Saturday 26 January 2019

ಮಾನ"ೀಯ ಸೇವೆಯ
ಹನುಮಂತಪ್ಪ


ನಮ್ಮ ಹೃದಯದಲ್ಲಿ ಒಳ್ಳೆೆಯತನ"ದ್ದರೆ ಅದನ್ನು ಇನ್ನೊೊಬ್ಬರ ಹೃದಯದಲ್ಲಿ ಕಾಣುತ್ತೇವೆ ಎನ್ನುವ ಮಾತಿದೆ. ಯಾರಲ್ಲಿ ಮಾನ"ೀಯ ಸೇವೆಯ ಗುಣ"ರುತ್ತದೆಯೋ ಅವರು ಇತರರಲ್ಲಿ ಅದನ್ನು ಕಾಣುತ್ತಾಾರೆ. ತಮ್ಮಲ್ಲಿ ಶ್ರೀಮಂತರಾಗಲಿ, ಬಡವರಾಗಲಿ ಯಾರೇ ಬಂದರೂ ಅಲ್ಲಿ ಜಾತಿ, ಮತ, ಅಂತಸ್ತು ಎಣಿಸದೆ ಪ್ರೀತಿಯನ್ನೇ ಕಾಣುತ್ತಾಾರೆ. ಎಲ್ಲ ರೀತಿಯಲ್ಲಿ ನೆರವಾಗುವ ಮೂಲಕ ಹೃದಯವಂತ ಎನಿಸಿಕೊಳ್ಳುತ್ತಾಾರೆ. 
 ಶಿವಮೊಗ್ಗದ ಮೆಗ್ಗಾಾನ್ ರಕ್ತನಿಧಿ ಕೇಂದ್ರದಲ್ಲಿ ಆಪ್ತ ಸಮಾಲೋಚಕರಾಗಿರುವ  ಎಸ್. ಎಚ್. ಹನುಮಂತಪ್ಪ ಇಂತಹ ಒಬ್ಬ ಅಪೂರ್ವ, ಮಾನ"ೀಯ ಸೇವೆಯ ವ್ಯಕ್ತಿಿ. ನಿಸ್ವಾಾರ್ಥದ ಸೇವೆಗೆ ಇನ್ನೊೊಂದು ಹೆಸರೇ ಹನುಮಂತಪ್ಪ. ಮೆಗ್ಗಾಾನ್ ರಕ್ತನಿಧಿ ಕೇಂದ್ರ ಎಂದರೆ ಮೊದಲು ನೆನೆಪಾಗುವುದೇ ಹನುಮಂತಪ್ಪ ಅವರ ಹೆಸರು. ರಕ್ತದಾನ ಶಿಬಿರ ನಡೆಸುವುದು, ಯುವಜನರನ್ನು  ಮತ್ತು "ಶೇಷವಾಗಿ ಗ್ರಾಾಮಾಂತರದಲ್ಲಿ ಇದಕ್ಕಾಾಗಿ ಜಾಗೃತಿ ಮೂಡಿಸುವುದು ಮತ್ತು ಎಚ್‌ಐ", ಏಡ್‌ಸ್‌ ಬಗ್ಗೆೆ ಆಪ್ತಸಮಾಲೋಚನೆ ಮಾಡುವುದರಲ್ಲೇ ಅವರು ಸದಾ  ಬ್ಯುಜಿ.
