Saturday 11 May 2019

      
ಕಬಡ್ಡಿಿ ರೆಫ್ರಿಿಯಾಗಿ 
ಸಿದ್ದಯ್ಯ

 

ಪ್ರತಿದಿನವೂ ಹೊಸ ಅವಕಾಶಗಳು ನಮ್ಮೆೆದುರು ಬರುತ್ತವೆ. ನಾವು ನಿನ್ನೆೆಯ ಗೆಲುವಿನ ಅಥವಾ ಸೋಲಿನ ಆಧಾರದ ಮೇಲೆ ಮುಂದಿನ ಹೆಜ್ಜೆೆ ಇಡುತ್ತಾಾ ಹೋಗಬೇಕು. ಇದು ಕ್ರೀಡೆಯಲ್ಲಿ ಮಹತ್ವದ ಘಟ್ಟ. ಇವುಗಳನ್ನು ಅಳವಡಿಸಕೊಂಡವರು ಮಾತ್ರ ಉತ್ತಮ ಕ್ರೀಡಾಪಟುವಾಗಿ ಮಿಂಚಬಲ್ಲ ಎನ್ನುವ ಮಾತಿದೆ.
ಕ್ರೀಡೆಯಲ್ಲಿ ಸಾಧನೆ ಮಾಡುತ್ತ ಹೋದಂತೆ ಉನ್ನತ ಹುದ್ದೆೆಯನ್ನೂ ಪಡೆಯಬಹುದು. ಕೋಚ್ ಆಗಿ, ನಿರ್ಣಾಯಕರಾಗಿ, ರೆಫ್ರಿಿಯಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಮ್ಮನ್ನು ಗುರುತಿಸಿಕೊಳ್ಳಬಹುದು. ಇದಕ್ಕೆೆಲ್ಲ ಮುಖ್ಯವಾಗಿ ಬೇಕಾದದ್ದು ಶಿಸ್ತು, ಉತ್ತಮ ಗುಣನಡತೆ ಮತ್ತು ಆತ್ಮವಿಶ್ವಾಾಸ. ಇವು ಆಟಗಾರನನ್ನು ಉತ್ತಮ ವ್ಯಕ್ತಿಿತ್ವದವನನ್ನಾಾಗಿ ರೂಪಿಸುವುದರ ಜೊತೆಗೆ ಆತನಿಗೆ ಉನ್ನತ ಸ್ಥಾಾನವನ್ನೂ ಕೊಡಬಲ್ಲವು.
ಭದ್ರಾಾವತಿಯ ಪೇಪರ್‌ಟೌನ್ ಆಂಗ್ಲ ಮಾಧ್ಯಮ ಹೈಸ್ಕೂಲಿನ ದೈಹಿಕ ಶಿಕ್ಷಕ  ಎನ್. ಸಿದ್ದಯ್ಯ ರಾಷ್ಟ್ರೀಯ ಕಬಡ್ಡಿಿ ರೆಫ್ರಿಿಯಾಗಿ ಆಯ್ಕೆೆಯಾಗಿದ್ದಾಾರೆ. 20 ವರ್ಷಗಳಿಂದ ಕ್ರೀಡಾ ಜೀವನದಲ್ಲಿ ಅವರು ಮಾಡಿದ ಸಾಧನೆ ಅವರನ್ನು ಆ ಕ್ಷೇತ್ರದಲ್ಲಿ ಉನ್ನತ ಸ್ಥಾಾನಕ್ಕೆೆ ಕರೆದೊಯ್ದಿಿದೆ. ಈಗಾಗಲೇ ನಿರ್ಣಾಯಕರಾಗಿ ರಾಷ್ಟ್ರಮಟ್ಟದಲ್ಲೂ ಕೆಲಸ ನಿರ್ವಹಿಸುತ್ತಿಿರುವ ಸಿದ್ದಯ್ಯ ಈಗ ರೆಫ್ರಿಿಯಾಗಿ ಜಿಲ್ಲೆೆಗೆ ಹೆಮ್ಮೆೆ ತಂದಿದ್ದಾಾರೆ. ಮೇ 13ರಿಂದ ಪೂನಾದಲ್ಲಿ ನಡೆಯಲಿರುವ ಇಂಡೋರ್ ಇಂಟರ್ ನ್ಯಾಾಶನಲ್ ಕಬಡ್ಡಿಿ ಪ್ರೀಮಿಯರ್ ಲೀಗ್‌ಗೆ ರೆಫ್ರಿಿಯಾಗಿ ನೇಮಕಗೊಂಡಿದ್ದಾಾರೆ.
ಚನ್ನಗಿರಿ ತಾಲೂಕು ಶೆಟ್ಟಿಿಹಳ್ಳಿಿಯವರಾದ ಸಿದ್ದಯ್ಯ ಪ್ರಾಾಥಮಿಕ ಮತ್ತು ಹೈಸ್ಕೂಲು ವಿದ್ಯಾಾಭ್ಯಾಾಸವನ್ನು ಸ್ವಗ್ರಾಾಮದಲ್ಲೇ ಓದಿ ಆನಂತರ ಭದ್ರಾಾವತಿಯಲ್ಲಿ ಕಾಲೇಜು ಶಿಕ್ಷಣ ಪಡೆದರು. ಹೈಸ್ಕೂಲು ಕಲಿಯುವಾಗಲೇ ಕ್ರೀಡೆಯಲ್ಲಿ ಮುಂದು. ಕಬಡ್ಡಿಿ ಅವರ ನೆಚ್ಚಿಿನ ಆಟ. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅನೇಕ ಬಾರಿ ಭಾಗವಹಿಸಿದ್ದಾಾರೆ. ಜೊತೆಗೆ ತಂಡ ಕಟ್ಟಿಿಕೊಂಡು ಹಲವಾರು ಟೂರ್ನಿ ಆಡಿ ಜಯಿಸಿ ಬಂದಿದ್ದಾಾರೆ. 
