Saturday 22 June 2019


ಉಚಿತವಾಗಿ ಯೋಗ ಕಲಿಸುವ
ಎನ್. ಪಿ. ವೆಂಕಟೇಶ್


 ಯೋಗ ಎನ್ನುವುದು ಒಂದು ದೀಪ. ಅದು ಎಂದೂ ಮಂಕಾಗುವುದಿಲ್ಲ. ನೀವು ಎಷ್ಟು ಅದನ್ನು ಆಳವಾಗಿ ಕಲಿಯುತ್ತೀರೋ ಅಷ್ಟು ಅದು ಜ್ವಾಾಜ್ವಲ್ಯಮಾನವಾಗಿ ಉರಿಯುತ್ತದೆ ಎಂದು ಅಂತರರಾಷ್ಟ್ರೀಯ ಯೋಗ ಪಟು ಬಿ ಕೆ. ಎಸ್. ಅಯ್ಯಂಗಾರ್ ಹೇಳಿದ ಮಾತಿದೆ. ಇದನ್ನು ನಾವು ರೂಢಿಸಿಕೊಂಡಷ್ಟು ಹೆಚ್ಚು ಅನುಭವ ಸಿಗುತ್ತದೆ. ಆರೋಗ್ಯದಾಯಕ ಬದುಕು ಲಭಿಸುತ್ತದೆ.
ನಮ್ಮ ದೇಹದ ಹೊರಭಾಗದಲ್ಲಿ ಏನು ಘಟಿಸುತ್ತದೆಯೋ ಅದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಆದರೆ ದೇಹದ ಒಳಭಾಗದಲ್ಲಿ ಏನು ಸಂಭವಿಸುತ್ತದೆಯೋ ಅದನ್ನು ನಿಯಂತ್ರಿಿಸಬಹುದು. ಅದು ಯೋಗದಿಂದ ಮಾತ್ರ ಸಾಧ್ಯ.  ನಮ್ಮ ಹಾಲಿ ಜೀವನ ಎಲ್ಲಿ ಕೇಂದೀಕೃತವಾಗಿರುತ್ತದೆಯೋ ಅಲ್ಲಿಗೆ ಯೋಗ ನಮ್ಮನ್ನು ಕರೆದೊಯ್ಯುತ್ತದೆ. ದೇಹ ಮತ್ತು ಮನಸ್ಸನ್ನು ಕೇಂದ್ರೀಕರಿಸುವುದು ಮತ್ತು ನಿಯಂತ್ರಿಿಸುವುದೇ ಯೋಗದ ಕೆಲಸ.
ಯೋಗ ಈಗ ಸಾಮಾನ್ಯವಾಗಿದೆ. ಸಣ್ಣಮಕ್ಕಳೂ ಸಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ಸ್ಪರ್ಧೆಯಲ್ಲಿ ಪದಕ ಗೆಲ್ಲುತ್ತಿಿದ್ದಾಾರೆ. ಈ ರೀತಿ ಮಕ್ಕಳನ್ನು ತಯಾರು ಮಾಡಲು ಯೋಗ ಶಿಕ್ಷಣ ಕೇಂದ್ರಗಳು ಅಲ್ಲಲಿ ತೆರೆದುಕೊಂಡಿವೆ. ಶಿವಮೊಗ್ಗ ನಗರದ ಮಾರ್ನಮಿಬೈಲ್‌ನ ಎರಡನೆಯ ಕ್ರಾಾಸ್‌ನಲ್ಲಿ  ವರ್ಷಿಣಿ ಯೋಗ ಕೇಂದ್ರ 5 ವರ್ಷದಿಂದ ಕಾರ್ಯಾಾಚರಿಸುತ್ತಿಿದೆ. ಇದರ ಸ್ಥಾಾಪಕರು ಮತ್ತು ಗುರು ಎನ್. ಪಿ. ವೆಂಕಟೇಶ್.
ವೆಂಕಟೇಶ್ 20 ವರ್ಷಗಳಿಂದ ಯೋಗದಲ್ಲಿ ಪರಿಣಿತರು. ಅನಾರೋಗ್ಯ ಸಂಭವಿಸಿದಾಗ ತಮ್ಮ ತಂದೆ ಕೊಟ್ಟ ಸಲಹೆ ಮೇರೆಗೆ ಯೋಗಾಸನವನ್ನು ಮಾಡಲಾರಂಭಿಸಿದ್ದರು. ಆನಂತರ ಅದರಿಂದ ಗುಣಮುಖರಾಗಿದ್ದರಿಂದ ಯೋಗದ ಮೇಲೆ ವಿಶೇಷ ಪ್ರೀತಿ, ವಿಶ್ವಾಾಸ ಬೆಳೆಯಿತು. ಅದನ್ನೇ ಏಕೆ ಮುಂದುವರೆಸಬಾರದು ಎಂದು ನಿರ್ಧರಿಸಿ ನಗರದ ರಾಘವೇಂದ್ರ ಯೋಗ ಕೇಂದ್ರದಲ್ಲಿ ಕಲಿಕೆ ಆರಂಭಿಸಿದರು. ಈಗ ಯೋಗದಲ್ಲಿ ಇನ್‌ಸ್‌‌ಟ್ರಕ್ಟರ್ ಕೋರ್ಸನ್ನು ಮುಗಿಸಿ ಶಾಲೆ ತೆರೆದಿದ್ದಾಾರೆ.
