Thursday 28 March 2019

  ಲೇಖಕಿ
ಮಮತಾ ಹೆಗ್ಡೆೆ


ಮನುಷ್ಯನಲ್ಲಿ ಬಗೆಬಗೆಯ ಭಾವನೆಗಳು ಹುದುಗಿಕೊಂಡಿರುತ್ತವೆ. ಇವು ಕೆಲವೊಮ್ಮೆೆ ಸಹಜವಾಗಿ, ಅಥವಾ ಒತ್ತಡದಿಂದಾಗಿ ಹೊರಹೊಮ್ಮುತ್ತವೆ. ಹೊರಹೊಮ್ಮುವ ಮೂಲಕ ಅದು ರೂಪವೊಂದನ್ನು ಪಡೆಯುತ್ತದೆ. ಇದು ಸಾಹಿತ್ಯ, ಸಂಗೀತ, ನೃತ್ಯ, ಕ್ರೀಡೆಯಾಗಿರಬಹುದು. ಒಟ್ಟಿಿನಲ್ಲಿ ಪ್ರಕೃತಿಯ ಈ ಸಹಜವಾದ ಕೊಡುಗೆ ವ್ಯಕ್ತಿಿಯನ್ನು ಹೊರಜಗತ್ತಿಿಗೆ ಪರಿಚಯಿಸಬಲ್ಲುದು.
ಮಮತಾ ಹೆಗ್ಡೆೆ ಶಿವಮೊಗ್ಗದ ಮಹಿಳಾ ಲೇಖಕಿಯರಲ್ಲಿ ಒಬ್ಬರು. ನಾಲ್ಕು ವರ್ಷಗಳಿಂದ  ಪತ್ರಿಿಕೆಗಳಿಗೆ ಲೇಖನ ಬರೆಯುವ ಮೂಲಕ  ಸಾಹಿತ್ಯದಲ್ಲಿ ಮತ್ತು ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾಾರೆ. ಅಭಿರುಚಿ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವಿಕೆ, ಓದುವುದರಲ್ಲಿ ಆಸಕ್ತಿಿ ಹೊಂದಿದ್ದಾಾರೆ. ಈ ಆಸಕ್ತಿಿಯೇ ಇಂದು ಅವರು ನಾಲ್ಕು ಕೃತಿಗಳನ್ನು ಹೊರತರಲು ಕಾರಣವಾಗಿದೆ.
ಮೂಲತಃ ಉಡುಪಿಯವರಾದ ಮಮತಾ, 37 ವರ್ಷಗಳಿಂದ ಶಿವಮೊಗ್ಗ ವಾಸಿ ಮತ್ತು ಗೃಹಿಣಿ. ಕುಟುಂಬವನ್ನು ನಿರ್ವಹಿಸಿಕೊಂಡು, ವಿವಿಧ ಸಂಘ-ಸಂಸ್ಥೆೆಗಳಲ್ಲಿ ಕೆಲಸ ಮಾಡುತ್ತಿಿದ್ದವರು. ಆದರೆ ಬರೆವಣಿಗೆಯ ಆಸಕ್ತಿಿ ಅವರನ್ನು ಕೈಬೀಸಿ ಕರೆಯಿತು. ನಗರದ ಮಲೆನಾಡು ಮಿತ್ರ, ಶಿವಮೊಗ್ಗ ಟೈಮ್‌ಸ್‌ ಮತ್ತು ನಾವಿಕ ಪತ್ರಿಿಕೆಗಳಿಗೆ ಲೇಖನ ಬರೆಯತೊಡಗಿದರು. ಇದರಿಂದ ಅವರ ಬರೆವಣಿಗೆ ಹೆಚ್ಚು ಸ್ಪಂದನೆ ಸಿಗತೊಡಗಿತು. ವಾಚಕರ ಸಂಖ್ಯೆೆ ಏರತೊಡಗಿತು. ಅನೇಕರು ಬರೆಹ ಮೆಚ್ಚಿಿಕೊಂಡು ಬೆನ್ನುತಟ್ಟಿಿದರು. ಪ್ರೋತ್ಸಾಾಹಿತರಾಗಿ ಬರೆವಣಿಗೆಯನ್ನು ಮುಂದುವರೆಸಿದರು. 
   ಸಾಮಾಜಿಕ ಹಾಗೂ ವೈಚಾರಿಕತೆಯ ಆಧಾರದಲ್ಲಿ ನಾಲ್ಕು ಕೃತಿಗಳನ್ನು ಈವರೆಗೆ ಅವರು ರಚಿಸಿದ್ದಾಾರೆ. ಅವುಗಳೆಂದರೆ- ಹೂ ಮಿಂಚಿನ ಗೊಂಚಲು, ಮನೋನ್ನತಿ, ಅರಿವಿನ ಚಿಂತನೆ, ಅಂತರಂಗದ ಅಭಿರುಚಿ. ಇವೆಲ್ಲವೂ ಓದುರಗರಿಂದ ಪ್ರಸಂಸಗೆ ಒಳಗಾಗಿವೆ. ಈ ಕೃತಿಗಳೂ ಸಹ ಮೌಲ್ಯಯುತವಾಗಿರುವುದರಿಂದ  ಮಮತಾ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆೆಯ ಹೆಸರುತಂದುಕೊಟ್ಟಿಿವೆ.
