Saturday, 8 June 2019

ಡಾನ್‌ಸ್‌ ಸ್ಪೋೋರ್ಟ್‌ಸ್‌ ಚಾಂಪಿಯನ್ 
ನಿಧಿ ಸುರೇಶ್




ಜಿಲ್ಲೆೆಯ ಮಟ್ಟಿಿಗೆ ಈ ಬಾಲೆಯದ್ದು ವಿಶೇಷ ಸಾಧನೆ. ಇನ್ನೂ ಹಲವರು ಕೇಳರಿಯದ ಡ್ಯಾಾನ್‌ಸ್‌ ಸ್ಪೋೋರ್ಟ್‌ಸ್‌ ಕಲೆ ಇದು. ಇದನ್ನು ಕಲಿತು ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಸುಲಭದ ಮಾತೇನಲ್ಲ. ಓದಿನ ಜೊತೆಗೆ ಅಷ್ಟೇ ಸಮಯವಿಟ್ಟು, ಸತತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾಾಳೆ. ಈಕೆಯ ಹೆಸರು ನಿಧಿ ಸುರೇಶ್.
ನೃತ್ಯದಲ್ಲಿ ಜಿಲ್ಲೆೆಯ ಹಲವು ಪ್ರತಿಭೆಗಳು  ರಾಜ್ಯ-ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಹಿರಿಮೆಯನ್ನು ಹೆಚ್ಚಿಿಸಿದ್ದಾಾರೆ. ನೃತ್ಯದ
ಲ್ಲೇ ವಿವಿಧ ಪ್ರಾಾಕಾರಗಳಿದ್ದು, ಅವುಗಳ ಮೂಲಕ ವಿಶಿಷ್ಟ ಸಾಧನೆಯನ್ನು ಈಗಿನ ಯುವಕ-ಯುವತಿಯರು ಮಿಂಚುತ್ತಿಿದ್ದಾಾರೆ. ಅಂತಹ ನೃತ್ಯದ ವಿಶೇಷ ವಿಭಾಗವಾದ ಡ್ಯಾಾನ್‌ಸ್‌ ಸ್ಪೋೋರ್ಟ್‌ಸ್‌ ಈಗ ಹೆಚ್ಚು ಪ್ರಚಲಿತವಾಗತೊಡಗಿದೆ. ಈ ವಿಭಾಗದಲ್ಲಿ ತೀರ್ಥಹಳ್ಳಿಿಯ ಈ ಬಾಲಕಿ ದಕ್ಷಿಣ ಭಾರತದ ಮಟ್ಟದ ಚಿನ್ನದ ಪದಕ ಗೆದ್ದಿದ್ದಾಾಳೆ.
ನಿಧಿ ಬಾಲ್ಯದಿಂದಲೂ ಡಾನ್‌ಸ್‌‌ನಲ್ಲಿ ಪರಿಣಿತೆ. ಆದ್ದರಿಂದ ಈ ಕಲೆಯನ್ನು ಕಲಿಯಲು ವಿಶೇಷ ತೊಂದರೆ ಎದುರಾಗಲೇ ಇಲ್ಲ. ಆದರೆ ಕೆಲವೊಂದು ಟ್ರಿಿಕ್‌ಸ್‌‌ಗಳನ್ನು ಮಾತ್ರ ಹೆಚ್ಚುವರಿಯಾಗಿ ಕಲಿಯಬೇಕಾಯಿತು. ಇದನ್ನು ಅತಿ ಸುಲಭದಲ್ಲಿ ಕಲಿತು ಕರಗತ ಮಾಡಿಕೊಂಡಿದ್ದು ನಿಜಕ್ಕೂ ಶ್ಲಾಾಘನೀಯವೇ ಸರಿ. ವಿಶೇಷವಾಗಿ ಮಹಾನ್ ನಗರಗಳಲ್ಲಿ ಮಾತ್ರ ಇದು ಕಾಣಸಿಗುವ ಕಲೆ ಇದು. ಇನ್‌ಸ್ಟಾಾಗ್ರಾಾಮ್‌ನಲ್ಲಿ ಇದನ್ನು ನೋಡಿದ ನಿಧಿ, ಆಡಿಶನ್‌ಗಾಗಿ ಆಹ್ವಾಾನಿಸಿದ್ದನ್ನು ಗಮನಿಸಿ ಹೋಗಿದ್ದಳು. ಅಲ್ಲಿ ಆಯ್ಕೆೆಯೂ ಆದಳು. ಆದರೆ ತರಬೇತಿ ಅವಶ್ಯಕತೆ ಇತ್ತು. ಮಾಸ್ಟರ್ ತರುಣ್ ಎನ್ನುವವರು ಮೂರು ದಿನ ತರಬೇತಿ ನೀಡಿದ್ದರು. ಆನಂತರ ಒಂದು ತಿಂಗಳ ಕಾಲ ಮನೆಯಲ್ಲೇ ಇದನ್ನು ಸತತವಾಗಿ ಅಭ್ಯಸಿಸಿ ಚಾಂಪಿಯನ್‌ಶಿಪ್‌ಗೆ ಆಯ್ಕೆೆಯಾದಳು.
 ಗೋವಾದಲ್ಲಿ ಕಳೆದ ತಿಂಗಳು ದಕ್ಷಿಣ ಭಾರತ ಮಟ್ಟದ ಚಾಂಪಿಯನ್‌ಶಿಪ್ ನಡೆದಾಗ ನಿಧಿ ಅದರಲ್ಲಿ ಚಿನ್ನದ ಪದಕ ಧರಿಸಿದ್ದಳು. 15 ವರ್ಷ ಮೇಲ್ಪಟ್ಟವರ ಸ್ಪರ್ಧೆ ಇದಾಗಿತ್ತು. ಸುಮಾರು 250ಕ್ಕೂ ಹೆಚ್ಚು ಸ್ಪರ್ಧಿಗಳಿದ್ದರೂ ನಿಧಿ ಗೋಲ್‌ಡ್‌ ವಿನ್ನರ್ ಆಗಿ ಹೊರಹೊಮ್ಮಿಿದ್ದಾಾಳೆ. ಡಾನ್‌ಸ್‌ ಸ್ಪೋೋರ್ಟ್‌ಸ್‌ ಕೌನ್ಸಿಿಲ್ ಆಫ್ ಇಂಡಿಯಾ ಇದನ್ನು ಏರ್ಪಡಿಸಿತ್ತು. ಈಗ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಆಯ್ಕೆೆಯಾಗಿರುವುದರಿಂದ ಇನ್ನೂ ಹೆಚ್ಚಿಿನ ತರಬೇತಿ ಪಡೆಯುತ್ತಿಿದ್ದಾಾಳೆ. ಕೋಲ್ಕತ್ತಾಾದಲ್ಲಿ ಇದು ನಡೆಯಲಿದೆ. ಇದರಲ್ಲಿ ಇನ್ನೂ ಹೆಚ್ಚಿಿನ ಸಾಧನೆ ಮಾಡಬೇಕಿರುವುದರಿಂದ ವಿಶೇಷ ಶ್ರಮವನ್ನು ಹಾಕಿ  ಅಭ್ಯಾಾಸ ಮಾಡುತ್ತಿಿದ್ದಾಾಳೆ.
ನಿಧಿ ತೀರ್ಥಹಳ್ಳಿಿಯ ಕಾಂಗ್ರೆೆಸ್ ಮುಖಂಡ ಆಮ್ರಪಾಲಿ ಸುರೇಶ್ ಮತ್ತು ನಾಗಮಣಿ ದಂಪತಿಯ ಪುತ್ರಿಿ. ಬಾಲ್ಯದಿಂದಲೂ ಬೆಂಗಳೂರಿನಲ್ಲಿಯೇ ವಿದ್ಯಾಾಭ್ಯಾಾಸ ಮಾಡುತ್ತಿಿದ್ದು, ಸದ್ಯ ಪ್ರಥಮ ಪಿಯುನಲ್ಲಿ ಅಲ್ಲಿಯೇ ಓದು ಮುಂದುವರೆಸಿದ್ದಾಾಳೆ. ಈ ನೃತ್ಯದಲ್ಲಿ ಇನ್ನಷ್ಟು ಕಲಿಕೆಯನ್ನು ಹೆಚ್ಚಿಿಸುವ ಇಚ್ಛೆೆ ಹೊಂದಿರುವ ನಿಧಿ, ವಿದ್ಯಾಾಭ್ಯಾಾಸಕ್ಕೆೆ ತೊಂದರೆಯಾಗದಂತೆ ಎಚ್ಚರಿಕೆಯಿಂದ ಹೆಜ್ಜೆೆ ಇಡುವುದಾಗಿ ಹೇಳುತ್ತಾಾಳೆ. ಏರೊನಾಟಿಕ್‌ಸ್‌ ಇಂಜಿನೀಯರ್ ಆಗುವ ಗುರಿ ಈಕೆಯದಾಗಿದೆ.
   ಈ ಕಲೆಯ ಜೊತೆ ಕರಾಟೆ ಪಟುವೂ ಆಗಿರುವ ನಿಧಿ, ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆಯಲ್ಲಿ ದ್ವಿಿತೀಯ ಸ್ಥಾಾನಿಯಾಗಿ ಹೊರಹೊಮ್ಮಿಿದ್ದಾಾಳೆ. ಕಬಡ್ಡಿಿ ಆಟಗಾರ್ತಿಯಾಗಿಯೂ ತಾನು ಓದುತ್ತಿಿರುವ ಶಾಲೆಯನ್ನು ಪ್ರತಿನಿಧಿಸುತ್ತಿಿದ್ದಾಾಳೆ. ಉತ್ತಮ ದೇಹದಾರ್ಢ್ಯಕ್ಕೆೆ ಕ್ರೀಡೆ ಅತ್ಯವಶ್ಯ. ಈ ಮೂಲಕ ಸಾಧನೆ ಮಾಡಿ ಏರ್‌ಫೋರ್ಸ್ ಸೇರಬೇಕೆನ್ನುವ ಮಹದಾಸೆ ಹೊಂದಿದ್ದೇನೆ. ಪಾಲಕರು ತನ್ನ ಸಾಧನೆಯ ಕನಸನ್ನು ನನಸು ಮಾಡಲು ಎಲ್ಲಾಾ ರೀತಿಯ ನೆರವು ನೀಡುತ್ತಿಿದ್ದಾಾರೆ ಎನ್ನುತ್ತಾಾಳೆ ನಿಧಿ.

published on 8-6-2019
........................................ 