ಎಂಎಸ್‌ಡಬ್ಲು ಪದ"ೀಧರರಾಗಿರುವ ಇವರು, ಜನಶಿಕ್ಷಣ ಸಂಸ್ಥೆೆಯ ಹರಿಹರ ಕೇಂದ್ರದಲ್ಲಿ ಕಾರ‌್ಯಕ್ರಮಾಧಿಕಾರಿಯಾಗಿ ಕೆಲಸ ಮಾಡಿದ್ದಾಾರೆ. ಆನಂತರ ಆಪ್ತಸಮಾಲೋಚಕರಾಗಿ ಮೆಗ್ಗಾಾನ್‌ಗೆ ನೇಮಕವಾದರು. ಹತ್ತು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿಿರುವ ಅವರು, ಮಾನ"ೀಯ ಸಮಾಜ ಸೇವಾ ಪ್ರಶಸ್ತಿಿಗೆ ಭಾಜನರಾಗಿದ್ದಾಾರೆ. ಅವರ ಸೇವೆಯನ್ನು ಗುರುತಿಸಿ ಆಧಾರ್ ರಕ್ತದಾನಿಗಳ ಸಂಘ ಈ ಗೌರವ ಸಲ್ಲಿಸಿದೆ. ರಕ್ತದಾನ ಶಿಬಿರವನ್ನು ಪ್ರತಿ ಹಳ್ಳಿಿಗಳಲ್ಲಿ ನಡೆಸುವ ಮಹತ್ತರ ಜವಾಬ್ದಾಾರಿ ಹೊಂದಿರುವ ಅವರು, ಪ್ರತಿ ಗ್ರಾಾಪಂ ಅಧ್ಯಕ್ಷರಿಗೆ, ಕಾರ‌್ಯದರ್ಶಿಗಳಿಗೆ ಪತ್ರ ಬರೆದು ಶಿಬಿರ ನಡೆಸಲು ಸಹಾಯ ಕೋರುತ್ತಾಾರೆ. ಪ್ರತಿ ವರ್ಷ 40ರಿಂದ 50 ರಕ್ತದಾನ ಶಿಬಿರ ನಡೆಸುತ್ತಿಿದ್ದಾಾರೆ.
ರಕ್ತ ಬೇಕೆಂದು ಆಸ್ಪತ್ರೆೆಗೆ ತೆರಳಿದರೆ ಅಲ್ಲಿಯೂ ಅವರು ನೆರವಾಗುತ್ತಾಾರೆ. ಸರ್ಕಾರಿ ಆಸ್ಪತ್ರೆೆಗೆ ಆದರೆ ಉಚಿತವಾಗಿ ಇದನ್ನು ನೀಡಲಾಗುತ್ತದೆ. ಶಿಬಿರದ ವೇಳೆ ರಕ್ತ ನೀಡುವವರಲ್ಲಿ  ಎಚ್‌ಐ" ಕಂಡುಬಂದರೆ ಅದಕ್ಕೆೆ ಉಚಿತವಾಗಿ ಸಲಹೆ ಕೊಡುತ್ತಾಾರೆ. ನ್ಯಾಾಶನಲ್ ಕಂಟ್ರೋೋಲ್ ಆಫಿಸರ್ ಆಫ್ ಇಮ್ಯುನಿಟೀಸ್ (ಎನ್‌ಎಸಿಒ)  ಸಂಸ್ಥೆೆ ಆಪ್ತಸಮಾಲೋಚಕರನ್ನಾಾಗಿ ಅವರನ್ನು ನೇ"ುಸಿದೆ. ಹಳ್ಳಿಿ ಜನರಲ್ಲಿ ಜಾಗೃತಿ ಮೂಡಿಸುವುದು ಅವರ ಮನವೊಲಿಸಿ ಎಚ್‌ಐ" ಚಿಕಿತ್ಸೆೆಗೆ ಒಳಪಡಿಸುವ ಮಹತ್ತರ ಕೆಲಸ ನಿರ್ವ"ಸುತ್ತಿಿದ್ದಾಾರೆ.
ಏಡ್‌ಸ್‌  ಅಥವಾ ಎಚ್‌ಐ" ಪೀಡಿತರು ಕಂಡುಬಂದಲ್ಲಿ ಅವರನ್ನು ಕರೆುಸಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಬಹುದು. ಸರ್ಕಾರದಿಂದ ಈ ರೋಗಕ್ಕೆೆ ಲಭ್ಯ"ರುವ ಎಲ್ಲಾಾ ರೀತಿಯ ಉಚಿತ ಚಿಕಿತ್ಸೆೆಯ ಬಗ್ಗೆೆ ಮಾ"ತಿ ಕೊಡುತ್ತಾಾರೆ. ಪ್ರತಿ ತಿಂಗಳಿಗೊಮ್ಮೆೆ ಜಿಲ್ಲಾಾ ತಾಲೂಕು ಅಥವಾ ಪಿಎಚ್‌ಸಿಗಳಲ್ಲಿ ಪರೀಕ್ಷೆ ಮಾಡಿಸಿಕೊಂಡು ಔಷಧಿ ಪಡೆಯುವಂತೆ ಸೂಚಿಸುತ್ತಾಾರೆ. ಇದರಿಂದಾಗಿಯೇ ಅವರು ಎಲ್ಲರ ಹೃದಯ ಗೆದ್ದಿದ್ದಾಾರೆ.
