Monday 19 November 2018

ಬಾಲಕ್ರಿಿಕೆಟ್ ತಾರೆ

ಶ್ರವಣ್‌ಬಾಬು


ಮೈದಾನದಲ್ಲಿ ಕ್ರಿಿಕೆಟ್ ಆಡುವ ಮೊದಲು ನಿನ್ನ ಹೃದಯದಲ್ಲಿ ಇದಕ್ಕೆೆ ಬೇಕಾದ ಉತ್ತಮ ತಳಹದಿಯನ್ನು ಹಾಕಿಕೊಂಡು ಅದರ ಆಧಾರದಲ್ಲಿ ಹೆಚ್ಚೆೆಚ್ಚು ಪ್ರಮಾಣದಲ್ಲಿ ಆಟವಾಡುತ್ತ ಹೋಗು. ಉತ್ತಮವಾಗಿ ರನ್ ಗಳಿಸುವುದು ಮತ್ತು ವಿಕೆಟ್ ಪಡೆಯುವುದು ಹೇಗೆ ಎನ್ನುವುದನ್ನು ಕಲಿಯಬಲ್ಲೆೆ. ಇದು ಯುವ ಕ್ರಿಿಕೆಟಿಗರಿಗೆ ಮಾಜಿ ಕ್ರಿಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ ಕಿವಿಮಾತು.
ಕ್ರಿಿಕೆಟಿನತ್ತ ಬಾಲಕರಿಗೆ ಮತ್ತು ಯುವಕರಿಗೆ ಆಸಕ್ತಿಿ ಹೆಚ್ಚುತ್ತಿಿದೆ. ಇದನ್ನು ಕೆಲವರು ರಜಾದಿನದಲ್ಲಿ ಆಡುವ ಕ್ರೀಡೆಯನ್ನಾಾಗಿ ಪರಿಗಣಿಸಿದರೆ, ಇನ್ನೂ ಕೆಲವರು ಪ್ರತಿನಿತ್ಯ ಬೆಳಿಗ್ಗೆೆ ಮತ್ತು ಸಂಜೆ ಆಟವಾಡುತ್ತಾಾ, ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ದಾರಿ ಮಾಡಿಕೊಳ್ಳುತ್ತಿಿದ್ದಾಾರೆ. ಸಾಗರದ ಎಸ್‌ಎಸ್‌ಎಲ್‌ಸಿ ವಿದ್ಯಾಾರ್ಥಿ, ಬಾಲಪ್ರತಿಭೆ ಶ್ರವಣ್‌ಬಾಬು ಕ್ರಿಿಕೆಟನ್ನು ಪ್ರೀತಿಸಿ, ಸತತ ತರಬೇತಿ ಪಡೆದು ಈಗ ರಾಜ್ಯ ಕ್ರಿಿಕೆಟ್ ಸಂಸ್ಥೆೆಯ 16 ವರ್ಷದೊಳಗಿನವರ ತಂಡಕ್ಕೆೆ ಸಂಭಾವ್ಯ ಆಟಗಾರನಾಗಿ ಆಯ್ಕೆೆಯಾಗಿದ್ದಾಾನೆ.
ಶ್ರವಣ್‌ಬಾಬು ಎಂಜಿಪೈ ಹೈಸ್ಕೂಲಿನ ವಿದ್ಯಾಾರ್ಥಿ. ಬಾಲ್ಯದಿಂದಲೂ ಕ್ರಿಿಕೆಟ್ ಎಂದರೆ ವಿಶೇಷ ಆಸಕ್ತಿಿ. ಇವರ ತಂದೆ ಐ. ಎನ್. ಸುರೇಶ್‌ಬಾಬು ಸಹ ಕ್ರಿಿಕೆಟ್ ಆಟಗಾರರು. ತಂದೆಯಿಂದ ಬಂದ ಬಳುವಳಿ ಎಂಬಂತೆ ತನ್ನ 10ನೆಯ ವಯಸ್ಸಿಿನಲ್ಲೇ ಕ್ರಿಿಕೆಟ್ ಆರಂಭಿಸಿದ ಶ್ರವಣ್,  ವಿಶೇಷ ತರಬೇತಿಯನ್ನು ಸಾಗರದಲ್ಲಿ ಕೋಚ್ ರವಿ ನಾಯ್ಡು ಅವರಲ್ಲಿ ಪಡೆದಿದ್ದಾಾನೆ. ಪ್ರತಿದಿನ  ಬೆಳಿಗ್ಗೆೆ ಮತ್ತು ಸಂಜೆ ತರಬೇತಿ ಜೊತೆಗೆ ದೈಹಿಕ ಸಾಮರ್ಥ್ಯವನ್ನೂ ಕಾಪಾಡಿಕೊಳ್ಳುವ ನಿಟ್ಟಿಿನಲ್ಲಿ  ವ್ಯಾಾಯಾಮದಲ್ಲಿ ತೊಡಗಿಕೊಂಡು ಸಾಧನ ಮಾಡಿದ್ದಾಾನೆ. ಬಳಿಕ ರಾಜ್ಯ ಕ್ರಿಿಕೆಟ್ ಸಂಸ್ಥೆೆ ನಡೆಸುವ ವಲಯ ಪಂದ್ಯಾಾವಳಿಯಲ್ಲಿ ಶಿವಮೊಗ್ಗ ವಲಯದ 16ರ ಒಳಗಿನವರ ತಂಡಕ್ಕೆೆ ಆಯ್ಕೆೆಯಾಗಿ ತಾನು ಭವಿಷ್ಯದ ಕ್ರಿಿಕೆಟರ್ ಆಗಬಲ್ಲೆೆ ಎನ್ನುವುದನ್ನು ನಿರೂಪಿಸಿದ್ದಾಾನೆ.