ಭದ್ರಾಾವತಿಯಲ್ಲಿ ಓದುವಾಗ ಕೋಚ್‌ಗಳಾದ ರಂಗನಾಥ ಮತ್ತು ದೇವರಾಜ್ ಅವರಿಂದ ಸತತ ತರಬೇತಿ ಪಡೆದುದರ ಫಲವಾಗಿ ಇನ್ನಷ್ಟು ಪಕ್ವ ಕ್ರೀಡಾಪಟುವಾಗಿ ಹೊರಹೊಮ್ಮಿಿದರು. ಭದ್ರಾಾವತಿಯಲ್ಲಿ ಈ ಇಬ್ಬರು ತರಬೇತುದಾರರು ಬಹುತೇಕ ಕ್ರೀಡಾಪಟುಗಳನ್ನು ತಯಾರು ಮಾಡಿದ ಕೀರ್ತಿಗೆ ಭಾಜನರಾಗಿದ್ದಾಾರೆ. ಮಲ್ಲಾಾಡಿಹಳ್ಳಿಿಯ ಕಾಲೇಜಿನಲ್ಲಿ ದೈಹಿಕ ಶಿಕ್ಷಣದ ಕೋರ್ಸು ಮುಗಿಸಿ ಭದ್ರಾಾವತಿಗೆ ಬಂದು ಕೆಲಸಕ್ಕೆೆ ಸೇರಿದರು. ಅಲ್ಲಿಂದ ಅವರ ಕ್ರೀಡಾ ಜೀವನದ ಯಶಸ್ಸು ಮೇಲಕ್ಕೆೆರುತ್ತಲೇ ಇದೆ.
ಭದ್ರಾಾವತಿಯ ಭದ್ರಾಾ ಕಬಡ್ಡಿಿ ತಂಡದ ಆಟಗಾರರಾಗಿ ಆಡಿ, ಅದನ್ನು ಮುನ್ನಡೆಸಿ, ಆ ತಂಡ ರಾಜ್ಯದಲ್ಲೇ ಹೆಸರುವಾಸಿಯಾಗುವಂತೆ ಮಾಡುವಲ್ಲಿ ಸಿದ್ದಯ್ಯ ಅವರ ಪಾತ್ರ ದೊಡ್ಡದು. ಜಿಲ್ಲೆೆಯಲ್ಲಿ ಅಷ್ಟೇ ಅಲ್ಲ, ರಾಜ್ಯದಲ್ಲೇ ಕಬಡ್ಡಿಿಯಲ್ಲಿ ಸಿದ್ದಯ್ಯ ಅವರದು ಮಹತ್ವದ ಹೆಸರು. ಆದ್ದರಿಂದಲೇ ನಿರ್ಣಾಯಕರಾಗಿ ನೂರಾರು ಸ್ಥಳಗಳಲ್ಲಿ ಕೆಲಸ ಮಾಡಿ, ಈಗ ರೆಫ್ರಿಿಯಾಗಿ ಭಡ್ತಿಿ ಹೊಂದಿದ್ದಾಾರೆ. ಜಿಲ್ಲೆೆಯ ಮಟ್ಟಿಿಗೆ ಇದೊಂದು ಹೆಮ್ಮೆೆಯ ವಿಚಾರವೇ ಸರಿ.
ಕ್ರೀಡೆ ಉತ್ತಮ ಗುಣ ನಡತೆಯನ್ನು ಕಲಿಸುತ್ತದೆ. ನಿಯಮದಂತೆ ಆಡುವುದನ್ನು ಕಲಿಸುತ್ತದೆ. ಜಯ ಅಥವಾ ಅಪಜಯ ಯಾವುದೇ ಎದುರಾದರೂ ಮುಂದಿನ ಹೆಜ್ಜೆೆಯನ್ನು ಹೇಗೆ ಧೈರ್ಯದಿಂದ ಇಡಬೇಕೆನ್ನುವುದನ್ನು ಹೇಳಿಕೊಡುತ್ತದೆ. ಉತ್ತಮ ಹವ್ಯಾಾಸ, ಆತ್ಮವಿಶ್ವಾಾಸ, ಶಿಸ್ತು ಮತ್ತು ಸಮೂಹದ ನಾಯಕನಾಗಿ ಬೆಳೆಯುವುದನ್ನು ಹೇಳಿಕೊಡುತ್ತದೆ. ಇಷ್ಟೆೆಲ್ಲಾಾ ಗುಣಗಳನ್ನು ಕ್ರೀಡೆಯಿಂದ ಕಲಿತು ಇಂದು ರೆಫ್ರಿಿಯಾಗಿದ್ದೇನೆ ಎನ್ನುತ್ತಾಾರೆ ಸಿದ್ದಯ್ಯ.
ಮೇ 13ರಿಂದ ಪುಣೆಯಲ್ಲಿ  ಆನಂತರ ಮೈಸೂರಿನಲ್ಲಿ  ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಕಬಡ್ಡಿಿ ಚಾಂಪಿಯನ್‌ಶಿಪ್‌ಗೆ ರೆಫ್ರಿಿಯಾಗಿ ತೆರಳಲು ಸಿದ್ಧತೆ ನಡೆಸುತ್ತಿಿದ್ದಾಾರೆ.  

published on 11-5-2019
...........................................     

No comments:

Post a Comment