ಯಾವ ಪ್ರಚಾರ, ಹಮ್ಮು-ಬಿಮ್ಮು ಇಲ್ಲದೆ ತಾವಾುತು, ತಮ್ಮ ಕೆಲಸವಾುತು ಎಂದುಕೊಂಡು ನಿಸ್ವಾಾರ್ಥವಾಗಿ ಸೇವೆ ಸಲ್ಲಿಸುತ್ತಿಿರುವ ಹನುಮಂತಪ್ಪ ಇನ್ನೂ ಎಲೆಮರೆಯ ಕಾುಯಾಗಿದ್ದಾಾರೆ. ಆದರೆ ಅವರ ಸೇವೆ ಮಾತ್ರ ಜನಜನಿತವಾಗಿದೆ.     
ಮಾನ"ೀಯತೆಯೇ ನಮ್ಮ ಜಾತಿ, ಪ್ರೀತಿಯೇ ನಮ್ಮ ಧರ್ಮ. ಯಾವುದೇ ವ್ಯಕ್ತಿಿ ಮೆಗ್ಗಾಾನ್‌ಗೆ ರಕ್ತದ ಸಂಬಂಧ ಅಥವಾ ಆಪ್ತಸಮಾಲೋಚನೆಗೆ ಬಂದಲ್ಲಿ ಜಾತಿ, ಧರ್ಮ ನೋಡದೆ ನೆರವಾಗುತ್ತೇನೆ. ಇಲ್ಲಿಯವರೆಗ ಸಾ"ರಾರು ಜನರ ಮನವೊಲಿಸಿ, ರೋಗದ ಬಗ್ಗೆೆ ಮಾ"ತಿ ನೀಡಿ, ಸಮರ್ಪಕವಾಗಿ, ಕಾಲಕಾಲಕ್ಕೆೆ  ಚಿಕಿತ್ಸೆೆಗೆ  ಪಡೆದಲ್ಲಿ ಇದನ್ನು ನಿಯಂತ್ರಿಿಸಬಹುದು ಎನ್ನುವ ಮೂಲಕ ಅವರಲ್ಲಿ ಧೈರ್ಯ ತುಂಬಿದ್ದೇನೆ ಎನ್ನುತ್ತಾಾರೆ ಪೋಲಿಯೋದಿಂದ ಅಂಗ"ಕಲತೆ ಹೊಂದಿರುವ ಹನುಮಂತಪ್ಪ.
ಇಂತಹ ಅಪೂರ್ವ ಕೆಲಸ ಮಾಡುತ್ತಿಿರುವ ಹನುಮಂತಪ್ಪ ಅವರನ್ನು ಗುರುತಿಸುವ ಕೆಲಸವನ್ನು ಸರ್ಕಾರ, ಸಮಾಜ, ಸಾರ್ವಜನಿಕರು ಮಾಡಬೇಕಿದೆ. 
published on 26-1-2019
.............................................   

Monday 21 January 2019

ಪ್ರಶಸ್ತಿಿಗಳ ಸರದಾರ
ಕೃಷ್ಣ  ಪ್ರಭು


ಮಕ್ಕಳು ಹಸಿ ಸಿಮೆಂಟ್‌ನಂತೆ. ಹಸಿ ಸಿಮೆಂಟ್ ಹೇಗೆ ಬಿದ್ದರೂ ಅದೊಂದು ಕಲಾಕೃತಿಯನ್ನು ನಿರ್"ುಸುತ್ತದೆ. ಮಕ್ಕಳೂ ಸಹ ತಾವು ಕಂಡಿದ್ದನ್ನು, ಕೇಳಿದ್ದನ್ನು ಚಿತ್ರವಾಗಿ ಬಿಡಿಸುತ್ತಾಾರೆ. ಹಾಡಾಗಿ ಹಾಡುತ್ತಾಾರೆ. ಈ ಪ್ರತಿಭೆಯನ್ನು ಪೋಷಕರು ಇನ್ನಷ್ಟು ಬೆಳೆಸಿದಾಗ ಅವರು ಕಲಾಕಾರನೋ, ಸಂಗೀತಗಾರನೋ, ನೃತ್ಯಗಾರನೋ ಆಗುತ್ತಾಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸುತ್ತಾಾರೆ.
