Saturday 27 July 2019

ದಣಿವಿಲ್ಲದ ಕ್ರೀಡಾಪಟು
ಎಂ. ಆರ್. ಸಣ್ಣನಂಜಮ್ಮ  


ಇವರಿಗೆ 68ರ ಹರಯ. ಕ್ರೀಡಾಕಟೂದಲ್ಲಿ ಇಂದಿಗೂ ಸಾಧನೆ ಮಾಡುತ್ತಲೇ ಇದ್ದಾಾರೆ. ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕಗಳ ರಾಶಿಯನ್ನೇ ಬಾಚಿದ್ದಾಾರೆ. ಇನ್ನೂ ವಿಶೇಷವೆಂದರೆ, ಎರಡು ಬಾರಿ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊೊಂಡು ಈಗ ಮೂರನೆಯ ಬಾರಿಗೆ ತೆರಳಲು ಸನ್ನದ್ಧರಾಗಿದ್ದಾಾರೆ.
ಸಣ್ಣನಂಜಮ್ಮ ಹೆಸರು ಹಿರಿಯರ ಕ್ರೀಡಾಕ್ಷೇತ್ರದಲ್ಲಿ ಪರಿಚಿತವಾದದ್ದು. ಮೂರು ದಶಕಗಳಿಂದ ಅಥ್ಲೆೆಟಿಕ್‌ಸ್‌‌ನಲ್ಲಿ ಸಾಧನೆ ಮಾಡುತ್ತಲೇ ಇದ್ದಾಾರೆ. ಇವರ ಸಾಧನೆಗೆ ಎಂದೂ ವಯಸ್ಸು ಅಡ್ಡಿಿಯಾಗಿಲ್ಲ. ಏಕೆಂದರೆ ಸಾಧನೆಯ ಛಲವನ್ನು ಇನ್ನೂ ಇವರು ಹೊತ್ತಿಿದ್ದಾಾರೆ. ಮನಸ್ಸಿಿದ್ದರೆ ಮಾರ‌್ಗ ಎನ್ನುವ ಇವರು, ತನ್ನ ಸಾಧನೆಗೆ ಇನ್ನೂ ವಯಸ್ಸಾಾಗಿಲ್ಲ ಎಂದು ಚಟಾಕಿ ಹಾರಿಸುತ್ತಾಾರೆ.   
 ಆಗಸ್‌ಟ್‌ 17 ಮತ್ತು 18ರಂದು ರಂದು ಮಲೇಷಿಯಾದಲ್ಲಿ ನಡೆಯುವ ಅಂತರರಾಷ್ಟ್ರೀಯ ನಡಿಗೆ, ಓಟ , ಜಾವೆಲಿನ್ ಸ್ಪರ್ಧೆಗೆ  ಇವರು ಭಾರತದ ಪ್ರತಿನಿಧಿಯಾಗಿ ಆಯ್ಕೆೆಯಾಗಿದ್ದಾಾರೆ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಕರ್ನಾಟಕದಿಂದ ಆಯ್ಕೆೆಯಾದ ಏಕೈಕ ಪ್ರತಿನಿಧಿ ಎನ್ನುವುದು ವಿಶೇಷ. ಎಂ.ಆರ್.ಸಣ್ಣನಂಜಮ್ಮ ಭಾರತ, ಕರ್ನಾಟಕ ಮತ್ತು ಶಿವಮೊಗ್ಗಕ್ಕೆೆ ಕೀರ್ತಿತಂದ ಹಿರಿಯ ಕ್ರೀಡಾಪಟು. ಶ್ರೀಲಂಕಾ ಮತ್ತು ಪೂನಾದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಿಯನ್ನು ಪಡೆದಿದ್ದಾಾರೆ. ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲೂ ಭಾಗವಹಿಸಿ ಹಲವು ರಾಜ್ಯ ಸುತ್ತಿಿದ್ದಾಾರೆ. ಇದರಿಂದ ತನಗೆ ಪ್ರಮುಖ ರಾಜ್ಯಗಳನ್ನು ನೋಡುವ ಅವಕಾಶ ದೊರೆಯಿತು ಎನ್ನುತ್ತಾಾರೆ ಅವರು.
