Monday 21 May 2018


ರಾಜ್ಯಕ್ಕೆೆ ಮಾದರಿ ಶಿಕ್ಷಕಿ
ಸುಶೀಲಾ ಮಾರ್ಗರೆಟ್



 ಶಾಲಾ ಹಂತದಲ್ಲಿ ಆಂಗ್ಲ ಭಾಷೆ ಕಬ್ಬಿಿಣದ ಕಡಲೆ ಎಂದೇ ಬಿಂಬಿತವಾಗಿದೆ. ಬಹುತೇಕ ಮಕ್ಕಳಿಗೆ  ಇಂಗ್ಲೀಷ್ ಎಂದರೆ ಭಯ. ಇದನ್ನೆೆಲ್ಲ ಹೋಗಲಾಡಿಸಿ ಅತಿ ಸುಲಭದಲ್ಲಿ ಇಂಗ್ಲೀಷ್ ಕಲಿಸುವ ಮಾರ್ಗವಿದೆ. ಇದರಿಂದ ಆ ಭಾಷೆಗೆ ಮಕ್ಕಳು ಹತ್ತಿಿರವಾಗುತ್ತಾಾರೆ. ಈ ರೀತಿ ಮಕ್ಕಳಲ್ಲಿ ಧೈರ್ಯ ತುಂಬಿ ಸುಲಲಿತ ಮಾರ್ಗದಲ್ಲಿ ಇದನ್ನು ಕಲಿಸುವ ಶಿಕ್ಷಕಿಯೊಬ್ಬರಿದ್ದಾಾರೆ.  ಆ ಭಾಷೆಯಲ್ಲಿ ಸಂವಹನ ಮಾಡುವ ಕಲೆಯನ್ನು ಪ್ರಾಾಥಮಿಕ ಶಾಲೆಯಲ್ಲೇ ಇವರು ಕಲಿಸಿ ರಾಜ್ಯಮಟ್ಟದಲ್ಲಿ ಮೆಚ್ಚುಗೆ ಪಡೆದಿದ್ದಾಾರೆ.
ಸುಶೀಲಾ ಮಾರ್ಗರೆಟ್ ಭದ್ರಾಾವತಿ ತಾಲೂಕು ಕಲ್ಲಿಹಾಳ ಉರ್ದು ಕಿರಿಯ ಪ್ರಾಾಥಮಿಕ ಶಾಲಾ ಶಿಕ್ಷಕಿ. ಈ ಶಾಲೆಯಲ್ಲಿ ಸುಮಾರು 20 ಮಕ್ಕಳಿದ್ದು ಅವರೆಲ್ಲರೂ ಅತಿ ಸರಳ ಇಂಗ್ಲಿಿಷ್ ಮಾತನಾಡುತ್ತಾಾರೆ. ಈ ಹಿಂದೆ ಭದ್ರಾಾ ಕಾಲನಿಯ ಶಾಲೆಯಲ್ಲಿದ್ದಾಾಗಲೇ ಅಲ್ಲಿನ ಎಲ್ಲ ಮಕ್ಕಳಿಗೆ ಇಂಗ್ಲಿಿಷ್ ಕಲಿಸಿ ಹೆಸರಾದವರು ಸುಶೀಲಾ. ತಾವು ಎಲ್ಲೇ ಕೆಲಸ ಮಾಡಿದರೂ ಇಂಗ್ಲಿಿಷ್ ಕಲಿಕೆಯ ಮೂಲಕ ಮಕ್ಕಳನ್ನು ಮುಂದೆ ತರುತ್ತಿಿದಾರೆ. ಈ ಕಲಿಕೆಗೆ ಅವರು ಸರಳ ಸೂತ್ರವನ್ನು ಸಿದ್ಧಪಡಿಸಿಕೊಂಡಿದ್ದಾಾರೆ.
