Saturday 2 March 2019

3 ರಾಜ್ಯಪ್ರಶಸ್ತಿಿ ಪಡೆದ 
  ಬಾಲನಟಿ  ಸುಕನ್ಯಾಾ


ಕಲೆ ಪ್ರತಿಕೃತಿಯಲ್ಲ, ಪ್ರತಿಸೃಷ್ಟಿಿ. ನಮ್ಮ ಮೈ-ಮನಸ್ಸನ್ನು  ಮುಟ್ಟಿಿ, ತಟ್ಟಿಿ, ಬದುಕಿನ ಅವಿಭಾಜ್ಯವಾಗಿ ಉಳಿದುಬಂದಿದೆ. ಸಂತಸದ ಹೊನಲಾಗಿ ಹರಿದುಬಂದಿದೆ. ಕಲೆ ಒಂದು ಸೃಜನಶೀಲ ಚಟುವಟಿಕೆ, ಕೌಶಲ್ಯವನ್ನು ಪ್ರಕಟಿಸುವ ವಿಧವೂ ಹೌದು. ಕಲಾಕಾರ ತನ್ನ ಅಭಿನಯದ ಮೂಲಕ ವಿಷಯವನ್ನು ಬಿಂಬಿಸಿದರೆ, ಇತರರು ಅದರ ಸವಿಯನ್ನು ಅನುಭವಿಸುತ್ತಾಾರೆ. ಕಲೆಯು ಉಪಾಸನೆಯ ಒಂದು ಮಾಧ್ಯಮವೆಂದೂ ತಪ್ಪಲ್ಲ.
ನಾನಾರೀತಿಯ ಕಲೆಗಳಲ್ಲಿ ಮಕ್ಕಳು ಇಂದು ಹೆಸರು ಮಾಡುತ್ತಿಿದ್ದಾಾರೆ. ಬಾಲಕಲಾವಿದರಾಗಿಯೇ ಅನೇಕರು ತಮ್ಮ ಛಾಪನ್ನು ಮೂಡಿಸುತ್ತಿಿದ್ದಾಾರೆ. ಸಿನಿಮಾದಲ್ಲಿ ಬಾಲನಟಿಯಾಗಿ ಮಿಂಚುತ್ತಿಿದ್ದಾಾರೆ. ಇಂತಹವರಲ್ಲಿ ಶಿವಮೊಗ್ಗದ ಸುಕನ್ಯಾಾ ಒಬ್ಬರು.
 ಸುಕನ್ಯಾಾ 6ನೆಯ ತರಗತಿಯ ವಿದ್ಯಾಾರ್ಥಿನಿ. ಓ. ಟಿ. ರಸ್ತೆೆಯ ಸ್ವಾಾಮಿ ವಿವೇಕಾನಂದ ಶಾಲೆಯ ವಿದ್ಯಾಾರ್ಥಿನಿ. ಪ್ರತಿಭಾನ್ವಿಿತೆ ಕೂಡ. ಸಂಗೀತ, ಭಜನೆ ಹಾಡುವುದರಲ್ಲಿ ಮುಂದು. ಈ ಆಸಕ್ತಿಿ ಸಿನಿಮಾ ಕ್ಷೇತ್ರಕ್ಕೂ ಹೊರಳಿದ್ದು ವಿಶೇಷವೇ. ನಗರದವರೇ ಆದ ಶರತ್‌ಚಂದ್ರ ಅವರು ಮುರಿದ ಗೊಂಬೆ ಎನ್ನುವ ಕಿರುಚಿತ್ರವನ್ನು ನಿರ್ಮಿಸಬೇಕೆನ್ನುವ ಆಸೆ ಹೊತ್ತು ಬಾಲನಟಿಯೊಬ್ಬರನ್ನು ಹುಡುಕುತ್ತಿಿದ್ದರು. ಈ ಸಂದರ್ಭದಲ್ಲಿ ಅವರ ಕಣ್ಣಿಿಗೆ ಬಿದ್ದಿದ್ದು ಸುಕನ್ಯಾಾ. ಈಕೆಯ ತಂದೆ ಕೃಷ್ಣಪ್ಪ ಮತ್ತು ತಾಯಿ ಕವಿತಾ ಅವರ ಪರವಾನಿಗೆ ಪಡೆದು ಚಿತ್ರದಲ್ಲಿ ನಟನೆಗೆ ಅವಕಾಶ ಕೊಟ್ಟರು. ಬಡವರ ಮನೆಯ ಹುಡುಗಿ ರಮ್ಯಾಾಳ ಪಾತ್ರ ಈಕೆಯದು. ಅದನ್ನು ಕಣ್ಣಿಿಗೆ ಕಟ್ಟುವಂತೆ ಮಾಡಿದ್ದಾಾಳೆ. ಇದೇ ಅವರಿಗೆ ರಾಜ್ಯ ಪ್ರಶಸ್ತಿಿ ಪಡೆಯಲು ಬಾಗಿಲು ತೆರೆಯಿತು.
