Saturday 29 September 2018

ವಿಶ್ವದಾಖಲೆಯ ಕೆತ್ತನೆ ಕಲಾವಿದ
 ಹರೀಶ್‌ಕುಮಾರ್ ಲಾತೋರೆ



ಹಣ್ಣು ಮತ್ತು ತರಕಾರಿ ಕೆತ್ತನೆಯ ಕಲೆ ಎಂತಹವರನ್ನೂ ಆಕರ್ಷಿವಂತಹುದು. ಕಲಾಕಾರನ ಜಾಣ್ಮೆೆಯನ್ನು ಮತ್ತು ಏಕತಾನತೆಯನ್ನು ಇದು ಬಹಿರಂಗಗೊಳಿಸುವುದರ ಜೊತೆಗೆ ಆತನಲ್ಲಿರುವ ಕೌಶಲ್ಯವನ್ನೂ ಪ್ರಕಟಿಸುತ್ತದೆ.
ನಗರದ ಹರೀಶ್‌ಕುಮಾರ್ ಲಾತೋರೆ ಈ ಕಲೆಯಲ್ಲಿ ಎತ್ತಿಿದ ಕೈ. ರಾಜ್ಯದ ಬಹುತೇಕ ಜಿಲ್ಲೆೆಗಳಲ್ಲಿ ವಿವಿಧ ಕಾರ್ಯಕ್ರಮಗಳ ಸಂದರ್ಭದಲ್ಲಿ ಹಾಗೂ ಫಲಪುಷ್ಪ ಪ್ರದರ್ಶನದಲ್ಲಿ ಇಂತಹ ಕಲೆಯನ್ನು ರಚಿಸುವ ಮೂಲಕ ಮನೆಮಾತಾಗಿದ್ದಾಾರೆ. ಬಾಲ್ಯದಿಂದಲೂ ಕಲಾಕಾರರಾಗಿರುವ ಹರೀಶ್, ಈಗ ಇದನ್ನೇ ಒಂದು ಪ್ರಮುಖ ಹವ್ಯಾಾಸವನ್ನಾಾಗಿ ಮಾಡಿಕೊಂಡಿದ್ದು, ಇದರಿಂದ ಬಿಡುವಿಲ್ಲದಂತಾಗಿದ್ದಾಾರೆ.
ಹಣ್ಣಿಿನಲ್ಲಿ ವ್ಯಕ್ತಿಿಗಳ ಭಾವಚಿತ್ರ ಕೆತ್ತುವುದರಲ್ಲಿ ಇವರು ಸಿದ್ಧಹಸ್ತರು. ಕಲ್ಲಂಗಡಿಯಲ್ಲಿ ರಾಷ್ಟ್ರಕವಿಗಳು, ಸ್ವಾಾತಂತ್ರ್ರ ಹೋರಾಟಗಾರರು, ಜ್ಞಾಾನಪೀಠ ಪ್ರಶಸ್ತಿಿ ಪುರಸ್ಕೃತರನ್ನು ಅತಿ ಮನೋಹರವಾಗಿ ಕೆತ್ತುವ ಮೂಲಕ ವಿಶ್ವದಾಖಲೆ ಮಾಡಿದ್ದಾಾರೆ. ಇಲ್ಲಿಯವರೆಗೆ 3 ಸಾವಿರದಷ್ಟು ಭಾವಚಿತ್ರವನ್ನು ಕೆತ್ತನೆ ಮಾಡಿದ್ದಾಾರೆ. ರಂಗೋಲಿ ಪುಡಿಯಲ್ಲಿ ವ್ಯಕ್ತಿಿಗಳ ಭಾವಚಿತ್ರವನ್ನು ಬಿಡಿಸುವುದು, ಜೊತೆಗೆ ವಿವಿಧ ಮುಖವರ್ಣಿಕೆಗಳನ್ನು ರಚಿಸುವುದೂ ಸಹ ಇವರ ಹವ್ಯಾಾಸ. 
ಇದರ ಜೊತೆಗೆ ಕ್ಲೇ ಮಾಡೆಲಿಂಗ್, ಕುಸುರಿ ಕೆತ್ತನೆ, ವಾಟರ್ ಪೇಂಟಿಂಗ್, ಫ್ಯಾಾಬ್ರಿಿಕ್ ಪೇಂಟಿಂಗ್, ಆಯಿಲ್ ಪೇಂಟಿಂಗ್‌ನಲ್ಲಿಯೂ ಹರೀಶ್ ಸದಾ ಮುಂದು.ಪರಿಣಿತರ ಜೊತೆಗೆ ಇಂಗುಜೆಂಗ್, ಎಂಗ್ರೇಮಿಂಗ್, ನಿಖ್ ಪೇಂಟಿಂಗ್, ಬೊಟಿಕ್ ಕಲೆ, ಕೊಬ್ಬರಿ ಕೆತ್ತನೆ, ಸೆರಾಮಿಕ್ ಕಲೆ, ಪಾಟ್ ವರ್ಕ್, ರಂಗೋಲಿ, ಫೇಸ್ ಪೇಂಟಿಂಗ್ ಮಾಡುತ್ತಾಾರೆ. ಜವಾಹರಲಾಲ್ ನೆಹರೂ ಇಂಜಿನೀಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದಲ್ಲಿ ಇನ್‌ಸ್ಟ್ರ್‌‌ಕ್ಟರ್ ಆಗಿರುವ ಹರೀಶ್, 10 ವರ್ಷದಿಂದ ಈ ಕೆಲಸದಲ್ಲಿ ನಿರತರಾಗಿದ್ದಾಾರೆ. ಹೂವಿನ ಅಲಂಕಾರವನ್ನೂ ಸಹ ಮನಸೆಳೆಯುವ ರೀತಿಯಲ್ಲಿ ಮಾಡಬಲ್ಲ ಕೌಶಲ್ಯ ಇವರಲ್ಲಿದೆ. ದಾವಣಗೆರೆಯಲ್ಲಿ 15 ಅಡಿ ಶಿವಲಿಂಗವನ್ನು ಕೇವಲ ಹೂವಿನಿಂದ ಮಾಡಿ ಪ್ರದರ್ಶಿಸಿದ್ದಾಾರೆ. ಇದರ ಜೊತೆ ತೆಂಗಿನಗರಿಯಿಂದ ಗಣಪತಿಯನ್ನೂ ಸಹ ಅತ್ಯಾಾಕರ್ಷಕವಾಗಿ ರಚಿಸುತ್ತಾಾರೆ. ಮೂಡಬಿದರೆಯ ನುಡಿಸಿರಿ ಉತ್ಸವದಲ್ಲಿ ಪ್ರತಿವರ್ಷ ಇವರೇ ಪ್ರಮುಖ ಸ್ಟೇಜ್ ಅಲಂಕಾರಿಕರು.
 ಪ್ರಾಾಥಮಿಕ ಶಾಲೆಯಲ್ಲಿ ಓದುವಾಗಲೇ ತಮ್ಮಲ್ಲಿರುವ ಚಿತ್ರಕಲೆಯ ಪ್ರತಿಭೆಯನ್ನು ಸ್ಪರ್ಧೆಯ ಮೂಲಕ ಹೊರಜಗತ್ತಿಿಗೆ ತೋರಿಸಿಕೊಟ್ಟವರು ಹರೀಶ್. 10 ವರ್ಷದವರಿರುವಾಗಲೇ ಗಣಪತಿ ವಿಗ್ರಹ ತಯಾರಿಸುತ್ತಿಿದ್ದರು. ಹೈಸ್ಕೂಲು ಮುಗಿಯುವುದರೊಳಗೆ ಸುಮಾರು 80 ಬಹುಮಾನ ಪಡೆದಿದ್ದಾಾರೆ. ಹೈಸ್ಕೂಲ್‌ನಲ್ಲಿ ಓದುವಾಗಲೇ 8 ಬಾರಿ ಚಿತ್ರಪ್ರದರ್ಶನ ಮಾಡಿದ ಹಿರಿಮೆ ಇವರದ್ದು.
ದೆಹಲಿಯಲ್ಲಿ 2008ರಲ್ಲಿ, ವಿಶ್ವ ಕನ್ನಡ ಸಮ್ಮೇಳನದಲ್ಲಿ, ರಾಷ್ಟ್ರೀಯ ಕೃಷಿ ಮೇಳದಲ್ಲಿ, 8 ಬಾರಿ ತಿರುಪತಿಯಲ್ಲಿ, 5 ಬಾರಿ ಲಾಲ್‌ಬಾಗ್‌ನಲ್ಲಿ, 4 ಬಾರಿ ಬೆಂಗಳೂರಿನ ಹಸಿರು ಸಂತೆಯಲ್ಲಿ, 12ಕ್ಕೂ ಹೆಚ್ಚು ಬಾರಿ ರಾಜ್ಯ ಕೃಷಿ ಮೇಳದಲ್ಲಿ, 15 ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಕಲ್ಲಂಗಡಿ ಕೆತ್ತನೆ ಪ್ರದರ್ಶನ ಮಾಡಿದ್ದಾಾರೆ.
ಇವರ ಸಾಧನೆಗೆ ಹಲವು ಪುರಸ್ಕಾಾರಗಳು ದಕ್ಕಿಿವೆ. 2008ರಲ್ಲಿ ನವದೆಹಲಿಯಲ್ಲಿ ಜರುಗಿದ ಅಂತಾರಾಷ್ಟ್ರೀಯ ಟೂರಿಸಂ ಸಮಾವೇಶದಲ್ಲಿ ಕಲ್ಲಂಗಡಿಯಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಭಾವಚಿತ್ರವನ್ನು ಕೆತ್ತನೆ ಮಾಡಿದ್ದಕ್ಕೆೆ ರಾಷ್ಟ್ರ ಮಟ್ಟದ ಉತ್ತಮ ಕೆತ್ತನೆ ಪ್ರಶಸ್ತಿಿ ದಕ್ಕಿಿದೆ. ಜೊತೆಗೆ ಪ್ರಥಮ ಸ್ಥಾಾನವೂ ಲಭ್ಯವಾಗಿದೆ. ಮೈಸೂರು ದಸರಾ, ಶಿವಮೊಗ್ಗದ ಫಲಪುಷ್ಪ ಪ್ರದರ್ಶನ, ಲಾಲ್‌ಬಾಗ್‌ನಲ್ಲಿ ಇವರಿಗೆ ಪ್ರಶಸ್ತಿಿ ಬಂದಿದೆ. 5 ಚಿನ್ನದ ಪದಕ, 5 ಬೆಳ್ಳಿಿ ಪದಕ ಈವರೆಗೆ ಇವರಿಗೆ ದಕ್ಕಿಿದೆ.
ಫುಟ್ಬಾಾಲ್, ಹ್ಯಾಾಂಡ್‌ಬಾಲ್ ಮತ್ತು ಹಾಕಿ ಆಟಗಾರರೂ ಆಗಿರುವ ಹರೀಶ್, ಪತ್ರಿಿಕೆಯೊಂದರಲ್ಲಿ ವ್ಯಂಗ್ಯಚಿತ್ರಕಾರರೂ ಆಗಿ ಕೆಲಸ ಮಾಡಿದ್ದಾಾರೆ.

