Monday 2 December 2019

ವಚನ ನೃತ್ಯವೈಭವದ
ಸಿ. ಡಿ. ರಕ್ಷಿತಾ


ವಯಸ್ಸು 18. ನೀಡಿದ ಕಾರ‌್ಯಕ್ರಮ ಸಾವಿರಕ್ಕೂ ಅಧಿಕ. ಭರತನಾಟ್ಯ, ವಚನ ನೃತ್ಯ, ಕರ್ನಾಟಕ ಸಂಗೀತದಲ್ಲಿ ಅತ್ಯುನ್ನತ ಸಾಧನೆ, ನೃತ್ಯ- ಸಂಗೀತಕ್ಕೆೆ ಮೀಸಲಾದ ವಿಶಾರದ ಪೂರ್ಣ ಪರಿಕ್ಷೆಯಲ್ಲಿ ತೇರ್ಗಡೆ, ವಿದ್ವತ್ ಪರೀಕ್ಷೆಗೆ ಸಿದ್ಧತೆ......
ಇದು ನಗರದ ವಿದಾರ್ಥಿನಿ ಸಿ. ಡಿ. ರಕ್ಷಿತಾ ಅವರ ಪರಿಚಯ. ಇಷ್ಟೆೆಲ್ಲಾಾ ಸಾಧನೆಯ ಫಲವಾಗಿ ಇವಳು ಫ್ರೆೆಂಚ್ ಎಡಿಶನ್‌ನ ಬ್ರೆೆವೋ ಇಂಟರ್‌ನ್ಯಾಾಶನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಿಗೆ ಭಾಜನಳಾಗಿದ್ದಾಾಳೆ. ಜೊತೆಗೆ 18ರೊಳಗಿನ ಭರತನಾಟ್ಯ ಸಾಧಕಿ ಎಂಬ ಗೌರವಕ್ಕೆೆ ಪಾತ್ರಳಾಗಿದ್ದಾಾಳೆ. ವಿಶೇಷವಾಗಿ ವಚನ ನೃತ್ಯ ಎನ್ನುವ ಪರಿಕಲ್ಪನೆಗೆ ಹೊಸ ಹೊಳಪನ್ನು, ಅರ್ಥವನ್ನು ತುಂಬಿ, ಆಯಾಮವನ್ನು ಒದಗಿಸಿದವರು.
ರಕ್ಷಿತಾ ಡಾ. ಕಟೀಲ್ ಅಶೋಕ್ ಪೈ ಕಾಲೇಜಿನಲ್ಲಿ ಪ್ರಥಮ ಬಿ ಎ ಓದುತ್ತಿಿದ್ದಾಾರೆ. ಬಾಲ್ಯದಿಂದಲೇ ತಾಯಿ ಜಾನಕಿ ಅವರ ಪ್ರೇರಣೆಯಿಂದ ಸಂಗೀತ, ಹಾಡುಗಾರಿಕೆಯತ್ತ ಆಕರ್ಷಣೆಗೊಳಗಾದವರು. ಇವರ ತಾಯಿ ಸಹ ಉತ್ತಮ ಹಾಡುಗಾರ್ತಿಯಾಗಿದ್ದು, ಅನೇಕ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾಾರೆ. ಇದೇ ಹಾದಿಯಲ್ಲಿ ಮಗಳು ಕಾಲಿಟ್ಟಾಾಗ ತಂದೆ ದತ್ತಾಾತ್ರೇಯ ಅವರು ಬೆನ್ನುತಟ್ಟಿಿ ಹುರಿದುಂಬಿಸಿದರು. ಮಾತಾ-ಪಿತರ ಸಹಕಾರದಿಂದ ರಕ್ಷಿತಾ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿಿದ್ದಾಾರೆ.
ಆರಂಭದಲ್ಲಿ ವಿದುಷಿ ಪುಷ್ಪಾಾ ಕೃಷ್ಣಮೂರ್ತಿ ಅವರಲ್ಲಿ  ಕಲಿಕೆ ಆರಂಭಿಸಿದರು. ತದನಂತರ ಬೆಳಗಾವಿಯಲ್ಲಿ ಕೆಲಕಾಲ ಕಲಿತು ಮತ್ತೆೆ ಈಗ ಶಿವಮೊಗ್ಗದಲ್ಲಿಯೇ ಅಭ್ಯಾಾಸ ಮುಂದುವರೆಸಿದ್ದಾಾರೆ. ಕರ್ನಾಟಕ ಸಂಗೀತ ಅಕಾಡೆಮಿ ಕೊಡಮಾಡುವ ಭರತನಾಟ್ಯ ಶಿಷ್ಯವೇತನಕ್ಕೆೆ 2017-18ರ ಸಾಲಿನಲ್ಲಿ ಆಯ್ಕೆೆಯಾಗಿದ್ದಾಾರೆ.
ಮುಂಬೈಯ ಗಂಧರ್ವ ಸಂಗಿತ ಮಹಾವಿದ್ಯಾಾಲಯದವರು ನಡೆಸಿದ ವಿಶಾರದ ಪೂರ್ಣ ಪರೀಕ್ಷೆಯಲ್ಲಿ ಜಿಲ್ಲೆೆಗೆ ಪ್ರಥಮ ಸ್ಥಾಾನದೊಂದಿಗೆ ಉತ್ತೀರ್ಣರಾಗಿದ್ದಾಾರೆ.
ವಿದ್ವತ್ ಪರೀಕ್ಷೆಗೆ ಈಗ ಸಿದ್ಧತೆ ನಡೆಸಿದ್ದಾಾರೆ. ಕರ್ನಾಟಕ ಸಂಗೀತದ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಯಲ್ಲೂ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾಾರೆ.
