Saturday 11 August 2018

ಮರೆಯಾಗಿ ಹೋದ 
ಜಯಶೀಲನ್


ಕಲೆ ಎನ್ನುವುದು ನಮ್ಮತನವನ್ನು ಕಳೆದುಕೊಳ್ಳುವ ಮತ್ತು ಕಂಡುಕೊಳ್ಳುವ ಒಂದು ಮಾರ್ಗ ಎಂದು ಆಂಗ್ಲ ವಿದ್ವಾಾಂಸನೊಬ್ಬ ಹೇಳಿದ್ದಾಾನೆ. ಅದರಲ್ಲೂ ಸಂಗೀತಕ್ಕೆೆ ತನ್ನಲ್ಲಿ ನಮ್ಮನ್ನು ಲೀನಮಾಡಿಕೊಳ್ಳುವ ಶಕ್ತಿಿ ಇದೆ. ಇದರಿಂದ ನಾವೇ ಕಳೆದುಹೋದ ಅನುಭವವಾಗುತ್ತದೆ.
 ಒಂದು ದಶಕದ ಹಿಂದಿನವರೆಗೆ ರಸಮಂಜರಿ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿಿ ಹೊಂದಿದ್ದವು. ಇದಕ್ಕೆೆ ಹಾಡುಗಾರನ ಕಂಠಸಿರಿ, ಅದಕ್ಕೆೆ ತಕ್ಕಂತೆ ಕೀ ಬೋರ್ಡ್ ಸಹಿತ ಇತರೇ ವಾದ್ಯ ಪರಿಕರ ನುಡಿಸುವವರ ಕೈಚಳಕ ಕಾರಣವಾಗಿತ್ತು. ಜಯಶೀಲನ್ ಇತ್ತೀಚೆಗೆ ನಮ್ಮನ್ನಗಲಿದ ನಗರದ ಅಪರೂಪದ ಕಲಾವಿದ. ಕೀ ಬೋರ್ಡ್ ಮತ್ತು ರಸಮಂಜರಿಯಲ್ಲಿ ಅವರ ಹೆಸರು ಪ್ರಸಿದ್ಧಿಿ ಮತ್ತು ಎತ್ತರದ ಸ್ಥಾಾನದಲ್ಲಿದೆ.
 ನಾಲ್ಕೈದು ದಶಕಗಳ ಹಿಂದೆಯೇ ಜಿಲ್ಲೆೆ ಮತ್ತು ರಾಜ್ಯಮಟ್ಟದಲ್ಲಿ ರಸಮಂಜರಿಯನ್ನು ಜನರು ಮರೆಯಲಾಗದ ಮತ್ತು ಹುಡುಕಿಕೊಂಡು ಹೋಗುವಂತೆ ಮಾಡಿದವರು ಅವರು. ಬೆಂಗಳೂರು ಹೊರತುಪಡಿಸಿದರೆ ಶಿವಮೊಗ್ಗ ಭಾಗದಲ್ಲಿ ಕೀ ಬೋರ್ಡ ವಾದ್ಯವನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಿ, ಜನಪ್ರಿಿಯಗೊಳಿಸಿದ ಕೀರ್ತಿ ಜಯಶೀಲನ್‌ರದ್ದು. ಅದಕ್ಕಾಾಗಿಯೇ ಕೀ ಬೋರ್ಡ್ ಎಂದರೆ ನೆನೆಪಾಗುವುದು ಜಯಶೀಲನ್ ಹೆಸರು.
