Thursday 23 August 2018

ಶೌರ್ಯ ಪ್ರಶಸ್ತಿಿಗೆ
ನಿಶಾಂತ್


 ನಿನ್ನಿಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದು ತಿಳಿದುಕೊಂಡಿರುವೆಯೋ ಅದನ್ನು ಸಾಧಿಸು ಎಂದು ರೂಸ್‌ವೆಲ್‌ಟ್‌ ಹೇಳಿದ ಮಾತಿದೆ. ನಾವು ಸಾಧ್ಯವಿಲ್ಲ ಎಂದು ಅರಿತು ಸುಮ್ಮನಿದ್ದರೆ ಏನನ್ನೂ ಸಾಧನೆ ಮಾಡಲಾಗುವುದಿಲ್ಲ. ಆದರೆ ಕೆಲವೊಮ್ಮೆೆ ಸಂದರ್ಭ ನಮ್ಮನ್ನು ಅಂತಹ ಸಾಧನೆಗೆ ತಳ್ಳುತ್ತದೆ.
ನಿಶಾಂತ್ 9 ವರ್ಷದ ಬಾಲಕ. 2015ರಲ್ಲಿ ಈತ ಬಾವಿಗೆ ಬಿದ್ದಿದ್ದ ತನ್ನ ತಂಗಿಯನ್ನು ಕಾಪಾಡಿ ಕೇಂದ್ರ  ಗೃಹ ಸಚಿವಾಲಯ ಕೊಡಮಾಡುವ ಶೌರ್ಯ ಪ್ರಶಸ್ತಿಿಗೆ ಭಾಜನನಾಗಿದ್ದಾಾನೆ. ರಿಪ್ಪನ್‌ಪೇಟ್ ಸಮಿಪದ ಕಲ್ಲೂರು ಸಮೀಪದ ಯಾಲಕ್ಕಿಿಕೊಪ್ಪ ವಾಸಿ ಉಮಾಕಾಂತ್ ಮತ್ತು ಶುಭಾ ಅವರ ಪುತ್ರ ನಿಶಾಂತ್. ಈ ದಂಪತಿಗೆ ನಿಶಾಂತ್ ಹೊರತಾಗಿ ತಂಗಿ ಇದ್ದಾಾಳೆ. ಮೂರು ವರ್ಷದ ಹಿಂದೆ ಗಣೇಶ ಚವತಿಯ ಸಂದರ್ಭದಲ್ಲಿ  ಮನೆಯಲ್ಲಿ ಗಣಪತಿ ತಂದು ಪೂಜಿಸಿ ನೀರಿಗೆ ಬಿಟ್ಟಿಿದ್ದರು. ಇದನ್ನೇ ಅನುಕರಣೆ ಮಾಡುವ ಆಟವಾಡುತ್ತ ಅಣ್ಣ-ತಂಗಿ ಮನೆ ಸಮೀಪವಿರುವ ತೆರೆದ ಕೃಷಿ ಹೊಂಡಕ್ಕೆೆ ಗಣಪನನ್ನು ಬಿಡಲು ತೆರಳಿದ್ದ ವೇಳೆ ತಂಗಿ ಆಯತಪ್ಪಿಿ 8 ಅಡಿ ಆಳದ ಬಾವಿಗೆ ಬಿದ್ದಿದ್ದಳು. ಕೂಡಲೇ ನಿಶಾಂತ್ ತಾನು ಸಹ ಬಾವಿಗೆ ಅಡ್ಡವಾಗಿ ಹಾಕಲಾಗಿದ್ದ ಸಿಮೆಂಟ್ ಕಂಬವನ್ನು ಒಂದು ಕೈಯ್ಯಲ್ಲಿ ಹಿಡಿದುಕೊಂಡು ಇನ್ನೊೊಂದು ಕೈಯ್ಯಲ್ಲಿ ಮುಳುಗುತ್ತಿಿದ್ದ ತಂಗಿಯನ್ನು ಹಿಡಿದುಕೊಂಡು  ಜೀವ ರಕ್ಷಣೆಗಾಗಿ ಸುಮಾರು 10 ನಿಮಿಷಗಳ ಕಾಲ ಯತ್ನಿಿಸಿದ್ದ. ನಂತರ ಆತನ ಕೂಗು ಕೇಳಿ ಮನೆಯವರು ಓಡಿ ಬಂದು ಇಬ್ಬರನ್ನು ಕಾಪಾಡಿದ್ದರು.
ನಿಶಾಂತ್ ಇದರಿಂದ ಹೆದರಿ ವಾರಗಟ್ಟಲೆ ಯಾರೊಂದಿಗೂ ಮಾತನಾಡುತ್ತಿಿರಲಿಲ್ಲ. ಅಷ್ಟೇ ಏಕೆ ಪೊಲೀಸರು ಬಂದಿದ್ದಕ್ಕೆೆ ಓಡಿಹೋಗಿ ಅಡಗಿಕೊಂಡಿದ್ದ. ತನ್ನಿಿಂದ ಅಪರಾಧವಾಯಿತೆಂಬ ಭಾವನೆಯಲ್ಲಿದ್ದ ಆತನನ್ನು ಸರಿದಾರಿಗೆ ತರಲು ಮನೆಯವರು ಸುಮಾರು 15 ದಿನಗಳ ಕಾಲ ಪ್ರಯತ್ನಿಿಸಿದ್ದರು.
