Saturday 29 September 2018

ವಿಶ್ವದಾಖಲೆಯ ಕೆತ್ತನೆ ಕಲಾವಿದ
 ಹರೀಶ್‌ಕುಮಾರ್ ಲಾತೋರೆ



ಹಣ್ಣು ಮತ್ತು ತರಕಾರಿ ಕೆತ್ತನೆಯ ಕಲೆ ಎಂತಹವರನ್ನೂ ಆಕರ್ಷಿವಂತಹುದು. ಕಲಾಕಾರನ ಜಾಣ್ಮೆೆಯನ್ನು ಮತ್ತು ಏಕತಾನತೆಯನ್ನು ಇದು ಬಹಿರಂಗಗೊಳಿಸುವುದರ ಜೊತೆಗೆ ಆತನಲ್ಲಿರುವ ಕೌಶಲ್ಯವನ್ನೂ ಪ್ರಕಟಿಸುತ್ತದೆ.
ನಗರದ ಹರೀಶ್‌ಕುಮಾರ್ ಲಾತೋರೆ ಈ ಕಲೆಯಲ್ಲಿ ಎತ್ತಿಿದ ಕೈ. ರಾಜ್ಯದ ಬಹುತೇಕ ಜಿಲ್ಲೆೆಗಳಲ್ಲಿ ವಿವಿಧ ಕಾರ್ಯಕ್ರಮಗಳ ಸಂದರ್ಭದಲ್ಲಿ ಹಾಗೂ ಫಲಪುಷ್ಪ ಪ್ರದರ್ಶನದಲ್ಲಿ ಇಂತಹ ಕಲೆಯನ್ನು ರಚಿಸುವ ಮೂಲಕ ಮನೆಮಾತಾಗಿದ್ದಾಾರೆ. ಬಾಲ್ಯದಿಂದಲೂ ಕಲಾಕಾರರಾಗಿರುವ ಹರೀಶ್, ಈಗ ಇದನ್ನೇ ಒಂದು ಪ್ರಮುಖ ಹವ್ಯಾಾಸವನ್ನಾಾಗಿ ಮಾಡಿಕೊಂಡಿದ್ದು, ಇದರಿಂದ ಬಿಡುವಿಲ್ಲದಂತಾಗಿದ್ದಾಾರೆ.
ಹಣ್ಣಿಿನಲ್ಲಿ ವ್ಯಕ್ತಿಿಗಳ ಭಾವಚಿತ್ರ ಕೆತ್ತುವುದರಲ್ಲಿ ಇವರು ಸಿದ್ಧಹಸ್ತರು. ಕಲ್ಲಂಗಡಿಯಲ್ಲಿ ರಾಷ್ಟ್ರಕವಿಗಳು, ಸ್ವಾಾತಂತ್ರ್ರ ಹೋರಾಟಗಾರರು, ಜ್ಞಾಾನಪೀಠ ಪ್ರಶಸ್ತಿಿ ಪುರಸ್ಕೃತರನ್ನು ಅತಿ ಮನೋಹರವಾಗಿ ಕೆತ್ತುವ ಮೂಲಕ ವಿಶ್ವದಾಖಲೆ ಮಾಡಿದ್ದಾಾರೆ. ಇಲ್ಲಿಯವರೆಗೆ 3 ಸಾವಿರದಷ್ಟು ಭಾವಚಿತ್ರವನ್ನು ಕೆತ್ತನೆ ಮಾಡಿದ್ದಾಾರೆ. ರಂಗೋಲಿ ಪುಡಿಯಲ್ಲಿ ವ್ಯಕ್ತಿಿಗಳ ಭಾವಚಿತ್ರವನ್ನು ಬಿಡಿಸುವುದು, ಜೊತೆಗೆ ವಿವಿಧ ಮುಖವರ್ಣಿಕೆಗಳನ್ನು ರಚಿಸುವುದೂ ಸಹ ಇವರ ಹವ್ಯಾಾಸ. 
ಇದರ ಜೊತೆಗೆ ಕ್ಲೇ ಮಾಡೆಲಿಂಗ್, ಕುಸುರಿ ಕೆತ್ತನೆ, ವಾಟರ್ ಪೇಂಟಿಂಗ್, ಫ್ಯಾಾಬ್ರಿಿಕ್ ಪೇಂಟಿಂಗ್, ಆಯಿಲ್ ಪೇಂಟಿಂಗ್‌ನಲ್ಲಿಯೂ ಹರೀಶ್ ಸದಾ ಮುಂದು.ಪರಿಣಿತರ ಜೊತೆಗೆ ಇಂಗುಜೆಂಗ್, ಎಂಗ್ರೇಮಿಂಗ್, ನಿಖ್ ಪೇಂಟಿಂಗ್, ಬೊಟಿಕ್ ಕಲೆ, ಕೊಬ್ಬರಿ ಕೆತ್ತನೆ, ಸೆರಾಮಿಕ್ ಕಲೆ, ಪಾಟ್ ವರ್ಕ್, ರಂಗೋಲಿ, ಫೇಸ್ ಪೇಂಟಿಂಗ್ ಮಾಡುತ್ತಾಾರೆ. ಜವಾಹರಲಾಲ್ ನೆಹರೂ ಇಂಜಿನೀಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದಲ್ಲಿ ಇನ್‌ಸ್ಟ್ರ್‌‌ಕ್ಟರ್ ಆಗಿರುವ ಹರೀಶ್, 10 ವರ್ಷದಿಂದ ಈ ಕೆಲಸದಲ್ಲಿ ನಿರತರಾಗಿದ್ದಾಾರೆ. ಹೂವಿನ ಅಲಂಕಾರವನ್ನೂ ಸಹ ಮನಸೆಳೆಯುವ ರೀತಿಯಲ್ಲಿ ಮಾಡಬಲ್ಲ ಕೌಶಲ್ಯ ಇವರಲ್ಲಿದೆ. ದಾವಣಗೆರೆಯಲ್ಲಿ 15 ಅಡಿ ಶಿವಲಿಂಗವನ್ನು ಕೇವಲ ಹೂವಿನಿಂದ ಮಾಡಿ ಪ್ರದರ್ಶಿಸಿದ್ದಾಾರೆ. ಇದರ ಜೊತೆ ತೆಂಗಿನಗರಿಯಿಂದ ಗಣಪತಿಯನ್ನೂ ಸಹ ಅತ್ಯಾಾಕರ್ಷಕವಾಗಿ ರಚಿಸುತ್ತಾಾರೆ. ಮೂಡಬಿದರೆಯ ನುಡಿಸಿರಿ ಉತ್ಸವದಲ್ಲಿ ಪ್ರತಿವರ್ಷ ಇವರೇ ಪ್ರಮುಖ ಸ್ಟೇಜ್ ಅಲಂಕಾರಿಕರು.
