Saturday 23 June 2018

 ಯಕ್ಷಗುರು
ಗಣಪತಿ ಪುರಪ್ಪೆೆಮನೆ





ಸಾಹಿತ್ಯ, ಸಂಗೀತ, ನೃತ್ಯ, ಪ್ರಸಾದನ, ವೀರರಸ ಹೊಮ್ಮಿಿಸುವ ವಾದ್ಯವೃಂದ ಎಲ್ಲವನ್ನೂ ಒಳಗೊಂಡ ಅಪೂರ್ವ ಕಲಾಪ್ರಕಾರ ಯಕ್ಷಗಾನ. ಇದು ನೀಡುವ ಆನಂದ ಆತ್ಮಾಾನಂದ. ಯಕ್ಷಗಾನ ಎಂದಾಕ್ಷಣ ನೆನೆಪಾಗುವುದೇ ಕರಾವಳಿ ಮತ್ತು ಮಲೆನಾಡು. ಮಲೆನಾಡಿನಲ್ಲಿ ಯಕ್ಷಗಾನವನ್ನು ಶಾಸ್ತ್ರೋೋಕ್ತವಾಗಿ ಅಧ್ಯಯನ ಮಾಡಿ ನಡೆಸಿಕೊಂಡು ಹೋಗುತ್ತಿಿರುವವರು ಹಲವರಿದ್ದಾಾರೆ. ಅದನ್ನು ಕಲಿಸಿ, ಮಕ್ಕಳಲ್ಲಿ ಅಥವಾ ನವಪೀಳಿಗೆಯಲ್ಲಿ ಇನ್ನಷ್ಟು ಜಾಗೃತಿ ಮೂಡಿಸುತ್ತಿಿರುವ ಹಲವರು ನಮ್ಮ ಜಿಲ್ಲೆೆಯಲ್ಲಿದ್ದಾಾರೆ. ಅಂತಹವರಲ್ಲಿ ಸಾಗರ ತಾಲೂಕು ಪುರಪ್ಪೆೆಮನೆಯ ಗಣಪತಿ ಹೆಗಡೆ ಒಬ್ಬರು.
ಶಾಲೆಗೆ ಹೋಗುವ ವೇಳೆಯೇ ಯಕ್ಷಗಾನಕ್ಕೆೆ ಮಾರುಹೋದವರು ಗಣಪತಿ ಹೆಗಡೆ. ಜಾನಪದ ಮತ್ತು  ಭಜನೆಯಲ್ಲಿ ಆಸಕ್ತಿಿ ಹೊಂದಿದ್ದ ಇವರು, ಊರಲ್ಲಿದ್ದ ಯಕ್ಷಗಾನದ ಗಾಳಿಗೆ ಮೈಯೊಡ್ಡಿಿದ್ದರಿಂದ ತಾನಾಗಿಯೇ ಅದು ಇವರನ್ನು ಸೆಳೆಯಿತು. ಪರಿಣಾಮವಾಗಿವ, ಹೆಗ್ಗೋೋಡಿನಲ್ಲಿ ಕಲಿಕೆಯನ್ನು ಆರಂಭಿಸಿದರು. ರಾಜ್ಯ ಪ್ರಶಸ್ತಿಿ ಪುರಸ್ಕೃತ ಹೊಸ್ತೋೋಟ ಮಂಜುನಾಥ ಭಾಗ್ವತರ ಮಾರ್ಗದರ್ಶನದಲ್ಲಿ ಕಲಿಕೆ ಆರಂಭಿಸಿ, ಆ ಬಳಿಕ ಉಡುಪಿಯ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ಮಹಾಬಲ ಕಾರಂತರ ಮಾರ್ಗದರ್ಶನಲ್ಲಿ ಇನ್ನಷ್ಟು ತರಬೇತಿ ಪಡೆದರು.