ಸಣ್ಣನಂಜಮ್ಮ ತುಮಕೂರು ಜಿಲ್ಲೆೆ ತುರುವೆಕೆರೆ ತಾಲೂಕಿನ ಮೇಲಿನಬಳಗೆರೆ ಗ್ರಾಾಮದವರು. ಇವರನ್ನು ದಾವಣಗೆರೆಯ ವಾಸಿ ನಾಗಪ್ಪ ಎನ್ನುವವರಿಗೆ ವಿವಾಹ ಮಾಡಿಕೊಡಲಾಗಿತ್ತು. ನಾಲ್ವರು ಹೆಣ್ಣು ಮತ್ತು ಒಬ್ಬ ಮಗನ್ನು ಹೊಂದಿರುವ ಇವರು, ಪತಿಯ ಮರಣಾನಂತರ   ಜೀವನೋಪಾಯಕ್ಕಾಾಗಿ ಹೆಣ್ಣುಮಕ್ಕಳ ಮನೆಯಲ್ಲಿ ವಾಸವಾಗುವ ದೃಷ್ಟಿಿಯಿಂದ ಶಿವಮೊಗ್ಗಕ್ಕೆೆ ಬಂದವರು. ಸದ್ಯ ಹೊಸಮನೆ ಬಡಾವಣೆಯಲ್ಲಿ ಮಗಳ ಮನೆಯಲ್ಲಿದ್ದಾಾರೆ. ಶಿವಮೊಗ್ಗಕ್ಕೆೆ ಬಂದನಂತರ ಹಲವು ಮಹಿಳಾ ಕ್ರೀಡಾಪಟುಗಳ ಪರಿಚಯವಾಗಿ ಅವರ ಒತ್ತಾಾಸೆಯ ಮೇರೆಗೆ ಕ್ರೀಡಾ ತರಬೇತಿ ಪಡೆಯಲು ಮುಂದಾದರು. ಬರಬರುತ್ತ ಆಸಕ್ತಿಿ ಹೆಚ್ಚಾಾಯಿತು. ಹಿರಿಯರಿಗಾಗಿ ವಿಶೆಷ ಕ್ರೀಡಾಕೂಟ ರಾಜ್ಯದಲ್ಲಿ ಪ್ರತಿವರ್ಷ ನಡೆಯುವುದರಿಂದ ಇದರಲ್ಲಿ ಪಾಲ್ಗೊೊಳ್ಳುತ್ತ ತಮ್ಮ ಕ್ರೀಡಾ ಉತ್ಸಾಾಹವನ್ನು ಹೆಚ್ಚಿಿಸಿಕೊಂಡರು.
ಇಂದು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಮಿಂಚುತ್ತಿಿದ್ದಾಾರೆ. ಇವರ ಮನೆಯಲ್ಲಿ ಪದಕಗಳ ರಾಶಿಯೇ ಇದೆ. ನಗರದ ಹತ್ತು- ಹಲವು ಸಂಘಟನೆಗಳು, ಸಾರ್ವಜನಿಕರು ಸನ್ಮಾಾನಿಸಿ, ಗೌರವಿಸಿದ್ದಾಾರೆ. ಸರಳ ಮತ್ತು ಸದಾ ನಗುಮೊಗದ ಜೀವಿಯಾಗಿರುವ ಇವರು, ಈ ವರ್ಷವೂ ಮಲೇಶಿಯಾ ಕ್ರೀಡಾಕೂಟಕ್ಕೆೆ ಆಯ್ಕೆೆಯಾಗುವ ಮೂಲಕ ಜಿಲ್ಲೆೆಗೆ ಹೆಸರು ತಂದಿದ್ದಾಾರೆ. ಆದರೆ ಆರ್ಥಿಕವಾಗಿ ಸಬಲರಲ್ಲದ ಕಾರಣ ಹೋಗಿ ಬರುವ ಖರ್ಚನ್ನು ನಿಭಾಯಿಸಲು ಸಾರ್ವಜನಿಕರ ಮೊರೆ ಹೋಗಿದ್ದಾಾರೆ. ನಗರದ ದಾನಿಗಳು, ಉದ್ಯಮಿಗಳು ನೆರವು ನೀಡುವ ಮೂಲಕ ಇವರ ಕ್ರೀಡಾ ಸಾಧನೆಗೆ ನೆರವಾಗಬೇಕಿದೆ. 
ಇದರಲ್ಲಿ ಭಾಗವಹಿಸಲು ಸುಮಾರು 80 ಸಾವಿರ ರೂಪಾಯಿ ಅವಶ್ಯಕತೆ ಇದೆ. ಸಾರ್ವಜನಿಕರು ಸಂಘ -ಸಂಸ್ಥೆೆಯ ಪ್ರತಿನಿಧಿಗಳು, ಉದಾರ ಮನಸ್ಸಿಿನವರು ಆರ್ಥಿಕ ನೆರವನ್ನು ನೀಡುವುದರ ಮೂಲಕ ಪ್ರೋತ್ಸಾಾಹ ಕೊಡಬೇಕೆಂದು ಅವರು ಮನವಿ ಮಾಡಿದ್ದಾಾರೆ. ದಾನಿಗಳು ಮೊ: 9945516113 ಮೂಲಕ ಇವರನ್ನು ಸಂಪರ್ಕಿಸಬಹುದು.
ಇಷ್ಟೇ ಅಲ್ಲದೆ, ಅವರು ಸಾಮಾಜಿಕ ಚಟುವಟಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾಾರೆ. ಹೊಸಮನೆಯ ಪತಂಜಲಿ ಸಂಸ್ಥೆೆಯ ಸದಸ್ಯರಾಗಿ ಅದರ ಎಲ್ಲಾಾ ಕಾರ‌್ಯಚಟುವಟಿಕೆಯಲ್ಲಿ ಲವಲವಿಕೆಯಿಂದ ಭಾಗವಹಿಸುತ್ತಿಿದ್ದಾಾರೆ. ಇಳಿವಯಸ್ಸಿಿನಲ್ಲಿಯೂ ಯುವಕರು ನಾಚುವಂತೆ ಕೆಲಸ ಮಾಡುತ್ತಾಾರೆ, ಕ್ರೀಡಾಕೂಟದಲ್ಲಿ ಪಾಲ್ಗೊೊಳ್ಳುತ್ತಿಿದ್ದಾಾರೆ. 
published on 27.7. 19
..............................

No comments:

Post a Comment