ನಗರದಲ್ಲಿ ಇಂತಹ ಅಪ್ರತಿಮ ಕಲಾಕಾರ "ದಾರ್ಥಿಯೊಬ್ಬನಿದ್ದಾಾನೆ. ಈತ ಚಿತ್ರಕಲೆ, ಸಂಗೀತ, ತಬಲಾ, ಭರತನಾಟ್ಯ, ನಾಟಕಗಳಲ್ಲಿ ತನ್ನ ಪ್ರತಿಭೆಯನ್ನು ತೋರ್ಪಡಿಸುತ್ತಿಿದ್ದಾಾನೆ. ಈಗಾಗಲೇ ಸುಮಾರು 35 ""ಧ ಪ್ರಶಸ್ತಿಿಗಳನ್ನು ಧರಿಸಿದ್ದಾಾನೆ. ಇದಕ್ಕೆೆ ಪೂರಕವಾಗಿ ಪಾಲಕರು ಈತನಿಗೆ ಶಿಕ್ಷಣ ಕೊಡಿಸುತ್ತಿಿದ್ದಾಾರೆ. ಈತ ಆರ್‌ಎಂಎಲ್ ನಗರವಾಸಿ, ಭಾರತೀಯ "ದ್ಯಾಾಭವನದ 4ನೆಯ ತರಗತಿ "ದ್ಯಾಾರ್ಥಿ ಕೃಷ್ಣ ಪಿ. ಪ್ರಭು.
ಯುಕೆಜಿಯಲ್ಲಿರುವಾಗಲೇ ಕೃಷ್ಣ ಚಿತ್ರಗಳನ್ನು ತನ್ನಷ್ಟಕ್ಕೆೆ ತಾನೇ ಬರೆಯುತ್ತಿಿದ್ದನು. ಮುದ್ದಾಾಗಿ ಇರುತ್ತಿಿದ್ದ ಈ ಚಿತ್ರಗಳನ್ನು ಗಮನಿಸಿದವರು ಈತನನ್ನು ಚಿತ್ರಕಲಾ ಶಾಲೆಗೆ ಸೇರಿಸುವಂತೆ ಸೂಚಿಸಿದ್ದರು. ಪರಿಣಾಮವಾಗಿ, ಪಾಲಕರು ರ"ರ್ಮ ಚಿತ್ರಕಲಾ ಶಾಲೆಗೆ ಸೇರಿಸಿದರು. ಈಗ ರಾಜ್ಯ ಮತ್ತು ರ್ಟ್ರೋಯ ಸ್ಪರ್ಧೆಗಳಲ್ಲಿ ಪಾಲ್ಗೊೊಂಡು ಚಿನ್ನದ ಪದಕ ತರುತ್ತಿಿದ್ದಾಾನೆ.
ಇದರೊಟ್ಟಿಿಗೆ ಈತ ಶ್ರೀ"ಜಯ ಕಲಾನಿಕೇತನದಲ್ಲಿ  3 ವರ್ಷ ನೃತ್ಯಾಾಭ್ಯಾಾಸ ಕಲಿತಿದ್ದಾಾನೆ.  ಯಕ್ಷಗಾನ ಕಲಾ"ದೆ ಕಿರಣ್ ಪೈ ಅವರಲ್ಲಿ ತಬಲಾ ವಾದನ ಮತ್ತು ಭದ್ರಾಾವತಿಯ ಅಪರಂಜಿ ಅಭಿನಯ ಶಾಲೆಯಲ್ಲಿ ನಾಟಕ ತರಬೇತಿ ಪಡೆಯುತ್ತಿಿದ್ದಾಾನೆ. ಶನಿವಾರ ಮತ್ತು ಭಾನುವಾರ ಈತನ ಪಾಲಿಗೆ ಈ ಕಲೆಗಳನ್ನು ಕಲಿಯುವ ದಿನವಾಗಿದೆ. ಪಾಲಕರು ಈತನ್ನು ತರಬೇತಿಗೆ ಕರೆದೊಯ್ಯುತ್ತಿಿದ್ದಾಾರೆ. ಆದರೂ ಪ್ರೀತಿುಂದ ಮಗನನ್ನು ಬೆಳೆಸಿದ್ದರಿಂದ ಪಾಲಕರ ನಿರೀಕ್ಷೆಯನ್ನು ಹುಸಿಗೊಳಿಸದೆ ಮುಂದೆ ಸಾಗುತ್ತಿಿದ್ದಾಾನೆ.
