Saturday 28 September 2019

ಸಾಹಿತ್ಯದ ಹೊಸ ಪ್ರತಿಭೆ  
ಗಾರ್ಗಿ ಸೃಷ್ಟೀಂದ್ರ


 ಪ್ರತಿಭೆ ಪ್ರತಿ ಮಕ್ಕಳಲ್ಲಿಯೂ ಇರುತ್ತದೆ. ಆದರೆ ಅದು ಬೆಳಕಿಗೆ ಬರಬೇಕಾದರೆ ಅವಕಾಶ ಸಿಗಬೇಕು. ಮಕ್ಕಳು ಚಿಕ್ಕ ಸಂಗತಿಯನ್ನೂ ಸಂಭ್ರಮದಿಂದ ನೋಡಬೇಕು. ನಿರೀಕ್ಷೆ, ಕುತೂಹಲ ಉಳಿಸಿಕೊಂಡು ಸಿಗುವ ಅವಕಾಶವನ್ನು ಬಳಸಿಕೊಳ್ಳುವ ಆತ್ಮವಿಶ್ವಾಾಸ ಬೆಳೆಸಿಕೊಳ್ಳಬೇಕು.
ಆಧುನಿಕ ತಂತ್ರಜ್ಞಾಾನದ ಕಾಲಘಟ್ಟದಲ್ಲಿ ಮಕ್ಕಳು ಬದುಕನ್ನು, ಸಮಾಜವನ್ನು  ಹೇಗೆ ನೋಡುತ್ತಿಿದ್ದಾಾರೆ ಎನ್ನುವುದು ತೀರಾ ಮುಖ್ಯ.
 ಗಾರ್ಗಿ ಸೃಷ್ಟೀಂದ್ರ ಸಾಗರ ತಾಲೂಕು ಬಂದಗದ್ದೆೆಯ ವಿದ್ಯಾಾರ್ಥಿನಿ. ಕತೆ, ಕವನ, ನಾಟಕಗಳನ್ನು ಬರೆದಿದ್ದಾಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾಾರೆ. ಬರವಣಿಗೆ ಮೂಲಕ ಸಂವೇದನೆ ಹೇಳಲು ಇವರಿಗೆ ಸಾಧ್ಯವಾಗಿದೆ. ಕನ್ನಡದ ಮೂಲಕ ಈಗ  ಬೆಳೆಯುತ್ತಿಿದ್ದಾಾರೆ. ಇದಕ್ಕಾಾಗಿಯೇ ಜಿಲ್ಲಾಾ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯನ್ನಾಾಗಿ ಇವರನ್ನು ಆಯ್ಕೆೆ ಮಾಡಲಾಗಿದೆ.
 ಬಂದಗದ್ದೆೆಯ ಕೃಷಿಕ ಶೈಲೇಂದ್ರ ಬಂದಗದ್ದೆೆ ಮತ್ತು ಸರಸ್ವತಿ ಹೆಗಡೆ ಅವರ ಪುತ್ರಿಿ.  ಸಾಗರದ ನಿರ್ಮಲಾ ಬಾಲಕಿಯರ ಪ್ರೌೌಢಶಾಲೆಯಲ್ಲಿ 10ನೆಯ ತರಗತಿ ಓದುತ್ತಿಿದ್ದಾಾಳೆ. ಶೈಲೇಂದ್ರ ಬಂದಗದ್ದೆೆ ಕೂಡ ತಮ್ಮ ಕವಿತೆ, ಲೇಖನದ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾಾರೆ. ಹೆಗ್ಗೋೋಡಿನ ನೀನಾಸಂ ಜತೆ ಅವರ ನಿಕಟ ಸಂಪರ್ಕವಿದೆ. ಸರಸ್ವತಿ ಹೆಗಡೆ ಕೂಡ ಯಕ್ಷಗಾನ ಕುಟುಂಬದ ಹಿನ್ನೆೆಲೆಯಿಂದ ಬಂದವರು. ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾಾರೆ.
ಇಂಥ ವಾತಾವರಣದಲ್ಲಿ ಬೆಳೆದ ಗಾರ್ಗಿ ಸಹಜವಾಗಿ ಓದು, ಬರವಣಿಗೆಯಲ್ಲಿ ಆಸಕ್ತಿಿ ಬೆಳೆದಿದೆ. ಸತತ ಮೂರು ವರ್ಷ ಪ್ರಾಾಥಮಿಕ ಶಾಲಾ ಮಟ್ಟದ ಪ್ರತಿಭಾ ಕಾರಂಜಿಯ ’ಕಥೆ ಹೇಳುವ ಸ್ಪರ್ಧೆ’ ಯಲ್ಲಿ ಶಿವಮೊಗ್ಗ ಜಿಲ್ಲೆೆಗೆ ಪ್ರಥಮ ಸ್ಥಾಾನ ಪಡೆದುಕೊಂಡಿದ್ದಾಾರೆ. 8 ನೇ ವಯಸ್ಸಿಿನಲ್ಲಿಯೇ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಿಯಲ್ಲಿ ಭಾಗವಹಿಸಿ, ಪ್ರಸ್ತುತಪಡಿಸಿದ ’ಅಮ್ಮ’ ಮತ್ತು ’ಅಕ’್ಕ ಕವಿತೆಗಳು ಜನಮೆಚ್ಚುಗೆ ಗಳಿಸಿತು. ಶಿವಮೊಗ್ಗದಲ್ಲಿ ನಡೆದ ’ಚಿಣ್ಣರ ಸಾಹಿತ್ಯ ಚಿಲುಮೆ’ ಕಾರ್ಯಾಗಾರದಲ್ಲಿ ಭಾಗವಹಿಸಿ, ’ಕನಸು’ ಆಶುಕವನಕ್ಕೆೆ ಪ್ರಥಮ ಸ್ಥಾಾನ ಲಭಿಸಿದೆ.
2013 ಮತ್ತು 2014 ರಲ್ಲಿ ಸತತ ಎರಡು ವರ್ಷ ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಕಥಾ ಗೋಷ್ಠಿಿಯಲ್ಲಿ ಇವರು ಭಾಗವಹಿಸಿದ್ದರು. ಈ ವರ್ಷ ಶಿಕ್ಷಣ ಇಲಾಖೆ ಹಾಗೂ ಪ್ರಾಾಚ್ಯ ವಸ್ತುಗಳ ಸಂಶೋಧನಾ ಇಲಾಖೆ ವತಿಯಿಂದ ನಡೆಸಿದ ಭಾಷಣ ಸ್ಪರ್ಧೆಯಲ್ಲಿ ಹಾಗೂ ಟಿಪ್ಪು ಸಹರಾ ಯುವಜನ ಸಂಘ ಮತ್ತು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆೆ ಮಂಗಳೂರು ಇವರ ಸಹಯೋಗದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾಾನ ಪಡೆದಿದ್ದಾಾರೆ. ಪ್ರತಿಭಾ ಕಾರಂಜಿಯ ಕನ್ನಡ ಚರ್ಚಾಸ್ಪರ್ಧೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾಾನ ಪಡೆದಿದ್ದಾಾರೆ.
ಗಾರ್ಗಿಯವರು ಕರಿಬೇವು ಎಂಬ ನಾಟಕ ಬರೆದಿದ್ದಾಾರೆ. ದೇವರು, ಕೇಕಿನ ಗೃಹದತ್ತ ನನ್ನ ಚಿತ್ತ, ವಿವಿಧತೆಯಲ್ಲಿ ಏಕತೆ ಎಂಬ ತಲೆಬರಹದ ಕಥೆ ಬರೆದಿದ್ದಾಾರೆ.  ಅಕ್ಕ, ಅಮ್ಮ, ಅಪ್ಪ, ನಮ್ಮ ಶಾಲೆ, ಮಳೆ, ಗುಲಾಬಿ, ಕನಸು, ವಿಸ್ಮಯ, ಪರಿಸರ, ಗಣಪ, ನಮ್ಮ ದೇಶ ಎಂಬ ಕವಿತೆಗಳನ್ನು ಹೆಣೆದಿದ್ದಾಾರೆ.
ಮಕ್ಕಳಿಗೆ ಸಾಹಿತ್ಯ ಸ್ಫೂರ್ತಿ ತುಂಬಿದಾಗ ಅವರಲ್ಲಿ ಬೌದ್ಧಿಿಕ ವಿಕಾಸವಾಗುತ್ತದೆ. ಸಾಹಿತ್ಯ, ಸಂಗೀತ, ಕಲೆಗಳಿಂದ ಜೀವನ ಮೌಲ್ಯ ಹೆಚ್ಚುತ್ತದೆ ಎನ್ನುವ ಮಾತಿದೆ. ಇದನ್ನು ಗಾರ್ಗಿ ಪಾಲಕರು ಮಾಡಿದ್ದಾಾರೆ.
 ಪಠ್ಯೇತರ ಚಟುವಟಿಕೆಯಲ್ಲದೇ ಶಾಲಾ ಪಠ್ಯದಲ್ಲೂ ಗಾರ್ಗಿ ಹಿಂದೆ ಬಿದ್ದಿಲ್ಲ. ಇಂಥ ಬಹುಮುಖ ಪ್ರತಿಭೆ ಹೊಸಗುಂದದಲ್ಲಿ ನಡೆಯುವ ಮಕ್ಕಳ ಜಿಲ್ಲಾಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಪೀಠ ಅಲಂಕರಿಸುವ ಅವಕಾಶ ಪಡೆದಿದ್ದಾಾರೆ.
21.9.2019 
.....................

No comments:

Post a Comment