published on 29th sept-18
..................................

Monday 24 September 2018

ಅಪೂರ್ವ ಕಲಾಕಾರ  
ರತ್ನಾಾಕರ ಭಂಡಾರಿ


ವಿಶೇಷ ರೀತಿಯ ಸಂತಸದೊಂದಿಗೆ ನಾವು ಉಸಿರಾಡುವಂತೆ ಮಾಡುವುದೇ ಕಲೆ ಎಂಬ ಮಾತಿದೆ. ನಮ್ಮ ಮನಸ್ಸು ಚಿತ್ರಗಳನ್ನು ನೋಡಿ ಆನಂದಿಸುತ್ತದೆ. ಆದರೆ ಎಷ್ಟೋೋ ಬಾರಿ  ಆ ಚಿತ್ರದ ಬಗ್ಗೆೆ ಹಾಗೂ ಅದರ ಕಲಾಕಾರನ ಬಗ್ಗೆೆ ಏನೂ ಗೊತ್ತಿಿರುವುದಿಲ್ಲ. ಆದರೆ ಒಂದು ರೀತಿಯ ವಿಶೇಷ ಸಂತೋಷವನ್ನು ಮಾತ್ರ ಅದು ಕೊಡುತ್ತದೆ. ಅದೇ ಕಲೆ. ಕಲೆಯನ್ನು ಹೊರತುಪಡಿಸಿ ಜಗತ್ತೇ ಇಲ್ಲ ಎಂದೂ ಸಹ ತತ್ವಜ್ಞಾಾನಿಗಳು ಹೇಳುತ್ತಾಾರೆ.
ಇತ್ತೀಚೆಗೆ ಸತತ 6 ಗಂಟೆಯ ಕಾಲ ಒಂದೇ ಸ್ಥಳದಲ್ಲಿಯೇ ವ್ಯಕ್ತಿಿಗಳ ಭಾವಚಿತ್ರ, ರೇಖಾಚಿತ್ರ ಮತ್ತು ವ್ಯಂಗ್ಯಚಿತ್ರಗಳನ್ನು ಬಿಡಿಸುವ ಮೂಲಕ ಕೊಡಗು ಪ್ರಕೃತಿ ವಿಕೋಪದ ಪರಿಹರ ನಿಧಿಗೆ ವಿಭಿನ್ನ ಮಾರ್ಗದಲ್ಲಿ ಹಣ ಸಂಗ್ರಹಿಸಿ ಜನರ ಗಮನ ಸೆಳೆದವರು ಶಿರಾಳಕೊಪ್ಪದ ಕಲಾವಿದ ರತ್ನಾಾಕರ ಭಂಡಾರಿ.  ಕಲೆಯ ಮೂಲಕ ಸಂತ್ರಸ್ತರಿಗೆ ಹೇಗೆ ನೆರವಾಗಬಹುದು ಎನ್ನುವುದನ್ನು ಈ ಮೂಲಕ ಅವರು ತೋರಿಸಿಕೊಡುವ ಮೂಲಕ ಮಾನವೀಯತೆಯನ್ನೂ ಮೆರೆದಿದ್ದಾಾರೆ. 
ರತ್ನಾಾಕರ ಅವರು ವೈವಿಧ್ಯಮವಾಗಿ ಕಲೆಯನ್ನು ನಿರೂಪಿಸಬಲ್ಲವರು. ಕಲೆಯ ಬಗ್ಗೆೆ ತುಡಿತ ಅವರಲ್ಲಿರುವುದರಿಂದ ನಾವೀನ್ಯತೆಗೆ ಒತ್ತು ಕೊಡುತ್ತಾಾರೆ. ಅವರು ನಿರ್ಮಿಸುವ ಟ್ಯಾಾಬ್ಲೋೋಗಳು, ಬಿಡಿಸುವ ವಾಲ್ ಪೇಂಟಿಂಗ್‌ಗಳು, ಟ್ಯಾಾಟೂಸ್, ಹೂವಿನ ಅಲಂಕಾರ, ಬಲೂನ್ ಅಲಂಕಾರ, ವೇದಿಕೆ ನಿರ್ಮಾಣ ಮೊದಲಾದವು ವಿಶೇಷವಾಗಿರುತ್ತವೆ. ದಸರಾ, ಗಣೇಶ ಚವತಿ ಸಂದರ್ಭದಲ್ಲಿ ಅವರಿಗೆ ಎಲ್ಲಿಲ್ಲದ ಬೇಡಿಕೆ. ಏಕೆಂದರೆ ಟ್ಯಾಾಬ್ಲೋೋ ಮತ್ತು ಮಂಟಪ ರಚನೆಗೆ ಆಹ್ವಾಾನ ಬರುತ್ತದೆ. ಕೆಲವು ವರ್ಷಗಳ ಹಿಂದೆ ಮೈಸೂರು ದಸರಾದಲ್ಲಿ ಮುರುಡೇಶ್ವರದ ಶಿವನ ಟ್ಯಾಾಬ್ಲೋೋ ನಿರ್ಮಿಸಿ ಪ್ರಖ್ಯಾಾತರಾಗಿದ್ದಾಾರೆ. ಶಾಲಾ ಮಕ್ಕಳ ಪ್ರತಿಭಾ ಕಾರಂಜಿಯಲ್ಲೂ ನೆರವಾಗುತ್ತಾಾರೆ.