Wednesday, 5 June 2019

ಹುಟ್ಟಿಿದೂರಿಗೆ ತಂತ್ರಜ್ಞಾಾನ ತಂದ 
ರಾಘವೇಂದ್ರ 



ತಂತ್ರಜ್ಞಾಾನ ಮತ್ತು ಸಂಶೋಧನೆ ಮೂಲಕ ಮಾರುಕಟ್ಟೆೆಯಲ್ಲಿ ಹೊಸ  ಸೇವೆ ಮತ್ತು ಉತ್ಪನ್ನಗಳನ್ನು ಇಂದು ಕಾಣಬಹುದಾಗಿದೆ. ಜನರ ಅನೇಕ ಅವಶ್ಯಕತೆಗಳಿಗೆ ಪರಿಹಾರವೂ ಇದರಿಂದಾಗಿ ದೊರೆತಿದೆ. ದಿನೇ ದಿನೇ ಹೊಸ ಸಂಶೋಧನೆಗಳು ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಿಿದೆ. ನಗರದ ಯುವಕನೊಬ್ಬ ಆಕೃತಿ 3ಡಿ ಕಂಪನಿಯ ಹುಟ್ಟುಹಾಕಿ  ಡಿಸೈನ್ ಥಿಂಕಿಂಗ್ ಪ್ರಯೋಗಾಲಯವನ್ನು ನಗರದಲ್ಲಿ ಸ್ಥಾಾಪಿಸಿದ್ದಾಾರೆ. 
 ನಗರದ ಈ ಯುವಕನ ಹೆಸರು ರಾಘವೇಂದ್ರ. ವಿನೋಬನಗರದ ಕೆಎಚ್‌ಬಿ ಕಾಲನಿ ವಾಸಿಯಾಗಿರುವ ಆಡಿಟರ್ ಮತ್ತು ತೆರಿಗೆ ಸಲಹಾಗಾರರಾಗಿರುವ ಬಿ. ಸುರೇಂದ್ರ ಅವರ ಪುತ್ರ. ಇವರು ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾಾನ ಸಂಸ್ಥೆೆಯಲ್ಲಿ ಏರೋಸ್ಪೇಸ್ ಇಂಜಿನೀಯರಿಂಗ್ ಪದವಿ ಪಡೆದು ಅಲ್ಲಿಯೇ ಸಿಎಫ್‌ಡಿ ಮತ್ತು ಏರೋ ಡೈನಾಮಿಕ್‌ಸ್‌ ವಿಷಯದಲ್ಲಿ ಸಂಶೋಧನೆ ನಡೆಸಿ ಎಂ. ಟೆಕ್ ಮುಗಿಸಿದ್ದಾಾರೆ.
ಇವರ ತ್ರಿಿ ಡಿ ಪ್ರಿಿಂಟಿಂಗ್ ಸಂಶೋಧನೆ  ಇವರಿಗೆ ಅನೇಕ ಗೌರವಗಳನ್ನು ತಂದುಕೊಟ್ಟಿಿದೆ. ಇದರಿಂದಾಗಿ ಅವರಿಗೆ ಅನೇಕ ಶೈಕ್ಷಣಿಕ ಪ್ರಶಸ್ತಿಿ ಮತ್ತು ಗೌರವಗಳು ದಕ್ಕಿಿವೆ. ಬೆಂಗಳೂರಿನ  ಜೈನ್ ವಿಶ್ವವಿದ್ಯಾಾಲಯದ ಚಿನ್ನದ ಪದಕ ಮತ್ತು ಸಿಎಸ್‌ಐಆರ್- ಎನ್‌ಎಎಲ್‌ನ ಬಂಗಾರದ ಪದಕ  ಲಭಿಸಿದೆ. ಅಮೆರಿಕದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಐಎಎಂ-3ಡಿ ಸ್ಪರ್ಧೆಯಲ್ಲಿ  ಮತ್ತು ಜಪಾನಿನಲ್ಲಿ ನಡೆದ ಸಾಂಸ್ಕೃತಿಕ ವಿನಿಮಿಯ ಕಾರ‌್ಯಕ್ರಮದಲ್ಲಿ ಭಾರತವನ್ನು ಅವರು ಪ್ರತಿನಿಧಿಸಿದ್ದರು. 
2016ರಲ್ಲಿ ಬಿಇ ಎರೋಸ್ಪೇಸ್‌ನಲ್ಲೂ ಚಿನ್ನದ ಪದಕದೊಂದಿಗೆ ಪಾಸಾಗಿದ್ದಾಾರೆ. ಇವೆಲ್ಲಾಾ ಸಾಧನೆಯ ನಂತರ ಆಕೃತಿ 3ಡಿ ಕಂಪನಿಯನ್ನು ಹುಟ್ಟುಹಾಕಿ ಸದ್ಯ ಅದರ ಸಂಸ್ಥಾಾಪಕ ಮುಖ್ಯ ಕಾರ‌್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿಿದ್ದಾಾರೆ. ಈ ಕಂಪನಿಯು ಸುರತ್ಕಲ್‌ನಲ್ಲಿದ್ದು, ಇಂದಿನಿಂದ ಶಿವಮೊಗ್ಗದ ಮಾಚೇನಹಳ್ಳಿಿಯ  ಕಿಯೋನಿಕ್‌ಸ್‌ ಐಟಿ ಪಾರ್ಕಿನಲ್ಲಿ ತನ್ನ ಶಾಖೆಯನ್ನು ತೆರೆದಿದೆ.
ತಾನು ಕಲಿತಿದ್ದನ್ನು ಕೇವಲ ರಾಜ್ಯಕ್ಕೆೆ ಮಾತ್ರವಲ್ಲದೆ ಸ್ವಂತ ಊರಿಗೂ ತಲುಪಿಸಬೇಕು, ಆ ಮೂಲಕ ಇಲ್ಲಿನ ಯುವಜನತೆಯಲ್ಲೂ ವಿಶೇಷ ಜ್ಞಾಾನ ಹುಟ್ಟುಹಾಕುವುದರ ಮೂಲಕ ಹಲವರಿಗೆ ಮಾರ‌್ಗದರ್ಶನ ಮತ್ತು ಉದ್ಯೋೋಗ  ನೀಡಬೇಕೆಂಬ ಹೆಬ್ಬಯಕೆ ಹೊತ್ತಿಿರುವ ರಾಘವೇಂದ್ರ, ಈ ಸಂಸ್ಥೆೆಯ ಮೂಲಕ  ಕೈಗಾರಿಕೆಗಳಿಗೆ ಅಥವಾ ಇತರ ಸಂಸ್ಥೆೆಗಳಿಗೆ ಹೊಸ ಉತ್ನನ್ನಗಳ ವಿನ್ಯಾಾಸ ರೂಪಿಸಿಕೊಡುವುದು, ಪ್ರೊಟೊಟೈಪಿಂಗ್,  ತ್ರಿಿಡಿ ಪ್ರಿಿಂಟಿಂಗ್ ಮಾಡಿಕೊಡಲಿದ್ದಾಾರೆ.
ಇತ್ತೀಚಿನ ದಿನಗಳಲ್ಲಿ ತ್ರಿಿಡಿ ಪ್ರಿಿಇಟಿಂಗ್ ಹೆಚ್ಚು ಜನಪ್ರಿಿಯವಾಗುತ್ತಿಿರುವ ಹಿನ್ನೆೆಲೆಯಲ್ಲಿ ಇನ್ನಷ್ಟು ಆಧುನಿಕವಾಗಿ ಇದನ್ನು ರೂಪಿಸಿ ಅದರಲ್ಲೂ ವಿಶೇಷವಾಗಿ ಕೈಗಾರಿಕೆಗಳಿಗೆ ಅತಿಅವಶ್ಯವಾಗಿರುವುದರಿಂದ ಅವರ ಎಲ್ಲ ಅವಶ್ಯಕತೆಗಳನ್ನು ನೀಗಿಸಿ, ವಹಿವಾಟು ನಿರ‌್ವಹಣೆಯಲ್ಲಿ ಹೊಸ ಕ್ರಾಾಂತಿಯನ್ನು ಮಾಡಲು  ಸನ್ನದ್ಧರಾಗಿದ್ದಾಾರೆ.
ಕಡಿಮೆ ವೇಗದ ಏರೋ ಡೈನಾಮಿಕ್, ವಿಂಡ್ ಎನರ್ಜಿ ಮತ್ತು ಏರಿಯಲ್ ವೆಹಿಕಲ್ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ಯೋಜನೆ ರೂಪಿಸಿದ್ದಾಾರೆ. ಹೈದರಾಬಾದ್, ತ್ರಿಿವೇಂದ್ರಮ್, ಚೆನ್ನೈ ಮತ್ತು ಕೊಲ್ಕತ್ತಾಾದಲ್ಲಿ ನಡೆದ ಹಲವಾರು ರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಪಾಲ್ಗೊೊಂಡು ಪ್ರಬಂಧ ಮಂಡಿಸಿದ್ದಾಾರೆ.
ಬ್ಯಾಾಡ್ಮಿಿಂಟನ್ ಆಗಿರುವ ಇವರು, ಪೇಂಟಿಂಗ್, ಪೆನ್ಸಿಿಲ್ ಸ್ಕೆೆಚ್, ಕವನ ಬರೆಯುವುದನ್ನೂ ರೂಢಿಸಿಕೊಂಡಿದ್ದಾಾರೆ.         
ಶಿವಮೊಗ್ಗದಲ್ಲೂ ಸಾಕಷ್ಟು ಪ್ರತಿಭಾವಂತರಿರುವುದರಿಂದ ಅವರ ತಂಡ ಕಟ್ಟಿಿ  ಹೊಸ ಹೊಸ ಸಂಶೋಧನೆ ಮಾಡುವುದು ಮತ್ತು ಶಾಲಾ- ಕಾಲೇಜುಗಳಲ್ಲಿ ತ್ರಿಿಡಿ ಪ್ರಿಿಂಟಿಂಗ್ ಕಲಿಕೆಗೆ ಸಹಕರಿಸುವುದು ಇವರ ಉದ್ದೇಶವಾಗಿದೆ.  ನಗರದ ಪ್ರತಿಭೆಗಳು ವಿಜ್ಞಾಾನ ಮತ್ತು ತಂತ್ರಜ್ಞಾಾನ, ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಲು ಅಂತರರಾಜ್ಯ ಮತ್ತು ವಿದೇಶಗಳಿಗೆ ತೆರಳುತ್ತಿಿರುವ ಸಂದರ್ಭದಲ್ಲಿ ನಗರದಲ್ಲೇ ಇರುವ ಅವಕಾಶಗಳನ್ನು ಬಳಸಿಕೊಂಡು ಇಲ್ಲಿಯೇ ಆಕೃತಿ 3ಡಿ ಸಂಸ್ಥೆೆಯನ್ನು ಕಟ್ಟಲು ರಾಘವೇಂದ್ರ ಮುಂದಡಿ ಇಟ್ಟಿಿದ್ದಾಾರೆ.

