Wednesday 5 June 2019

ಹುಟ್ಟಿಿದೂರಿಗೆ ತಂತ್ರಜ್ಞಾಾನ ತಂದ 
ರಾಘವೇಂದ್ರ 



ತಂತ್ರಜ್ಞಾಾನ ಮತ್ತು ಸಂಶೋಧನೆ ಮೂಲಕ ಮಾರುಕಟ್ಟೆೆಯಲ್ಲಿ ಹೊಸ  ಸೇವೆ ಮತ್ತು ಉತ್ಪನ್ನಗಳನ್ನು ಇಂದು ಕಾಣಬಹುದಾಗಿದೆ. ಜನರ ಅನೇಕ ಅವಶ್ಯಕತೆಗಳಿಗೆ ಪರಿಹಾರವೂ ಇದರಿಂದಾಗಿ ದೊರೆತಿದೆ. ದಿನೇ ದಿನೇ ಹೊಸ ಸಂಶೋಧನೆಗಳು ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಿಿದೆ. ನಗರದ ಯುವಕನೊಬ್ಬ ಆಕೃತಿ 3ಡಿ ಕಂಪನಿಯ ಹುಟ್ಟುಹಾಕಿ  ಡಿಸೈನ್ ಥಿಂಕಿಂಗ್ ಪ್ರಯೋಗಾಲಯವನ್ನು ನಗರದಲ್ಲಿ ಸ್ಥಾಾಪಿಸಿದ್ದಾಾರೆ. 
 ನಗರದ ಈ ಯುವಕನ ಹೆಸರು ರಾಘವೇಂದ್ರ. ವಿನೋಬನಗರದ ಕೆಎಚ್‌ಬಿ ಕಾಲನಿ ವಾಸಿಯಾಗಿರುವ ಆಡಿಟರ್ ಮತ್ತು ತೆರಿಗೆ ಸಲಹಾಗಾರರಾಗಿರುವ ಬಿ. ಸುರೇಂದ್ರ ಅವರ ಪುತ್ರ. ಇವರು ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾಾನ ಸಂಸ್ಥೆೆಯಲ್ಲಿ ಏರೋಸ್ಪೇಸ್ ಇಂಜಿನೀಯರಿಂಗ್ ಪದವಿ ಪಡೆದು ಅಲ್ಲಿಯೇ ಸಿಎಫ್‌ಡಿ ಮತ್ತು ಏರೋ ಡೈನಾಮಿಕ್‌ಸ್‌ ವಿಷಯದಲ್ಲಿ ಸಂಶೋಧನೆ ನಡೆಸಿ ಎಂ. ಟೆಕ್ ಮುಗಿಸಿದ್ದಾಾರೆ.
ಇವರ ತ್ರಿಿ ಡಿ ಪ್ರಿಿಂಟಿಂಗ್ ಸಂಶೋಧನೆ  ಇವರಿಗೆ ಅನೇಕ ಗೌರವಗಳನ್ನು ತಂದುಕೊಟ್ಟಿಿದೆ. ಇದರಿಂದಾಗಿ ಅವರಿಗೆ ಅನೇಕ ಶೈಕ್ಷಣಿಕ ಪ್ರಶಸ್ತಿಿ ಮತ್ತು ಗೌರವಗಳು ದಕ್ಕಿಿವೆ. ಬೆಂಗಳೂರಿನ  ಜೈನ್ ವಿಶ್ವವಿದ್ಯಾಾಲಯದ ಚಿನ್ನದ ಪದಕ ಮತ್ತು ಸಿಎಸ್‌ಐಆರ್- ಎನ್‌ಎಎಲ್‌ನ ಬಂಗಾರದ ಪದಕ  ಲಭಿಸಿದೆ. ಅಮೆರಿಕದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಐಎಎಂ-3ಡಿ ಸ್ಪರ್ಧೆಯಲ್ಲಿ  ಮತ್ತು ಜಪಾನಿನಲ್ಲಿ ನಡೆದ ಸಾಂಸ್ಕೃತಿಕ ವಿನಿಮಿಯ ಕಾರ‌್ಯಕ್ರಮದಲ್ಲಿ ಭಾರತವನ್ನು ಅವರು ಪ್ರತಿನಿಧಿಸಿದ್ದರು. 
2016ರಲ್ಲಿ ಬಿಇ ಎರೋಸ್ಪೇಸ್‌ನಲ್ಲೂ ಚಿನ್ನದ ಪದಕದೊಂದಿಗೆ ಪಾಸಾಗಿದ್ದಾಾರೆ. ಇವೆಲ್ಲಾಾ ಸಾಧನೆಯ ನಂತರ ಆಕೃತಿ 3ಡಿ ಕಂಪನಿಯನ್ನು ಹುಟ್ಟುಹಾಕಿ ಸದ್ಯ ಅದರ ಸಂಸ್ಥಾಾಪಕ ಮುಖ್ಯ ಕಾರ‌್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿಿದ್ದಾಾರೆ. ಈ ಕಂಪನಿಯು ಸುರತ್ಕಲ್‌ನಲ್ಲಿದ್ದು, ಇಂದಿನಿಂದ ಶಿವಮೊಗ್ಗದ ಮಾಚೇನಹಳ್ಳಿಿಯ  ಕಿಯೋನಿಕ್‌ಸ್‌ ಐಟಿ ಪಾರ್ಕಿನಲ್ಲಿ ತನ್ನ ಶಾಖೆಯನ್ನು ತೆರೆದಿದೆ.
