Monday 22 October 2018

ಅಪೂರ್ವ ಕ್ರೀಡಾ ಸಾಧಕಿ 
ಸುಶ್ಮಿಿತಾ


ಭಾರತದಲ್ಲಿ ನಿಜವಾದ ಪ್ರತಿಭೆಗಳಿರುವುದು ಗ್ರಾಾಮಾಂತರ ಪ್ರದೇಶದಲ್ಲಿ. ಆದರೆ ಅವುಗಳನ್ನು ಹುಡುಕಿ, ಬೆಳಕಿಗೆ ತರುವ ಕೆಲಸ ಆಗಬೇಕಿದೆ. ಬಡತನದಲ್ಲಿರುವ ಅಥವಾ ಅವಕಾಶವಂಚಿತ ಇಂತಹ ಪ್ರತಿಭೆಗಳಿಗೆ ವೇದಿಕೆ ಸಿಕ್ಕಾಾಗ ಮಾತ್ರ ಅವರಲ್ಲಿರುವ ಪ್ರತಿಭೆ ಹೊರ ಜಗತ್ತಿಿಗೆ ತಿಳಿಯಲು ಸಾಧ್ಯವಾಗುತ್ತದೆ. ಶಿವಮೊಗ್ಗ ತಾಲೂಕಿನ ಇಟ್ಟಿಿಗೆಹಳ್ಳಿಿ ಗ್ರಾಾಮದ ವಿದ್ಯಾಾರ್ಥಿನಿಯೊಬ್ಬಳು ಪವರ್ ಲಿಫ್ಟಿಿಂಗ್‌ನಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿಿದ್ದಾಾಳೆ. ಆದರೆ ಪ್ರೋತ್ಸಾಾಹದ ಕೊರತೆಯಿಂದ ಇದನ್ನು ಇನ್ನಷ್ಟು ಎತ್ತರಕ್ಕೆೆ ಕೊಂಡೊಯ್ಯಲು ಸಾಧ್ಯವಾಗದ ಸ್ಥಿಿತಿಯಲ್ಲಿದ್ದಾಾಳೆ.
ಪವರ್ ಲಿಫ್ಟಿಿಂಗ್, ವೇಟ್ ಲಿಫ್ಟಿಿಂಗ್, ಕುಸ್ತಿಿ ಮತ್ತು ಕಬಡ್ಡಿಿಯಲ್ಲಿ ಇವರ ಸಾಧನೆ ಅಪೂರ್ವವಾದುದು. ದೈಹಿಕ ಬಲದಿಂದಲೇ ಆಡುವ ಇಂತಹ ಕ್ರೀಡೆಗಳಲ್ಲಿ ಯುವತಿಯರು ಪಾಲ್ಗೊೊಳ್ಳುವುದು ಸುಲಭದ ಮಾತಲ್ಲ. ಆದರೂ ಉತ್ತಮ ತರಬೇತಿಯಿಂದಲೇ ಈ ಎಲ್ಲ ಸಾಧನೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಲು ತನಗೆ ಸಾಧ್ಯವಾದುದನ್ನು ಅವರು ನೆನೆಪಿಸುತ್ತಾಾರೆ. ಸದ್ಯ ವೈಯಕ್ತಿಿಕವಾಗಿ ಎಲ್ಲ ಚಾಂಪಿಯನ್‌ಶಿಪ್‌ಗಳಲ್ಲಿ ಪಾಲ್ಗೊೊಳ್ಳುತ್ತಿಿದ್ದಾಾರೆ. ಇದಕ್ಕೆೆ ಅವರ ಕುಟುಂಬದವರ ಸಹಕಾರ ಅಪಾರವಾದುದು.
 ಕೃಷಿ ಕುಟುಂಬದಿಂದ ಬಂದಿರುವ ಸುಶ್ಮಿಿತಾ, ನಗರದ ಬಾಪೂಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಸಾಲಿನಲ್ಲಿ ಪದವಿ ಮುಗಿಸಿದ್ದಾಾರೆ. ಓದಿನ ಜೊತೆಗೆ ಕ್ರೀಡಾಕೂಟದಲ್ಲಿ ತುಂಬಾ ಆಸಕ್ತಿಿ ಹಾಗೂ ಹಲವಾರು ಪದಕಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರಕಟಪಡಿಸಿದ್ದಾಾರೆ. ಕಾಲೇಜಿನಲ್ಲಿ ಸುಸಜ್ಜಿಿತ ಜಿಮ್ ಇರುವುದರಿಂದ ಇದರ ಮೂಲಕ ಪವರ್ ಲಿಫ್ಟಿಿಂಗ್‌ನಲ್ಲೂ ತನ್ನನ್ನು ತೊಡಗಿಸಿಕೊಂಡು, ಅದರಲ್ಲೂ ಅಪಾರ ಸಾಧನೆ ಮಾಡಿದ್ದಾಾರೆ.
ಮೊಟ್ಟಮೊದಲ ಬಾರಿಗೆ ಬೆಂಗಳೂರಿನಲ್ಲಿ ಜರುಗಿದ ಪವರ್ ಲಿಫ್ಟಿಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾಾನ ಪಡೆಯುವ ಮೂಲಕ ಕಾಲೇಜಿಗೆ ಮತ್ತು ಕುವೆಂಪು ವಿ.ವಿ.