ಮುಂಬೈನಲ್ಲಿರುವ ರ್ಟ್ರೋಯ ಶಿಕ್ಷಣ ಮತ್ತು  ಮಾನ ಸಂಪನ್ಮೂಲ ಇಲಾಖೆ  ಏರ್ಪಡಿಸಿದ್ದ ಸ್ವಚ್ಛಭಾರತ ಚಿತ್ರಕಲೆ ಸ್ಪರ್ಧೆಯಲ್ಲಿ ಕೃಷ್ಣ ರಾಷ್ಟ್ರಕ್ಕೆೆ ಮೊದಲ ಸ್ಥಾಾನಗಳಿಸುವುದರ ಜೊತೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾಾನೆ.  ಔರಂಗಾಬಾದ್‌ನ ಇಂದಿರಾಗಾಂಧಿ ರ್ಟ್ರೋಯ ಜ್ಞಾಾನಪೀಠದವರಿಂದ ಪ್ರಥಮ ಬಹುಮಾನ, ಪಡೆದಿದ್ದಾಾನೆ. ನವದೆಹಲಿಯ ಆವಂತಿಕಾ ಒಲಿಂಪಿಯಾಡ್ ಕಾಲೇಜಿನವರು, ಕ್ಯಾಾ"್ಲುನ್ ಸಂಸ್ಥೆೆ ನಡೆಸಿದ ಸ್ಪರ್ಧೆಯಲ್ಲಿ  ಚಿನ್ನ ಮತ್ತು ಕಂಚಿನ ಪದಕ, ಚೆನ್ನೈನ ಸ್ಕೂಲ್‌ಸ್‌ ಇಂಡಿಯಾದವರ ಸ್ಪರ್ಧೆಯಲ್ಲಿ ಬೆಳ್ಳಿಿ ಪದಕ, ಗಳಿಸಿದ್ದಾಾನೆ.
ಜಿಲ್ಲಾಾ ಮಟ್ಟದಲ್ಲಿ "ಐಎಸ್‌ಎಲ್‌ನವರು  ಪರಿಸರ ದಿನಾಚರಣೆ ನಿ"ುತ್ತ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ, ಸಾಗರ ಲಯನ್‌ಸ್‌ ಕ್ಲಬ್, ರ"ವರ್ಮ ಚಿತ್ರಕಲಾ ಶಾಲೆ, ನಗರ ಕೇಂದ್ರ ಗ್ರಂಥಾಲಯ, ಪತಂಜಲಿ ಯೋಗ ಕೇಂದ್ರ, ಬಿಗ್ ಬಜಾರ್, ಎಲ್‌ಐಸಿ "ಭಾಗೀಯ ಕಚೇರಿ, ಅರಣ್ಯ ಇಲಾಖೆ, ರಾಮಕೃಷ್ಣ "ದ್ಯಾಾನಿಕೇತನ ಮೊದಲಾದ ಸಂಸ್ಥೆೆಗಳು ನಡೆಸಿದ ""ಧ ಚಿತ್ರಕಲಾ ಸ್ಪರ್ಧೆಯಲ್ಲೂ ಈತನಿಗೆ  ಬಹುಮಾನ ಬಂದಿದೆ.
ಸ"ತ ಒಟ್ಟೂ 35 ಪ್ರಶಸ್ತಿಿ ಗಳಿಸಿದ್ದಾಾನೆ. ಇದರಲ್ಲಿ 3 ಅಂತಾರ್ಟ್ರೋಯ ಪ್ರಶಸ್ತಿಿ, 7 ರ್ಟ್ರೋಯ, 2 ರಾಜ್ಯ ಮತ್ತು 18 ಜಿಲ್ಲಾಾ ಮಟ್ಟದ ಪ್ರಶಸ್ತಿಿಗಳು ಸೇರಿವೆ.
ರಾಜ್ಯ ಮಟ್ಟದ ಕಲಾಶೌಶಲ್ಯ ಪ್ರಶಸ್ತಿಿ ಈತನ ಮುಡಿಗೇರಿದೆ. ಕಥೆ ಹೇಳುವುದು, ಕೈ ಬರಹ, ಸಂಸ್ಕೃತ ಶ್ಲೋೋಕ ಪಠಣಗಳಲ್ಲೂ ಪ್ರಶಸ್ತಿಿಯನ್ನು ತನ್ನದಾಗಿಸಿದ್ದಾಾನೆ. ಓದಿನಲ್ಲೂ ಸದಾ ಮುಂದಿರುವುದರಿಂದ ಭಾರತೀಯ "ದ್ಯಾಾಭವನದವರು ಪ್ರಸಕ್ತ ಸಾಲಿನ ಪ್ರತಿಭಾ ಪುರಸ್ಕಾಾರ ನೀಡಿ ಗೌರ"ಸಿದ್ದಾಾರೆ.
