Thursday 28 March 2019

ಕಲಾತಪಸ್ವಿಿ
ವೀರಣ್ಣ ಮಾಳೇನಹಳ್ಳಿಿ



ಸಂಗೀತದ ಗುರುಗಳಾಗಿ, ಸಾಹಿತ್ಯದಲ್ಲೂ, ಸಂಶೋಧನೆಯಲ್ಲೂ ಆಸಕ್ತಿಿ ಹೊಂದಿ, ಸಮಾಜಸೇವೆಯ ಮೂಲಕ ಇಳಿಯಯಸ್ಸಿಿನಲ್ಲೂ ಕೆಲಸ ಮಾಡುತ್ತಿಿರುವವರು ವೀರಣ್ಣ ಮಾಳೇನಹಳ್ಳಿಿ. ನಾಲ್ಕಾಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಯುವಕರೂ ಸಹ ನಾಚುವಂತೆ ಇಂದಿಗೂ ಊರೂರು ಸುತ್ತಿಿ ತಮ್ಮ ಕಾಯಕತತ್ವವನ್ನು ನಿರ್ವಹಿಸುತ್ತಿಿದ್ದಾಾರೆ.
 ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ  ಜಿಲ್ಲೆೆಯ ಮಠ, ಮಂದಿರ, ಜಾತ್ರೆೆ, ಉತ್ಸವ, ಜಯಂತಿಗಳಲ್ಲಿ ಸಂಗೀತ ಸೇವೆಯನ್ನು ಸಲ್ಲಿಸುತ್ತಿಿರುವ ಏಕೈಕ ವ್ಯಕ್ತಿಿ.   ಗ್ರಾಾಮೀಣ ಪ್ರತಿಭೆಗಳನ್ನು ಗುರುತಿಸಿ ಉಚಿತವಾಗಿ  ತಮ್ಮ ಗುರು ಪಂಚಾಕ್ಷರಿ ಸಂಗೀತ ವಿದ್ಯಾಾಲಯದ ಮೂಲಕ ಸಂಗೀತವನ್ನು ಧಾರೆ ಎರೆಯುತ್ತಿಿರುವ ಇವರು, ಹಿಂದೂಸ್ಥಾಾನಿ ಮತ್ತು ಕರ್ನಾಟಕ ಸಂಗೀತ, ದಾಸರ ಪದ, ವಚನ ಸಂಗೀತ,  ಭಕ್ತ-ಭಾವಗೀತೆ, ಜಾನಪದ ಗೀತೆ ಮತ್ತು ತಬಲಾ ವಾದನದಲ್ಲಿ ಸಿದ್ಧಹಸ್ತರು. ಕಲಾತಪಸ್ವಿಿಯಾಗಿದ್ದರೂ ಸಹ ಸಾಹಿತ್ಯ ಕೃಷಿಯಲ್ಲೂ ಹೆಮ್ಮೆೆಯ ಸಾಧನೆ ಮಾಡಿದ್ದಾಾರೆ. ಇತ್ತೀಚೆಗಷ್ಟೇ ಹಾನಗಲ್ ಕುಮಾರಸ್ವಾಾಮಿಗಳು, ರುದ್ರಮುನಿ ಮಹಾಸ್ವಾಾಮಿಗಳು ಮತ್ತು ಕಪ್ಪನಹಳ್ಳಿಿ ರೇವಣಸಿದ್ದ ಸ್ವಾಾಮೀಜಿಗಳು ನಡೆದುಬಂದ ಹಾದಿಯ ಕುರಿತ ಕೃತಿಯನ್ನು ಹೊರತಂದಿದ್ದಾಾರೆ.
ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯರಾಗಿರುವ ವೀರಣ್ಣ, ಆನಂತರ ಸಂಗಮೇಶ್ವರ ಗವಾಯಿಗಳಲ್ಲಿ ಸಂಗೀತ ಅಭ್ಯಾಾಸ ಮಾಡಿ, ಹುಮಾಯುನ್ ಹರ್ಲಾಪುರ್ ಅವರ ಜೊತೆ ಸೇರಿ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿಿದ್ದಾಾರೆ. ಒಂದರ್ಥದಲ್ಲಿ ಅವರು ಸಂಗೀತ ಸರಸ್ವತಿಯ ವರಪುತ್ರರೆನ್ನಬಹುದು. ಶಂಕರಘಟ್ಟದಲ್ಲಿ ಸಂಗೀತ ಶಾಲೆ ತೆರೆದು  ಭರತನಾಟ್ಯ  ಮತ್ತು ಸಂಗೀತದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿಿದ್ದಾಾರೆ. ಹಾರ್ಮೋೋನಿಯಂ ಇವರ ಅಚ್ಚುಮೆಚ್ಚಿಿನ ವಾದನ. ಸಾಕಷ್ಟು ಗಾಯಕರ ಗಾಯನಕ್ಕೂ ಸಾಥ್ ಕೊಟ್ಟಿಿರುವುದು ಇನ್ನೊೊಂದು ವಿಶೇಷ.