ಬೆಂಗಳೂರಿನ ಕೆನ್ ಸ್ಕೂಲ್ ಆಫ್ ಆರ್ಟ್‌ಸ್‌‌ನಲ್ಲಿ ಪದವಿ ಪಡೆದ ನಂತರ ವಿಜ್ಯುವೆಲ್ ಆರ್ಟ್‌ಸ್‌‌ನಲ್ಲಿಯೂ ಅಧ್ಯಯನ ಮಾಡಿ ಪದವಿ ಪಡೆದು, ಕೆಲವು ಕಾಲ ಬೆಂಗಳೂರಿನಲ್ಲಿಯೇ ಚಿತ್ರಕಲೆ ಕಲಿಸುತ್ತ ವಿವಿಧ ಅವಕಾಶಗಳನ್ನು ಪಡೆದು ನೆಲೆಸಿದ್ದರು. ಈ ಸಂದರ್ಭದಲ್ಲಿ ನೂರಾರು ಚಿತ್ರಗಳನ್ನು ಬರೆದಿದ್ದಾಾರೆ. ಅವುಗಳ ಪ್ರದರ್ಶನವನ್ನೂ ಹತ್ತಾಾರು ಬಾರಿ ಮಾಡಿದ್ದಾಾರೆ.
 ಶಿರಾಳಕೊಪ್ಪದಲ್ಲಿಯೇ ಸದ್ಯ ನೆಲೆಸಿರುವ ಭಂಡಾರಿ ಅವರು, ಈಗ ವ್ಯಂಗ್ಯಚಿತ್ರ, ವಾಲ್‌ಪೇಂಟಿಂಗ್‌ಗಳನ್ನು ರಚಿಸುತ್ತಿಿದ್ದಾಾರೆ. ವಿವಿಧೆಡೆಯಿಂದ ಕೆಲಸದ ಅವಕಾಶ ಬಂದಾಗ ಅವುಗಳನ್ನು ಮಾಡಿಕೊಡುತ್ತಾಾರೆ. ಇವರ ಕಲಾಕೌಶಲ್ಯವನ್ನು ಗಮನಿಸಿ ಸ್ಥಳೀಯ ಜೆಸಿಐ ಸೇರಿದಂತೆ ಇನ್ನಿಿತರ ಸಂಘ-ಸಂಸ್ಥೆೆಗಳು ಸನ್ಮಾಾನಿಸಿ ಗೌರವಿಸಿವೆ.
ಇವೆಲ್ಲವುಗಳ ಜೊತೆಗೆ ಫ್ಯಾಾನ್ಸಿಿ ಡ್ರೆೆಸ್, ಮಾಡೆಲ್ ವರ್ಕ್, ಕಟೌಟ್‌ಗಳನ್ನೂ ತಯಾರಿಸುತ್ತಾಾರೆ. ಇವರ ಕೈಚಳಕದಿಂದ ಮೂಡಿಬಂದ ಕಲೆಗಳು ಎಲ್ಲೆೆಡೆ ಪ್ರಸಿದ್ಧವಾಗಿವೆ. ಆದರೆ ಇನ್ನೂ ಹೆಚ್ಚಿಿನ ಅವಕಾಶಕ್ಕಾಾಗಿ ಇವರು ಕಾಯುತ್ತಿಿದ್ದಾಾರೆ. ಜಿಲ್ಲೆೆಯಲ್ಲಿ ಇವರ ಕಲಾಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಾಹಿಸುವ ಅವಶ್ಯಕತೆ ಇದೆ. ಇಂತಹ ಅಪೂರ್ವ ಕಲಾವಿದರು ಜಿಲ್ಲೆೆಯವರಾಗಿರುವುದೇ ಮಹತ್ವದ್ದು. ಈ ಹಿನ್ನೆೆಲೆಯಲ್ಲಿ ಜಿಲ್ಲೆೆಯ ವಿವಿಧೆಡೆ ಇವರ ಕಲಾಪ್ರತಿಭೆ ಬೆಳಗುವ ಸಂದರ್ಭವನ್ನು ಸಾರ್ವಜನಿಕರು, ಸಂಘಟನೆಗಳು ಕಲ್ಪಿಿಸಬೇಕಿದೆ. 
ಸಾರ್ವಜನಿಕರು ಇಂತಹ ಕಲಾಕಾರರನ್ನು ಗುರುತಿಸುವ ಕೆಲಸವಾಗಬೇಕಿದೆ. ಅಪೂರ್ವ ಕಲೆಗಳನ್ನು ಬಿಡಿಸುವ, ನಿರ್ಮಿಸುವ ಕೌಶಲವನ್ನು ಹೊಂದಿದ್ದರೂ ಸಹ ಎಷ್ಟೋೋ ಬಾರಿ ಅವಕಾಶ ಸಿಗದೆ ಸುಮ್ಮನಿರುವಂತಾಗಿದೆ. ಕಲಾಕಾರರಿಗೆ ಉತ್ತಮ ಅವಕಾಶ ಒದಗಿ ಬಂದಾಗ ತಮ್ಮನ್ನು ತೆರೆದುಕೊಳ್ಳಲು ಸಾಧ್ಯವಾಗುತ್ತದೆ ಎನ್ನುವ ಇವರು, ಕೊಡಗು ನೆರೆ ಸಂತ್ರಸ್ತರಿಗೆ ಹೆಚ್ಚೆೆಂದರೆ ಒಂದು ಸಾವಿರ ರೂ. ವನ್ನು ನಾನು ಕೊಡಬಲ್ಲವನಾಗಿದ್ದೆೆ. ಆದರೆ ಚಿತ್ರ ಬಿಡಿಸುವ ಮೂಲಕ ವಿನೂತನ ಮಾದರಿಯಲ್ಲಿ ಸಾರ್ವಜನಿಕರನ್ನು ಆಕರ್ಷಿಸಿ ಸುಮಾರು 14 ಸಾವಿರ ರೂ. ವನ್ನು ಸಂಗ್ರಹಿಸಿದೆ ಎನ್ನುತ್ತಾಾರೆ. 
22.9.18
..............................................