ಕರ್ನಾಟಕ ಚಿತ್ರಕಲಾ ಮಹಾಮಂಡಳಿಯವರು ನಡೆಸುವ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಯಲ್ಲೂ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾಾರೆ. ತನ್ನ ವಚನ ನೃತ್ಯ ವೈಭವವನ್ನು ಅನೇಕ ಮಠಗಳ, ಧಾರ್ಮಿಿಕ ಕಾರ‌್ಯಕ್ರಮಗಳಲ್ಲಿ ಪ್ರದರ್ಶಿಸಿ ಮಠಾಧೀಶರ ಆಶೀರ್ವಾದಕ್ಕೆೆ ಪಾತ್ರಳಾಗಿದ್ದಾಾಳೆ. ವಿಶ್ವಕನ್ನಡ ಸಮ್ಮೇಳನದಲ್ಲಿ ಸ್ವಾಾಗತಗೀತೆಗೆ ಅಭಿನಯಿಸಿದ್ದಾಾರೆ, ರಾಜ್ಯ ಸಮಾಜ ಕಲ್ಯಾಾಣ ಇಲಾಖೆಯ ಸುವರ್ಣ ಕರ್ನಾಟಕ ಕಲಾರತ್ನ ಪ್ರಶಸ್ತಿಿ, ಯುವಜನೋತ್ಸವದಲ್ಲಿ ರಾಜ್ಯಕ್ಕೆೆ ದ್ವಿಿತೀಯ, ಅಸಾಧಾರಣ ಬಾಲ ಪ್ರತಿಭೆ ಪ್ರಶಸ್ತಿಿ, ಮಲೆನಾಡ ನಾಟ್ಯ ಮಯೂರಿ... ಹೀಗೆ ಪ್ರಶಸ್ತಿಿ ಮತ್ತು ಬಿರುದುಗಳ ಸರಮಾಲೆಯನ್ನೆೆ ಇವರು ಧರಿಸಿದ್ದಾಾರೆ. 
  ಪೇಸ್ ಕಾಲೇಜಿನವರು ಕೊಡಮಾಡುವ ಅಸಾಧಾರಣ ಯುವ ಪ್ರತಿಭೆ ಪ್ರಶಸ್ತಿಿ ಇವರಿಗೆ ಲಭಿಸಿದೆ. ಜಿಲ್ಲಾಾ ಕನ್ನಡ ಸಾಹಿತ್ಯ ಸಮ್ಮೇಳನ, ವಿಶ್ವ ಕನ್ನಡ ಸಮ್ಮೇಳನ, ನಾಡಹಬ್ಬ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಪ್ರದರ್ಶನವನ್ನು ರಾಜ್ಯದಾದ್ಯಂತ  ಮತ್ತು ಮಹಾರಾಷ್ಟ್ರದ ಅನೇಕಭಾಗಗಳಲ್ಲಿ ನೀಡಿದ್ದಾಾರೆ.
ಬಸವಭಾವಗೀತೆಗಳು ಮತ್ತು ಮನುಕುಲದ ಮಂದಾರ ಎಂಬ ಎರಡು ಸಿಡಿಗಳನ್ನು ಚಂದ್ರಶೇಖರ್ ಶಿವಾಚಾರ‌್ಯರು ಹೊರತಂದಿದ್ದು, ಇವೆರಡರಲ್ಲೂ ರಕ್ಷಿತಾ ಅವರ ವಚನ ನೃತ್ಯವಿದೆ.
ಶಾಲಾ ಹಂತದಲ್ಲೇ ನಗರ, ಜಿಲ್ಲಾಾ ಮತ್ತು ರಾಜ್ಯಮಟ್ಟದ ವಿವಿಧ ಜಾನಪದ, ನೃತ್ಯ, ಹಾಡು, ಸ್ಪರ್ಧೆಗಳಲ್ಲಿ ಸತತ ಬಹುಮಾನವನ್ನು ಗಳಿಸುತ್ತ ಬಂದಿರುವ ರಕ್ಷಿತಾ ಇಂದಿಗೂ ಅದನ್ನು ಮುಂದುವರೆಸಿದ್ದಾಾರೆ. ಸಾವಿರಕ್ಕೂ ಹೆಚ್ಚು ಪ್ರದರ್ಶನವನ್ನು ನೀಡುವ ಮೂಲಕ ರಾಜ್ಯದಲ್ಲೇ ಹೆಸರುಮಾಡಿದ್ದಾಾರೆ. ಬ್ರೆೆವೋ ಇಂಟರ್‌ನ್ಯಾಾಶನಲ್ ಬುಕ್ ಆಫ್ ರೆಕಾರ್ಡ್‌ಸ್‌‌ನಲ್ಲಿ ಮತ್ತು ಭರತನಾಟ್ಯದಲ್ಲಿ 18ರ ಒಳಗಿನ ಪ್ರತಿಭೆಯಾಗಿ ಯುನಿವರ್ಸಲ್ ಅಚೀವರ್ಸ್ ಬುಕ್ ಆಫ್ ಕರ್ನಾಟಕದಲ್ಲೂ ಸಹ ತಮ್ಮ ಹೆಸರು ದಾಖಲಿಸಿದ್ದಾಾರೆ.
published on 30-11-19
  ...........................

No comments:

Post a Comment