Tuesday 28 August 2018

ವಾದ್ಯಗಳ ವೈದ್ಯ

ಅಂತೋಣಿ ರಾಜು




 ಸಂಗೀತ ಉಪಕರಣ, ಚರ್ಮವಾದ್ಯ ತಯಾರಿ ಮತ್ತು ದುರಸ್ತಿಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಿರುವವರು ತೀರಾ ವಿರಳ. ಅದರಲ್ಲೂ ಶಿವಮೊಗ್ಗದಲ್ಲಿ ಈ     
ವೃತ್ತಿಿಯಲ್ಲಿರುವವರು ಒಬ್ಬರೇ. ಅವರೆಂದರೆ, ಸುಮಾರು ಐದು ದಶಕದಿಂದ ಜನಮನ ಗೆದ್ದಿರುವ ಟಿ.ಎಸ್. ಅಂತೋನಿ ಆಂಡ್ ಸನ್‌ಸ್‌‌ನ ಮಾಲಕ ಎ. ಜಿ.ಎಸ್ ರಾಜು ಅರ್ಥಾತ್ ಅಂತೋನಿ ರಾಜು.
ರಾಮಣ್ಣ ಶ್ರೇಷ್ಠಿಿ ಪಾರ್ಕ್ ವೃತ್ತದ ಎದುರೇ ಇರುವ ರಾಜು ಅವರ ಅಂಗಡಿ ಗೊತ್ತಿಿಲ್ಲದಿರುವವರು ಅಪರೂಪ.  ಮೂಲತಃ ತಂಜಾವೂರಿನವರಾದ ರಾಜು ಅವರ ತಂದೆ ಅಂತೋನಿ ಊರು ಬಿಟ್ಟು ಬೆಂಗಳೂರಿಗೆ ಬಂದು ವಾದ್ಯ ಪರಿಕರಗಳ ದುರಸ್ತಿಿ ಆರಂಭಿಸಿ ಸಾಕಷ್ಟು ಪಳಗಿದ್ದರು. ಪ್ರಖ್ಯಾಾತ ಸಂಗೀತಗಾರರೆಲ್ಲ ಅವರಿಗೆ ಪರಿಚಿತರಾಗಿದ್ದರು. ಈ ವೇಳೆ ಕೆಲವು ಹಿರಿಯ ಸಂಗೀತಗಾರರು ಮಲೆನಾಡು ಭಾಗದಲ್ಲಿ ವಾದ್ಯಗಳ ದುರಸ್ತಿಿ ಮಾಡುವವರು ಯಾರೂ ಇಲ್ಲದಿರುವುದನ್ನು ಗಮನಕ್ಕೆೆ ತಂದಾಗ 1973ರಲ್ಲಿ ಶಿವಮೊಗ್ಗಕ್ಕೆೆ ಬಂದು ನೆಲೆನಿಂತರು. ಅನಂತರ  ಹೆಚ್ಚೇನೂ ಕೆಲಸ ಇಲ್ಲದಿದ್ದರಿಂದ ಭದ್ರಾಾವತಿಯ ವಿಐಎಸ್‌ಎಲ್‌ನಲ್ಲಿ ಕಾರ್ಮಿಕರಾಗಿಯೂ ದುಡಿಯಲಾರಂಭಿಸಿದರು. 1985ರಲ್ಲಿ ಅಂತೋನಿ ನಿಧನರಾದ ಬಳಿಕ ರಾಜು ಅವರು ಪರಂಪರಾಗತವಾಗಿ ಬಂದ ವಾದ್ಯ ಪರಿಕರಗಳ ದುರಸ್ತಿಿ ಮತ್ತು ತಯಾರಿಕೆಯನ್ನು ಮುಂದುವರೆಸಿ ಶಿವಮೊಗ್ಗದಲ್ಲೇ ಖಾಯಂ ಆಗಿ ನೆಲೆನಿಂತಿದ್ದಾಾರೆ.
ಹೈಸ್ಕೂಲುವರೆಗೆ ಮಾತ್ರ ಓದಿರುವ ರಾಜು, ತಂದೆಯ ಜೊತೆ ಅಂಗಡಿಯಲ್ಲಿ ಕೆಲಸ ಮಾಡುತ್ತಲೇ ವಾದ್ಯಗಳ ತಯಾರಿಕೆ ಮತ್ತು ದುರಸ್ತಿಿ ಕಲಿತವರು. ಮೊದಲು ಇವರ ಅಂಗಡಿ ಗಾಂಧಿಬಜಾರ್ ವಾಸವಿ ದೇವಸ್ಥಾಾನದ ಎದುರಿನ ಮನೆಯೊಂದರಲ್ಲಿತ್ತು. ಸುಮಾರು 10 ವರ್ಷದಿಂದ ರಾಮಣ್ಣ ಶ್ರೇಷ್ಠಿಿ ಪಾರ್ಕ್ ಬಳಿ ಸ್ಥಳಾಂತರಗೊಂಡಿದೆ.