ಈತನ ತಂದೆ ಪ್ರಸನ್ನ ಪ್ರಭು- ತಾು ರೂಪಾ. ತಂದೆ ಭಾಷಾಂತರ ತಜ್ಞರಾಗಿದ್ದು, ರಾಜ್ಯ ಸರ್ಕಾರದ ಭಾಷಾಂತರ ಇಲಾಖೆಯ ಕೆಲಸ ನಿರ್ವ"ಸುತ್ತಿಿದ್ದಾಾರೆ. ಮಗನ ಅಸಾಧಾರಣ ಪ್ರತಿಭೆ ಬಗ್ಗೆೆ ಮನದುಂಬಿ ರ್ಹಸುತ್ತಾಾರೆ.
published on Jan 19

....................................

Monday 7 January 2019

ಭರವಸೆಯ ಕುಸ್ತಿಿಪಟು
 ಸುಷ್ಮಿಿತಾ ನಾಯ್‌ಕ್‌


ಕುಸ್ತಿಿ ಜಗತ್ತಿಿನ ಅತ್ಯಂತ ಪ್ರಾಾಚೀನ ಮತ್ತು ಕಠಿಣವಾದ ಕ್ರೀಡೆ. ಒಲಿಂಪಿಕ್‌ಸ್‌‌ನಲ್ಲೂ ಸ್ಥಾಾನ ಪಡೆದ ಕುಸ್ತಿಿಯನ್ನು ಇಂದು ಮಹಿಳೆಯರೂ ಆಡುತ್ತಿಿದ್ದಾಾರೆ. ಭಾರತದಲ್ಲಿ ಇದನ್ನಾಾಡುವ ಮಹಿಳೆಯರು ಕಡಿಮೆ. ಆದರೆ ಇತ್ತೀಚೀನ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲೂ, ಜಿಲ್ಲಾಾ ಮಟ್ಟದಲ್ಲೂ ಪ್ರೋತ್ಸಾಾಹಿಸುವ ಕೆಲಸ ನಡೆಯುತ್ತಿಿದೆ. ಇದರಿಂದಾಗಿ ಹಲವು ಯುವತಿಯರು ಕುಸ್ತಿಿಪಟುಗಳಾಗುವತ್ತ ಹೆಜ್ಜೆೆ ಇಟ್ಟಿಿದ್ದಾಾರೆ.
ಕುಸ್ತಿಿ ಸ್ವಯಂ ನಿಯಂತ್ರಣ ಕಲಿಸುವ, ಗೌರವ ಹೆಚ್ಚಿಿಸುವ, ಕೌಶಲ್ಯದ ಕ್ರೀಡೆ.  ಇದಕ್ಕೆೆ ಅತಿ ಕಠಿಣ ಪರಿಶ್ರಮ, ಅಷ್ಟೇ ಉತ್ತಮ ದೇಹದಾರ್ಢ್ಯ ಬೇಕು. ಇದಕ್ಕಾಾಗಿಯೇ ಹೆಚ್ಚಿಿನವರು ಇದರಲ್ಲಿ ಪಾಲ್ಗೊೊಳ್ಳುತ್ತಿಿಲ್ಲ. ಜೊತೆಗೆ ಪ್ರೋತ್ಸಾಾಹವೂ ಅತಿ ಕಡಿಮೆ. ಆದರೆ ಶಿವಮೊಗ್ಗ ನಗರದಲ್ಲಿ ವಿದ್ಯಾಾರ್ಥಿನಿಯೊಬ್ಬಳು ಕುಸ್ತಿಿಯಲ್ಲಿ ಸತತ ತರಬೇತಿ ಪಡೆಯುತ್ತ, ಸ್ಪರ್ಧೆಗಳಲ್ಲಿ ಗೆಲ್ಲುತ್ತ ರಾಷ್ಟ್ರೀಯ ಕುಸ್ತಿಿ ಚಾಂಪಿಯನ್‌ಶಿಪ್‌ಗೆ ಆಯ್ಕೆೆಯಾಗಿದ್ದಾಾಳೆ.