published on 1st June 2019
..............................

Saturday, 25 May 2019

"ಟಿಯು ರ್ಯಾಾಂಕ್ ಸಾಧಕಿ
 ಸುೀದಾ ಆರ್ಶಿ ಫಾತಿಮಾ


ಸತತ ಪ್ರಯತ್ನ, ಛಲ ಮತ್ತು ಹಠ ಇದರ ಸ್ಥಾಾನವನ್ನು ಬೇರಾವುದೂ ತುಂಬಲು ಈ ಜಗತ್ತಿಿನಲ್ಲಿ ಸಾಧ್ಯ"ಲ್ಲ. ಇದರೊಟ್ಟಿಿಗೆ ದೃಢನಿರ್ಧಾರವೂ ಸೇರಿದರೆ ಆ ವ್ಯಕ್ತಿಿ ಸರ್ವಶಕ್ತನಾಗುತ್ತಾಾನೆ ಎನ್ನುವ ಮಾತಿದೆ.
ಶಿವಮೊಗ್ಗ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವದ ಸ್ಥಾಾನವನ್ನು ಹೊಂದಿದೆ. ಇಲ್ಲಿನ "ದ್ಯಾಾರ್ಥಿಗಳು  ಸಾಕಷ್ಟು ಪ್ರತಿಭಾವಂತರು, ಅಸಾಧಾರಣ ಮೇಧಾ"ಗಳು. ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮ "ದ್ಯೆೆಯ ಪ್ರತಿಭೆಯನ್ನು ತೋರ್ಪಡಿಸಿದ್ದಾಾರೆ.   
ಆರ್ಶಿ ಫಾತಿಮಾ ನಗರದ ಪಿಇಎಸ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಎಂಬಿಎದಲ್ಲಿ "ಟಿಯುಗೆ 6ನೆಯ ರ್ಯಾಾಂಕ್ ಗಳಿಸುವ ಮೂಲಕ ಅಪ್ರತಿಮ ಪ್ರತಿಭೆ ಮೆರೆದಿದ್ದಾಾರೆ. ಬಾಲ್ಯದಿಂದಲೂ ಪ್ರತಿಭಾವಂತ "ದ್ಯಾಾರ್ಥಿನಿಯಾಗಿರುವ ಇವರು, ಸತತ ಅಧ್ಯಯನ ಮತ್ತು ಓದಿನ ನಿಷ್ಠೆೆಯ ಮೂಲಕ ಈ ಸಾಧನೆ ಮಾಡಿದ್ದಾಾರೆ. "ಟಿಯುನಲ್ಲಿ ರ್ಯಾಾಂಕ್ ಗಳಿಸುವುದು ಸುಲಭದ ಕೆಲಸವಲ್ಲ. ಇಂತಹ ಅತಿ ಕಷ್ಟದ ಕೆಲಸವನ್ನು ಸಾಧಿಸಿ ಜಿಲ್ಲೆೆಗೆ ಮತ್ತು "ದ್ಯಾಾಸಂಸ್ಥೆೆಗೆ ಹಾಗೂ ಕುಟುಂಬಕ್ಕೆೆ ಕೀರ್ತಿ ತಂದಿದ್ದಾಾರೆ.
  ಸುೀದಾ ಎಸ್‌ಎಸ್‌ಎಲ್‌ಸಿಯವರೆಗೆ ಓದಿದ್ದು ವಾಸ" ಸ್ಕೂಲ್‌ನಲ್ಲಿ. ಆನಂತರ ಪಿಯುವನ್ನು ಡಿ"ಎಸ್ ಇಂಡಿಪೆಂಡೆಂಟ್ ಕಾಲೇಜಿನಲ್ಲಿ "ಜ್ಞಾಾನ "ಷಯದ ಮೂಲಕ ಓದಿ  ಶೇ. 70ರಷ್ಟು ಸಾಧನೆ ಮಾಡಿದರು. ಜೆಎನ್‌ಎನ್‌ಸಿಯಲ್ಲಿ "ಜ್ಞಾಾನದಿಂದ ಬಿಬಿಎಂಗೆ ಸೇರಿ ಅಲ್ಲಿ  ಶೇ. 94ರಷ್ಟು ಅಂಕ ಪಡೆದು ಕುವೆಂಪು ""ಗೆ ಎರಡನೆಯ ರ್ಯಾಾಂಕ್ ಪಡೆದ್ದಾಾರೆ. ಎಂಬಿಎಗೆ ಪಿಎಸ್‌ಎ ಸರಿ ಅಲ್ಲಿ 6ನೆಯ ರ್ಯಾಾಂಕ್ ಗಳಿಸುವ ಮೂಲಕ ಸಾಧನೆಯ ಹಾದಿಯನ್ನು ಮುಂದುವರೆಸಿದ್ದಾಾರೆ.
ನಗರದ ಆರ್‌ಎಂಎಲ್‌ನಗರದ ವಾಸಿಯಾಗಿರುವ ಸುೀದಾ ತಂದೆ ಸಯ್ಯದ್ ಫೈಜುಲ್ಲಾಾ ವ್ಯಾಾಪಾರೋದ್ಯ"ುಯಾಗಿದ್ದಾಾರೆ. ಇವರ ಅಣ್ಣನೂ ಸಹ ಪಿಇಎಸ್‌ನಲ್ಲಿ ಇಂಜಿನೀಯರಿಂಗ್‌ನ್ನು ಉನ್ನತ ಶ್ರೇಣಿಯಲ್ಲಿ ಮುಗಿಸಿ ಸೌದಿಯಲ್ಲಿ ಮೆಕ್ಯಾಾನಿಕಲ್ ಇಂಜಿನೀಯರ್ ಆಗಿ ಕೆಲಸದಲ್ಲಿದ್ದಾಾರೆ. ಸುೀದಾ ಈಗ ನಗರದ ಗ್ಯಾಾಲಘರ್ ಸಂಸ್ಥೆೆಯಲ್ಲಿ  ಸೀನಿಯರ್ ಇನ್ಶೂರೆನ್‌ಸ್‌ ಪ್ರೊಫೆಸರ್ ಆಗಿ ಕಾರ‌್ಯನಿರ್ವ"ಸುತ್ತಿಿದ್ದು, ಮುಂದೆ ಪಿಎಚ್‌ಡಿ ಮಾಡುವ ಆಸೆ ಹೊತ್ತಿಿದ್ದಾಾರೆ.
ಎಂಬಿಎ ಮುಗಿದ ನಂತರ ಬೆಂಗಳೂರಿನ ಪ್ರತ್ಠಿಿತ ಕಂಪನಿಯೊಂದರಲ್ಲಿ ಉನ್ನತ ಹುದ್ದೆೆ ಲಭಿಸಿದ್ದರೂ ಅಲ್ಲಿಗೆ ತೆರಳದೆ ನಗರದಲ್ಲೇ ಉದ್ಯೋೋಗ ಆಯ್ಕೆೆ ಮಾಡಿಕೊಂಡಿದ್ದಾಾರೆ. ಪ್ರತಿದಿನ ಕನಿಷ್ಟ ಎರಡೂವರೆ ಗಂಟೆ ಓದುತ್ತಿಿದ್ದೆೆ. ಅಂದಿನ ಕಲಿಕೆಯನ್ನು ಅಂದೇ ಓದಿ ಮುಗಿಸುತ್ತಿಿದ್ದೆೆ. ಕಾಲೇಜಿನ ವಾಚನಾಲಯದಿಂದ ಪುಸ್ತಕಗಳನ್ನು ತಂದು ಸ್ವತಃ ನೋಟ್‌ಸ್‌ ಸಿದ್ಧಮಾಡಿಕೊಳ್ಳುತ್ತಿಿದ್ದೆೆ. ಸತತ ಪರಿಶ್ರಮ ಮತ್ತು ನಿಷ್ಠೆೆ ಇದ್ದರೆ ಸಾಧನೆ ಮಾಡಬಹುದು ಎನ್ನುತ್ತಾಾರೆ ಅವರು.
ಕಾಲೇಜಿನಲ್ಲಿ ಅತ್ಯುತ್ತಮ ಶಿಕ್ಷಕರಿದ್ದುದರಿಂದ ಅವರ ಮಾರ್ಗದರ್ಶನವೂ ಸಾಕಷ್ಟು ನೆರವು ನೀಡಿತು. ಅಧ್ಯಯನದಲ್ಲಿ ಆತ್ಮ"ಶ್ವಾಾಸ ಮೂಡುವಂತೆ ಮಾಡುವ ಅಧ್ಯಾಾಪಕರು ತನ್ನೆೆಲ್ಲ ಸಾಧನೆಗೆ ಕಾರಣರಾದರೆಂದು ತುಂಬು ಅಭಿಮಾನದಿಂದ ಅವರನ್ನು ನೆನೆಪಿಸಿಕೊಳ್ಳುತ್ತಾಾರೆ.
  "ದ್ಯಾಾರ್ಥಿಗಳು ತಮ್ಮ ಆತ್ಮತೃಪ್ತಿಿಗಾಗಿ ಓದಬಾರದು. ನಮ್ಮ ಅಧ್ಯಯನದಿಂದ ಪಾಲಕರಿಗೆ ಕೀರ್ತಿ ಬರಬೇಕು. ನಮ್ಮನ್ನು ಸಾರ್ವಜನಿಕವಾಗಿ ಗುರುತಿಸಿಕೊಳ್ಳುವಂತಾಗಬೇಕು. ಅಧ್ಯಾಾಪಕರ ಮಾರ‌್ಗದರ್ಶನದಂತೆ ನಿರಂತರ ಅಧ್ಯಯನ ಮತ್ತು ಅಂದಂದಿನ ಪಾಠವನ್ನು ಅಂದೇ ಓದುವುದರಿಂದ ಸಾಧನೆ ಸಾಧ್ಯವಾಗುತ್ತದೆ. "ದ್ಯಾಾರ್ಥಿ ದೆಸೆಯಲ್ಲಿ ಏನೇ ಮಾಡಿದರೂ ಸಾಧನೆ ಮಾಡಬೇಕು. ಕನಸನ್ನು ಕಂಡು ಅದನ್ನು ನನಸಾಗಿಸಲು ಯತ್ನಿಿಸಬೇಕು ಎನ್ನುತ್ತಾಾರೆ ಸುೀದಾ.   
ಪ್ರತಿಭಾನ್ವಿಿತರಾದ ಸುೀದಾ, ಅವರ ಸೋದರ ಮತ್ತು ಸಹೋದರಿ ಸಹ  ಓದಿನಲ್ಲಿ ಮುಂದು. ಇವರ ಪಾಲಕರೂ ಸಹ ಮಕ್ಕಳನ್ನು ಚೆನ್ನಾಾಗಿ ಓದಿಸಿ ಸತ್ಪ್ರಜೆಗಳನ್ನಾಾಗಿ, ಉತ್ತಮ ಸಂಸ್ಕಾಾರವಂತರನ್ನಾಾಗಿ ಮಾಡುವ ಗುರಿ ಹೊಂದಿದ್ದಾಾರೆ. ಮಕ್ಕಳು ಇದನ್ನು ಸಾಧಿಸಿ ತೋರಿಸುತ್ತಿಿದ್ದಾಾರೆ. ಶಿಕ್ಷಣದಿಂದ ಸಮಾಜದಲ್ಲಿ ಮುಂದೆ ಬಂದು ಉತ್ತಮ ಜೀವನ ನಡೆಸಬೇಕು, ಸ್ವಾಾವಲಂಬಿಗಳಾಗಬೇಕು ಎನ್ನುವುದು ಇವರ ಅಭಿಮತ. 

