Friday 9 November 2018

ಅಂಧರಿಗೆ ದಾರಿದೀಪ 
ಶೇಖರ್ ನಾಯ್‌ಕ್‌



ಕಣ್ಣಿಿನಿಂದ ನೋಡಬೇಡ, ಮನಸ್ಸಿಿನಿಂದ ನೋಡು ಎಂದು ಆಂಗ್ಲ ಕವಿ ಶೇಕ್‌ಸ್‌‌ಪಿಯರ್ ಹೇಳಿದ್ದಾಾರೆ. ಏಕೆಂದರೆ, ಸಾಧನೆಗೆ ಬೇಕಿರುವುದು ಬಲಿಷ್ಠವಾದ, ಸಕಾರಾತ್ಮಕ ಮನಸ್ಸೇ ವಿನಾ ಕಣ್ಣಲ್ಲ. ಇಂತಹ ಮನಸ್ಸು ಅದ್ಭುತ ಪವಾಡವನ್ನೇ ಸೃಷ್ಟಿಿಸುವ ಶಕ್ತಿಿಯನ್ನು ಹೊಂದಿದೆ.
ಕ್ರಿಿಕೆಟ್ ಎಂದರೆ ಹಣಗಳಿಸುವ  ಆಟ ಎಂದು ಬಿಂಬಿತವಾಗಿದೆ. ಆದರೆ ಇದರಲ್ಲೂ ಸೇವಾಮನೋಭಾವವನ್ನು ತೋರಬಹುದು ಎನ್ನುವುದಕ್ಕೆೆ ರಾಷ್ಟ್ರಮಟ್ಟದಲ್ಲಿ ಹಲವರು ಉದಾಹರಣೆಯಾಗಿದ್ದಾಾರೆ. ಅಂಧರ ಕ್ರಿಿಕೆಟ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಶಿವಮೊಗ್ಗದ ಶೇಖರ್ ನಾಯ್‌ಕ್‌ ಸಹ  ಈ ಕ್ಷೇತ್ರದಲ್ಲಿ ಜನಪ್ರಿಿಯರು. ಈಗ ಅವರು ಕ್ರಿಿಕೆಟ್ ಅಕಾಡೆಮಿಯನ್ನು ನಗರದಲ್ಲಿ ಸ್ಥಾಾಪಿಸುವ ವಿಶೇಷವಾದ ಹೆಜ್ಜೆೆ ಇಟ್ಟಿಿದ್ದಾಾರೆ. 
ಶಿವಮೊಗ್ಗದ ಹೊರವಲಯದ ಹರಕರೆಯವರಾದ ಇವರು, ಈಗ ಕುಗ್ರಾಾಮಗಳಲ್ಲಿ ತನ್ನಂತೆಯೇ ಇರುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಬೆಳಕಿಗೆ ತರುವ ಸಾಹಸಕ್ಕೆೆ ಕೈ ಹಾಕಿದ್ದಾಾರೆ. ಬಾಲ್ಯದಲ್ಲೇ ಅಂಧ್ವತಕ್ಕೆೆ ಒಳಗಾಗಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ, ಶಿವಮೊಗ್ಗದ ಶಾರದಾದೇವಿ ಅಂಧರ ವಿಕಾಸ ಕೇಂದ್ರದಲ್ಲಿ ಓದುತ್ತಲೇ ಕ್ರಿಿಕೆಟ್ ಕಲಿತವರು. ಇಲ್ಲಿನ ದೈಹಿಕ ಶಿಕ್ಷಕ ಸುರೇಶ್, ಶೇಖರ್ ಅವರ ಕ್ರಿಿಕೆಟ್ ಗುರು.
 ಶೇಖರ್ ನಾಯ್‌ಕ್‌ 1997ರಲ್ಲಿ ಕ್ರಿಿಕೆಟ್‌ಗೆ ಕಾಲಿಟ್ಟು, 2002ರಿಂದ 2010ರವರೆಗೆ ಆಟಗಾರನಾಗಿ ತಂಡದಲ್ಲಿದ್ದರು. 2010ರಿಂದ 2016ರವರೆಗೆ ನಾಯಕನಾಗಿದ್ದರು.  ಭಾರತದ ಅಂಧರ ಕ್ರಿಿಕೆಟ್ ತಂಡದ ನಾಯಕರಾಗಿ ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ಪ್ರಶಸ್ತಿಿ ಗೆದ್ದುತಂದವರು. 2017ರಲ್ಲಿ ಪದ್ಮಶ್ರೀ ಪ್ರಶಸ್ತಿಿ, ವಿಕಲಚೇತನರಿಗಾಗಿ ಕೊಡಮಾಡುವ ರಾಷ್ಟ್ರೀಯ ಪುರಸ್ಕಾಾರಕ್ಕೂ ಭಾಜನರಾದರು. ಅದೇ ವರ್ಷ ಕರ್ನಾಟಕ ರಾಜ್ಯೋೋತ್ಸವ ಪ್ರಶಸ್ತಿಿಯೂ ಅವರಿಗೆ ದೊರೆಯಿತು. ಜೊತೆಗೆ ಅಬ್ದುಲ್ ಕಲಾಂ ಆವಂತಿಕಾ ಅವಾರ್ಡನ್ನೂ ಧರಿಸಿದ್ದಾಾರೆ.