   

Monday 17 September 2018

ಅಂಧತ್ವ ಮೀರಿದ ರೈತ
  ಗುರುನಾಥ ಗೌಡ


 ಅಂಧತ್ವ ಶಾಪವಲ್ಲ ಎಂಬ ಮಾತಿದೆ. ಏಕೆಂದರೆ ಅಂಧತ್ವವನ್ನು ಮೀರಿ ಸಾಧಿಸಿದವರು ಹಲವರಿದ್ದಾಾರೆ. ನಮ್ಮ ಜಿಲ್ಲೆೆಯವರೇ ಆದ ಶೇಖರ್ ನಾಯ್ಕ ಅಂಧರಾದರೂ ವಿಶ್ವ ಕಪ್ ಅಂಧರ ಕ್ರಿಿಕೆಟ್ ತಂಡದ ನಾಯಕತ್ವ ವಹಿಸಿ ಟ್ರೋೋಫಿ ಗೆದ್ದು ತಂದು ಖ್ಯಾಾತರಾಗಿದ್ದಾಾರೆ. ಇವರಂತೆಯೇ ವಿಶ್ವದಲ್ಲಿ ಹಲವರಿದ್ದಾಾರೆ ಹೆಲೆನ್ ಕೆಲ್ಲರ್, ಲೂಯಿಸ್ ಬ್ರೈಲ್, ಹೋಮರ್, ಕರ್ನಾಟಕದವರೇ ಆದ ಗಾನಗಂಧರ್ವ ಪಂಚಾಕ್ಷರಿ ಗವಾಯಿಗಳು ಮೊದಲಾದವರನ್ನು ಹೆಸರಿಬಹುದು.
ಸಾಧನೆಗೆ ಅಂಧತ್ವದಿಂದ ಯಾವ ತೊಡಕೂ ಇಲ್ಲ. ಸಾಧಿಸುವ ಛಲ ಇದ್ದರೆ ಏನೇ ಸಮಸ್ಯೆೆ ಇದ್ದರೂ ಅದನ್ನು ದಾಟಿ ಹೆಸರನ್ನು ಅಚ್ಚಳಿಯದಂತೆ ಅಚ್ಚೊೊತ್ತಬಹುದು. ಇದಕ್ಕೆೆ ಇನ್ನೊೊಂದು ಉತ್ತಮ ಉದಾಹರಣೆ ಸೊರಬ ತಾಲೂಕು ಬಾಸೂರಿನ ಅಂಧ ಕೃಷಿಕ ಗುರುನಾಥ ಗೌಡ. ದೃಷ್ಟಿಿಹೀನರಾದ 62 ವರ್ಷದ ಇವರು ಅಂಧತ್ವವನ್ನು ಮೀರಿ ಕೃಷಿಯಲ್ಲಿ ತೊಡಗಿಸಿಕೊಂಡು ಯಶೋಗಾಥೆ ಬರೆದಿದ್ದಾರೆ.
ಗುರುನಾಥ ಗೌಡ ಬಾಲ್ಯದಲ್ಲಿಯೇ ದೃಷ್ಟಿಿ ಕಳೆದುಕೊಂಡವರು. ರೈತ ಕುಟುಂಬದಿಂದ ಬಂದವರು. ಬಾಲ್ಯದಿಂದಲೂ ಕೃಷಿಯಲ್ಲಿ ಆಸಕ್ತಿಿ ಹೊಂದಿದ್ದರು. ಇದನ್ನೇ ಇಂದಿಗೂ ಅನುಸರಿಸಿ ಈಗ  ವಾಣಿಜ್ಯ ಬೆಳೆಯಿಂದ ಉತ್ತಮ ಆದಾಯ ಸಂಪಾದಿಸಿ  ತನ್ನ ಸ್ವಂತ ಕಾಲ ಮೇಲೆ ನಿಲ್ಲಬಹುದು ಎನ್ನುವುದನ್ನು ತೋರಿಸಿಕೊಟ್ಟವರು. ಅಡಿಕೆ, ಪೈನಾಪಲ್, ಪಪ್ಪಾಾಯ ಮತ್ತು ಮೆಣಸು ಬೆಳೆದು ಕೈ ತುಂಬಾ ಕಾಂಚಾಣ ಪಡೆಯುತ್ತಿಿದ್ದಾರೆ.
ತಮ್ಮ 10 ಎಕರೆ ಜಮೀನಿನಲ್ಲಿ  ಕುಟುಂಬ ಸದಸ್ಯರು ಹಾಗೂ ಸ್ನೇಹಿತರ  ಬೆಂಬಲ ಪಡೆದು ವಾಣಿಜ್ಯ ಬೆಳೆಯುತ್ತಿಿದ್ದಾಾರೆ. ಪ್ರತಿದಿನ ಅವರು ರೇಡಿಯೋದಲ್ಲಿ ಬರುವ ಕೃಷಿ ಕಾರ್ಯಕ್ರಮವನ್ನು ಕೇಳುವ ಪರಿಪಾಠವನ್ನು ತಪ್ಪದೆ ಬಹುವರ್ಷದ ಹಿಂದಿನಿಂದ ಬೆಳೆಸಿಕೊಂಡು ಬಂದಿದ್ದಾಾರೆ. 1981 ರಲ್ಲಿ ತಮ್ಮ ಜಮೀನಿನಲ್ಲಿ ವ್ಯವಸಾಯ ಆರಂಭಿಸಿದ ಗುರುನಾಥ್ ಗೌಡ, 1984ರಲ್ಲಿ ಮೊದಲ ಬೆಳೆಯಾಗಿ ಅಡಿಕೆ ಬೆಳೆದಿದ್ದರು. ಆನಂತರ ವ್ಯಾಾಪಾರ ಮಾಡಲು ಯೋಚಿಸಿ  ರಾಜ್ಯ ಹಣಕಾಸು ನಿಗಮದಿಂದ ಸಾಲ ಪಡೆದು ಹಿಟ್ಟಿಿನ ಗಿರಣಿ ಆರಂಭಿಸಿದ್ದರು. ಆದರೆ, ಗ್ರಾಾಹಕರ ಸಂಖ್ಯೆೆ ಇಳಿಮುಖವಾದ್ದರಿಂದ 2006ರಲ್ಲಿ ಅದನ್ನು ಮುಚ್ಚಿಿದ್ದಾರೆ.
