Saturday 1 December 2018

ರಾಜ್ಯೋೋತ್ಸವ ಪ್ರಶಸ್ತಿಿ 
ಚೂಡಾಮಣಿ ರಾಮಚಂದ್ರ 



  ಡೊಳ್ಳು ಬಾರಿಸುವ ಕಲೆಯಲ್ಲಿ ಸಾಧನೆ ಮಾಡಿದ ಮಹಿಳೆಯರು ಬೆರಳೆಣಿಕೆಯಷ್ಟಿಿದ್ದಾಾರೆ. ಏಕೆಂದರೆ ಇದು ಸುಲಭದ ಕಲೆಯಲ್ಲ. ಕಠಿಣ ಶ್ರಮವನ್ನು ಹಾಕಿ ಕಲಿತು, ಅದರಲ್ಲಿ ಪಳಗಿದ್ದಲ್ಲದೆ, ಸ್ವತಃ ಮಹಿಳಾ ಡೊಳ್ಳು ತಂಡವನ್ನು ಕಟ್ಟಿಿ, ದೇಶವಿದೇಶದಲ್ಲಿ ಪ್ರದರ್ಶಿಸಿ ಹೆಸರುಗಳಿಸಿದವರು ಸಾಗರದ ಚೂಡಾಮಣಿ ರಾಮಚಂದ್ರ ಅವರು. ಅವರಿಗೆ ಈ ಬಾರಿಯ ರಾಜ್ಯೋೋತ್ಸವ ಪ್ರಶಸ್ತಿಿ ದಕ್ಕಿಿದೆ.
  ಕುಟುಂಬದ ನಿರ್ವಹಣೆಯ ಜೊತೆಗೆ ಪರಂಪರಾಗತವಾಗಿ ಬಂದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನೂ ಉಳಿಸಿ, ಮೂಢನಂಬಿಕೆಯನ್ನು ಧಿಕ್ಕರಿಸಿ ನಿಂತು ಸಮಾನತೆಯನ್ನು ಪ್ರತಿಪಾದಿಸುವ ಈ ಕಾಲದಲ್ಲಿ ಮಹಿಳೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವುದನ್ನು ಅವರು ತೋರಿಸಿದ್ದಾಾರೆ. 
ಮೂಲತಃ ಶಿರಾಳಕೊಪ್ಪದವರಾದ ಚೂಡಾಮಣಿ ಅವರನ್ನು ಮದುವೆ ಮಾಡಿಕೊಟ್ಟಿಿದ್ದು ಸಾಗರಕ್ಕೆೆ. ಡೊಳ್ಳನ್ನು ಹೆಣ್ಣು ಮಕ್ಕಳು ಕಲಿತು ಏಕೆ ಬಾರಿಸಬಾರದೆಂಬ ಪ್ರಶ್ನೆೆ ಅವರಲ್ಲಿ ಸುಮಾರು 30 ವರ್ಷದ ಹಿಂದೆಯೇ ಉದ್ಭವಿಸಿತ್ತು. ಆದರೆ ಡೊಳ್ಳು ಕಲಿಯುವ ಮಹಿಳೆಯರ ಸಂಖ್ಯೆೆ ಅಷ್ಟೇ ಕಡಿಮೆ ಇತ್ತು. 20 ವರ್ಷಗಳ ಹಿಂದೆ ಸಾಗರ ಸಮೀಪದ ಕುಗ್ವೆೆ ಗ್ರಾಾಮದ ರಾಮಪ್ಪ ಎನ್ನುವವರಲ್ಲಿ ಡೊಳ್ಳು ಕಲಿಯಲು ಚೂಡಾಮಣಿ ಮುಂದಾದರು.  ತನ್ನೊೊಂದಿಗೆ 12 ಸದಸ್ಯರನ್ನೂ ಸಿದ್ಧಮಾಡಿಕೊಂಡು ತರಬೇತಿ ಪಡೆದರು. ಸ್ನೇಹಸಾಗರ ಮಹಿಳಾ ಡೊಳ್ಳು ತಂಡ ಎಂದು ಇದಕ್ಕೆೆ ಹೆಸರನ್ನಿಿಟ್ಟರು. 20013ರಲ್ಲಿ ಸಾಗರದ ಕಾರ್ಯಕ್ರಮವೊಂದರಲ್ಲಿ ಪ್ರಪ್ರಥಮ ಬಾರಿಗೆ ಈ ತಂಡ ಪ್ರದರ್ಶನ ನೀಡಿದಾಗ ಇದನ್ನು ನೋಡಿದ ಜನ ನಿಬ್ಬೆೆರಗಾಗಿದ್ದರು. ಇದು ರಾಜ್ಯವ್ಯಾಾಪಿ ಸುದ್ದಿ ಮತ್ತು ಸದ್ದು ಎರಡನ್ನೂ ಮಾಡಿತು. ಪರಿಣಾಮವಾಗಿ ಈ ತಂಡಕ್ಕೆೆ ಅಪಾರ ಪ್ರೋತ್ಸಾಾಹ ದೊರೆಯಿತು.
