Monday 22 October 2018

ಬಹುಮುಖೀ ಸಂಗೀತಜ್ಞ
ಮಹೇಂದ್ರ ಗೋರೆ


ಜೀವನದಲ್ಲಿ ನಮ್ಮ ಕನಸಿನಂತೆ ನಾವು ಸಾಗಬೇಕು. ಈ ಸಂದರ್ಭದಲ್ಲಿ ಸಾಕಷ್ಟು ತೊಂದರೆ, ಸಂಕಷ್ಟ, ಸಂಶಯ, ತಪ್ಪುಗಳೆದುರಾಗುತ್ತವೆಯಾದರೂ, ಅವುಗಳನ್ನು ಕಠಿಣ ಶ್ರಮ ಮತ್ತು ಅವಿರತ ಯತ್ನ, ಆತ್ಮ ವಿಶ್ವಾಾಸದಿಂದ ಎದುರಿಸಿದಾಗ ಕನಸು ನನಸಾಗಿ ಯಶಸ್ಸು ನಮ್ಮದಾಗುತ್ತದೆ. ಈ ರೀತಿ ಸಾಧನೆ ಮಾಡಿದವರಲ್ಲಿ ಹಿಂದೂಸ್ಥಾಾನಿ ಮತ್ತು ಕರ್ನಾಟಕ ಸಂಗೀತ ಮತ್ತು ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ರಾಷ್ಟ್ರೀಯ ತೀರ್ಪುಗಾರ ಮಹೇಂದ್ರಕುಮಾರ್ ಗೋರೆ ಒಬ್ಬರು.
 ಮಹೇಂದ್ರ ಗೋರೆ ಯಾವುದೇ ಸಂಗೀತದ ಹಿನ್ನೆೆಲೆಯ ಮೂಲಕ ಈ ಕ್ಷೇತ್ರಕ್ಕೆೆ ಕಾಲಿಟ್ಟವರಲ್ಲ. ಪ್ರಾಾಥಮಿಕ ಶಾಲೆಗೆ ಹೋಗುವಾಗಲೇ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂಬ ಕನಸನ್ನು ಕಂಡಿದ್ದರು. ಇದರಿಂದಾಗಿ ಆಗಲೇ ಹಲವು ಸ್ಪರ್ಧೆಗಳಲ್ಲಿ ಪಾಲ್ಗೊೊಳ್ಳುವ ಅವಕಾಶವನ್ನೂ ಪಡೆಯುತ್ತಿಿದ್ದರು. ಇದನ್ನೇ ಸತತ ಪೋಷಿಸಿಕೊಂಡು ಬಂದ ಅವರು, ಮುಂದೆ ಹಿಂದೂಸ್ಥಾಾನಿ ಸಂಗೀತವನ್ನು ಹುಮಾಯೂನ್ ಹರ್ಲಾಪುರ ಅವರಲ್ಲಿ ಕೆಲವು ಕಾಲ ಅಭ್ಯಸಿಸಿದರು. ಆನಂತರ ಬೆಂಗಳೂರಿನಲ್ಲಿ ಶಿವಾನಂದ ಪಾಟೀಲ್  ಮತ್ತು ಶಿವರಾಜ ಗವಾಯಿಗಳಲ್ಲಿ ಮುಂದುವರೆಸಿದರು. ವಿದ್ಯಾಾರ್ಥಿಯಾಗಿದ್ದಾಾಗಲೇ ಕರ್ನಾಟಕ ಸಂಗೀತವನ್ನೂ ಸಹ ಶಿವಮೊಗ್ಗದಲ್ಲಿ ಶೃಂಗೇರಿ ಎಚ್.ಎಸ್. ನಾಗರಾಜ ಅವರಲ್ಲಿ ಕಲಿತರು. ಮುಂದೆ ಬೆಂಗಳೂರಿಗೆ ಹೆಚ್ಚಿಿನ ಅಧ್ಯಯನಕ್ಕೆೆ ತೆರಳಿದಾಗ ಅಲ್ಲಿಯೂ ಈ ಎಲ್ಲ ಸಂಗೀತ ಪ್ರಕಾರಗಳನ್ನು ಅವಕಾಶ ಸಿಕ್ಕಿಿದಾಗಲೆಲ್ಲ  ಪಡೆದರು. ಐಟಿಐ ಮತ್ತು ಡಿಪ್ಲೋಮಾ ಓದಿದ ಬಳಿಕೆ ಉನ್ನತ ಕಂಪನಿಗಳಲ್ಲಿ ಕೆಲಸಕ್ಕೆೆ ಸೇರಿಕೊಂಡ ಮೇಲೆ ಸಂಗೀತದ ಆಸಕ್ತಿಿ ಇನ್ನಷ್ಟು ಹೆಚ್ಚಿಿತು. ಕೆಲಸಕ್ಕಿಿಂತ ಸಂಗೀತವೇ ಮೇಲೆಂದು ತಿಳಿದು ಕೆಲಸ ಬಿಟ್ಟು ವಾಪಸ್ ಶಿವಮೊಗ್ಗಕ್ಕೆೆ ಬಂದು ಸಾಯಿದೀಪ ಕಲಾವೃಂದ ಎಂಬ ಸಂಸ್ಥೆೆಯನ್ನು ಹುಟ್ಟುಹಾಕಿ ಆ ಮೂಲಕ ವಿದ್ಯಾಾರ್ಥಿಗಳಿಗೆ ಶಿಕ್ಷಣ ನೀಡತೊಡಗಿದರು.