  2001ರಲ್ಲಿ 9 ಎಕರೆ ಜಮೀನಿನಲ್ಲಿ ಪೈನಾಪಲ್  ಬೆಳೆ ಬೆಳೆಯುವ ಮೂಲಕ ಕೃಷಿ ತಜ್ಞರನ್ನೂ ಬೆರಗುಗೊಳಿಸಿದ್ದಾಾರೆ. ಈ ಕೃಷಿಗಾಗಿ ಧಾರವಾಡ ವಿವಿಯ ಪ್ರೋೋಫೆಸರ್ ದೀಕ್ಷಿತ್ ಅವರಿಂದ ಸಲಹೆ ಪಡೆದಿದ್ದಾಗಿ ಹೇಳುತ್ತಾಾರೆ. ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಂಡಿದ್ದು, ತಾವು ಬೆಳೆದ ಪೈನಾಪಲ್ ದೆಹಲಿ, ಜಮ್ಮು-ಕಾಶ್ಮೀರ, ರಾಜಸ್ತಾಾನ, ಗುಜರಾತ್, ಮತ್ತು ಪಂಜಾಬ್‌ಗೆ ಹೋಗುತ್ತದೆ. ಇದು ಹೊಸ ಅನುಭವವನ್ನು ತನಗೆ ನೀಡಿದೆ ಎಂದು ಖುಷಿಯಿಂದ ಹೇಳುತ್ತಾಾರೆ. 
16 ವರ್ಷದವರಿದ್ದಾಾಗ, ದೀಪಾವಳಿ ಸಂದರ್ಭದಲ್ಲಿ ಸಿಡಿದ ಪಟಾಕಿ  ಗೌಡರ  ಎರಡು ಕಣ್ಣುಗಳನ್ನು  ಬಲಿತೆಗೆದುಕೊಂಡಿತ್ತು. ಅವರ ತಂದೆ ಪುಟ್ಟಪ್ಪ ಗೌಡ  ಕಣ್ಣಿಿನ ಚಿಕಿತ್ಸೆೆಗಾಗಿ  ಡಾ. ಎಂ. ಸಿ ಮೋದಿ ಬಳಿಗೆ ಕರೆದುಕೊಂಡು ಹೋಗಿದ್ದರೂ ಕಣ್ಣು ಮರಳಲಿಲ್ಲ. ಕೊಲ್ಲಾಪುರಕ್ಕೂ ಹೋಗಿ ಚಿಕಿತ್ಸೆೆ ಪಡೆದು ಬಂದಿದ್ದಾರೆ. ಆದರೆ ಕಣ್ಣು ಮತ್ತೆೆ ಬೆಳಕು ನೀಡಲೇ ಇಲ್ಲ.  ಈ ಘಟನೆಯಿಂದಾಗಿ ಬೇರೆಯವರಾಗಿದ್ದರೆ ಜೀವನದಲ್ಲಿ ಆಸಕ್ತಿಿ ಕಳೆದುಕೊಂಡು ಬಿಡುತ್ತಿಿದ್ದರು. ಆದರೆ. ಗೌಡರು ಹಾಗಾಗಲಿಲ್ಲ. ಬದಲಿಗೆ ಸಾಧಕರಾದರು.
ಇವರು ಬೆಳೆಯುತ್ತಿಿರುವ ಸಸ್ಯಗಳಿಗೆ ವಿಭಿನ್ನ ಬಣ್ಣದ ಬಟ್ಟೆೆಗಳನ್ನು ಜೋಡಿಸುತ್ತಾಾರೆ. ಅವರ ಪತ್ನಿಿ ಸುಜಾತಾ ಈ ಸಸ್ಯಗಳ ದಾಖಲೆ ಮತ್ತು ಉಸ್ತುವಾರಿ ನೋಡಿಕೊಳ್ಳುತ್ತಿಿದ್ದಾರೆ. ರೋಗ ಬಂದರೆ ಯಾವ ಸಸ್ಯಕ್ಕೆೆ ಯಾವ ಚಿಕಿತ್ಸೆೆಯನ್ನು ನೀಡಬೇಕು ಎಂಬುದು ಅವರಿಗೆ ಗೊತ್ತಿಿದೆ.
ಗೌಡರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಅವರಿಗೆ ಉತ್ತಮ ವಿದ್ಯಾಾಭ್ಯಾಾಸ ಕೊಡಿಸಿದ್ದಾಾರೆ.  ಒಬ್ಬರು ಬೆಂಗಳೂರಿನ ಕಾಂಗ್ನಿಿಝಂಟ್ ಸಂಸ್ಥೆೆಯಲ್ಲಿ ಕೆಲಸ ಮಾಡುತ್ತಿಿದ್ದರೆ, ಇನ್ನೊೊಬ್ಬರು  ಬೆಂಗಳೂರಿನ ನಾಗಾರ್ಜನ ಕಾಲೇಜಿನಲ್ಲಿ ಉಪನ್ಯಾಾಸಕಿಯಾಗಿದ್ದಾರೆ.
...............................................