 ಪ್ರಾಾಥಮಿಕ ಶಾಲೆಯಲ್ಲಿ ಓದುವಾಗಲೇ ತಮ್ಮಲ್ಲಿರುವ ಚಿತ್ರಕಲೆಯ ಪ್ರತಿಭೆಯನ್ನು ಸ್ಪರ್ಧೆಯ ಮೂಲಕ ಹೊರಜಗತ್ತಿಿಗೆ ತೋರಿಸಿಕೊಟ್ಟವರು ಹರೀಶ್. 10 ವರ್ಷದವರಿರುವಾಗಲೇ ಗಣಪತಿ ವಿಗ್ರಹ ತಯಾರಿಸುತ್ತಿಿದ್ದರು. ಹೈಸ್ಕೂಲು ಮುಗಿಯುವುದರೊಳಗೆ ಸುಮಾರು 80 ಬಹುಮಾನ ಪಡೆದಿದ್ದಾಾರೆ. ಹೈಸ್ಕೂಲ್‌ನಲ್ಲಿ ಓದುವಾಗಲೇ 8 ಬಾರಿ ಚಿತ್ರಪ್ರದರ್ಶನ ಮಾಡಿದ ಹಿರಿಮೆ ಇವರದ್ದು.
ದೆಹಲಿಯಲ್ಲಿ 2008ರಲ್ಲಿ, ವಿಶ್ವ ಕನ್ನಡ ಸಮ್ಮೇಳನದಲ್ಲಿ, ರಾಷ್ಟ್ರೀಯ ಕೃಷಿ ಮೇಳದಲ್ಲಿ, 8 ಬಾರಿ ತಿರುಪತಿಯಲ್ಲಿ, 5 ಬಾರಿ ಲಾಲ್‌ಬಾಗ್‌ನಲ್ಲಿ, 4 ಬಾರಿ ಬೆಂಗಳೂರಿನ ಹಸಿರು ಸಂತೆಯಲ್ಲಿ, 12ಕ್ಕೂ ಹೆಚ್ಚು ಬಾರಿ ರಾಜ್ಯ ಕೃಷಿ ಮೇಳದಲ್ಲಿ, 15 ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಕಲ್ಲಂಗಡಿ ಕೆತ್ತನೆ ಪ್ರದರ್ಶನ ಮಾಡಿದ್ದಾಾರೆ.
ಇವರ ಸಾಧನೆಗೆ ಹಲವು ಪುರಸ್ಕಾಾರಗಳು ದಕ್ಕಿಿವೆ. 2008ರಲ್ಲಿ ನವದೆಹಲಿಯಲ್ಲಿ ಜರುಗಿದ ಅಂತಾರಾಷ್ಟ್ರೀಯ ಟೂರಿಸಂ ಸಮಾವೇಶದಲ್ಲಿ ಕಲ್ಲಂಗಡಿಯಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಭಾವಚಿತ್ರವನ್ನು ಕೆತ್ತನೆ ಮಾಡಿದ್ದಕ್ಕೆೆ ರಾಷ್ಟ್ರ ಮಟ್ಟದ ಉತ್ತಮ ಕೆತ್ತನೆ ಪ್ರಶಸ್ತಿಿ ದಕ್ಕಿಿದೆ. ಜೊತೆಗೆ ಪ್ರಥಮ ಸ್ಥಾಾನವೂ ಲಭ್ಯವಾಗಿದೆ. ಮೈಸೂರು ದಸರಾ, ಶಿವಮೊಗ್ಗದ ಫಲಪುಷ್ಪ ಪ್ರದರ್ಶನ, ಲಾಲ್‌ಬಾಗ್‌ನಲ್ಲಿ ಇವರಿಗೆ ಪ್ರಶಸ್ತಿಿ ಬಂದಿದೆ. 5 ಚಿನ್ನದ ಪದಕ, 5 ಬೆಳ್ಳಿಿ ಪದಕ ಈವರೆಗೆ ಇವರಿಗೆ ದಕ್ಕಿಿದೆ.
ಫುಟ್ಬಾಾಲ್, ಹ್ಯಾಾಂಡ್‌ಬಾಲ್ ಮತ್ತು ಹಾಕಿ ಆಟಗಾರರೂ ಆಗಿರುವ ಹರೀಶ್, ಪತ್ರಿಿಕೆಯೊಂದರಲ್ಲಿ ವ್ಯಂಗ್ಯಚಿತ್ರಕಾರರೂ ಆಗಿ ಕೆಲಸ ಮಾಡಿದ್ದಾಾರೆ.

published on 29th sept-18
..................................

No comments:

Post a Comment