ನಯ, ವಿನಯಕ್ಕೆೆ, ಅಷ್ಟೇ ಸೌಜನ್ಯಕ್ಕೆೆ ಹೆಸರಾದ ಗೋರೆ, ನಗರದ ಬಸವನಗುಡಿಯಲ್ಲಿರುವ ತಮ್ಮ ನಿವಾಸದಲ್ಲೇ 16 ವರ್ಷದಿಂದ ಈ ಸಂಸ್ಥೆೆಯನ್ನು ನಡೆಸುತ್ತಾಾ ನೂರಾರು ವಿದ್ಯಾಾರ್ಥಿಗಳಿಗೆ ಸಂಗೀತವನ್ನು ಕಲಿಸುತ್ತಿಿದ್ದಾಾರೆ. ಜೊತೆಗೆ ತಮ್ಮ ತಂಡದೊಂದಿಗೆ ರಾಜ್ಯ, ಹೊರರಾಜ್ಯದಲ್ಲಿ ಸಾಕಷ್ಟು ಕಾರ್ಯಕ್ರಮ ನೀಡಿದ್ದಾಾರೆ. ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿಬಾಬಾ ಸಂಸ್ಥಾಾನದಲ್ಲಿ ವಿದ್ವಾಾಂಸರಾಗಿ ಕಾರ್ಯನಿರ್ವಹಿಸುತ್ತಿಿದ್ದಾಾರೆ. ಇಲ್ಲಿ ಪ್ರತಿವರ್ಷ ಸಂಗೀತ ಕಛೇರಿ ನೀಡುತ್ತಿಿದ್ದಾಾರೆ. ಉತ್ತಮ ತೀರ್ಪುಗಾರಾಗಿಯೂ ಪರಿಗಣಿತರಾಗಿದ್ದಾಾರೆ. ವಿವಿಧ ಚಾನೆಲ್‌ನವರು ನಡೆಸುವ ಆಡಿಶನ್‌ಗಳಿಗೆ ಇವರು ನಿರ್ಣಾಯಕರಾಗಿ ಆಹ್ವಾಾನಿತರಾಗುತ್ತಾಾರೆ. ರಾಷ್ಟ್ರಮಟ್ಟದ ತೀರ್ಪುಗಾರರಾಗಿ  ತಮ್ಮನ್ನು ಗುರುತಿಸಿಕೊಂಡಿದ್ದಾಾರೆ.
 ವಿವಿಧ ಶಾಲಾ, ಕಾಲೇಜಿನವರು ಜಿಲ್ಲಾಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಡೆಯುವ ಸಂಗೀತ ಸ್ಪರ್ಧೆಗಳಿಗೆ ಇವರಿಂದ ತರಬೇತಿ ಪಡೆಯುವುದು ವಿಶೇಷವಾಗಿದೆ. ಇವರ ಸಂಗೀತ ಮತ್ತು ಗಾಯನ ಕ್ಷೇತ್ರದಲ್ಲಿನ ಸಾಧನೆಯನ್ನು ಗಮನಿಸಿ ದಸರಾ ಪ್ರಶಸ್ತಿಿಯನ್ನು ರಾಜ್ಯ ಸರ್ಕಾರ ನೀಡಿ ಗೌರವಿಸಿದೆ. ಹಾಗೂ ವಿವೇಕಾನಂದ ಮತ್ತು ಪತಂಜಲಿ ಪ್ರಶಸ್ತಿಿಯೂ ಇವರಿಗೆ ದಕ್ಕಿಿದೆ. ಜಿಲ್ಲೆೆಯಲ್ಲಿ ನೂರಾರು ಗೌರವ, ಸನ್ಮಾಾನಗಳಿಗೆ ಭಾಜನರಾಗಿದ್ದಾಾರೆ. ಮೂರು ವರ್ಷಗಳಿಂದ ಜಿಲ್ಲಾಾ ಜಾನಪದ ಪರಿಷತ್‌ನ ಅಧ್ಯಕ್ಷರಾಗಿ, ಧರ್ಮವರ್ಧಿನಿ ಸಂಸ್ಥೆೆಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿಿದ್ದಾಾರೆ.
ಕನ್ನಡ ಮತ್ತು ಹಿಂದಿಯ ಹಳೆಯ ಚಿತ್ರಗೀತೆಗಳನ್ನೊೊಳಗೊಂಡ ಮಧುರ ಮಧುರವಿ ಮಂಜುಳಗಾನ ಕಾರ್ಯಕ್ರಮವನ್ನು ರಾಜ್ಯದ ಅನೇಕ ಸ್ಥಳಗಳಲ್ಲಿ ನಡೆಸಿದ ಕೀರ್ತಿ ಇವರದು. ರಾಜ್ಯದ ಹಲವೆಡೆ, ದಸರಾ, ಗಣೇಶೋತ್ಸವ, ರಾಜ್ಯೋೋತ್ಸವ ಮತ್ತು ಇನ್ನಿಿತರ ಉತ್ಸವಗಳಲ್ಲಿ ಕಾರ್ಯಕ್ರಮ ನೀಡಿದ್ದಾಾರೆ. ಜಾನಪದದಲ್ಲೂ ಹೆಸರು ಮಾಡಿರುವ ಗೋರೆ, ದಿಂಡಿ ಉತ್ಸವಗಳಲ್ಲಿ, ಮರಾಠಿ ಮತ್ತು ಹಿಂದಿ ಭಜನ್‌ಗಳನ್ನು ಹೃನ್ಮನ ತಣಿಸುವಂತೆ ಹಾಡಿ ಜನಮನ ಗೆದ್ದಿದ್ದಾಾರೆ.
13. oct 2018
..................................... 

No comments:

Post a Comment