Wednesday 18 April 2018

ಸರಳ, ಪ್ರಾಾಮಾಣಿಕ ಜೀವಿ
ದಿ. ಕೆ. ಜಿ. ಸುಬ್ರಹ್ಮಣ್ಯ



ಹತ್ತಾಾರು ಅಭಿರುಚಿಗಳನ್ನು ಬೆಳೆಸಿಕೊಂಡು ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸುತ್ತ ಸರಳ ಜೀವನ, ಸನ್ನಡತೆಯಿಂದಲೇ ಹೆಸರಾಗಿದ್ದವರು ದಿವಂಗತ ಕೆ. ಜಿ. ಸುಬ್ರಹ್ಮಣ್ಯ. ಬಿಳಿಗಡ್ಡ, ಅದರೊಳಗಿನ ಮೆಲ್ಲನೆಯ ನಗು ಎಂತಹವರನ್ನೂ ಆಕರ್ಷಿಸುತಿತ್ತು. ನಗರದ ಸಾಹಿತ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಲೋಕದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಸುಬ್ರಹ್ಮಣ್ಯ, ಮಾರ್ಚ್ 18ರಂದು  ಇನ್ನಿಿಲ್ಲವಾಗಿದ್ದಾಾರೆ.
ಪ್ರತಿ ಯಶಸ್ವಿಿ ಮನುಷ್ಯ ತಾನು ಯಾವುದೇ ಹೊಸ ಕಾರ್ಯ ಆರಂಭಿಸುವಾಗ ಎರಡು ಮುಖ್ಯ ನಂಬಿಕೆ ಹೊಂದಿರುತ್ತಾಾನೆ. ಮೊದಲನೆಯದು, ಇಂದಿನ ದಿನಕ್ಕಿಿಂತ ನಾಳಿನ ದಿನ ಇನ್ನೂ ಉತ್ತಮವಾಗಿರಬೇಕು, ಎರಡನೆಯದು, ಅದನ್ನು ಸಾಧಿಸುವ ಶಕ್ತಿಿ ತನ್ನಲ್ಲಿದೆ ಎಂದು ಸಾಧಿಸಿ ತೋರಿಸುವುದು. ಕೆಜಿಎಸ್ ಇದನ್ನು ಮಾಡಿ ತೋರಿಸಿದ ಮಹನೀಯ. ಶಿವಮೊಗ್ಗದಲ್ಲಿ ಅವರು ಮಾಡಿದ ಕೆಲಸಗಳು ಎಂದಿಗೂ ಶಾಶ್ವತ.
  ಶಿಕ್ಷಣ, ಸಂಗೀತ, ಸಾಹಿತ್ಯ, ಕೃಷಿ, ಕೈಗಾರಿಕೆ ಮತ್ತು ಸಾಂಸ್ಕೃತಿ ಲೋಕ  ಹೀಗೆ ಹತ್ತು ಹಲವಾರು ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಮೂಲತಃ ತೀರ್ಥಹಳ್ಳಿಿ ತಾಲೂಕಿನ ಹುಲ್ಲತ್ತಿಿಯವರಾದರೂ ಅಜ್ಜನ ಮನೆ ಕಿತ್ತಂದೂರಿಗೆ ದತ್ತುಪುತ್ರನಾಗಿ ಬಂದು ಅಲ್ಲಿಯೇ ಬೆಳೆದವರು. ಅವರ ಪೂರ್ಣ ಹೆಸರು ಕಿತ್ತಂದೂರು ಗೋಪಾಲಕೃಷ್ಣ ಸುಬ್ರಹ್ಮಣ್ಯ. ಅವರು ಓದಿದ್ದು ಶಿವಮೊಗ್ಗದ ಡಿವಿಎಸ್‌ನಲ್ಲಿ ಮತ್ತು ಸಹ್ಯಾಾದ್ರಿಿ ಕಾಲೇಜಿನಲ್ಲಿ. ಮುಂದಿನ ಓದು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ. ಇಲ್ಲಿ ರಾಷ್ಟ್ರಕವಿ ಕುವೆಂಪು ಅವರ ಶಿಷ್ಯರೆನ್ನುವುದು ಹೆಮ್ಮೆೆಯ ಸಂಗತಿ. ವಿಶೇಷವೆಂದರೆ, ತಾವು ಓದಿದ ಡಿವಿಎಸ್ ಸಂಸ್ಥೆೆಯ ನಿರ್ದೇಶಕರಾಗಿ, ಖಜಾಂಚಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸಂಸ್ಥೆೆಯ ಹೆಸರನ್ನು ಮೇಲೇರಿಸಿದ್ದಾಾರೆ.
