Saturday 6 October 2018

ರಕ್ತದಾನದ ಹೀರೋ
ಧರಣೇಂದ್ರ ದಿನಕರ್

ನೀವು ಒಂದು ವೇಳೆ ರಕ್ತದಾನಿಯಾಗಿದ್ದರೆ ಕೆಲವರಿಗೆ ಹೀರೋ ಆಗಿರುತ್ತೀರಿ,ಇನ್ನೂ ಕೆಲವರಿಗೆ ದೇವರ ಸಮಾನರಾಗುತ್ತೀರಿ, ಮತ್ತೂ ಕೆಲವರು ಸಾಯುವವರೆಗೆ ನಿಮ್ಮನ್ನು ಸ್ಮರಿಸುತ್ತಾಾರೆ.
ಶಿವಮೊಗ್ಗದಲ್ಲಿ ಇಂತಹ ರಕ್ತದಾನದ ಹೀರೋ ಒಬ್ಬರಿದ್ದಾಾರೆ. ಅವರೇ, ಸದಾ ಜನರ ಮಧ್ಯೆೆಯೇ ಇರುವ, ಯಾವ ಅಹಮಿಕೆಯೂ ಇಲ್ಲದ ಸರಳ, ಸಜ್ಜನ ಧರಣೇಂದ್ರ ದಿನಕರ್. 93 ಬಾರಿ ರಕ್ತದಾನ ನೀಡಿ, ಹಲವರ ಪಾಲಿಗೆ ಸದಾ ರಕ್ತಪೂರೈಸುವವರಾಗಿರುವ ಧರಣೇಂದ್ರ ಅವರದ್ದು ಎಬಿ ಪೊಸಿಟಿವ್ ರಕ್ತದ ಗುಂಪು, ಕೇವಲ ತಾವು ಮಾತ್ರ ರಕ್ತ ಕೊಡುವುದಲ್ಲದೆ, ತಮ್ಮಂತೆ ಹಗಲು- ರಾತ್ರಿಿ ಎನ್ನದೆ ರಕ್ತ ಕೊಡಲು ಸಿದ್ಧರಿರುವ ಸುಮಾರು 60 ಜನರ ತಂಡವನ್ನು ಅವರು ಬೆಳೆಸಿದ್ದಾಾರೆ.
1986ರಲ್ಲಿ ಪ್ರಪ್ರಥಮ ಬಾರಿ ತುರ್ತಾಗಿ ರೋಗಿಯೊಬ್ಬರಿಗೆ ರಕ್ತ ಬೇಕಿದ್ದರಿಂದ ದಾನ ಮಾಡಿದ ಬಳಿಕ, ಸತತವಾಗಿ ಪ್ರತಿ ಮೂರು ತಿಂಗಳಿಗೊಮ್ಮೆೆ ರಕ್ತ ಕೊಡುತ್ತಲೇ ಬಂದಿದ್ದಾಾರೆ. ಶಿವಮೊಗ್ಗ ಮಾತ್ರವಲ್ಲದೆ, ಅಕ್ಕಪಕ್ಕದ ಜಿಲ್ಲೆೆಗಳಿಂದಲೂ ರಕ್ತ ಬೇಕಾದವರು ಧರಣೇಂದ್ರ ಅವರಿಗೆ ಹಗಲು ರಾತ್ರಿಿ ಎನ್ನದೆ ಕರೆ ಮಾಡುತ್ತಾಾರೆ. ಯಾವುದೇ ವೇಳೆಯಲ್ಲಿ ಕರೆ ಮಾಡಿದರೂ ಅದನ್ನು ಅಷ್ಟೇ ವಿನಯದಿಂದ ಸ್ವೀಕರಿಸಿ ಅವರಿಗೆ ರಕ್ತ ಸಿಗುವಂತೆ ಮಾಡುತ್ತಿಿದ್ದಾಾರೆ. ಇವರೂ ಸಹ ಮಣಿಪಾಲ್, ಬೆಂಗಳೂರಿಗೆ ತರಳಿ ರಕ್ತದಾನ ಮಾಡಿದ್ದಾಾರೆ.
ಜಿಲ್ಲೆೆಯಲ್ಲಿ ರಕ್ತದಾನವನ್ನು ಒಂದು ಆಂದೋಲನವನ್ನಾಾಗಿ ಮಾಡಿದವರು ಇವರು. ಇದರಿಂದಾಗಿ ರಕ್ತದಾನದಲ್ಲಿ ಜಿಲ್ಲೆೆ ರಾಜ್ಯದಲ್ಲೇ ಎರಡನೆಯ ಸ್ಥಾಾನದಲ್ಲ್ಲ್‌ಿರುವಂತಾಗಿದೆ.  ರಕ್ತದಾನವನ್ನು ಅಷ್ಟು  ಜನಪ್ರಿಿಯಗೊಳಿಸಿದ ಕೀರ್ತಿ ಇವರದ್ದು. ರಕ್ತದಾನಿಗಳ ಸಂಖ್ಯೆೆ ಹೆಚ್ಚುತ್ತ ಹೋದಂತೆ ರಕ್ತ ಶೇಖರಿಸಿಡಲು ಬೇಕಾದ ವೈಜ್ಞಾಾನಿಕ ವ್ಯವಸ್ಥೆೆ ಮಾಡಲು 1997ರಲ್ಲಿ ರೋಟರಿ ಬ್ಲಡ್ ಬ್ಯಾಾಂಕ್ ಆರಂಭವಾಗುವಂತೆ ಮಾಡುವಲ್ಲಿಯೂ ಇವರ ಪಾತ್ರ ಗಣನೀಯವಾದುದು. ಇದಾದ ಬಳಿಕ ಸ್ವಯಂಪ್ರೇರಿತ ರಕ್ತದಾನಿಗಳ ಸಂಘದ ಸಂಸ್ಥಾಾಪಕರಲ್ಲೊೊಬ್ಬರಾಗಿ ಕೆಲಸ ಮಾಡಿ, ಇಂದು ಹಲವಾರು ಸಾಮಾಜಿಕ ಸಂಘಟನೆಗಳಲ್ಲಿ ಕಾರ್ಯನಿರತರಾಗಿದ್ದಾಾರೆ. ನಗರದ ಪ್ರತಿ ಕಾಲೇಜಿಗೆ ತೆರಳಿ ವಿದ್ಯಾಾರ್ಥಿಗಳಲ್ಲಿ ರಕ್ತದಾನದ ಅರಿವು ಮೂಡಿಸಿ, ರಕ್ತದಾನ ಮಾಡುವಂತೆ ಪ್ರೇರೇಪಿಸುತ್ತಿಿದ್ದಾಾರೆ. ಹೆಚ್ಚು ಕಡಿಮೆ ತಮ್ಮ ಮೂಲವೃತ್ತಿಿಯನ್ನೂ ಬದಿಗೊತ್ತಿಿ ಈಗ ಪೂರ್ಣ ಪ್ರಮಾಣದಲ್ಲಿ ರಕ್ತದಾನದ ಕಾಯಕದಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾಾರೆ.
ಶಿವಮೊಗ್ಗದಲ್ಲಿ ರೆಡ್ ಕ್ರಾಾಸ್‌ನವರು ಬ್ಲಡ್ ಬ್ಯಾಾಂಕ್ ಸ್ಥಾಾಪಿಸುವಲ್ಲೂ ಇವರ ಪಾತ್ರ ದೊಡ್ಡದು. ರೆಡ್ ಕ್ರಾಾಸ್‌ನಲ್ಲೂ  ಸಕ್ರಿಿಯರಾಗಿ ಕೆಲಸ ಮಾಡುತ್ತಿಿರುವ ಧರಣೇಂದ್ರ ರಾಜ್ಯ ಪ್ರಶಸ್ತಿಿಗೆ ಎರಡು ಬಾರಿ ಪಾತ್ರರಾಗಿದ್ದಾಾರೆ. 2010 ಮತ್ತು 2012ರಲ್ಲಿ ಈ ಪ್ರಶಸ್ತಿಿ ಅವರಿಗೆ ದಕ್ಕಿಿದೆ. ಜೊತೆಗೆ ದಾನ ರತ್ನಾಾಕರ  ಎಂಬ ಬಿರುದಿಗೂ ಪಾತ್ರರಾಗಿದ್ದಾಾರೆ. ಇದರ ಹೊರತಾಗಿ ಇವರಿಗೆ ಅಪಾರ ಸನ್ಮಾಾನ, ಗೌರವಗಳು ಸಂದಿವೆ. ಶಿವಮೊಗ್ಗ ದಸರಾದಲ್ಲೂ ಸನ್ಮಾಾನಿಸಿ ಗೌರವಿಸಲಾಗಿದೆ.
ಹಲವರ ಜೀವ ಉಳಿಸಿದ ಸಾರ್ಥಕತೆಯನ್ನು ಅವರು ಕಂಡಿದ್ದಾಾರೆ. ಇಂದಿಗೂ ಆ ರಕ್ತ ಪಡೆದ ಕುಟುಂಬದವರು ತಮ್ಮನ್ನು ದೇವರಂತೆ ಕಾಣುತ್ತಾಾರೆ ಎಂದು ಹೃದಯತುಂಬಿ ನುಡಿಯುತ್ತಾಾರೆ. ಅತಿ ತುರ್ತು ಸಂದರ್ಭದಲ್ಲಿ ಬಾಲಕಿಯೊಬ್ಬಳಿಗೆ ರಕ್ತ ನೀಡಿ, ಇದರಿಂದಾಗಿ  ಹಲವು ವರ್ಷ ಆಕೆ ಬಾಳಿ ಆನಂತರ ಸತ್ತಾಾಗ ಆಕೆಯ ಪಾಲಕರು ಬಾಲಕಿಯ ಚಿತೆಗೆ ಧರಣೇಂದ್ರ ಅವರಿಂದಲೇ ಅಗ್ನಿಿಸ್ಪರ್ಶ ಮಾಡಿಸಿದ್ದರು. ಇಂತಹ ಅಪೂರ್ವ ಗೌರವಾದರಗಳಿಗೆ ಭಾಜನರಾಗಿರುವ ಧರಣೇಂದ್ರ ಶಿವಮೊಗ್ಗದ ಪಾಲಿಕೆ ಒಬ್ಬ ರಕ್ತದಾನದ ಹೀರೋ ಆಗಿದ್ದಾಾರೆ. 
 ತಾಯಿಯ ಕಣ್ಣೀರು ಮಗುವಿನ ಜೀವವನ್ನು ಉಳಿಸಲಾರದು. ಆದರೆ ನಾವು ನೀಡಿದ ರಕ್ತ ಆ ಜೀವವನ್ನು ಉಳಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಿ ಇನ್ನೊೊಂದು ಜೀವ ಉಳಿಸಿದ ಸಾರ್ಥಕತೆಯನ್ನು ಪಡೆಯಬೇಕಿದೆ ಎನ್ನುತ್ತಾಾರೆ ಅವರು. ರಕ್ತ ಬೇಕಾದವರು ಧರಣೇಂದ್ರ ದಿನಕರ್ ಅವರನ್ನು 98441-01866ರಲ್ಲಿ ಸಂಪರ್ಕಿಸಬಹುದು.
published on 6 oct-2018
.................................

No comments:

Post a Comment