ಯಕ್ಷಗಾನ ನಿರ್ದೇಶನಕೂ ಇಳಿದ ಹೆಗಡೆ ಅವರು, ಕಲಿಕಾ ಶಿಬಿರವನ್ನೂ ಆರಂಭಿಸಿದರು. ತಾಳಮದ್ದಲೆಯಲ್ಲಿ ಅರ್ಥಗಾರಿಕೆ ಮೂಲಕವೂ ಮಿಂಚತೊಡಗಿದರು. ಈ ಎಲ್ಲವುಗಳಿಂದ ಇನ್ನಷ್ಟು ಗಟ್ಟಿಿಯಾದ ಜ್ಞಾಾನವನ್ನು ಪಡೆದು, ಉತ್ತಮ ಕಲಾವಿದರಾಗಿಯೂ ಹೊರಹೊಮ್ಮಿಿದರು.
 ಶಿವಮೊಗ್ಗದಲ್ಲಿ ಯುವಪೀಳಿಗೆಯಲ್ಲಿ ಈ ಕಲೆಯ ಸಂಸ್ಕೃತಿಯನ್ನು ಬಿತ್ತಬೇಕು ಎಂಬ ಮಹತ್ವಾಾಕಾಂಕ್ಷೆ ಹೊಂದಿದ್ದ ಕೆಲವು ಯಕ್ಷಗಾನಾಸಕ್ತರು ಹೆಗಡೆ ಅವರ ಮಾರ್ಗದರ್ಶನದಲ್ಲಿ ಕಲಿಕಾ ಶಿಬಿರ ನಡೆಸಲಾರಂಭಿಸಿದರು. 13 ವರ್ಷದಿಂದ ನಡೆಯುತ್ತಿಿರುವ ಈ ಶಿಬಿರದಲ್ಲಿ ವರ್ಷದಿಂದ ವರ್ಷಕ್ಕೆೆ ಕಲಿಕಾರ್ಥಿಗಳ ಸಂಖ್ಯೆೆ ಏರುತ್ತಲೇ ಇದೆ. ಇದರೊಟ್ಟಿಿಗೆ ಅನೇಕ ಯಕ್ಷ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿಿದ್ದಾಾರೆ. ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ಮಹಿಳೆಯರಿಗೆ ಯಕ್ಷಗಾನ ತರಬೇತಿ ನೀಡಿದ ಕೀರ್ತಿ ಇವರದ್ದು. ಸದ್ಯ ಗೋಪಾಳದಲ್ಲಿ ಮಹಿಳೆಯರಿಗೆ ಮತ್ತು ಸ್ಕೌೌಟ್ ಭವನದಲ್ಲಿ ಬಾಲಕರಿಗೆ ತರಬೇತಿಯನ್ನು ಪ್ರತಿ ಶನಿವಾರ ಮತ್ತು ಭಾನುವಾರ ನೀಡುತ್ತಿಿದ್ದಾಾರೆ. ಪ್ರತಿ ಬ್ಯಾಾಚಿನಲ್ಲೂ ಕನಿಷ್ಠ 25ರಷ್ಟು ಕಲಿಕಾರ್ಥಿಗಳು ಇದ್ದೇ ಇರುತ್ತಾಾರೆ. ಕುಣಿತ, ಮಾತುಗಾರಿಕೆಯನ್ನು ಹೇಳಿಕೊಡುತ್ತಾಾರೆ. ಗಾಜನೂರಿನನ ನವೋದಯ ಶಾಲೆಯಲ್ಲಿ ಸುಮಾರು 4 ವರ್ಷ ತರಬೇತಿ ನೀಡಿದ್ದಾಾರೆ. ಸಾಗರದ ಹೊಂಗಿರಣ ಶಾಲೆಯಲ್ಲಿ ಇಂದಿಗೂ ತರಬೇತಿ ನೀಡುತ್ತ ನೂರಾರು ಮಕ್ಕಳನ್ನು ಯಕ್ಷಲೋಕದತ್ತ ಕರೆತರುತ್ತಿಿದ್ದಾಾರೆ.  