published on 25-5-2019
........................................

Saturday, 11 May 2019

      
ಕಬಡ್ಡಿಿ ರೆಫ್ರಿಿಯಾಗಿ 
ಸಿದ್ದಯ್ಯ

 

ಪ್ರತಿದಿನವೂ ಹೊಸ ಅವಕಾಶಗಳು ನಮ್ಮೆೆದುರು ಬರುತ್ತವೆ. ನಾವು ನಿನ್ನೆೆಯ ಗೆಲುವಿನ ಅಥವಾ ಸೋಲಿನ ಆಧಾರದ ಮೇಲೆ ಮುಂದಿನ ಹೆಜ್ಜೆೆ ಇಡುತ್ತಾಾ ಹೋಗಬೇಕು. ಇದು ಕ್ರೀಡೆಯಲ್ಲಿ ಮಹತ್ವದ ಘಟ್ಟ. ಇವುಗಳನ್ನು ಅಳವಡಿಸಕೊಂಡವರು ಮಾತ್ರ ಉತ್ತಮ ಕ್ರೀಡಾಪಟುವಾಗಿ ಮಿಂಚಬಲ್ಲ ಎನ್ನುವ ಮಾತಿದೆ.
ಕ್ರೀಡೆಯಲ್ಲಿ ಸಾಧನೆ ಮಾಡುತ್ತ ಹೋದಂತೆ ಉನ್ನತ ಹುದ್ದೆೆಯನ್ನೂ ಪಡೆಯಬಹುದು. ಕೋಚ್ ಆಗಿ, ನಿರ್ಣಾಯಕರಾಗಿ, ರೆಫ್ರಿಿಯಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಮ್ಮನ್ನು ಗುರುತಿಸಿಕೊಳ್ಳಬಹುದು. ಇದಕ್ಕೆೆಲ್ಲ ಮುಖ್ಯವಾಗಿ ಬೇಕಾದದ್ದು ಶಿಸ್ತು, ಉತ್ತಮ ಗುಣನಡತೆ ಮತ್ತು ಆತ್ಮವಿಶ್ವಾಾಸ. ಇವು ಆಟಗಾರನನ್ನು ಉತ್ತಮ ವ್ಯಕ್ತಿಿತ್ವದವನನ್ನಾಾಗಿ ರೂಪಿಸುವುದರ ಜೊತೆಗೆ ಆತನಿಗೆ ಉನ್ನತ ಸ್ಥಾಾನವನ್ನೂ ಕೊಡಬಲ್ಲವು.
ಭದ್ರಾಾವತಿಯ ಪೇಪರ್‌ಟೌನ್ ಆಂಗ್ಲ ಮಾಧ್ಯಮ ಹೈಸ್ಕೂಲಿನ ದೈಹಿಕ ಶಿಕ್ಷಕ  ಎನ್. ಸಿದ್ದಯ್ಯ ರಾಷ್ಟ್ರೀಯ ಕಬಡ್ಡಿಿ ರೆಫ್ರಿಿಯಾಗಿ ಆಯ್ಕೆೆಯಾಗಿದ್ದಾಾರೆ. 20 ವರ್ಷಗಳಿಂದ ಕ್ರೀಡಾ ಜೀವನದಲ್ಲಿ ಅವರು ಮಾಡಿದ ಸಾಧನೆ ಅವರನ್ನು ಆ ಕ್ಷೇತ್ರದಲ್ಲಿ ಉನ್ನತ ಸ್ಥಾಾನಕ್ಕೆೆ ಕರೆದೊಯ್ದಿಿದೆ. ಈಗಾಗಲೇ ನಿರ್ಣಾಯಕರಾಗಿ ರಾಷ್ಟ್ರಮಟ್ಟದಲ್ಲೂ ಕೆಲಸ ನಿರ್ವಹಿಸುತ್ತಿಿರುವ ಸಿದ್ದಯ್ಯ ಈಗ ರೆಫ್ರಿಿಯಾಗಿ ಜಿಲ್ಲೆೆಗೆ ಹೆಮ್ಮೆೆ ತಂದಿದ್ದಾಾರೆ. ಮೇ 13ರಿಂದ ಪೂನಾದಲ್ಲಿ ನಡೆಯಲಿರುವ ಇಂಡೋರ್ ಇಂಟರ್ ನ್ಯಾಾಶನಲ್ ಕಬಡ್ಡಿಿ ಪ್ರೀಮಿಯರ್ ಲೀಗ್‌ಗೆ ರೆಫ್ರಿಿಯಾಗಿ ನೇಮಕಗೊಂಡಿದ್ದಾಾರೆ.
ಚನ್ನಗಿರಿ ತಾಲೂಕು ಶೆಟ್ಟಿಿಹಳ್ಳಿಿಯವರಾದ ಸಿದ್ದಯ್ಯ ಪ್ರಾಾಥಮಿಕ ಮತ್ತು ಹೈಸ್ಕೂಲು ವಿದ್ಯಾಾಭ್ಯಾಾಸವನ್ನು ಸ್ವಗ್ರಾಾಮದಲ್ಲೇ ಓದಿ ಆನಂತರ ಭದ್ರಾಾವತಿಯಲ್ಲಿ ಕಾಲೇಜು ಶಿಕ್ಷಣ ಪಡೆದರು. ಹೈಸ್ಕೂಲು ಕಲಿಯುವಾಗಲೇ ಕ್ರೀಡೆಯಲ್ಲಿ ಮುಂದು. ಕಬಡ್ಡಿಿ ಅವರ ನೆಚ್ಚಿಿನ ಆಟ. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅನೇಕ ಬಾರಿ ಭಾಗವಹಿಸಿದ್ದಾಾರೆ. ಜೊತೆಗೆ ತಂಡ ಕಟ್ಟಿಿಕೊಂಡು ಹಲವಾರು ಟೂರ್ನಿ ಆಡಿ ಜಯಿಸಿ ಬಂದಿದ್ದಾಾರೆ. 
ಭದ್ರಾಾವತಿಯಲ್ಲಿ ಓದುವಾಗ ಕೋಚ್‌ಗಳಾದ ರಂಗನಾಥ ಮತ್ತು ದೇವರಾಜ್ ಅವರಿಂದ ಸತತ ತರಬೇತಿ ಪಡೆದುದರ ಫಲವಾಗಿ ಇನ್ನಷ್ಟು ಪಕ್ವ ಕ್ರೀಡಾಪಟುವಾಗಿ ಹೊರಹೊಮ್ಮಿಿದರು. ಭದ್ರಾಾವತಿಯಲ್ಲಿ ಈ ಇಬ್ಬರು ತರಬೇತುದಾರರು ಬಹುತೇಕ ಕ್ರೀಡಾಪಟುಗಳನ್ನು ತಯಾರು ಮಾಡಿದ ಕೀರ್ತಿಗೆ ಭಾಜನರಾಗಿದ್ದಾಾರೆ. ಮಲ್ಲಾಾಡಿಹಳ್ಳಿಿಯ ಕಾಲೇಜಿನಲ್ಲಿ ದೈಹಿಕ ಶಿಕ್ಷಣದ ಕೋರ್ಸು ಮುಗಿಸಿ ಭದ್ರಾಾವತಿಗೆ ಬಂದು ಕೆಲಸಕ್ಕೆೆ ಸೇರಿದರು. ಅಲ್ಲಿಂದ ಅವರ ಕ್ರೀಡಾ ಜೀವನದ ಯಶಸ್ಸು ಮೇಲಕ್ಕೆೆರುತ್ತಲೇ ಇದೆ.
ಭದ್ರಾಾವತಿಯ ಭದ್ರಾಾ ಕಬಡ್ಡಿಿ ತಂಡದ ಆಟಗಾರರಾಗಿ ಆಡಿ, ಅದನ್ನು ಮುನ್ನಡೆಸಿ, ಆ ತಂಡ ರಾಜ್ಯದಲ್ಲೇ ಹೆಸರುವಾಸಿಯಾಗುವಂತೆ ಮಾಡುವಲ್ಲಿ ಸಿದ್ದಯ್ಯ ಅವರ ಪಾತ್ರ ದೊಡ್ಡದು. ಜಿಲ್ಲೆೆಯಲ್ಲಿ ಅಷ್ಟೇ ಅಲ್ಲ, ರಾಜ್ಯದಲ್ಲೇ ಕಬಡ್ಡಿಿಯಲ್ಲಿ ಸಿದ್ದಯ್ಯ ಅವರದು ಮಹತ್ವದ ಹೆಸರು. ಆದ್ದರಿಂದಲೇ ನಿರ್ಣಾಯಕರಾಗಿ ನೂರಾರು ಸ್ಥಳಗಳಲ್ಲಿ ಕೆಲಸ ಮಾಡಿ, ಈಗ ರೆಫ್ರಿಿಯಾಗಿ ಭಡ್ತಿಿ ಹೊಂದಿದ್ದಾಾರೆ. ಜಿಲ್ಲೆೆಯ ಮಟ್ಟಿಿಗೆ ಇದೊಂದು ಹೆಮ್ಮೆೆಯ ವಿಚಾರವೇ ಸರಿ.
ಕ್ರೀಡೆ ಉತ್ತಮ ಗುಣ ನಡತೆಯನ್ನು ಕಲಿಸುತ್ತದೆ. ನಿಯಮದಂತೆ ಆಡುವುದನ್ನು ಕಲಿಸುತ್ತದೆ. ಜಯ ಅಥವಾ ಅಪಜಯ ಯಾವುದೇ ಎದುರಾದರೂ ಮುಂದಿನ ಹೆಜ್ಜೆೆಯನ್ನು ಹೇಗೆ ಧೈರ್ಯದಿಂದ ಇಡಬೇಕೆನ್ನುವುದನ್ನು ಹೇಳಿಕೊಡುತ್ತದೆ. ಉತ್ತಮ ಹವ್ಯಾಾಸ, ಆತ್ಮವಿಶ್ವಾಾಸ, ಶಿಸ್ತು ಮತ್ತು ಸಮೂಹದ ನಾಯಕನಾಗಿ ಬೆಳೆಯುವುದನ್ನು ಹೇಳಿಕೊಡುತ್ತದೆ. ಇಷ್ಟೆೆಲ್ಲಾಾ ಗುಣಗಳನ್ನು ಕ್ರೀಡೆಯಿಂದ ಕಲಿತು ಇಂದು ರೆಫ್ರಿಿಯಾಗಿದ್ದೇನೆ ಎನ್ನುತ್ತಾಾರೆ ಸಿದ್ದಯ್ಯ.
ಮೇ 13ರಿಂದ ಪುಣೆಯಲ್ಲಿ  ಆನಂತರ ಮೈಸೂರಿನಲ್ಲಿ  ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಕಬಡ್ಡಿಿ ಚಾಂಪಿಯನ್‌ಶಿಪ್‌ಗೆ ರೆಫ್ರಿಿಯಾಗಿ ತೆರಳಲು ಸಿದ್ಧತೆ ನಡೆಸುತ್ತಿಿದ್ದಾಾರೆ.  

