Tuesday 7 August 2018

ಸಂಗೀತ ನಿರ್ದೇಶಕನಾದ
  ಋತ್ವಿಿಕ್ ಮುರಳೀಧರ


ನಾವು ಅಂದುಕೊಂಡಿದ್ದಕ್ಕಿಿಂತ ಹೆಚ್ಚಿಿನ ಬುದ್ಧಿಿಮತ್ತೆೆ, ಧೈರ್ಯ ನನ್ನಲ್ಲಿದೆ ಎಂಬ ನಂಬಿಕೆ ನಮ್ಮಲ್ಲಿದ್ದರೆ ಮಾತ್ರ ಯಾವುದೇ ಕೆಲಸವನ್ನು ಸುಲಭವಾಗಿ ಸಾಧಿಬಹುದು. ಅಂದರೆ ನಮ್ಮಲ್ಲಿರುವ ಶಕ್ತಿಿ ಬಗ್ಗೆೆ ಆತ್ಮವಿಶ್ವಾಾಸ ಇರಬೇಕು.
ಸಂಕಷ್ಟಕರ ಗಣಪತಿ ಎಂಬ ಕನ್ನಡ ಚಲನಚಿತ್ರ ಬಿಡುಗಡೆಯಾಗಿದೆ. ಇದರ ಟ್ರೇಲರ್ ಯೂಟ್ಯೂಬ್‌ನಲ್ಲಿ ಭಾರಿ ಜನಪ್ರಿಿಯವಾಗಿದೆ. ಸುಮಾರು 2 ಲಕ್ಷ ಜನರು ಇದನ್ನು ಯೂಟ್ಯೂಬ್‌ನಲ್ಲೇ ವೀಕ್ಷಿಸಿದ್ದಾಾರೆ. ಈ ಸಿನಿಮಾಕ್ಕೆೆ ಸ್ವತಂತ್ರವಾಗಿ ಸಂಗೀತ ನಿರ್ದೇಶನ ಮಾಡಿ ಅದರ ಗೀತೆಗಳು ಹೆಸರಾಗುವಂತೆ ಮಾಡಿದವರು ಶಿವಮೊಗ್ಗದ ಸಂಗೀತಗಾರ ಮತ್ತು ಹಾಡುಗಾರ ಋತ್ವಿಿಕ್ ಮುರಳೀಧರ. ಈ ಚಿತ್ರದ ನಿರ್ದೇಶಕ ಅರ್ಜುನ್‌ಕುಮಾರ್ ಸಹ ಶಿವಮೊಗ್ಗದ ವಿನೋಬನಗರದವರು.
ಕುವೆಂಪು ರಸ್ತೆೆಯಲ್ಲಿರುವ ಶಂಕರ್ ಸೈಕಲೋತ್ಸವದ ಮಾಲಕರಾದ ಮುರಳೀಧರ ಅವರ ಪುತ್ರರಾಗಿರುವ ಋತ್ವಿಿಕ್, ಬಾಲ್ಯದಲ್ಲೇ ಸಂಗೀತಕ್ಕೆೆ ಮನಸೋತವರು. ಅವರ ತಾಯಿ ಆರತಿ ವಿಶೇಷವಾಗಿ ಮಗನ ಸಂಗೀತ  ಆಸೆಗೆ ನೀರೆರೆದವರು. ಶಾಸ್ತ್ರೀಯ ಸಂಗೀತದ ಮೂಲಕ ಈ ಕ್ಷೇತ್ರಕ್ಕೆೆ ಅಡಿಯಿಟ್ಟ ಋತ್ವಿಿಕ್, ಜಯಶ್ರೀ ನಾಗರಾಜ್ ಮತ್ತು ಗುರುಗುಹದ ಶೃಂಗೇರಿ ನಾಗರಾಜ್ ಅವರ ಶಿಷ್ಯರಾಗಿ  ಕರ್ನಾಟಕ ಸಂಗೀತವನ್ನು ಕಲಿತರು. ಆನಂತರ ವಿವಿಧ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡುವ ಮಟ್ಟಿಿಗೆ ಬೆಳೆದು ನಗರದಲ್ಲಿ ಹೆಸರಾಂತ ಗಾಯಕರಲ್ಲೊೊಬ್ಬರಾದರು. ಸಂಗೀತ ನಿರ್ದೇಶಕ ಆರ್. ಡಿ. ಬರ್ಮನ್ ಹಾಗೂ ಎ.ಆರ್. ರೆಹಮಾನ್ ಇವರಿಗೆ ರೋಲ್ ಮಾಡೆಲ್. 
ಋತ್ವಿಿಕ್ ಹೆಸರು ಶಿವಮೊಗ್ಗದಲ್ಲಿ ಪರಿಚಿತ. ನಗರದ ಬಹಳಷ್ಟು ಸಂಗೀತ ಕಾರ್ಯಕ್ರಮಗಳಲ್ಲಿ  ಅವರು ಪಾಲ್ಗೊೊಂಡು ತಮ್ಮ ಕಂಠಸಿರಿಯನ್ನು ಮೆರೆದಿದ್ದಾಾರೆ. ಆದರೆ ಇದೇ ಮೊದಲ ಬಾರಿ ಪಕ್ಕಾಾ ಕಮರ್ಷಿಯಲ್ ಸಿನಿಮಾಕ್ಕೆೆ ಸಂಗೀತ ನಿರ್ದೇಶನ ಮಾಡಿದ್ದಾಾರೆ. ನಗರದ ಎಜುರೈಟ್ ಕಾಲೇಜಿನಲ್ಲಿ ಬಿಬಿಎಂ ಮುಗಿಸಿದ ನಂತರ ಬೆಂಗಳೂರಿನಲ್ಲಿ ಎಂಬಿಎ ಓದಲು ಹೋದಾಗ  