Monday 4 November 2019

ವಯೊಲಿನ್ ಮಾಂತ್ರಿಿಕ  

ಹೊಸಳ್ಳಿಿ ವೆಂಕಟರಾಮ್


ಶಿವಮೊಗ್ಗ ನಗರದ ಪಕ್ಕದಲ್ಲಿರುವ ಹೊಸಹಳ್ಳಿಿ ಸಾಂಸ್ಕೃತಿಕವಾಗಿ ಶ್ರೀಮಂತ ಗ್ರಾಾಮ. ಸಂಸ್ಕೃತ, ಗಮಕ ಗ್ರಾಾಮವೂ ಹೌದು. ಇಲ್ಲಿನ ವಾಸಿಗಳಲ್ಲಿ, ಕಲೆ, ಸಂಸ್ಕೃತಿ ಹೇರಳವಾಗಿ ಹಾಸುಹೊಕ್ಕಾಾಗಿದೆ. ಈ ಗ್ರಾಾಮದಲ್ಲಿ ಮನೆಗೊಬ್ಬರಾದರೂ ಕಲಾ"ದರಿದ್ದಾಾರೆ. ಅದರಲ್ಲಿಯೂ ಪಿಟೀಲಿನಲ್ಲಿ (ವಯೊಲಿನ್) ಹೆಸರಾದ ಸಹೋದರರಿದ್ದಾಾರೆ ಅವರೇ ವೆಂಕಟರಾಂ ಮತ್ತು ಸುಬ್ಬರಾವ್.
 ಹೊಸಹಳ್ಳಿಿ ವೆಂಕಟರಾಮ್ ಈ ಬಾರಿಯ ಕರ್ನಾಟಕ ಸಂಗೀತ ಅಕಾಡೆ"ುಯ ಸದಸ್ಯರಾಗಿ ಆಯ್ಕೆೆಯಾಗಿದ್ದಾಾರೆ. ಇವರ ಅನೇಕ ವರ್ಷಗಳ ಸಂಗೀತ ವಾದನದ ತಪಸ್ಸಿಿಗೆ ಇದು ಸಂದ ಗೌರವ. ಸುಮಾರು 5 ದಶಕಗಳಿಂದ ಈ ಕ್ಷೇತ್ರದಲ್ಲಿ "ಶ್ವದಾದ್ಯಂತ ಹೆಸರು ಮಾಡಿದ ಅತ್ಯಂತ ಸರಳ ಮತ್ತು ಅಷ್ಟೇ ಸಹೃದಯ ಕಲಾ"ದ ಇವರು.
  ಮೈಸೂರಿನಲ್ಲಿ ಸಂಸ್ಕೃತ ಎಂ. ಎ. ಮುಗಿಸಿದ ನಂತರ ಮದ್ರಾಾಸ್‌ಗೆ ತೆರಳಿ ಅಲ್ಲಿ ಜಗದ್ವಿಿಖ್ಯಾಾತ ಪಿಟೀಲುವಾದಕ, ಪದ್ಮಭೂಷಣ ಲಾಲ್‌ಗುಡಿ ಜಯರಾಮ್ ಅವರಲ್ಲಿ ಸುಮಾರು 6 ವರ್ಷ ವಯೊಲಿನ್ ಕಲಿತು ಉತ್ತಮ ವಾದಕರೆನಿಸಿಕೊಂಡು ತವರಿಗೆ ಮರಳಿದರು. ಇಲ್ಲಿ ಉಚಿತವಾಗಿ ವಯೊಲಿನ್ ಶಿಕ್ಷಣವನ್ನು ನೀಡಿದರು. ಸ್ವತಃ ಅವರ ಸಹೋದರ ಸುಬ್ಬರಾವ್ ಅವರಿಗೆ ಗುರುವಾದರು. ಈಗ ಸುಬ್ಬರಾವ್ ಸಹ ಅನಂತರಾಮ್ ಅವರಂತೆಯೇ ಅದ್ಭುತ ಸಾಧಕರಾಗಿದ್ದಾಾರೆ.
1975ರಲ್ಲಿ ಮೊಟ್ಟಮೊದಲ ಕಾರ‌್ಯಕ್ರಮವನ್ನು  ಮೈಸೂರಿನಲ್ಲಿ ತ್ಯಾಾಗರಾಜ ಜಯಂತಿಯಲ್ಲಿ ನೀಡುವ ಮೂಲಕ ಅಪರ ಜನಮೆಚ್ಚುಗೆ ಗಳಿಸಿದರು. ಅಲ್ಲಿಂದ ಶುರುವಾದ ಇವರ ಯಶಸ್ವಿಿಗಾಥೆ ಇಲ್ಲಿಯವೆರೆಗೂ ಅದೇ ಹಾದಿಯಲ್ಲಿ ಸಾಗಿಬಂದಿದೆ.  ಮಂಗಳೂರು ಆಕಾಶವಾಣಿಯ ಬಿ ಗ್ರೇಡ್ ಕಲಾ"ದರಾಗಿ , ದೂರದರ್ಶನ ಮತ್ತು ಉದಯ ಟಿ"ಗಳಲ್ಲಿ ಸಾಕಷ್ಟು ಕಾರ‌್ಯಕ್ರಮಗಳನ್ನು ನೀಡಿದ್ದಾಾರೆ.  ಸಹೋದರ ಸುಬ್ಬರಾವ್ ಜೊತೆ ಸೇರಿ ದೇಶದ ಹಲವು ನಗರಗಳಲ್ಲಿ ಕಾರ‌್ಯಕ್ರಮ ಕೊಟ್ಟಿಿದ್ದಾಾರೆ. ಇವರು "ರಿಯ ಗಾಯಕರಾದ ಆರ್. ಕೆ. ಶ್ರೀಕಂಠನ್, ಆರ್. ಕೆ. ಪದ್ಮನಾಭ, "ದ್ಯಾಾಭೂಷಣ, ಲಂಡನ್‌ನ ಜಾನ್ ಮಾರ್, ಕದ್ರಿಿ ಗೋಪಾಲನಾಥ, ಮಾಸ್ಟರ್ ಶಶಾಂಕ್ ಮೊದಲಾದವರಿಗೆ ವಯೊಲಿನ್ ಸಾಥ್ ನೀಡಿದ ಕೀರ್ತಿ ಹೊಂದಿದ್ದಾಾರೆ.   
