Monday 18 November 2019

ಪರಿಸರವೇ ಉಸಿರಾಗಿರುವ
ಜಿ. ಎಲ್. ಜನಾರ್ದನ


ಪರಿಸರ ಹೋರಾಟಗಳಲ್ಲಿ ತೊಡಗಿಸಿಕೊಂಡವರು ಜಿಲ್ಲೆೆಯಲ್ಲಿ ಹಲವರಿದ್ದಾಾರೆ. ಆದರೆ, ಪರಿಸರ ಸಂಬಂಧಿ ವಿಚಾರಗಳ ಬಗ್ಗೆೆ ಅತ್ಯಂತ ನಿಖರವಾಗಿ ಮಾತನಾಡುವವರು ವಿರಳ. ಅದರಲ್ಲೂ ಪರಿಸರ ವಿಷಯದ ಸಂಪನ್ಮೂಲ ವ್ಯಕ್ತಿಿಗಳಾಗಿ ರಾಜ್ಯ, ಹೊರರಾಜ್ಯ, ವಿದೇಶಗಳಲ್ಲಿ ವಿಚಾರ ಮಂಡಿಸುವವರು ಇನ್ನೂ ವಿರಳ. ಇಂತಹವರಲ್ಲಿ ಅತ್ಯಂತ ಸರಳ ವ್ಯಕ್ತಿಿತ್ವದ, ಮೃದು, ನಯ-ವಿನಯಕ್ಕೆೆ ಹೆಸರಾದ ಜಿ. ಎಲ್. ಜನಾರ್ದನ ಪ್ರಮುಖರು.
ಸಂತೆಕಡೂರಿನ ಪರಿಸರ ಅಧ್ಯಯನ ಕೇಂದ್ರದ ಕಾರ‌್ಯನಿರ್ವಾಹಕ ನಿರ್ದೇಶಕರಾಗಿ, ಜಿಲ್ಲೆೆಯಲ್ಲಿ ಅನೇಕ ಪರಿಸರ ಕಾರ‌್ಯಕ್ರಮಗಳನ್ನು ಸದಾ ಏರ್ಪಡಿಸುತ್ತ, ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಈ ಬಗ್ಗೆೆ ಜನಜಾಗೃತಿ ಮೂಡಿಸುವಲ್ಲಿ ನಿರತರಾಗಿರುವ ಜನಾರ್ದನ್ ಒಬ್ಬ ಅಪರೂಪದ ವ್ಯಕ್ತಿಿ. ಸದ್ದಿಲ್ಲದೆ ಕೆಲಸ ಮಾಡುವವರು ಅವರು. ಯಾವುದೇ ಸನ್ಮಾಾನ, ಪ್ರಶಸ್ತಿಿ, ಪುರಸ್ಕಾಾರಗಳಿಗೆ ಜೋತುಬೀಳದವರು. ತಾವಾಯಿತು, ತಮ್ಮ ಕೆಲಸವಾಯಿತು ಎನ್ನುತ್ತ ಜೋಳಿಗೆಯನ್ನು ಬಗಲಿಗೇರಿಸಿಕೊಂಡು ಸದಾ ಪರಿಸರಾಸಕ್ತರನ್ನು ಸಂಘಟಿಸಿ ಒಂದಿಲ್ಲೊೊಂದು ಹೋರಾಟದಲ್ಲಿ  ತೊಡಗಿಕೊಂಡಿರುತ್ತಾಾರೆ.
 ಬಿಎಸ್‌ಸಿ ಡಿಪ್ಲೊಮಾ  ಓದಿರುವ ಇವರು, ಆಸಕ್ತಿಿ ಬೆಳೆಸಿಕೊಂಡಿದ್ದು ಮಾತ್ರ ಸಾಂಸ್ಕೃತಿಕ ಪಾರಂಪರಿಕಗಳ ಸಂರಕ್ಷಣೆ, ಪರಿಸರ ಮತ್ತು ಮೌಲ್ಯಯುತ ಶಿಕ್ಷಣದವನ್ನು ಬೆಳೆಸುವುದರಲ್ಲಿ.