ಸಿನಿಮಾ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಋತ್ವಿಿಕ್ ಮಾಡಿದ ಪ್ರಯತ್ನ ಅಷ್ಟಿಿಷ್ಟಲ್ಲ. ಎಲೆಕ್ಟ್ರಾಾನಿಕ್‌ಸ್‌ ಮ್ಯೂಸಿಕ್‌ಸ್‌ ಕಲಿತು ನಿಧಾನವಾಗಿ ವೀಡಿಯೊ ಜಿಂಗಲ್‌ಸ್‌ ಮತ್ತು ಸಣ್ಣ ಜಾಹೀರಾತುಗಳಿಗೆ ಸಂಗೀತ ನೀಡಲಾರಂಭಿಸಿದರು. ಇಲ್ಲಿ ತಮ್ಮನ್ನು ಗುರುತಿಸಿಕೊಂಡ ಅವರು ಯುವಕರ ತಂಡ ಕಟ್ಟಿಿ ಪನ್ಮಂಡ್ರಿಿ ಕ್ರಾಾಸ್ ಎಂಬ ಕಿರುಚಿತ್ರ ನಿರ್ಮಿಸಿದರು. ಇದಕ್ಕೆೆ ಪ್ರಶಸ್ತಿಿ ಸಹ ಬಂದಿತು.
ಇಲ್ಲಿಂದ ಸ್ಯಾಾಂಡಲ್‌ವುಡ್‌ನಲ್ಲಿ ಅವಕಾಶದ ಬಾಗಿಲು ತೆರೆಯಿತು. ಸಂಕಷ್ಟಕರ ಗಣಪತಿ ಚಿತ್ರಕ್ಕೆೆ ಪೂರ್ಣಪ್ರಮಾಣದ ನಿರ್ದೇಶಕರಾಗಿ ಹಾಗೂ ಹಿನ್ನೆೆಲೆ ಸಂಗೀತಗಾರರಾಗಿ ಕೆಲಸ ಮಾಡುವ ಮೂಲಕ ಹೊಸ ಇನ್ನಿಿಂಗ್‌ಸ್‌ ಆರಂಭಿಸಿದ್ದಾಾರೆ. ಇದಕ್ಕಾಾಗಿ ಸುಮಾರು 35 ವಿಭಿನ್ನ ಟ್ಯೂನ್‌ಗಳನ್ನು ಹಗಲಿರುಳು ಶ್ರಮಿಸಿ ರಚಿಸಿದರು. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಹೆಸರಾಂತ ಗಾಯಕರು ಈ ಸಂಗೀತಕ್ಕೆೆ ಧ್ವನಿಯಾಗಿದ್ದಾಾರೆ.
ಈ ಹಿಂದೆ ದಿ ಗ್ರೇಟ್ ಸ್ಟೋೋರಿ ಆಫ್ ಸೋಡಾಬುಡ್ಡಿಿ ಎಂಬ ಸಿನಿಮಾಕ್ಕೂ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿರುವ ಋತ್ವಿಿಕ್, ವಿಭಿನ್ನ ಹಾಗೂ ವಿಶಿಷ್ಟ ಸಂಗೀತವನ್ನು ಜನರಿಗೆ ನೀಡಬೇಕೆನ್ನುವ ಗುರಿ ಹೊಂದಿದ್ದಾಾರೆ. ನಾವು ನೀಡುವ ಸಂಗೀತ ಜನರ ಮನಸ್ಸಿಿನಲ್ಲಿ ಅಚ್ಚಳಿಯದೆ ಉಳಿಯಬೇಕು ಎನ್ನುವುದು ಅವರ ನಿಲುವು. 
ಸಂಕಷ್ಟಕರ ಗಣಪತಿ ಚಿತ್ರದಲ್ಲಿ ಋತ್ವಿಿಕ್ ಪ್ರತಿಭೆ ನಿಜಕ್ಕೂ ಅಗಾಧವದದ್ದು. ಈ ಚಿತ್ರದ ಹಾಡುಗಳನ್ನು  ಚಿತ್ರತಂಡದವರು ನಟ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಿ  ಕೇಳಿಸಿದಾಗ ಪುನೀತ್ ಸ್ವತಃ ತಾವೇ ಇದರ ಆಡಿಯೋ ಹಕ್ಕನ್ನು ತಮ್ಮ ಪಿಆರ್‌ಕೆ ಬ್ಯಾಾನರಿನಲ್ಲಿ ಖರೀದಿಸಿದ್ದಾಾರೆ. ಜೊತೆಗೆ ಋತ್ವಿಿಕ್ ಅವರ ಸಂಗೀತವನ್ನು ಮೆಚ್ಚಿಿ ಶಹಭಾಷ್ ಎಂದಿದ್ದಾಾರೆ. ಈ ಮೂಲಕ ತಾನೊಬ್ಬ ಪ್ರಸಿದ್ಧ ಸಂಗೀತ ನಿರ್ದೇಶಕನಾಗಬಲ್ಲೆೆ ಎನ್ನುವುದನ್ನು ಅವರು ನಿರೂಪಿಸಿದ್ದಾಾರೆ.
  4 aug.2018
.......................................
 

No comments:

Post a Comment