ಇಷ್ಟೆೆಲ್ಲಾಾ ಸಾಧನೆ ಮಾಡಿದ ನಂತರ ತನ್ನಂತೆಯೇ ಅಂಧರಾಗಿರುವವರಿಗೆ ಏನನ್ನಾಾದರೂ ನೀಡಬೇಕೆಂಬ ತುಡಿತದಿಂದಾಗಿ ಶಿವಮೊಗ್ಗದಲ್ಲಿ ಅಂತರರಾಷ್ಟ್ರೀಯ ಮಟ್ಟದ ಅಂಧರ ಕ್ರಿಿಕೆಟ್ ಫೌಂಡೇಶನ್ ಸ್ಥಾಾಪಿಸಲು ನಿರ್ಧರಿಸಿದ್ದಾಾರೆ. ಇದಕ್ಕೆೆ ಶೇಖರ್ ನಾಯ್‌ಕ್‌ ಫೌಂಡೇಶನ್ ಎಂಬ ಹೆಸರನ್ನಿಿಟ್ಟಿಿದ್ದಾಾರೆ. ನವೆಂಬರ್ 11ರಂದು ಇದು ಉದ್ಘಾಾಟನೆಯಾಗಲಿದೆ.
ಕ್ರಿಿಕೆಟ್ ಮೂಲಕ ತಾನು ಗಳಿಸಿದ್ದನ್ನು ಮತ್ತೆೆ ಕ್ರಿಿಕೆಟ್‌ಗೆ ಧಾರೆ ಎರೆಯಲು ಹೊರಟಿರುವ ಶೇಖರ್, ರಾಜ್ಯದೆಲ್ಲೆೆಡೆ ಇರುವ ಇಂತಹ ಕ್ರಿಿಕೆಟಿಗರನ್ನು ಗುರುತಿಸಿ ಅವರಿಗೆ ತರಬೇತಿ ನೀಡಲಿದ್ದಾಾರೆ. ಜೊತೆಗೆ ರಾಜ್ಯ ಮತ್ತು ದೇಶೀಯ ತಂಡದಲ್ಲಿ ಆಡುವ ಅವಕಾಶ ಸೃಷ್ಟಿಿಸಿಕೊಡುವ ಗುರಿಯೂ ಅವರದ್ದು. ತರಬೇತಿ ಕೇಂದ್ರ ಶಿವಮೊಗ್ಗದಲ್ಲಿದ್ದರೂ ಎಲ್ಲ ಜಿಲ್ಲೆೆಗಳಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಲಿದ್ದಾಾರೆ. ಆಸಕ್ತ ಅಂಧ ಕ್ರೀಡಾಪಟುಗಳನ್ನು ಪತ್ತೆೆ ಮಾಡಿ ಅವರಿಗೆ ತರಬೇತಿ ಕೊಡುವುದು, ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯ ಕಲ್ಪಿಿಸಿಕೊಡುವುದು, ಸಮರ್ಥ ಕ್ರಿಿಕೆಟರ್ ಆಗಿ ಯುವಕರನ್ನು ರೂಪಿಸುವುದು ಅವರ ಗುರಿ.
ಈ ಅಕಾಡೆಮಿಗೆ ನ್ಯಾಾಶನಲ್ ಕ್ರಿಿಕೆಟ್ ಅಸೋಸಿಯೇಶನ್ ಫಾರ್ ದ ಬ್ಲೈಂಡ್ ಮಾನ್ಯತೆ ನೀಡಿದೆ. ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಅಂಧರ ಕ್ರಿಿಕೆಟ್ ಅಕಾಡೆಮಿ ಶಿವಮೊಗ್ಗದಲ್ಲಿ ತಲೆಎತ್ತಲಿದೆ. ಇಲ್ಲಿ ತರಬೇತಿ ಪಡೆಯುವವರಿಂದ ಯಾವುದೇ ಶುಲ್ಕವನ್ನು ಪಡೆಯಲಾಗುವುದಿಲ್ಲ. ಪ್ರಾಾಯೋಜಕರ ಆರ್ಥಿಕ ನೆರವಿನಿಂದ ಉಚಿತ ತರಬೇತಿ ನೀಡಲಾಗುವುದು ಎನ್ನುತ್ತಾಾರೆ ರೇಮಂಡ್ ಕಂಪನಿಯಲ್ಲಿ ವೆಲ್‌ನೆಸ್ ಆಫಿಸರ್ ಆಗಿರುವ ಶೇಖರ್.
 ಅಂಧರಲ್ಲಿರುವ ಕ್ರೀಡಾಪ್ರತಿಭೆ ಹೊರತರುವುದು, ಅವರಿಗೆ ಹೆಚ್ಚು ಅವಕಾಶ ಸಿಗುವಂತೆ ಮಾಡುವುದು ಇಂದಿನ ಅವಶ್ಯಕತೆಯಾಗಿದೆ. ಎಷ್ಟೋೋ ಅಂಧರಿಗೆ ಇದರ ಬಗ್ಗೆೆ ಅರಿವೇ ಇಲ್ಲ. ಅವರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ರಾಜ್ಯದಲ್ಲೇ ತರಬೇತಿ ಕೊಡಿಸುವುದು, ನೈತಿಕವಾಗಿ ಅವರಲ್ಲಿ ಧೈರ್ಯ ತುಂಬುವುದು, ಕ್ರೀಡೆಯ ಮೌಲ್ಯವನ್ನು ಉತ್ತೇಜಿಸುವ ಕೆಲಸ ಆಗಬೇಕಿದೆ ಎನ್ನುತಾರೆ ಅವರು. 
published on nov 10, 2018
................................


No comments:

Post a Comment