ತಾನು ಕಲಿತಿದ್ದನ್ನು ಕೇವಲ ರಾಜ್ಯಕ್ಕೆೆ ಮಾತ್ರವಲ್ಲದೆ ಸ್ವಂತ ಊರಿಗೂ ತಲುಪಿಸಬೇಕು, ಆ ಮೂಲಕ ಇಲ್ಲಿನ ಯುವಜನತೆಯಲ್ಲೂ ವಿಶೇಷ ಜ್ಞಾಾನ ಹುಟ್ಟುಹಾಕುವುದರ ಮೂಲಕ ಹಲವರಿಗೆ ಮಾರ‌್ಗದರ್ಶನ ಮತ್ತು ಉದ್ಯೋೋಗ  ನೀಡಬೇಕೆಂಬ ಹೆಬ್ಬಯಕೆ ಹೊತ್ತಿಿರುವ ರಾಘವೇಂದ್ರ, ಈ ಸಂಸ್ಥೆೆಯ ಮೂಲಕ  ಕೈಗಾರಿಕೆಗಳಿಗೆ ಅಥವಾ ಇತರ ಸಂಸ್ಥೆೆಗಳಿಗೆ ಹೊಸ ಉತ್ನನ್ನಗಳ ವಿನ್ಯಾಾಸ ರೂಪಿಸಿಕೊಡುವುದು, ಪ್ರೊಟೊಟೈಪಿಂಗ್,  ತ್ರಿಿಡಿ ಪ್ರಿಿಂಟಿಂಗ್ ಮಾಡಿಕೊಡಲಿದ್ದಾಾರೆ.
ಇತ್ತೀಚಿನ ದಿನಗಳಲ್ಲಿ ತ್ರಿಿಡಿ ಪ್ರಿಿಇಟಿಂಗ್ ಹೆಚ್ಚು ಜನಪ್ರಿಿಯವಾಗುತ್ತಿಿರುವ ಹಿನ್ನೆೆಲೆಯಲ್ಲಿ ಇನ್ನಷ್ಟು ಆಧುನಿಕವಾಗಿ ಇದನ್ನು ರೂಪಿಸಿ ಅದರಲ್ಲೂ ವಿಶೇಷವಾಗಿ ಕೈಗಾರಿಕೆಗಳಿಗೆ ಅತಿಅವಶ್ಯವಾಗಿರುವುದರಿಂದ ಅವರ ಎಲ್ಲ ಅವಶ್ಯಕತೆಗಳನ್ನು ನೀಗಿಸಿ, ವಹಿವಾಟು ನಿರ‌್ವಹಣೆಯಲ್ಲಿ ಹೊಸ ಕ್ರಾಾಂತಿಯನ್ನು ಮಾಡಲು  ಸನ್ನದ್ಧರಾಗಿದ್ದಾಾರೆ.
ಕಡಿಮೆ ವೇಗದ ಏರೋ ಡೈನಾಮಿಕ್, ವಿಂಡ್ ಎನರ್ಜಿ ಮತ್ತು ಏರಿಯಲ್ ವೆಹಿಕಲ್ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ಯೋಜನೆ ರೂಪಿಸಿದ್ದಾಾರೆ. ಹೈದರಾಬಾದ್, ತ್ರಿಿವೇಂದ್ರಮ್, ಚೆನ್ನೈ ಮತ್ತು ಕೊಲ್ಕತ್ತಾಾದಲ್ಲಿ ನಡೆದ ಹಲವಾರು ರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಪಾಲ್ಗೊೊಂಡು ಪ್ರಬಂಧ ಮಂಡಿಸಿದ್ದಾಾರೆ.
ಬ್ಯಾಾಡ್ಮಿಿಂಟನ್ ಆಗಿರುವ ಇವರು, ಪೇಂಟಿಂಗ್, ಪೆನ್ಸಿಿಲ್ ಸ್ಕೆೆಚ್, ಕವನ ಬರೆಯುವುದನ್ನೂ ರೂಢಿಸಿಕೊಂಡಿದ್ದಾಾರೆ.         
ಶಿವಮೊಗ್ಗದಲ್ಲೂ ಸಾಕಷ್ಟು ಪ್ರತಿಭಾವಂತರಿರುವುದರಿಂದ ಅವರ ತಂಡ ಕಟ್ಟಿಿ  ಹೊಸ ಹೊಸ ಸಂಶೋಧನೆ ಮಾಡುವುದು ಮತ್ತು ಶಾಲಾ- ಕಾಲೇಜುಗಳಲ್ಲಿ ತ್ರಿಿಡಿ ಪ್ರಿಿಂಟಿಂಗ್ ಕಲಿಕೆಗೆ ಸಹಕರಿಸುವುದು ಇವರ ಉದ್ದೇಶವಾಗಿದೆ.  ನಗರದ ಪ್ರತಿಭೆಗಳು ವಿಜ್ಞಾಾನ ಮತ್ತು ತಂತ್ರಜ್ಞಾಾನ, ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಲು ಅಂತರರಾಜ್ಯ ಮತ್ತು ವಿದೇಶಗಳಿಗೆ ತೆರಳುತ್ತಿಿರುವ ಸಂದರ್ಭದಲ್ಲಿ ನಗರದಲ್ಲೇ ಇರುವ ಅವಕಾಶಗಳನ್ನು ಬಳಸಿಕೊಂಡು ಇಲ್ಲಿಯೇ ಆಕೃತಿ 3ಡಿ ಸಂಸ್ಥೆೆಯನ್ನು ಕಟ್ಟಲು ರಾಘವೇಂದ್ರ ಮುಂದಡಿ ಇಟ್ಟಿಿದ್ದಾಾರೆ.

published on 1st June 2019
..............................

No comments:

Post a Comment