ಸಿಕ್ಕ ಅವಕಾಶವನ್ನು  ಸದುಪಯೋಗಪಡಿಸಿಕೊಳ್ಳುವುದು ಜಾಣತನ. ಏಕೆಂದರೆ ಅವಕಾಶಗಳು ಮತ್ತೆೆ ಮತ್ತೆೆ ಬರುವುದಿಲ್ಲ. ಸುಕನ್ಯಾಾ ನಟನೆಗೆ ಒಪ್ಪಿಿಕೊಂಡ ಬಳಿಕ ಶೂಟಿಂಗ್‌ನಲ್ಲಿ ಸಕ್ರಿಿಯವಾಗಿ ಮತ್ತು ಅಷ್ಟೇ ಆಸಕ್ತಿಿಯಿಂದ ಪಾಲ್ಗೊೊಂಡಿದ್ದಳು. ಸಂಭಾಷಣೆಯನ್ನೂ ಅಚ್ಚುಕಟ್ಟಾಾಗಿ ನಿರ್ವಹಿಸಿದ್ದಾಾಳೆ. ಈ ಚಿತ್ರ ಗಮನಿಸಿದವರಿಗೆ ಮುದ್ದುಮುಖದ ಸುಕನ್ಯಾಾಳ ಪಾತ್ರ ಇಷ್ಟವಾಗದೇ ಇರಲಾರದು.
ಶಿವಮೊಗ್ಗದ ಅಂಬೆಗಾಲು ಕಿರುಚಿತ್ರ ಸ್ಪರ್ಧೆಯಲ್ಲಿ ಅತ್ಯುತ್ತಮ ಬಾಲಕಲಾವಿದೆ ಪ್ರಶಸ್ತಿಿ ಸಹ ಕಳೆ ಬಾರಿ ಈಕೆಗೆ ದಕ್ಕಿಿತ್ತು.  ಮೈಸೂರಿನ ಕರುನಾಡು ಕಿರುಚಿತ್ರ ಸ್ಪರ್ಧೆಯಲ್ಲೂ  ಅತ್ಯುತ್ತಮ ಬಾಲಕಲಾವಿದೆ ಬಹುಮಾನಕ್ಕೆೆ ಸುಕನ್ಯಾಾ ಪಾತ್ರಳಾಗಿದ್ದಾಾಳೆ. ಬೆಂಗಳೂರಿನಲ್ಲಿ ಜರುಗಿದ ನಾಳೆಯ ನಿರ್ದೇಶಕರು ಕಿರುಚಿತ್ರ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಬಾಲಕಲಾವಿದೆ ಪ್ರಶಸ್ತಿಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾಾಳೆ. ಈ ಮೂಲಕ ಒಂದೇ ಸಿನಿಮಾಕ್ಕೆೆ ಮೂರು ಬಾಲಕಲಾವಿದೆ ಪ್ರಶಸ್ತಿಿಯನ್ನು ಪಡೆದ ಹೆಗ್ಗಳಿಕೆ ಈಕೆಯದು. ಮುರಿದ ಗೊಂಬೆ ಈಗಾಗಲೇ ಹಲವರು ವೇದಿಕೆಗಳಲ್ಲಿ ಪ್ರದರ್ಶನಗೊಂಡಿದೆ.
