಮ್ಮ ರಾಮಾಯಣ ಪೌರಾಣಿಕ ಗ್ರಂಥಗಳ ಕುರಿತ "ಚಾರಗಳು ಹೇಗೆ ಸಾಮ್ಯತೆ ಪಡೆದಿದೆ ಎನ್ನುವುದನ್ನು ನಿರೂಪಿಸಿದ್ದಾಾರೆ. ಪ್ರಪಂಚದಾದ್ಯಂತ ಇರುವ ರಾಮನ ಕುರಿತಾದ ಗ್ರಂಥಗಳ ಬಗ್ಗೆೆ ಬರೆದ ಕೃತಿ ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ.  ಅನೇಕ ಚಿಂತನಾ ಬರಹ, ಕಥೆ, ಲೇಖನ ಸಂಗ್ರಹ ಇವರೊಟ್ಟಿಿಗೆ ಬೆಸೆದುಕೊಂಡಿದೆ. ಇದಕ್ಕೆೆಲ್ಲ ಕಳಶ"ಟ್ಟಂತೆ ಒಳ್ಳೆೆಯ ಅರ್ಥಗಾರಿಕೆ ಇವರ "ರಿಮೆ. ಅದಕ್ಕೆೆ ಅಕಾಡೆ"ುಯ ಪ್ರಶಸ್ತಿಿ ಸಲ್ಲುತ್ತಿಿದೆ.
  ತಾಳಮದ್ದಲೆಯಲ್ಲಿ ಸೌಮ್ಯ ಪಾತ್ರ ನಿರ್ವಹಣೆಯಲ್ಲಿ ಸಿದ್ದಹಸ್ತರು. ಧರ್ಮರಾಜ, ರಾಮ, "ಷ್ಣು, ಕೃಷ್ಣ, "ಧುರ, ಭೀಷ್ಮ, ದಶರಥ ಮುಂತಾದ ಪಾತ್ರಕ್ಕೆೆ ಒಳ್ಳೆೆಯ ಅಧ್ಯಾಾಯನ"ರುವುದು ಇವರ "ರಿಮೆ. ಆದಿ ನಾರಾಯಣ ದರ್ಶನದ "ಷ್ಣು ಇವರ ಬಹಳ ಪ್ರಸಿದ್ಧ ಪಾತ್ರ. ಹಂದಲಸು ಲಕ್ಷ್ಮೀನಾರಾಯಣ ಭಟ್ಟರ ಶಿಷ್ಯರಾಗಿ 1971 ರಿಂದಲೂ ತಾಳಮದ್ದಲೆಯಲ್ಲಿ ತೊಡಗಿಸಿಕೊಂಡ ಪ್ರಭು, ತಾಳಮದ್ದಲೆಯ ಎಲ್ಲ ಪ್ರದರ್ಶನದಲ್ಲೂ ಪರಿಚಿತರು. ಗೋಪಾಲಕೃಷ್ಣ ಶ್ರೇಣಿ, ಸಾಮಗ, ಆನಂದ ಮಾಸ್ತರ್, ಪೆರ್ಲ, ರಾಮದಾಸ ಸಾಮಗರಂತಹ "ರಿಯರ ಒಡನಾಟ"ರುವವರು.
ಕೊಂಕಣಿ, ಕನ್ನಡ, ಇಂಗ್ಲಿಿಷ್, ಸಂಸ್ಕೃತ, "ಂದಿ, ಮಲಯಾಳಂ, ಮರಾಠಿ, ತುಳು "ೀಗೆ 8 ಭಾಷೆಗಳನ್ನು ನಿರ್ಗಳವಾಗಿ ಮಾತನಾಡಬಲ್ಲರು. ಬೇರೆ ಭಾಷೆಗಳಲ್ಲಿಯೂ ಸಾ"ತ್ಯ ರಚಿಸಿದ್ದಾಾರೆ. ಕನ್ನಡ ಸಾ"ತ್ಯ ಪರಿಷತ್ತಿಿನ ಹೊಸನಗರ ತಾಲೂಕು ಅಧ್ಯಕ್ಷರಾಗಿ ಪ್ರಪ್ರಥಮ ಕನ್ನಡ ಸಾ"ತ್ಯ ಸಮ್ಮೇಳನ ಮಾಡಿದ "ರಿಮೆ ಇವರದ್ದು. ಈಗ ಇಳಿವಯಸ್ಸಿಿನಲ್ಲಿಯೂ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಿದ್ದಾಾರೆ. ಮಾತ್ರವಲ್ಲ, ಎಲ್ಲಿಯೇ ಯಕ್ಷಗಾನ ತಾಳಮದ್ದಲೆಗೆ ಕರೆ ಬಂದರೂ ಅಲ್ಲಿಗೆ ತೆರಳುತ್ತಾಾರೆ. ಪಾದರಸದ ವ್ಯಕ್ತಿಿತ್ವದ ಇವರಿಗೆ ಹಲವರು ಗೌರವ, ಸನ್ಮಾಾನಗಳು ದಕ್ಕಿಿವೆ.

published on 13 july 2019
..................................