Thursday 7 November 2019

ಅಜಾತಶತ್ರು ನ್ಯಾಾಯವಾದಿ 
ಎ. ಟಿ. ಬೆಳ್ಳಿಿಯಪ್ಪ


ವೇಗವಾಗಿ ಓಡುವವನಿಗೆ ಜೀವನದಲ್ಲಿ ಯಶಸ್ಸು ಸಿಗುವುದಿಲ್ಲ. ಓಡುವುದನ್ನು ಒಂದು  ಕಲೆಯನ್ನಾಾಗಿರಿಸಿಕೊಂಡವನಿಗೆ ಮಾತ್ರ ಯಶಸ್ಸು ಸಿಗುತ್ತದೆ. ಈ ರೀತಿಯ ವ್ಯಕ್ತಿಿ ತಾನು ಬೆಳೆಯುವುದರ ಜೊತೆಗೆ ಇನ್ನೊೊಬ್ಬರನ್ನೂ ಬೆಳೆಸುತ್ತಾಾನೆ. ಅವರು ಸ್ವಯಂಪ್ರಕಾಶರಾಗಿ ಬೆಳಗುವಂತೆ ಮಾಡಿ, ಅವರ ಸಾಧನೆಯನ್ನು ಕಂಡು ಸಂತಸಪಡುತ್ತಾಾನೆ.
ಈ ಮಾತು ನಗರದ ಹಿರಿಯ ನ್ಯಾಾಯವಾದಿ ಎ. ಟಿ. ಬೆಳ್ಳಿಿಯಪ್ಪ ಅವರಿಗೆ ಅನ್ವಯವಾಗುತ್ತದೆ. ತಮ್ಮ ಪ್ರಾಾಮಾಣಿಕ ವೃತ್ತಿಿಪರತೆ ಮತ್ತು ದಕ್ಷತೆಯಿಂದ ಹೆಸರಾದವರು ಇವರು. ರಾಜ್ಯದಲ್ಲಿ ಖ್ಯಾಾತರಾಗಿ, ಅನೇಕ ಕಿರಿಯ ವಕೀಲರಿಗೆ ಮಾರ್ಗದರ್ಶಕರಾಗಿ ಅವರ  ಏಳ್ಗೆೆಯನ್ನು ಬಯಸಿದವರು. ಈಗ 82ರ ಹರಯದಲ್ಲಿರುವ ಬೆಳ್ಳಿಿಯಪ್ಪ ಅನಾರೋಗ್ಯದಿಂದ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿಿಲ್ಲ.
ಬೆಳ್ಳಿಿಯಪ್ಪ ಅವರ ಸೇವೆ ನ್ಯಾಾಯವಾದಿ ಕ್ಷೇತ್ರದಲ್ಲಿ ಗಣನೀಯವಾದುದು. ವಕೀಲ ವೃತ್ತಿಿಯಲ್ಲಿ ಅಪಾರ ಗೌರವ, ಪರಿಣಿತಿ ಮತ್ತು ಜನಮನ್ನಣೆ ಪಡೆದು, ಶ್ರೇಷ್ಠ ಮಟ್ಟದ ವಕೀಲರಾಗಿ  ಸೇವೆ ಸಲ್ಲಿಸಿ ಅಜಾತಶತ್ರು ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಕೇವಲ ನ್ಯಾಾಯವಾದಿಯಾಗಿ ಮಾತ್ರವಲ್ಲ. ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ವಲಯದಲ್ಲೂ ಅವರು ಸೇವೆ ಸಲ್ಲಿಸಿದ್ದಾಾರೆ.
 ಮೂಲತಃ ಕೊಡಗು ಜಿಲ್ಲೆೆ ವಿರಾಜಪೇಟೆ ತಾಲೂಕಿನ ಬಾಳೆಲೆ ಗ್ರಾಾಮದವರಾದ ಬೆಳ್ಳಿಿಯಪ್ಪ, ಪ್ರಾಾಥಮಿಕ ಶಿಕ್ಷಣವನ್ನು ಪೊನ್ನಂಪೇಟೆಯಲ್ಲಿ ಪಡೆದು, ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿಎ ಪದವಿ ಪಡೆದಿದ್ದಾಾರೆ. ಮೈಸೂರಿನ ಶಾರದಾ ವಿಲಾಸ್ ಕಾನೂನು ಕಾಲೇಜಿನಲ್ಲಿ ಬಿ. ಎಲ್ ಪದವಿಯನ್ನು ಪಡೆದು ಮದ್ರಾಾಸ್‌ನಲ್ಲಿ ವಿಮಾ ಕಂಪನಿಯೊಂದರ ಲೀಗಲ್ ಅಸಿಸ್ಟೆೆಂಟ್ ಆಗಿ ನಾಲ್ಕು ವರ್ಷ ಕೆಲಸ ಮಾಡಿದರು. ಆನಂತರ ಮೈಸೂರಿನಲ್ಲಿ ವೃತ್ತಿಿ ಆರಂಭಿಸಿದರು.
