Saturday 30 March 2019

ಕರಾಟೆಯ ಮಿನುಗುತಾರೆ
ಜಿ. ಎನ್. ಷಣ್ಮುಖ



ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಸಾಧಿಸುವ ಛಲ ಬೇಕು ಎನ್ನುವ ಮಾತಿದೆ. ಸಾಧನೆಗೆ ಯಾವತ್ತೂ ವಯಸ್ಸು ಅಡ್ಡಿಿಯಾಗುವುದಿಲ್ಲ. ಬಾಲಕರಾಗಿದ್ದಾಾಗಲೇ ಸಾಧಿಸಿದವರೂ ನಮ್ಮೆೆದುರು ಇದ್ದಾಾರೆ. ವಯಸ್ಸಾಾದ ಮೇಲೂ ಸಾಧನೆ ಮಾಡುತ್ತಿಿರುವವರೂ ಇದ್ದಾಾರೆ. ಸಾಧನೆ ಎನ್ನುವುದು ನಿರಂತರ ಪ್ರಕ್ರಿಿಯೆ. ಅವಕಾಶ ಸಿಕ್ಕಾಾಗ ಅದನ್ನು ಬಿಡದೆ ಬಳಸಿಕೊಂಡಲ್ಲಿ ಸಾಧನೆ ಸಾಧ್ಯವಾಗುತ್ತದೆ.   
ಈ ಬಾಲಕನಿಗೆ 12 ವರ್ಷ. ಆದಿಚುಂಚನಗಿರಿ ವಿದ್ಯಾಾಸಂಸ್ಥೆೆಯಲ್ಲಿ 6ನೆಯ ತರಗತಿ ಓದುತ್ತಿಿದ್ದಾಾನೆ. ಈಗಾಗಲೇ ರಾಜ್ಯ, ರಾಷ್ಟ್ರೀಯ, ಅಂತಾರರಾಷ್ಟ್ರೀಯ ಕರಾಟೆ ಪಂದ್ಯಾಾವಳಿಗಳಲ್ಲಿ ಭಾಗವಹಿಸಿ ಪದಕಗಳ ಸರಮಾಲೆಯನ್ನೇ ಧರಿಸಿದ್ದಾಾನೆ. ಕರ್ನಾಟಕವನ್ನು ಮತ್ತು ಭಾರತವನ್ನು ಹಲವು ಚಾಂಪಿಯನ್‌ಶಿಪ್‌ಗಳಲ್ಲಿ ಪ್ರತಿನಿಧಿಸಿದ ಕೀರ್ತಿ ಈತನದು.
ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎನ್ನುವಂತೆ ಷಣ್ಮುಖ 5 ವರ್ಷಗಳಿಂದ ಕರಾಟೆ ಕ್ಷೇತ್ರದಲ್ಲಿದ್ದಾಾನೆ. ಅಂದರೆ ಒಂದನೆಯ ತರಗತಿಯಲ್ಲಿದ್ದಾಾಗಲೇ ಕರಾಟೆ ಆರಂಭಿಸಿ, ಇಂದಿಗೂ ಸತತ ತರಬೇತಿ ಮೂಲಕ ಅಪೂರ್ವ ಸಾಧನೆ ಮಾಡಿದ್ದಾಾನೆ.  ವಿದ್ಯಾಾಭ್ಯಾಾಸದ ಜೊತೆಗೆ ಇನ್ನೊೊಂದು ಕಲೆಯನ್ನು ರೂಢಿಸಿಕೊ
ಳ್ಳುವುದು ವಿದ್ಯಾಾರ್ಥಿ ದೆಸೆಯಲ್ಲಿ ಕಷ್ಟವಾದರೂ ಇದನ್ನು ನಿರ್ವಹಿಸಿಕೊಂಡು ಬರುತ್ತಿಿದ್ದಾಾನೆ.
ಕರಾಟೆ ಸ್ಪರ್ಧೆಗೆ ತೆರಳುತ್ತಿಿರುವುದರಿಂದ ಶಿಕ್ಷಣಕ್ಕೆೆ ತೊಂದರೆ ಆಗುತ್ತಿಿದ್ದರೂ ಸಂಸ್ಥೆೆಯವರು ಈತನ ಕಲಿಕೆಗೆ ವಿಶೇಷ ಸೌಲಭ್ಯ ಕಲ್ಪಿಿಸಿದ್ದಾಾರೆ. ಇದನ್ನು ಬಳಸಿಕೊಂಡು ಪಾಠದಲ್ಲೂ ಉತ್ತಮ ಸಾಧನೆ ಮಾಡುತ್ತಿಿದ್ದಾಾನೆ. ಕರಾಟೆಯ ಮೂಲಕ ಏನನ್ನಾಾದರೂ ವಿಶೇಷ ಸಾಧನೆ ಮಾಡಬೇಕೆನ್ನುವುದು ಈತನ ಕನಸಾಗಿದೆ. ಅದಕ್ಕಾಾಗಿ ಬಿಡುವಿನ ವೇಳೆಯನ್ನು ವ್ಯರ್ಥಪಡಿಸದೆ ಓದು ಮತ್ತು ಕರಾಟೆಗೆ ಮೀಸಲಿಡುತ್ತಿಿದ್ದಾಾನೆ.   