ಭಕ್ತಿಿ ಪ್ರಧಾನ ಮತ್ತು ಪೌರಾಣಿಕ ನಾಟಕಗಳನ್ನೂ ವೀರಣ್ಣ ನಿರ್ದೇಶನ ಮಾಡಿದ್ದಾಾರೆ. ಸಮಾಜ ಸೇವೆಯೂ ಇವರ ಅವಿಭಾಜ್ಯ ಅಂಗ. ಬಸವಣ್ಣ ಪ್ರತಿಪಾದಿಸಿರುವ ಜಾತ್ಯತೀತತೆ, ಕಾಯಕತತ್ವ, ಸಹೋದರತ್ವವನ್ನು ಮಕ್ಕಳಲ್ಲಿ ಬಿತ್ತಿಿ ಬೆಳೆಸಬೇಕೆಂಬ ಸಂಕಲ್ಪ ಹೊಂದಿರುವ ಇವರು, ತಮ್ಮ ಸಿರಿಕಂಠದಿಂದ ಮಲೆನಾಡಿನೆಲ್ಲೆೆಡೆ ಪ್ರಖ್ಯಾಾತರು. ಸಂಗೀತದ ನೆಲೆಯಲ್ಲಿ ಮಾತ್ರ ಗೀತೆಗಳನ್ನು ಗ್ರಹಿಸದೆ ಸಾಹಿತ್ಯದ ಜವಾಬ್ದಾಾರಿಯಿಂದ ಅರ್ಥಕ್ಕೆೆ ಪ್ರಾಾಧಾನ್ಯತೆ ನೀಡಿ ಹಾಡುವುದು ಇವರ ವಿಶೇಷತೆ.
ಕೇವಲ ಸಂಗೀತಕ್ಕೆೆ ಮಾತ್ರ ಸೀಮಿತರಾಗದೆ, ಇತಿಹಾಸ, ಪುರಾಣ, ದೇವರು, ಧರ‌್ಮ ಮೊದಲಾದ ವಿಷಯದಲ್ಲೂ ತಮ್ಮನ್ನು ವ್ಯಾಾಪಿಸಿಕೊಂಡಿದ್ದಾಾರೆ. ಬೆಳಗುತ್ತಿಿರುವ ದೀಪ ಮಾತ್ರ ಇನ್ನೊೊಂದು ದೀಪವನ್ನು ಪ್ರಜ್ವಲಿಸಬಹುದು ಎಂಬ ಮಾತಿದೆ. ಇದನ್ನು ಅಳವಡಿಸಿಕೊಂಡ ಸರಳ ಜೀವಿ ಇವರು. ಸಂಶೋಧನಾ ವಿದ್ಯಾಾರ್ಥಿಯಂತೆ  ತಾವು ತೆರಳುವ ಊರುಗಳಲ್ಲಿನ ಇತಿಹಾಸ, ಪುರಾಣ, ಕೋಟೆ, ಶಿಲ್ಪ, ದೇವತೆಗಳ ಬಗ್ಗೆೆ ಮಾಹಿತಿ ಕಲೆಹಾಕಿ, ಸಂಪಾದಿಸಿ, ಉತ್ತಮ ಕೃತಿಗಳನ್ನು ರಚಿಸಿದ್ದಾಾರೆ.
ಮೂಲತಃ ಕೃಷಿಕರಾದರೂ ಅದನ್ನು ಮಕ್ಕಳಿಗೆ ವಹಿಸಿ ತಾನೊಬ್ಬ ಕಲಾವಿದನಾಗಿ ಸಮಾಜಮುಖಿ ಸೇವೆ ಸಲ್ಲಿಸುತ್ತಿಿದ್ದಾಾರೆ. ವೀರಣ್ಣ ಅವರಿಗೆ 2010ರಲ್ಲಿ ಶಾಸ್ತ್ರೀಯ ಸಂಗೀತಕ್ಕೆೆ ರಾಜ್ಯಪ್ರಶಸ್ತಿಿ ದಕ್ಕಿಿದೆ. ನೂರಾರು ಪ್ರಶಸ್ತಿಿ, ಸಾರ್ವಜನಿಕ ಸನ್ಮಾಾನಗಳಿಗೆ ಭಾಜನರಾಗಿದ್ದಾಾರೆ.
ಪ್ರಯತ್ನ ಮತ್ತು ಪರಿಶ್ರಮವಿದ್ದಾಾಗ ಮಾತ್ರ ಮನುಷ್ಯನ ಸಾಧನೆ ಸಾಧ್ಯ. ಆಗ ಬದುಕು ಸುಂದರವಾಗುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು, ಸಮಸ್ಯೆೆಗಳನ್ನು ಧೈರ್ಯವಾಗಿ ಎದುರಿಸಬೇಕು ಎನ್ನುವ ವೀರಣ್ಣ, ಗೋಣಿಬೀಡು ಮಠದ ಭಕ್ತರು. ಅಲ್ಲಿನ ಸ್ವಾಾಮೀಜಿಗಳ ಪ್ರೇರೇಪಣೆಯಂತೆ ಕೆಲಸ ಮಾಡಿದ್ದರಿಂದ ಕಿಂಚಿತ್ತಾಾದರೂ ಸಾಧನೆ ಸಾಧ್ಯವಾಗಿದೆ ಎನ್ನುತ್ತಾಾರೆ.
 ಭದ್ರಾಾವತಿ ತಾಲೂಕು ಶಂಕರಘಟ್ಟದ ಸಮೀಪವಿರುವ ಮಾಳೇನಹಳ್ಳಿಿಯವರಾದ ವೀರಣ್ಣ, ಇಲ್ಲಿಯವರೆಗೆ 8 ಕೃತಿಗಳನ್ನು ರಚಿಸಿದ್ದಾಾರೆ. ಬತ್ತದ ಇವರ ಸಾಹಿತ್ಯ, ಸಂಗೀತದ ಚಿಲುಮೆ ಇನ್ನಷ್ಟು ಕಾಲ ಪ್ರವಹಿಸಬೇಕಿದೆ.
published on 16.3.19
............................      

No comments:

Post a Comment