Monday 2 December 2019

ಕಲೆಯಲ್ಲೇ ಸಂತೃಪ್ತಿಿ ಕಂಡ 
ಶಿಲ್ಪಿಿ ಜ್ಞಾಾನೇಶ್ವರ್



ಕಲೆಯಲ್ಲಿಯೇ ಜೀವನ ಸಂತೃಪ್ತಿಿ ಕಂಡುಕೊಂಡವರಿದ್ದಾಾರೆ. ಅದನ್ನೇ ಉಸಿರಾಗಿಸಿಕೊಂಡವರಿದ್ದಾಾರೆ. ಅಷ್ಟೇ ಏಕೆ, ಕಲೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟವರಿದ್ದಾಾರೆ. ಶಿವಮೊಗ್ಗದ ಶಿಲ್ಪಿಿ ಜ್ಞಾಾನೇಶ್ವರ್ ಇಂತಹವರಲ್ಲೊೊಬ್ಬರು. ಈ ಬಾರಿಯ ಕರ್ನಾಟಕ ರಾಜ್ಯೋೋತ್ಸವ ಪ್ರಶಸ್ತಿಿ ಪುರಸ್ಕೃತರಾದ ಇವರ ಕಲ್ಲಿನ ಕೆತ್ತನೆಗಳು, ವಿಗ್ರಹಗಳು ವಿದೇಶದಲ್ಲೂ ಪ್ರತಿಷ್ಠಾಾಪಿತವಾಗಿವೆ.
  ಶಿಲ್ಪಿಿ ಕಾಶೀನಾಥ್ ಅವರ ಸಹೋದರ ಜ್ಞಾಾನೇಶ್ವರ್. ಓದಿದ್ದು ಬಿಎಸ್‌ಸಿ ಆದರೂ ಆನಂತರ ಹುಬ್ಬಳ್ಳಿಿಯ ವಿಜಯ ಮಹಾಂತೇಶ್ ಲಲಿತಕಲಾ ಮಹಾವಿದ್ಯಾಾಲಯದಲ್ಲಿ ಚಿತ್ರಕಲೆ ಕೋರ್ಸನ್ನು ಪಡೆದರು. ಇವರ ಕುಟುಂಬವೇ ಶಿಲ್ಪಕಲೆಯಲ್ಲಿ ತೊಡಗಿಸಿಕೊಂಡಿದ್ದರಿಂದಲೋ ಏನೋ, ಆ ಕ್ಷೇತ್ರವೇ ಇವರನ್ನು ಸೆಳೆಯಿತು. ಇವರ ಮುತ್ತಾಾತ ತಿಪ್ಪಾಾಜಿ ಹೆಸರಾಂತ ಕಲಾವಿದರು. ಶಿವಮೊಗ್ಗದಲ್ಲಿ ಇವರ ಹೆಸರಿನಲ್ಲೇ ಆರ್ಟ್ ಗ್ಯಾಾಲರಿಯನ್ನು ಸಹೋದರ ಕಾಶೀನಾಥ್ ತೆರೆದಿದ್ದಾಾರೆ. ಸುಮಾರು 40 ವರ್ಷದಿಂದ ಜ್ಞಾಾನೇಶ್ವರ್ ಶಿಲ್ಪಿಿಯಾಗಿದ್ದು, ಸುಮಾರು 500 ಶಿಲ್ಪ ಅವರಿಂದ ಇಲ್ಲಿಯವರೆಗೆ ಕಡೆಯಲ್ಪಟ್ಟಿಿದೆ.
ಮುತ್ತಾಾತ ತಿಪ್ಪಾಾಜಿ, ತಾತ ಪರಶುರಾಮಪ್ಪ ಅವರ ಶಿಲ್ಪಕಲೆ ಇವರ ಮೇಲೆ ಗಾಢವಾದ ಪರಿಣಾಮ ಬೀರಿದ್ದರಿಂದ ಕಲಾವೃತ್ತಿಿಯೇ ಜೀವನವಾಯಿತು. ಅದರಲ್ಲೂ ಬಳ್ಳಿಿಗಾವಿಯ ಶಿಲ್ಪ ಇನ್ನಷ್ಟು ಇವರನ್ನು ಸೆಳೆಯಿತು. ಇವರ ಮಗ ಪ್ರವೀಣ್ ಮತ್ತು ಇಬ್ಬರು ಮೊಮ್ಮಕ್ಕಳೂ ಸಹ ಇದೇ ಕ್ಷೇತ್ರದಲ್ಲಿ ಮುಂದುವರೆದಿದ್ದಾಾರೆ. ಈ ಮೂಲಕ ಈ ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಕೊಡುಗೆ ನೀಡುತ್ತಿಿದ್ದಾಾರೆ.