ಕರಾಟೆಯಲ್ಲಿ ಚಿನ್ನ, ಬೆಳ್ಳಿಿ, ಕಂಚಿನ ಪದಕಗಳನ್ನು ಪಡೆದಿದ್ದಾಾನೆ. ಜಿಲ್ಲಾಾ ಮಟ್ಟದಲ್ಲಿ ಆರಂಭಿಸಿ, ಈಗ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನದ ಪದಕ ಗಳಿಸಿ ಬರುವ ಮಟ್ಟಿಿಗೆ ಬೆಳೆದಿದ್ದಾಾನೆ. ಮಲೇಶಿಯಾ, ಶ್ರೀಲಂಕಾ ಮತ್ತು ದುಬೈನಲ್ಲಿ ನಡೆದ  ಸ್ಪರ್ಧೆಗಳಲ್ಲಿ ಈತ ಪದಕ ಧರಿಸಿದ್ದಾಾನೆ. ಕರಾಟೆ ಜೊತೆ ಇತ್ತೀಚೆಗೆ ಕಿಕ್ ಬಾಕ್ಸಿಿಂಗ್‌ನಲ್ಲೂ ತರಬೇತಿಯನ್ನು ಪಡೆಯುತ್ತಿಿದ್ದಾಾನೆ. ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಕಿಕ್ ಬಾಕ್ಸಿಿಂಗ್ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾಾನೆ. ಇದೇರೀತಿ ಕೇರಳ ಮತ್ತು ಪುಣೆಯಲ್ಲೂ ಪದಕ ಗಳಿಸಿದ್ದಾಾನೆ.  ಪೆಂಕಾಕ್ ಸಿಲತ್ ಎಂಬ ಇಂಡೋನೇಶಿಯಾದ ಕ್ರೀಡೆಯಲ್ಲೂ ಈತ ತರಬೇತಿ ಪಡೆಯುತ್ತಿಿದ್ದಾಾನೆ. ಈ ಕ್ರೀಡೆಯಲ್ಲಿ ಬೆಳ್ಳಿಿ ಪದಕವನ್ನು ಈಗಾಗಲೇ ಗೆದ್ದಿದ್ದಾಾನೆ.
ನಗರದ ಕರಾಟೆ ಗುರು ಚಂದ್ರಕಾಂತ್ ಭಟ್ಟ ಅವರ ಶಿಷ್ಯನಾಗಿರುವ ಷಣ್ಮುಖನಿಗೆ ಆತನ ತಂದೆ ಎಸ್‌ಬಿಐ ಉದ್ಯೋೋಗಿ ನಾಗರಾಜ್ ಮತ್ತು ತಾಯಿ  ಶಾಂತಕುಮಾರಿ ಸತತ ಮಾರ್ಗದರ್ಶನ ಮಾಡುತ್ತಿಿದ್ದಾಾರೆ. ಮಗನ ಎಲ್ಲ ಸಾಧನೆಗೂ ಅವರು ಬೆಂಬಲವಾಗಿ ನಿಂತು ಬೇಕಾದ ತರಬೇತಿಯನ್ನು ಭಟ್ಟರಿಂದ ಕೊಡಿಸುತ್ತಿಿದ್ದಾಾರೆ. ಭಟ್ಟರ ಅಚ್ಚುಮೆಚ್ಚಿಿನ ಶಿಷ್ಯನೂ ಆಗಿರುವ ಷಣ್ಮುಖ, ಇಲ್ಲಿಯವರೆಗೆ ತಾನು ಕಾಲಿಟ್ಟ ಕ್ಷೇತ್ರದಲ್ಲಿ ಹಿಂದಿರುಗಿ ನೋಡಿಲ್ಲ. ಸತತ ಸಾಧನೆ ಮೂಲಕ ಮೆಟ್ಟಿಿಲನು ಏರುತ್ತಲೇ ಇದ್ದಾಾನೆ. ಉತ್ತಮ ಗುರುವಿನ ಮಾರ‌್ಗದರ್ಶನವಿದ್ದರೆ ಏನೆಲ್ಲ ಸಾಧನೆ ಮಾಡಬಹುದು ಎನ್ನುವುದಕ್ಕೆೆ ಇದು ಸಾಕ್ಷಿ.
ಷಣ್ಮುಖನಲ್ಲಿ ಅಪಾರವಾದ ಸಾಧನಾ ಶಕ್ತಿಿ ಇದೆ. ಹೇಳಿಕೊಟ್ಟಿಿದ್ದನ್ನು ಚಾಚೂತಪ್ಪದೆ ಪಾಲಿಸುವುದರಿಂದ ಬಹುಬೇಗ ಎಲ್ಲಾಾ ರೀತಿ ಕೌಶಲ್ಯಗಳನ್ನು ಕಲಿತು ಸಾಧನೆ ಮಾಡುತ್ತಿಿದ್ದಾಾನೆ ಎನ್ನುತ್ತಾಾರೆ ಚಂದ್ರಕಾಂತ್ ಭಟ್ಟ.
ನಗರದ ಬಾಲಕನೊಬ್ಬ ಈ ರೀತಿ ಕರಾಟೆ ಸಾಧನೆ ಮಾಡುತ್ತಿಿರುವುದು ಅಪರೂಪದ ಸಂಗತಿ. ಈತನ ಸಾಧನೆಯನ್ನು ಗಮನಿಸಿ ಆದಿಚುಂಚನಗಿರಿ ಶಾಖಾಮಠದ ಸ್ವಾಾಮೀಜಿ ಹಾಗೂ ವಿದ್ಯಾಾಸಂಸ್ಥೆೆಯ ಮುಖ್ಯಸ್ಥರೂ ಆಗಿರುವ ಪ್ರಸನ್ನನಾಥ ಸ್ವಾಾಮೀಜಿ ಈತನನ್ನು ಹಲವರು ಬಾರಿ ಗೌರವಿಸಿದ್ದಾಾರೆ. ಜೊತೆಗೆ ನಗರದ ಹಲವು ಸಂಘ-ಸಂಸ್ಥೆೆಗಳೂ ಸನ್ಮಾಾನಿಸಿವೆ.
published on 30.3.2019
,,,,,,,,,,,,,,,,,,,,,,,,,,,,,,,

No comments:

Post a Comment