published on 11-5-2019
...........................................     

Tuesday, 7 May 2019

ರ್ಟ್ರೋಯ ಬಾಲ ಪ್ರತಿಭೆ
ದಿನೇಶ್ ನಾಯ್‌ಕ್‌
.............................


ಕ್ರೀಡೆಯಲ್ಲಿ ವಯಸ್ಸು ಮಹತ್ವವಲ್ಲ. ದೈ"ಕವಾಗಿ ಸದೃಢವಾಗಿರುವುದಕ್ಕಿಿಂತಲೂ ಬಲಿಷ್ಠ ಮನಸ್ಸಿಿರಬೇಕು. ಕಠಿಣ ಶ್ರಮ, ಹೋರಾಟದ ಮನೋಭಾವ ಅವಶ್ಯ. ಇಲ್ಲಿ ಬುದ್ಧಿಿವಂತಿಕೆಯ ಪ್ರದರ್ಶನಕ್ಕಿಿಂತ ಸವಾಲನ್ನು ಹೇಗೆ ಎದುರಿಸಬೇಕೆಂಬ ಜಾಣ್ಮೆೆ ಮುಖ್ಯ.
ಇಷ್ಟೆೆಲ್ಲ ಗುಣ ಹೊಂದಿದವರು ಮಾತ್ರ ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯ. ಭದ್ರಾಾವತಿಯ ಎಸ್‌ಎಸ್‌ಎಲ್‌ಸಿ "ದ್ಯಾಾರ್ಥಿ ದಿನೇಶ್ ನಾಯ್‌ಕ್‌ ರ್ಟ್ರೋಯ ಖೊಖೊ ಆಟಗಾರನಾಗಿ ಹೊರಹೊ"್ಮುದ್ದಾಾನೆ. ಪ್ರಾಾಥ"ುಕ ಶಾಲೆುಂದಲೇ ಅಥ್ಲೆೆಟಿಕ್‌ಸ್‌‌ನಲ್ಲಿ ಅಪಾರ ಸಾಧನೆ ಮಾಡುತ್ತ, ಪ್ರಶಸ್ತಿಿಗಳನ್ನು ಸೂರೆಮಾಡಲಾರಂಭಿಸಿದ ಈ ಬಾಲಕ ನಂತರದ ದಿನಗಳಲ್ಲಿ ಖೊಖೊವನ್ನು ಹೆಚ್ಚಾಾಗಿ ಆಡಲಾರಂಭಿಸಿ, ಈಗ ರ್ಟ್ರೋಯ ಜೂನಿಯರ್ ತಂಡದ ನಾಯಕನಾಗಿ ಮುನ್ನಡೆದಿದ್ದಾಾನೆ. ಅನೇಕ ಪದಕಗಳನ್ನು ರಾಷ್ಟ್ರಮಟ್ಟದಲ್ಲಿ ಗೆದ್ದು ತಂದಿದ್ದಾಾನೆ.
4ನೆಯ ತರಗತಿಯಲ್ಲಿದ್ದಾಾಗ ಖೊಖೊ ಆರಂಭಿಸಿದ ದಿನೇಶ್, ನಂತರ ಶಿಕ್ಷಕರ ಮಾರ್ಗದರ್ಶನದಲ್ಲಿ ಸತತ ತರಬೇತಿ ಪಡೆದು ಯಶಸ್ವಿಿಯಾಗಿದ್ದಾಾನೆ. 7ನೆಯ ತರಗತಿಯ ನಂತರ ಭದ್ರಾಾವತಿಯ ಖೊಖೊ ಕ್ಲಬ್‌ಗೆ ಸೇರ್ಪಡೆಗೊಂಡು ಪ್ರತಿದಿನ ಸಂಜೆ ಅಲ್ಲಿ ಎರಡು ಗಂಟೆ ತರಬೇತು ಪಡೆದಿದ್ದಾಾನೆ. ತನ್ನ ಈ ಸಾಧನೆಗೆ ಶಿಕ್ಷಕರಾದ ಧನಂಜಯ ಮತ್ತು ನೂತನ್ ಅವರನ್ನು ಇಂದಿಗೂ ಸ್ಮರಿಸುತ್ತಾಾನೆ.
ಭದ್ರಾಾವತಿ ತಾಲೂಕು "ರಿಯೂರಿನ ತಾಂಡಾದ ವಾಸಿ ಕುಮಾರ್ ನಾಯ್‌ಕ್‌ ಮತ್ತು ಕಮಲೀಬಾು ಅವರ 3ನೆಯ ಪುತ್ರನಾಗಿರುವ ದಿನೇಶ್, ಮನೆಯಲ್ಲಿ ಕಿತ್ತು ತಿನ್ನುವ ಬಡತನ"ದ್ದರೂ ಕ್ರೀಡೆಯಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂದು ಛಲ ತೊಟ್ಟಿಿದ್ದಾಾನೆ. ಇದಕ್ಕಾಾಗಿ ದಾವಣಗೆರೆಯ ಕ್ರೀಡಾ ಹಾಸ್ಟೆೆಲಿನಲ್ಲಿ ಉಳಿದು ಒಂದು ವರ್ಷ ಅಂದರೆ ಎಸ್‌ಎಸ್‌ಎಲ್ಸಿಿತಯನ್ನು ಓದಿ ಬಂದಿದ್ದು, ಫಲಿತಾಂಶ ಕಾಯುತ್ತಿಿದ್ದಾಾನೆ.
ಕುಮಾರ್ ನಾಯ್‌ಕ್‌ ಮತ್ತು ದಂಪತಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವವರು. ಮನೆಯಲ್ಲಿ ಹೆಚ್ಚಿಿನ ಓದನ್ನು ಯಾರೂ ಮುಂದುವರೆಸದ ಕಾರಣ ಕ್ರೀಡೆಯಂತೆಯೇ ಓದಿನಲ್ಲೂ ಸಾಧಾರಣ ಚುರುಕಿರುವ ದಿನೇಶ್‌ನನ್ನು ಹೇಗಾದರೂ ಓದಿಸಿಸಲು ಪಾಲಕರು ನಿರ್ಧರಿಸಿದ್ದಾಾರೆ. ಕ್ರೀಡಾ ಖೋಟಾದಲ್ಲಿ ಸ್ಕಾಾಲರ್‌ಶಿಪ್ ಸಹ ಈತನಿಗೆ ದೊರೆಯುತ್ತಿಿದ್ದು, ಪಿಯು ಓದಿಗೆ ಸಾರ್ವಜನಿಕರ ನೆರವನ್ನು ಪಡೆಯಲು ಯೋಚಿಸಿದ್ದಾಾನೆ.
"ರಿಯೂರಿನಲ್ಲಿ ಸರ್ಕಾರಿ ಪ್ರಾಾಥ"ುಕ ಶಾಲೆಯನ್ನು ಮುಗಿಸಿದ ನಂತರ, ಎರಡು ವರ್ಷ ಭದ್ರಾಾವತಿಯ "ಶ್ವೇಶ್ವರಯ್ಯ ಹೈಸ್ಕೂಲಿನಲ್ಲಿ ಮುಗಿಸಿದ್ದಾಾನೆ. ಅಲ್ಲಿ ಚೆನ್ನಾಾಗಿ ಆರಂಭಿಕ ತರಬೇತಿ ಲಭಿಸಿದ್ದರಿಂದ ಖೊಖೊದಲ್ಲಿ ಸತತ ಸಾಧನೆಯ ಹಾದಿಯಲ್ಲಿದ್ದಾಾನೆ. ಈತ 14ರ ಒಳಗಿನ ರಾಜ್ಯ ತಂಡದ ನಾಯಕನಾಗಿ  ಒಡಿಶಾ, ಮಹಾರಾಷ್ಟ್ರ, ಆಂದ್ರಪ್ರದೇಶ ಮತ್ತು ನವದೆಹಲಿಯಲ್ಲಿ ರ್ಟ್ರೋಯ ಚಾಂಪಿಯನ್‌ಶಿಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದಾಾನೆ. ಇವುಗಳಲ್ಲೆೆಲ್ಲ ಗೆದ್ದು ""ಧ ಪದಕಗಳು ಲಭಿಸಿವೆ. ಮುಂದಿನ ತಿಂಗಳು ಕೊಲ್ಕೊೊತ್ತಾಾದಲ್ಲಿ ರ್ಟ್ರೋಯ ಕಿರಿಯರ ಖೊಖೊ ಚಾಂಪಿಯನ್‌ಶಿಪ್ ನಡೆಯಲಿದ್ದು, ಅದಕ್ಕೆೆ ತಯಾರಿ ನಡೆಸಿದ್ದಾಾನೆ. ರಾಜ್ಯಮಟ್ಟದಲ್ಲೂ ಮೈಸೂರು, ಬೆಂಗಳೂರು, ದಾವಣಗೆರೆ, ಹಾವೇರಿ ಮತ್ತು ಬೀದರ್‌ನಲ್ಲಿ ನಡೆದ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿ ಜಯಶೀಲನಾಗಿದ್ದಾಾನೆ.  ಬಹುತೇಕ ಪಂದ್ಯಾಾವಳಿಗಳಲ್ಲಿ ಈತನಿಗೆ ಅಲ್‌ರೌಂಡರ್ ಪ್ರಶಸ್ತಿಿ ಸಹ ದಕ್ಕಿಿದೆ. ಇದು ಈತನ ಆಟದ ಸಾಮರ್ಥ್ಯಕ್ಕೆೆ ಸಿಕ್ಕ ಮನ್ನಣೆಯಾಗಿದೆ. 
ಪಿಯು ಓದುತ್ತಲೇ ಕ್ರೀಡೆಯಲ್ಲೂ ತೊಡಗಿಸಿಕೊಳ್ಳಬೇಕು. ಕ್ರೀಡಾ ಖೋಟಾದಿಂದಲೇ ಮುಂದೆ ಹುದ್ದೆೆ ಪಡೆಯಬೇಕೆಂಬ ಕನಸನ್ನು ಹೊತ್ತಿಿರುವ ದಿನೇಶ್‌ಗೆ ಕುಟುಂಬದ ಸಹಕಾರವೂ ಇದೆ. ಕೈಲಾದಷ್ಟು ನೆರವು ನೀಡಿ ಮಗನನ್ನು ಹರಸುತ್ತಿಿದ್ದಾಾರೆ. ಆದರೆ ಬಡವನಾಗಿರುವುದರಿಂದ ಟೂರ್ನಿಗಳಿಗೆ ತೆರಳಲು ಮತ್ತು ಹೆಚ್ಚಿಿನ "ದ್ಯಾಾಭ್ಯಾಾಸಕ್ಕೆೆ ದಾನಿಗಳ ಮೊರೆ ಹೋಗಿದ್ದಾಾನೆ.  ದಾನಿಗಳು ನೆರವನ್ನು ನೀಡುವ ಮೂಲಕ ಜಿಲ್ಲೆೆಯ ಅದರಲ್ಲೂ ಬಡಕುಟುಂಬದ ಬಾಲಕನ ಸಾಧನೆಗೆ, ಆಮೂಲಕ ಜಿಲ್ಲೆೆಗೆ ಹೆಸರು ತರಲು ಕಾರಣರಾಗಬೇಕಿದೆ
published on 4.5.19