ವಲಯ ತಂಡದಲ್ಲಿ ಆಡಿದ 5 ಪಂದ್ಯದಲ್ಲಿ ಸತತವಾಗಿ 4 ಶತಕ ಬಾರಿಸಿದ್ದಾಾನೆ. (100, 150, 103 ಮತ್ತು 127 ರನ್‌ನ್ನು ವಿವಿಧ ತಂಡಗಳ ವಿರುದ್ಧ ಗಳಿಸಿದ್ದಾಾನೆ.) ಇದೇ ಪಂದ್ಯಾಾವಳಿಯ 5ನೆಯ ಪಂದ್ಯದಲ್ಲಿ 83 ರನ್ ಬಾರಿಸಿ ಔಟಾಗದೆ ಉಳಿದಿದ್ದಾಾನೆ. ಇದರಿಂದಾಗಿ, 5ನೆಯ ಶತಕದ ದಾಖಲೆಯಿಂದ ಸ್ವಲ್ಪ ಹಿಂದುಳಿಯುವಂತಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ 16ರ ಒಳಗಿನವರ ಅಂತರ ವಲಯ ಕ್ರಿಿಕೆಟ್ ಟೂರ್ನಿಯಲ್ಲೂ 46 ಎಸೆತಗಳಲ್ಲಿ 105 ರನ್ ಬಾರಿಸಿ ಕ್ರಿಿಕೆಟ್ ಪ್ರತಿಭೆ ತೋರಿಸಿರುವ ಈ ಪೋರ, ವಲಯ ಕ್ರಿಿಕೆಟ್‌ನಲ್ಲಿ ತನ್ನ ಸಾಮರ್ಥ್ಯವನ್ನು ಪ್ರಚುರಪಡಿಸಿದ್ದರಿಂದ ರಾಜ್ಯ ಕಿರಿಯರ ತಂಡಕ್ಕೆೆ ಆಯ್ಕೆೆಯಾಗಿದ್ದಾಾನೆ. ಎಡಗೈ ಆರಂಭಿಕ ಬ್ಯಾಾಟ್‌ಸ್‌‌ಮನ್ ಮತ್ತು ಬಲಗೈ ಆಫ್ ಸ್ಪಿಿನರ್ ಆಗಿರುವ ಈತ, ವಿಕೆಟ್ ಕೀಪಿಂಗ್ ಸಹ ಮಾಡಬಲ್ಲ. ಒಟ್ಟಿಿನಲ್ಲಿ, ಆಲ್‌ರೌಂಡರ್ ಪ್ರತಿಭೆ ಎನ್ನಬಹುದು.
ಇದೇ ಸಾಧನೆಯನ್ನು ಮುಂದುವರೆಸಿಕೊಂಡು ಹೋದರೆ ಮುಂದೆ ರಾಜ್ಯದ ಹಿರಿಯರ ತಂಡದಲ್ಲಿ ಮಿಂಚಬಲ್ಲ ಶಕ್ತಿಿ ಈತನಿಗಿದೆ. ಇದಕ್ಕೆೆ ಇನ್ನಷ್ಟು ಸತತ ಪರಿಶ್ರಮವನ್ನು ಮಾಡಬೇಕಿದೆ. ತಂದೆ-ತಾಯಿ ಮಗನ ಕ್ರಿಿಕೆಟ್ ಬೆಳವಣಿಗೆಗೆ ಸದಾ ಬೆಂಬಲವಾಗಿ ನಿಂತಿದ್ದಾಾರೆ. ಸ್ವಸಾಮರ್ಥ್ಯವನ್ನು ಇನ್ನಷ್ಟು ಬೆಳೆಸಿಕೊಂಡು ಈ ದಾರಿಯಲ್ಲಿ ಆತ ಸಾಗಿದರೆ ಉಜ್ವಲ ಪ್ರತಿಭೆಯಾಗುವುದು ನಿಶ್ಚಿಿತ. ರಾಜ್ಯ ತಂಡದಲ್ಲಿ ಜಿಲ್ಲೆೆಯ ಕ್ರಿಿಕೆಟಿಗನಾಗಿ ಮಿಂಚಬಲ್ಲ.
ಮಲೆನಾಡಿನ ಈ ಪ್ರತಿಭೆಗೆ ಮುಂದೆ ರಾಷ್ಟ್ರೀಯ ತಂಡದಲ್ಲೂ ಆಟವಾಡುವಂತಹ ಅವಕಾಶ ಸಿಗಬೇಕಿದೆ. ಆಟದ ಮೇಲಿನ ಪ್ರೀತಿ ಮತ್ತು ಬದ್ಧತೆಯನ್ನು ಇದೇ ರೀತಿಯಲ್ಲಿ ಇರಿಸಿ, ಬೆಳೆಸಿಕೊಂಡು ಸಾಗಿದರೆ ಇದು ಕಷ್ಟವೇನೂ ಆಗಲಾರದು. ಶ್ರವಣ್‌ಬಾಬುವಿನ ಈ ಕನಸು ನನಸಾಗಲಿ.   
...............................................        

No comments:

Post a Comment