Saturday 7 September 2019

ಪ್ರಬುದ್ಧ ನಾಟ್ಯ ಕಲಾವಿದೆ
ಕವನಾ ಪ್ರಭು


ಭಾರತೀಯರಿಗೆ ಕಲೆ ಎನ್ನುವುದು ಉಪಾಸನಾ ದಿವ್ಯವಾಗಿದೆ. ಈ ಕಲೆಯು ಚಿತ್ರವಾಗಿ, ಶಿಲ್ಪವಾಗಿ, ನೃತ್ಯವಾಗಿ, ಸಂಗೀತವಾಗಿ, ಜನಪದರ ಬದುಕಿಗೆ ಸುಖವಾಗಿ, ಹಿತವಾಗಿ ಜನಪದ ಕಲೆಯೆನಿಸಿ ಬುದ್ಧಿಿಭಾವಗಳ ಸಂಸ್ಕಾಾರದೊದಿಗೆ ತಾನೂ ಸಂಸ್ಕಾಾರಗೊಳ್ಳುತ್ತಿಿದೆ. ಜೀವನದರ್ಶನ ಮತ್ತು ಆತ್ಮದರ್ಶನ ಮಾಡಿಸುವ ಈ ಕಲೆಗಳಲ್ಲಿ ಭರತನಾಟ್ಯ ಕಲಿಕೆಗೆ ಇಂದು ಹೆಚ್ಚಿಿನ ಮಹತ್ವ ಬಂದಿದೆ. ಕಲಿಕಾರ್ಥ ಎಷ್ಟು ತನ್ಮಯತೆ ಮತ್ತು ಒತ್ತು ಕೊಟ್ಟು ಇದನ್ನು ಕಲಿಯುತ್ತಾಾನೋ ಅಷ್ಟು ಶಾಸ್ತ್ರಬದ್ಧವಾಗಿ, ಪ್ರಬುದ್ಧವಾಗಿ ಅದನ್ನು ಅಭಿನಯಿಸಲು ಅವನು ಶಕ್ತನಾಗುತ್ತಾಾನೆ. ಶಿವಮೊಗ್ಗ ನಗರದಲ್ಲಿ ಇಂದಿನ ಯುವಪೀಳಿಗೆ ವಿಶೇಷವಾಗಿ ಭರತನಾಟ್ಯದೆಡೆ ಸೆಳೆಯಲ್ಪಡುತ್ತಿಿದೆ. ಇದೊಂದು ವಿಶೇಷ ಬೆಳವಣಿಗೆ ಎನ್ನಬಹುದು.
ನಗರದಲ್ಲಿ ನಟನಂ ಬಾಲನಾಟ್ಯ ಕೇಂದ್ರ ಭರತನಾಟ್ಯ ಕಲಿಕೆಗೆ ಹೆಸರುವಾಸಿ. ಇದರ ಗುರು ವಿದ್ವಾಾನ್ ಕೇಶವಕುಮಾರ್ ಪಿಳ್ಳೈ ಮಾರ್ಗದರ್ಶನದಲ್ಲಿ ನೂರಾರು ಮಕ್ಕಳು ಪ್ರತಿವರ್ಷ ಭರತನಾಟ್ಯ ಕಲಿಕೆಗೆ ಸೇರ್ಪಡೆಗೊಳ್ಳುತ್ತಿಿದ್ದಾಾರೆ. ಅದರಂತೆ ಪ್ರತಿವರ್ಷ ವಿವಿಧ ನಾಟ್ಯ ಪರೀಕ್ಷೆಗಳನ್ನು ಸಮರ್ಥವಾಗಿ ಮುಗಿಸಿ
ರಂಗಪ್ರವೇಶಕ್ಕೂ ಆಯ್ದ ಕೆಲವರು ಅಣಿಯಾಗುತ್ತಿಿದ್ದಾಾರೆ. ಸುಮಾರು 15 ವರ್ಷಗಳ ಕಾಲ ನಾಟ್ಯ ತರಬೇತಿ ಪಡೆದ ಕವನಾ ಪ್ರಭು ಇಂದು ರಂಗಪ್ರವೇಶ ಮಾಡಲಿದ್ದಾಾರೆ. 
ನಗರದ ಪಂಚವಟಿ ಕಾಲನಿಯ ವಾಸಿ, ಉದ್ಯಮಿ ಕೆ. ಕೃಷ್ಣಾಾನಂದ ಪ್ರಭು ಮತ್ತು ಕೃತಿಕಾ ಪ್ರಭು ಅವರ ಮಗಳಾದ ಕವನಾ, ಪಿಇಎಸ್ ಇನ್ಸ್ಟಿಿಟ್ಯೂಟ್‌ನಲ್ಲಿ ಮೂರನೆಯ ವರ್ಷದ ಬಿಸಿಎ ಓದುತ್ತಿಿದ್ದಾಾಳೆ. 3ನೆಯ ವಯಸ್ಸಿಿನಲ್ಲೇ ಗೌಡ ಸಾರಸ್ವತ ಸಮಾಜದಲ್ಲಿ ನಡೆದ ಭಕ್ತ ಮಾರ್ಕಾಂಡೇಯ ನಾಟಕದಲ್ಲಿ ಬಾಲಭಕ್ತ ಮಾರ್ಕಾಂಡೇಯನಾಗಿ, 4ನೆಯ ವಯಸ್ಸಿಿನಲ್ಲಿ ಕೃಷ್ಣವೇಶ ಸ್ಪರ್ಧೆಯಲ್ಲಿ ಮೊದಲ ಸ್ಥಾಾನವನ್ನು ಪಡೆಯುವ ಮೂಲಕ ಕಲೆಯ ಪ್ರದರ್ಶನಕ್ಕೆೆ ಅಡಿಯಿಟ್ಟಿಿದ್ದರು.