ಸಮಾಜ, ಪ್ರಾಾಣಿ  ಮತ್ತು ಭೂಮಿಯ ಮೇಲೆ ವಾತಾವರಣದ ಪರಿಣಾಮದ ಅರಿವು, ಶಾಲೆಗೆ ಹೋಗುವ ವಿದ್ಯಾಾರ್ಥಿಗಳಲ್ಲಿ ಪರಿಸರ ಜಾಗೃತಿ, ಮೂಡಿಸುತ್ತಿಿದ್ದಾಾರೆ. 2007ರಿಂದ ಇಲ್ಲಿಯವರೆಗೆ ಸುಮಾರು 20 ಸಾವಿರ ಮಕ್ಕಳಲ್ಲಿ ಈ ಜಾಗೃತಿ ಉಂಟುಮಾಡುವ ಕೆಲಸ ಮಾಡಿದ್ದಾಾರೆ. ಪರಿಸರ ಸ್ನೇಹಿ ಶಾಲಾ ಕಾರ‌್ಯಕ್ರಮವನ್ನು ಜಿಲ್ಲೆೆಯಿಂದ ಆರಂಭಿಸಿ ಈಗ ರಾಜ್ಯದಾದ್ಯಂತ ಪಸರಿಸಿದ್ದಾಾರೆ.
ಪರಿಸರ ಸಂದೇಶ ಎನ್ನುವ ಮ್ಯಾಾಗಜಿನ್ ಪ್ರಕಟಿಸುತ್ತಿಿದ್ದಾಾರೆ. ಇದನ್ನು ಜಿಲ್ಲೆೆಯ ಎಲ್ಲಾಾ 3 ಸಾವಿರ ಶಾಲೆಗಳಿಗೆ ಮತ್ತು ರಾಜ್ಯದ ಸುಮಾರು 2 ಸಾವಿರ ಶಾಲೆಗಳಿಗೆ ಕಳುಹಿಸುತ್ತಿಿದ್ದಾಾರೆ.
ಬ್ರಹ್ಮಪುತ್ರ, ಕೋಶಿಯಾ ಮತ್ತು ಶರಾವತಿ ನದಿಗಳ ಅಧ್ಯಯನ ಸಮಿತಿಯ ಸದಸ್ಯರಾಗಿ ಅಸ್ಸಾಾಂ, ಬಿಹಾರ್ ಮತ್ತು ಕರ್ನಾಟಕದಲ್ಲಿ ಕೆಲಸ ಮಾಡುತ್ತಿಿದ್ದಾಾರೆ. ಇದರ ಹೊರತಾಗಿ ವಿಶ್ವಬ್ಯಾಾಂಕ್ ಪ್ರಾಾಯೋಜಿತ, ಕರ್ನಾಟಕದಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ಕುರಿತ ಯೋಜನೆಯ ಅಧ್ಯಯನ ಸಮಿತಿಯ ನಿರ್ದೇಶಕರಾಗಿ, ಮರುಭೂಮಿ ಅಭಿವೃಧಿ ಯೋಜನೆಯ ಯೋಜನಾ ನಿರ್ದೇಶಕರಾಗಿ, ಕರ್ನಾಟಕದ ರಾಷ್ಟ್ರೀಯ ಸಾಕ್ಷರತಾ ಮಿಶನ್‌ನ ರಾಜ್ಯ ಸಂಪನ್ಮೂಲ ವ್ಯಕ್ತಿಿಯಾಗಿ, 2009ರಿಂದ ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರದ ಕಾರ‌್ಯನಿರ್ವಾಾಹಕ ನಿರ್ದೇಶಕರಾಗಿ,  ಭಾರತೀಯ ನದಿಗಳ ಅಧ್ಯಯನ ಸಮಿತಿಯ ರಾಜ್ಯ ಸಂಯೋಜಕರಾಗಿ ಕೆಲಸ ಮಾಡುತ್ತಿಿದ್ದಾಾರೆ. 
