Monday 7 January 2019

ಭರವಸೆಯ ಕುಸ್ತಿಿಪಟು
 ಸುಷ್ಮಿಿತಾ ನಾಯ್‌ಕ್‌


ಕುಸ್ತಿಿ ಜಗತ್ತಿಿನ ಅತ್ಯಂತ ಪ್ರಾಾಚೀನ ಮತ್ತು ಕಠಿಣವಾದ ಕ್ರೀಡೆ. ಒಲಿಂಪಿಕ್‌ಸ್‌‌ನಲ್ಲೂ ಸ್ಥಾಾನ ಪಡೆದ ಕುಸ್ತಿಿಯನ್ನು ಇಂದು ಮಹಿಳೆಯರೂ ಆಡುತ್ತಿಿದ್ದಾಾರೆ. ಭಾರತದಲ್ಲಿ ಇದನ್ನಾಾಡುವ ಮಹಿಳೆಯರು ಕಡಿಮೆ. ಆದರೆ ಇತ್ತೀಚೀನ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲೂ, ಜಿಲ್ಲಾಾ ಮಟ್ಟದಲ್ಲೂ ಪ್ರೋತ್ಸಾಾಹಿಸುವ ಕೆಲಸ ನಡೆಯುತ್ತಿಿದೆ. ಇದರಿಂದಾಗಿ ಹಲವು ಯುವತಿಯರು ಕುಸ್ತಿಿಪಟುಗಳಾಗುವತ್ತ ಹೆಜ್ಜೆೆ ಇಟ್ಟಿಿದ್ದಾಾರೆ.
ಕುಸ್ತಿಿ ಸ್ವಯಂ ನಿಯಂತ್ರಣ ಕಲಿಸುವ, ಗೌರವ ಹೆಚ್ಚಿಿಸುವ, ಕೌಶಲ್ಯದ ಕ್ರೀಡೆ.  ಇದಕ್ಕೆೆ ಅತಿ ಕಠಿಣ ಪರಿಶ್ರಮ, ಅಷ್ಟೇ ಉತ್ತಮ ದೇಹದಾರ್ಢ್ಯ ಬೇಕು. ಇದಕ್ಕಾಾಗಿಯೇ ಹೆಚ್ಚಿಿನವರು ಇದರಲ್ಲಿ ಪಾಲ್ಗೊೊಳ್ಳುತ್ತಿಿಲ್ಲ. ಜೊತೆಗೆ ಪ್ರೋತ್ಸಾಾಹವೂ ಅತಿ ಕಡಿಮೆ. ಆದರೆ ಶಿವಮೊಗ್ಗ ನಗರದಲ್ಲಿ ವಿದ್ಯಾಾರ್ಥಿನಿಯೊಬ್ಬಳು ಕುಸ್ತಿಿಯಲ್ಲಿ ಸತತ ತರಬೇತಿ ಪಡೆಯುತ್ತ, ಸ್ಪರ್ಧೆಗಳಲ್ಲಿ ಗೆಲ್ಲುತ್ತ ರಾಷ್ಟ್ರೀಯ ಕುಸ್ತಿಿ ಚಾಂಪಿಯನ್‌ಶಿಪ್‌ಗೆ ಆಯ್ಕೆೆಯಾಗಿದ್ದಾಾಳೆ.
