Saturday 2 March 2019

ಚೌಡಿಕೆಯ ಅದ್ಭುತ ಗಣಿ
ಲಕ್ಷ್ಮಣರಾವ್ ಗೋಂಧಳಿ



ಜಾನಪದ ಕಲೆಯನ್ನೇ ನಂಬಿ ಜೀವನ ನಡೆಸುವವರು ಇಂದಿಗೂ  ಸಾಕಷ್ಟು ಜನರಿದ್ದಾಾರೆ. ವಂಶಪರಂಪರೆಯಾಗಿ ಬಂದ ಕಲೆಯನ್ನು ಬಿಡದೆ ಮೂರ್ನಾಲ್ಕು ತಲೆಮಾರಿಗೂ ಮುಂದುವರೆಸಿಕೊಂಡು ಬಂದಿರುವ ಕುಟುಂಬವೊಂದು ಭದ್ರಾಾವತಿಯಲ್ಲಿದೆ. ಅಪರೂಪದ್ದಾಾದ ಚೌಡಿಕೆ ಪದ ಹೇಳುತ್ತ, ಊರೂರು ಸುತ್ತುವುದೇ ಇವರ ಕಾಯಕ. ಇಂದಿಗೂ ಈ ಕಲೆಯೇ ಇವರ ಜೀವನಾಧಾರ. ಇಂತಹ ಅಸಾಮಾನ್ಯ ಕಲಾವಿದನಿಗೆ ಕರ್ನಾಟಕ ಜಾನಪದ ಪರಿಷತ್ತು ಪ್ರಸಕ್ತ ಸಾಲಿನ ರಾಜ್ಯಪ್ರಶಸ್ತಿಿಯನ್ನು ಘೋಷಿಸಿದೆ.
ಲಕ್ಷ್ಮಣರಾವ್  ಗೋಂಧಳಿ 67ರ ಹರಯದವರು. ಶಾಲೆ- ಕಾಲೇಜು ಮೆಟ್ಟಿಿಲು ಹತ್ತಿಿದವರಲ್ಲ. ಅತಿ ಬಡತನದ ಕುಟುಂಬವಾದ್ದರಿಂದ, ಅಜ್ಜ- ತಂದೆ ಎಲ್ಲರೂ ಚೌಡಿಕೆಯನ್ನೇ ವೃತ್ತಿಿಯಾಗಿರಿಸಿಕೊಂಡಿದ್ದರು. ಜೀವನ ನಡೆಸುವುದೇ ಕಷ್ಟಸಾಧ್ಯವಾದ ಕಾಲದಲ್ಲಿ ಲಕ್ಷ್ಮಣರಾವ್ ಸಹ ವೃತ್ತಿಿಪರ ಕಲಾವಿದರಾಗಿ ಅವರ ಮಾರ್ಗದರ್ಶನದಲ್ಲಿ ಬೆಳೆದರು. ಇಲ್ಲಿಯವರೆಗೂ ಯಾರೂ ಅವರ ಕಲೆಯನ್ನು ಗುರುತಿಸಿರಲಿಲ್ಲ. ಆದರೆ ಜಾನಪದ ಪರಿಷತ್ ಚೌಡಿಕೆಯ ಅದ್ಭುತ ಗಣಿಯಂತಿರುವ, ಕಲೆಯ ದೊಡ್ಡ ಸಾಮ್ರಾಾಜ್ಯದಂತಿರುವ ಇವರನ್ನು ಗುರುತಿಸುವ ಮೂಲಕ ಇಡೀ ರಾಜ್ಯಕ್ಕೇ ಈ ಕುಟುಂಬದ ಸಾಧನೆಯನ್ನು ಪರಿಚಯಿಸಿದೆ. 