ಜಯಶೀಲನ್ ಹುಟ್ಟಿಿದ್ದು ಭದ್ರಾಾವತಿಯಲ್ಲಿ, ಓದಿದ್ದು ತೀರಾ ಕಡಿಮೆಯಾದರೂ ಸಂಗೀತ ಕ್ಷೇತ್ರ ಮಾತ್ರ ಅವರನ್ನು ಕೈಬೀಸಿ ಕರೆಯಿತು. ಬಾಲ್ಯದಿಂದಲೂ ರಸಮಂಜರಿಯತ್ತ ಆಕರ್ಷಣೆಗೆ ಒಳಗಾಗಿದ್ದ ಅವರು, ಅಲ್ಲಿನ ಗೀತಾ ಆರ್ಕೆಸ್ಟ್ರಾಾದಲ್ಲಿ ಕೀ ಬೋರ್ಡ್ ವಾದಕರಾಗಿ ಸೇರಿಕೊಂಡಿದ್ದರು. ಆನಂತರ ಆ ತಂಡ ನಡೆಸುವ ಜವಾಬ್ದಾಾರಿಯೇ ಇವರಿಗೆ ಬಂದಿತು. ಇದರಿಂದ ಹಿಂದಡಿ ಇಡದೆ ತಂಡವನ್ನು ಸಮರ್ಥವಾಗಿ ನಡೆಸಿ ಜನಪ್ರಿಿಯಗೊಳಿಸಿದರು. ಕೀ ಬೋರ್ಡನ್ನು ತಮ್ಮ ಆರ್ಕೆಸ್ಟ್ರಾಾ ಕಾರ್ಯಕ್ರಮಕ್ಕಾಾಗಿ ಬೆಂಗಳೂರಿನಿಂದ ಬಾಡಿಗೆಗೆ ತರಿಸಿಕೊಳ್ಳುತ್ತಿಿದ್ದ ಆ ದಿನದಲ್ಲೂ ಅದರ ಗುಂಗನ್ನು ಹಿಡಿಸಿದವರು ಇವರು.
ಅಲ್ಲಿಂದ ಇತ್ತೀಚಿನವರೆಗೂ ಜಯಶೀಲನ್ ಕಾರ್ಯಕ್ರಮ ಎಂದರೆ ಕಲಾಸಕ್ತರು ತಪ್ಪದೆ ಹಾಜರಿರುತ್ತಿಿದ್ದರು. ದಸರಾ, ಗಣಪತಿ ಹಬ್ಬ, ಕನ್ನಡ ರಾಜ್ಯೋೋತ್ಸವ ಇತ್ಯಾಾದಿ ದಿನಗಳಲ್ಲಿ ಅವರ ಕಾರ್ಯಕ್ರಮಕ್ಕೆೆ ಎಲ್ಲಿಲ್ಲದ ಬೇಡಿಕೆ. ಹಾಡುವುದರ ಜೊತೆಗೆ ನಿರೂಪಣೆಯನ್ನು ಅವರು ಮಾಡುತ್ತಿಿದ್ದರು. ಅವರ ಪತ್ನಿಿ ಪ್ರತಿಭಾ ಸಹ ಈ ತಂಡದಲ್ಲಿ ಗಾಯಕಿಯಾಗಿದ್ದರು. ಜಯಶೀಲನ್ ಕ್ಯಾಾಸೆಟ್‌ಗಳನ್ನೂ ಇತ್ತೀಚೆಗೆ ಬಿಡುಗಡೆ ಮಾಡಿದ್ದರು. ದೂರದರ್ಶನದಲ್ಲಿ ಇವರ ರಸಮಂಜರಿ ಪ್ರಸಾರವಾಗಿದೆ. ಎಲ್ಲೆೆಡ ಜನಪ್ರಿಿಯತೆಯನ್ನು ಗಳಿಸಿದ್ದರಿಂದ ಇವರಿಗೆ  ಹಬ್ಬ-ಹರಿದಿನಗಳಲ್ಲಿ ಒತ್ತಡದ ಕಾರ್ಯಕ್ರಮವಿರುತ್ತಿಿತ್ತು. ಆರ್ಕೆಸ್ಟ್ರಾಾದಿಂದಲೇ ಜೀವನ ನಿರ್ವಹಣೆ ಮಾಡುತ್ತಿಿದ್ದ ಇವರು ತಮ್ಮ ಮಕ್ಕಳಲ್ಲೂ ಈ ಕಲೆ ಹರಿಯುವಂತೆ ಮಾಡಿದ್ದಾಾರೆ.