 ನಗರದ  ಕಸ್ತೂರಬಾ ಪದವಿಪೂರ್ವ ಕಾಲೇಜಿನ ದ್ವಿಿತೀಯ ಪಿಯು ಕಲಾ ವಿಭಾಗದ ವಿದ್ಯಾಾರ್ಥಿನಿ ಸುಷ್ಮಿಿತಾ  ರಾಷ್ಟ್ರಮಟ್ಟದಲ್ಲಿ ಕುಸ್ತಿಿ ಆಡಲು ಸಜ್ಜಾಾಗಿದ್ದಾಾಳೆ.   ಶಂಕರಘಟ್ಟದ ಕೃಷಿಕ ಸೋಮ್ಲಾಾ ನಾಯ್‌ಕ್‌ ಮತ್ತು ಸುಮಾಬಾಯಿ ಅವರ ಪುತ್ರಿಿ. ಜಿಲ್ಲಾಾ ಕುಸ್ತಿಿ ಸ್ಪರ್ಧೆಗೆ ವಿದ್ಯಾಾರ್ಥಿನಿಯರನ್ನು ಕಳುಹಿಸಬೇಕಾದಾಗ ಕ್ರೀಡೆಯಲ್ಲಿ ಕ್ರಿಿಯಾಶೀಲರಾಗಿರುವ, ಕಠಿಣ ಶ್ರಮಪಡುವ ನಾಲ್ಕಾಾರು ವಿದ್ಯಾಾರ್ಥಿನಿಯರನ್ನು ಆಯ್ಕೆೆ ಮಾಡಿದ್ದ ಕಾಲೇಜಿನವರು, ಇವರಿಗೆಲ್ಲ ಪ್ರತಿದಿನ ತರಬೇತಿ ನೀಡಿದರು. ಈ ವಿದ್ಯಾಾರ್ಥಿಗಳಲ್ಲಿ ಸುಷ್ಮಿಿತಾ ಒಬ್ಬರು.
ಆನಂತರ ಕಾಲೇಜಿನಲ್ಲಿಯೇ ಪ್ರತಿದಿನ ಎರಡು ಗಂಟೆ ಈ ವಿದ್ಯಾಾರ್ಥಿನಿಯರು ದೈಹಿಕ ಶಿಕ್ಷಕರ ಮಾರ್ಗರ್ಶನದಲ್ಲಿ ವಿಶೇಷ ತರಬೇತಿ ನೀಡಲಾಗಿದೆ. ಜಿಲ್ಲಾಾ ಮಟ್ಟದಲ್ಲಿ ಪ್ರಥಮ ಸ್ಥಾಾನ ಪಡೆದ ನಂತರ ರಾಜ್ಯ ಮಟ್ಟದ ಸ್ಪರ್ಧೆ ಗದಗ್‌ನಲ್ಲಿ ನಡೆಯಿತು. ಅಲ್ಲಿಯೂ ಪ್ರಶಸ್ತಿಿ ಗಳಿಸಿ ಹರಿಯಾಣಾದಲ್ಲಿ ಈ ತಿಂಗಳು ನಡೆಯಲಿರುವ ರಾಷ್ಟ್ರೀಯ ಕುಸ್ತಿಿಗೆ ಆಯ್ಕೆೆಯಾಗಿದ್ದಾಾಳೆ.
ಲಕ್ಕವಳ್ಳಿಿಯಲ್ಲಿ ಹೈಸ್ಕೂಲು ಓದುವಾಗಲೇ ಕಬಡ್ಡಿಿಯಲ್ಲಿ  ರಾಜ್ಯಮಟ್ಟಕ್ಕೆೆ ಆಯ್ಕೆೆಯಾಗಿದ್ದಳು. ಆನಂತರ ಕಾಲೇಜು ಸೇರಿ ಆಮೇಲೆ ಅದನ್ನು ಮುಂದುವರೆಸಿ, ಈಗ ಕಬಡ್ಡಿಿಯಲ್ಲೂ ಅತ್ಯುತ್ತಮ ಆಟಗಾರ್ತಿ ಎನಿಸಿದ್ದಾಾಳೆ. ಜಿಲ್ಲಾಾ ಮಟ್ಟದ ಅನೇಕ ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದಾಾಳೆ. ಕುಟುಂಬದ ಸದಸ್ಯರು ಈಕೆಯ ಕ್ರೀಡಾ ಸಾಧನೆಗೆ ಬೆನ್ನೆೆಲುಬಾಗಿ ನಿಂತಿದ್ದಾಾರೆ.