Saturday, 20 April 2019

ಕಲಾಕ್ಷೇತ್ರದ ಯುವ ಪ್ರತಿಭೆ
ಅಭಿರಾಮ್ ಭಾಗವತ್


ಎಳವೆಯಿಂದಲೇ ಕಲೆಗಳತ್ತ ಆಸಕ್ತಿಿಯಿದ್ದರೆ  ಎಲ್ಲವನ್ನೂ ಕಲಿಯಬಹುದು. ಮಕ್ಕಳಲ್ಲಿರುವ ಪ್ರತಿಭೆ ಹೊರಬರಲು ಅವಕಾಶ ಮತ್ತು ವೇದಿಕೆ ಬೇಕು. ಇದಕ್ಕೆೆ ತಕ್ಕ ವಾತಾವರಣ ನಿರ್ಮಾಣವದಾಗ ಅದು ಪ್ರಕಟಗೊಳ್ಳುತ್ತದೆ. ಪಾಲಕರು ಮಕ್ಕಳಲ್ಲಿರುವ ಪ್ರತಿಭೆ ಗಮನಿಸಿ ಅದು ಹೊರಬರುವಂತೆ ಮಾಡಬೇಕು.
ಶಿವಮೊಗ್ಗ ನಗರದಲ್ಲಿ ಅಭಿರಾಮ್ ಭಾಗವತ್ ಹೆಸರು ಚಿರಪರಿಚಿತ. ಈ ಬಾಲಕ ಕೊಳಲು ಮತ್ತು ಕರ್ನಾಟಕ ಸಂಗೀತದ ಹಾಡುಗಾರಿಕೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿಿದ್ದಾಾನೆ. ಈಗಾಗಲೇ ಜಿಲ್ಲೆೆ ಮತ್ತು ಹೊರಜಿಲ್ಲೆೆಗಳಲ್ಲಿ ಸಾಕಷ್ಟು ಕಾರ‌್ಯಕ್ರಮಗಳನ್ನು ಕೊಡುವ ಮೂಲಕ ಬಾಲಪ್ರತಿಭೆಯಾಗಿ ಪ್ರಕಾಶಿಸುತ್ತಿಿದ್ದಾಾನೆ.
ಅಭಿರಾಮ ನಗರದ ಗೋಪಾಳದ ವಾಸಿ. ಡಿವಿಎಸ್ ಸ್ವತಂತ್ರ ಪಿಯು ಕಾಲೇಜಿನಲ್ಲಿ ದ್ವಿಿತೀಯ ಪಿಯುಗೆ ಕಾಲಿಟ್ಟಿಿದ್ದಾಾನೆ. ಎಸ್ಸೆೆಸೆಲ್ಸಿಿಯಲ್ಲಿ ರಾಜ್ಯಕ್ಕೆೆ 7ನೆಯ ರ್ಯಾಾಂಕ್ ಗಳಿಸಿದ್ದ ಈತ, ಅದೇ ರೀತಿ ಸಂಗೀತದಲ್ಲೂ ಅಪಾರ ಸಾಧನೆಯನ್ನು ಮಾಡಿದ್ದಾಾನೆ. ಶಾರದಾದೇವಿ ಅಂಧರ ಶಾಲೆಯಲ್ಲಿ ಎಸ್ಸೆೆಸೆಲ್ಸಿಿಯವರೆಗೆ ಓದಿದ್ದಾಾನೆ. ಈ ಹಂತದಲ್ಲೇ ಹಾಡುಗಾರಿಕೆ, ಕೊಳಲು, ತಬಲಾ, ವೀಣೆ ಮೊದಲಾದವುಗಳಲ್ಲಿ ಸಾಕಷ್ಟು ಪರಿಣಿತಿ ಪಡೆದಿದ್ದಾಾನೆ. 2006ರಲ್ಲಿ ಸಂಗೀತಕ್ಕೆೆ ಕಾಲಿಟ್ಟ ಈತ ಅಲ್ಲಿಂದ ಸತತವಾಗಿ ಸಾಧನೆಯಲ್ಲೇ ಮುಂದುವರೆದಿದ್ದಾಾನೆ. ತಬಲಾದಲ್ಲಿ ಜೂನಿಯರ್ ಪರೀಕ್ಷೆ ಮುಗಿಸಿದ್ದಾಾನೆ. ಆದರೆ ಈಗ ತಬಲಾ ಬಾರಿಸುತ್ತಿಿಲ್ಲ. ಬದಲಾಗಿ ಕರ್ನಾಟಕ ಹಾಡುಗಾರಿಕೆಯಲ್ಲಿ ಹೆಚ್ಚಿಿನ ಕಲಿಕೆ ಮುಂದುವರೆಸಿದ್ದಾಾನೆ. 
ವಿದ್ವಾಾನ್ ಹೊಸಹಳ್ಳಿಿ ಅನಂತರಾಮ್ ಅವರಲ್ಲಿ ಕರ್ನಾಟಕ ಸಂಗೀತದ ವಿದ್ವತ್‌ನ್ನು ಅಭ್ಯಸಿಸಿ ಕೊಳಲುವಾದನವನ್ನು ನಗರದ ಎಚ್.ಎನ್. ಶ್ರೀಧರ್ ಅವರಲ್ಲಿ ತರಬೇತಿ ಪಡೆಯುತ್ತಿಿದ್ದಾಾರೆ, ರಾಜಲಕ್ಷ್ಮೀ ಅವರಲ್ಲಿ ಕೊಳಲನ್ನೂ ಸಹ ಕಲಿತಿದ್ದಾಾನೆ. ವಯೋಲಿನ್ ಅನ್ನು ಮಧುಮುರಳಿ ಅವರಲ್ಲಿ ಕಲಿತಿದ್ದಾಾನೆ. ಆದರೆ ಈಗ ಕೊಳಲು ಮತ್ತು ಹಾಡುಗಾರಿಕೆಯಲ್ಲಿ ಮಾತ್ರ ಸಾಧನೆಗೈಯ್ಯುತ್ತಿಿದ್ದಾಾನೆ.