Saturday 8 September 2018

 ಬಹುಮುಖ ಪ್ರತಿಭೆಯ 
ಶಿಕ್ಷಕ ರೇವಣಪ್ಪ



ಸಾಮಾನ್ಯ ಶಿಕ್ಷಕ ಬೋಧಿಸುತ್ತಾಾನೆ, ಉತ್ತಮ ಶಿಕ್ಷಕ ಕಲಿಸುತ್ತಾಾನೆ, ಅತುತ್ತಮ ಶಿಕ್ಷಕ ಪ್ರೇರೇಪಿಸುತ್ತಾಾನೆ ಎಂಬ ಮಾತಿದೆ. ಎಲ್ಲಾಾ ಶಿಕ್ಷಕರು ಅತ್ಯುತ್ತಮ ಶಿಕ್ಷಕರಾಗಲು ಸಾಧ್ಯವಿಲ್ಲ. ಯಾರು ವಿದ್ಯಾಾರ್ಥಿಗಳಲ್ಲಿ ಕರ್ತೃತ್ವ ಶಕ್ತಿಿ ಮತ್ತು ಕಲ್ಪನಾಶಕ್ತಿಿಯನ್ನು ಬೆಳೆಸುವುದರ ಜೊತೆಗೆ ತಾನೂ ಸಹ ವಿದ್ಯಾಾರ್ಥಿಯಾಗಿರುತ್ತಾಾನೋ ಅಂತಹವರು ಮಾತ್ರ ಅತ್ಯುತ್ತಮ ಶಿಕ್ಷಕರಾಗಲು ಸಾಧ್ಯ.
ಮಕ್ಕಳಿಗೆ ಪಾಠ ಮಾಡುವುದು, ಆಟ ಆಡಿಸುವುದು ಮಾತ್ರ ಶಿಕ್ಷಕರ ಕೆಲಸವಲ್ಲ. ಅವರಲ್ಲಿರುವ ಪ್ರತಿಭೆಯನ್ನು ಪತ್ತೆೆ ಮಾಡುವುದರ ಜೊತೆಗೆ ಪಠ್ಯೇತರ ಚಟುವಟಿಕೆಯ ಆಸಕ್ತಿಿ ಬೆಳೆಸಿ ಅದರಲ್ಲಿ ಅವರು ಮುಂದೆ ಬರುವಂತೆ ಮಾಡುವುದು ಅವಶ್ಯಕ. ವಿವಿಧ ಕಲೆಗಳಲ್ಲಿ, ಇತರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು. ಇಂತಹ ಕೆಲಸ ಮಾಡಿದ್ದರಿಂದಲೇ ಈ ಬಾರಿಯ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಿ ಭದ್ರಾಾವತಿ ತಾಲೂಕು ಸುಲ್ತಾಾನಮಟ್ಟಿಿ ಸರ್ಕಾರಿ ಪ್ರಾಾಥಮಿಕ ಶಾಲೆಯ ಶಿಕ್ಷಕ ಎಂ. ಆರ್. ರೇವಣಪ್ಪ ಅವರಿಗೆ ದಕ್ಕಿಿದೆ.   
ರೇವಣಪ್ಪ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾನಪದ ಕಲೆಯನ್ನು ಪ್ರದರ್ಶಿಸಿದವರು. ಪಾಠದ ಜೊತೆಗೆ ಮಕ್ಕಳಲ್ಲಿ ಜಾನಪದ ಕಲೆಯನ್ನು ಬೋಧಿಸಿ, ಅದು ಕರಗತವಾಗುವಂತೆ ಮಾಡಿದವರು, ಸ್ವತಃ ಜಾನಪದ ಹಾಡುಗಳನ್ನು ಕಟ್ಟಿಿದವರು, ನಾಲ್ಕು ಬಾರಿ ಗಣರಾಜ್ಯೋೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿದವರು, ತಮ್ಮ ವಿದ್ಯಾಾರ್ಥಿಗಳು ರಾಜ್ಯ ಮಟ್ಟದಲ್ಲಿ ಕಲಾಪ್ರತಿಭೆ ಮೆರೆಯುವಂತೆ ಮಾಡಿದವರು, ದಾನಿಗಳಿಂದ ನೆರವಿನಿಂದ ಶಾಲೆಯನ್ನು ಮಾದರಿಯನ್ನಾಾಗಿ ಮಾಡಿದ್ದಲ್ಲದೆ, ಸ್ಮಾಾರ್ಟ್ ಕ್ಲಾಾಸನ್ನು ಆರಂಭಿಸಿದವರು. ರಂಗಕಲಾವಿದರು. ಒಟ್ಟಿಿನಲ್ಲಿ ಉತ್ತಮ ಶಾಲೆ ಎಂಬ ಪ್ರಶಸ್ತಿಿ ಬರಲು ಕಾರಣರಾದವರು.
 ಮೂಲತಃ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಮಾದಾಪುರ- ಕೆಂಚನಾಲಾದವರಾದ ರೇವಣಪ್ಪ, 20 ವರ್ಷದಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿಿದ್ದಾಾರೆ. ಪ್ರಾಾಥಮಿಕ ಶಿಕ್ಷಣವನ್ನು ತವರಿನಲ್ಲಿ, ಹೈಸ್ಕೂಲು ಮತ್ತು ಪಿಯುವನ್ನು ಆನಂದಪುರದಲ್ಲಿ ಮುಗಿಸಿ ಟಿಸಿಎಚ್ ಓದಿ ಶಿಕ್ಷಕರಾದವರು. ಮೊದಲಿನಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರು  ಮುಂದು. ಕೋಲಾಟ, ಡೊಳ್ಳು,  ಸುಗ್ಗಿಿ ಕುಣಿತದ ಜೊತೆ ಸೋಬಾನೆಪದ ಹೇಳುವುದರಲ್ಲಿ ನಿಸ್ಸೀಮರು. ಸಂಗ್ಯಾಾಬಾಳ್ಯಾಾ ನಾಟಕ ನಿರ್ದೇಶಿಸಿ ನಟಿಸಿದ್ದಾಾರೆ. ಜೊತೆಗೆ ರಾಜಾ ಬ್ರಹ್ಮ, ಶನಿ ಪ್ರಭಾವ ಎಂಬ ನಾಟಕದಲ್ಲಿ ಅಭಿನಯಿಸಿದ್ದಾಾರೆ.
ಜಾನಪದದಲ್ಲಿ ನೂರಾರು ಹಾಡು ಕಟ್ಟಿಿ ಹಾಡಿಸಿದ್ದಾಾರೆ. ಭದ್ರಾಾವತಿಯಲ್ಲಿ ಜನಪದ ಕಲಾ ತಂಡವನ್ನು ರಚಿಸಿದ್ದಾಾರೆ. ಉತ್ತಮ ಕಲಾಕಾರರೂ ಆಗಿರುವ ಇವರು ಗೋಡೆಗಳ ಮೇಲೆ ಮಾಂದವಾಗಿ ಚಿತ್ರಕಲೆ ಬಿಡಿಸಿ ಹೆಸರಾಗಿದ್ದಾಾರೆ. ಸ್ವಚ್ಛ ಭಾರತ್ ಜಾಗೃತಿಗಾಗಿ ಹತ್ತಾಾರು ಹಾಡನ್ನು ರಚಿಸಿದ್ದಾಾರೆ. ರಶ್ಯಾಾ, ಸೌದಿ ಅರೇಬಿಯಾ, ಖಜಕಿಸ್ಥಾಾನದಲ್ಲಿ ಜಾನಪದ ಕಾರ್ಯಕ್ರಮ ನೀಡಿದ್ದಾಾರೆ. ಅಂಡಮಾನ್ ಮತ್ತು ಪೋರ್ಟ್‌ಬ್ಲೇರ್‌ನಲ್ಲಿ ನಡೆದ ಸಾಂಸ್ಕೃತಿಕ ಮೇಳದಲ್ಲೂ ಜಾನಪದ ಕಲೆಯನ್ನು ಪ್ರದರ್ಶಿಸಿದ್ದಾಾರೆ. ಶಾಲೆಗೆ ಟಿವಿ ಪ್ರೊಜೆಕ್ಟರ್, ಮೈಕ್ ವ್ಯವಸ್ಥೆೆಯನ್ನು ದಾನಿಗಳ ನೆರವಿನಿಂದ ಮಾಡಿಸಿದ್ದಾಾರೆ. ಶಾಲೆಯ ಅಭಿವೃದ್ಧಿಿಯಲ್ಲೂ ಇವರ ಪಾತ್ರ ಹಿರಿದು. 16 ವರ್ಷದಿಂದ ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಿಿದ್ದಾಾರೆ. ಇದಕ್ಕೂ ಮೊದಲು ತೀರ್ಥಹಳ್ಳಿಿ ತಾಲೂಕು ಅರಳಸುರುಳಿಯಲ್ಲಿ ಕೆಲಸ ಮಾಡಿದ್ದು ಅಲ್ಲಿಯೂ ಶಾಲೆಗೆ ಮಾದರಿ ಶಾಲೆ ಪ್ರಶಸ್ತಿಿ ದಕ್ಕುವಂತೆ ಮಾಡಿದ್ದರು.
ಜಿಲ್ಲಾಾ ಪ್ರಾಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾಗಿ, ಶಿಕ್ಷಕರ ಗೃಹ ನಿರ್ಮಾಣ ಸಂಘದ ಸದಸ್ಯರಾಗಿದ್ದಾಾರೆ. ಶಾಲೆಯ ಫಲಿತಾಂಶ ಉತ್ತಮವಾಗಿ ಬರುವಂತೆ ಮಾಡುವುದರ ಜೊತೆಗೆ ಮಕ್ಕಳು ಪಠ್ಯೇತರ ಆಸಕ್ತಿಿ ಬೆಳೆಸಿಕೊಳ್ಳುವಲ್ಲಿ ಸತತ ಶ್ರಮ ವಹಿಸುತ್ತಿಿದ್ದಾಾರೆ.
ಇವರ ಈ ಎಲ್ಲ ಸಾಧನೆಯನ್ನು ಗಮನಿಸಿ ರಾಜ್ಯ ಸರ್ಕಾರ ಈ ಬಾರಿಯ ಶಿಕ್ಷಕ ದಿನಾಚರಣೆಯಂದು ರಾಜ್ಯದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಿಯನ್ನು ಪ್ರದಾನ ಮಾಡಿದೆ.
published on sept 8
................................................ 

