Monday 22 July 2019

 ಅಂತರಾಷ್ಟ್ರೀಯ ಕಬಡ್ಡಿಿಗೆ
14ರ ಪೋರ ಸನತ್



  ಬೆಳೆಯ ಸಿರಿ ಮೊಳಕೆಯಲ್ಲಿ ನೋಡು ಎಂಬ ಮಾತಿದೆ. ಕಿರಿಯ ವಯಸ್ಸಿಿನಲ್ಲಿ ಮಕ್ಕಳಲ್ಲಿರುವ ಆಸಕ್ತಿಿಗೆ ಸರಿಯಾಗಿ ನೀರೆರೆದರೆ ಅದು ಉತ್ತಮ ಫಲ ಕೊಡುತ್ತದೆ. ಬೇಕಾದ ಎಲ್ಲಾಾ ವ್ಯವಸ್ಥೆೆ ಕಲ್ಪಿಿಸಿ, ಸರಿಯಾದ ಮಾರ‌್ಗದರ್ಶನ ಕೊಡಿಸಿದರೆ ಯಶಸ್ಸು ಕಟ್ಟಿಿಟ್ಟ ಬುತ್ತಿಿ.  ಇದರ ಜೊತೆಗೆ ಸತತ ಯತ್ನ ಮತ್ತು ತರಬೇತಿ ಹಾಗೂ ಕಠಿಣ ಪರಿಶ್ರಮವಿದ್ದರೆ ಯಾವುದೂ ಅಸಾಧ್ಯ ಎನಿಸುವುದಿಲ್ಲ.
ಇದಕ್ಕೆೆ ಪೂರಕ ಎಂಬಂತೆ ತನ್ನ ಕಿರಿಯ ವಯಸ್ಸಿಿನಲ್ಲೇ ಅಭೂತಪೂರ್ವ ಸಾಧನೆ ಮಾಡಿದ ಸನತ್ ಎಂಬ ಪೋರ ಎಲ್ಲರ ಗಮನ ಸೆಳೆದಿದ್ದಾಾನೆ. ಹೊಸನಗರ ತಾಲೂಕಿನ ಬಿದನೂರು ನಗರದ 14 ವರ್ಷದ ಬಾಲಕ ಸನತ್ 17 ವರ್ಷದ ವಯೋಮಾನದ ಒಳಗಿನ ಅಂತರಾಷ್ಟ್ರೀಯ ಕಬಡ್ಡಿಿ ಪಂದ್ಯಾಾವಳಿಗೆ ಆಯ್ಕೆೆಯಾಗುವ ಮೂಲಕ ಮಲೆನಾಡಿಗೆ ಕೀರ್ತಿ ತಂದಿದ್ದಾಾನೆ.
ಹೊಸನಗರದ ರಾಮಕೃಷ್ಣ ಶಾಲೆಯಲ್ಲಿ 9ನೆಯ ತರಗತಿ ವ್ಯಾಾಸಾಂಗ ಮಾಡುತ್ತಿಿರುವ ಸನತ್, ಕಿರಿವಯಸ್ಸಿಿನಲ್ಲೇ ಕಬಡ್ಡಿಿ ಬಗ್ಗೆೆ ಆಸಕ್ತಿಿ ತೋರಿ ಸತತ ಪರಿಶ್ರಮದ ಮೂಲಕ ಈ ಸಾಧನೆ ಮಾಡಿದ್ದಾಾನೆ. ಇತ್ತೀಚೆಗೆ ಗೋವಾದಲ್ಲಿ ಖೇಲೋ ಇಂಡಿಯಾ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕಬಡ್ಡಿಿ ಪಂದ್ಯಾಾವಳಿಯಲ್ಲಿ ಕಬಡ್ಡಿಿ ತಂಡದ ನಾಯಕನಾಗಿ ಕರ್ನಾಟಕವನ್ನು ಪ್ರತಿನಿಧಿಸಿದ್ದನು. ಅಲ್ಲಿ ತಂಡ ಜಯಗಳಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದ. ಉತ್ತಮ ನಾಯಕತ್ವ ಮತ್ತು ಆಟದಿಂದ ಎಲ್ಲರ ಮನಗೆದ್ದಿದ್ದಾಾನೆ.
ದುಬೈನಲ್ಲಿ ಈ ವರ್ಷದ ನವೆಂಬರ್ 15ರಿಂದ 20ರವರೆಗೆ 17 ವರ್ಷದ ವಯೋಮಾನದ ಒಳಗಿನವರ ಅಂತರಾಷ್ಟ್ರೀಯ ಕಬಡ್ಡಿಿ ಪಂದ್ಯಾಾವಳಿ ನಡೆಯಲಿದ್ದು, ಸನತ್ ಭಾರತವನ್ನು ಪ್ರತಿನಿಧಿಸಲಿದ್ದಾಾನೆ. ಸಂಯುಕ್ತ ಭಾರತೀಯ ಖೇಲ್ ಫೌಂಡೇಶನ್ ಆಯೋಜಿಸಿರುವ ಪಂದ್ಯವಾವಳಿಯಲ್ಲಿ ಸನತ್ ಭಾಗವಹಿಸುತ್ತಿಿರುವ ಬಗ್ಗೆೆ ಆತನ ಪೋಷಕರು ಮತ್ತು ಹೊಸನಗರದ ರಾಮಕೃಷ್ಣ ವಿದ್ಯಾಾಲಯದಲ್ಲಿ ಸಂಭ್ರಮ ಮನೆಮಾಡಿದೆ.