 ಒಂದು ಗಂಟೆಯಿಂದ ಇಡೀ ರಾತ್ರಿಿಯವರೆಗೆ ಪದ ಹೇಳುವ ಪ್ರತಿಭಾನ್ವಿಿತರು ಇವರು. ಹಬ್ಬ- ಹರಿದಿನಗಳಲ್ಲಿ, ಸುಗ್ಗಿಿ ಸಮಯದಲ್ಲಿ ಲಾಟೀನು ಮತ್ತು ದೀಪ ಹಿಡಿದುಕೊಂಡು ಹಳ್ಳಿಿಗಳಿಗೆ ತೆರಳಿ ಪದ ಹೇಳಿ ಅವರು ಕೊಟ್ಟ ಅಕ್ಕಿಿ, ಧಾನ್ಯ, ಹಣವನ್ನು ಪಡೆದು ಬರುವುದು ಇವರ ಅಜ್ಜ ಯಲ್ಲೋೋಜಿರಾವ್ ಕಾಲದಿಂದ ಬಂದ ಸಂಪ್ರದಾಯ. ಇದನ್ನೇ ಲಕ್ಷ್ಮಣರಾವ್ ಅವರ ತಂದೆ ಫಕೀರಪ್ಪ ಸಹ ಮುಂದುವರೆಸಿದರು. ಈಗ ಲಕ್ಷ್ಮಣರಾವ್ ಜೊತೆಗೆ ಅವರ ಪತ್ನಿಿ ಜಯಂತಿ, ಹಾಗೂ ಮೂವರು ಪುತ್ರರೂ ಅದನ್ನು ನಡೆಸಿಕೊಂಡು ಬರುತ್ತಿಿದ್ದಾಾರೆ.
 ಕರ್ನಾಟಕ ಹಾಗೂ ಹೊರರಾಜ್ಯದಲ್ಲಿ ಇವರು ಅನೇಕ ಕಾರ‌್ಯಕ್ರಮಗಳನ್ನು ಇವರು ನೀಡಿ ಖ್ಯಾಾತರಾಗಿದ್ದಾಾರೆ. ಸುಮಾರು 4 ದಶಕದಿಂದ ಜಾನಪದ ಕಲೆ ಉಳಿಸಿ- ಬೆಳೆಸಿದ್ದಾಾರೆ. ಆಕಾಶವಾಣಿ, ದೂರದರ್ಶನ ಮತ್ತು ಕೆಲವು ಖಾಸಗಿ ಚಾನಲ್‌ಗಳಲ್ಲಿ ಇವರ ಕಾರ‌್ಯಕ್ರಮ ಪ್ರಸಾರವಾಗಿದೆ. ವಿಷಾದದ ವಿಚಾರವೆಂದರೆ, ಶಿವಮೊಗ್ಗ ಜಿಲ್ಲೆೆಯಲ್ಲೇ ಇವರ ಕಲೆಯನ್ನು ಯಾರೂ ಪ್ರೋತ್ಸಾಾಹಿಸಿಲ್ಲ. ಹಾಗಂತ ಜಿಲ್ಲೆೆಯ ಎಲ್ಲಾಾ ತಾಲೂಕಿನಲ್ಲೂ ವಿವಿಧ ಸಂದರ್ಭಗಳಲ್ಲಿ ಕಾರ‌್ಯಕ್ರಮ ಕೊಡುತ್ತಿಿದ್ದಾಾರೆ. ಸಿಗಂಧೂರಿನಲ್ಲಿ ಪ್ರತಿವರ್ಷ ರಥೋತ್ಸವದಂದು ಇವರ ಕಾರ‌್ಯಕ್ರಮ ನಡೆಯುತ್ತದೆ. ಬಂಗಾರುಮಕ್ಕಿಿ ದೇವಸ್ಥಾಾನದಲ್ಲೂ ವರ್ಷದಲ್ಲೊೊಮ್ಮೆೆ ಇವರಿಗೆ ಆಹ್ವಾಾನವಿದೆ.  ಲೆಕ್ಕವಿಲ್ಲದಷ್ಟು ವೇದಿಕೆ ಕಾರ‌್ಯಕ್ರಮಗಳನ್ನು ನೀಡಿದ್ದರೂ ಕಲಾಪೋಷಕರ ಕಣ್ಣಿಿಗೆ ಇವರು ಬಿದ್ದಿಲ್ಲ ಎನ್ನುವುದೇ ಸೋಜಿಗ.