ಈತನ ಶೌರ್ಯದ ಬಗ್ಗೆೆ ರಾಜ್ಯ ಸರ್ಕಾರಕ್ಕೆೆ  ವರದಿ ಕೊಡಲಾಗಿತ್ತು. ರಾಜ್ಯವು ಕೇಂದ್ರಕ್ಕೆೆ ಪತ್ರಕ್ಕೆೆ ಬರೆದು ಶೌರ್ಯ ಪ್ರಶಸ್ತಿಿಗೆ ಶಿಫಾರಸು ಮಾಡಿತ್ತು.  ಈ ಹಿನ್ನೆೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಒಂದು ಲಕ್ಷ ರೂ. ನಗದು ಬಹುಮಾನದೊಂದಿಗೆ  ಒಂದು ಪ್ರಶಸ್ತಿಿ ಪತ್ರ, ಸ್ಮರಣಿಕೆ ನೀಡಿದೆ. ಈ ಪ್ರಶಸ್ತಿಿಯನ್ನು ಕಳೆದ ವಾರ ವಿಧಾನಸೌಧದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ನಿಶಾಂತ್ ಕುಟುಂಬದವರನ್ನು ಬರಮಾಡಿಕೊಂಡು ಪ್ರದಾನ ಮಾಡಿದ್ದಾಾರೆ. 
ಅಂದು ತನ್ನಿಿಂದ ತಂಗಿಯನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಆತ ಅರಿತು ಸುಮ್ಮನಿದ್ದರೆ ತಂಗಿ ಬದುಕುಳಿಯುತ್ತಿಿರಲಿಲ್ಲ. ಜೊತೆಗೆ ಈತನ ಶೌರ್ಯವೂ ಪ್ರಕಟವಾಗುತ್ತಿಿರಲಿಲ್ಲ. ಆದರೆ ಹಿಂದೆ-ಮುಂದೆ ಗಮನಿಸದೆ ನೀರಿಗಿಳಿದು ಒಡಹುಟ್ಟಿಿದವಳನ್ನು ಕಾಪಾಡಿ ಎಲ್ಲರ ಕಣ್ಮಣಿಯಾಗಿದ್ದಾಾನೆ.
ಈತ ಹೆದ್ದಾಾರಿಪುರದ ರಾಮಕೃಷ್ಣ ಶಾಲೆಯಲ್ಲಿ ಓದುತ್ತಿಿದ್ದಾಾನೆ. 2015ರಲ್ಲೇ ಈತನ ಸಾಹಸ ಗಮನಿಸಿ ಅನೇಕರು ಪ್ರೋತ್ಸಾಾಹಿಸಿದ್ದಾಾರೆ. ಮುಂಬೈನಿಂದಲೂ ಒಬ್ಬರು ಪತ್ರ ಬರೆದು ಸಾಹಸವನ್ನು ಕೊಂಡಾಡಿದ್ದರು. ಇದಾದ ಬಳಿಕ ಸನ್ಮಾಾನ, ಮಾಡಿ ಹಲವರು ಕೊಂಡಾಡಿದ್ದಾಾರೆ. ಜಿಲ್ಲಾಾ ಪೊಲೀಸ್ ವರಿಷ್ಠ ಅಭಿನವ್ ಖರೆ ಮೊನ್ನೆೆ ತಮ್ಮ ಕಚೇರಿಗೆ ಬಾಲಕನನ್ನು ಕರೆಯಿಸಿ ಗೌರವಿಸಿದ್ದಾಾರೆ. ಜೊತೆಗೆ ಬರುವ ಆಗಸ್‌ಟ್‌ 15ರಂದು ಸ್ವಾಾತಂತ್ರ್ಯೋೋತ್ಸವ ಸಂದರ್ಭದಲ್ಲಿ ಜಿಲ್ಲಾಾ ಮಟ್ಟದ ಕಾರ್ಯಕ್ರಮದಲ್ಲಿ ಗೌರವಿಸವಲಾಗುವುದು ಎಂದು ಆತನ ಕುಟುಂಬದವರಿಗೆ ತಿಳಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬದ ನಿಶಾಂತ್, ಕಲಿಕೆಯಲ್ಲಿ ಸದಾ ಚುರುಕು, ಆದರೆ ಅಷ್ಟೇ ಕಿಲಾಡಿ ಎನ್ನುವ ಈತನ ಅಜ್ಜ ನಾಗೇಂದ್ರಪ್ಪ, ಈತನ ಶೌರ್ಯ ಈಗ ಉಳಿದ ಬಾಲಕರಿಗೆ ಮಾದರಿಯಾಗಿದೆ ಎನ್ನುತ್ತಾಾರೆ.
 ಇಂತಹ ಸಾಹಸಿಯನ್ನು ಸಂಘ-ಸಂಸ್ಥೆೆಗಳು ಮುಂದೆಬಂದು ಗೌರವಿಸಿ ಪುರಸ್ಕರಿಸಬೇಕಿದೆ. 
published on 18 aug.2018
................................  

No comments:

Post a Comment