ಸನತ್ ಸಾಧನೆಗೆ ನೆರವಾಗಿದ್ದು ಆತನ ಪೋಷಕರು. ಮೂಡುಗೊಪ್ಪ ಗ್ರಾಾಮಪಂಚಾಯ್ತಿಿಯ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಹೆಚ್.ವೈ.ಸತೀಶ್ ಗೌಡ ಮತ್ತು ಸರೋಜಾ ದಂಪತಿಗಳ ದ್ವಿಿತೀಯ ಪುತ್ರನಾದ ಈತ, ಪೂರ್ವ ಪ್ರಾಾಥಮಿಕ ಮತ್ತು ಪ್ರಾಾಥಮಿಕ ಶಾಲೆಯ ಅವಧಿಯಲ್ಲೂ ಉತ್ತಮ ಕಬಡ್ಡಿಿಯಾಟದಿಂದ ಅಂದೇ ಭರವಸೆ ಮೂಡಿಸಿದ್ದ. ಈಗ ರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಭವಿಷ್ಯದ ಕಬಡ್ಡಿಿ ಆಟಗಾರನಾಗುವ ಎಲ್ಲ ಭರವಸೆಯನ್ನು ಮೂಡಿಸಿದ್ದಾಾನೆ.
  ಪ್ರೊಕಬಡ್ಡಿಿ ಆಟಗಾರನಾಗುವ ಮೂಲಕ ಈ ನಾಡಿಗೆ ಕೀರ್ತಿ ತರುವ ಮಹದಾಸೆಯನ್ನು ಸನತ್ ಹೊತ್ತಿಿದ್ದಾಾನೆ.  ತನ್ನ ಕ್ರೀಡಾ ಬೆಳವಣಿಗೆಗೆ ಆಸರೆಯಾದ ತಂದೆತಾಯಿ, ರಾಮಕೃಷ್ಣ ವಿದ್ಯಾಾಲಯದ ದೈಹಿಕ ಶಿಕ್ಷಕ ನಾಗರಾಜ್ ಮತ್ತು ತರಬೇತುದಾರ ಅಫ್ರೋಜ್ ಅವರ ಕೊಡುಗೆಯನ್ನು ಸ್ಮರಿಸುತ್ತಾಾನೆ.
ತುಂಬಾ ಚಿಕ್ಕಂದಿನಲ್ಲೇ ಕಬಡ್ಡಿಿ ಬಗ್ಗೆೆ ಸನತ್ ತುಂಬಾ ಆಸಕ್ತಿಿ ಹೊಂದಿದ್ದ. ಓದಿನಲ್ಲೂ ಚುರುಕು ಹೊಂದಿರುವ ಆತನಿಗೆ ಕಬಡ್ಡಿಿ ಆಡಲು ಎಲ್ಲಾಾ ಸಹಕಾರ ನೀಡಿದ್ದೇನೆ. ಚಿಕ್ಕವಯಸ್ಸಿಿನಲ್ಲೇ ಈ ಸಾಧನೆ ಮಾಡಿರುವುದು ಹೆಮ್ಮೆೆ ತಂದಿದೆ. ಮುಂದಿನ ಆತನ ಸಾಧನೆಗೆ ಇದೇ ರೀತಿಯ ಸಹಕಾರ ನೀಡುವುದಾಗಿ ಪಾಲಕರು ಹೇಳುತ್ತಾಾರೆ.
  ಮಹತ್ವಾಾಕಾಂಕ್ಷೆ ಇಲ್ಲದೆ ಯಾರೂ ಏನನ್ನೂ ಸಾಧಿಸಲಾರರು ಎಂಬ ಮಾತಿದೆ. ಮಹತ್ತಾಾದುದನ್ನು ಸಾಧಿಸಲು ಯಾರೂ ಪ್ರತ್ಯೇಕವಾಗಿ ಕಾಣಿಸಿಕೊಳ್ಳಬೇಕಿಲ್ಲ. ಪ್ರಬಲ ಇಚ್ಛಾಾಶಕ್ತಿಿ, ಮನೋಬಲ ಮತ್ತು ಆತ್ಮವಿಶ್ವಾಾಸ ಇದ್ದರೆ ಏನನ್ನಾಾದರೂ ಸಾಧಿಸಬಹುದು. ಈ ಎಲ್ಲಾಾ ಗುಣ ಹೊಂದಿರುವ ಸನತ್, ಕಬಡ್ಡಿಿಯ ಉತ್ತಮ ಪ್ರತಿಭೆಯಾಗಿ ಹೊರಹೊಮ್ಮಬೇಕಿದೆ. ಮುಂದೆ ಕರುನಾಡನ್ನು ಮಾತ್ರವಲ್ಲ, ದೇಶವನ್ನು ಪ್ರತಿನಿಧಿಸುವಂತಾಗಬೇಕು. ಪ್ರೊಕಬಡ್ಡಿಿ ಆಟಗಾರನಾಗುವ ಆತನ ಆಶಯ ಈಡೇರಬೇಕಿದೆ.

published on 20-7-2019
..........................................

No comments:

Post a Comment