ಇವತ್ತಿಿಗೂ ಶಿವಮೊಗ್ಗದಲ್ಲಿ ಕುಸ್ತಿಿಗೆ ಬಹಳ ವರ್ಷ ಇತಿಹಾಸವಿದೆ. ಅನೇಕ ಕುಸ್ತಿಿ ಪಟುಗಳಿದ್ದಾಾರೆ. ಗರಡಿ ಮನೆಗಳು ಇಲ್ಲಿವೆ. ಆದರೆ ಇಂದು ಉದಯೋನ್ಮುಖ ಪಟುಗಳಿಲ್ಲದೆ ಅದು ಬಳಕೆಯಾಗುತ್ತಿಿಲ್ಲ. ಸರ್ಕಾರದ ಪ್ರೋತ್ಸಾಾಹದ ಕೊರತೆಯೇ ಇದಕ್ಕೆೆ ಕಾರಣ. ಆದರೆ ಮಹಿಳಾಪಟುಗಳು ಈಗ ಉದಯಿಸಲಾರಂಭಿಸಿದ್ದಾಾರೆ.  ಇವರಿಗೆ ಸೂಕ್ತ ತರಬೇತಿ ಕೇಂದ್ರ ಮತ್ತು ಅವಕಾಶ ನೀಡುವ ಅಗತ್ಯ ಇದೆ.
ಕುಸ್ತಿಿಗೆ ಬೇಕಾದ ದೇಹದಾರ್ಢ್ಯವನ್ನು ಸುಷ್ಮಿಿತಾ ಹೊಂದಿದ್ದಾಾಳೆ. ಇವರ ಸಹೋದರ ಬಾಡಿ ಬಿಲ್ಡರ್ ಆಗಿದ್ದು, ಮನೆಯಲ್ಲೇ ಸಣ್ಣ ಪ್ರಮಾಣದ ಜಿಮ್ ಹೊಂದಿರುವುದರಿಂದ ತರಬೇತಿಗೆ ಅನುಕೂಲವಾಗಿದೆ. ಕಬಡ್ಡಿಿ, ಥ್ರೋೋಬಾಲ್, ಜಾವೆಲಿನ್ ಎಸೆತದಲ್ಲಿ ಪ್ರವೀಣೆಯಾಗಿರುವ ಕಾರಣ ಕುಸ್ತಿಿ ಆಡಬಹುದು ಎನಿಸತು. ಆ ಪ್ರಕಾರ  ಶಿಕ್ಷಕರ ಕೋರಿಕೆಗೆ ಒಪ್ಪಿಿ ತರಬೇತಿ ಪಡೆದೆ ಎನ್ನುತ್ತಾಾಳೆ ಸುಷ್ಮಿಿತಾ.
ಪಂದ್ಯಕ್ಕೆೆ ಮುನ್ನ ಮಾನಸಿಕವಾಗಿ ಸಿದ್ಧರಾಗಿರಬೇಕು. ಎದುರಾಳಿಯ ಮನಃಸ್ಥಿಿತಿ ಅರಿತು ಅವರು ದಾಳಿ ಮಾಡುವ ಮುನ್ನವೇ ದಾಳಿ ಮಾಡಬೇಕು. ಇದೆಲ್ಲವನ್ನೂ ಕಲಿತಿದ್ದೇನೆ. ಇನ್ನೂ ಹೆಚ್ಚಿಿನ ತರಬೇತಿಯನ್ನು ಪಡೆಯಬೇಕಿದೆ. ಆದರೆ ನಗರದಲ್ಲಿ ಅವಕಾಶವಿಲ್ಲ. ಕಾಲೇಜಿನಲ್ಲಿ ಎಲ್ಲ ಶಿಕ್ಷಕರು ಸಾಕಷ್ಟು ಪ್ರೋತ್ಸಾಾಹ ನೀಡುತ್ತಿಿದ್ದಾಾರೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಹಂಬಲವಿದೆ ಎನ್ನುತ್ತಾಾಳೆ.
published on jan 5.2019
     .....................................