Saturday 15 June 2019

ದಾಖಲೆಯ ಪುಟ ಸೇರಿದ
ಸಚಿನ್ ವರ್ಣೇಕರ್




ಕೌಶಲ್ಯ ಮತ್ತು ದೃಢ ವಿಶ್ವಾಾಸವಿದ್ದರೆ ವ್ಯಕ್ತಿಿಯನ್ನು ಯಾರೂ ಸೋಲಿಸಲಾಗದು ಎಂಬ ಮಾತಿದೆ. ಇವೆರಡೂ ಒಂದೆಡೆ ಸೇರಿದರೆ ಯಶಸ್ಸು ದ್ವಿಿಗುಣಗೊಳ್ಳುತ್ತದೆ, ಸಾಧಿಸಲು ಅಸಾಧ್ಯವಾದುದು ಯಾವುದೂ ಇರುವುದಿಲ್ಲ. 
ಪ್ರತಿಭೆಯ ಜೊತೆ ಕೌಶಲ್ಯ ಇದ್ದರೆ ವ್ಯಕ್ತಿಿ ಉನ್ನತ ಸ್ಥಾಾನಕ್ಕೇರಬಹುದು, ಸಾಧನೆಯಲ್ಲಿ ಇನ್ನಷ್ಟು ಮುಂದಡಿಯಿಡಬಹುದು. ಪ್ರಸ್ತುತ ದಿನಗಳಲ್ಲಿ ಕೌಶಲ್ಯಕ್ಕೆೆ ತುಂಬಾ ಮಹತ್ವವಿದೆ. ಯುವಜನತೆ ಕೌಶಲ್ಯವಂತರಾದರೆ ಅವರನ್ನು ಯಾರೂ ಹಿಂದಿಕ್ಕಲು ಸಾಧ್ಯವಿಲ್ಲ. ಜೀವನದ ಸಾಧನೆಗೆ ಇದೇ ಮೆಟ್ಟಿಿಲಾಗುತ್ತದೆ.
ಸಚಿನ್ ವರ್ಣೇಕರ್ ಭದ್ರಾಾವತಿಯ ಯುವಕ. ಅಲ್ಲಿನ ಸಿ. ಎನ್. ರಸ್ತೆೆಯ ಭೂತನಗುಡಿಯಲ್ಲಿ ಚಿನ್ನದ ಅಂಗಡಿ ನಡೆಸುತ್ತಿಿದ್ದಾಾರೆ. ವಿದ್ಯಾಾಭ್ಯಾಾಸದ  ದಿನದಲ್ಲೇ ಚಿತ್ರಕಲೆಯಲ್ಲಿ ಹೆಚ್ಚಿಿನ ಆಸಕ್ತಿಿ ಇದ್ದುದರಿಂದ ಮತ್ತು ಅದರಲ್ಲಿ ಅನೇಕ ಬಹುಮಾನಗಳನ್ನು ಪಡೆದಿದ್ದರಿಂದ ಹೊಸ ರೀತಿಯ ಚಿತ್ರ, ಕೆತ್ತನೆಗಳತ್ತ ಚಿಂತನೆ ನಡೆಸುತ್ತಲೇ ಇದ್ದರು. ಅತ್ಯಂತ ಸೂಕ್ಷ್ಮದ, ತೀರಾ ಸಹನೆಯ ಮತ್ತು ಅಷ್ಟೇ ಕಷ್ಟದ ಕೆಲಸ ಇದಾದರೂ, ಛಲ ಬಿಡದೆ ಸಚಿನ್ ಚಿನ್ನದ ಅತಿ ಚಿಕ್ಕ ಶಿವಲಿಂಗ ಮತ್ತು ರಾಮಮಂದಿರ ನಿರ್ಮಿಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಸ್‌‌ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾಾರೆ.
  ಸಚಿನ್ ತನ್ನ ಸೋದರ ಮಾವನ ಅಂಗಡಿಯಲ್ಲಿ ಕೆಲಸ ಮಾಡುತ್ತ, ವಿವಿಧ ವಿನ್ಯಾಾಸದ ತಯಾರಿಕೆಯನ್ನು ನೋಡಿ ಕಲಿತವರು. ಒಂದು ವರ್ಷದ ಅನಿಮೇಶನ್ ಕೋರ್ಸನ್ನು ಇದೇ ವೇಳೆ ಶಿವಮೊಗ್ಗದಲ್ಲಿ ಪೂರೈಸಿ, ತಮ್ಮದೇ ಆದ ಚಿನ್ನದ ಅಂಗಡಿ ವ್ಯವಹಾರ ಆರಂಭಿಸಿದರು. ಚಿನ್ನದ ಕುಸುರಿ ಕಲೆಯಲ್ಲಿ ಜ್ಞಾಾನವಿದ್ದುದರಿಂದ ಮತ್ತು ಹೊಸತನದ್ದು ಏನನ್ನಾಾದರೂ ಮಾಡಬೇಕೆಂದು ಮನಸ್ಸು ಹಾತೊರೆಯುತ್ತಿಿದ್ದುದರಿಂದ ಹೊಸ ನಮೂನೆಯ ಆಭರಣಗಳನ್ನು ತಯಾರಿಸುವ ಕೆಲಸ ಆರಂಭಿಸಿ, ಕೌಶಲ್ಯವನ್ನು ಅದರಲ್ಲಿ ತೋರಿಸುತ್ತಿಿದ್ದಾಾರೆ. ಇದೇ ವೇಳೆ ಅತಿ ಕಡಿಮೆ ಬಂಗಾರ ಬಳಸಿ ಶಿವಲಿಂಗವನ್ನು