ಪ್ಯಾಾಲೆಸ್ತೀನಿನಲ್ಲಿ ಜರುಗಿದ ಜಾಗತಿಕ ಸಮಾವೇಶದಲ್ಲಿ ಕರ್ನಾಟಕದ ರೈತರು ಮತ್ತು ಮಾರುಕಟ್ಟೆೆ ಬಗ್ಗೆೆ, ಉತ್ತರಕಾಂಡ ರಾಜ್ಯದಲ್ಲಿ ಜರುಗಿದ ಸಮಾವೇಶದಲ್ಲಿ ಕರ್ನಾಟಕದ ನದಿಯ ಸ್ಥಿಿತಿಗತಿಗಳು, ತುಮಕೂರಿನಲ್ಲಿ ನಡೆದ ಸಮಾವೇಶದಲ್ಲಿ  ನೆಲ ಮತ್ತು ಜಲ ಸಂಪತ್ತು ನಿರ‌್ವಹಣೆ,  ಪಶ್ಚಿಿಮಘಟ್ಟದ ಹೋರಾಟ ಬೆಳೆಸುವಲ್ಲಿ ಚಳವಳಿಗಳ ಪಾತ್ರ, ಜೈವಿಕ ಇಂಧನಗಳ ಅಭಿವೃದ್ಧಿಿ,  ಪಶ್ಚಿಿಮ ಘಟ್ಟಗಳಲ್ಲಿನ ಚಳವಳಿಗಳು ಇವೇ ಮೊದಲಾದವುಗಳ ಬಗ್ಗೆೆ ದೇಶ, ವಿದೇಶ, ವಿವಿಧ ರಾಜ್ಯಗಳಲ್ಲಿ ಪ್ರಬಂಧ ಮಂಡಿಸಿದ್ದಾಾರೆ.
 ಜನಾರ್ದನ ಅವರು, ಇಂಗ್ಲೀಷ್ ಮತ್ತು ಕನ್ನಡದಲ್ಲಿ 9 ಪುಸ್ತಕವನ್ನು ಪ್ರಕಟಿಸಿದ್ದಾಾರೆ. ಅವುಗಳಲ್ಲಿ ಕೆಲವೆಂದರೆ, ಕರುನಾಡ ಹಕ್ಕಿಿಗಳು,  ರಿವರ್ ವ್ಯಾಾಲಿ ಕಲ್ಚರ್ ಇನ್  ಶರಾವತಿ ರಿವರ್, ಇಕೋ ಫ್ರೆೆಂಡ್ಲಿಿ ಸ್ಕೂಲ್ ಗೈಡ್‌ಸ್‌,  ನ್ಯೂಕ್ಲಿಿಯರ್ ಪವರ್ ಪ್ಲಾಾಂಟ್‌ಸ್‌, ಕ, ಕಾ, ಕಿ, ಕೀ, ಕಾಗುಣಿತ ಹಾಡುತ್ತ ಕಲಿಯೋಣ, ಧನ್ವಂತರಿ ಶಾಲಾ ಗೈಡ್  ಮೊದಲಾದವು.
ಇವರ ಇಷ್ಟೆೆಲ್ಲಾಾ ಸಾಧನೆ ಗಮನಿಸಿ ರೋಟರಿ ಇಂಟರ್‌ನ್ಯಾಾಶನಲ್ ಸಂಸ್ಥೆೆ ವೊಕೇಶನಲ್ ಎಕ್‌ಸ್‌‌ಲೆನ್‌ಸ್‌ ಅವಾರ್ಡನ್ನು ನೀಡಿದೆ. ತಮ್ಮ ಇಳಿವಯಸ್ಸಿಿನಲ್ಲೂ ಪರಿಸರದ ಹೋರಾಟಕ್ಕೆೆ ಹೊಸ ಹೆಜ್ಜೆೆಯನ್ನು ಇಡುತ್ತಲೇ ಇದ್ದಾಾರೆ.

published on Nov 16-2019
............................... 

No comments:

Post a Comment