Saturday 1 September 2018


ಇಂದು ರಂಗಪ್ರವೇಶ
ರಚನಾ


ನಾಟ್ಯವು ದೇಹ ಮತ್ತು ಆತ್ಮದ ನಡುವಿನ ಸಂಭಾಷಣೆ ಎಂಬ ಮಾತಿದೆ. ದೇಹದಷ್ಟೇ ಆತ್ಮವೂ ಇಲ್ಲಿ ಕ್ರಿಿಯಾಶೀಲವಾಗಿ ಕೆಲಸ ಮಾಡುತ್ತದೆ. ಯಾವ ಕಲೆಯು ರಸಪೂರ್ಣವಾಗಿರುತ್ತದೆಯೋ ಅದು ಹೃದಯವನ್ನು ತಟ್ಟುತ್ತದೆ, ಬಹುಕಾಲ ಮರೆಯದೇ ಉಳಿಯುತ್ತದೆ. ಇಂತಹ ಕಲೆಗಳಲ್ಲಿ ಭರತನಾಟ್ಯಕ್ಕೆೆ ಮೊದಲ ಸ್ಥಾಾನ. 
ಆರ್. ರಚನಾ ಶಿವಮೊಗ್ಗದಲ್ಲಿ ಯುವ ಭರತನಾಟ್ಯ ಕಲಾವಿದೆ. 15 ವರ್ಷದಿಂದ ಪಂದನಲ್ಲೂರು ಶೈಲಿಯ ಭರತನಾಟ್ಯ ಕಲಿತು ರಂಗಪ್ರವೇಶಕ್ಕೆೆ ಸನ್ನದ್ಧಳಾಗಿದ್ದಾಾಳೆ. ಸೆ. 1ರಂದು ನಗರದ ಕುವೆಂಪು ರಂಗಮಂದಿರದಲ್ಲಿ ರಂಗಪ್ರವೇಶ ನಡೆಯಲಿದೆ. 
ಮೂಲತಃ ಸಾಗರ ತಾಲೂಕಿನ ಭೀಮನಕೋಣೆಯವರಾದ ರಚನಾ ಅವರ ತಂದೆ ರವಿ ಮತ್ತು ತಾಯಿ ಶಾಲಿನಿ. ನಗರದಲ್ಲೇ ವಿದ್ಯಾಾಭ್ಯಾಾಸ ಮಾಡುತ್ತ ಭರತನಾಟ್ಯವನ್ನು ವಿನೋಬನಗರದ ಪುಷ್ಪಾಾ ಪರ್ಫಾರ್ಮಿಂಗ್ ಕಲಾ ಕೇಂದ್ರದಲ್ಲಿ ಆರಂಭಿಸಿ ಈಗ ವಿದ್ವತ್ ಮುಗಿಸಿದ್ದಾಾರೆ. ಇನ್ನೊೊಂದೆಡೆ, ಜೆಎನ್‌ಎನ್‌ಸಿಯಲ್ಲಿ ಇಂಜಿನೀಯರಿಂಗ್ ಮುಗಿಸಿ ಎಂ. ಟೆಕ್ ಮಾಡಲು ಸನ್ನದ್ಧಳಾಗಿದ್ದಾಾರೆ. ಇದರ ಮಧ್ಯೆೆ ರಂಗಪ್ರವೇಶ ಮಾಡುವ ಮೂಲಕ ಈ ರಂಗದಲ್ಲಿ ಇನ್ನಷ್ಟು ಛಾಪು ಮೂಡಿಸಲು ಸಿದ್ಧರಾಗಿದ್ದಾಾರೆ.
 ತನ್ನ 8ನೆಯ ವಯಸ್ಸಿಿನಲ್ಲೇ ಭರತನಾಟ್ಯ ಆರಂಭಿಸಿದ ಇವರು, ಕಲಾಸೂಕ್ಷ್ಮತೆ, ಸಮರ್ಪಣಾ ಭಾವದಿಂದ ಅಭ್ಯಾಾಸ ಮಾಡಿದರು. ಶಾಲಾ ದಿನಗಳಲ್ಲಿಯೇ ಇದರಲ್ಲಿ ಸಾಧನೆ ಮಾಡಿದ ಕೀರ್ತಿ ಇವರದ್ದು. 2006ರಲ್ಲಿ ಕರ್ನಾಟಕ ಪ್ರೌೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಪಡೆದಿದ್ದಾಾರೆ. 2008ರಲ್ಲಿ ಇದೇ ಮಂಡಳಿ ನಡೆಸಿದ ಸಂಗೀತ ಜೂನಿಯರ್ ಗ್ರೇಡ್‌ನಲ್ಲಿಯೂ ಪ್ರಥಮ ಸ್ಥಾಾನ ಇವರಿಗ ದಕ್ಕಿಿದೆ. ಇದರ ಮಧ್ಯೆೆಯೇ ಹಲವೆಡೆ ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿರುವುದರ ಜೊತೆಗೆ ಸನ್ಮಾಾನ, ಗೌರವಗಳನ್ನು ಪಡೆದಿದ್ದಾಾರೆ.
ಶಿವಮೊಗ್ಗದ ನೃತ್ಯ ಕಲಾವೃಂದ 2007ರಲ್ಲಿ ನಡೆಸಿದ ರಾಜ್ಯಮಟ್ಟದ ಶಾಸ್ತ್ರೀಯ ಭರತನಾಟ್ಯದಲ್ಲಿ ಪ್ರಥಮ ಸ್ಥಾಾನ, 2006ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿದ ವಲಯ ಮಟ್ಟದ ಪ್ರತಿಭೋತ್ಸವದಲ್ಲಿ ಶಾಸ್ತ್ರೀಯ ನೃತ್ಯದಲ್ಲಿ ತೃತೀಯ ಸ್ಥಾಾನ, ಮಂಡ್ಯದಲ್ಲಿ 2008ರಲ್ಲಿ ಜರುಗಿದ ರಾಜ್ಯಮಟ್ಟದ ಶಾಸ್ತ್ರೀಯ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾಾನ, 2008ರಲ್ಲಿ ಬಾಲಪ್ರತಿಭೆ ವಿಭಾಗದಲ್ಲಿ ಪ್ರಥಮ ಸ್ಥಾಾನವನ್ನು ಪಡೆದಿದ್ದಾಾರೆ. ಜೊತೆಗೆ ಮಂಡ್ಯದಲ್ಲಿ ನಾಟ್ಯವರ್ಷಿಣಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವಕಲಾರತ್ನ ಮತ್ತು ವಿಶ್ವಚೇತನ ಪ್ರಶಸ್ತಿಿಯನ್ನು ಮುಡಿಗೇರಿಸಿಕೊಂಡಿದ್ದಾಾರೆ.    
ಇದರ ಜೊತೆಗೆ ಹಲವೆಡೆ ಸನ್ಮಾಾನಗಳು ನೀಡಲ್ಪಟ್ಟಿಿವೆ. ಗಣಪತಿ ಉತ್ಸವ, ದಸರಾ, ಕೃಷ್ಣ ಜನಾಷ್ಟಮಿ, ರಾಮನವಮಿ ಸೇರಿದಂತೆ ವಿವಿಧ ಉತ್ಸವಗಳಲ್ಲಿ, ಬಂಗಾರುಮಕ್ಕಿಿಯ ಮಲೆನಾಡು ಉತ್ಸವ, ಬೀರೂರಿನ ಅರಳು ಮಲ್ಲಿಗೆ ಉತ್ಸವ, ಭದ್ರಾಾವತಿ, ಮೈಸೂರಿನ ಜಗನ್ಮೋೋಹನ ಅರಮನೆ, ಮಂಡ್ಯದಲ್ಲಿ ಸೇರಿದಂತೆ ನೂರಕ್ಕೂ ಅಧಿಕ ಕಾರ್ಯಕ್ರಮ ನೀಡಿದ್ದಾಾರೆ. ಶಿವಮೊಗ್ಗದಲ್ಲಿ ಸಂಸ್ಕೃತಿ ಸೊಬಗು ಕಾರ್ಯಕ್ರಮದಲ್ಲಿ ಒಂದೂವರೆ ಗಂಟೆ ನೃತ್ಯ ಪ್ರದರ್ಶಿಸಿದ ಹಿರಿಮೆ ಇವರದ್ದು. ಬೆಂಗಳೂರು ದೂರದರ್ಶನದವರು ನಡೆಸಿದ ಹೆಜ್ಜೆೆಗೊಂದು ಗೆಜ್ಜೆೆ ಎಂಬ ಶಾಸ್ತ್ರೀಯ ಭರತನಾಟ್ಯಕ್ಕೂ ಆಯ್ಕೆೆಯಾಗಿ ಪ್ರದರ್ಶನ ನೀಡಿದ್ದಾಾರೆ. ಇದೇ ಚಾನೆಲ್‌ನವರು ನಡೆಸಿದ ಮಧುರಮಧುರವೀ ಮಂಜುಳಗಾನ ಕಾರ್ಯಕ್ರಮದಲ್ಲೂ  ಭಾಗವಹಸಿದ್ದರು. ಮಲೇಷ್ಯಾಾದಲ್ಲಿ ಜರುಗಿದ 15ನೆಯ ಅಂತರರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, ಶಿವಮೊಗ್ಗದಲ್ಲಿ ಜರುಗಿದ ಅಖಿಲ ಭಾರತೀಯ ಕನ್ನಡ ಸಾಹಿತ್ಯ  ಸಮ್ಮೇಳನದಲ್ಲೂ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಾರೆ. ರಾಜ್ಯ ಸರ್ಕಾರದ ಕಲಾಶ್ರೀ ಪ್ರಶಸ್ತಿಿಗೂ ಭಾಜನರಾಗಿದ್ದಾಾರೆ. 
ಇಷ್ಟೆೆಲ್ಲ ಕಾರ್ಯಕ್ರಮ ನೀಡಿ ಅಪಾರ ಜನಮನ್ನಣೆ ಗಳಿಸಿರುವ ರಚನಾ, ನೃತ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ನಿರ್ಧರಿಸಿದ್ದಾಾರೆ. ಓದಿನ ಜೊತೆ ಕಲೆಯನ್ನೂ ಕೊಂಡೊಯ್ಯುತ್ತೇನೆ. ಇನ್ನೂ ಹೆಚ್ಚಿಿನ ಅಭ್ಯಾಾಸ ಮಾಡುತ್ತಲೇ ಕಾರ್ಯಕ್ರಮವನ್ನೂ ನೀಡುತ್ತೇನೆ ಎನ್ನುತ್ತಾಾರೆ.
1 sept,2018

.....................................
,