ಮಹಾರಾಷ್ಟ್ರದ ಅಂಬಾಭವಾನಿ, ಯಲ್ಲಮ್ಮನ ಕುರಿತಾದ ಪುರಾಣ ಕಥೆಗಳನ್ನು ಹೆಚ್ಚಾಾಗಿ ಚೌಡಿಕೆ ಪದಗಳಲ್ಲಿ ಹೇಳುವುದರ ಜೊತೆಗೆ ರಾಜ-ಮಹಾರಾಜರ ಕಾಲದ ಕಥೆಗಳನ್ನೂ ಅಳವಡಿಸಿಕೊಂಡಿದ್ದಾಾರೆ. ಸುಮಾರು  60ರಷ್ಟು ಹಾಡು ಇವರ ಕಣಜದಲ್ಲಿದೆ. ವೇಷಭೂಷಣದೊಂದಿಗೆ, ಚೌಡಿಕೆ ಹಿಡಿದು, ಕುಣಿತವನ್ನೂ ಅಳವಡಿಸಿಕೊಂಡು ವೇದಿಕೆ ಏರಿದರೆ ಆ ಕಾರ‌್ಯಕ್ರಮದ ಸೊಗಸೇ ಬೇರೆ. ಇಂದಿಗೂ ತಿಂಗಳಿಗೆ 2-3 ಕಾರ‌್ಯಕ್ರಮ ಇವರಿಗೆ ಸಿಗುತ್ತಿಿದೆ. ಹಬ್ಬದ ವೇಳೆ ಇನ್ನಷ್ಟು ಹೆಚ್ಚು ಕಾರ‌್ಯಕ್ರಮವಿರುತ್ತದೆ.
 ಇಂದಿನ ಯುವಪಿಳಿಗೆ ಇಂತಹ ಕಲೆಗಳನ್ನು ಉಳಿಸಿಕೊಂಡು ಹೋಗಬೇಕಿದೆ. ಕಲಿಯಲು ಆಸಕ್ತಿಿ ಇರುವವರಿಗೆ ಕಲಿಸಲು ತಾನು ಸಿದ್ಧ ಎನ್ನುತ್ತಾಾರೆ ಲಕ್ಷ್ಮಣರಾವ್. ಜಿಲ್ಲಾಾ ಜಾನಪದ ಕಲಾಪರಿಷತ್ ಅಧ್ಯಕ್ಷ ಡಿ. ಮಂಜುನಾಥ ಅವರು ಸಾಹಿತ್ಯ ಹುಣ್ಣಿಿಮೆ ಕಾರ‌್ಯಕ್ರಮದಲ್ಲಿ ಇವರ ಕಲೆಯ ಸವಿಯನ್ನು ಈ ಹಿಂದೆ ಉಣಬಡಿಸಿದ್ದರು. ಇದೇ ಆಧಾರದಲ್ಲಿ ಪರಿಷತ್‌ನ ವಾರ್ಷಿಕ ಪ್ರಶಸ್ತಿಿಗೂ ಶಿಫಾರಸು ಮಾಡಿದ್ದರು. ಇವರ ಕಾರ‌್ಯಕ್ರಮ ಏರ್ಪಡಿಸಲು ಆಸಕ್ತಿಿ ಹೊಂದಿದವರಿದ್ದಲ್ಲಿ ಮೊಬೈಲ್ ನಂಬರ್-8660177201ಗೆ ಸಂಪರ್ಕಿಸಬಹುದು. 
23. jan 2019
............................          

No comments:

Post a Comment