 ನಗರದ  ಕಸ್ತೂರಬಾ ಪದವಿಪೂರ್ವ ಕಾಲೇಜಿನ ದ್ವಿಿತೀಯ ಪಿಯು ಕಲಾ ವಿಭಾಗದ ವಿದ್ಯಾಾರ್ಥಿನಿ ಸುಷ್ಮಿಿತಾ  ರಾಷ್ಟ್ರಮಟ್ಟದಲ್ಲಿ ಕುಸ್ತಿಿ ಆಡಲು ಸಜ್ಜಾಾಗಿದ್ದಾಾಳೆ.   ಶಂಕರಘಟ್ಟದ ಕೃಷಿಕ ಸೋಮ್ಲಾಾ ನಾಯ್‌ಕ್‌ ಮತ್ತು ಸುಮಾಬಾಯಿ ಅವರ ಪುತ್ರಿಿ. ಜಿಲ್ಲಾಾ ಕುಸ್ತಿಿ ಸ್ಪರ್ಧೆಗೆ ವಿದ್ಯಾಾರ್ಥಿನಿಯರನ್ನು ಕಳುಹಿಸಬೇಕಾದಾಗ ಕ್ರೀಡೆಯಲ್ಲಿ ಕ್ರಿಿಯಾಶೀಲರಾಗಿರುವ, ಕಠಿಣ ಶ್ರಮಪಡುವ ನಾಲ್ಕಾಾರು ವಿದ್ಯಾಾರ್ಥಿನಿಯರನ್ನು ಆಯ್ಕೆೆ ಮಾಡಿದ್ದ ಕಾಲೇಜಿನವರು, ಇವರಿಗೆಲ್ಲ ಪ್ರತಿದಿನ ತರಬೇತಿ ನೀಡಿದರು. ಈ ವಿದ್ಯಾಾರ್ಥಿಗಳಲ್ಲಿ ಸುಷ್ಮಿಿತಾ ಒಬ್ಬರು.
ಆನಂತರ ಕಾಲೇಜಿನಲ್ಲಿಯೇ ಪ್ರತಿದಿನ ಎರಡು ಗಂಟೆ ಈ ವಿದ್ಯಾಾರ್ಥಿನಿಯರು ದೈಹಿಕ ಶಿಕ್ಷಕರ ಮಾರ್ಗರ್ಶನದಲ್ಲಿ ವಿಶೇಷ ತರಬೇತಿ ನೀಡಲಾಗಿದೆ. ಜಿಲ್ಲಾಾ ಮಟ್ಟದಲ್ಲಿ ಪ್ರಥಮ ಸ್ಥಾಾನ ಪಡೆದ ನಂತರ ರಾಜ್ಯ ಮಟ್ಟದ ಸ್ಪರ್ಧೆ ಗದಗ್‌ನಲ್ಲಿ ನಡೆಯಿತು. ಅಲ್ಲಿಯೂ ಪ್ರಶಸ್ತಿಿ ಗಳಿಸಿ ಹರಿಯಾಣಾದಲ್ಲಿ ಈ ತಿಂಗಳು ನಡೆಯಲಿರುವ ರಾಷ್ಟ್ರೀಯ ಕುಸ್ತಿಿಗೆ ಆಯ್ಕೆೆಯಾಗಿದ್ದಾಾಳೆ.
ಲಕ್ಕವಳ್ಳಿಿಯಲ್ಲಿ ಹೈಸ್ಕೂಲು ಓದುವಾಗಲೇ ಕಬಡ್ಡಿಿಯಲ್ಲಿ  ರಾಜ್ಯಮಟ್ಟಕ್ಕೆೆ ಆಯ್ಕೆೆಯಾಗಿದ್ದಳು. ಆನಂತರ ಕಾಲೇಜು ಸೇರಿ ಆಮೇಲೆ ಅದನ್ನು ಮುಂದುವರೆಸಿ, ಈಗ ಕಬಡ್ಡಿಿಯಲ್ಲೂ ಅತ್ಯುತ್ತಮ ಆಟಗಾರ್ತಿ ಎನಿಸಿದ್ದಾಾಳೆ. ಜಿಲ್ಲಾಾ ಮಟ್ಟದ ಅನೇಕ ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದಾಾಳೆ. ಕುಟುಂಬದ ಸದಸ್ಯರು ಈಕೆಯ ಕ್ರೀಡಾ ಸಾಧನೆಗೆ ಬೆನ್ನೆೆಲುಬಾಗಿ ನಿಂತಿದ್ದಾಾರೆ.