ಹಿಂದೂಸ್ಥಾಾನಿ ವಾದ್ಯಗಳಿಗೆ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮೊದಲಾದೆಡೆಯಿಂದ ಬೇಡಿಕೆ ಇದೆ. ತಮಿಳುನಾಡು, ಬೆಂಗಳೂರು, ಮೈಸೂರು ಮೊದಲಾದೆಡೆ ಕರ್ನಾಟಕ ಸಂಗೀತ ಪರಿಕರಗಳಿಗೆ ಬೇಡಿಕೆ ಇದೆ. ಇತ್ತೀಚಿನ ವರ್ಷಗಳಲ್ಲಿ ಚೀನಾ ಮತ್ತಿಿತರ ದೇಶಗಳು ನಿರ್ಮಿತ ಎಲೆಕ್ಟ್ರಾಾನಿಕ್ ವಾದ್ಯ ಪರಿಕರಗಳು ಮಾರುಕಟ್ಟೆೆಗೆ ಬಂದಿದ್ದರೂ ಪಾರಂಪರಿಕವಾದ ವಾದ್ಯಗಳಿಗೆ ಬೇಡಿಕೆ ತಗ್ಗಿಿಲ್ಲ. ನಾಲ್ಕೈದು ದಶಕಗಳಿಗಿಂತ ಹೆಚ್ಚು ಬೇಡಿಕೆ ಈಗ ಇದೆ. ಜೊತೆಗೆ ದುರಸ್ತಿಿಯೂ ಸುಲಭದ ಕೆಲಸವಲ್ಲ. ಹೊಸ ವಾದ್ಯ ಮಾಡಿಕೊಡುವಂತೆ ಅಕ್ಕಪಕ್ಕದ ರಾಜ್ಯಗಳಿಂದಲೂ ಬೇಡಿಕೆ ಬರುತ್ತಿಿದೆ ಎನ್ನುತ್ತಾಾರೆ ರಾಜು.
ಇವರು ತಯಾರಿಸುವ ಮತ್ತು ದುರಸ್ತಿಿ ಮಾಡುವ ವಾದ್ಯಗಳೆಂದರೆ, ಗಿಟಾರ್, ಟಾಂಗೊ, ತಬಲಾ, ಹಾರ್ಮೋನಿಯಂ, ವಯೋಲಿನ್, ಮೃದಂಗ, ವೀಣೆ, ಜಾನಪದ ವಾದ್ಯಗಳಾದ ನಗಾರಿ, ಉಡ್ಕಿಿ, ಚೌಗಡ, ಡಮರುಗ, ಬುಡಬುಡಿಕೆ, ಚೌಡಿಕೆ ಮೊದಲಾದವು. ಇವುಗಳಿಗೆ ಬೇಕಾಗುವ ಸಾಮಗ್ರಿಿಗಳನ್ನು ಅಂದರೆ ಸ್ಟೀಲ್ ಮತ್ತಿಿತರ ಧಾತುಗಳಿಂದ ಮಾಡಿದ ಡಗ್ಗವನ್ನು ಕುಂಭಕೋಣಂನಿಂದ, ಚರ್ಮವನ್ನು ಮಹಾರಾಷ್ಟ್ರದ ಲಾತೂರ್‌ನಿಂದ ತರಿಸುತ್ತಾಾರೆ.
ಇಲ್ಲಿನ ವಾದ್ಯಗಳು ದೇಶೀಯ ಸಂಸ್ಕೃತಿಯನ್ನು ಬಿಂಬಿಸುವಂತಹವು. ಸಂಗೀತಗಾರರು ಇದನ್ನು ಉಳಿಸಿ ಬೆಳೆಸುವತ್ತ ಗಮನಹರಿಬೇಕು. ಎಲೆಕ್ಟ್ರಾಾನಿಕ್ ವಾದ್ಯ ಎಲ್ಲ ಧ್ವನಿಗಳನ್ನು ಸೃಷ್ಟಿಿಬಹುದು. ಆದರೆ ಭಾರತೀಯ ವಾದ್ಯಗಳನ್ನು ಬಾರಿಸಿದರೆ ಮತ್ತು ಅದರಿಂದ ಪ್ರೇಕ್ಷಕರಿಗೆ ಲಭಿಸುವ ಆನಂದ ಮತ್ತೊೊಂದರಿಂದ ಸಿಗುವುದಿಲ್ಲ ಎನ್ನುತ್ತಾಾರೆ ಅವರು. 
ಈ ವೃತ್ತಿಿಯಿಂದ ರಾಜು ಅವರು ಶ್ರೀಮಂತರಾಗದಿದ್ದರೂ ಜೀವನಕ್ಕೇನೂ ತೊಂದರೆ ಆಗಿಲ್ಲ. ಅಂಗಡಿ ಮತ್ತು ಮನೆಯ ಬಾಡಿಗೆ ಕಟ್ಟಿಿ ನೆಮ್ಮದಿಯಿಂದ ಜೀವಿಸುತ್ತಿಿದ್ದಾಾರೆ. ಸಂಗೀತಗಾರರು ಮತ್ತು ವಾದ್ಯಗಾರರಿಗೆ ರಾಜು ಚಿರಪರಿಚಿತ. ಆದ್ದರಿಂದ ಎಲ್ಲೆೆಡೆಯಿಂದ ದುರಸ್ತಿಿ, ಹೊಸ ವಾದ್ಯಕ್ಕೆೆ ಬೇಡಿಕೆ ಬರುತ್ತಿಿದೆ. ತಾವಾಯಿತು, ತಮ್ಮ ಕೆಲಸವಾಯಿತು ಎಂದು ವೃತ್ತಿಿನಿರತರಾಗಿರುವ ರಾಜು, ಯಾವತ್ತೂ ಪ್ರಚಾರದ ಗೀಳಿಗೆ ಬಿದ್ದವರಲ್ಲ. ನಗರದ ಮತ್ತು ಭದ್ರಾಾವತಿಯ ಹಲವು ಸಂಘ-ಸಂಸ್ಥೆೆಗಳು, ಸಂಗೀತಗಾರರು ಇವರ ಪ್ರತಿಭೆಯನ್ನು ಗುರುತಿಸಿ ಸನ್ಮಾಾನಿಸಿದ್ದಾಾರೆ.
published on 25 aug 2018
................................... 

1 comment: