Saturday 8 December 2018

ನೋಟ, ಆಟ, ಪಾಠ
ಎಚ್. ಯು ವೈದ್ಯನಾಥ

ಯಾರು ವೇಗವಾಗಿ ಓಡುತ್ತಾಾರೋ ಅಂತಹವರ ಜೀವನದಲ್ಲಿ ಯಶಸ್ಸು ಇರುವುದಿಲ್ಲ. ಯಾರು ಸದಾ ಓಟದಲ್ಲಿರುತ್ತಾಾರೋ ಅವರಲ್ಲಿ ಯಶಸ್ಸಿಿರುತ್ತದೆ ಎಂಬ ಮಾತಿದೆ. ಸದಾ ಚುರುಕಾಗಿ, ರಚನಾತ್ಮಕ ಮತ್ತು ಕ್ರಿಿಯಾಶೀಲವಾಗಿ ಕೆಲಸ ಮಾಡುತ್ತ, ಸಂಘಟನೆಯಲ್ಲೂ ಮುಂದಿರುವ, ಶಿವಮೊಗ್ಗದ ಪತ್ರಿಿಕಾ ಛಾಯಾಗ್ರಾಾಹಕ, ರಂಗಭೂಮಿ ಮತ್ತು ಕಲೆ- ಸಾಹಿತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ, ಎಚ್. ಯು ವೈದ್ಯನಾಥ ಅರ್ಥಾತ್ ವೈದ್ಯ ಸದಾ ಓಟದಲ್ಲಿರುವ ವ್ಯಕ್ತಿಿ. ವೈದ್ಯ ಅವರ ಪತ್ರಿಿಕಾ ಕ್ಷೇತ್ರದ ಸಾಧನೆ ಪರಿಗಣಿಸಿ ಈ ಬಾರಿ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಿ ಘೋಷಿಸಿದೆ.     
 ವೈದ್ಯ ಅವರ ಹೆಸರು ಕೇಳದವರು ವಿರಳ. ಪತ್ರಿಿಕೆ ಮತ್ತು ಛಾಯಾಚಿತ್ರ ರಂಗದಲ್ಲಿ ಅವರು ಹೆಸರು ಮಾಡಿದಷ್ಟೇ ರಂಗಭೂಮಿ ಮತ್ತು ನಟನೆಯಲ್ಲಿ ಹಾಗೂ ಅದರ ಸಂಘಟನೆಯಲ್ಲಿಯೂ ಮಾಡಿದ್ದಾಾರೆ. ಜೊತೆಗೆ ಕಲೆ ಮತ್ತು ಸಂಸ್ಕೃತಿ, ಸಾಹಿತ್ಯ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾಾರೆ. ಇದರಿಂದಾಗಿ ಅವರ ಜನಪ್ರಿಿಯತೆ ಜಿಲ್ಲೆೆ ಮಾತ್ರವಲ್ಲ, ರಾಜ್ಯದಲ್ಲಿ ಪಸರಿಸಿದೆ.
ಶಿವಮೊಗ್ಗದ ನಾವಿಕ ಪತ್ರಿಿಕೆ ಮೂಲಕ ಪತ್ರಿಿಕಾ ಮತ್ತು ಛಾಯಾಗ್ರಾಾಹಕ ವೃತ್ತಿಿಯನ್ನು ಆರಂಭಿಸಿ, ಸಂಯುಕ್ತ ಕರ್ನಾಟಕ ಪತ್ರಿಿಕೆಯ ಛಾಯಾಗ್ರಾಾಹಕರಾಗಿ ಕೆಲಸ ಮಾಡಿ, ಸದ್ಯ ದಿ ಹಿಂದೂ ಪತ್ರಿಿಕೆಯ ಛಾಯಾಗ್ರಾಾಹಕರಾಗಿದ್ದಾಾರೆ. ಜಿಲ್ಲಾಾ ಕಾರ್ಯನಿರತ ಪತ್ರಕರ್ತರ ಸಂಘದ  ಪ್ರಧಾನ ಕಾರ್ಯದರ್ಶಿಯಾಗಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿಿದ್ದಾಾರೆ.
ತಮ್ಮ ಅವಧಿಯಲ್ಲಿ ಅರ್ಥಪೂರ್ಣ, ವಿಶಿಷ್ಟವಾದ ಕಾರ್ಯಕ್ರಮಗಳನ್ನು ಮಾಡಿ, ಪತ್ರಕರ್ತರ ಪರ ಹೋರಾಟದಲ್ಲಿ, ಕಾರ್ಯಾಗಾರಗಳಲ್ಲಿ, ಉಪನ್ಯಾಾಸ ಏರ್ಪಡಿಸುವುದರಲ್ಲಿ, ಸಂಘದ ಸ್ವಾಾವಲಂಬನೆಗೆ, ಆರ್ಥಿಕ ಸಂಪನ್ಮೂಲ ಕ್ರೋೋಢೀಕರಿಸುವಲ್ಲಿ ಅವರ ಮಹತ್ವದ ಪಾತ್ರ ವಹಿಸಿದ್ದಾಾರೆ. ಯಾರೊಂದಿಗೂ ದ್ವೇಷ, ಸಿಟ್ಟು ಇಟ್ಟುಕೊಳ್ಳದ, ಸದಾ ನಗುಮೊಗದಿಂದಲೇ ಎಲ್ಲರನ್ನೂ ಮಾತನಾಡಿಸುವ ಕಲೆ ಅವರಲ್ಲಿದೆ. ಅದಕ್ಕಾಾಗಿಯೇ ಎಲ್ಲರಿಗೂ ಅವರು ಅಚ್ಚುಮೆಚ್ಚು, ಚಿರಪರಿಚಿತರು. ತಾಲೂಕು ಸಂಘಗಳನ್ನು ಕ್ರಿಿಯಾಶೀಲವಾಗಿಡುವಲ್ಲಿ ಸದಾ ಸಲಹೆ-ಸೂಚನೆ ಕೊಡುತ್ತಿಿರುತ್ತಾಾರೆ.