 ಸುಕನ್ಯಾಾ ಉತ್ತಮ ಹಾಡುಗಾರಿಕೆಯವಳು. ರಾಜ್ಯಮಟ್ಟದ ಸ್ಪರ್ಧೆಯಲ್ಲೂ ಭಾಗವಹಿಸಿ ತನ್ನ ಕಂಠಸಿರಿಯನ್ನು ಪ್ರದರ್ಶಿಸಿದ್ದಾಾಳೆ. ಭಜನೆ ಹಾಡಲು ಕುಳಿತರೆ ಅದನ್ನು ಕೇಳುವುದೇ ಒಂದು ಸೊಗಸು. ಹೀಗೆ ಹಾಡುಗಾರಿಕೆ ಕ್ಷೇತ್ರದಿದಂ ನಡಟನಾ ಕ್ಷೇತ್ರಕ್ಕೆೆ ಕಾಲಿಟ್ಟ ನಾಂತರ ವಿವಿಧ ದಾರಾವಾಹಿಗಳಲ್ಲಿ ನಟಿಲುಸ ವಕಾಸಗಳು ಬರುತ್ತಿಿವೆ. ಆದರೆ ಪಾಲಕರು ಸದ್ಯ ಓದಿನ ಕಡೆ ಗಮನಕೊಟುವುದ ಒಳ್ಳೆೆಯದೆಂಬ ದೃಷ್ಟಿಿಯಿಂದ  ಸ್ವಲ್ಪ ಹಿಂಧೆಠು ಹಾಕಿದ್ದಾಾರೆ. ಆದರೂ ವರ್ಷಕ್ಕೊೊಂದೆರಡು ಧಾರಾವಾಹಿಗಳಲ್ಲಿ ನಗಳು ನಟಿಸಲಿ ಎಂಬ ತೀರ್ಮಾನ ಮಾಡಿದ್ದಾಾರೆ.
ಪ್ರತಿಭಾನ್ವಿಿತೆ ಸುಕನ್ಯಾಾಳಿಗೆ ಉತ್ತಮ ಭವಿಷ್ಯ ಇದೆ, ವೇದಿಕೆಯೂ ಇದೆ. ಅದನ್ನು ಸರಿಯಾಗಿ ಬಳಸಿಕೊಂಡಲ್ಲಿ ಕಲೆಯ ಮೂಲಕವೇ ಹೆಸರುಗಳಿಸಬಹುದು. ಕಲೆ ಯಾವತ್ತೂ ಸಾಧಕನ ಸ್ವತ್ತಾಾಗಿರುವುದರಿಂದ ಮತ್ತು ಸಾಧನೆಗೆ ಸಾಕಷ್ಟು ಅವಕಾಶ ಇರುವುದರಿಂದ ವಿದ್ಯಾಾಭ್ಯಾಾಸದ ಜೊತೆಗೆ ಕಲೆಗೂ ಗಮನ ನೀಡುತ್ತ ಸಾಗಬಹುದಾಗಿದೆ.
ಮುರಿದ ಗೊಂಬೆ ಕಿರುಚಿತ್ರ ಆಯುಶ್ ಟಿವಿಯಲ್ಲಿ ಪ್ರಸಾರವಾಗಿದೆ. ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಬಾಲಕಲಾವಿದೆ ಪ್ರಶಸ್ತಿಿಯನ್ನೂ ಇದೇ ಚಾನೆಲ್‌ನವರು ಆಯೋಜಿಸಿದ್ದರು.. ಈ ಬಾಲಕಿಯ ಕಲಾಜೀವನ ಇನ್ನಷ್ಟು ಎತ್ತರಕ್ಕೆೆ ಬೆಳೆಯಬೇಕಿದೆ. March 2-2019
,,,,,,,,,,,,,,,,,,,,,,,,,,,,



No comments:

Post a Comment