ಶಿವಮೊಗ್ಗ ಸಹಿತ ರಾಜ್ಯದ ಹಲವೆಡೆ ಯೋಗ ಕಲಿಕೆಯನ್ನು ನಡೆಸುತ್ತಿಿದ್ದಾಾರೆ. ಇದರೊಟ್ಟಿಿಗೆ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್‌ನ್ನು ನಗರದಲ್ಲಿ ಮತ್ತು ದಾವಣಗೆರೆಯಲ್ಲಿ ನಡೆಸಿ, ಅಲ್ಲಿ ಗೆದ್ದು ರಾಜ್ಯದ ಮಕ್ಕಳನ್ನು ಎರಡು ಬಾರಿ ಬ್ಯಾಾಂಕಾಕ್‌ಗೆ ಕರದೊಯ್ದ ಕೀರ್ತಿ ಇವರದ್ದು. ಎರಡು ಬಾರಿಯೂ ಚಿನ್ನ, ಬೆಳ್ಳಿಿ, ಕಂಚು ಸಹಿತ ಹಲವು ಪದಕಗಳನ್ನು ಗೆದ್ದು ತರುವಂತೆ ಮಾಡಿದ್ದಾಾರೆ. 2018 ಮತ್ತು 2019ರಲ್ಲಿ ಈ ಚಾಂಪಿನ್‌ಶಿಪ್ ನಡೆದಿತ್ತು.
 ವೆಂಕಟೇಶ್ ಹಣದ ಆಸೆಗೆ ಎಂದೂ ಯೋಗ ಕಲಿಸುತ್ತಿಿಲ್ಲ. ಉಚಿತವಾಗಿ ತರಗತಿ ನಡೆಸುತ್ತಿಿದ್ದಾಾರೆ. ಹಲವರು ಯೋಗವನ್ನು ವಾಣಿಜ್ಯಾಾತ್ಮಕವಾಗಿ ನಡೆಸುತ್ತಿಿರುವುದು ಹೆಚ್ಚುತ್ತಿಿದೆ. ಆದರೆ ಇವರು ಈ ವರ್ಷದಿಂದ ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ಮಕ್ಕಳಿಗೆ ಕಲಿಸಲು ತೀರ್ಮಾನಿಸಿದ್ದಾಾರೆ. ಜೊತೆಗೆ  ಗೋಪಾಳದ ವೃದ್ಧಾಾಶ್ರಮದಲ್ಲಿ ಸುಮಾರು 250 ಜನರಿಗೆ ಬೆಳಿಗ್ಗೆೆ ಮತ್ತು ಸಂಜೆ ಒಂದೂವರೆ ಗಂಟೆ ಯೋಗ ಕಲಿಸುತ್ತಿಿದ್ದಾಾರೆ.
ನಗರದ ಡಿವಿಎಸ್ ಕಾಲೇಜಿನಲ್ಲಿ ಪದವಿ ಮುಗಿಸಿ ಟಿಸಿಎಚ್ ಕೋರ್ಸನ್ನು ಮುಗಿಸಿರುವ ವೆಂಕಟೇಶ್,  2001ರಲ್ಲಿ ನಗರದ ಆದಿಚುಂಚನಗಿರಿ ಕಲ್ಯಾಾಣ ಮಂದಿರದಲ್ಲಿ ನಡೆದ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸ್ಥಾಾನ ಗಳಿಸಿದ್ದಾಾರೆ. 20013ರಲ್ಲಿ ದಾವಣಗೆರೆಯಲ್ಲಿ ಜರುಗಿದ ಚಾಂಪಿಯನ್‌ಶಿಪ್‌ನಲ್ಲಿ ದ್ವಿಿತೀಯ ಮತ್ತು 2005ರಲ್ಲಿ ಮೈಸೂರಿನಲ್ಲಿ ತೃತೀಯ ಸ್ಥಾಾನ ಗಳಿಸಿದ್ದಾಾರೆ. ಆನಂತರ ಹಲವಾರು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಿಗೆ ಮಕ್ಕಳನ್ನು ತಯಾರು ಮಾಡಿ ಪ್ರಶಸ್ತಿಿ ಗೆದ್ದು ತರುವಂತೆ ಮಾಡುತ್ತಿಿದ್ದಾಾರೆ.
ಯೋಗ ಸುಂದರ ಬದುಕನ್ನು ರೂಪಿಸತ್ತದೆ. ಇದರ ತರಬೇತಿ ಪಡೆಯುವುದರಿಂದ  ದೇಹ ಅರಳುತ್ತದೆ. ಮನಸ್ಸು ವಿಕಸಿಸುತ್ತದೆ. ನಿರಂತರವಾಗಿ ಯೋಗ ಮಾಡುವುದರಿಂದ ಮಾತ್ರ ನಾವಂದುಕೊಂಡ ಸಾಧನೆ ಸಾಧ್ಯ ಎನ್ನುತ್ತಾಾರೆ ವೆಂಕಟೇಶ್. 

published 0n 22.6.19
..................

No comments:

Post a Comment