ಕಲೆಯನ್ನು ಕಷ್ಟದಿಂದ ಕಲಿಯಬೇಕು. ಒಮ್ಮೆೆ ಆಸಕ್ತಿಿ ಮೂಡಿದರೆ ಕಲಿಕೆ ಕಷ್ಟವಾಗದು. ಇದಕ್ಕೆೆ ಉತ್ತಮ ಭವಿಷ್ಯವಿದೆ. ಜೊತೆಗೆ ಅಷ್ಟೇ ಮಾರುಕಟ್ಟೆೆಯೂ ಇದೆ. ಅದರೆ ಹಣ ಗಳಿಸುವುದೊಂದೇ ಕಲೆಯ ಉದ್ದೇಶವಾಗಬಾರದು. ಶಿಲ್ಪಕಲೆಯ ಶಾಲೆಯನ್ನು ತೆರೆಯುವ ಆಲೋಚನೆ ಇದೆ. ಇದಕ್ಕೆೆ ಸ್ಥಳ ಬೇಕು, ಜೊತೆಗೆ ಎಲ್ಲರ ಸಹಕಾರ ಬೇಕು. ನಗರಾಭಿವೃದ್ಧಿಿ ಪ್ರಾಾಧಿಕಾರಕ್ಕೆೆ ಈ ಬಗ್ಗೆೆ ಮನವಿ ಮಾಡಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಿಲ್ಲ. ಆದರೂ ಪ್ರಯತ್ನ ಮುಂದುವರೆಸಿದ್ದೇನೆ. ಶಾಲೆ ಆರಂಭವಾದೊಡನೆ ಇಲ್ಲಿ ವಿದ್ಯಾಾರ್ಥಿಗಳಿಗೆ ಶಿಲ್ಪಕಲೆಯನ್ನು ಉಚಿತವಾಗಿ ಕಲಿಸುವ ವಿಚಾರ ಮಾಡಿದ್ದೇನೆ ಎನ್ನುತ್ತಾಾರೆ ಜ್ಞಾಾನೇಶ್ವರ್.   
ಶಿಲ್ಪಕಲೆ ಉಳಿದ ಕಲೆಯಂತೆ ಸುಲಭದಲ್ಲಿ ಕಲಿಯುವಂತಹುದಲ್ಲ. ಇದಕ್ಕೆೆ ಎಲ್ಲ ಕಲೆಗಿಂತ ಹೆಚ್ಚಿಿನ ತಾಳ್ಮೆೆ, ಸಂಯಮ ಬೇಕು. ಬಹಳ ನಿಧಾನದ ಕೆಲಸ ಇಲ್ಲಿ ನಡೆಯುತ್ತದೆ. ಇತ್ತೀಚೆಗೆ ಕಲ್ಲುಗಳೂ ಸಹ ಸುಲಭದಲ್ಲಿ ಸಿಗುತ್ತಿಿಲ್ಲ. ಕಲಾಕಾರರಿಗೆ ಸರಕಾರ ಸುಲಭದಲ್ಲಿ ಕಲ್ಲು ಸಿಗುವಂತೆ ಮಾಡಬೇಕಿದೆ. ಅಂದರೆ ಮಾತ್ರ ಕಲೆ ಉಳಿಯಲು, ಬೆಳೆಯಲು ಸಾಧ್ಯವಾಗುತ್ತದೆ.
ಈಗ ಪ್ಲಾಾಸ್ಟರ್ ಆಫ್ ಪ್ಯಾಾರಿಸ್, ಸಿಮೆಂಟ್ ಮತ್ತು ಮೆಟಲ್ ಶಿಲ್ಪ ಮಾರುಕಟ್ಟೆೆಗೆ ಕಾಲಿಟ್ಟಿಿದೆ. ಆದರೂ ಶಿಲ್ಪಕಲೆಗೆ ಇರುವ ಮಹತ್ವವೇನೂ ಕಡಿಮೆಯಾಗಿಲ್ಲ. ಹೆಚ್ಚು ದುಬಾರಿಯಾದರೂ ಇದರ ಅಂದವೇ ಬೇರೆ. ದೇವರು, ವಿವಿಧ ಮಹಾಪುರುಷರ, ದಾರ್ಶನಿಕರ ವಿಗ್ರಹವನ್ನು ಕಲ್ಲಿನಲ್ಲೇ ಕೆತ್ತುವ ಪರಿಪಾಠವಿದೆ. ಜೊತೆಗೆ ಇದು ನೋಡುಗರನ್ನೂ ಸೆಳೆಯುವವಂತಹುದು. ಇದರಿಂದಾಗಿಯೇ ತನ್ನದೇ ಆದ ಮಹತ್ವವನ್ನು ಶಿಲ್ಪಕಲೆ ಉಳಿಸಿಕೊಂಡಿದೆ. ಜೊತೆಗೆ ಜ್ಞಾಾನೇಶ್ವರ್ ಅವರಂತಹ ಕಲಾವಿದರೂ ಇದನ್ನು ಬೆಳೆಸಿದ್ದಾಾರೆ.
ಇವರ ಸಾಧನೆ ಗಮನಿಸಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ  ಪ್ರಶಸ್ತಿಿ ನೀಡಿ ಗೌರವಿಸಿದೆ. ಈ ಬಾರಿಯ ರಾಜ್ಯೋೋತ್ಸವ ಪ್ರಶಸ್ತಿಿ ದೊರೆಯುವ ಮೂಲಕ ಇನ್ನಷ್ಟು ಪ್ರೋತ್ಸಾಾಹ ಇವರಿಗೆ ಸಿಕ್ಕಂತಾಗಿದೆ. ನಗರದ ಸಹೃದಯರೂ ಸಹ ಇವರಿಗೆ ಇನ್ನಷ್ಟು ಪ್ರೋತ್ಸಾಾಹ, ಅವಕಾಶ ಕೊಡುವಂತಾಗಬೇಕು. ವಿದೇಶದಲ್ಲಿ ಹೆಸರು ಮಾಡಿರುವ ಇಂತಹ ಕಲಾಕಾರರಿಗೆ ನಾಡಿನೆಲ್ಲೆೆಡೆ ಗೌರವ ದೊರೆಯಬೇಕಿದೆ.

published on 23-11-19
........................

No comments:

Post a Comment