 ಶಿವಮೊಗ್ಗ, ಮಾರುತಿಪುರ, ಸಾಗರದಲ್ಲಿ ಮುಖವರ್ಣಿಕೆ ಶಿಬಿರವನ್ನು ನಡೆಸಿದ್ದಾಾರೆ. ಹೆಗ್ಗೋೋಡಿನ ಕೆ. ವಿ ಸುಬ್ಬಣ್ಣ ಮತ್ತು ತಮ್ಮ ತಂದೆ ರಾಮಪ್ಪ ಪಟೇಲರ ಪ್ರೇರಣೆಯಿಂದ ನಾಟಕ ರಂಗಕ್ಕೂ ಕಾಲಿಟ್ಟ ಗಣಪತಿ, ಸುಮಾರು 40 ವರ್ಷದಿಂದ ಯಕ್ಷಗಾನ ಮತ್ತು ನಾಟಕ ಈ ಎರಡೂ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಿದ್ದಾಾರೆ. ಇವರು ಕಂಸವಧೆ, ಏಕಲವ್ಯ, ವೀರಮಣಿ, ಲವಕುಶ ಮೊದಲಾದ ಹತ್ತಾಾರು ಪ್ರಸಂಗಗಳಲ್ಲಿ ಕೃಷ್ಣ, ಕಿರಾತ, ಭೀಮ, ಬಲರಾಮ, ಭಸ್ಮಾಾಸುರ, ಆಂಜನೇಯ, ಹಾಸ್ಯ, ಸ್ತ್ರೀ ವೇಶವನ್ನು ನಿರ್ವಹಿಸಿದ್ದಾಾರೆ. 
ಯಕ್ಷಗಾನ ಪ್ರದರ್ಶನವನ್ನು ರಾಜ್ಯದಾದ್ಯಂತ ತಮ್ಮ ಶಿಷ್ಯರೊಂದಿಗೆ ನಡೆಸಿಕೊಟ್ಟ ಇವರು, ನೀನಾಸಂ ಜೊತೆ ನಾಟಕದಲ್ಲಿ ಶೇಕ್‌ಸ್‌‌ಪಿಯರ್ ನಾಟಕದ ಸವಕಳಿಯಪ್ಪ, ಶಹಜಹಾನ್‌ದಲ್ಲಿ ದಿಲ್‌ದಾರ್, ಬಾಚಯ್ಯ, ಸೂತ್ರದಾರನ ಪಾತ್ರವನ್ನು ನಿರ್ವಹಿಸಿದ್ದಾಾರೆ. ಸಾಕೇತ ಕಲಾವಿದರ ಸಂಸ್ಥೆೆಯ ಸಂಸ್ಥಾಾಪಕ ಸದಸ್ಯರೂ ಇವರಾಗಿದ್ದಾಾರೆ. ಇವರ ಕಲೆ ಮತ್ತು ಪ್ರದರ್ಶನಕ್ಕೆೆ ಹತ್ತಾಾರು ಪ್ರಶಸ್ತಿಿಗಳು ಲಭ್ಯವಾಗಿವೆ. ವಿವಿಧ ಸಂಘಟನೆಗಳು ಇವರನ್ನು ಗೌರವಿಸಿ ಹರಸಿವೆ.     
ಜಿಲ್ಲೆೆಯಲ್ಲಿ ಉತ್ತಮ ಕಲಾವಿದರನ್ನು ಹುಟ್ಟು ಹಾಕಿ,  ಮುಂದಿನ ಪೀಳಿಗೆಯವರಲ್ಲಿ ಯಕ್ಷಗಾನದ ಆಸಕ್ತಿಿ ಬೆಳೆಸಿ, ಉಳಿಸುವ ಮಹತ್ತರ ಕೆಲಸದಲ್ಲಿ ಹೆಗಡೆ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾಾರೆ.
23.6.20-18
................................................

No comments:

Post a Comment