ಇವರ ಪುತ್ರ ದೀಪಕ್ ರಾಜ್ಯ, ರಾಷ್ಟ್ರ ಮಟ್ಟದ ಕೀ ಬೋರ್ಡ್ ವಾದಕ. ಹಲವು ಟಿವಿ ಶೋಗಳಿಗೆ ಇಂದಿಗೂ ಇವರೇ ಕೀ ಬೋರ್ಡ್ ಪ್ರಧಾನ ವಾದಕರು. ವಿದೇಶದಲ್ಲೂ ತಮ್ಮ ಕೀ ಬೋರ್ಡ್ ಕೈಚಳಕ ತೋರಿ ಬಂದಿದ್ದಾಾರೆ. ಮಗಳು ಅನಿತಾ ವಿವಾಹಿತೆಯಾದರೂ ಗೀತಾ ಆರ್ಕೆಸ್ಟ್ರಾಾ ಮುನ್ನಡೆಸುತ್ತಿಿದ್ದಾಾರೆ. ಇನ್ನೊೊಬ್ಬ ಪುತ್ರ ಮೋನಿಕ್ ಸಹ ಹಾಡುಗಾರ. ಹೀಗೆ ಸುಮಾರು 50 ವರ್ಷದಿಂದ ಇಡಿ ಕುಟುಂಬವೇ ಆರ್ಕೆಸ್ಟ್ರಾಾದಲ್ಲಿ ತೊಡಗಿಸಿಕೊಂಡಿದೆ. ಇಷ್ಟಾಾದರೂ ಯಾವುದೇ  ಹಮ್ಮು-ಬಿಮ್ಮು ಇಲ್ಲದೆ ಸಜ್ಜನಿಕೆ ಸಾಕಾರಮೂರ್ತಿಯಾಗಿದ್ದರು ಜಯಶೀಲನ್.
ತಮ್ಮ ತಂಡದಲ್ಲಿ ಕೆಲಸ ನಿರ್ವಹಿಸಿದ ಅನೇಕ ವಾದಕರು ಮತ್ತು ಹಾಡುಗಾರರಿಗೆ ಬದುಕು ಕಟ್ಟಿಿಕೊಳ್ಳುವಲ್ಲಿ ನೆರವಾಗಿದ್ದ ಜಯಶೀಲನ್, ಯಾವ ಪ್ರಚಾರಕ್ಕೂ, ಸನ್ಮಾಾನಕ್ಕೂ, ಹಣ ಸಂಪಾದನೆಗೂ ಆಸೆ ಪಡಲಿಲ್ಲ. ಸಂಘ-ಸಂಸ್ಥೆೆಗಳು ಅವರ ಪ್ರತಿಭೆಯನ್ನು ಗುರುತಿಸಿ ಸನ್ಮಾಾನ, ಗೌರವ ನೀಡಿವೆ. ಯಾವತ್ತೂ ಇಂತಿಷ್ಟೇ ಹಣ ನೀಡಬೇಕೆಂದು ಕಾರ್ಯಕ್ರಮ  ಪ್ರಾಾಯೋಜಕರಿಗೆ ಹೇಳಿದವರಲ್ಲ. ಕನ್ನಡ, ತಮಿಳು, ದೇವರನಾಮ, ದೇಶಭಕ್ತಿಿಗೀತೆಗಳನ್ನು ಸುಮಧುರ ಕಂಠದಲ್ಲಿ ಹಾಡುವ ಮೂಲಕ ಜನಮನಗೆದ್ದಿದ್ದ ಈ ಅಪೂರ್ವ ಗಾಯಕ ಇನ್ನು ನೆನೆಪು ಮಾತ್ರ. 
published on 11th Aug.2018
.....................................

No comments:

Post a Comment