Monday 29 October 2018

ಸಾಮಾಜಿಕ ಕಳಕಳಿಯ
ಗಣೇಶ್ ಕೋಡೂರು

 ಶಿಕ್ಷಣದ ಮೂಲ ಉದ್ದೇಶ ಮಕ್ಕಳನ್ನು ಸುಶಿಕ್ಷಿತರನ್ನಾಾಗಿಸುವ ಜೊತೆಗೆ ಜೀವಮಾನವಿಡಿ ಕಲಿಕೆಯಲ್ಲಿರುವಂತೆ ಮಾಡುವುದು ಎನ್ನುವ ಮಾತಿದೆ. ಅಂದರೆ ಮನಸ್ಸು ಸದಾ ಜ್ಞಾಾನದಿಂದ ಭರ್ತಿಯಾಗಿರುವಂತೆ, ಚಿಂತನೆಗೆ ಅವಕಾಶ ಮಾಡಿಕೊಡುವಂತೆ ಮಾಡುವುದು. ಇದರಿಂದ ಸುಶಿಕ್ಷಿತ ವ್ಯಕ್ತಿಿ ಮತ್ತು ಉತ್ತಮ ಸಮಾಜ ನಿರ್ಮಾಣವೂ ಸಾಧ್ಯ
ಹೊಸನಗರ ತಾಲೂಕಿನ ಕೋಡೂರಿನಲ್ಲಿ ಆವಿ ಗ್ರಾಾಮೀಣ ಮತ್ತು ನಗರಾಭಿವೃದ್ಧಿಿ ಸಂಸ್ಥೆೆ (ಸರ್ಕಾರೇತರ) 2008ರಿಂದ ಕಾರ್ಯಾಚರಿಸುತ್ತಿಿದೆ. ಇದರ ಮೂಲ ಉದ್ದೇಶ ಗ್ರಾಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯೆೆ ಕಲಿಯಲು ವಿವಿಧ ರೀತಿಯ ನೆರವು ನೀಡುವುದರ ಜೊತೆಗೆ ಅವರನ್ನು ಉತ್ತಮ ಪ್ರಜೆಗಳನ್ನಾಾಗಿ ಬೆಳೆಯಲು ಮಾರ್ಗದರ್ಶನ ಮಾಡುವುದು. ಇಂತಹ ಮಹದುದ್ದೇಶದ ಆವಿ ಸಂಸ್ಥೆೆಯ ಸಂಸ್ಥಾಾಪಕ ಗಣೇಶ್ ಕೋಡೂರು.
ಗಣೇಶ್ ಅವರ ತಂದೆ ಡಾ. ಶಿವರಾಂ ಮತ್ತು ಸಹೋದರಿ ಪೂರ್ಣಿಮಾ ಇದರ ರೂವಾರಿಗಳು. ಡಾ. ಶಿವರಾಂ ಅವರು ಗ್ರಾಾಮಾಂತರ ಪ್ರದೇಶದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದವರು. ಹಳ್ಳಿಿ ಶಾಲೆಯ ಮಕ್ಕಳ ಪರಿಸ್ಥಿಿತಿ ಅರಿತು ಅವರನ್ನು ಸಬಲೀಕರಣಗೊಳಿಸುವ ಮತ್ತು ಉತ್ತಮ ಶಿಕ್ಷಣ ದೊರೆಯಲು ನೆರವಾಗುವ  ಕೆಲಸವನ್ನು ಏಕೆ ಮಾಡಬಾರದೆಂದು ಯೋಚಿಸಿ ಈ ಸಂಸ್ಥೆೆ ಸ್ಥಾಾಪನೆಗೆ ಮಗನಿಗೆ ಪ್ರೇರೇಪಣೆ ನೀಡಿದರು.
 ಶಿವಮೊಗ್ಗ, ಉಡುಪಿ, ರಾಯಚೂರು ಮತ್ತು  ವಿಜಯಪುರ ಜಿಲ್ಲೆೆಯಲ್ಲಿ ಈ ಸಂಸ್ಥೆೆ ಕಾರ್ಯಾಚರಿಸುತ್ತಿಿದೆ. ಇದಕ್ಕೆೆ 9 ನಿರ್ದೇಶಕರಿದ್ದು, ಇವರೆಲ್ಲ ಸಾಹಿತ್ಯ, ಇಂಜಿನೀಯರಿಂಗ್, ಸಮಾಜ ಸೇವೆ, ಪತ್ರಿಿಕಾ ರಂಗ, ವೈದ್ಯ ವೃತ್ತಿಿಯಲ್ಲಿರುವುದರಿಂದ ದುಡಿದಿದ್ದರಲ್ಲಿ ಸ್ವಲ್ಪ ಹಣವನ್ನು ಉಳಿಸಿ ಸಂಸ್ಥೆೆಯನ್ನು ಕಟ್ಟಿಿ ಬೆಳೆಸುತ್ತಿಿದ್ದಾಾರೆ.