ಇವರ ಪತ್ನಿಿ ಎಂ. ಡಿ. ಬೋಜಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು, ಶಿವಮೊಗ್ಗಕ್ಕೆೆ ವರ್ಗಾವಣೆಗೊಂಡಿದ್ದರಿಂದ 1972ರಿಂದ ಇಲ್ಲಿಯೇ ನೆಲೆಸಿ ವೃತ್ತಿಿಯನ್ನು ಮುಂದುವರೆಸಿದರು. ಅಂದು ಹೆಸರಾಂತ ವಕೀಲರಾಗಿದ್ದ ಎಚ್. ಎನ್. ಶ್ರೀನಿವಾಸರಾವ್ ಜೊತೆಯಲ್ಲಿ ಎಲ್ಲಾಾ ರೀತಿಯ ಕ್ರಿಿಮಿನಲ್ ಪ್ರಕರಣಗಳನ್ನು ನಡೆಸುತ್ತಿಿದ್ದರು. ಇಲ್ಲಿಂದ ಆರಂಭವಾದ ಅವರ ಯಶಸ್ಸಿಿನ ಪಯಣ ಇಂದಿಗೂ ಅಜರಾಮರವಾಗಿದೆ. ಇಲ್ಲಿಯವರೆಗೆ ಸುಮಾರು 50ಕ್ಕೂ ಹೆಚ್ಚು ಶಿಷ್ಯರನ್ನು ಅವರು ಉತ್ತಮ ನ್ಯಾಾಯವಾದಿಗಳನ್ನಾಾಗಿ ಮಾಡಿದ್ದಾಾರೆ.
ಅವರಲ್ಲಿ ಕೆಲವರೆಂದರೆ, ಎಸ್. ಟಿ. ರಂಗನಾಥ, ಕೆ. ಪಿ. ಗಾದಿಲಿಂಗಪ್ಪ, ಬಿ. ತೇಜಪ್ಪ, ಗೀತಾ ಶಿವಮೂರ್ತಿ, ಸರೋಜಾ ಚಂಗೊಳ್ಳಿಿ, ಪ್ರಭಾ ಗಿರಿಮಾಜಿ, ಹರಿಪ್ರಸಾದ್, ವಸಂತಮಾಧವ ಮೊದಲಾದವರು. ಶಿಷ್ಯರನ್ನೂ ಸಹ ತಮ್ಮಂತೆಯೇ ಶಿಸ್ತಿಿನ, ಪ್ರಾಾಮಾಣಿಕ ಹಾಗೂ ಕೌಶಲ್ಯಯುತ ವಕೀಲರನ್ನಾಾಗಿ ರೂಪಿಸಿದ್ದಾಾರೆ. ಇವರ ಪುತ್ರ ಭರತ್ ಬೆಳ್ಳಿಿಯಪ್ಪ ಸಹ ತಂದೆಯ ಗರಡಿಯಲ್ಲೇ ಬೆಳೆದು ಇಲ್ಲಿಯೇ ವೃತ್ತಿಿ ನಡೆಸುತ್ತಿಿದ್ದಾಾರೆ.   
ಜಿಲ್ಲಾಾ ವಕೀಲರ ಸಂಘದ ಅಧ್ಯಕ್ಷರಾಗಿ 1996-97, 99-2000ರಲ್ಲಿ ಕೆಲಸ ಮಾಡಿದ್ದಾಾರೆ. ಈ ಅವಧಿಯಲ್ಲಿ ಶಿವಮೊಗ್ಗ ವಕೀಲರ ಭವನ ನಿರ್ಮಾಾಣಕ್ಕೆೆ ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸುಲ್ಲಿ ಅವರು ಮಾಡಿದ ಯತ್ನ ಸ್ಮರಣೀಯ. 2001ರಲ್ಲಿ ರಾಜ್ಯ ವಕೀಲರ ಪರಿಷತ್ ಸದಸ್ಯರಾಗಿ, ಅದರ ಶಿಸ್ತು ಮೇಲ್ವಿಿಚಾರಣೆ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾಾರೆ. ಇವರ ಪತ್ನಿಿ ಬೋಜಮ್ಮ 2009ರಲ್ಲಿ ನಿಧನಹೊಂದಿದ ನಂತರ ವೃತಿಯ ಕಡೆ ಹೆಚ್ಚಿಿನ ಗಮನವನ್ನು ಹರಿಸಲು ಸಾಧ್ಯವಾಗದೆ ನಿವೃತ್ತರಾಗಿದ್ದಾಾರೆ.
ಶಿವಮೊಗ್ಗ ಲಯನ್‌ಸ್‌ ಕ್ಲಬ್ ಅಧ್ಯಕ್ಷರಾಗಿ, ಜಿಲ್ಲಾಾ ಕೊಡವ ಸಮಾಜದ ಅಧ್ಯಕ್ಷರಾಗಿ, ಕಾಂಗ್ರೆೆಸ್ ಸಕ್ರಿಿಯ ಕಾರ‌್ಯಕರ್ತರಾಗಿ ಸೇವೆ ಸಲ್ಲಿಸಿದ್ದಾಾರೆ. ಇಂತಹ ಅಜಾತಶತ್ರುವಿನ ಸಾರ್ಥಕ ಸೇವೆಯನ್ನು ಮನ್ನಿಿಸಿ, ಅವರ ಮಾರ್ಗದರ್ಶನದಲ್ಲಿ ಸಾಗಲು ಜಿಲ್ಲಾಾ ವಕೀಲರ ಸಂಘ ಸನ್ಮಾಾನಿಸಿದೆ. ಅವರ ಶಿಷ್ಯ ವೃಂದದವರು ಗುರುವಂದನೆಯನ್ನು ಸಲ್ಲಿಸಿದ್ದಾಾರೆ.

published on 26th oct-2019
...........................

No comments:

Post a Comment