ಕಳೆದ ವಾರ ಶಿವಮೊಗ್ಗದಲ್ಲಿ ಜರುಗಿದ ರಾಮೋತ್ಸವದಲ್ಲಿ ಹಾಡುಗಾರಿಕೆ ಮೂಲಕ ಎಲ್ಲರ ಗಮನಸೆಳೆದಿರುವ ಈತ, ಭರವಸೆಯ ಗಾಯಕನಾಗಿದ್ದಾಾನೆ. ತಂದೆ ಗೋಪಾಲಕೃಷ್ಣ ಮತ್ತು ತಾಯಿ ಉಮಾ ಸಹ ಮಗನ ಪ್ರತಿಭೆಯನ್ನು ಎಲ್ಲಾಾ ರೀತಿಯಲ್ಲೂ ಪೋಷಿಸುತ್ತಿಿದ್ದಾಾರೆ. ಬಾಲ್ಯದಿಂದಲೂ ಹಾಡುವುದರಲ್ಲಿ ಆಸಕ್ತಿಿ ಹೊಂದಿದ್ದರಿಂದ ಪಾಲಕರು ಸಂಗೀತಕ್ಕೆೆ ಸೇರಿಸಿದರು. ಫಲವಾಗಿ ಸಂಗೀತ ಶಾರದೆಯ ಕೃಪಾಶೀರ್ವಾದ ಈತನಿಗೆ ದಕ್ಕಿಿದೆ. ಹಾಡುಗಾರಿಕೆಯಲ್ಲಿ ವಿದ್ವತ್‌ನ್ನು ಮುಗಿಸಿದ್ದಾಾನೆ. 
ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಕುಂದಾಪುರ ಸಮೀಪದ ಕಾಳಾವರದ ಸುಬ್ರಹ್ಮಣ್ಯ ದೇವಾಲಯ, ಬೆಂಗಳೂರಿನ ಮಾತೃಛಾಯಾ, ಶಿವಮೊಗ್ಗದ ಪಂಚಮುಖಿ ಆಂಜನೇಯ ದೇವಾಲಯ, ಹರಕೆರೆ ಶಿವ ದೇವಾಲಯ, ವಿದ್ಯಾಾಗಣಪತಿ ಸಮಿತಿಯವರ ಕಾರ‌್ಯಕ್ರಮದಲ್ಲಿ, ಬೆಂಗಳೂರಿನ ಕತ್ರಿಿಗುಪ್ಪೆೆಯ ಪ್ರಸನ್ನ ಆಂಜನೇಯ ದೇವಾಲಯದಲ್ಲಿ, ಜೊತೆಗೆ ಮುಂಬೈ, ಮೈಸೂರು, ಉಡುಪಿ ಮೊದಲಾದೆಡೆ ಸಾಕಷ್ಟು ಕಾರ‌್ಯಕ್ರಮಗಳನ್ನು ನೀಡಿದ್ದಾಾನೆ.  ದಾವಣಗೆರೆಯಲ್ಲಿ ಬಾಲಕನ ಅಸಾಧಾರಣ ಸಾಧನೆ ಗಮನಿಸಿ ಸರಸ್ವತಿ ಪುರಸ್ಕಾಾರ ಎಂಬ ಪ್ರಶಸ್ತಿಿಯನ್ನು ಪ್ರದಾನ ಮಾಡಿದ್ದಾಾರೆ. 
ಕಲೆಯಲ್ಲಿ ಪಾವಿತ್ರ್ಯತೆಯನ್ನು ಕಂಡವರು ಮಾತ್ರ  ಸಾಧಕರಾಗುತ್ತಾಾರೆ. ಜೊತೆಗೆ ಕಲಾ ಸೌಂದರ್ಯವೂ ಅವರಲ್ಲಿರಬೇಕು. ಈ ಸೌಂದರ‌್ಯ ಕೇವಲ ಬಾಹ್ಯವಾಗಿರದೆ, ಕಲೆಯ ಆತ್ಮದ ಒಳ ಹಸಿರಾಗಿರಬೇಕು. ಅದನ್ನು ರಸ ಎಂದು ಕರೆಯಲಾಗುತ್ತದೆ. ಇಂತಹ ರಸಪೂರ್ಣವಾದ ಕಲೆ ಹೃದಯಸಂವಾದಿಯಾಗಿದ್ದಾಾಗ ಎಲ್ಲರನ್ನೂ ಆಕರ್ಷಿಸುತ್ತದೆ, ಕಲಾವಿದನೂ ಸಹ ಪರಿಪೂರ್ಣನಾಗಲು ಸಾಧ್ಯವಾಗುತ್ತದೆ. ಬಹುಕಾಲ ಮರೆಯದ ಕಲೆ ಅದಾಗುತ್ತದೆ. 
 ಅಭಿರಾಮ್‌ನಲ್ಲಿ ಈ ಹೃದಯಸಂವಾದಿ ಕಲೆ ಇದೆ. ಆದ್ದರಿಂದಲೇ ಜನರನ್ನು ಆಕರ್ಷಿಸುವ ಶಕ್ತಿಿ ಆತನ ಹಾಡುಗಾರಿಕೆ ಅಥವಾ ಕೊಳಲುವಾದನಲ್ಲಿದೆ. ಆನಂದವನ್ನು ನೀಡುವ ಶಕ್ತಿಿ ಅದರಲ್ಲಿದೆ.  ರಸದೃಷ್ಟಿಿ, ರಸಪುಷ್ಟಿಿ ಈ ಕಲೆಯ ಅಂತರಂಗದಲ್ಲಿದೆ.
ಇಂತಹ ಕಲೆಯ ಚೆಲುವನ್ನು ತುಂಬಿಕೊಂಡ ಬಾಲಕಲಾವಿದನಿಗೆ ಇನ್ನಷ್ಟು ಪ್ರೋತ್ಸಾಾಹ ಎಲ್ಲೆೆಡೆ ಸಿಗಬೇಕಿದೆ.
published on  20-4-2019

...............................