ಕರ್ನಾಟಕ ಸಂಘಕ್ಕೆೆ ಅವರ ಕೊಡುಗೆ ಅನನ್ಯ. ಅದರ ಅಧ್ಯಕ್ಷರಾಗಿ ಸರ್ವಾಂಗೀಣ ಅಭಿವೃದ್ಧಿಿಗೆ ಕಾರಣರಾದವರು.  ಕರ್ನಾಟಕ ಸಂಘದ ಸದೃಢತೆಗೆ ಅವರು ಭದ್ರವಾದ ಬುನಾದಿಯನ್ನು ಹಾಕಿಕೊಟ್ಟಿಿದ್ದಾಾರೆ. ಇತ್ತೀಚಿನವರೆಗೂ ಸಂಘದ ಬಹುತೇಕ ಎಲ್ಲ ಕಾರ್ಯಕ್ರಮಗಳಿಗೂ ಅವರು ಆಗಮಿಸುತ್ತಿಿದ್ದರು.
ಕೃಷಿ ಕುಟುಂಬದ ಹಿನ್ನಲೆಯಿಂದ ಬಂದಿದ್ದ ಅವರು, ಮಲೆನಾಡು ಅರೆಕಾನಟ್ ಸಿಂಡಿಕೇಟ್ ಎಂಬ ಸಂಸ್ಥೆೆ ಸ್ಥಾಾಪಿಸಿ ಅಡಿಕೆ ಬೆಳೆಗಾರರ ನೆರವಿಗೆ ಮುಂದಾದವರು. ಕೈಗಾರಿಕಾ ಕ್ಷೇತ್ರದಲ್ಲಿ ನಗರದ ಹೆಸರನ್ನು ಉನ್ನತಕ್ಕೇರಿಸಿರುವ ಪಿಯರ್‌ಲೈಟ್ ಲೈನರ್ಸ್ ಅಥವಾ ಭಾರತ್ ಫೌಂಡ್ರಿಿಯಯನ್ನು ಆಧುನೀಕರಣಗೊಳಿಸಿ, ಆ ಸಂಸ್ಥೆೆಯ ಅಧ್ಯಕ್ಷರಾಗಿ, ಜಿಲ್ಲೆೆಯ ನೂರಾರು ಯುವಕರಿಗೆ ಅದರಲ್ಲಿ ಉದ್ಯೋೋಗ ಕೊಡಿಸಿದರು. ಅದರ ಔನ್ನತ್ಯಕ್ಕೆೆ ತಮ್ಮದೇ ಆದ ಕೊಡುಗೆ ನೀಡಿದ್ದಾಾರೆ.
ಅವರ ಇನ್ನಿಿತರ ಸಾಧನೆಗಳೆಂದರೆ, ಭಾರತೀಯ ಕುಟುಂಬ ಯೋಜನಾ ಸಂಘ ಸ್ಥಾಾಪನೆ, ಶಿವಮೊಗ್ಗದಲ್ಲಿ ಗಮಕ ಸಮ್ಮೇಳನ, ಹೆಸರಾಂತ ಸಂಗಿತಗಾರರನ್ನು ಕರೆಯಿಸಿ ಕಾರ್ಯಕ್ರಮ ನಡೆಸಿದ್ದು, ಸಹ್ಯಾಾದ್ರಿಿ ಚಿತ್ರ ಸಮಾಜ ಸ್ಥಾಾಪನೆ, ರೋಟರಿ ಕ್ಲಬ್ ಅಧ್ಯಕ್ಷರಾಗಿ ಹತ್ತಾಾರು ಸಮಾಜಮುಖೀ ಸೇವೆ, ರೋಟರಿ ಜಿಲ್ಲಾಾ ರಾಜ್ಯಪಾಲರಾಗಿ ಸೇವೆ ಮೊದಲಾದವು. ಇಷ್ಟೆೆಲ್ಲ ಸಾಧನೆ ಮಾಡಿದರೂ ಅವರಲ್ಲಿ ಸ್ವಲ್ಪವೂ ಗರ್ವವಿರಲಿಲ್ಲ. ಸಣ್ಣವರಿರಲಿ, ದೊಡ್ಡವರಿರಲಿ ಎಲ್ಲರನ್ನೂ ಸಮಭಾವದಿಂದ ಕಾಣುವ, ಮಿತಭಾಷಿ, ಸರ್ವಗುಣಸಂಪನ್ನರಾಗಿದ್ದರು.
ವ್ಯಕ್ತಿಿಯ ಗುಣ, ನಡತೆ, ಜೀವನಶೈಲಿಗೆ ಹೆಸರು ಬರಲು ಆತನ ಸರಳತೆ ಕಾರಣವಾಗುತ್ತದೆ. ಎಲ್ಲರೂ ಮೆಚ್ಚುವ ಪ್ರಾಾಮಾಣಿಕ ವ್ಯಕ್ತಿಿಯಾಗಿ ಆಗ ಆತ ಹೊರಹೊಮ್ಮುತ್ತಾಾನೆ. ಇಂತ ಕೆಜಿಕೆ, ಅಧ್ಯಯನಶೀಲತೆ, ಚಿಂತನ ಮಂಥನಗಳಿಗೆ ಒತ್ತಾಾಸೆಯಾಗಿದ್ದರಿಂದಲೇ ಎತ್ತರಕ್ಕೇರಿದರು. ಶಿವಮೊಗ್ಗದ ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆೆ ಅವರ ಕೊಡುಗೆ ಬಹುದೊಡ್ಡದು. ಒಬ್ಬ ಒಳ್ಳೆೆಯ ಓದುಗನಲ್ಲಿ ಸೃಜನಶೀಲತೆ ಹಾಗೂ ಸದಭಿರುಚಿ ಇರಲು ಸಾಧ್ಯ ಎಂಬುದಕ್ಕೆೆ ಅವರು ಉದಾಹರಣೆ. ಆದ್ದರಿಂದಲೇ ಅವರಿಗೆ ಬಹುದೊಡ್ಡ ಬಳಗವೇ ಎಲ್ಲಾಾ ವಲಯದಲ್ಲೂ ಇದೆ. ಸಮರ್ಥ ನಾಯಕತ್ವದ ಸಂಕೇತವೂ ಅವರಾಗಿದ್ದರು.
31.3.18

...........................................

No comments:

Post a Comment