1986-8ರಲ್ಲಿ ರಶ್ಯಾಾ ಉತ್ಸವದಲ್ಲಿ ಪಾಲ್ಗೊೊಂಡು ಜನಮನಸೆಳೆದ ಅಸೀಮ ಕಲಾ"ದ ಇವರು. ಲಂಡನ್‌ನ ಭಾರತೀಯ "ದ್ಯಾಾಭವನ್ ಮತ್ತು ಯುಎಇಯಲ್ಲಿ, ಶ್ರೀಲಂಕಾದಲ್ಲಿ ತಮ್ಮ ವಯೊಲಿನ್ ಕಛೇರಿ ನಡೆಸಿದ್ದಾಾರೆ. ಇವರ ಸಾಧನೆಗೆ ನಾದಶ್ರೀ, ಕರ್ನಾಟಕ ಗಾನಕಲಾ ತಪಸ್ವಿಿ, ತಂತಿವಾದ್ಯ ಪ್ರ"ೀಣ, ನಾಟ್ಯಶ್ರೀ, ಕಲಾದೀಪ್ತಿಿ, ಸಂಗೀತ ಕಲಾ ತಪಸ್ವಿಿ ಮೊದಲಾದ ಬಿರುದುಗಳು ನೀಡಲ್ಪಟ್ಟಿಿವೆ. ಕರ್ನಾಟಕ ಗಾನಕಲಾ ಪರಿಷತ್‌ನ ಎಕ್‌ಸ್‌‌ಪರ್ಟ್ ಸ"ುತಿಯ ಸದಸ್ಯರಾಗಿ,  ನವದೆಹಲಿಯ ಸಿಸಿಆರ್‌ಟಿಯ ಪ್ರಾಾದೇಶಿಕ ಸ"ುತಿಯ ಸದಸ್ಯರಾಗಿ, ಹೊಸಹಳ್ಳಿಿಯ ಸಂಕೇತಿ ಸಂಗೀತ ಸಭಾದ ಸದಸ್ಯರಾಗಿ ಕೆಲಸ ಮಾಡುತ್ತಿಿದ್ದಾಾರೆ.
 ಮಣಿಪಾಲದ ಮಾಹೆ "ಶ್ವ"ದ್ಯಾಾಲಯದ ಅಕಾಡೆ"ು ಆಫ್ ಮ್ಯೂಸಿಕ್ ಮತ್ತು ಡಾನ್‌ಸ್‌‌ನಲ್ಲಿ 12 ವರ್ಷದಿಂದ ಕಲಿಸುತ್ತಿಿರುವ ವೆಂಕಟರಾಮ್, ಸುಮಾರು 200 ಮಕ್ಕಳಿಗೆ ವಯೊಲಿನ್ ತರಬೇತಿಯನ್ನು ಸ್ವಗ್ರಾಾಮದಲ್ಲಿ ಕೊಟ್ಟಿಿರುವ ಹೆಗ್ಗಳಿಕೆ ಹೊಂದಿದ್ದಾಾರೆ. ಸುತ್ತೂರು ಮಠ, ಬೆಂಗಳೂರಿನ ಗಾಯನ ಸಮಾಜದಲ್ಲಿ ಕಾರ‌್ಯಕ್ರಮ ನೀಡಿ ""ಧ ಬಿರುದು, ಸನ್ಮಾಾನಗಳಿಗೆ ಭಾಜನರಾಗಿದ್ದಾಾರೆ. ಇವರ ಅನುಪಮ ಸೇವೆ, ಶಾಸ್ತ್ರೀಯ ಮತ್ತು ಪಾರಂಪರಿಕೆಯ ಕಲೆಯನ್ನು ಮೆಚ್ಚಿಿ ಅನೇಕ ಸಂಘ- ಸಂಸ್ಥೆೆಗಳು ಗೌರ"ಸಿವೆ. 2008ರ ಮೈಸೂರು ದಸರಾದಲ್ಲೂ ಕಾರ‌್ಯಕ್ರಮ ನೀಡಿದ್ದಾಾರೆ.
   ತಮ್ಮ ಸಹೋದರನೊಂದಿಗೆ ನಡೆಸಿದ ದ್ವಂದ್ವ ಪಿಟೀಲು ವಾದನದ ಸಿಡಿ ಮಧುರಮೋಹನಂ ಸಹ ಬಿಡುಗಡೆ ಮಾಡಿದ್ದಾಾರೆ. ಪಿಟೀಲು ಕಲಿಕೆ ಕಷ್ಟ, ಆದರೆ, ನುಡಿಸುವುದು ಸುಲಭ ಎನ್ನುತ್ತಾಾರೆ ವೆಂಕಟರಾಮ್.
published on Nov 2.2019
 .................................

No comments:

Post a Comment