ಮಕ್ಕಳಿಗೆ ಇಂಗ್ಲೀಷ್ ಶಿಕ್ಷಕಿ ಎಂದರೆ ಭಯ. ಆದರೆ ಇಲ್ಲಿ ಅತ್ಯಂತ ಪ್ರೀತಿ. ವ್ಯಾಾಕರಣಬದ್ಧವಾಗಿ ಈ ಭಾಷೆ ಕಲಿಸಿ, ಶಾಲೆಗೆ ಬಂದವರೊಡನೆ ಮಕ್ಕಳು ಸಂವಹನ ನಡೆಸುವುದನ್ನೂ ಕಲಿಸಿದ್ದಾಾರೆ. ಇದಕ್ಕಾಾಗಿ ಬೆಂಗಳೂರಿನಲ್ಲಿರುವ ರಾಜ್ಯಮಟ್ಟದ ಇಂಗ್ಲೀಷ್ ಕಲಿಕಾ ತರಬೇತಿ ಕೇಂದ್ರದಲ್ಲಿ ವಿಶೇಷ ಅನುಭವ ಪಡೆದು ಬಂದಿರುವ ಇವರು, ಇತರ ಶಾಲೆಯ ಶಿಕ್ಷಕರಿಗೂ ಮಾದರಿಯಾಗಿದ್ದಾಾರೆ. ಇನ್ನೂ ವಿಶೇಷವೆಂದರೆ, ಇದನ್ನೆೆಲ್ಲ ಗಮನಿಸಿ ಇತರ ಶಾಲಾ ಶಿಕ್ಷಕರು ತಮ್ಮ ಶಾಲೆಗೂ ಬಂದು ಇಂಗ್ಲೀಷ್ ಕಲಿಕೆ ಹೇಳಿಕೊಡುವಂತೆ ಮನವಿ ಮಾಡುತ್ತಿಿದ್ದಾಾರೆ.
ಇಂಗ್ಲೀಷ್  ಎಂದರೆ ಭಯಪಡಬೇಕಾದ್ದಿಲ್ಲ. ಅತಿ ಸುಲಭದಲ್ಲಿ ಕಲಿಯುವ ಭಾಷೆ, ಎಬಿಸಿಡಿಯಂತೆಯೇ ಅಬಕಡದ ಮೂಲಕ ಪದ ಜೋಡಿಸಿ ಕಲಿಸುತ್ತೇನೆ. ಕಠಿಣ ಶಬ್ದಗಳನ್ನು ಸರಳಗೊಳಿಸುವುದರ  ಜೊತೆಗೆ ಮಕ್ಕಳಿಂದ ತಪ್ಪಿಿಲ್ಲದೆ ಅಂದವಾಗಿ ಬರೆಸುತ್ತೇನೆ. ಇವೆಲ್ಲವುಗಳ ಫಲವಾಗಿ ಯಶಸ್ಸು ಕಂಡಿದ್ದೇನೆಂದು ಸಂಸತದಿಂದ ನುಡಿಯುತ್ತಾಾರೆ.
ಈ ಮಕ್ಕಳು ಇಂಗ್ಲೀಷ್‌ನಲ್ಲೇ ಕಿರುಪ್ರಹನ ನಡೆಸಿಕೊಡುತ್ತಿಿದ್ದಾಾರೆ. ಪಾಲಕರಿಗಂತೂ ಈಗ ಎಲ್ಲಿಲ್ಲದ ಖುಷಿ. ಇಷ್ಟೇ ಏಕೆ, ಅಕ್ಕಪಕ್ಕದ ಗ್ರಾಾಮದ ಪಾಲಕರೂ ಸಹ ಇಂಗ್ಲೀಷ್ ಕಲಿಕೆಯ ದೃಷ್ಟಿಿಯಿಂದ ತಮ್ಮ ಮಕ್ಕಳನ್ನು ಈ ಶಾಲೆಗೆ ತಂದು ಸೇರಿಸಲು ಮುಂದಾಗಿದ್ದಾಾರೆ. ಚಿಕ್ಕಮಕ್ಕಳು ಸುಲಭದಲ್ಲಿ ಇಂಗ್ಲೀಷ್ ಕಲಿಯುವುದು ಸಣ್ಣ ವಿಚಾರವೇನಲ್ಲ.