Saturday, 13 April 2019

ಚಿನ್ನದ ಪವರ್ ಲಿಫ್ಟರ್
ಮೆಕ್ಯಾಾನಿಕ್ ರಮೇಶ್


 ದೈ"ಕ ಶಕ್ತಿಿಯೊಡನೆ ಮಾನಸಿಕವಾಗಿಯೂ ಬಲಿಷ್ಠರಾಗಲು ಭಾರ ಎತ್ತು"ಕೆ ಅಥವಾ ಪವರ್ ಲಿಫ್ಟಿಿಂಗ್‌ನಂತಹ ಕಸರತ್ತು ಅವಶ್ಯ. ಇತ್ತೀಚಿನ ದಿನಗಳಲ್ಲಿ ಇಂತಹ ದೈ"ಕ ಹಾಗೂ ಮಾನಸಿಕ ಕ್ಷಮತೆ ಪಡೆಯಲು ಹೆಚ್ಚು ಪ್ರಮಾಣದಲ್ಲಿ ಯುವಕರು ಮುಂದಾಗುತ್ತಿಿದ್ದಾಾರೆ. ಈ ಮೂಲಕ ತಮ್ಮದೇ ಆದ ಸಾಧನೆಯನ್ನೂ ಮಾಡಲು ಮುಂದಾಗುತ್ತಿಿದ್ದಾಾರೆ.
ಶಿವಮೊಗ್ಗದಲ್ಲಿ ಪವರ್ ಲಿಫ್ಟಿಿಂಗ್ ಅಥವಾ ದೇಹದಾರ್ಡಯಕ್ಕೆೆ ಮೊದಲಿನಿಂದಲೂ ತನ್ನದೇ ಆದ ಖ್ಯಾಾತಿ ಇದೆ. ಹಲವು ಖ್ಯಾಾತನಾಮರು ಜಿಲ್ಲೆೆಯ ಹೆಸರು ಇಂದಿಗೂ ಈ ಕ್ಷೇತ್ರದಲ್ಲಿ "ುನುಗುವಂತೆ ಮಾಡಿದ್ದಾಾರೆ. ಇವರ ಶಿಷ್ಯರಾಗಿ ಕೆಲಸ ಮಾಡುತ್ತಿಿರುವವರು ಇಂದು ರಾಷ್ಟ್ರ, ಅಂತರರ್ಟ್ರೋಯ ಮಟ್ಟದಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಇದನ್ನು ಮುಂದುವರೆಸಿಕೊಂಡು ಹೋಗುತ್ತಿಿದ್ದಾಾರೆ.
 ಆರ್. ರಮೇಶ್ ಪವರ್ ಲಿಫ್ಟಿಿಂಗ್‌ನಲ್ಲಿ ಪ್ರಮುಖ ಹೆಸರು. ನಗರದ ಬೊಮ್ಮನಕಟ್ಟೆೆ ಆಶ್ರಯ ಬಡಾವಣೆಯವರಾದ ಇವರು, ಸುಮಾರು 30 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಿದ್ದು, ಕಳೆದ ವಾರ ರ್ಟ್ರೋಯ ಚಾಂಪಿಯನ್‌ಶಿಪ್‌ನಲ್ಲಿ ಸ್ವರ್ಣ ಪದಕ ಗೆದ್ದು ತರುವ ಮೂಲಕ ಜಿಲ್ಲೆೆಯ ಹೆಸರನ್ನು ಉನ್ನತಕ್ಕೇರಿಸಿದ್ದಾಾರೆ. 60ರ ಹರಯದಲ್ಲೂ ಯುವಕರಂತೆ ಕಟ್ಟುಮಸ್ತಾಾದ ದೇಹವನ್ನು ಹೊಂದಿ, ಯುವಕರೂ ಸಹ ನಾಚುವಂತೆ ಕೆಲಸ ಮಾಡುತ್ತಾಾರೆ.
ನಗರದ ಪುಲಿಕೇಶಿ ವ್ಯಾಾಯಾಮ ಶಾಲೆ ಸಾಧಕರಿಗೆಲ್ಲ ತವರುಮನೆುದ್ದಂತೆ. ಇಲ್ಲಿ ಕಲಿತ ಬಹುತೇಕರು ಸಾಧನೆ ಮಾಡಿ ತಮ್ಮ ಹೆಸರನ್ನು ಚಿರಸ್ಥಾುಗೊಳಿಸಿಕೊಂಡಿದ್ದಾಾರೆ. ಅವರ ಸಾಲಿಗೆ ಈಗ ರಮೇಶ್ ಸೇರುತ್ತಾಾರೆ. ರಮೇಶ್ ಪವರ್ ಲಿಫ್ಟಿಿಂಗ್‌ನಲ್ಲಿ ಮಾಡಿದ ಸಾಧನೆ ಅನನ್ಯ.  ಈವರೆಗೆ ಅವರು 5 ರಾಜ್ಯ ಪ್ರಶಸ್ತಿಿ, 4 ರ್ಟ್ರೋಯ ಪ್ರಶಸ್ತಿಿ ಮತ್ತು ಒಂದು ಅಂತರ್ಟ್ರಾಾಯ ಪ್ರಶಸ್ತಿಿಯನ್ನು ತಮ್ಮದಾಗಿಸಿಕೊಂಡಿದ್ದಾಾರೆ.
 ಕಳೆದ ವಾರ ಪಶ್ಚಿಿಮ ಬಂಗಾಳದ ಹೌರಾದಲ್ಲಿ ನಡೆದ ರ್ಟ್ರೋಯ ಪವರ್ ಲಿಫ್ಟಿಿಂಗ್ ಚಾಂಪಿಯನ್ ಶಿಪ್‌ನಲ್ಲಿ ಪ್ರಥಮ ಬಹುಮಾನ ಸ"ತ ಚಿನ್ನದ ಪದಕ ಧರಿಸಿ ಬಂದಿದ್ದಾಾರೆ. ಇದಕ್ಕೂ ಮುನ್ನ ಅವರು ಗಳಿಸಿದ ಪ್ರಶಸ್ತಿಿಗಳೆಂದರೆ- 2017ರಲ್ಲಿ ದಾವಣಗೆರೆಯಲ್ಲಿ ಜರುಗಿದ ರಾಜ್ಯ ಮಟ್ಟದ ಚಾಂಪಿಯನ್ಶಿಿಪ್‌ನಲ್ಲಿ  ಪ್ರಥಮ ಬಹುಮಾನ, 2018ರಲ್ಲಿ  ಹೊಸಪೇಟೆಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2015ರಲ್ಲಿ ಹರಿಯಾಣದ ಸೋನೆಪತ್‌ನಲ್ಲಿ ಜರುಗಿದ  ರ್ಟ್ರೋಯ ಚಾಂಪಿಯನ್‌ಶಿಪ್‌ನಲ್ಲಿ ತೃತೀಯ ಬಹುಮಾನ, 2014ರಲ್ಲಿ  ಆಗ್ರ್ರಾಾದಲ್ಲಿ ನಡೆದ ರ್ಟ್ರೋಯ ಚಾಂಪಿಯನ್ಶಿಿಪ್‌ನಲ್ಲಿ ತೃತೀಯ, 2015ರಲ್ಲಿ ಇಂದೋರ್‌ನಲ್ಲಿ ನಡೆದ ರ್ಟ್ರೋಯ ಸ್ಪರ್ಧೆಯಲ್ಲಿ ದ್ವಿಿತೀಯ  ಮತ್ತು 2015ರಲ್ಲಿ ದಾವಣಗೆರೆಯಲ್ಲಿ ಜರುಗಿದ ರ್ಟ್ರೋಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಪದಕ ಗೆದ್ದಿದ್ದಾಾರೆ.
2017ರಲ್ಲಿ ಬ್ಯಾಾಂಕಾಕ್‌ನಲ್ಲಿ ನಡೆದ ಅಂತರ್ಟ್ರೋಯ ಚಾಂಪಿಯನ್‌ಶಿಪ್‌ನಲ್ಲಿ  ಚಿನ್ನದ ಪದಕ ಸ"ತ ಪ್ರಥಮ ಸ್ಥಾಾನವನ್ನು ತಮ್ಮದಾಗಿಸಿಕೊಂಡಿದ್ದಾಾರೆ. ಇಂತಹ ಸಾಧಕ ನಗರದಲಿರುವುದು ನಿಜಕ್ಕೂ ಹೆಮ್ಮೆೆಯ ಸಂಗತಿ.  ಆಟೋ ಕಾಂಪ್ಲೆೆಕ್‌ಸ್‌‌ನಲ್ಲಿ ಮೆಕ್ಯಾಾನಿಕ್ ಆಗಿ ಕೆಲಸ ಮಾಡುತ್ತಿಿರುವ ರಮೇಶ್, ಇಂದಿಗೂ ತಮ್ಮ ಗುರು ಸ್ವಾಾ"ುನಾಥನ್ ಅವರನ್ನು ಸ್ಮರಿಸುತ್ತಾಾರೆ. ಅವರ ಮಾರ್ಗದರ್ಶನದಲ್ಲೇ ತಾನು ಬೆಳೆದು ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾಾರೆ.
ರಮೇಶ್ ಪ್ರತಿದಿನ ಬೆಳಿಗ್ಗೆೆ ಎರಡು ಗಂಟೆ ತಪ್ಪದೆ ಪವರ್‌ಲಿಫ್ಟಿಿಂಗ್ ತರಬೇತಿಯನ್ನು ಪಡೆಯುತ್ತಿಿದ್ದಾಾರೆ. ಜೊತೆಗೆ ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಾಾರೆ. ಜಿಲ್ಲೆೆಯ ಹಲವೆಡೆ ಮತ್ತು "ಶ್ವ"ದ್ಯಾಾಲಯ ಮಟ್ಟದಲ್ಲಿ ನಡೆಯುವ ಆಯ್ಕೆೆಗೆ, ಸ್ಪರ್ಧೆಗಳಿಗೆ ತೀರ್ಪುಗಾರರಾಗಿಯೂ ತೆರಳುತ್ತಾಾರೆ.
 ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊೊಳ್ಳುವಾಗ ಮಾನಸಿಕ ಬಲವನ್ನು ಕಾಪಾಡಿಕೊಳ್ಳಬೇಕು. ಅತಿಕಠಿಣವಾಗಿ ತರಬೇತಿ ನಡೆಸಬೇಕು. ಸತತವಾಗಿ ಈ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊೊಳ್ಳುತ್ತಿಿರುವವರ "ರುದ್ಧ ಪ್ರಶಸ್ತಿಿಗಾಗಿ ಸೆಣೆಸಬೇಕು. ಇದು ಸುಲಭದ ಮಾತಲ್ಲ ಎನ್ನುತ್ತಾಾರೆ.
published on 13-4-2017