ಗೆ ಕೀರ್ತಿ ತಂದಿದ್ದಾಾರೆ. ಬಳಿಕ ಇನ್ನಷ್ಟು ಶ್ರಮ ವಹಿಸಿ ಕಠಿಣ ತರಬೇತಿ ಪಡೆದು ನಂತರ ಕೇರಳದ ಅಲೆಪ್ಪಿಿಯಲ್ಲಿ ಜರುಗಿದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿಿತಿಯ ಸ್ಥಾಾನದೊಂದಿಗೆ ಗೆದ್ದ ನಂತರ ವೇಟ್ ಲಿಫ್ಟಿಿಂಗ್‌ನಲ್ಲೂ ಭಾಗವಹಿಸಲಾರಂಭಿದರು. ಅಂತರ್ ಕಾಲೇಜು ವೇಟ್ ಲಿಫ್ಟಿಿಂಗ್ ಸ್ಪರ್ಧೆ ಜರುಗಿದಾಗ ಅದರಲ್ಲಿ ತೃತೀಯ ಮತ್ತು ಪವರ್ ಲಿಫ್ಟಿಿಂಗ್‌ನಲ್ಲಿ ದ್ವಿಿತೀಯ ಸ್ಥಾಾನವನ್ನು ಮತ್ತೊೊಮ್ಮೆೆ ಧರಿಸುವ ಮೂಲಕ ಭರವಸೆಯ ಪಟುವಾಗಿ ಹೊರಹೊಮ್ಮಿಿದರು.
 ಹೊಳೆಹೊನ್ನೂರಿನಲ್ಲಿ ಜರುಗಿದ ಅಂತರ್ ಕಾಲೇಜು ಕುಸ್ತಿಿ ಸ್ಪರ್ಧೆಯಲ್ಲಿ ಮೊದಲ ಸ್ಥಾಾನ, 2017ರಲ್ಲಿ ಹರಿಯಾನಾದಲ್ಲಿ ಜರುಗಿದ ಅಖಿಲ ಭಾರತ  ವಿವಿಗಳ  ಕುಸ್ತಿಿ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾಾರೆ. 2018ರಲ್ಲಿ ಬೆಂಗಳೂರಿನಲ್ಲಿ ಜರುಗಿದ ಸ್ಟೇಟ್ ಬೆಂಚ್ ಪ್ರೆೆಸ್ ಪವರ್‌ಲಿಫ್ಟಿಿಂಗ್‌ನಲ್ಲಿ  ಮೊದಲ ಸ್ಥಾಾನ ಗಳಿಸಿದ್ದಾಾರೆ. ಇದೇ ವರ್ಷದ ಆರಂಭದಲ್ಲಿ ಗುಜರಾತಿನಲ್ಲಿ ಜರುಗಿದ ರಾಷ್ಟ್ರೀಯ ಸ್ಟುಡೆಂಟ್ ಒಲಿಂಪಿಕ್‌ಸ್‌‌ನಲ್ಲಿ ಕರ್ನಾಟಕ ತಂಡದಲ್ಲಿ ಭಾಗವಹಿಸಿ ಪ್ರಥಮ ಸ್ಥಾಾನ ಪಡೆದಿದ್ದರು. ಆನಂತರ ಮಲೇಶಿಯಾದಲ್ಲಿ ಜರುಗಲಿರುವ ಅಂತರ ರಾಷ್ಟ್ರೀಯ ಕಬಡ್ಡಿಿಗೆ ಆಯ್ಕೆೆಯಾಗಿದ್ದಾಾರೆ.
ಮಂಗಳೂರಿನಲ್ಲಿ ಜರುಗಿದ ರಾಜ್ಯ ಪವರ್ ಲಿಫ್ಟಿಿಂಗ್‌ನಲ್ಲಿ ಎರಡನೆಯ, ಹುಬ್ಬಳ್ಳಿಿಯಲ್ಲಿ ಜರುಗಿದ ರಾಜ್ಯ ಪವರ್‌ಲಿಫ್ಟಿಿಂಗ್, ಬೆಂಚ್ ಪ್ರೆೆಸ್‌ನಲ್ಲಿ 2ನೆಯ ಮತ್ತು ಮೊದಲನೆಯ ಸ್ಥಾಾನ ಪಡೆದು ಉತ್ತರ ಪ್ರದೇಶದಲ್ಲಿ ಜರುಗಿದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊೊಂಡು ಉತ್ತಮ ಪ್ರದರ್ಶನ ನೀಡಿದ್ದಾಾರೆ. ನವೆಂಬರ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಬೆಂಚ್‌ಪ್ರೆೆಸ್‌ನಲ್ಲಿ ಭಾಗವಹಿಸಲು ಸಕಲ ಸಿದ್ಧತೆ ನಡೆಸಿದ್ದಾಾರೆ.
ಭದ್ರಾಾವತಿಯ ಪ್ರಸಾದ್ ಅವರಲ್ಲಿ ತರಬೇತಿ ಪಡೆಯುತ್ತಿಿರುವ ಸುಶ್ಮಿಿತಾಗೆ ಹಲವಾರು ಸನ್ಮಾಾನ, ಗೌರವಾದರಗಳು ದಕ್ಕಿಿವೆ.  ಇನ್ನಷ್ಟು ಸಾಧನೆಗೆ ಪ್ರಾಾಯೋಜಕರು ಬೇಕಾಗಿದ್ದಾಾರೆ. ನೂರಾರು ಪದಕ, ಪ್ರಶಸ್ತಿಿ ಧರಿಸಿದವಳಿಗೆ ಸಾರ್ವಜನಿಕರ ನೆರವು ಅವಶ್ಯವಿದೆ. ಪ್ರತಿಯೊಂದು ಚಾಂಪಿಯನ್‌ಶಿಪ್‌ಗೂ ಅಪಾರ ಹಣವನ್ನು ವ್ಯಯಿಸಿ ಹೋಗಿಬರಲು ಸಾಧ್ಯವಾಗದ ಕಾರಣ ದಾನಿಗಳ ನೆರವಿಗೆ ಮನವಿ ಮಾಡಿದ್ದಾಾರೆ.
20. oct.2018
.......................................         

No comments:

Post a Comment