ಅಲ್ಲಿಂದ ಶುರುವಾದ ಇವರ ಡೊಳ್ಳಿಿನ ತಂಡದ ಪಯಣ ದೇಶ, ವಿದೇಶವನ್ನೆೆಲ್ಲ ಸುತ್ತಿಿತು. ಹಲವಾರು ಪ್ರಶಸ್ತಿಿ ಪಡೆಯಿತು, ಪ್ರತಿಷ್ಠಿಿತ ಉತ್ಸವಗಳಲ್ಲಿ  ಮೆರೆದಾಡಿತು. ಹೆಸರು ಮಾಡಿತು. ಇವರು ಡೊಳ್ಳು ಪ್ರದರ್ಶನವನ್ನು ಜಮ್ಮುವಿನ ರಾಷ್ಟ್ರೀಯ ಐಕ್ಯತಾ ಶಿಬಿರದಲ್ಲಿ, ಹಂಪಿ ಉತ್ಸವ, ಕರಾವಳಿ ಉತ್ಸವ, ವಿಶ್ವಕನ್ನಡ ಸಮ್ಮೇಳನ, ಕಾಮನ್ವೆೆಲ್‌ತ್‌ ಕ್ರೀಡಾಕೂಟ, ಸಾರ್ಕ್ ಸಮ್ಮೇಳನದಲ್ಲಿ ನೀಡಿದ್ದಾಾರೆ. ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಎಲ್ಲಾಾ ರಾಜ್ಯಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾಾರೆ. ಗುಜರಾತಿನಲ್ಲಿ ನಡೆದ ಉಪ್ಪಿಿನ ಸತ್ಯಾಾಗ್ರಹದ 150ನೆಯ ವರ್ಷಾಚರಣೆಯಲ್ಲಿ ಪ್ರದರ್ಶನ ನೀಡಿ ಪ್ರಸಿದ್ಧಿಿ ಪಡೆದಿದ್ದಾಾರೆ.  ಇದರ ಫಲವಾಗಿ ಚೂಡಾಮಣಿ ಅವರಿಗೆ ಸಂದ ಪ್ರಶಸ್ತಿಿಗಳೂ ಹಲವು. 2ನೆಯ ವಿಶ್ವ ಕನ್ನಡ ಸಮ್ಮೇಳನದಲ್ಲಿ ಹೆಮ್ಮೆೆಯ ಕನ್ನಡತಿ ಪುರಸ್ಕಾಾರ,  ಸಮಾಜರತ್ನ, 2011ರಲ್ಲಿ ರಾಜ್ಯ ಜಾನಪದ ಅಕಾಡೆಮಿ ಪುರಸ್ಕಾಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಅಭಿವೃದ್ಧಿಿ ಇಲಾಖೆ ಕೊಡಮಾಡುವ ಕಿತ್ತೂರು ಚೆನ್ನಮ್ಮ ಪ್ರಶಸ್ತಿಿ ಮೊದಲಾದವು. ನೇಪಾಳ, ಅಬುಧಾಬಿ, ಕುವೈತ್, ಸಿಂಗಪೂರ್, ಥೈಲ್ಯಾಾಂಡ್, ಲಂಡನ್‌ನಲ್ಲಿ ಡೊಳ್ಳು ಕಟ್ಟಿಿ ಕುಣಿದಿದ್ದಾಾರೆ. ಮಲೆನಾಡಿನ ಮಣ್ಣಿಿನ ಕಲೆಯನ್ನು ಶ್ರೀಮಂತಗೊಳಿಸಿದ್ದಲ್ಲದೆ, ಅಲ್ಲಿಯೂ ಇದರ ಕಂಪನ್ನು ಪಸರಿಸಿ ಬಂದಿದ್ದಾಾರೆ.
ಇವರು ಅನೇಕ ಸಾಹಿತ್ಯಿಿಕ ಕಾರ್ಯಕ್ರಮಗಳಲ್ಲಿ ಕತೆ, ಕವನ ರಚಿಸಿ ಓದಿದ್ದಾಾರೆ. ಕಾದಂಬರಿ, ಸಣ್ಣಕಥೆ, ಅಮರನಾಥ ಯಾತ್ರೆೆ ಬಗ್ಗೆೆ ಪ್ರವಾಸಿ ಕಥನವನ್ನು ಬರೆದಿದ್ದಾಾರೆ. ರಂಗಕಲಾವಿದೆಯಾಗಿಯೂ ಅಭಿನಯಿಸಿದ್ದಾಾರೆ. ನಾಟಕ ತರಬೇತಿಯನ್ನೂ ನೀಡಿದ್ದಾಾರೆ. ಇವರ ತಂಡ ಕೋಲಾಟ, ಲಂಬಾಣಿ ನೃತ್ಯ, ವೀರಗಾಸೆಯನ್ನೂ ಪ್ರದರ್ಶಿಸುತ್ತಿಿದೆ. 1994ರಲ್ಲಿ ಸ್ನೇಹಸಾಗರ ಮಹಿಳಾ ಸ್ವಸಹಾಯ  ಸಂಘ ಸ್ಥಾಾಪಿಸಿದ್ದು, ಇಂದಿಗೂ ಅನೇಕ ಸದಸ್ಯೆೆಯರಿಗೆ ವಿವಿಧ ತರಬೇತಿ ಕೊಡಿಸುತ್ತಿಿದ್ದಾಾರೆ. ಹಲವು ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಡೊಳ್ಳು ತರಬೇತಿ ನೀಡುತ್ತಿಿದ್ದಾಾರೆ. ಚೂಡಾಮಣಿ ಅವರ ಸಾಹಸಗಾಥೆಯನ್ನು ವಾರ್ತಾ ಇಲಾಖೆ ದಾಖಲಿಸಿದೆ. ಮಹಿಳೆ ಏನೆಲ್ಲ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆೆ ಇವರು ಉತ್ತಮ ಉದಾಹರಣೆ.
Published on 1st Dec. 2018
...............................

No comments:

Post a Comment