ಇವತ್ತಿಿಗೂ ಶಿವಮೊಗ್ಗದಲ್ಲಿ ಕುಸ್ತಿಿಗೆ ಬಹಳ ವರ್ಷ ಇತಿಹಾಸವಿದೆ. ಅನೇಕ ಕುಸ್ತಿಿ ಪಟುಗಳಿದ್ದಾಾರೆ. ಗರಡಿ ಮನೆಗಳು ಇಲ್ಲಿವೆ. ಆದರೆ ಇಂದು ಉದಯೋನ್ಮುಖ ಪಟುಗಳಿಲ್ಲದೆ ಅದು ಬಳಕೆಯಾಗುತ್ತಿಿಲ್ಲ. ಸರ್ಕಾರದ ಪ್ರೋತ್ಸಾಾಹದ ಕೊರತೆಯೇ ಇದಕ್ಕೆೆ ಕಾರಣ. ಆದರೆ ಮಹಿಳಾಪಟುಗಳು ಈಗ ಉದಯಿಸಲಾರಂಭಿಸಿದ್ದಾಾರೆ.  ಇವರಿಗೆ ಸೂಕ್ತ ತರಬೇತಿ ಕೇಂದ್ರ ಮತ್ತು ಅವಕಾಶ ನೀಡುವ ಅಗತ್ಯ ಇದೆ.
ಕುಸ್ತಿಿಗೆ ಬೇಕಾದ ದೇಹದಾರ್ಢ್ಯವನ್ನು ಸುಷ್ಮಿಿತಾ ಹೊಂದಿದ್ದಾಾಳೆ. ಇವರ ಸಹೋದರ ಬಾಡಿ ಬಿಲ್ಡರ್ ಆಗಿದ್ದು, ಮನೆಯಲ್ಲೇ ಸಣ್ಣ ಪ್ರಮಾಣದ ಜಿಮ್ ಹೊಂದಿರುವುದರಿಂದ ತರಬೇತಿಗೆ ಅನುಕೂಲವಾಗಿದೆ. ಕಬಡ್ಡಿಿ, ಥ್ರೋೋಬಾಲ್, ಜಾವೆಲಿನ್ ಎಸೆತದಲ್ಲಿ ಪ್ರವೀಣೆಯಾಗಿರುವ ಕಾರಣ ಕುಸ್ತಿಿ ಆಡಬಹುದು ಎನಿಸತು. ಆ ಪ್ರಕಾರ  ಶಿಕ್ಷಕರ ಕೋರಿಕೆಗೆ ಒಪ್ಪಿಿ ತರಬೇತಿ ಪಡೆದೆ ಎನ್ನುತ್ತಾಾಳೆ ಸುಷ್ಮಿಿತಾ.
ಪಂದ್ಯಕ್ಕೆೆ ಮುನ್ನ ಮಾನಸಿಕವಾಗಿ ಸಿದ್ಧರಾಗಿರಬೇಕು. ಎದುರಾಳಿಯ ಮನಃಸ್ಥಿಿತಿ ಅರಿತು ಅವರು ದಾಳಿ ಮಾಡುವ ಮುನ್ನವೇ ದಾಳಿ ಮಾಡಬೇಕು. ಇದೆಲ್ಲವನ್ನೂ ಕಲಿತಿದ್ದೇನೆ. ಇನ್ನೂ ಹೆಚ್ಚಿಿನ ತರಬೇತಿಯನ್ನು ಪಡೆಯಬೇಕಿದೆ. ಆದರೆ ನಗರದಲ್ಲಿ ಅವಕಾಶವಿಲ್ಲ. ಕಾಲೇಜಿನಲ್ಲಿ ಎಲ್ಲ ಶಿಕ್ಷಕರು ಸಾಕಷ್ಟು ಪ್ರೋತ್ಸಾಾಹ ನೀಡುತ್ತಿಿದ್ದಾಾರೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಹಂಬಲವಿದೆ ಎನ್ನುತ್ತಾಾಳೆ.
published on jan 5.2019
     .....................................

No comments:

Post a Comment