ಕವನಾ ಸುಶಿಕ್ಷಿತ ಕುಟುಂಬದಿಂದ ಬಂದವರು. ನೈತಿಕ, ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಅಳವಡಿಸಿಕೊಂಡ ಈ ಕುಟುಂಬ ಇವರ ಪ್ರತಿಭೆಗೆ ನೀರೆರೆಯಿತು. ಅವರ ತಂದೆ-ತಾಯಿ ಮಗಳ ಆಸಕ್ತಿಿ ಗಮನಿಸಿ 6ನೆಯ ವಯಸ್ಸಿಿನಿಂದ ನಟನಂ ಭರತನಾಟ್ಯ ಕೇಂದ್ರದಲ್ಲಿ ಭರತನಾಟ್ಯ ಅಭ್ಯಾಾಸಕ್ಕೆೆ ಕಳುಹಿಸಿದರು. ಇಂತಹ ವಾತಾವರಣದಲ್ಲಿ ಬೆಳೆದಿದ್ದರಿಂದ ಮತ್ತು ಅದ್ಭುತ ಪ್ರತಿಭೆಯ ಗುರುವೂ ಸಹ ಲಭಿಸಿದ್ದರಿಂದ ಕಲಿಕೆ ಅತ್ಯಂತ ಯಶಸ್ವಿಿಯಾಗಿ ಸಾಗಿಬಂದಿತು. ಅಲ್ಲಿ ಪ್ರತಿಯೊಂದನ್ನೂ ತದೇಕಚಿತ್ತದಿಂದ ಗಮನಿಸಿ, ಅಷ್ಟೇ ಶಾಸ್ತ್ರಬದ್ಧವಾಗಿ ಅಧ್ಯಯನ ನಡೆಸಿದ ಕವನಾ, ಈಗ ರಂಗಪ್ರವೇಶಕ್ಕೆೆ ಸಿದ್ಧರಾಗಿದ್ದಾಾರೆ.
ಕರ್ನಾಟಕ ಸರಕಾರ ನಡೆಸುವ ಭರತನಾಟ್ಯ ಪರೀಕ್ಷೆಯ ಜೂನಿಯರ್ ಮತ್ತು ಸೀನಿಯರ್‌ನಲ್ಲಿ ಪ್ರಥಮ, ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾಾರೆ. ಮುಂಬಯಿಯ ಅಖಿಲ ಭಾರತೀಯ ಗಂಧರ್ವ ವಿದ್ಯಾಾಲಯ ಮಂಡಳಿಯವರು ನಡೆಸಿರುವ ವಿಶಾರದ ಪ್ರಥಮ್ ಮತ್ತು ವಿಶಾರದ ಪ್ರಶಸ್ತಿಿ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ್ದಾಾರೆ. ಸಹ್ಯಾಾದ್ರಿಿ ಕಲೋತ್ಸವದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾಾನ, ಶಂಕರ ಚಾನೆಲ್‌ನವರ ಜೈ ಹಿಂದ್ ಜೈ ಇಂಡಿಯಾ ಕಾರ‌್ಯಕ್ರಮದಲ್ಲಿ ಭಾಗವಹಿಸಿದ್ದಾಾರೆ. ಅಖಿಲ ಭಾರತೀಯ ಸಾಂಸ್ಕೃತಿಕ ಉತ್ಸವದಲ್ಲಿ ನೃತ್ಯ, ನಗರದ ಸಹ್ಯಾಾದ್ರಿಿ ಉತ್ಸವ, ಕೊಡಚಾದ್ರಿಿ ಉತ್ಸವ, 73ನೆಯ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನ ನೀಡಿ  ಸೈ ಎನಿಸಿಕೊಂಡಿದ್ದಾಾರೆ.
 ಬೆಂಗಳೂರು, ಬಳ್ಳಾಾರಿ, ಕೊಟ್ಟೂರು, ಬೆಳಗಾವಿ, ಉಡುಪಿ, ಸಾಗರ, ಇಟಗಿ ಸೇರಿದಂತೆ ಹಲವೆಡೆ ನೃತ್ಯ ಪ್ರದರ್ಶನ ನೀಡಿದ್ದಾಾರೆ. ಇಂದೋರ್, ವಿಶಾಖಪಟ್ಟಣಂ, ಮಹಾರಾಷ್ಟ್ರ, ಮೌಂಟ್‌ಅಬುನಲ್ಲೂ ಸಹ ವಿವಿಧ ಸಂದರ್ಭದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾಾರೆ. ತಮಿಳುನಾಡಿನ ಚಿದಂಬರಂನ ದೇವಸ್ಥಾಾನದಲ್ಲಿ ಜರುಗಿದ ಗಿನ್ನೀಸ್ ವಿಶ್ವದಾಖಲೆಯ ನೃತ್ಯಪ್ರದರ್ಶನದಲ್ಲೂ ಭಾಗವಹಿಸಿ ಯಶಸ್ವಿಿಯಾಗಿದ್ದಾಾರೆ.
published on 7-9-2019
................................


   

No comments:

Post a Comment