ಏಕೆ ರಚಿಸಬಾರದೆಂದು ಯೋಚಿಸಿದರು. ಅದರಂತೆ  112 ಮಿಲಿ ಬಂಗಾರ ಬಳಸಿ ಶಿವಲಿಂಗವನ್ನು ಒಂದೇ ದಿನದಲ್ಲಿ ಕಳೆದ ಶಿವರಾತ್ರಿಿ ವೇಳೆ ರಚಿಸಿದರು. ಇದಾದ ಬಳಿಕ ರಾಮಮಂದಿರವನ್ನೂ ಸಹ ರಾಮನವಮಿ ಸಂದರ್ಭದಲ್ಲಿ ರಚಿಸಿದ್ದಾಾರೆ. ಇದಕ್ಕೆೆ 18 ಗ್ರಾಾಮ್ ಬಂಗಾರ ಬಳಸಿದ್ದಾಾರೆ.
ಇದನ್ನು ಕೆಲವು ಮುಖಂಡರಿಗೆ ಮತ್ತು ಮಿತ್ರರಿಗೆ ತೋರಿಸಿದಾಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಸ್‌‌ಗೆ ಕಳುಹಿಸುವಂತೆ ಸೂಚಿಸಿದ್ದರಿಂದ  ಇದನ್ನೆೆಲ್ಲಾಾ ವೀಡಿಯೋ ಮಾಡಿ, ದಾಖಲೆ ಸಹಿತ ಕಳುಹಿಸಿದರು. ಅಲ್ಲಿಂದ ಇವರ ಸಾಧನೆಗೆ ಮನ್ನಣೆ ಸಿಕ್ಕಿಿದೆ. ಹೆಸರು ಈಗ ದಾಖಲಾಗಿದೆ. ಸದ್ಯದಲ್ಲೇ ಅವರ ಪ್ರಮಾಣಪತ್ರ ಇವರ ಕೈಸೇರಲಿದೆ.
ಈ ಶಿವಲಿಂಗವನ್ನು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೂ ತೋರಿಸಿದ್ದಾಾರಲ್ಲದೆ, ಅಲ್ಲಿನ ಮಂಜೂಷಾ ವಸ್ತುಸಂಗ್ರಹಾಲಯದಲ್ಲಿಡಲು ಅದೇ ರೀತಿಯ ಇನ್ನೊೊಂದು ಶಿವಲಿಂಗವನ್ನು ಮಾಡಿಕೊಟ್ಟಿಿದ್ದಾಾರೆ. ಕರ್ಕಿುಯ ದೈವಜ್ಞಪೀಠದ ಸ್ವಾಾಮೀಜಿಯವರಿಗೂ ಇದನ್ನು ತೋರಿಸಿ ಅವರಿಂದಲೂ  ಪ್ರಶಂಸೆಗೊಳಗಾಗಿದ್ದಾಾರೆ. ಈ ಯುವಕನ ಸಾಧನೆ ಮೆಚ್ಚಿಿ ಹಲವರು ಸನ್ಮಾಾನಿಸಿದ್ದಾಾರೆ.
ಮುಂದಿನ ದಿನಗಳಲ್ಲಿ ಇದೇ ಮಾದರಿಯ ಇನ್ನೂ ಹಲವು ರಚನೆಗಳನ್ನು ಸಾಂದರ್ಭಿಕವಾಗಿ ಮಾಡಲು ಯೋಚಿಸಿರುವ ಸಚಿನ್, ಅವಕಾಶ ಸಿಕ್ಕಲ್ಲಿ ಪ್ರಮುಖ ಸಭೆ, ಸಮಾರಂಭಗಳಲ್ಲಿ ಇದನ್ನು ಪ್ರದರ್ಶಿಸುವ ನಿರ್ಧಾರವನ್ನೂ ಮಾಡಿದ್ದಾಾರೆ. ಇದರಿಂದ ಸಾರ್ವಜನಿಕರಲ್ಲಿ ಇದು ಹೆಚ್ಚು ಪ್ರಚಲಿತವಾಗಲಿದೆಯಲ್ಲದೆ, ಯುವಕರಲ್ಲಿ ಅಥವಾ ಆಸಕ್ತರಲ್ಲಿ ಈ ಬಗ್ಗೆೆ ಜಾಗೃತಿ ಮೂಡಲಿದೆ. ಯುವಕರು ಇಂತಹ ಹೊಸ ವಿಧದ ಕೌಶಲ್ಯವನ್ನು ಕಲಿಯಲು ಪ್ರೇರಣೆಯಾಗುತ್ತದೆ ಎನ್ನುತ್ತಾಾರೆ ಸಚಿನ್.
ಸಚಿನ್ ಅವರ ಈ ಕೌಶಲ್ಯವನ್ನು ಪ್ರೋತ್ಸಾಾಹಿಸುವ ಕೆಲಸವಾಗಬೇಕಿದೆ. ಸಂಘ-ಸಂಸ್ಥೆೆಗಳು, ಗಣ್ಯರು ಇಂತಹ ಯುವಕರನ್ನು ಇನ್ನಷ್ಟು ಗುರುತಿಸುವ ಮೂಲಕ ಹೆಚ್ಚಿಿನ ಸಾಧನೆಗೆ ಪ್ರೇರೇಪಿಸಬೇಕಿದೆ.
published on 15.6.2019
,,,,,,,,,,,,,,,,,,,,,,,,,,,       

No comments:

Post a Comment