ಹೊಸನಗರ ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳ ಮಕ್ಕಳಿಗೆ ಬೇಕಾದ ಕಲಿಕಾ ಸಾಮಗ್ರಿಿಗಳನ್ನು ಒದಗಿಸುತ್ತಿಿದ್ದಾಾರೆ. ನೋಟ್‌ಬುಕ್, ಪೆನ್ಸಿಿಲ್, ಕ್ರೀಡಾ ಪಟುಗಳಿಗೆ ಕ್ರೀಡಾ ಸಮವಸ್ತ್ರ, ಕ್ರೀಡಾ ಶೂ,  ಐಡಿ ಕಾರ್ಡ್, ಜೊತೆಗೆ ಸೂಕ್ತ ಮಾರ್ಗದರ್ಶನವನ್ನು ವಿವಿಧ ವಿಷಯಗಳ ಬಗ್ಗೆೆ ನೀಡುತ್ತಿಿದ್ದಾಾರೆ. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುತ್ತಿಿದ್ದಾಾರೆ. ಶಿವಮೊಗ್ಗದಲ್ಲೂ ಇಂತಹ ಕೆಲಸ ಮಾಡಿದ್ದಾಾರೆ. ಸುಮಾರು 30ರಷ್ಟು ಶಾಲೆಯ ಮಕ್ಕಳಿಗೆ ಪ್ರತಿವರ್ಷ ನೆರವಾಗುತ್ತಿಿದ್ದಾಾರೆ. ಬಿಎಡ್ ಮಕ್ಕಳಿಗೂ ಸೂಕ್ತ ತರಬೇತಿಯನ್ನು ಏರ್ಪಡಿಸಿ ಮಾಹಿತಿ ಕೊಡಿಸಿದ್ದಾಾರೆ. ಮಕ್ಕಳಲ್ಲಿ ವಿವಿಧ ವಿಚಾರಗಳ ಬಗ್ಗೆೆ ಅರಿವು ಮೂಡಿಸುವುದು ಇದರ ಉದ್ದೇಶ. ಬೇಸಿಗೆ ಶಿಬಿರ ನಡೆಸಿ ಅಲ್ಲಿಯೂ ಮಾಹಿತಿ, ತರಬೇತಿ ನೀಡಿದ್ದಾಾರೆ.
 ಶಿವಮೊಗ್ಗದ ಆಲ್ಕೊೊಳದಲ್ಲಿರುವ ತಾಯಿಮನೆ ಸಂಸ್ಥೆೆಯ ವಾಚನಾಲಯಕ್ಕೆೆ ಸುಮಾರು 100 ಪುಸ್ತಕಗಳನ್ನು ಇತ್ತೀಚೆಗೆ ನೀಡಿದ್ದಾಾರೆ. ಮುಂದಿನ ದಿನಗಳಲ್ಲಿ ಹೊಸನಗರ ತಾಲೂಕಿನ ವಿದ್ಯಾಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜ್ಞಾಾನ ಪಡೆಯುವ ಸಂಬಂಧ ಸುಮಾರು 5 ಸಾವಿರ ಪುಸ್ತಕವಿರುವ ವಾಚನಾಲಯವೊಂದನ್ನು ಸ್ಥಾಾಪಿಸುವ ಚಿಂತನೆ ಮಾಡಿದ್ದಾಾರೆ. ಇದಕ್ಕಾಾಗಿ ವಿವಿಧ ದಾನಿಗಳಿಂದ ಇದಕ್ಕೆೆ ಸಂಬಂಧಿಸಿದ ಪುಸ್ತಕಗಳನ್ನು ಪಡೆಯುವ ಯೋಚನೆಯಲ್ಲಿದ್ದಾಾರೆ. ವಾಚನಾಲಯದಲ್ಲೇ ಕುಳಿತು ಪುಸ್ತಕ ಓದಿ ಪರೀಕ್ಷೆಗೆ ಅನುವಾಗುವ ಉತ್ತಮ ಯೋಜನೆ ಇದಾಗಿದೆ. ಜೊತೆಗೆ ಹಲವು ಸರ್ಕಾರಿ ಪ್ರಾಾಥಮಿಕ ಶಾಲೆಗಳಿಗೆ ಕನ್ನಡ ಶಬ್ದಕೋಶವನ್ನು ಉಚಿತವಾಗಿ ಕೊಡುವ ನಿರ್ಧಾರವನ್ನೂ ಮಾಡಿದ್ದಾಾರೆ.
ನಾವು ಸಮಾಜಕ್ಕೆೆ ಏನನ್ನಾಾದರೂ ಕೊಡಬೇಕು. ಉತ್ತಮ ನಾಳೆಗಾಗಿ ಯೋಜನೆ ರೂಪಿಸಬೇಕು. ಇತರರಿಗಾಗಿ ಮಾಡಿದ ಕೆಲಸ ಸಾರ್ವಕಾಲಿಕವಾಗಿ ಉಳಿಯುತ್ತದೆ ಎನ್ನುತ್ತಾಾರೆ ಗಣೇಶ್. ಸರ್ಕಾರಿ ಶಾಲೆಗಳ ಬಗ್ಗೆೆ ಅಪಾರ ಕಾಳಜಿ ಇಟ್ಟು ಕೆಲಸ ಮಾಡುತ್ತಿಿರುವ ‘ಆವಿ’ ಯಾವುದೇ ಫಲಾಪೇಕ್ಷೆ ಹೊಂದಿಲ್ಲ. ಬಡಮಕ್ಕಳಿಗೆ ನೆರವಾಗುವುದು ಇದರ ಮೂಲ ಉದ್ದೇಶ. ಇಂತಹ ಸಂಸ್ಥೆೆಯನ್ನು ಬೆಂಬಲಿಸುವ ಮೂಲಕ ಇನ್ನಷ್ಟು ಹೊಸ ಯೋಜನೆಗಳಿಗೆ ಪ್ರೋತ್ಸಾಾಹವನ್ನು ಸಾರ್ವಜನಿಕರು ನೀಡಬೇಕಿದೆ.
published on 27th oct 2018
,,,,,,,,,,,,,,,,,,,,,,,,,,,,,,   

No comments:

Post a Comment