 ಸೀಮಿತ ಚೌಕಟ್ಟಿಿನೊಳಗೆ ನಿರೂಪಿಸಬೇಕಾದ ಸಂದರ್ಭಗಳಲ್ಲಿ ಚೊಕ್ಕವಾಗಿ, ಕಲಾತ್ಮಕವಾಗಿ, ಪರಿಣಾಮಕಾರಿಯಾಗಿ ಹೇಳುವ ಕಲೆ ಇವರಲ್ಲಿದೆ. ವಿಶಾಲವಾದ ಓದು, ಚಿಂತನಶೀಲತೆ, ಒಳನೋಟ, ರೂಢಿಸಿಕೊಂಡ ವಿಚಾರಗಳನ್ನು ಕೃತಿಗಳಲ್ಲಿ ರೂಪಿಸಿದ್ದಾಾರೆ. ಸಾವಧಾನವಾಗಿ ಸವಿಯಬಹುದಾದ, ಬುದ್ಧಿಿ-ಭಾವಗಳಿಗೆ ಚೈತನ್ಯ ನೀಡಬಲ್ಲ, ಚಿಕಿತ್ಸಕ ಗುಣಗಳುಳ್ಳ ಇವರ ಬರೆಹವನ್ನು ನಾವು ಕಾಣಬಹುದಾಗಿದೆ. ಬರೆಯುವುದು ಒಂಟಿತನದ ಕೆಲಸ. ಆದರೆ ಈ ಬರೆವಣಿಗೆಗೆ ಹಲವರು ಜನರು ಪರಿಣಾಮ ಬೀರಿರುತ್ತಾಾರೆ ಎಂಬ ಮಾತಿದೆ. ಈ ಪರಿಣಾಮ ಮಮತಾ ಅವರ ಕೃತಿಗಳಲ್ಲಿ ಕಂಡುಬರುತ್ತದೆ.   
ವಿಷಯಾಧಾರಿತವಾಗಿ ಅನೇಕ ಪ್ರಬಂಧಗಳನ್ನು ರಚಿಸಿದ್ದಾಾರೆ. ಜೊತೆಗೆ ಕವನಗಳ ರಚನೆಯಲ್ಲೂ, ಎತ್ತಿಿದಕೈ.  ಅನೇಕ ಸಾಹಿತ್ಯ ಗೋಷ್ಠಿಿಗಳಲ್ಲಿ ಕವನ ವಾಚನ ಮಾಡಿದ ಅನುಭವವಿದೆ. ಶಿವಮೊಗ್ಗದ  ಸಂಘ ಸಂಸ್ಥೆೆಗಳಾದ, ಕರ್ನಾಟಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಾ ಹಾಗೂ ರಾಜ್ಯದ ಲೇಖಕಿಯರ ಸಂಘ, ಓದುಗರ ವೇದಿಕೆ, ಬಂಟ ಸಮಾಜ, ಅತ್ರಿಿ ಮಹಿಳಾ ಸಮಾಜ, ವಿನಾಯಕ ನಗರದ ನಾಗರಿಕ ವೇದಿಕೆ ಇವುಗಳ ಕಾರ್ಯಕಾರಿ ಸಮಿತಿಯಲ್ಲಿ ಮತ್ತು ಸದಸ್ಯಳಾಗಿ ಕಾರ್ಯನಿರ್ವಹಿಸುತ್ತಲೇ ಸಾಹಿತ್ಯ ಕೃಷಿಯನ್ನೂ ಮುಂದುವರೆಸಿದ್ದಾಾರೆ.
 ಅತ್ರಿಿ ಮಹಿಳಾ ಸಮಾಜದಲ್ಲಿ ಅಧ್ಯಕ್ಷೆಯಾಗಿ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಾಾರೆ. ನಿಯತಕಾಲಿಕಗಳಲ್ಲಿ, ಬಂಟ ಸಮಾಜದ ಮಾಸಿಕ ಪತ್ರಿಿಕೆಗಳಲ್ಲಿ ಸತತವಾಗಿ 2015 ರಿಂದ ಲೇಖನಗಳನ್ನು ಬರೆಯುತ್ತಿಿದ್ದಾಾರೆ. ಭದ್ರಾಾವತಿ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾಾರೆ. ಸ್ವ-ರಚಿತ ಕವನ ವಾಚನ ರಚಿಸಿ ನಿವೇದಿಸಿದ್ದಾಾರೆ. ವಿಷಯಾಧಾರಿತ ಲೇಖನಗಳಿಗೆ ಕವನಗಳನ್ನು ಸತತವಾಗಿ ಬರೆಯುತ್ತಿಿದ್ದಾಾರೆ. ಅತ್ರಿಿ ಮಹಿಳಾ ಸಮಾಜದಲ್ಲಿ ನಾಟಕಗಳನ್ನು ಬರೆದು ಪ್ರಸ್ತುತಪಡಿಸಿದ್ದಾಾರೆ.
ಸಾಹಿತ್ಯವು ಜೀವನಾಸಕ್ತಿಿಯನ್ನು ಹೆಚ್ಚಿಿಸಿ ಸಮಾಜದೊಂದಿಗೆ ಭಾವನಾತ್ಮಕವಾದ ಸಂಬಂಧವನ್ನು ಬೆಸೆಯುತ್ತದೆ. ಅನೇಕ ವಿಷಯಗಳನ್ನು ಕಲಿಸಿಕೊಡುತ್ತದೆ.   . ಸಾಧನೆಯ ಹಾದಿಯಲ್ಲಿ ವಯಸ್ಸು, ಲಿಂಗ ಅಡ್ಡಿಿಯಾಗಲಾರದು. ಬರೆಯುವ ಅಥವಾ ಕಲಿಕೆಯ ಆಸಕ್ತಿಿಯಷ್ಟೇ ಇಲ್ಲಿ ಮುಖ್ಯವಾಗಿರುತ್ತದೆ ಎನ್ನುತ್ತಾಾರೆ ಮಮತಾ ಹೆಗ್ಡೆೆ. 
published on march 23.2019
............................


No comments:

Post a Comment