ರಂಗಭೂಮಿಯಲ್ಲೂ ಅವರ ಹೆಸರು ದೊಡ್ಡದು. ನೀನಾಸಂನಿಂದ ರಂಗತರಬೇತಿ ಪಡೆದು ನಟರಾಗಿ, ನಿರ್ದೇಶಕರಾಗಿ, ಸಾಕ್ಷ್ಯಚಿತ್ರಗಳ ನಿರ್ಮಾಪಕರಾಗಿ, ಸಿನಿಮಾ, ಧಾರಾವಾಹಿಗಳಲ್ಲಿ ನಟರಾಗಿ ಹೆಸರು ಮಾಡಿದ್ದಾಾರೆ. ನಿರ್ದೇಶಕರಾದ ಅಶೋಕ್ ಕಶ್ಯಪ್, ನಾಗಾಭರಣ, ಗಿರೀಶ್ ಕಾರ್ನಾಡ್, ಟಿ.ಎನ್. ಸೀತಾರಾಮ್, ಕೆ.ಎಸ್. ಎಲ್. ಸ್ವಾಾಮಿ ಮೊದಲಾವರ ಜೊತೆ ಸೇರಿ ಕಾರ್ಯನಿರ್ವಹಿಸಿದ್ದಾಾರೆ.
ನಟರಾಗಿ ಸೀತೆ, ಕಾನೂರು ಹೆಗ್ಗಡತಿ, ಮಾಯಾಮೃಗ, ಸೃಷ್ಟಿಿ ಮೊದಲಾದ ಧಾರಾವಾಹಿಗಳಲ್ಲಿ, ಸಂತ ಶಿಶುನಾಳ ಶರೀಫ, ಮೈಸೂರು ಮಲ್ಲಿಗೆ, ನೀಲಾ, ಮತದಾನ, ಕಾನೂರು ಹೆಗ್ಗಡತಿ, ಮಸಣದ ಮಕ್ಕಳು, ಜೋಕ್‌ಫಾಲ್‌ಸ್‌, ಓಳ್ ಮುನ್ಸಾಾಮಿ, ಲಿಫ್‌ಟ್‌ ಕೊಡ್ಲಾಾ ಮೊದಲಾದ ಸಿನಿಮಾಗಳಲ್ಲೂ ನಟಿಸಿದ್ದಾಾರೆ.  ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಂಗಸಂಸ್ಥೆೆಯಾದ ಬೆಳ್ಳಿಿಮಂಡಲವನ್ನು ಜಿಲ್ಲೆೆಯಲ್ಲಿ ಸ್ಥಾಾಪಿಸಿ, ಅದರ ಸಂಘಟಕರಾಗಿ, ಅದರ ಕೀರ್ತಿ ಎಲ್ಲೆೆಡೆ ಪಸರಿಸಿದ್ದಾಾರೆ. ವಿಶ್ವದರ್ಜೆಯ ಕಲಾವಿದರು ಮತ್ತು ತಂತ್ರಜ್ಞರನ್ನು ನಗರಕ್ಕೆೆ ಕರೆಯಿಸಿ ಅವರಿಂದ ವಿಶೇಷ ಉಪನ್ಯಾಾಸ, ಸಂವಾದ ನಡೆಸಿದ್ದಾಾರೆ. ಅಂತಾರಾಷ್ಟ್ರೀಯ ಚಲನಚಿತ್ರೋೋತ್ಸವವನ್ನು ಆಯೋಜಿಸಿದ ಹೆಗ್ಗಳಿಯೂ ಅವರದ್ದು. 
  ಸದಾರಮೆ, ಯಯಾತಿ, ಬಯಲು ಸೀಮೆ ಕಟ್ಟೆೆ ಪುರಾಣ, ದಕ್ಷಯಜ್ಞ, ಅಂಧಯುಗ ಮೊದಲಾದ ನಾಟಕಗಳಲ್ಲಿ ನಿರ್ದೇಶನ ಮತ್ತು ನಟನೆ ಮಾಡಿರುವ ಇವರು, ನಮ್ ಟೀಮ್ ಎಂಬ ರಂಗಸಂಸ್ಥೆೆಯ ಉಪಾಧ್ಯಕ್ಷರಾಗಿ ದುಡಿದಿದ್ದಾಾರೆ. ನಗರದ ಕರ್ನಾಟಕ ಸಂಘದ ನಿರ್ದೇಶಕರಾಗಿ, ಅದರ ತ್ರೈಮಾಸಿಕದ ಸಂಪಾದಕರಾಗಿ, ಚಾರಣ, ಸಂಗೀತ, ನೃತ್ಯ ಮೊದಲಾದ ಸಂಸ್ಥೆೆಗಳಲ್ಲಿ ತೊಡಗಿಸಿಕೊಂಡಿರುವ ವೈದ್ಯ, ಸದಾ ಪಾದರಸದ ವ್ಯಕ್ತಿಿತವನ್ನು ತಮ್ಮ 60ರ ಹರಯದಲ್ಲೂ ಉಳಿಸಿಕೊಂಡಿದ್ದಾಾರೆ.
ಇವರ ಸಾಧನೆ, ಸಂಘಟನೆ, ವ್ಯಕ್ತಿಿತ್ವದಿಂದಾಗಿ ಹಲವು ಪ್ರಶಸ್ತಿಿ, ಸನ್ಮಾಾನಗಳು ದಕ್ಕಿಿವೆ. 
..............................

No comments:

Post a Comment