ಮೂಲತಃ ಭದ್ರಾಾವತಿಯವರೇ ಆಗಿರುವ ಸುಶೀಲಾ ಅವರಿಗೆ ಮಕ್ಕಳೆಂದರೆ ಪಂಚಪ್ರಾಾಣ. ತಮ್ಮ 23 ವರ್ಷದ ಕೆಲಸದಲ್ಲಿ ಅತಿ ಹೆಚ್ಚು ಮಕ್ಕಳಿಗೆ ಇಂಗ್ಲಿಿಷ್ ಕಲಿಸಿದ್ದಲ್ಲದೆ, ಮಾತನಾಡುವಂತೆ ಮಾಡಿದ್ದಾಾರೆ. ಮಾತನಾಡುವಾಗ ಧ್ವನಿಯ ಏರಿಳಿತ ಮಾಡುವುದನ್ನೂ ಕಲಿಸಿಕೊಟ್ಟಿಿದ್ದಾಾರೆ. ಇದಕ್ಕಾಾಗಿ ರಾಜ್ಯಮಟ್ಟದಲ್ಲ್ಲ್‌ಿ ಅವರಿಗೆ ಪ್ರಶಂಸೆ ಲಭ್ಯವಾಗಿದೆ. ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಯ ಸ್ಪರ್ಧೆಯನ್ನು ಶಿಕ್ಷಣ ಇಲಾಖೆ ಏರ್ಪಡಿಸುತ್ತದೆ. ಅದರಲ್ಲಿ ಜಿಲ್ಲಾಾ ಮಟ್ಟದಲ್ಲಿ ಸುಶೀಲಾ ಪ್ರತಿ ವರ್ಷ ಮೊದಲ ಸ್ಥಾಾನ ಗಳಿಸುತ್ತಿಿದ್ದಾಾರೆ. 
ಮಕ್ಕಳು ಕೀಳರಿಮೆ ಬಿಡಬೇಕು. ಧೈರ್ಯದಿಂದ ಮಾತನಾಡುವಂತೆ ಪ್ರೀತಿಯಿಂದ ಪ್ರೇರೇಪಿಸಬೇಕು. ಮಾತನಾಡಿದ್ದನ್ನು ಬರೆಯುವಂತೆ ಮಾಡಬೇಕು. ಇದರಿಂದ ನೆನೆಪಿನ ಶಕ್ತಿಿ ಹೆಚ್ಚುವುದಲ್ಲದೆ, ಇನ್ನಷ್ಟು ಶುದ್ಧ ಇಂಗ್ಲೀಷ್ ಬರುತ್ತದೆ. ಓದುವುದನ್ನೂ ಸತತವಾಗಿ ಕಲಿಸಿದರೆ ಭಾಷೆಯ ಬಗ್ಗೆೆ ಇನ್ನಷ್ಟು ಪ್ರೀತಿ ಹುಟ್ಟುತ್ತದೆ. ಈ ರೀತಿ ಮಕ್ಕಳ ಮನಗೆದ್ದು ಇಂಗ್ಲಿಿಷ್ ಕಲಿಸುತ್ತಿಿದ್ದೇನೆ ಎಂದು  ಹೆಮ್ಮೆೆಯಿಂದ ಹೇಳುತ್ತಾಾರೆ. 
ಎಳೆಯ ಮಕ್ಕಳಿಗೆ ಸುಲಭದಲ್ಲಿ ಇಂಗ್ಲಿಿಷ್ ಕಲಿಸಿ ಅವರು ಅದರಲ್ಲಿ ನೈಪುಣ್ಯ ಹೊಂದುವಂತೆ ಮಾಡುತ್ತಿಿರುವುದು ನಿಜಕ್ಕೂ ಭವಿಷ್ಯದ ದೃಷ್ಟಿಿಯಿಂದ ಅತ್ಯುತ್ತಮ ಕೆಲಸ.

published on 5th May 2018
........................................... 

No comments:

Post a Comment